Tag: Deepika Padukone

  • 100 ಕೋಟಿ ಮೌಲ್ಯದ ಮನೆಗೆ ಶಿಫ್ಟ್ ಆಗಲಿದ್ದಾರೆ ದೀಪಿಕಾ ಪಡುಕೋಣೆ ದಂಪತಿ

    100 ಕೋಟಿ ಮೌಲ್ಯದ ಮನೆಗೆ ಶಿಫ್ಟ್ ಆಗಲಿದ್ದಾರೆ ದೀಪಿಕಾ ಪಡುಕೋಣೆ ದಂಪತಿ

    ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣ್‌ವೀರ್ ಸಿಂಗ್ (Ranveer Singh) ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಗುವಿಗಾಗಿ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಚೊಚ್ಚಲ ಮಗುವಿನ ಆಗಮನಕ್ಕೂ ಮುನ್ನ 100 ಕೋಟಿ ರೂ. ಐಷಾರಾಮಿ ಮನೆಗೆ ಶಿಫ್ಟ್ ಆಗಲಿದ್ದಾರೆ. ಇದನ್ನೂ ಓದಿ:ನನ್ನ ಸೋಲಿಗಾಗಿ ಒಂದು ವರ್ಗ ಕಾಯುತ್ತಿದೆ: ಕೃತಿ ಶೆಟ್ಟಿ

     

    View this post on Instagram

     

    A post shared by Viral Bhayani (@viralbhayani)

    ಮನ್ನತ್‌ನ ಶಾರುಖ್ ಖಾನ್ ಮನೆಯ ಸಮೀಪ ರಣವೀರ್ ಸಿಂಗ್ ಹಾಗೂ ದೀಪಿಕಾ 100 ಕೋಟಿ ರೂ. ಮೌಲ್ಯದ ಫ್ಲ್ಯಾಟ್‌ ಖರೀದಿಸಿದ್ದಾರೆ. ನಾಲ್ಕು ಪ್ಲೋರ್‌ನ ಮನೆ ಇದಾಗಿದೆ. ಈ ಮನೆ ಸಮುದ್ರ ತೀರದಲ್ಲಿದೆ. ಈ ಮನೆಯ ಅಳತೆ 11,266 ಚದರ ಅಡಿ ಇದೆ. ಇದರ ಜೊತೆಗೆ ಟೆರೇಸ್ ಕೂಡ ಇದೆ. ನಟಿಯ ಹೊಸ ಮನೆ ಕೆಲಸ ಅಂತಿಮ ಹಂತದಲ್ಲಿದೆ. ಇನ್ನೂ ಮುಂಬೈನ ಮನ್ನತ್‌ನಲ್ಲಿ ಬಹುತೇಕ ಸೆಲೆಬ್ರಿಟಿಗಳು ಇಲ್ಲಿಯೇ ವಾಸವಾಗಿದ್ದಾರೆ.

    ದೀಪಿಕಾ ಪಡುಕೋಣೆ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಇದೆ. ಇತ್ತೀಚೆಗೆ ಪಠಾಣ್, ಜವಾನ್, ಫೈಟರ್, ‘ಕಲ್ಕಿ 2898 ಎಡಿ’ ರೀತಿಯ ಹಿಟ್ ಚಿತ್ರಗಳಲ್ಲಿ ದೀಪಿಕಾ ನಟಿಸಿ ಟಾಪ್ ಲಿಸ್ಟ್‌ನಲ್ಲಿದ್ದಾರೆ. ಇನ್ನೂ ಬೇಡಿಕೆ ಇರುವಾಗಲೇ ತಾಯಿ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಈ ವರ್ಷದ ಆರಂಭದಲ್ಲಿ ತಾಯಿ ಆಗುವ ಘೋಷಣೆ ಮಾಡಿದರು. ಸೆಪ್ಟೆಂಬರ್‌ನಲ್ಲಿ ದೀಪಿಕಾ ಪಡುಕೋಣೆ ಮಗುವಿಗೆ ಜನ್ಮ ನೀಡಲಿದ್ದಾರೆ.

  • ದೀಪಿಕಾ ಪಡುಕೋಣೆ ಜೊತೆ ಕಾರು ಓಡಿಸೋ ಪೈಪೋಟಿಗಿಳಿದ ಸಾಹಸಗಳ ಬಗ್ಗೆ ವಿವರಿಸಿದ ಕಂಗನಾ

    ದೀಪಿಕಾ ಪಡುಕೋಣೆ ಜೊತೆ ಕಾರು ಓಡಿಸೋ ಪೈಪೋಟಿಗಿಳಿದ ಸಾಹಸಗಳ ಬಗ್ಗೆ ವಿವರಿಸಿದ ಕಂಗನಾ

    ಗೆಲ್ಲಾ ಮಹಿಳೆಯರು ಡ್ರೈವಿಂಗ್ ಮಾಡೋದು ಸಾಮಾನ್ಯ. ಆದರೆ ಬಾಲಿವುಡ್ ನಟಿ ಕಂಗನಾಗೆ (Kangana Ranaut) ಮಾತ್ರ ಜೀವನದಲ್ಲಿ ಕಾರು ಓಡಿಸೋದನ್ನ ಕಲಿಯುವುದೇ ದೊಡ್ಡ ಸಮಸ್ಯೆಯಾಗಿತ್ತು ಅನ್ನೋ ವಿಚಾರವನ್ನ ಇತ್ತೀಚೆಗೆ ಹೇಳಿದ್ದಾರೆ. ಗಾಡ್‌ಫಾದರ್ ಇಲ್ಲದೆ ಸಿನಿಮಾ ಹಾಗೂ ರಾಜಕೀಯದಲ್ಲಿ ಕ್ಷೇತ್ರಗಳಲ್ಲಿ ಶಕ್ತಿ ಪ್ರದರ್ಶನ ಮಾಡಿರುವಾಕೆ ನಟಿ ಕಮ್ ಸಂಸದೆ ಕಂಗನಾ ರಣಾವತ್. ಆದರೆ ಇದುವರೆಗೂ ಇವರಿಗೆ ಕಾರು ಚಾಲನೆ ಮಾತ್ರ ಸಾಧ್ಯವಾಗಲಿಲ್ಲ ಅನ್ನೋದೇ ದುರಂತ. ಕಾರು‌ ಡ್ರೈವಿಂಗ್ ಟ್ರೈನಿಂಗ್ ವೇಳೆ‌, ಎರಡು ಬಾರಿ ಆಗಿದ್ದ ಅನಾಹುತದಿಂದ ನಿರಾಸೆಗೊಂಡಿದ್ದ ನಟಿ. ಮುಂದೆ ಕಾರು ಓಡಿಸುವ ಪ್ರಯತ್ನವನ್ನೇ ನಿಲ್ಲಿಸಿ ಬಿಟ್ಟಿದ್ದರಂತೆ ಕಂಗನಾ.‌ ಇದನ್ನೂ ಓದಿ:ಕೊನೆಗೂ ಕಾರ್ತಿಕ್ ಮಹೇಶ್ ಮನೆಗೆ ಬಂತು ಬಿಗ್ ಬಾಸ್ ಶೋನಲ್ಲಿ ಗೆದ್ದ ಕಾರು

    ಸದ್ಯಕ್ಕೆ ‘ಎಮರ್ಜೆನ್ಸಿ’ ಸಿನಿಮಾದ ಸಂದರ್ಶನದಲ್ಲಿ ಮಾತನಾಡಿರುವ ಕಂಗನಾ, ಕಾರು ಓಡಿಸೋದನ್ನ ಕಲಿಯಲು ಮಾಡಿದ್ದ ಸಾಹಸಗಳ ಬಗ್ಗೆ ವಿವರಿಸಿದ್ದಾರೆ. ಇಂಡಸ್ಟ್ರಿಗೆ ಬಂದ ಆರಂಭದಲ್ಲಿ ಕಾರು ಓಡಿಸುವ ಮನಸಾಗಿ ಮುಂಬೈನ ಬಾಂದ್ರಾದಲ್ಲಿ ಡ್ರೈವಿಂಗ್ ಸ್ಕೂಲ್‌ವೊಂದಕ್ಕೆ ಸೇರಿಕೊಂಡಿದ್ರಂತೆ. ಅದೇ ಶಾಲೆಯಲ್ಲೇ ಆಗಷ್ಟೇ ಇಂಡಸ್ಟ್ರಿಗೆ ಕಾಲಿಟ್ಟಿದ್ದ ಇನ್ನೋರ್ವ ನಟಿ ದೀಪಿಕಾ ಪಡುಕೋಣೆ (Deepika Padukone) ಕೂಡ ತರಬೇತಿಗೆ ಬಂದಿರುತ್ತಾರೆ. ಸುಮಾರು 2006-07ರ ವೇಳೆ, ಹೀಗೆ ಒಂದು ದಿನ ಲೈಸೆನ್ಸ್ ಪಡೆಯಬೇಕಾದ ದಿನವೇ ಕಂಗನಾ ತಮ್ಮ ಕಾರನ್ನ ಬ್ರೇಕ್ ಒತ್ತುವ ಬದಲು ಆ್ಯಕ್ಸಿಲೇಟರ್ ಒತ್ತಿದ ಪರಿಣಾಮ ಮುಂದಿರುವ ಆಟೋ ರಿಕ್ಷಾಗೆ ಗುದ್ದಿದ್ರಂತೆ ಆ ಘಟನೆ ಬಳಿಕ ಭಯದಿಂದ ಕಂಗನಾ ಕಾರು ಓಡಿಸುವ ಆಸೆ ಕೈಬಿಡ್ತಾರೆ.

    ಇದೇ ಕಂಗನಾಗೆ ಮತ್ತೆ ಐದಾರು ವರ್ಷಗಳ ಬಳಿಕ ಕಾರು ಓಡಿಸುವ ಆಸೆ ಹುಟ್ಟಿಸುವುದು ಡ್ರೈವಿಂಗ್ ಸ್ಕೂಲ್ ಕ್ಲಾಸ್‌ಮೇಟ್ ಆಗಿದ್ದ ನಟಿ ದೀಪಿಕಾ ಪಡುಕೋಣೆ. ಯಾಕೆಂದರೆ ಕಾರ್ಯಕ್ರಮವೊಂದರಲ್ಲಿ ಕಂಗನಾ ಎದುರೇ ದೀಪಿಕಾ ಪಡುಕೋಣೆ ತಾವೇ ಕಾರ್ ಡ್ರೈವ್ ಮಾಡಿಕೊಂಡು ಬರುತ್ತಾರೆ. ಇದನ್ನ ಕಂಡ ಕಂಗನಾಗೆ ಮತ್ತೆ ಸ್ವತಂತ್ರವಾಗಿ ಕಾರು ಓಡಿಸೋದನ್ನ ಕಲಿಯುವ ಆಸೆಯಾಗುತ್ತೆ. ಮತ್ತೆ ಡ್ರೈವಿಂಗ್ ಸ್ಕೂಲ್‌ಗೆ ಹೋಗ್ತಾರೆ. ಆದರೆ ಎರಡನೇ ಬಾರಿಯೂ ನಟಿ ವಿಫಲರಾಗುತ್ತಾರೆ. ತರಬೇತಿ ದಿನ ತಮ್ಮ BMW ಕಾರ್‌ನ್ನ ಪೊಲೀಸ್ ಜೀಪಿನ ಮೇಲೆ ಹತ್ತಿಸಿಬಿಡ್ತಾರೆ. ಈ‌ ಪರಿಣಾಮ, ಕಂಗನಾ ಕಾರು ಬಹಳವೇ ಸ್ಕ್ರ್ಯಾಚ್ ಆಗಿರುತ್ತೆ. ಅಲ್ಲಿಗೆ ಕಾರು ಓಡಿಸುವ ದುಸ್ಸಾಹಸ ಬೇಡ ಎಂದು ತೀರ್ಮಾನಕ್ಕೆ ಬರುತ್ತಾರಂತೆ ಕಂಗನಾ. ಹೀಗೆ ಸಂಸದೆ ಕಂಗನಾ ಡ್ರೈವಿಂಗ್ ಕಥೆಯನ್ನ ಬಿಚ್ಚಿಟ್ಟಿದ್ದಾರೆ.

  • 1 ಸೆಕೆಂಡ್ ರೀಲ್ಸ್‌ ಮಾಡಿದ ದೀಪಿಕಾ ಪಡುಕೋಣೆ ಫುಲ್‌ ಟ್ರೆಂಡಿಂಗ್

    1 ಸೆಕೆಂಡ್ ರೀಲ್ಸ್‌ ಮಾಡಿದ ದೀಪಿಕಾ ಪಡುಕೋಣೆ ಫುಲ್‌ ಟ್ರೆಂಡಿಂಗ್

    ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣ್‌ವೀರ್ ಸಿಂಗ್ (Ranveer Singh) ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಕಣ್ಣು ಹೊಡೆಯುತ್ತಾ ನಟಿ ರೀಲ್ಸ್ ಮಾಡಿರುವ ವಿಡಿಯೋವನ್ನು ಅಭಿಮಾನಿಗಳ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.

    ಒಂದು ಸೆಕೆಂಡಿನ ರೀಲ್ಸ್ ವಿಡಿಯೋವನ್ನು ನಟಿ ಶೇರ್ ಮಾಡಿದ್ದಾರೆ. ದೀಪಿಕಾರ ಕಣ್ಣೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಾರ್ಯಕ್ರಮಕ್ಕೆ ರೆಡಿಯಾಗುತ್ತಿರುವ ವೇಳೆ, ಈ ವಿಡಿಯೋವನ್ನು ಮಾಡಲಾಗಿದೆ. ವಿಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಪಡೆದುಕೊಂಡಿದೆ. ಇದನ್ನೂ ಓದಿ:ಇನ್ಸ್ಟಾಗ್ರಾಂನಲ್ಲಿ ನರೇಂದ್ರ ಮೋದಿಯನ್ನು ಹಿಂದಿಕ್ಕಿದ ಶ್ರದ್ಧಾ ಕಪೂರ್


    ಅಂದಹಾಗೆ, ದೀಪಿಕಾ ಪಡುಕೋಣೆ ದಂಪತಿ ಚೊಚ್ಚಲ ಮಗುವನ್ನು ಸೆಪ್ಟೆಂಬರ್‌ನಲ್ಲಿ ಬರಮಾಡಿಕೊಳ್ಳಲಿದ್ದಾರೆ. ಮಗುವಿನ ಆಗಮನಕ್ಕಾಗಿ ನಟಿಯ ಪರಿವಾರ ಎದುರು ನೋಡುತ್ತಿದೆ.

    ಇನ್ನೂ ‘ಕಲ್ಕಿ 2898 ಎಡಿ’ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಪ್ರಭಾಸ್ ಜೊತೆ ನಟಿಸಿದ್ದ ದೀಪಿಕಾ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಮುಂಬರುವ ‘ಸಿಂಗಂ ಅಗೇನ್’ ಸಿನಿಮಾದಲ್ಲಿ ಲೇಡಿ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದಾರೆ.

  • ದೀಪಿಕಾ ಪಡುಕೋಣೆಗೆ ಗಂಡು ಮಗು ಹುಟ್ಟಿದೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು

    ದೀಪಿಕಾ ಪಡುಕೋಣೆಗೆ ಗಂಡು ಮಗು ಹುಟ್ಟಿದೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು

    ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಚೊಚ್ಚಲ ಮಗು ಬರಮಾಡಿಕೊಳ್ಳಲು ಎದುರು ನೋಡ್ತಿದ್ದಾರೆ. ಸಿನಿಮಾಗೆ ಬ್ರೇಕ್ ಕೊಟ್ಟು ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರ ನಡುವೆ ನಟಿಗೆ ಗಂಡು ಮಗು ಹುಟ್ಟಿದೆ ಎಂದು ನಕಲಿ ಫೋಟೋವೊಂದನ್ನು ಸೃಷ್ಟಿ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋ ಮತ್ತು ಫೋಟೋಗಳು ಹರಿಬಿಡೋದು ಈಗ ಸಾಮಾನ್ಯವಾಗಿದೆ. ಇಂಟರ್‌ನೆಟ್‌ನಲ್ಲಿ ಲೈಕ್, ವಿವ್ಸ್ ಗಿಟ್ಟಿಸಿಕೊಳ್ಳಲು ನಾನಾ ತಂತ್ರಗಳನ್ನು ಕಿಡಿಗೇಡಿಗಳು ಮಾಡುತ್ತಿರುತ್ತಾರೆ. ಈಗ ‘ಪಠಾಣ್’ ಹೀರೋಯಿನ್ ದೀಪಿಕಾಗೆ ಗಂಡು ಮಗು ಹುಟ್ಟಿದೆ ಎನ್ನಲಾದ ಫೋಟೋವೊಂದು ವೈರಲ್ ಆಗುವಂತೆ ಮಾಡಿದ್ದಾರೆ. ಇದನ್ನೂ ಓದಿ:ಬೆಡ್‌ರೂಮ್ ಫೋಟೋ ಹಂಚಿಕೊಂಡ ನಮ್ರತಾ ಗೌಡ

    ಯಾರದ್ದೋ ಫೋಟೋವನ್ನು ಎಡಿಟ್ ಮಾಡಿ ಅದಕ್ಕೆ, ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಫೋಟೋ ಎಂದು ನಂಬಿಸುವ ಪ್ರಯತ್ನ ಮಾಡಿದ್ದಾರೆ. ಅದೆಷ್ಟೋ ಅಭಿಮಾನಿಗಳು, ದೀಪಿಕಾಗೆ ಗಂಡು ಮಗು ಆಗಿದೆ ಎಂದೇ ಭಾವಿಸಿದ್ದಾರೆ. ಆದರೆ ಅದು ಸುಳ್ಳು. ದೀಪಿಕಾ ಪಡುಕೋಣೆ ಸೆಪ್ಟೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಮಗುವಿನ ಆಗಮನಕ್ಕಾಗಿ ಇಡೀ ಕುಟುಂಬ ಎದುರು ನೋಡ್ತಿದೆ.

    ಅಂದಹಾಗೆ, ಇತ್ತೀಚೆಗೆ ಪ್ರಭಾಸ್ ಜೊತೆಗಿನ ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದ ಭರ್ಜರಿ ಯಶಸ್ಸಿನ ಮೂಲಕ ನಟಿಯ ಕೆರಿಯರ್‌ಗೆ ತಿರುವು ಸಿಕ್ಕಿದೆ. ಇದರ ಪಾರ್ಟ್‌ 2ಗಾಗಿ ಫ್ಯಾನ್ಸ್‌ ಎದುರು ನೋಡ್ತಿದ್ದಾರೆ.

  • ದೀಪಿಕಾ ಜೊತೆ ಇಂಟಿಮೇಟ್ ದೃಶ್ಯ ನಿಭಾಯಿಸಿದ್ದು ಅಷ್ಟು ಸುಲಭವಾಗಿರಲಿಲ್ಲ: ಸಿದ್ಧಾಂತ್ ಚತುರ್ವೇದಿ

    ದೀಪಿಕಾ ಜೊತೆ ಇಂಟಿಮೇಟ್ ದೃಶ್ಯ ನಿಭಾಯಿಸಿದ್ದು ಅಷ್ಟು ಸುಲಭವಾಗಿರಲಿಲ್ಲ: ಸಿದ್ಧಾಂತ್ ಚತುರ್ವೇದಿ

    ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ (Siddant Chaturvedi) ಸದ್ಯ ಕರಣ್ ಜೋಹರ್ ನಿರ್ಮಾಣದ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವರು ನೀಡಿದ ಸಂದರ್ಶನವೊಂದರಲ್ಲಿ ದೀಪಿಕಾ ಪಡುಕೋಣೆ (Deepika Padukone) ಜೊತೆ ಇಂಟಿಮೇಟ್ ದೃಶ್ಯ ನಿಭಾಯಿಸಿದ್ದು ಅಷ್ಟು ಸುಲಭವಾಗಿರಲಿಲ್ಲ ಎಂದು ಮಾತನಾಡಿದ್ದಾರೆ.

    ಭಾರತದ ಅನೇಕರು ಸಿಕ್ಕ ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಮಾತ್ರವಲ್ಲ ಇಂತಹ ದೃಶ್ಯಗಳನ್ನು ನಿಭಾಯಿಸುವಾಗ ತಂದೆಯ ಸಹಕಾರ ಕೂಡ ನನಗಿತ್ತು. ‌’ಗೆಹ್ರೈಯಾನ್’ (Gehraiyaan) ಚಿತ್ರದಲ್ಲಿ ದೀಪಿಕಾ ಜೊತೆ ಹಸಿ ಬಿಸಿ ದೃಶದಲ್ಲಿ ನಟಿಸುವಾಗ ತುಂಬಾ ನರ್ವಸ್ ಆಗಿದ್ದೆ. ಕರಣ್ ಜೋಹರ್ ಅವರ ಬಳಿ ಕೂಡ ನನ್ನ ಕಳವಳ ವ್ಯಕ್ತಪಡಿಸಿದ್ದೆ. ವೃತ್ತಿಪರವಾಗಿ ಪರಿಸ್ಥಿತಿಯನ್ನು ನಿಭಾಯಿಸಲು ನನಗೆ ಪ್ರೋತ್ಸಾಹಿಸಿದರು ಎಂದು ನಟ ಸಿದ್ಧಾಂತ್ ಮಾತನಾಡಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಮತ್ತು ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಶಕುನ್ ಬಾತ್ರಾ ಜೊತೆ ಕೆಲಸ ಮಾಡುವ ಒಳ್ಳೆಯ ಅವಕಾಶ ನನ್ನದಾಗಿತ್ತು ಎಂದು ಹೇಳಿದ್ದಾರೆ.

    ಇನ್ನೂ ದೀಪಿಕಾ ಪಡುಕೋಣೆ (Deepika Padukone) ಸ್ವೀಟ್ ವ್ಯಕ್ತಿಯಾಗಿದ್ದರು. ಈ ಸಿನಿಮಾ ಮಾಡುವಾಗ ಬೆಂಬಲಿಸಿದ್ದರು. ಆ ಬಾಂಧವ್ಯದಿಂದಲೇ ನಾವು ಉತ್ತಮ ಸ್ನೇಹಿತರಾದೆವು ಎಂದು ಸಿದ್ಧಾಂತ್ ಚರ್ತುರ್ವೇದಿ ಮಾತನಾಡಿದ್ದಾರೆ. ಇದನ್ನೂ ಓದಿ:ಧ್ರುವ ಸರ್ಜಾ ಮುಂದೆ ‘ಢಾಕ್ ದೇವ’ನಾಗಿ ಬಂದ ಸಂಜಯ್ ದತ್- ರಿವೀಲ್ ಆಯ್ತು ‘ಕೆಡಿ’ ಲುಕ್

    ಅಂದಹಾಗೆ, ‘ಗೆಹ್ರೈಯಾನ್’ ಸಿನಿಮಾ 2022ರಲ್ಲಿ ರಿಲೀಸ್ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಈ ಚಿತ್ರವನ್ನು ಕರಣ ಜೋಹರ್ ನಿರ್ಮಾಣ ಮಾಡಿದ್ದರು.

  • ಹುಟ್ಟುವ ಮಗುವಿಗಾಗಿ ದಿಟ್ಟ ನಿರ್ಧಾರ ಕೈಗೊಂಡ ದೀಪಿಕಾ ಪಡುಕೋಣೆ

    ಹುಟ್ಟುವ ಮಗುವಿಗಾಗಿ ದಿಟ್ಟ ನಿರ್ಧಾರ ಕೈಗೊಂಡ ದೀಪಿಕಾ ಪಡುಕೋಣೆ

    ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆಯೇ ‘ಕಲ್ಕಿ’ (Kalki 2898 AD) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವ ಚಿತ್ರತಂಡಕ್ಕೆ ನಟಿ ಸಾಥ್ ನೀಡಿದ್ದರು. ಈಗ ಅವರ ಹೊಸದೊಂದು ಅಪ್‌ಡೇಟ್ ಸಿಕ್ಕಿದೆ. ಹುಟ್ಟುವ ಮಗುವಿಗಾಗಿ ನಟಿ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಇದನ್ನೂ ಓದಿ:ಅಕ್ಕನ ಮದುವೆ ಸಂಭ್ರಮದಲ್ಲಿ ಮಿಂಚಿದ ಮೇಘಾ ಶೆಟ್ಟಿ

    ಅಂತರಾಷ್ಟ್ರೀಯ ವೆಬ್ ಸ್ಟೋರಿ ‘ದಿ ವೈಟ್ ಲೋಟಸ್’ ಮೂರನೇ ಸೀಸನ್ ಆಫರ್ ನಟಿ ದೀಪಿಕಾಗೆ ಸಿಕ್ಕಿತ್ತು. ಆದರೆ, ಪ್ರೆಗ್ನೆಂಟ್ ಎಂಬ ಕಾರಣಕ್ಕೆ ಅವರು ಅದನ್ನು ನಿರಾಕರಿಸಿದ್ದಾರಂತೆ. ಮಗುವನ್ನು ನೋಡಿಕೊಳ್ಳಲು ನಟಿ ಈ ಪ್ರಾಜೆಕ್ಟ್ ಅನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ದೀಪಿಕಾ ಯಾವುದೇ ಹೊಸ ಪ್ರಾಜೆಕ್ಟ್‌ಗೆ ಸಹಿ ಹಾಕುತ್ತಿಲ್ಲ ಎನ್ನಲಾಗಿದೆ. ಸದ್ಯ ಈ ಸುದ್ದಿ ತಿಳಿದು ಫ್ಯಾನ್ಸ್‌ ಬೇಸರಗೊಂಡಿದ್ದಾರೆ.

    ದೀಪಿಕಾ ಯಾರ ಸಹಾಯವೂ ಇಲ್ಲದೆ ಮಗುವನ್ನು ನೋಡಿಕೊಳ್ಳಲು ಬಯಸಿದ್ದಾರೆ. ಅಂದರೆ ಇತರ ಸೆಲೆಬ್ರಿಟಿಗಳಂತೆ ದೀಪಿಕಾ ಮಗುವನ್ನು ನೋಡಿಕೊಳ್ಳಲು ದಾದಿಯರನ್ನು ನೇಮಿಸಿಕೊಳ್ಳುವುದಿಲ್ಲ. ಹೆರಿಗೆಯ ನಂತರ ಮಗುವಿನ ಪಾಲನೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧಾರಿಸಿದ್ದಾರೆ. ಆ ನಂತರ ಮತ್ತೆ ಸಿನಿಮಾಗೆ ಬರುವ ಬಗ್ಗೆ ಆಲೋಚಿಸಲಿದ್ದಾರೆ.

    ಅಂದಹಾಗೆ, ಫೆಬ್ರವರಿಯಲ್ಲಿ ತಾಯಿ ಆಗಿರೋದಾಗಿ ನಟಿ ಅನೌನ್ಸ್ ಮಾಡಿದ್ದರು. ಸೆಪ್ಟೆಂಬರ್‌ನಲ್ಲಿ ದೀಪಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ.

  • ಕತ್ರಿನಾ, ದೀಪಿಕಾ ಪಡುಕೋಣೆ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ರಣ್‌ಬೀರ್ ಕಪೂರ್

    ಕತ್ರಿನಾ, ದೀಪಿಕಾ ಪಡುಕೋಣೆ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ರಣ್‌ಬೀರ್ ಕಪೂರ್

    ‘ಅನಿಮಲ್’ (Animal) ಸಿನಿಮಾದ ಸಕ್ಸಸ್ ನಂತರ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ರಣ್‌ಬೀರ್ ನೀಡಿರುವ ಸಂದರ್ಶನವೊಂದರಲ್ಲಿ ಸ್ಟಾರ್ ನಟಿಯರ ಜೊತೆಗಿನ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ನನಗೆ ಸ್ತ್ರೀಲೋಲ, ಚೀಟರ್ ಎಂಬ ಹಣೆಪಟ್ಟಿ ಇದೆ. ಈಗಾಲೂ ಹಾಗೆಯೇ ಬದುಕುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ಧ್ರುವ ಸರ್ಜಾ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಜು.29ರಂದು ಹೊರಬೀಳಲಿದೆ ‘ಕೆಡಿ’ ಚಿತ್ರದ ಅಪ್‌ಡೇಟ್

    ಈ ಹಿಂದೆ ಕತ್ರಿನಾ ಕೈಫ್ (Katrina Kaif) ಮತ್ತು ದೀಪಿಕಾ ಪಡುಕೋಣೆ (Deepika Padukone) ಜೊತೆ ಡೇಟಿಂಗ್ ಮಾಡಿದ್ದರ ಕುರಿತು ರಣ್‌ಬೀರ್ ಕಪೂರ್ (Ranbir Kapoor) ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ. ನಾನು ಈ ಹಿಂದೆ ಇಬ್ಬರು ಯಶಸ್ವಿ ನಟಿಯರೊಂದಿಗೆ ಡೇಟ್ ಮಾಡಿದ್ದೆ. ಅದು ನನ್ನ ಐಡೆಂಟಿಟಿ ಆಗಿ ಹೋಯಿತು. ನನಗೆ ಚೀಟರ್, ಸ್ತ್ರೀಲೋಲ ಎನ್ನುವ ಟ್ಯಾಗ್ ಸಿಕ್ಕಿತು. ನನ್ನ ಜೀವನದ ಬಹುಪಾಲು ನಾನು ಮೋಸಗಾರ ಎಂಬ ಹಣೆಪಟ್ಟಿಯೊಂದಿಗೆ ಬದುಕಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ನೆರವು ನೀಡಿದ ನಟ ವಿನೋದ್ ರಾಜ್

    ಮಗಳು ರಾಹಾ ಮೇಲೆ ರಣ್‌ಬೀರ್‌ಗೆ ಅಪಾರ ಪ್ರೀತಿ ಇದೆ. ಈ ಮೂಲಕ ರಾಹಾ (Raha) ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಆಲಿಯಾ ಭಟ್ (Aliaa  Bhatt) ಜೊತೆ ಸುಂದರ ಬದುಕು ಕಂಡುಕೊಂಡಿದ್ದಾರೆ ರಣ್‌ಬೀರ್.

    ಅಂದಹಾಗೆ, ದೀಪಿಕಾ ಪಡುಕೋಣೆ ಜೊತೆ ನಟ ಡೇಟ್ ಮಾಡಿದ್ದರು. ಈ ರಿಲೇಷನ್‌ಶಿಪ್‌ಗೆ 2010ರಲ್ಲಿ ಬ್ರೇಕ್ ಬಿದ್ದಿತ್ತು. ಬಳಿಕ 6 ವರ್ಷಗಳ ಡೇಟಿಂಗ್ ನಂತರ 2016ರಲ್ಲಿ ಕತ್ರಿನಾ ಕೈಫ್ ಜೊತೆನೂ ರಣ್‌ಬೀರ್ ಬ್ರೇಕಪ್ ಮಾಡಿಕೊಂಡರು. ನಂತರ ಆಲಿಯಾ ಭಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  • ಪ್ರೆಗ್ನೆಂಟ್ ದೀಪಿಕಾ ಪಡುಕೋಣೆ ಬೇಬಿ ಬಂಪ್ ಮುಟ್ಟಿ ಪೋಸ್ ಕೊಟ್ಟ ಓರ್ರಿ

    ಪ್ರೆಗ್ನೆಂಟ್ ದೀಪಿಕಾ ಪಡುಕೋಣೆ ಬೇಬಿ ಬಂಪ್ ಮುಟ್ಟಿ ಪೋಸ್ ಕೊಟ್ಟ ಓರ್ರಿ

    ಬಾಲಿವುಡ್ ಸೆಲೆಬ್ರಿಟಿಗಳ ಆತ್ಮೀಯ ಗೆಳೆಯನೆಂದು ಖ್ಯಾತಿ ಪಡೆದಿರುವ  ಓರ್ರಿ ಅವತ್ರಮಣಿ (Orry Awatramani) ಇದೀಗ ಪ್ರೆಗ್ನೆಂಟ್ ದೀಪಿಕಾ ಪಡುಕೋಣೆ (Deepika Padukone) ಬೇಬಿ ಬಂಪ್ ಮುಟ್ಟಿ ಪೋಸ್ ನೀಡಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಅಂಬಾನಿ ಮನೆ ಮಗನ ಕಾರ್ಯಕ್ರಮದಲ್ಲಿ ರಣ್‌ವೀರ್ (Ranveer Singh) ಮತ್ತು ದೀಪಿಕಾ ಪಡುಕೋಣೆಯನ್ನು ಓರ್ರಿ ಮೀಟ್ ಮಾಡಿದ್ದಾರೆ. ಪತಿ ರಣ್‌ವೀರ್ ಮುಂದೆಯೇ ದೀಪಿಕಾ ಬೇಬಿ ಬಂಪ್ ಮುಟ್ಟಿ ಓರ್ರಿ ಸಖತ್‌ ಆಗಿ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ತಪ್ಪಾಗಿದ್ರೆ ಶಿಕ್ಷೆಯಾಗುತ್ತದೆ, ಕಾನೂನಿಗಿಂತ ಯಾರು ದೊಡ್ಡವರಿಲ್ಲ: ಧನ್ವೀರ್‌ ಗೌಡ

     

    View this post on Instagram

     

    A post shared by Orhan Awatramani (@orry)

    ಪತಿ ರಣವೀರ್ ಸಿಂಗ್ ನಡುವೆ ನಿಂತು ಪೋಸ್ ನೀಡಿದ್ದಾರೆ. ನಟಿ ದೀಪಿಕಾ ಪರ್ಪಲ್ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಈ ಫೋಟೋದಲ್ಲಿ ದೀಪಿಕಾ ಪಡುಕೋಣೆಯ ಬೇಬಿ ಬಂಪ್ ಹೊಟ್ಟೆ ಹೈಲೆಟ್ ಆಗಿ ಕಾಣಿಸುತ್ತಿದೆ. ದೀಪಿಕಾ ಪಡುಕೋಣೆ ಗರ್ಭ ಧರಿಸಿರುವುದು ಸುಳ್ಳು, ಈಕೆಯ ಬೇಬಿ ಬಂಪ್ ನಕಲಿ ಎನ್ನುವವರಿಗೆ ಉತ್ತರವೆಂಬಂತೆ ಈ ಫೋಟೋ ಇದೆ. ರಣವೀರ್ ಸಿಂಗ್ ಖುಷಿಯಿಂದ ಓರ್ರಿ ಬೆನ್ನಿಗೆ ಕೈ ಹಾಕಿ ಪೋಸ್ ನೀಡಿದ್ದಾರೆ.

    ಅಂದಹಾಗೆ, ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ (Radhika Merchant) ಮದುವೆ ಜುಲೈ 12ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಲಿದೆ.

  • 1.92 ಲಕ್ಷ ಮೌಲ್ಯದ ಸೀರೆಯುಟ್ಟು ಮಿಂಚಿದ ಗರ್ಭಿಣಿ ದೀಪಿಕಾ ಪಡುಕೋಣೆ

    1.92 ಲಕ್ಷ ಮೌಲ್ಯದ ಸೀರೆಯುಟ್ಟು ಮಿಂಚಿದ ಗರ್ಭಿಣಿ ದೀಪಿಕಾ ಪಡುಕೋಣೆ

    ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಚೊಚ್ಚಲ ಮಗುವಿನ ಆಗಮನಕ್ಕಾಗಿ ಎದುರು ನೋಡ್ತಿದ್ದಾರೆ. ತಾಯ್ತನದ ಖುಷಿಯಲ್ಲಿರುವ ನಟಿ ಈ ನಡುವೆ ಅಂಬಾನಿ ಮನೆ ಮಗನ ಕಾರ್ಯಕ್ರಮದಲ್ಲಿ ದುಬಾರಿ ಸೀರೆಯುಟ್ಟು ಕಂಗೊಳಿಸಿದ್ದಾರೆ.

    ಗರ್ಭಿಣಿ ದೀಪಿಕಾ ಪಡುಕೋಣೆ ಅನಂತ್ ಅಂಬಾನಿಯ (Ananth Ambani) ಮದುವೆ ಕಾರ್ಯಕ್ರಮದಲ್ಲಿ ಪರ್ಪಲ್ ಕಲರ್ ಸೀರೆ ಧರಿಸಿ ಮಿರಮಿರ ಮಿಂಚಿದ್ದಾರೆ. ಇದೇ ಸೀರೆಯಲ್ಲಿ ದೀಪಿಕಾ ಪಡುಕೋಣೆ ಬೇಬಿ ಬಂಪ್ (Baby Bump) ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ದೀಪಿಕಾ ಧರಿಸಿದ್ದ ಈ ಸೀರೆಯ ಬೆಲೆ 1 ಲಕ್ಷದ 92 ಸಾವಿರ ರೂ. ಮೌಲ್ಯದಾಗಿದೆ. ಸದ್ಯ ಈ ಸೀರೆಯ ರೇಟ್‌ ಕೇಳಿ ಫ್ಯಾನ್ಸ್‌ ದಂಗಾಗಿದ್ದಾರೆ.

    ಈ ಐಷಾರಾಮಿ ಸೀರೆಯನ್ನು ತಯಾರಿಸಲು 3,400 ತಾಸುಗಳು ಬೇಕಾಯಿತು. ಕೈಗಳಿಂದಲೇ ಹೆಚ್ಚಾಗಿ ಕಸೂತಿ ಮಾಡಿ ಸೀರೆಯನ್ನು ಸುಂದರವಾಗಿ ಕಾಣುವಂತೆ ಮಾಡಲಾಗಿದೆ. ಇದನ್ನೂ ಓದಿ:ಹಾವೇರಿ ಅಪಘಾತ: ಮೃತರ ಕುಟುಂಬಸ್ಥರಿಗೆ ಶಿವಣ್ಣ ದಂಪತಿ ಧನ ಸಹಾಯ

    ಅಂದಹಾಗೆ, ಇತ್ತೀಚೆಗೆ ದೀಪಿಕಾ ನಟಿಸಿದ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಸಕ್ಸಸ್ ಆಗಿದೆ. ಪ್ರಭಾಸ್, ಬಿಗ್ ಬಿ ಜೊತೆ ದೀಪಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

  • Kalki 2898 AD: ರಿಲೀಸ್ ಆದ 4 ದಿನದಲ್ಲಿ 500 ಕೋಟಿ ಕಲೆಕ್ಷನ್ ಮಾಡಿದ ಪ್ರಭಾಸ್ ಸಿನಿಮಾ

    Kalki 2898 AD: ರಿಲೀಸ್ ಆದ 4 ದಿನದಲ್ಲಿ 500 ಕೋಟಿ ಕಲೆಕ್ಷನ್ ಮಾಡಿದ ಪ್ರಭಾಸ್ ಸಿನಿಮಾ

    ಡಾರ್ಲಿಂಗ್ ಪ್ರಭಾಸ್ (Prabhas), ದೀಪಿಕಾ ಪಡುಕೋಣೆ ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಜೂನ್ 27ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು. ಬಿಡುಗಡೆಯಾದ 4 ದಿನಕ್ಕೆ 500 ಕೋಟಿ ರೂ. ಕಲೆಕ್ಷನ್ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ:ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ: ಗಣೇಶ್

    ಈ ಸಿನಿಮಾದ ಕತೆ ನಡೆಯುವುದು ಕಲಿಯುಗದ ಅಂತ್ಯದಲ್ಲಿ ಎಂದು ನಿರ್ದೇಶಕ ತೋರಿಸಿ ಕೊಟ್ಟಿದ್ದಾರೆ. 6000 ಸಾವಿರ ವರ್ಷಗಳ ನಡುವೆ ನಡೆವ ಕತೆಯಿದು. 3 ಗಂಟೆಯಲ್ಲಿ ಹೇಳಲು ಸಾಧ್ಯವಿಲ್ಲ. ಎರಡನೇ ಭಾಗದಲ್ಲಿ ಕಲ್ಕಿ ಚಿತ್ರ ಹಲವು ಟ್ವಿಸ್ಟ್‌ಗಳೊಂದಿಗೆ ಬರಲಿದೆ. ಮೊದಲ ಭಾಗದಲ್ಲೇ ಸಾಕಷ್ಟು ಕೌತುಕ ಮೂಡಿಸಿದ ಕಾರಣ ಚಿತ್ರ ಈಗ ಗೆದ್ದು ಬೀಗಿದೆ. 500 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

    ಅಂದಹಾಗೆ, ಸಿನಿಮಾ ರಿಲೀಸ್‌ಗೂ ಮುನ್ನ 2 ಭಾಗಗಳಲ್ಲಿ ಬರಲಿದೆ ಎಂದು ಚಿತ್ರತಂಡ ಘೋಷಿಸಿರಲಿಲ್ಲ. ಈಗ ಸಿನಿಮಾ ನೋಡಿದವರಿಗೆ ಇದು ಖಾತ್ರಿಯಾಗಿದೆ. ಚಿತ್ರದ ಬಗ್ಗೆ ಇನ್ನೂ ಕಥೆ ಹೊರಬರೋದು ಬಾಕಿಯಿದೆ. ಇದು ಆರಂಭವಷ್ಟೇ, ಕಲ್ಕಿ ಭಾಗ 2ರಲ್ಲಿ ಮತ್ತಷ್ಟು ಮಾಹಿತಿ ಸಿಗಲಿದೆ.

    ವೈಜಯಂತಿ ಮೂವೀಸ್ ನಿರ್ಮಾಣದ ಈ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone) ಜೊತೆ ಬಿಗ್ ಬಿ, ಕಮಲ್ ಹಾಸನ್, ದಿಶಾ ಪಟಾನಿ ಸೇರಿದಂತೆ ಹಲವರು ನಟಿಸಿದ್ದಾರೆ. ಮೃಣಾಲ್ ಠಾಕೂರ್, ವಿಜಯ್ ದೇವರಕೊಂಡ, ರಾಜಮೌಳಿ, ರಾಮ್ ಗೋಪಾಲ್ ವರ್ಮಾ,ದುಲ್ಕರ್ ಸಲ್ಮಾನ್ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದಾರೆ.