Tag: Deepika Padukone

  • ಹೆರಿಗೆ ನಂತರ ಒಂಟಿಯಾದ್ರಾ ದೀಪಿಕಾ?- ರಣ್‌ವೀರ್‌ ಮೇಲೆ ಕಂಪ್ಲೆಂಟ್ ಮಾಡಿದ ನಟಿ

    ಹೆರಿಗೆ ನಂತರ ಒಂಟಿಯಾದ್ರಾ ದೀಪಿಕಾ?- ರಣ್‌ವೀರ್‌ ಮೇಲೆ ಕಂಪ್ಲೆಂಟ್ ಮಾಡಿದ ನಟಿ

    ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ (Deepika Padukone) ಈಗ ಮಗುವಿನ ಆರೈಕೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಸಪ್ಟೆಂಬರ್ 8 ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹಸುಗೂಸಿನ ತಾಯಿ ಅಂದಮೇಲೆ ಕೆಲವು ದಿನಗಳ ಮಟ್ಟಿಗೆ ಮಗುವಿನ ಕಡೆ ಮಾತ್ರ ಗಮನ ಕೊಡುವುದು ತಾಯಿ ಕರ್ತವ್ಯ. ನಟನಾ ವೃತ್ತಿಯಲ್ಲಿ ಬಹಳವೇ ಬ್ಯುಸಿ ಇದ್ದ ದೀಪಿಕಾ ಈಗ ಮನೆಯಲ್ಲಿಯೇ ಇರುವ ಸಂದರ್ಭ ಬಂದಿದೆ. ಹೀಗಾಗಿ ಪತಿಯನ್ನ ಮಿಸ್ ಮಾಡಿಕೊಳ್ಳುವುದು ಸಾಮಾನ್ಯ. ಆದರೀಗ ಪತಿ ಮೇಲೆ ದೀಪಿಕಾ ಕಂಪ್ಲೆಂಟ್ ಮಾಡಿದ್ದಾರೆ.

    ಮನೆಗೆ 5 ಗಂಟೆಗೆ ಬರುತ್ತೇನೆ ಎಂದಿದ್ದ ಪತಿ ರಣ್‌ವೀರ್ 5 ಗಂಟೆ 1 ನಿಮಿಷಕ್ಕೆ ಬಂದರೆ ಪತ್ನಿ ಪರಿಸ್ಥಿತಿ ಹೇಗಿರುತ್ತದೆ ಅನ್ನೋದನ್ನು ನಟಿ ಸೋಶಿಯಲ್‌ ಮೀಡಿಯಾದಲ್ಲಿ ತಿಳಿಸಿದ್ದಾರೆ. ಮುದ್ದಾದ ಮಗು ಬೈನಾಕ್ಯೂಲರ್‌ (Binoculars) ಹಿಡಿದು ಕಿಟಕಿಯಿಂದ ಇಣುಕುವ ವಿಡಿಯೋ ಶೇರ್‌ ಮಾಡಿದ್ದಾರೆ. ಇದನ್ನೂ ಓದಿ:ನಾನು ತಂದೆಯಾಗಿದ್ದೇನೆ: ಪಬ್ಲಿಕ್‌ನಲ್ಲಿ ಸಂಭ್ರಮಿಸಿದ ರಣ್‌ವೀರ್ ಸಿಂಗ್

    ಇದರರ್ಥ ಸದ್ಯಕ್ಕೆ ದೀಪಿಕಾ ಪರಿಸ್ಥಿತಿ ಈಗ ಹೇಗಿದೆ ಅನ್ನೋದನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ. ಬಾಣಂತಿಯಾಗಿರುವ ದೀಪಿಕಾಗೆ ಈ ಸಂದರ್ಭದಲ್ಲಿ ಪತಿಯ ಹೆಚ್ಚಿನ ಅನಿವಾರ್ಯತೆ ಕಾಡುತ್ತಿದ್ದು, ಪತಿ ಮನೆಗೆ ಬರೋದನ್ನ ಎಷ್ಟು ಕಾತುರದಿಂದ ಎದುರು ನೋಡುತ್ತಿದ್ದೇನೆ ಎಂಬುದನ್ನ ವ್ಯಂಗ್ಯವಾಗಿ ಹೇಳಿದ್ದಾರೆ. ದೀಪಿಕಾ ಪತಿ ರಣ್‌ವೀರ್ ಸಿಂಗ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವುದರಿಂದ ಹೊರಗೆ ಹೋಗುತ್ತಾರೆ. ಆದರೆ ಪತಿಗಾಗಿ ಮನೆಯಲ್ಲಿ ಎಷ್ಟು ಪರಿತಪಿಸುತ್ತಿದ್ದಾರೆ ಎಂಬುದನ್ನ ದೀಪಿಕಾ ಈ ರೀತಿಯಾಗಿ ಹೇಳಿದ್ದಾರೆ. ಡಿಲಿವೆರಿ ಬಳಿಕ ದೀಪಿಕಾ ಇನ್ಸ್ಟಾಗ್ರಾಂನಲ್ಲಿ ಹಾಕಿರುವ ಈ ಸ್ಟೋರಿ ಸಖತ್ ವೈರಲ್ ಆಗುತ್ತಿದೆ.

  • ನಾನು ತಂದೆಯಾಗಿದ್ದೇನೆ: ಪಬ್ಲಿಕ್‌ನಲ್ಲಿ ಸಂಭ್ರಮಿಸಿದ ರಣ್‌ವೀರ್ ಸಿಂಗ್

    ನಾನು ತಂದೆಯಾಗಿದ್ದೇನೆ: ಪಬ್ಲಿಕ್‌ನಲ್ಲಿ ಸಂಭ್ರಮಿಸಿದ ರಣ್‌ವೀರ್ ಸಿಂಗ್

    ಬಾಲಿವುಡ್ ನಟ ರಣ್‌ವೀರ್ ಸಿಂಗ್ (Ranveer Singh) ಅವರು ತಂದೆಯಾದ ಖುಷಿಯಲ್ಲಿದ್ದಾರೆ. ಮುದ್ದು ಮಗಳ ಆಗಮನದ ನಂತರ ಇದೀಗ ಸಾರ್ವಜನಿಕವಾಗಿ ನಟ ಕಾಣಿಸಿಕೊಂಡಿದ್ದಾರೆ. ಸಮಾರಂಭವೊಂದರಲ್ಲಿ ನಾನು ತಂದೆಯಾಗಿದ್ದೇನೆ ಎಂದು ರಣ್‌ವೀರ್ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಹಂಸ ದಮಯಂತಿಯಂತೆ ಪೋಸ್ ಕೊಟ್ಟ ಹರ್ಷಿಕಾ

    ಮನೆಗೆ ಮುದ್ದು ಮಗಳ ಆಗಮನದ ಖುಷಿಯಲ್ಲಿದ್ದಾರೆ ರಣ್‌ವೀರ್ ಸಿಂಗ್ ದಂಪತಿ. ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದ ರಣ್‌ವೀರ್ ಇದೀಗ ಅನಂತ್ ಅಂಬಾನಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ನಾನು ತಂದೆಯಾಗಿದ್ದೇನೆ ಎಂದು ಪಬ್ಲಿಕ್‌ನಲ್ಲಿ ಪಾಪರಾಜಿಗಳ ಮುಂದೆ ಸಂಭ್ರಮಿಸಿದ್ದಾರೆ. ಅವರು ಖುಷಿ ಹಂಚಿಕೊಂಡ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Viral Bhayani (@viralbhayani)

    ಇನ್ನೂ 2018ರಲ್ಲಿ ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಗುರುಹಿರಿಯರ ಸಮ್ಮತಿ ಪಡೆದು ಹೊಸ ಬಾಳಿಗೆ ಕಾಲಿಟ್ಟರು. ಸೆ.8ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದರು.

    ಇನ್ನೂ ಡಾನ್ 3, ಆದಿತ್ಯಾ ಧರ್ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ರಣ್‌ವೀರ್‌ ಸಿಂಗ್‌ ಕೈಯಲ್ಲಿವೆ.

  • ಆಸ್ಪತ್ರೆಯಿಂದ ಇಂದು ದೀಪಿಕಾ ಪಡುಕೋಣೆ ಡಿಸ್ಚಾರ್ಜ್- ಮಗಳನ್ನು ಸ್ವಾಗತಿಸಲು ರಣ್‌ವೀರ್ ಭರ್ಜರಿ ಸಿದ್ಧತೆ

    ಆಸ್ಪತ್ರೆಯಿಂದ ಇಂದು ದೀಪಿಕಾ ಪಡುಕೋಣೆ ಡಿಸ್ಚಾರ್ಜ್- ಮಗಳನ್ನು ಸ್ವಾಗತಿಸಲು ರಣ್‌ವೀರ್ ಭರ್ಜರಿ ಸಿದ್ಧತೆ

    ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಇಂದು (ಸೆ.13) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಮುದ್ದಾದ ಮಗಳು ಮತ್ತು ಪತ್ನಿ ದೀಪಿಕಾರನ್ನು ಭರ್ಜರಿಯಾಗಿ ಸ್ವಾಗತಿಸಲು ರಣ್‌ವೀರ್ ಸಿಂಗ್ (Ranveer Singh) ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಅರ್ಜುನ ಅವಧೂತ ಗುರೂಜಿಯನ್ನು ಭೇಟಿಯಾದ ಧ್ರುವ ಸರ್ಜಾ

    ಸೆ.8ರಂದು ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ರಣ್‌ವೀರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ರಣ್‌ವೀರ್ ಆಸೆಯಂತೆ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ಇದೀಗ ಚೇತರಿಸಿಕೊಂಡಿರುವ ದೀಪಿಕಾ ಮತ್ತು ಪುಟ್ಟ ಮಗಳನ್ನು ಸ್ವಾಗತಿಸಲು ರಣ್‌ವೀರ್ ತಯಾರಿ ನಡೆಸಿದ್ದಾರೆ.

    ನಿನ್ನೆ ರಾತ್ರಿ (ಸೆ.12) ದೀಪಿಕಾ ಮತ್ತು ಮಗುವನ್ನು ನೋಡಲು ಶಾರುಖ್ ಖಾನ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇಬ್ಬರ ಆರೋಗ್ಯದ ಬಗ್ಗೆ ವಿಚಾರಿಸಿ ನಟ ತೆರಳಿದರು.

  • ದೀಪಿಕಾ – ರಣ್‌ವೀರ್‌ ಸಿಂಗ್ ಮಗಳ ನೋಡಲು ಬಂದ ಮುಕೇಶ್ ಅಂಬಾನಿ

    ದೀಪಿಕಾ – ರಣ್‌ವೀರ್‌ ಸಿಂಗ್ ಮಗಳ ನೋಡಲು ಬಂದ ಮುಕೇಶ್ ಅಂಬಾನಿ

    ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಸೆ.8ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪೋಷಕರಾಗಿರುವ ಸಂಭ್ರಮದಲ್ಲಿರುವ ದೀಪಿಕಾ ಮತ್ತು ರಣ್‌ವೀರ್ (Ranveer Singh) ನೋಡಲು ಉದ್ಯಮಿ ಮುಕೇಶ್ ಅಂಬಾನಿ ಎಚ್.ಎನ್ ರಿಲಯನ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

    ಪೋಷಕರಾಗಿರುವ ದೀಪಿಕಾ ದಂಪತಿಗೆ ಶುಭಕೋರಲು ಮುಖೇಶ್ ಭೇಟಿ ನೀಡಿದ್ದರು. ದೀಪಿಕಾ ಮತ್ತು ಮಗುವಿನ ಕುಶಲೋಪರಿ ವಿಚಾರಿಸಿದ್ದಾರೆ. ಉದ್ಯಮಿ ಮುಕೇಶ್ (Mukesh Ambani) ಆಸ್ಪತ್ರೆಯ ಆಗಮಿಸಿದ್ದ ವೇಳೆ, ಹೆಚ್ಚಿನ ಭದ್ರತೆ ಕೂಡ ನೀಡಲಾಗಿತ್ತು. ಇದನ್ನೂ ಓದಿ:ಸಲ್ಮಾನ್, ರಶ್ಮಿಕಾ ನಟನೆಯ ‘ಸಿಖಂದರ್’ ಚಿತ್ರತಂಡ ಸೇರಿಕೊಂಡ ಕಾಜಲ್ ಅಗರ್ವಾಲ್

    ಇನ್ನೂ ಮನೆಗೆ ಮುದ್ದಾದ ಹೆಣ್ಣು ಮಗುವಿನ ಆಗಮನವಾಗಿರೋದು ಸಹಜವಾಗಿ ಕುಟುಂಬಕ್ಕೆ ಖುಷಿಕೊಟ್ಟಿದೆ. ಈ ಜೋಡಿಗೆ ಬಾಲಿವುಡ್ ಸ್ಟಾರ್ ನಟ, ನಟಿಯರು ಶುಭಕೋರಿದ್ದಾರೆ. ಮಗುವಿನ ಮುಖ ಅದ್ಯಾವಾಗ ರಿವೀಲ್ ಮಾಡ್ತಾರೆ ಎಂದು ಫ್ಯಾನ್ಸ್ ಎದುರು ನೋಡ್ತಿದ್ದಾರೆ.

    ಹಲವು ವರ್ಷಗಳ ಡೇಟಿಂಗ್ ನಂತರ ನವೆಂಬರ್ 2018ರಲ್ಲಿ ದೀಪಿಕಾ ಮತ್ತು ರಣ್‌ವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  • ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ

    ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ

    ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಇಂದು (ಸೆ.8) ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟಿ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ರಣ್‌ವೀರ್‌ ಸಿಂಗ್‌ (Ranveer Singh) ತಂದೆಯಾದ ಸಂಭ್ರಮದಲ್ಲಿದ್ದಾರೆ. ಇದನ್ನೂ ಓದಿ:ಗುರುದತ್‌ ಗಾಣಿಗ ನಿರ್ದೇಶನದ ‘ಜುಗಾರಿ ಕ್ರಾಸ್’ ಸಿನಿಮಾ ಅನೌನ್ಸ್- ಕುತೂಹಲ ಹೆಚ್ಚಿಸಿದ ಫಸ್ಟ್ ಲುಕ್

    ಗೌರಿ ಗಣೇಶ ಹಬ್ಬದ ಸಂಭ್ರಮದ ನಡುವೆ ನಟಿ ದೀಪಿಕಾ ಹೆಣ್ಣ ಮಗುವಿಗೆ ಜನ್ಮ ನೀಡಿರುವುದು ಕುಟುಂಬದಲ್ಲಿ ಸಂತಸ ಮೂಡಿಸಿದೆ. ಮಗು ಮತ್ತು ದೀಪಿಕಾ ಇಬ್ಬರೂ ಆರೋಗ್ಯವಾಗಿದ್ದಾರೆ. ಸೆ.7ರಂದು ಸಂಜೆ ರಿಲಯನ್ಸ್‌ ಫೌಂಡೇಶನ್‌ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಮನೆಗೆ ಪುಟ್ಟ ಗೌರಿಯ ಆಗಮನವಾಗಿದೆ. ಇನ್ನೂ ದೀಪಿಕಾ ಮತ್ತು ರಣ್‌ವೀರ್‌ ದಂಪತಿ ಫ್ಯಾನ್ಸ್‌, ಸ್ಟಾರ್ಸ್‌ ಶುಭಹಾರೈಸುತ್ತಿದ್ದಾರೆ.

    ಇತ್ತೀಚೆಗೆ ನಟಿ ಮಸ್ತ್ ಆಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಪ್ರೆಗ್ನೆನ್ಸಿ ಮ್ಯಾಟರ್ ಸುಳ್ಳು ಎಂದವರಿಗೆ ಬಂಪ್ ತೋರಿಸಿ ಪತಿ ಜೊತೆ ಕ್ಯಾಮೆರಾಗೆ ದೀಪಿಕಾ ಪೋಸ್ ನೀಡಿದ್ದರು. ಪ್ರೆಗ್ನೆನ್ಸಿ ಫೋಟೋಶೂಟ್ ಸಖತ್ ವೈರಲ್ ಆಗಿತ್ತು. ಈ ಮೂಲಕ ಟ್ರೋಲ್‌ ಮಾಡುವವರಿಗೆ ಖಡಕ್‌ ಉತ್ತರ ನೀಡಿದ್ದರು.

     

     

     

     

     

  • ಹೆರಿಗೆ ಆಸ್ಪತ್ರೆಗೆ ಅಡ್ಮಿಟ್ ಆದ ದೀಪಿಕಾ ಪಡುಕೋಣೆ

    ಹೆರಿಗೆ ಆಸ್ಪತ್ರೆಗೆ ಅಡ್ಮಿಟ್ ಆದ ದೀಪಿಕಾ ಪಡುಕೋಣೆ

    ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಅವರು ಶನಿವಾರ (ಸೆ.8) ಸಂಜೆ ಮುಂಬೈನ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಅಡ್ಮಿಟ್ ಆಗಿದ್ದಾರೆ. ಇದನ್ನೂ ಓದಿ:ಅಮ್ಮನ ಜೊತೆ ಪೆದ್ದಮ್ಮನ ಆಶೀರ್ವಾದ ಪಡೆದ ನಟಿ ಆರಾಧನಾ

    ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ (Ranveer Singh) ಅವರು ತಮ್ಮ ಇತರೆ ಕುಟುಂಬ ಸದಸ್ಯರೊಟ್ಟಿಗೆ ಸೆ.7ರ ಸಂಜೆ ಆಸ್ಪತ್ರೆಗೆ ತೆರಳಿದ್ದಾರೆ. ಕಪ್ಪು ಬಣ್ಣದ ಕಾರಿನಲ್ಲಿ ನಟಿ ಆಗಮಿಸಿದ್ದಾರೆ. ಆದರೆ ವೈರಲ್ ಆಗಿರುವ ವಿಡಿಯೋದಲ್ಲಿ ದೀಪಿಕಾ ಎಲ್ಲೂ ಕಾಣಿಸೋದಿಲ್ಲ. ಕಾರು ಮಾತ್ರ ಪಾಸ್ ಆಗುತ್ತದೆ.

     

    View this post on Instagram

     

    A post shared by Viral Bhayani (@viralbhayani)

    ದೀಪಿಕಾ ಪಡುಕೋಣೆಗೆ ಸೆ.28ಕ್ಕೆ ಡೇಟ್ ಕೊಡಲಾಗಿತ್ತು. ಆದರೆ ಸೆಪ್ಟೆಂಬರ್ 20ರ ಮೇಲೆಯೇ ದೀಪಿಕಾಗೆ ಮಗು ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ದಿಢೀರ್ ಆಗಿ ದೀಪಿಕಾ ಅವರು ಆಸ್ಪತ್ರೆಗೆ ಆಗಮಿಸಿರುವುದನ್ನು ಗಮನಿಸಿದರೆ ಶೀಘ್ರವಾಗಿ ಮಗು ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯದಲ್ಲೇ ಗುಡ್ ನ್ಯೂಸ್ ಕೊಡ್ತಾರಾ? ಕಾದುನೋಡಬೇಕಿದೆ.

    ಇತ್ತೀಚೆಗೆ ನಟಿ ಮಸ್ತ್ ಆಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಪ್ರೆಗ್ನೆನ್ಸಿ ಮ್ಯಾಟರ್ ಸುಳ್ಳು ಎಂದವರಿಗೆ ಬಂಪ್ ತೋರಿಸಿ ಪತಿ ಜೊತೆ ಕ್ಯಾಮೆರಾಗೆ ದೀಪಿಕಾ ಪೋಸ್ ನೀಡಿದ್ದರು. ಪ್ರೆಗ್ನೆನ್ಸಿ ಫೋಟೋಶೂಟ್ ಸಖತ್ ವೈರಲ್ ಆಗಿತ್ತು.

  • ಗಣೇಶ ಹಬ್ಬಕ್ಕೆ ವಿನಾಯಕನ ದರ್ಶನ ಪಡೆದ ಗರ್ಭಿಣಿ ದೀಪಿಕಾ

    ಗಣೇಶ ಹಬ್ಬಕ್ಕೆ ವಿನಾಯಕನ ದರ್ಶನ ಪಡೆದ ಗರ್ಭಿಣಿ ದೀಪಿಕಾ

    ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಇದೇ ತಿಂಗಳು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಪ್ಟೆಂಬರ್ ೨೮ ಕ್ಕೆ ಪ್ರಸವದ ಡೇಟ್ ಕೊಟ್ಟಿದ್ದಾರೆ ಎನ್ನಲಾಗುತ್ತೆ. ಇದೇ ವೇಳೆ ದೀಪಿಕಾ ಗಣೇಶ ಹಬ್ಬದ ವಿಶೇಷವಾಗಿ ಸಿದ್ಧಿವಿನಾಯಕನ ದರ್ಶನ ಪಡೆದಿದ್ದಾರೆ. ಪತಿ ರಣ್ವೀರ್ ಸಿಂಗ್ ಜೊತೆ ದೀಪಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.

     

    ಹಸಿರುಬಣ್ಣದ ಕಾಂಚೀವರಂ ಸೀರೆ ಧರಿಸಿದ್ದ ದೀಪಿಕಾ ಮುಖದಲ್ಲಿ ಹಬ್ಬದ ಕಳೆ ಜೊತೆ ಗರ್ಭಿಣಿ ಕಳೆಯೂ ಕಂಡುಬಂತು. ದೇವಸ್ಥಾನದ ಆವರಣ ಆಗಿರೋದ್ರಿಂದ ಬರಿಕಾಲಲ್ಲೇ ಹೆಜ್ಜೆ ಹಾಕಿದ್ರು. ತುಂಬು ಗರ್ಭಿಣಿ ದೀಪಿಕಾಳ ಕೈ ಹಿಡಿದು ಹೆಜ್ಜೆ ಹಾಕಿದ್ದಾರೆ ಪತಿ ರಣ್ವೀರ್ ಸಿಂಗ್. ಪ್ರತಿ ವರ್ಷವೂ ಗಣೇಶ ಹಬ್ಬಕ್ಕೆ ದೀಪಿಕಾ ಇಲ್ಲಿಗೆ ಭೇಟಿ ಕೊಡುವ ರೂಢಿ ಪಾಲಿಸಿಕೊಂಡು ಬಂದಿರುವ ದೀಪಿಕಾ ರಣ್ವೀರ್ ದಂಪತಿ ಈ ಬಾರಿಯೂ ತಪ್ಪದೆ ಆಗಮಿಸಿದ್ದು ವಿಶೇಷ.

     

    ಮುಂಬೈನಲ್ಲಿರುವ ಸುಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಗಣೇಶ ಹಬ್ಬದ ವೇಳೆ ಹಲವು ಸೆಲೆಬ್ರಿಟಿಗಳು ಆಗಮಿಸೋದುಂಟು. ಹಾಗೆಯೇ ಈ ಬಾರಿ ಗಣೇಶ ಹಬ್ಬಕ್ಕೆ ದೀಪಿಕಾ ರಣ್ವೀರ್ ದಂಪತಿ ಕುಟುಂಬ ಸಮೇತ ಆಗಮಿಸಿ ವಿನಾಯಕನ ದರ್ಶನ ಪಡೆದಿದ್ದಾರೆ. ಹೆರಿಗೆ ಸಮಯ ಹತ್ತಿರ ಬಂದಂತೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮನೆಯೊಳಗೆ ಇದ್ದು ರೆಸ್ಟ್ ಮಾಡ್ತಾರೆ, ಆದರೆ ದೀಪಿಕಾ ಭಕ್ತಿಯಿಂದ ದೇವಸ್ಥಾನಕ್ಕೆ ಆಗಮಿಸಿದ್ದು ಗಮನ ಸೆಳೆದಿದೆ.

  • ಸೆ.28ರಂದು ಮಗುವಿಗೆ ಜನ್ಮ ನೀಡಲಿದ್ದಾರೆ ದೀಪಿಕಾ ಪಡುಕೋಣೆ

    ಸೆ.28ರಂದು ಮಗುವಿಗೆ ಜನ್ಮ ನೀಡಲಿದ್ದಾರೆ ದೀಪಿಕಾ ಪಡುಕೋಣೆ

    ನ್ನಡತಿ, ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣ್‌ವೀರ್ ಸಿಂಗ್ (Ranveer Singh) ದಂಪತಿ ಚೊಚ್ಚಲ ಮಗುವಿನ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ. ಪ್ರೆಗ್ನೆನ್ಸಿ ಫೋಟೋಶೂಟ್ ಶೇರ್ ಮಾಡಿ ಸುದ್ದಿಯಲ್ಲಿರುವ ದೀಪಿಕಾ ಪಡುಕೋಣೆ ಇದೀಗ ಡೆಲಿವೆರಿ ಬಗ್ಗೆ ಅಪ್‌ಡೇಟ್‌ವೊಂದು ಸಿಕ್ಕಿದೆ. ಸೆ.28ರಂದು ನಟಿ ಚೊಚ್ಚಲ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ.

    ನಟಿ ದೀಪಿಕಾ ಈಗ ತುಂಬು ಗರ್ಭಿಣಿಯಾಗಿದ್ದು, ಮನೆಗೆ ಹೊಸ ಅತಿಥಿ ಆಗಮನವಾಗುತ್ತಿರುವ ಖುಷಿಯಲ್ಲಿದ್ದಾರೆ. ಸೆಪ್ಟೆಂಬರ್ 28ರಂದು ದೀಪಿಕಾಗೆ ಡಾಕ್ಟರ್ ಡೆಲಿವೆರಿ ಡೇಟ್ ಕೊಟ್ಟಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಟಿಯ ಹೆರಿಗೆ ನಡೆಯಲಿದೆ. ಇದನ್ನೂ ಓದಿ:ತರುಣ್ ಸುಧೀರ್, ಸೋನಲ್ ಚರ್ಚ್‌ ವೆಡ್ಡಿಂಗ್‌ ಆಲ್ಬಂ

    ಇನ್ನೂ 2025ರ ಮಾರ್ಚ್‌ನ ನಂತರ ಸಿನಿಮಾ ಕೆಲಸದಲ್ಲಿ ಭಾಗಿಯಾಗುತ್ತಾರೆ ಎನ್ನಲಾಗಿದೆ. ಅಲ್ಲಿಯವರೆಗೂ ಮಗುವಿನ ಪಾಲನೆಯಲ್ಲಿ ನಟಿ ತೊಡಗಿಸಿಕೊಳ್ಳಲಿದ್ದಾರೆ.

    ಇತ್ತೀಚೆಗೆ ದೀಪಿಕಾ ಪಡುಕೋಣೆ ನಟಿಸಿದ ಪಠಾಣ್, ಜವಾನ್, ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಸಕ್ಸಸ್ ಕಂಡಿದೆ. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ನಟಿ ತಾಯಿಯಾಗಿದ್ದಾರೆ. ಮಗುವಿನ ಆಗಮನದ ಬಳಿಕ ಮತ್ತೆ ದೀಪಿಕಾ ಸಿನಿಮಾಗೆ ಮರಳಿದ್ದಾರೆ.

  • ಬೇಬಿ ಬಂಪ್ ಫೋಟೋ ಶೂಟ್‌ಗೆ ದೀಪಿಕಾ-ರಣವೀರ್‌ ಪೋಸ್‌; ಬಾಲಿವುಡ್‌ನ ಕ್ಯೂಟ್‌ ಕಪಲ್‌ ಫುಲ್‌ ಶೈನ್‌

    ಬೇಬಿ ಬಂಪ್ ಫೋಟೋ ಶೂಟ್‌ಗೆ ದೀಪಿಕಾ-ರಣವೀರ್‌ ಪೋಸ್‌; ಬಾಲಿವುಡ್‌ನ ಕ್ಯೂಟ್‌ ಕಪಲ್‌ ಫುಲ್‌ ಶೈನ್‌

    ಬಾಲಿವುಡ್‌ನ ಕ್ಯೂಟ್‌ ಜೋಡಿಗಳಲ್ಲಿ ಒಂದಾದ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಮಗುವಿನ ಆಗಮನಕ್ಕಾಗಿ ದಂಪತಿ ಕಾಯುತ್ತಿದ್ದಾರೆ. ಇದರ ನಡುವೆ ಬೇಬಿ ಬಂಪ್‌ ಫೋಟೋ ಶೂಟ್‌ಗೆ ದೀಪಿಕಾ-ರಣವೀರ್‌ ಪೋಸ್‌ ನೀಡಿದ್ದಾರೆ. ಕ್ಯೂಟ್‌ ಕಪಲ್‌ ಎಂದೇ ಕರೆಸಿಕೊಂಡಿರುವ ಈ ಜೋಡಿಯ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

    ಮೊದಲ ಮಗುವಿನ ಆಗಮನಕ್ಕೆ ಮುನ್ನ ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ ಫೋಟೋಶೂಟ್‌ (Photo Shoot) ಮಾಡಿಸಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅಮ್ಮನಾಗುವ ಖುಷಿಯಲ್ಲಿ ತನ್ನ ಸುಂದರ ಬೇಬಿ ಬಂಪ್‌ ಅನ್ನು ತೋರಿಸಿದ್ದಾರೆ.

    ಇನ್ನು ಕೆಲವು ಫೋಟೋಗಳಲ್ಲಿ ದೀಪಿಕಾ ಮತ್ತು ರಣವೀರ್‌ ಸಿಂಗ್‌ (Ranveer Singh) ಆಪ್ತ ಕ್ಷಣಗಳಲ್ಲಿ ಇರುವಂತೆ ಕಾಣಿಸಿದ್ದಾರೆ. ಒಟ್ಟಾರೆ ಇಬ್ಬರ ಮುಖದಲ್ಲಿ ನಗು, ಖುಷಿ ತುಂಬಿ ತುಳುಕುತ್ತಿದೆ. ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ದೀಪಿಕಾ – ರಣವೀರ್‌ ಅಭಿಮಾನಿಗಳು ತಮ್ಮ ಸ್ಟೇಟಸ್‌ಗಳಲ್ಲಿ ಹಂಚಿಕೊಂಡಿದ್ದಾರೆ.

    ಒಂದು ಫೋಟೋದಲ್ಲಿ ದೀಪಿಕಾ ಪಡುಕೋಣೆ ಹಲವು ಉಡುಗೆಗಳನ್ನು ಹಿಡಿದುಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಜೀನ್ಸ್‌ ಮತ್ತು ಲಾಸಿ ಬ್ರಾ ಧರಿಸಿ, ಲೇಡಿ ಬಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಸುಂದರವಾಗಿ ಕಾಣಿಸಿದ್ದಾರೆ. ಇದನ್ನೂ ಓದಿ: ಟಿಕೆಟ್ ಸಿಗಲಿ, ಸಿಗದೇ ಇರಲಿ ಪಕ್ಷದ ಜೊತೆ ಇರ್ತೇನೆ, ಜೆಡಿಎಸ್‌ಗೆ ಟಿಕೆಟ್ ಕೊಟ್ರೂ ಕೆಲಸ ಮಾಡ್ತೇನೆ: ಸಿಪಿವೈ

    ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು ಕಳೆದ ಫೆಬ್ರವರಿ 29ರಂದು ಹಂಚಿಕೊಂಡಿದ್ದರು. ಹಾಗಾಗಿ ಸೆಪ್ಟೆಂಬರ್‌ ತಿಂಗಳಾಂತ್ಯದ ವೇಳೆಗೆ ಮೊದಲ ಮಗುವಿನ ಆಗಮನವಾಗುವ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: Shivamogga | ಪ್ರೀತಿಸಲು ಹುಡುಗಿ ಸಿಗಲಿಲ್ಲ ಅಂತ ತುಂಗಾ ನದಿಗೆ ಹಾರಿ ಯುವಕ ಆತ್ಮಹತ್ಯೆ!

    ಸೌತ್‌ ಬಾಂಬೆಯಲ್ಲೇ ಹೆರಿಗೆ: 
    ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ದೀಪಿಕಾ ಹೆರಿಗೆಗಾಗಿ ಲಂಡನ್‌ಗೆ (London) ಹೋಗ್ತಾರೆ ಅಂತಾ ಸುದ್ದಿ ಹರಿದಾಡ್ತಿತ್ತು. ಆದ್ರೆ, ಈ ಸುದ್ದಿ ಸುಳ್ಳು, ಸೌತ್ ಬಾಂಬೆಯಲ್ಲೇ ಹೆರಿಗೆ ಮಾಡಿಕೊಳ್ಳುತ್ತಿದ್ದಾರಂತೆ ದೀಪಿಕಾ. ಜೊತೆಗೆ ತಾಯಿತನದ ಕ್ಷಣವನ್ನ ಅನುಭವಿಸಲು ಈಗಿನಿಂದಲೇ ಕಾತುರದಿಂದ ಕಾಯ್ತಿದ್ದು, ಹೆರಿಗೆಗಾಗಿ ಲಂಡನ್‌ಗೆ ಹೋಗ್ತಿರುವ ಸುದ್ದಿ ಸುಳ್ಳುಂತೆ.

    ಕೊನೆಯದಾಗಿ ದೀಪಿಕಾ ಕಲ್ಕಿ 2898 ಎಡಿ ಸಿನಿಮಾದಲ್ಲಿ ನಟಿಸಿ, ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದನ್ನೂ ಓದಿ: Paris Paralympics | ಡಿಸ್ಕಸ್ ಥ್ರೋನಲ್ಲಿ ಭಾರತದ ಯೋಗೇಶ್‌ ಕಥುನಿಯಾಗೆ ಬೆಳ್ಳಿ 

  • ಹೆರಿಗೆಗಾಗಿ ಲಂಡನ್‌ಗೆ ಹಾರಲಿದ್ದಾರೆ ದೀಪಿಕಾ ಪಡುಕೋಣೆ

    ಹೆರಿಗೆಗಾಗಿ ಲಂಡನ್‌ಗೆ ಹಾರಲಿದ್ದಾರೆ ದೀಪಿಕಾ ಪಡುಕೋಣೆ

    ಹುಭಾಷಾ ನಟಿ ದೀಪಿಕಾ ಪಡುಕೋಣೆ (Deepika Padukone) ಹಾಗೂ ರಣವೀರ್ ಸಿಂಗ್ (Ranveer Singh) ಇದೇ ವರ್ಷ ಫೆಬ್ರವರಿಯಲ್ಲಿ ಮೊದಲ ಪ್ರೆಗ್ನೆನ್ಸಿ ಬಗ್ಗೆ ಜಗಜ್ಜಾಹೀರ್ ಮಾಡುವ ಮೂಲಕ ಖುಷಿಯನ್ನ ಹಂಚಿಕೊಂಡಿದ್ದರು ಈ ತಾರಾ ದಂಪತಿ. ಕೊನೆಯದಾಗಿ ದೀಪಿಕಾ ಕಲ್ಕಿ 2898 ಎಡಿ ಸಿನಿಮಾದಲ್ಲಿ ನಟಿಸಿ, ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷಯಲ್ಲಿದ್ದಾರೆ.

    ಮೊದಲ ಮಗುವಿನ ನಿರೀಕ್ಷಯಲ್ಲಿರುವ ದೀಪಿಕಾ ಹೆರಿಗೆ ಬಗ್ಗೆ ಗಾಳಿಸುದ್ದಿ ಹರಿದಾಡುತ್ತಿದೆ. ಹೌದು, ದೀಪಿಕಾ ಡಿಲೆವರಿಗಾಗಿ ಲಂಡನ್‌ಗೆ (London) ಹೋಗ್ತಾರೆ ಅಂತಾ ಸುದ್ದಿ ಹರಿದಾಡ್ತಿತ್ತು. ಆದ್ರೆ, ಈ ಸುದ್ದಿ ಸುಳ್ಳು, ಸೌತ್ ಬಾಂಬೆಯಲ್ಲೇ ಹೆರಿಗೆ ಮಾಡಿಕೊಳ್ಳುತ್ತಿದ್ದಾರಂತೆ ದೀಪಿಕಾ. ಜೊತೆಗೆ ತಾಯಿತನದ ಕ್ಷಣವನ್ನ ಅನುಭವಿಸಲು ಈಗಿನಿಂದಲೇ ಕಾತುರದಿಂದ ಕಾಯ್ತಿದ್ದು, ಹೆರಿಗೆಗಾಗಿ ಲಂಡನ್‌ಗೆ ಹೋಗ್ತಿರುವ ಸುದ್ದಿ ಸುಳ್ಳುಂತೆ. ಇದೇ ಸೆಪ್ಟಂಬರ್‌ನಲ್ಲಿ ಮೊದಲ ಮಗುವಿನ ನಿರೀಕ್ಷಯಲ್ಲಿದೆ ರಣ್ವೀರ್ ಹಾಗೂ ದೀಪಿಕಾ ಜೋಡಿ.

    ದೀಪಿಕಾ ಪಡುಕೋಣೆ 2025ರಲ್ಲಿ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಸದ್ಯ ದೀಪಿಕಾಗಾಗಿ ಕಲ್ಕಿ 2898 ಎಡಿ ಸಿನಿಮಾದ ಸೀಕ್ವೆಲ್ ಪ್ರಾಜೆಕ್ಟ್ ವೇಟ್ ಮಾಡ್ತಿದೆ. ಮೆಟರ್ನಿಟಿ ರಜೆ ಮುಗಿತಿದ್ದಂತೆ ಪ್ರಭಾಸ್, ಅಮಿತಾಬ್ ಬಚ್ಚನ್ ನಟನೆಯ ಸಿನಿಮಾದಲ್ಲಿ ದೀಪಿಕಾ ತೊಡಗಿಸಿಕೊಳ್ಳಲಿದ್ದಾರಂತೆ.