Tag: Deepika Padukone

  • ಯುದ್ಧದಲ್ಲಿ ಇದುವರೆಗೂ ನಾನು ಸೋತಿಲ್ಲ, ಸೋಲಲ್ಲ- ‘ಕಲ್ಕಿ’ ಪ್ರಭಾಸ್ ಮಾಸ್ ಡೈಲಾಗ್

    ಯುದ್ಧದಲ್ಲಿ ಇದುವರೆಗೂ ನಾನು ಸೋತಿಲ್ಲ, ಸೋಲಲ್ಲ- ‘ಕಲ್ಕಿ’ ಪ್ರಭಾಸ್ ಮಾಸ್ ಡೈಲಾಗ್

    ಸೌತ್‌ನ ಬಹುನಿರೀಕ್ಷಿತ ಸಿನಿಮಾ ‘ಕಲ್ಕಿ 2898 ಎಡಿ’ (Kalki 2898 AD) ಟ್ರೈಲರ್ ರಿಲೀಸ್ ಆಗಿದೆ. ಪ್ರಭಾಸ್ (Prabhas), ದೀಪಿಕಾ ಪಡುಕೋಣೆ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ನವಯುಗ ಆರಂಭಕ್ಕೆ ಯುದ್ಧದ ಮೂಲಕ ಭೈರವನಾಗಿ ಪ್ರಭಾಸ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ರೋಚಕವಾಗಿರುವ ಟ್ರೈಲರ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ಜಗತ್ತಿನ ಮೊದಲ ಪ್ರದೇಶ ಮತ್ತು ಕೊನೆಯ ಪ್ರದೇಶ ಕಾಶಿ ಎನ್ನುಮ ಮೂಲಕ ಕಲ್ಕಿ ಟ್ರೈಲರ್ ಶುರುವಾಗುತ್ತೆ. ಜಗತ್ತಿನಿಂದ ಎಲ್ಲವನ್ನೂ ಕಿತ್ತುಕೊಂಡರೆ ಎಲ್ಲವೂ ಇರುತ್ತದೆ ಎನ್ನುವ ಕುತೂಹಲಕರ ಸಂಭಾಷೆಯಣೆಯಿದೆ. 6000 ಹಿಂದಿನ ಶಕ್ತಿ ಮತ್ತೆ ಬಂದಿದೆ. ಅಳಿವು- ಉಳಿವಿಗಾಗಿ ಹೋರಾಡುವವರ ದೃಶ್ಯ ತೋರಿಸಲಾಗಿದೆ. ಭೈರವನಾಗಿ ಯುದ್ಧಕ್ಕೆ ಪ್ರಭಾಸ್ ಸಜ್ಜಾಗಿದ್ದಾರೆ. 2 ಜಗತ್ತಿನ ಹೋರಾಟವನ್ನು ಸೈನ್ಸ್ ಫಿಕ್ಷನ್ ಮೂಲಕ ಅದ್ಭುತವಾಗಿ ತೋರಿಸಿದ್ದಾರೆ.

    ಯುದ್ಧದಲ್ಲಿ ಇದುವರೆಗೂ ನಾನು ಸೋತಿಲ್ಲ, ಇದನ್ನೂ ಸಹ ನಾನು ಸೋಲಲ್ಲ ಎಂದು ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ಪ್ರಭಾಸ್ ಜೊತೆ ದೀಪಿಕಾ, ದಿಶಾ ಪಟಾನಿ ಮಿಂಚಿದ್ದಾರೆ. ಅಮಿತಾಭ್, ಕಮಲ್ ಹಾಸನ್ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ವಿಎಫ್‌ಎಕ್ಸ್ ದೃಶ್ಯಕ್ಕೆ ಫ್ಯಾನ್ಸ್ ಮನಸೋತಿದ್ದಾರೆ.

    ಇನ್ನೂ ನಾಗ ಅಶ್ವೀನ್ ನಿರ್ದೇಶನದ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಬಹುಭಾಷೆಗಳಲ್ಲಿ ಇದೇ ಜೂನ್ 27ಕ್ಕೆ ರಿಲೀಸ್ ಆಗಲಿದೆ. ಮೊದಲ ಬಾರಿಗೆ ದೀಪಿಕಾ ಪಡುಕೋಣೆ (Deepika Padukone) ಮಾತೃಭಾಷೆ ಕನ್ನಡದಲ್ಲಿ ಡಬ್ ಮಾಡಿರೋದು ವಿಶೇಷವಾಗಿದೆ.

  • Kalki 2898 AD: ಹೊಸ ಪೋಸ್ಟರ್‌ ಹಂಚಿಕೊಂಡ ದೀಪಿಕಾ ಪಡುಕೋಣೆ

    Kalki 2898 AD: ಹೊಸ ಪೋಸ್ಟರ್‌ ಹಂಚಿಕೊಂಡ ದೀಪಿಕಾ ಪಡುಕೋಣೆ

    ‘ಪಠಾಣ್’ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಮೊದಲ ಮಗು ಆಗಮನವಾಗುತ್ತಿರುವ ಖುಷಿಯಲ್ಲಿದ್ದಾರೆ. ಸದ್ಯ ದೀಪಿಕಾ ಮತ್ತು ಪ್ರಭಾಸ್ ನಟಿಸಿರುವ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಕೂಡ ರಿಲೀಸ್‌ಗೆ ಸಿದ್ಧವಾಗಿದೆ. ಚಿತ್ರದ ಹೊಸ ಪೋಸ್ಟರ್‌ವೊಂದನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಮೋದಿಗೆ ರಿಷಬ್ ವಿಶ್

    ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮಲ್ಟಿ ಸ್ಟಾರ್‌ಗಳು ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿನ ತಾವು ನಟಿಸಿರುವ ಪಾತ್ರದ ಲುಕ್ ಅನ್ನು ನಟಿ ಹಂಚಿಕೊಂಡಿದ್ದಾರೆ. ಪತ್ನಿಯ ಪೋಸ್ಟ್‌ಗೆ ಸ್ಟನರ್ ಎಂದು ರಣ್‌ವೀರ್ ಸಿಂಗ್ ಕಾಮೆಂಟ್ ಮಾಡಿದ್ದಾರೆ.

    ಜೂನ್ 10ರಂದು ಕಲ್ಕಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಪೋಸ್ಟರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಟ್ರೈಲರ್‌ಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇದನ್ನೂ ಓದಿ:ಚಂದನ್ ಶೆಟ್ಟಿ, ನಿವೇದಿತಾ ಡಿವೋರ್ಸ್ ಬಗ್ಗೆ ರಾಗಿಣಿ ರಿಯಾಕ್ಷನ್


    ಇನ್ನೂ ಈ ವರ್ಷದ ಬಹು ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಲ್ಕಿ 2898 ಎಡಿ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್ (Prabhas), ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ‘ಕಲ್ಕಿ 2898 ಎಡಿ’ ಚಿತ್ರವು ಜಗತ್ತಿನಾದ್ಯಂತ ಜೂನ್ 27ರಂದು ಬಿಡುಗಡೆ ಆಗಲಿದೆ.

  • ಫ್ಯಾಮಿಲಿ ಜೊತೆ ಪ್ರೆಗ್ನೆಂಟ್ ದೀಪಿಕಾ ಪಡುಕೋಣೆ ಡಿನ್ನರ್ ಡೇಟ್

    ಫ್ಯಾಮಿಲಿ ಜೊತೆ ಪ್ರೆಗ್ನೆಂಟ್ ದೀಪಿಕಾ ಪಡುಕೋಣೆ ಡಿನ್ನರ್ ಡೇಟ್

    ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಚೊಚ್ಚಲ ಮಗುವಿನ ಆಗಮನವಾಗುತ್ತಿರುವ ಖುಷಿಯಲ್ಲಿದ್ದಾರೆ. ಇದರ ನಡುವೆ ಕುಟುಂಬದ (Family) ಜೊತೆ ಪ್ರೆಗ್ನೆಂಟ್ ದೀಪಿಕಾ ಡಿನ್ನರ್ ಡೇಟ್ ಮಾಡಿದ್ದಾರೆ. ಸದ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Viral Bhayani (@viralbhayani)

    ಮುಂಬೈನ ರೆಸ್ಟೋರೆಂಟ್‌ವೊಂದರಲ್ಲಿ ಫ್ಯಾಮಿಲಿ ಜೊತೆ ದೀಪಿಕಾ ಪಡುಕೋಣೆ ಊಟ ಸವಿದಿದ್ದಾರೆ. ಅಲ್ಲಿನ ಸ್ಟಾಪ್ ಜೊತೆ ಫೋಟೋಗೆ ನಟಿ ಪೋಸ್ ನೀಡಿದ್ದಾರೆ. ಬಳಿಕ ರೆಸ್ಟೋರೆಂಟ್‌ನಿಂದ ಹೊರಬರುವಾಗ ನಟಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಬೇಬಿ ಬಂಪ್ ಕಾಣದಿರುವ ಲೂಸ್ ಆಗಿರುವ ಕಲರ್‌ಫುಲ್ ಡ್ರೆಸ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ತಮಿಳಿನಲ್ಲಿ ಬಿಗ್‌ ಚಾನ್ಸ್-‌ ಸೂರ್ಯಗೆ ಪೂಜಾ ಹೆಗ್ಡೆ ನಾಯಕಿ

    ಅಂದಹಾಗೆ, ಪ್ರಭಾಸ್‌ಗೆ (Prabhas) ನಾಯಕಿಯಾಗಿ ದೀಪಿಕಾ ಪಡುಕೋಣೆ ಸದ್ಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಕೆಲಸವನ್ನು ಮುಗಿಸಿಕೊಟ್ಟಿದ್ದಾರೆ. ಈ ಸಿನಿಮಾದ ತಮ್ಮ ಪಾತ್ರಕ್ಕೆ ಹಿಂದಿ ಮತ್ತು ಕನ್ನಡದಲ್ಲಿ ನಟಿ ಡಬ್ ಮಾಡಿದ್ದಾರೆ.


    ಅದಷ್ಟೇ ಅಲ್ಲ, ಸಿನಿಮಾ ಪ್ರಚಾರಕ್ಕೆ ತೊಂದರೆಯಾಗಬಾರದು ಎಂದು ಮೊದಲೇ ಕಲ್ಕಿ ಚಿತ್ರದ ಬಗ್ಗೆ ಸಂದರ್ಶನ ಕೂಡ ನೀಡಿದ್ದಾರೆ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ದೀಪಿಕಾ ಸಂದರ್ಶನ ಪ್ರಸಾರವಾಗಲಿದೆ.

  • ನನ್ನ ಫ್ಯಾನ್ಸ್ ಮನಸ್ಸು ನೋಯಿಸಲ್ಲ ಎನ್ನುತ್ತಲೇ ಮದುವೆ ಬಗ್ಗೆ ಪ್ರಭಾಸ್ ಸ್ಪಷ್ಟನೆ

    ನನ್ನ ಫ್ಯಾನ್ಸ್ ಮನಸ್ಸು ನೋಯಿಸಲ್ಲ ಎನ್ನುತ್ತಲೇ ಮದುವೆ ಬಗ್ಗೆ ಪ್ರಭಾಸ್ ಸ್ಪಷ್ಟನೆ

    ಟಾಲಿವುಡ್ ನಟ ಪ್ರಭಾಸ್ (Prabhas)  ಬಗ್ಗೆ ಸದಾ ಎದುರಾಗುವ ಪ್ರಶ್ನೆ ಎಂದರೆ ಮದುವೆ ಮ್ಯಾಟರ್. ಪ್ರಭಾಸ್ ಕೈ ಹಿಡಿಯುವ ಆ ಹುಡುಗಿ ಯಾರು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯ್ತಿದ್ದಾರೆ. ನಟನ ಕಡೆಯಿಂದ ಗುಡ್ ನ್ಯೂಸ್ ಬರಲಿ ಅಂತ ಎದುರು ನೋಡ್ತಿದ್ದಾರೆ. ಹೀಗಿರುವಾಗ ಬಗ್ಗೆ ಮದುವೆ (Wedding) ಬಗ್ಗೆ ನಟ ಸ್ಪಷ್ಟನೆ ನೀಡಿದ್ದಾರೆ.

    ಪ್ರಭಾಸ್ ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ನಾನು ಈಗಲೇ ಮದುವೆ ಆಗೋದಿಲ್ಲ, ನನಗೆ ಮಹಿಳಾ ಅಭಿಮಾನಿಗಳನ್ನು ನೋಯಿಸಲು ಮನಸ್ಸಿಲ್ಲ ಎಂದು ಹೇಳಿದ್ದಾರೆ. ನಟನ ಹೇಳಿಕೆಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    ಸದ್ಯ ಪ್ರಭಾಸ್ ‘ಕಲ್ಕಿ 2898 ಎಡಿ’ (Kalki 2898 AD)  ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ನನ್ನ ಜೀವನದಲ್ಲಿ ವಿಶೇಷ ವ್ಯಕ್ತಿಯ ಆಗಮನ ಆಗುತ್ತಿದೆ ಎಂದು ಹೇಳಿ, ಸಿನಿಮಾದಲ್ಲಿನ ‘ಬುಜ್ಜಿ’ ಎಂಬ ಕಾರಿನ ಬಗ್ಗೆ ಪ್ರಭಾಸ್ ಮಾಹಿತಿ ನೀಡಿದ್ದರು. ಬುಜ್ಜಿ ಎಂದಾಕ್ಷಣ ಎಲ್ಲರೂ ಪ್ರಭಾಸ್, ಬಾಳ ಸಂಗಾತಿಯನ್ನು ಪರಿಚಯಿಸುತ್ತಾರೆ ಎಂದೇ ಭಾವಿಸಿದ್ದರು. ಆದರೆ ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡ ಗಿಮಿಕ್ ಮಾಡಿತ್ತು.

    ಅಂದಹಾಗೆ, ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಜೊತೆಗೆ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ರಾಜೇಂದ್ರ ಪ್ರಸಾದ್ ಕೂಡ ನಟಿಸಿದ್ದಾರೆ. ಸಿನಿಮಾದ ವಿಶೇಷ ಏನೆಂದರೆ, ದೀಪಿಕಾ ಪಡುಕೋಣೆ (Deepika Padukone) ಮೊದಲ ಬಾರಿಗೆ ಮಾತೃಭಾಷೆ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಇದೇ ಜೂನ್ 27ಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

  • ಮತ ಚಲಾಯಿಸಿದ ಗರ್ಭಿಣಿ ದೀಪಿಕಾ ಪಡುಕೋಣೆ

    ಮತ ಚಲಾಯಿಸಿದ ಗರ್ಭಿಣಿ ದೀಪಿಕಾ ಪಡುಕೋಣೆ

    ಲೋಕಸಭೆ ಚುನಾವಣೆಯ (Loksabha Election) 5ನೇ ಹಂತದ ಮತದಾನ ಈಗಾಗಲೇ ಶುರುವಾಗಿದೆ. ಪತಿ ರಣ್‌ವೀರ್ ಸಿಂಗ್ (Ranveer Singh) ಜೊತೆ ದೀಪಿಕಾ ಪಡುಕೋಣೆ (Deepika Padukone) ಆಗಮಿಸಿ ವೋಟ್ ಮಾಡಿದ್ದಾರೆ. ನಟಿಯ ಬೇಬಿ ಬಂಪ್ ವಿಡಿಯೋ ವೈರಲ್ ಆಗಿದೆ.

    ಬಿಟೌನ್‌ನ ಹಲವು ಸೆಲೆಬ್ರಿಟಿಗಳು ಇಂದು (ಮೇ 20) ಮತದಾನ ಮಾಡಿದ್ದು, ಇದೀಗ ದೀಪಿಕಾ ಪಡುಕೋಣೆ ದಂಪತಿ ಮುಂಬೈನ ಪಾಲಿ ಹಿಲ್‌ನಲ್ಲಿ ಮತ ಚಲಾಯಿಸಿದ್ದಾರೆ. ವೈಟ್ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿ ಬೇಬಿ ಬಂಪ್‌ನೊಂದಿಗೆ ದೀಪಿಕಾ ಕಾಣಿಸಿಕೊಂಡರು. ಇದನ್ನೂ ಓದಿ:ಕಿಟ್ಟಿ ಜೊತೆ ಕುಣಿದ ರಚ್ಚು-ರಾಗಿಣಿ : ಮಂಗ್ಲಿ ದನಿಯಲ್ಲಿ ಸಾಂಗ್

     

    View this post on Instagram

     

    A post shared by Viral Bhayani (@viralbhayani)

    ಈ ವೇಳೆ ರಣ್‌ವೀರ್, ಪತ್ನಿ ದೀಪಿಕಾರ ಕೈ ಹಿಡಿದು ಎಚ್ಚರಿಕೆಯಿಂದ ಕಾರಿನಲ್ಲಿ ಕೂರಿಸಿದ್ದರು. ಈ ಹಿಂದೆ ಸಿನಿಮಾ ಶೂಟಿಂಗ್, ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ನಟಿಯನ್ನು ನೋಡಿ ನಿಜಕ್ಕೂ ಗರ್ಭಿಣಿನಾ? ಎಂದು ಪ್ರಶ್ನಿಸಿದ್ದರು. ಈಗ ಅದಕ್ಕೆಲ್ಲಾ ಉತ್ತರ ಸಿಕ್ಕಿದೆ.

    ಸಾಮಾನ್ಯರಂತೆಯೇ ಮತಗಟ್ಟೆಗೆ ಬಂದು ಜಾನ್ವಿ ಕಪೂರ್, ಸುನೀಲ್‌ ಶೆಟ್ಟಿ, ವಿದ್ಯಾ ಬಾಲನ್‌, ಕಿಯಾರಾ ಅಡ್ವಾಣಿ, ಗೋವಿಂದ್‌, ರಾಜ್‌ಕುಮಾರ್‌ ರಾವ್‌, ಧರ್ಮೇಂದ್ರ, ಹೇಮಾ ಮಾಲಿನಿ, ಸಾನ್ಯಾ ಮಲ್ಹೋತ್ರಾ, ಶಾಹಿದ್‌ ಕಪೂರ್‌, ಕರೀನಾ ಕಪೂರ್‌ ದಂಪತಿ ಸೇರಿದಂತೆ ಅನೇಕರು ಮತದಾನ ಮಾಡಿದ್ದಾರೆ.

    ಅಂದಹಾಗೆ, ಪ್ರಭಾಸ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಸದ್ಯ ‘ಕಲ್ಕಿ 2898 ಎಡಿ’ ಸಿನಿಮಾದ ಕೆಲಸವನ್ನು ಮುಗಿಸಿಕೊಟ್ಟಿದ್ದಾರೆ. ಈ ಸಿನಿಮಾದ ತಮ್ಮ ಪಾತ್ರಕ್ಕೆ ಹಿಂದಿ ಮತ್ತು ಕನ್ನಡದಲ್ಲಿ ನಟಿ ಡಬ್ ಮಾಡಿದ್ದಾರೆ.

  • ಕಾನ್ಸ್ ರೆಡ್ ಕಾರ್ಪೆಟ್- ದೀಪಿಕಾ ಪಡುಕೋಣೆ ಸ್ಟೈಲ್ ಕಾಪಿ ಮಾಡಿದ ಊರ್ವಶಿ

    ಕಾನ್ಸ್ ರೆಡ್ ಕಾರ್ಪೆಟ್- ದೀಪಿಕಾ ಪಡುಕೋಣೆ ಸ್ಟೈಲ್ ಕಾಪಿ ಮಾಡಿದ ಊರ್ವಶಿ

    ಕಾನ್ಸ್ ಫಿಲ್ಮ್ಸ್ ಫೆಸ್ಟಿವಲ್ (Cannes Film Festival 2024) ಈಗಾಗಲೇ ಆರಂಭವಾಗಿದೆ. ಎಲ್ಲಾ ಚಿತ್ರರಂಗದ ಸ್ಟಾರ್ ನಟ-ನಟಿಯರು ಈ ಕಾರ್ಯಕ್ರಮಕ್ಕೆ ಹಾಜರಿ ಹಾಕುತ್ತಿದ್ದಾರೆ. ಇದರ ನಡುವೆ ಕನ್ನಡದ ‘ಐರಾವತ’ ಬೆಡಗಿ ಊರ್ವಶಿ ರೌಟೇಲಾ (Urvashi Rautela) ಸ್ಟೈಲ್ ಎಲ್ಲರ ಗಮನ ಸೆಳೆದಿದೆ. ಜೊತೆಗೆ ದೀಪಿಕಾ ಪಡುಕೋಣೆ (Deepika Padukone) ಸ್ಟೈಲ್ ಅನ್ನೇ ಊರ್ವಶಿ ಕಾಪಿ ಮಾಡಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

    ಕಾನ್ಸ್ ಚಲನಚಿತ್ರೋತ್ಸವದ ಮೊದಲ ದಿನವೇ ‘ಐರಾವತ’ ನಟಿ ಎಂಟ್ರಿ ಕೊಟ್ಟಿದ್ದಾರೆ. ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಮುದ್ದಾದ ನಗು ಬೀರಿದ್ದಾರೆ. ಬಾರ್ಬಿ ಡಾಲನಂತೆ ನಟಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಮ್ಯಾಕ್ಸ್’ ಸಿನಿಮಾದ ಶೂಟಿಂಗ್ ಮುಗಿಸಿದ ಕಿಚ್ಚ ಸುದೀಪ್

    ಊರ್ವಶಿ ಧರಿಸಿದ ಪಿಂಕ್ ಬಣ್ಣದ ಗೌನ್ ಅನ್ನು ದೀಪಿಕಾ ಪಡುಕೋಣೆ ಧರಿಸಿದ ಉಡುಗೆಗೆ ಹೋಲಿಸಿದ್ದಾರೆ ನೆಟ್ಟಿಗರು. 2018ರಲ್ಲಿ ನಡೆದ ಕಾನ್ಸ್ ಫಿಲ್ಮ್ಸ್ ಫೆಸ್ಟಿವಲ್‌ನಲ್ಲಿ ದೀಪಿಕಾ ಪಿಂಕ್ ಕಲರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ರೀತಿ ಗೆಟಪ್‌ನಲ್ಲಿ ಊರ್ವಶಿ ಕೂಡ ಹೋಲುತ್ತಿರೋದನ್ನು ನೋಡಿ ದೀಪಿಕಾ ಸ್ಟೈಲ್ ಕಾಪಿ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.


    ಸದ್ಯ ಬಾಲಯ್ಯ ಜೊತೆ ಹೊಸ ಸಿನಿಮಾದಲ್ಲಿ ಊರ್ವಶಿ ನಟಿಸುತ್ತಿದ್ದಾರೆ. ಸೌತ್ ಮತ್ತು ಹಿಂದಿ ಸಿನಿಮಾಗಳು ಊರ್ವಶಿ ಕೈಯಲ್ಲಿವೆ.

  • ‘ಕಲ್ಕಿ’ ಸಿನಿಮಾಗಾಗಿ ಕನ್ನಡದಲ್ಲಿ ಡಬ್ ಮಾಡಲಿದ್ದಾರೆ ದೀಪಿಕಾ ಪಡುಕೋಣೆ

    ‘ಕಲ್ಕಿ’ ಸಿನಿಮಾಗಾಗಿ ಕನ್ನಡದಲ್ಲಿ ಡಬ್ ಮಾಡಲಿದ್ದಾರೆ ದೀಪಿಕಾ ಪಡುಕೋಣೆ

    ‘ಪಠಾಣ್’ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜೂನ್‌ನಿಂದ ಸಿನಿಮಾಗೆ ಬ್ರೇಕ್‌ ಕೊಟ್ಟು ವಿಶ್ರಾಂತಿ ಪಡೆಯಲಿದ್ದಾರೆ. ಅದಕ್ಕಾಗಿ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ನಟಿ ಪೂರ್ಣಗೊಳಿಸುತ್ತಿದ್ದಾರೆ. ಇದರ ನಡುವೆ ದೀಪಿಕಾ ಮತ್ತು ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಮೊದಲ ಬಾರಿಗೆ ತಮ್ಮ ಸಿನಿಮಾಗಾಗಿ ಮಾತೃ ಭಾಷೆಯಲ್ಲಿ ನಟಿ ಡಬ್ ಮಾಡಲಿದ್ದಾರೆ.

    ಪ್ರಭಾಸ್‌ಗೆ (Prabhas) ನಾಯಕಿಯಾಗಿ ನಟಿಸಿರುವ ‘ಕಲ್ಕಿ 2898 ಎಡಿ’ ಚಿತ್ರದ ಭಾರೀ ನಿರೀಕ್ಷೆಯಿದೆ. ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ತಮ್ಮ ಪಾತ್ರಕ್ಕಾಗಿ ಹಿಂದಿಯಲ್ಲಿ ಡಬ್ ಮಾಡಲಿದ್ದಾರೆ. ಆದರೆ ವಿಶೇಷತೆ ಏನೆಂದರೆ, ಮೊದಲ ಬಾರಿಗೆ ತಮ್ಮ ಮಾತೃ ಭಾಷೆ ಕನ್ನಡದಲ್ಲಿ ಡಬ್ ಮಾಡಲು ದೀಪಿಕಾ ಮುಂದಾಗಿದ್ದಾರೆ.

    ಈ ಚಿತ್ರದಲ್ಲಿ ಪ್ರಭಾಸ್ ಮತ್ತು ದೀಪಿಕಾ ಜೊತೆ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ದಿಶಾ ಪಟಾನಿ ಕೂಡ ನಟಿಸಿದ್ದಾರೆ. ಸದ್ಯ ‘ಕಲ್ಕಿ 2898 ಎಡಿ’ ಚಿತ್ರಕ್ಕೆ ಕನ್ನಡದಲ್ಲಿ ದೀಪಿಕಾ ಡಬ್ ಮಾಡುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:‘ಹಲಗಲಿ’ ಚಿತ್ರದಿಂದ ಹೊರಬಂದಿದ್ದೇಕೆ? ಕಾರಣ ತಿಳಿಸಿದ ಡಾರ್ಲಿಂಗ್ ಕೃಷ್ಣ


    ಅಂದಹಾಗೆ, ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರು. ಅವರು ಮೊದಲ ಬಾರಿಗೆ ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಐಶ್ವರ್ಯಾ’ ಚಿತ್ರದಲ್ಲಿ ನಟಿಸಿದ್ದರು. ಉಪೇಂದ್ರಗೆ ನಾಯಕಿಯಾಗಿ ಮಿಂಚಿದ್ದರು. ಇದೀಗ ದೀಪಿಕಾ ಬಾಲಿವುಡ್‌ನಲ್ಲಿ ನಂಬರ್ 1 ನಟಿಯಾಗಿ ಗುರುತಿಸಿಕೊಳ್ತಿದ್ದಾರೆ.

  • ವಿಡಿಯೋ ಮಾಡಲು ಬಂದ ಪಾಪರಾಜಿ ಕ್ಯಾಮೆರಾಗೆ ದೀಪಿಕಾ ಪಡುಕೋಣೆ ಪಂಚ್

    ವಿಡಿಯೋ ಮಾಡಲು ಬಂದ ಪಾಪರಾಜಿ ಕ್ಯಾಮೆರಾಗೆ ದೀಪಿಕಾ ಪಡುಕೋಣೆ ಪಂಚ್

    ಬಾಲಿವುಡ್ ನಟ ರಣ್‌ವೀರ್ ಸಿಂಗ್ (Ranveer Singh) ಅವರು ತಮ್ಮ ಮದುವೆ ಡಿಲೀಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಆದರೆ ಈಗ ಇಬ್ಬರೂ ಜೊತೆಯಾಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ. ಅಂತೆ ಕಂತೆ ಸುದ್ದಿಗಳಿಗೆ ಬ್ರೇಕ್‌ ಹಾಕಿದ್ದಾರೆ. ಈಗ ಈ ಜೋಡಿಯ ಬಗ್ಗೆ ಹೊಸ ವಿಚಾರವೊಂದು ಚರ್ಚೆಗೆ ಗ್ರಾಸವಾಗಿದೆ. ನಡೆದು ಬರುವಾಗ ವಿಡಿಯೋ ಮಾಡಲು ಬಂದ ಪಾಪರಾಜಿ ಕ್ಯಾಮೆರಾಗೆ ದೀಪಿಕಾ (Deepika Padukone) ಪಂಚ್ ಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

    ಲೂಸ್ ಡ್ರೆಸ್ ಹಾಕಿ ನಟಿ ಕಾಣಿಸಿಕೊಂಡಿದ್ದಾರೆ. ಇದರಿಂದ ಅವರ ಬೇಬಿ ಬಂಪ್ ಲುಕ್ ಕಂಡಿಲ್ಲ. ನಡೆದು ಬರುವಾಗ ಅವರು ಕ್ಯಾಮೆರಾಗೆ ಪಂಚ್ ಕೊಟ್ಟಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಸೆಲೆಬ್ರಿಟಿಗಳ ಫೋಟೋ ತೆಗೆಯಲು ಪಾಪರಾಜಿಗಳು ಮುಂದಾಗುತ್ತಾರೆ. ಇದರಿಂದ ಸೆಲೆಬ್ರಿಟಿಗಳಿಗೆ ಕಿರಿಕಿರಿ ಆಗುತ್ತದೆ. ದೀಪಿಕಾಗೂ ಹಾಗೆಯೇ ಆಗಿದೆ ಎನ್ನಲಾಗಿದೆ.

     

    View this post on Instagram

     

    A post shared by Manav Manglani (@manav.manglani)

    ಸೆಲೆಬ್ರಿಟಿ ಅಂದಮೇಲೆ ಗಾಸಿಪ್‌ಗಳು ಕಾಮನ್. ದೀಪಿಕಾ ಮತ್ತು ರಣ್‌ವೀರ್ ಸಿಂಗ್ ಅನ್ಯೋನ್ಯವಾಗಿದ್ದಾರೆ. ಮೊದಲ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ:ಅನನ್ಯಾಗೆ ಗುಡ್‌ಬೈ- ಸಾರಾ ಜೊತೆ ‘ಆಶಿಕಿ 2’ ಹೀರೋ ಡೇಟಿಂಗ್?


    ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಿ ಜೂನ್‌ನಿಂದ ದೀಪಿಕಾ ಪಡುಕೋಣೆ ಬ್ರೇಕ್ ಪಡೆಯಲಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದೀಪಿಕಾ ಹೆರಿಗೆ ನಡೆಯಲಿದೆ.

  • ದಿಢೀರನೇ ಮದುವೆ ಫೋಟೋ ಡಿಲೀಟ್ ಮಾಡಿ ಅನುಮಾನ ಮೂಡಿಸಿದ ರಣ್‌ವೀರ್ ಸಿಂಗ್

    ದಿಢೀರನೇ ಮದುವೆ ಫೋಟೋ ಡಿಲೀಟ್ ಮಾಡಿ ಅನುಮಾನ ಮೂಡಿಸಿದ ರಣ್‌ವೀರ್ ಸಿಂಗ್

    ಬಾಲಿವುಡ್ ನಟ ರಣ್‌ವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದಿಢೀರನೇ ಮದುವೆ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ರಣ್‌ವೀರ್‌ ತೆಗೆದುಹಾಕಿದ್ದಾರೆ. ರಣ್‌ವೀರ್ ನಡೆ ಅಭಿಮಾನಿಗಳನ್ನು ಗೊಂದಲಕ್ಕೆ ತಳ್ಳಿದೆ.

    ದಿಢೀರನೇ ರಣ್‌ವೀರ್ ಸಿಂಗ್ ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಮದುವೆ ಫೋಟೋ (Wedding Photo) ಡಿಲೀಟ್ ಮಾಡಿರೋದು ಈಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಮಗು ಬರುವ ಸಂತಸದ ಸುದ್ದಿ ನಡುವೆ ಹೀಗೆ ರಣ್‌ವೀರ್ ಯಾಕೆ ಮಾಡಿದ್ರು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.‌ ಇದನ್ನೂ ಓದಿ:ಕಾಮಾಕ್ಯ ದೇವಸ್ಥಾನಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭೇಟಿ

    2013ರಿಂದ ಪೋಸ್ಟ್ ಮಾಡಿದ ಎಲ್ಲಾ ಫೋಟೋಗಳನ್ನು ರಣ್‌ವೀರ್ ತೆಗೆದು ಹಾಕಿದ್ದಾರೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ನಾಲ್ಕೇ ವರ್ಷಕ್ಕೆ ಡಿವೋರ್ಸ್ ಪಡೆದ ಯಶ್ ಚಿತ್ರದ ನಾಯಕಿ ಭಾಮಾ

    ಅಂದಹಾಗೆ, ಹಲವು ವರ್ಷಗಳ ಡೇಟಿಂಗ್ ನಂತರ 2018ರಲ್ಲಿ ರಣ್‌ವೀರ್ ಸಿಂಗ್- ದೀಪಿಕಾ ಪಡುಕೋಣೆ ಕೊಂಕಣಿ ಮತ್ತು ಸಿಂಧಿ ಪದ್ಧತಿಯಂತೆ ಮದುವೆಯಾದರು.

  • ಮೇ ಬಳಿಕ ಸಿನಿಮಾಗೆ ದೀಪಿಕಾ ಪಡುಕೋಣೆ ಗುಡ್ ಬೈ

    ಮೇ ಬಳಿಕ ಸಿನಿಮಾಗೆ ದೀಪಿಕಾ ಪಡುಕೋಣೆ ಗುಡ್ ಬೈ

    ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಇತ್ತೀಚೆಗೆ ತಾವು ತಾಯಿಯಾಗಿರುವ ಗುಡ್ ನ್ಯೂಸ್ ತಿಳಿಸಿದ್ದರು. ಇದರ ನಡುವೆ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ನಟಿ ಪೂರ್ಣಗೊಳಿಸಲು ಚಿತ್ರತಂಡಕ್ಕೆ ಸಾಥ್ ನೀಡಿದ್ದರು. ಇದೀಗ ನಟಿಯ ಬಗ್ಗೆ ಹೊಸ ವಿಚಾರವೊಂದು ಹೊರಬಿದ್ದಿದೆ. ಮೇ ಬಳಿಕ ಸಿನಿಮಾಗೆ ನಟಿ ಗುಡ್ ಬೈ ಹೇಳಲಿದ್ದಾರೆ.

    ಸದ್ಯ ದೀಪಿಕಾ ಸಿಂಗಂ 3, ಪ್ರಭಾಸ್ (Prabhas) ಜೊತೆಗಿನ ‘ಕಲ್ಕಿ 2898 ಡಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರೆಗ್ನೆಂಟ್ ದೀಪಿಕಾ ವರ್ಕ್ ಡೆಡಿಕೇಷನ್‌ನಿಂದ ಒಪ್ಪಿಕೊಂಡಿರುವ ಚಿತ್ರಕ್ಕೆ ತೊಂದರೆಯಾಗಬಾರದು ಎಂದು ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ವಿನ್ನರ್ ವಿರುದ್ಧ ED ಕೇಸ್ ದಾಖಲು

    ಮೂಲಗಳ ಪ್ರಕಾರ, ದೀಪಿಕಾ ಪಡುಕೋಣೆ ಸದ್ಯ ‘ಕಲ್ಕಿ 2898 ಡಿ’ ಚಿತ್ರದ ಪ್ರಚಾರಕ್ಕೆ ಕಮಿಟ್ ಆಗಿದ್ದಾರೆ. ಅದಕ್ಕೆ ಚಿತ್ರ ತಂಡವು ಆಕೆಯ ಗರ್ಭಧಾರಣೆಯನ್ನು ಪರಿಗಣಿಸಿ, ಮುಂದಿನ ಶೂಟಿಂಗ್ ಅನ್ನು ಮುಂಚಿತವಾಗಿ ಯೋಜಿಸಿದ್ದಾರೆ. ಅವರು ನಿರ್ಮಾಪಕರ ಜೊತೆ ಚರ್ಚೆ ಮಾಡಿ, ಮೇ ಅಂತ್ಯದೊಳಗೆ ಶೂಟಿಂಗ್ ಮತ್ತು ಪ್ರಚಾರಕ್ಕೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳಿಸುವಂತೆ ವಿನಂತಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಹೊಸ ಸಿನಿಮಾ ಒಪ್ಪಿಕೊಂಡ ವಿಜಯ್ ದೇವರಕೊಂಡ

    ದೀಪಿಕಾ ಅವರು ಮೇ ಅಂತ್ಯದ ನಂತರ ಮನೆಯಲ್ಲಿ ರೆಸ್ಟ್ ಮಾಡುವ ಕಾರಣ ಅವರು ಜೂನ್‌ನಿಂದ ಯಾವುದೇ ಶೂಟಿಂಗ್ ಅಥವಾ ಚಿತ್ರದ ಪ್ರಚಾರಕ್ಕೆ ಲಭ್ಯವಿರುವುದಿಲ್ಲ ಎಂದು ಎನ್ನಲಾಗಿದೆ. ದೀಪಿಕಾ ಅವರು ಮುಂದಿನ ತಿಂಗಳಿನಿಂದ ಅಂತಿಮವಾಗಿ ಕೆಲಸಕ್ಕೆ ವಿರಾಮ ಹೇಳುತ್ತಿದ್ದಾರೆ. ಅವರ ಹೆರಿಗೆ ದಿನಾಂಕವು ಸೆಪ್ಟೆಂಬರ್‌ನಲ್ಲಿ ಇರುವುದರಿಂದ ಕೆಲಸದಿಂದ ದೂರ ಸರಿದು ತಮ್ಮ ಆರೋಗ್ಯದ ಕಡೆಗೆ ಸಂಪೂರ್ಣವಾಗಿ ಗಮನಹರಿಸಲಿದ್ದಾರೆ.


    ಅಂದಹಾಗೆ, ದೀಪಿಕಾ ಪಡುಕೋಣೆ ಹೆರಿಗೆ ಬೆಂಗಳೂರಿನಲ್ಲಿಯೇ ನಡೆಯಲಿದೆ. ಹೊಸ ಅತಿಥಿಯ ಆಗಮನ ನಿರೀಕ್ಷೆಯಲ್ಲಿದ್ದಾರೆ ದೀಪಿಕಾ ಕುಟುಂಬ.