Tag: Deepika Padukone

  • ಎಲ್ಲರೆದುರೇ ಪತ್ನಿಯ ಪ್ಯಾಂಟ್ ಕ್ಲೀನ್ ಮಾಡಿ ಕಿಸ್ ಕೊಟ್ಟ ರಣ್‍ವೀರ್- ವಿಡಿಯೋ ನೋಡಿ

    ಎಲ್ಲರೆದುರೇ ಪತ್ನಿಯ ಪ್ಯಾಂಟ್ ಕ್ಲೀನ್ ಮಾಡಿ ಕಿಸ್ ಕೊಟ್ಟ ರಣ್‍ವೀರ್- ವಿಡಿಯೋ ನೋಡಿ

    ಮುಂಬೈ: ಬಾಲಿವುಡ್ ಸ್ಟಾರ್ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮುಂಬೈನ ರೆಸ್ಟೋರೆಂಟ್‍ಗೆ ಡಿನ್ನರ್ ಡೇಟ್‍ಗೆ ಹೋಗಿದ್ದರು. ಈ ವೇಳೆ ಕ್ಯಾಮೆರಾಗೆ ಪೋಸ್ ಕೊಡುವಾಗ ರಣ್‍ವೀರ್ ತನ್ನ ಪತ್ನಿ ದೀಪಿಕಾರ ಪ್ಯಾಂಟ್ ಕ್ಲೀನ್ ಮಾಡಿ ಕಿಸ್ ಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಗುರುವಾರ ಸಂಜೆ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಡಿನ್ನರಿಗೆಂದು ರೆಸ್ಟೋರೆಂಟ್‍ಗೆ ಹೋಗಿದ್ದರು. ಅಲ್ಲಿಂದ ವಾಪಸ್ ಬರುವಾಗ ಅಲ್ಲಿದ್ದ ಮಾಧ್ಯಮದವರು ದೀಪ್‍ವೀರ್ ಗೆ ಫೋಟೋಗೆ ಪೋಸ್ ಕೊಡಿ ಎಂದು ಕೇಳಿಕೊಂಡಿದ್ದಾರೆ.

    ಇಬ್ಬರು ಫೋಟೋಗೆ ಪೋಸ್ ಕೊಡುವ ವೇಳೆ ರಣ್‍ವೀರ್, ದೀಪಿಕಾ ಪ್ಯಾಂಟ್ ಮೇಲೆ ಕಸ ಇರುವುದನ್ನು ಗಮನಿಸಿದ್ದಾರೆ. ಬಳಿಕ ರಣ್‍ವೀರ್ ಪ್ಯಾಂಟ್ ನಲ್ಲಿದ್ದ ಕಸ ತೆಗೆದು ದೀಪಿಕಾಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಆಕೆಯ ಹಣೆ ಮೇಲೆ ಕಿಸ್ ಮಾಡಿದ್ದಾರೆ. ನಂತರ ದೀಪಿಕಾ ಫೋಟೋಗ್ರಾಫರ್‍ ಗಳಿಗೆ ಧನ್ಯವಾದ ತಿಳಿಸಿ ಅಲ್ಲಿಂದ ಹೊರಟು ಹೋಗಿದ್ದಾರೆ.

    ದೀಪಿಕಾ ತಮ್ಮ ಡಿನ್ನರ್ ಡೇಟ್‍ಗೆ ಕಪ್ಪು ಬಣ್ಣದ ಟೀ-ಶರ್ಟ್ ಧರಿಸಿ ಅದಕ್ಕೆ ನೀಲಿ ಬಣ್ಣದ ಡೆನಿಮ್ ಹಾಕಿದ್ದರು. ತಮ್ಮ ಉಡುಪಿಗೆ ದೀಪಿಕಾ ಬಿಳಿ ಬಣ್ಣದ ಸ್ನೀಕರ್ಸ್ ಧರಿಸಿದ್ದರು. ರಣ್‍ವೀರ್ ಕೆಂಪು ಹಾಗೂ ನೀಲಿ ಬಣ್ಣದ ಟೀ-ಶರ್ಟ್ ಧರಿಸಿ ಅದಕ್ಕೆ ಮರ ಹಾಗೂ ಪ್ರಾಣಿಗಳಿರುವ ಪ್ರಿಂಟೆಡ್ ಶೂ ಹಾಕಿದ್ದರು.

    ರಣ್‍ವೀರ್ ಹಾಗೂ ದೀಪಿಕಾ ಅವರ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ಕೆಲವರು ಕ್ಯೂಟ್ ಕಪಲ್, ಮೇಡ್ ಫಾರ್ ಈಚ್ ಅದರ್ ಎಂದು ಕಮೆಂಟ್ ಮಾಡಿದ್ರೆ, ಮತ್ತೆ ಕೆಲವರು ರಣ್‍ವೀರ್ ನೀನು ಅಮ್ಮಾವ್ರ ಗಂಡ ಆಗಿದ್ದೀಯಾ ಎಂದು ಕಮೆಂಟ್ ಮಾಡಿದ್ದಾರೆ.

     

    View this post on Instagram

     

    Sweetest kiss ❤️❤️❤️❤️❤️???????? #ranveersingh #deepikapadukone

    A post shared by Viral Bhayani (@viralbhayani) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನನ್ನ ದೀಪಿಕಾಳ ಎಕ್ಸ್ ಅಂತಾ ಕರೀಬೇಡಿ: ಮಾಜಿ ಪ್ರಿಯಕರ

    ನನ್ನ ದೀಪಿಕಾಳ ಎಕ್ಸ್ ಅಂತಾ ಕರೀಬೇಡಿ: ಮಾಜಿ ಪ್ರಿಯಕರ

    – ದೀಪಿಕಾ ಮೇಲೆ ಯಾವುದೇ ಸಿಟ್ಟಿಲ್ಲ, ನಾನೂ ಮದ್ವೆ ಆಗ್ತೀದ್ದಿನಿ

    ಮುಂಬೈ: ಬಾಲಿವುಡ್ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ 2018, ನವೆಂಬರ್ ನಲ್ಲಿ ಬಹುದಿನಗಳ ಗೆಳೆಯ ರಣ್‍ವೀರ್ ಸಿಂಗ್‍ರನ್ನು ಮದುವೆಯಾಗಿದ್ದಾರೆ. ಇದೀಗ ದೀಪಿಕಾರ ಮಾಜಿ ಗೆಳೆಯ ಸಹ ಮದುವೆ ತಯಾರಿಯಲ್ಲಿದ್ದು, ಖ್ಯಾತ ಗಾಯಕಿಯನ್ನು ವರಿಸಲಿದ್ದಾರೆ. ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನನ್ನನ್ನು ದೀಪಿಕಾಳ ಎಕ್ ಎಂದು ಕರೆಯಬೇಡಿ ಎಂದು ಪರೋಕ್ಷವಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ದೀಪಿಕಾ ಪಡುಕೋಣೆ ಇನ್ನು ಸಿನಿ ಅಂಗಳಕ್ಕೆ ಪಾದಾರ್ಪಣೆ ಮಾಡಿರಲಿಲ್ಲ. ಮುಂಬೈನ ನಟನಾ ತರಬೇತಿಯಲ್ಲಿ ನಿಹಾರ್ ಪಾಂಡ್ಯಾ ಮತ್ತು ದೀಪಿಕಾ ಪಡುಕೋಣೆ ಪರಿಚಯವಾಗಿದ್ದರು. ಇಬ್ಬರು ಪ್ರೇಮಪಾಶದಲ್ಲಿ ಬಂಧನಕ್ಕೂ ಒಳಗಾಗಿದ್ದರು ಎಂಬುವುದು ಬಾಲಿವುಡ್ ಅಂಗಳದಲ್ಲಿ ಇಂದು ಹರಿದಾಡುತ್ತಿರುಯವ ವಿಷಯ. ತದನಂತರ ದೀಪಿಕಾ ನಟನೆಯ ಓಂ ಶಾಂತಿ ಓಂ ಸಿನಿಮಾದ ಬಳಿಕ ಗುಳಿಕೆನ್ನೆಯ ಬೆಡಗಿಯ ಜೀವನವೇ ಬದಲಾಯ್ತು. ಇತ್ತ ನಿಹಾರ್ ಪಾಂಡ್ಯ ಕೇವಲ ಧಾರಾವಾಹಿ, ಮಾಡೆಲಿಂಗ್ ನಲ್ಲಿ ಗುರುತಿಸಿಕೊಂಡಿದ್ದರು. ಕೆಲ ದಿನಗಳ ಬಳಿಕ ಇಬ್ಬರು ಪರಸ್ಪರ ಒಪ್ಪಿಗೆಯ ಮೇಲೆ ಬೇರೆ ಆಗಿದ್ದರಂತೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ನಿಹಾರ್ ಪಾಂಡ್ಯ, ದೀಪಿಕಾ ಮದುವೆಯಾಗಿದ್ದು, ಅವರ ಮೇಲೆ ನನಗೆ ಯಾವುದೇ ಕೋಪವಿಲ್ಲ. ಅವರ ಜೀವನ ಸುಖವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ.

    ಇಂದು ಸಹ ನಿಹಾರ್ ಪಾಂಡ್ಯರನ್ನು ದೀಪಿಕಾರ ಮಾಜಿ ಗೆಳೆಯ ಅಂತಾನೇ ಗುರುತಿಸುವುದುಂಟು. ದೀಪಿಕಾ ಮದುವೆ ಬಳಿಕ ನಿಹಾರ್ ಸಹ ಖ್ಯಾತ ಗಾಯಕಿ ನೀತಿ ಮೋಹನ್ ಅವರನ್ನು ವರಿಸಲಿದ್ದಾರೆ. ನಿಹಾರ್ ‘ಮಣಿಕರ್ಣಿಕಾ’ ಸಿನಿಮಾ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ. ಕಂಗನಾ ರಣಾವತ್ ಲೀಡ್ ರೋಲ್‍ನಲ್ಲಿ ನಟಿಸಿದ್ದು, ಜನವರಿ 25ರಂದು ಚಿ ತ್ರ ತೆರೆಕಾಣಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿಯ ಪೆಟ್ ನೇಮ್ ರಿವೀಲ್ ಮಾಡಿದ ರಣ್‍ವೀರ್ ಸಿಂಗ್

    ಪತ್ನಿಯ ಪೆಟ್ ನೇಮ್ ರಿವೀಲ್ ಮಾಡಿದ ರಣ್‍ವೀರ್ ಸಿಂಗ್

    ಮುಂಬೈ: ಬಾಲಿವುಡ್ ಹಾಟ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ 2018ರಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಮದುವೆಯ ಬಳಿಕ ತಮ್ಮ ಕೆಲಸಗಳಲ್ಲಿ ಬ್ಯೂಸಿಯಾಗಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ. ಪ್ರಿಯಾಂಕ ಚೋಪ್ರಾ ಆರತಕ್ಷತೆಯಲ್ಲಿ ದಂಪತಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಇನ್ ಸ್ಟಾಗ್ರಾಮ್ ನಲ್ಲಿ ಪತ್ನಿಯ ಪೆಟ್ ಅಥವಾ ನಿಕ್ ನೇಮ್ ನ್ನು ಪತಿ ರಣ್‍ವೀರ್ ಸಿಂಗ್ ರಿವೀಲ್ ಮಾಡಿದ್ದಾರೆ.

    ದೀಪಿಕಾ ಪಡುಕೋಣೆ ಇತ್ತೀಚೆಗೆ ತಮ್ಮ ಇನ್ಸ್ಟಾದಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿಕೊಂಡಿದ್ದರು. ವಿಡಿಯೋ ನೋಡಿದ ರಣ್‍ವೀರ್, ಐ ಲವ್ ಯು, ಜಾನಾ-ಬನಾನಾ ಎಂದು ಬರೆದು ಹಾರ್ಟ್, ನಗು ಮತ್ತು ನಮಸ್ತೆ ಎಮೋಜಿ ಹಾಕಿ ಕಮೆಂಟ್ ಮಾಡಿದ್ದಾರೆ. ಪತಿಯ ಕಮೆಂಟ್ ಗೆ ಉತ್ತರ ನೀಡಿ, ನಿಮ್ಮ ಈ ಮಾತುಗಳು ನನ್ನನ್ನು ಖುಷಿಯಲ್ಲಿರುವಂತೆ ಮಾಡುತ್ತೇವೆ ಎಂದು ಉತ್ತರಿಸಿದ್ದಾರೆ.

    ಮನೆಯಲ್ಲಿ ದೀಪಿಕಾರನ್ನು ಜಾನಾ-ಬನಾನಾ ಎಂದು ರಣ್‍ವೀರ್ ಎಂದು ಸಂಭೋದಿಸುತ್ತಾರೆಂದು ಪತ್ರಿಕೆಯೊಂದು ವರದಿ ಮಾಡಿದೆ. ಸಿನಿ ಅಂಗಳದಲ್ಲಿ ದೀಪಿಕಾರನ್ನು ‘ಡಿಪ್ಪಿ’ ಎಂದೇ ಕರೆಯುವುದುಂಟು. ಪತಿಯ ಜೊತೆಗೆ ನಟಿಸಿರುವ ಮೂರು ಚಿತ್ರಗಳು ಬಾಲಿವುಡ್ ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದು, ಮೂರು ಸಿನಿಮಾಗಳಿಗೆ ಸಂಜಯ್ ಲೀಲಾ ಬನ್ಸಾಲಿ ಆ್ಯಕ್ಷನ್ ಕಟ್ ಹೇಳಿರುವುದು ಮತ್ತೊಂದು ವಿಶೇಷ.

    ಮದುವೆಯ ಬಳಿಕ ರಣ್‍ವೀರ್ ಸಿಂಗ್ ಭಾಗಿಯಾದ ಎಲ್ಲ ಕಾರ್ಯಕ್ರಮಗಳಲ್ಲಿ ಪತ್ನಿಯ ಗುಣಗಾನ ಮಾಡುತ್ತಿದ್ದಾರೆ. ನವೆಂಬರ್ 14ರಂದು ಇಟಲಿಯ ಕೋಮೋ ಸಿಟಿಯಲ್ಲಿ ಇಬ್ಬರು ಸಿಖ್ ಮತ್ತು ಕೊಂಕಣಿ ಸಂಪ್ರದಾಯದಂತೆ ಮದುವೆ ಆಗಿದ್ದು, ಬೆಂಗಳೂರು ಹಾಗು ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ದರು. ರಣ್‍ವೀರ್ ಸಿಂಗ್ ಅಭಿನಯದ ಸಿಂಬಾ ಬಿಡುಗಡೆಯಾಗಿದ್ದು, ನೂರು ಕೋಟಿಯ ಕ್ಲಬ್ ಸೇರಿದೆ. ಆಲಿಯಾ ಭಟ್ ಗೆ ಜೊತೆಯಾಗಿ ನಟಿಸಿರುವ ಗಲ್ಲಿ ಭಾಯ್ ಚಿತ್ರದ ಟ್ರೇಲರ್ ಸಹ ನಿರೀಕ್ಷೆಯನ್ನು ಹುಟ್ಟುಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೋಹಿತ್ ಶೆಟ್ಟಿ, ಕರಣ್, ರಣ್‍ವೀರ್ ಸಿಂಗ್‍ಗೆ ದೀಪಿಕಾ ಆಶೀರ್ವಾದ!

    ರೋಹಿತ್ ಶೆಟ್ಟಿ, ಕರಣ್, ರಣ್‍ವೀರ್ ಸಿಂಗ್‍ಗೆ ದೀಪಿಕಾ ಆಶೀರ್ವಾದ!

    ಮುಂಬೈ: ಬಾಲಿವುಡ್ ಅಂಗಳದಲ್ಲಿ ಧೂಳೆಬ್ಬಿಸುತ್ತಿರುವ ಸಿಂಭಾ ಚಿತ್ರದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ನಟಿ ದೀಪಿಕಾ ಪಡುಕೋಣೆ ನಿರ್ದೇಶಕ ರೋಹಿತ್ ಶೆಟ್ಟಿ, ಕರಣ್ ಜೋಹರ್ ಹಾಗೂ ರಣ್‍ವೀರ್ ಸಿಂಗ್‍ಗೆ ಆಶೀರ್ವಾದ ಮಾಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

    ನಟ ರಣ್‍ವೀರ್ ಸಿಂಗ್ ಹಾಗೂ ಸಾರಾ ಅಲಿಖಾನ್ ಅಭಿನಯದ ಸಿಂಭಾ ಚಿತ್ರ ಸಿನಿ ಪ್ರೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ರೇಕ್ಷಕರು ಚಿತ್ರ ನೋಡಿ ಬಹಳ ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಚಿತ್ರವನ್ನು ಸ್ಟಾರ್ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶಿಸಿದ್ದು, ಕರಣ್ ಜೋಹರ್ ನಿರ್ಮಿಸಿದ್ದಾರೆ. ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಜೋರಾಗಿದ್ದು, ಈವರೆಗೆ ಸರಿಸುಮಾರು 190 ಕೋಟಿ ರೂ. ಕಲೆಕ್ಷನ್ ಮಾಡಿದೆ.

    ಅದ್ಭುತವಾಗಿ ಪ್ರದರ್ಶನ ಕಾಣುತ್ತಿರುವ ಸಿಂಭಾ ಚಿತ್ರದ ಯಶಸ್ಸಿನ ಖುಷಿಯನ್ನು ಸಂಭ್ರಮಿಸಲು, ನಿರ್ಮಾಪಕ ಕರಣ್ ಜೋಹರ್ ತಮ್ಮ ಮುಂಬೈ ನಿವಾಸದಲ್ಲಿ ಚಿತ್ರ ತಂಡಕ್ಕೆ ಪಾರ್ಟಿಯನ್ನು ಆಯೋಜಿಸಿದ್ದರು. ಈ ವೇಳೆ ತೆಗೆದ ಸಂಭ್ರಮಾಚರಣೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ದೀಪಿಕಾ ಪಡುಕೋಣೆ ಅವರು ನಿರ್ದೇಶಕ ರೋಹಿತ್ ಶೆಟ್ಟಿ, ಕರಣ್ ಜೋಹರ್ ಹಾಗೂ ರಣ್‍ವೀರ್ ಸಿಂಗ್‍ಗೆ ಆರ್ಶಿವಾದ ಮಾಡುತ್ತಿರುವ ಕ್ಯೂಟ್ ಫೋಟೋ ಅಭಿಮಾನಿಗಳ ಮನ ಗೆದ್ದಿದೆ.

    ನಿರ್ದೇಶಕ ರೋಹಿತ್ ಶೆಟ್ಟಿ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅಕ್ಷಯ್ ಕುಮಾರ್, ರಣ್‍ವೀರ್ ಸಿಂಗ್, ಅಜಯ್ ದೇವಗನ್, ಕರಣ್ ಜೋಹರ್ ಜೊತೆ ತಾವು ಇರುವ ಫೋಟೋವನ್ನು ಹಾಕಿ, ನಿಮಗೆ ಗೊತ್ತಿರದ ಗುಟ್ಟೊಂದನ್ನು ನಾನು ಹೇಳಲಾ, ಸಿಂಗಂ ಸಿಂಭಾ ಸೂರ್ಯವಂಶಿ ಬರುತ್ತಿದೆ ಅಂತ ಬರೆದು ಪೋಸ್ಟ್ ಮಾಡಿದ್ದಾರೆ.

    ಸಿಂಭಾ ಚಿತ್ರ ತೆರೆಕಂಡ ಎರಡನೇ ವಾರಕ್ಕೆ ಸುಮಾರು 190 ಕೋಟಿ ರೂ. ತನ್ನದಾಗಿಸಿಕೊಂಡಿದೆ. ಅಲ್ಲದೆ 2018ರಲ್ಲಿ ಅತೀ ಹೆಚ್ಚು ಗಳಿಸಿದ ಸಿನಿಮಾಗಳಲ್ಲಿ ಸದ್ಯ ಸಿಂಭಾ ಚಿತ್ರ ಮೂರನೇ ಸ್ಥಾನದಲ್ಲಿದೆ.

    https://www.instagram.com/p/BsV98rqhB3j/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮೆರಿಕದಲ್ಲಿ ಸಿಗುತ್ತೆ ವಿಶೇಷ ದೀಪಿಕಾ ದೋಸೆ!

    ಅಮೆರಿಕದಲ್ಲಿ ಸಿಗುತ್ತೆ ವಿಶೇಷ ದೀಪಿಕಾ ದೋಸೆ!

    ಮುಂಬೈ: ಅಮೆರಿಕದ ರೆಸ್ಟೋರೆಂಟ್ ಒಂದು ದೋಸೆಗೆ `ದೀಪಿಕಾ ದೋಸೆ’ ಎಂದು ಹೆಸರಿಟ್ಟ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಮೆರಿಕದ ಟೆಕ್ಸಾಸ್ ರೆಸ್ಟೋರೆಂಟ್ ಒಂದು ದೋಸೆಗೆ ದೀಪಿಕಾ ಪಡುಕೋಣೆ ದೋಸೆ ಎಂದು ಹೆಸರಿಟ್ಟಿದೆ. ದೀಪಿಕಾ ಪಡುಕೋಣೆ ಅಭಿಮಾನಿಯೊಬ್ಬರು ಆ ರೆಸ್ಟೋರೆಂಟ್‍ನ ಮೆನು ಕಾರ್ಡ್‍ನ ಫೋಟೋ ತೆಗೆದು ಅದನ್ನು ಟ್ವೀಟ್ ಮಾಡಿದ್ದಾರೆ. ದೀಪಿಕಾ ಈ ಟ್ವೀಟ್‍ಗೆ ಪ್ರತಿಕ್ರಿಯಿಸಿ, “ವರ್ಷ ಪ್ರಾರಂಭಿಸಲು ಇದು ಸಾಕು. ಹ್ಯಾಪಿ ನ್ಯೂ ಇಯರ್” ಎಂದು ಟೈಪಿಸಿ ರೀ- ಟ್ವೀಟ್ ಮಾಡಿದ್ದಾರೆ.

    https://twitter.com/deepikapadukone/status/1080180850631749637?ref_src=twsrc%5Etfw%7Ctwcamp%5Etweetembed%7Ctwterm%5E1080180850631749637&ref_url=https%3A%2F%2Fwww.hindustantimes.com%2Fbollywood%2Fthere-s-a-dosa-named-after-deepika-padukone-and-husband-ranveer-singh-has-a-spicy-comeback%2Fstory-GMjhpDBvGs1fUzy7vMEF4J.html

    ಈ ವಿಚಾರ ತಿಳಿದ ಮತ್ತೊಬ್ಬ ಅಭಿಮಾನಿ, “ಪುಣೆಯಲ್ಲಿ ನೀವು ಪರಾಟಾ ಥಾಲಿ ಆಗಿದ್ದೀರಿ” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ದೀಪಿಕಾ ನಗುವ ಎಮೋಜಿ ಹಾಕಿ ರೀ-ಟ್ವೀಟ್ ಮಾಡಿದ್ದಾರೆ.

    https://twitter.com/deepikapadukone/status/1080311208824123394

    ಇದೇ ವೇಳೆ ದೀಪಿಕಾ ಪತಿ, ನಟ ರಣ್‍ವೀರ್ ಸಿಂಗ್ ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ದೀಪಿಕಾ ಪಡುಕೋಣೆ ದೋಸೆ ಎಂದು ಮೆನು ಇರುವ ಫೋಟೋ ಹಾಕಿ, “ಈಗ ನಾನು ಇದನ್ನು ತಿನ್ನುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಬಾಲಿವುಡ್ ಹಾಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ನವೆಂಬರ್ ತಿಂಗಳಿನಲ್ಲಿ ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದರು. ಈಗ ಈ ಜೋಡಿ ಹನಿಮೂನ್‍ಗೆ ಹೋಗಿದೆ.

    ಮದುವೆ ನಂತರ ದೀಪಿಕಾ ಹಾಗೂ ರಣ್‍ವೀರ್ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರಿಂದ ಅವರು ತಮ್ಮ ಹನಿಮೂನ್‍ಗೂ ಕೂಡ ಪ್ಲಾನ್ ಮಾಡಿರಲಿಲ್ಲ. ಈಗ ದೀಪ್‍ವೀರ್ ತಮ್ಮ ಹನಿಮೂನ್‍ಗೆ ಹೋಗಿದ್ದು, ಯಾವ ದೇಶಕ್ಕೆ ಹೋಗಿದ್ದಾರೆ ಎನ್ನುವ ಎಂಬ ಮಾಹಿತಿ ದೊರೆತಿಲ್ಲ.

    ರಣ್‍ವೀರ್ ಹಾಗೂ ದೀಪಿಕಾ ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಕೊಂಕಣಿ ಸಂಪ್ರದಾಯ ಹಾಗೂ ಹಾಗೂ ನವೆಂಬರ್ 15ರಂದು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಬೆಂಗಳೂರಿನಲ್ಲಿ ಒಂದು ಬಾರಿ ಹಾಗೂ ಮುಂಬೈನಲ್ಲಿ ಎರಡೂ ಬಾರಿ ಈ ಜೋಡಿ ಅದ್ಧೂರಿಯಾಗಿ ಆರತಕ್ಷತೆಯನ್ನು ಮಾಡಿಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹನಿಮೂನ್‍ಗೆ ಹೊರಟ ನವಜೋಡಿ ದೀಪ್‍ವೀರ್

    ಹನಿಮೂನ್‍ಗೆ ಹೊರಟ ನವಜೋಡಿ ದೀಪ್‍ವೀರ್

    ಮುಂಬೈ: ಬಾಲಿವುಡ್ ಹಾಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ನವೆಂಬರ್ ತಿಂಗಳಿನಲ್ಲಿ ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದರು. ಈಗ ಈ ಜೋಡಿ ಹನಿಮೂನ್‍ಗೆ ಹೊರಟ್ಟಿದ್ದಾರೆ.

    ರಣ್‍ವೀರ್ ಹಾಗೂ ದೀಪಿಕಾ ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಕೊಂಕಣಿ ಸಂಪ್ರದಾಯ ಹಾಗೂ ಹಾಗೂ ನವೆಂಬರ್ 15ರಂದು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಬೆಂಗಳೂರಿನಲ್ಲಿ ಒಂದು ಬಾರಿ ಹಾಗೂ ಮುಂಬೈನಲ್ಲಿ ಎರಡೂ ಬಾರಿ ಈ ಜೋಡಿ ಅದ್ಧೂರಿಯಾಗಿ ಆರತಕ್ಷತೆಯನ್ನು ಮಾಡಿಕೊಂಡಿತ್ತು.

    ಮದುವೆ ನಂತರ ದೀಪಿಕಾ ಹಾಗೂ ರಣ್‍ವೀರ್ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಅವರು ತಮ್ಮ ಹನಿಮೂನ್‍ಗೂ ಕೂಡ ಪ್ಲಾನ್ ಮಾಡಿರಲಿಲ್ಲ. ಈಗ ದೀಪ್‍ವೀರ್ ತಮ್ಮ ಹನಿಮೂನ್‍ಗೆ ಹೋಗುತ್ತಿದ್ದು, ಯಾವ ದೇಶಕ್ಕೆ ಹೋಗುತ್ತಿದ್ದಾರೆ ಎಂಬ ಮಾಹಿತಿ ದೊರೆತಿಲ್ಲ.

    ದೀಪಿಕಾ ಹಾಗೂ ರಣ್‍ವೀರ್ ಇಬ್ಬರು ಕಪ್ಪು ಬಣ್ಣದ ಉಡುಪಿನಲ್ಲಿ ಒಟ್ಟಿಗೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಕ್ಯಾಮೆರಕ್ಕೆ ಸೆರೆಸಿಕ್ಕಿದ್ದಾರೆ. ದೀಪಿಕಾ ಹಾಗೂ ರಣ್‍ವೀರ್ ಒಬ್ಬರನೊಬ್ಬರ ಕೈ ಹಿಡಿದುಕೊಂಡು ಹೋಗುತ್ತಿದ್ದರು.

    ಮದುವೆಯಾದ ನಂತರ ದೀಪಿಕಾ ಅವರಿಗೆ ತಮ್ಮ ಹನಿಮೂನ್ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ಬಗ್ಗೆ ದೀಪಿಕಾ ಅವರನ್ನು ಕೇಳಿದ್ದಾಗ ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾವು ಇದುವರೆಗೂ ಯಾವುದೇ ಹನಿಮೂನ್ ಪ್ಲಾನ್ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

     

    View this post on Instagram

     

    #ranveersingh and #deepikapadukone leave for new years holidays @viralbhayani

    A post shared by Viral Bhayani (@viralbhayani) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತನ್ನ ವೈಯಕ್ತಿಕ ಜೀವನದ ರಹಸ್ಯ ಬಿಚ್ಚಿಟ್ಟ ದೀಪಿಕಾ

    ತನ್ನ ವೈಯಕ್ತಿಕ ಜೀವನದ ರಹಸ್ಯ ಬಿಚ್ಚಿಟ್ಟ ದೀಪಿಕಾ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಬಹುದಿನದ ಗೆಳೆಯ ರಣ್‍ವೀರ್ ಸಿಂಗ್ ಜೊತೆ ಇಟಲಿಯ ಲೇಕ್ ಕೋಮೋದಲ್ಲಿ ಅದ್ಧೂರಿಯಾಗಿ ಮದುವೆಯಾದ ಬಳಿಕ ಮೊದಲ ಬಾರಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ದೀಪಿಕಾ ತನ್ನ ಜೀವನದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

    ಇತ್ತೀಚೆಗೆ ದೀಪಿಕಾ ಫಿಲ್ಮ್‍ಫೇರ್ ಮ್ಯಾಗಜೀನ್‍ಗೆ ಸಂದರ್ಶನ ನೀಡಿದ್ದಾರೆ. ನಾನು ಹಾಗೂ ರಣ್‍ವೀರ್ ನಾಲ್ಕು ವರ್ಷದ ಹಿಂದೆ ಎಂಗೇಜ್ ಆಗಿದ್ದೀವಿ. ಈ ವಿಷಯ ನನ್ನ ಕುಟುಂಬದವರು ಹಾಗೂ ರಣ್‍ವೀರ್ ಕುಟುಂಬದವರನ್ನು ಬಿಟ್ಟರೆ ಬೇರೆ ಯಾರಿಗೂ ಗೊತ್ತಿರಲಿಲ್ಲ ಎಂದು ಮದುವೆ ಮೊದಲು ತಮ್ಮ ಹಾಗೂ ರಣ್‍ವೀರ್ ಸಂಬಂಧದ ಬಗ್ಗೆ ದೀಪಿಕಾ ಮಾತನಾಡಿದರು.

    ಇದೇ ವೇಳೆ ಸಂದರ್ಶನದಲ್ಲಿ ದೀಪಿಕಾ ಅವರನ್ನು ನಿಮಗೆ ಈಗ ಮದುವೆ ಆಗಿದೆ. ಈಗ ನೀವು ಲಿಪ್ ಕಿಸ್ ಮಾಡುವುದನ್ನು ನಿಲ್ಲಿಸುತ್ತೀರಾ ಎಂದು ಪ್ರಶ್ನಿಸಲಾಗಿತ್ತು. ಪ್ರಶ್ನೆ ಕೇಳಿದ ತಕ್ಷಣ ದೀಪಿಕಾ ತಲೆ ತಗ್ಗಿಸಿ ಛೀ.. ಎಂದು ನಗುತ್ತಾ ಪ್ರತಿಕ್ರಿಯಿಸಿದರು. ಅಲ್ಲದೇ ಅಭಿಮಾನಿಯೊಬ್ಬರು ದೀಪಿಕಾ ಅವರಿಗೆ ನಿಮ್ಮ ಹಣವೆಲ್ಲಾ ಮದುವೆಗೆ ಖರ್ಚು ಮಾಡುತ್ತೀರಾ? ಎಂದು ಪ್ರಶ್ನೆಯನ್ನು ಕೇಳಿದ್ದರು. ಆಗ ದೀಪಿಕಾ ನನ್ನ ಬಳಿ ಸಾಕಷ್ಟು ಹಣವಿದೆ. ಯೋಚನೆ ಮಾಡಬೇಡಿ ಎಂದು ಉತ್ತರಿಸಿದರು.

    ಈ ಸಂದರ್ಶನದಲ್ಲಿ ದೀಪಿಕಾ ಅವರಿಗೆ ತಮ್ಮ ಹನಿಮೂನ್ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಕೆಲಸದ ಒತ್ತಡದಿಂದ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಇನ್ನೂ ತಮ್ಮ ಹನಿಮೂನ್ ಪ್ಲಾನ್ ಮಾಡಿಲ್ಲ. ಈ ಬಗ್ಗೆ ದೀಪಿಕಾ ಅವರನ್ನು ಕೇಳಿದ್ದಾಗ ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾವು ಇದುವರೆಗೂ ಯಾವುದೇ ಹನಿಮೂನ್ ಪ್ಲಾನ್ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದರು.

    ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಹಾಗೂ ನವೆಂಬರ್ 15ರಂದು ಕೊಂಕಣಿ ಮತ್ತು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಟಲಿಯಿಂದ ಬಂದ ನಂತರ ಈ ಜೋಡಿ ಬೆಂಗಳೂರಿನಲ್ಲಿ ಹಾಗೂ ಮುಂಬೈನಲ್ಲಿ ಎರಡು ಬಾರಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಮಾಡಿಕೊಂಡಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಿಪ್ ಕಿಸ್ ಸೀನ್ ಮಾಡೋದು ನಿಲ್ಲಿಸ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಛೀ.. ಎಂದ ದೀಪಿಕಾ!

    ಲಿಪ್ ಕಿಸ್ ಸೀನ್ ಮಾಡೋದು ನಿಲ್ಲಿಸ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಛೀ.. ಎಂದ ದೀಪಿಕಾ!

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರನ್ನು ನೀವು ಲಿಪ್ ಕಿಸ್ ಮಾಡುವುದನ್ನು ನಿಲ್ಲುಸುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಛೀ.. ಎಂದು ಉತ್ತರಿಸಿದ್ದಾರೆ.

    ಫಿಲ್ಮ್ ಫೇರ್ ಮ್ಯಾಗಜೀನ್ ಸಂದರ್ಶನದಲ್ಲಿ ನಿಮಗೆ ಈಗ ಮದುವೆ ಆಗಿದೆ. ಈಗ ನೀವು ಲಿಪ್ ಕಿಸ್ ಮಾಡುವುದನ್ನು ನಿಲ್ಲಿಸುತ್ತೀರಾ ಎಂದು ಪ್ರಶ್ನಿಸಲಾಗಿತ್ತು. ಪ್ರಶ್ನೆ ಕೇಳಿದ ತಕ್ಷಣ ದೀಪಿಕಾ ತಲೆ ತಗ್ಗಿಸಿ ಛೀ.. ಎಂದು ನಗುತ್ತಾ ಪ್ರತಿಕ್ರಿಯಿಸಿದ್ದಾರೆ.

    ದೀಪಿಕಾ ಸಂದರ್ಶನ ನೀಡುತ್ತಿರುವ ಪ್ರೋಮೋವೊಂದನ್ನು ಫಿಲ್ಮ್ ಫೇರ್ ತನ್ನ ಇನ್‍ಸ್ಟಾಗ್ರಾಂನಲ್ಲಿ ಹಾಕಿದೆ. ಈ ಪ್ರೋಮೋದಲ್ಲಿ ಸಂದರ್ಶಕ ದೀಪಿಕಾ ಅವರಿಗೆ ನಿಮ್ಮ ಹಣವೆಲ್ಲಾ ಮದುವೆಗೆ ಖರ್ಚು ಮಾಡುತ್ತೀರಾ? ಎಂದು ಅಭಿಮಾನಿಯೊಬ್ಬರು ಪ್ರಶ್ನೆಯನ್ನು ಕೇಳಿದ್ದರು. ಆಗ ದೀಪಿಕಾ ನನ್ನ ಬಳಿ ಸಾಕಷ್ಟು ಹಣವಿದೆ. ಯೋಚನೆ ಮಾಡಬೇಡಿ ಎಂದು ಹೇಳಿದ್ದಾರೆ.

    ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಹಾಗೂ ನವೆಂಬರ್ 15ರಂದು ಕೊಂಕಣಿ ಮತ್ತು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಟಲಿಯಿಂದ ಬಂದ ನಂತರ ಈ ಜೋಡಿ ಬೆಂಗಳೂರಿನಲ್ಲಿ ಹಾಗೂ ಮುಂಬೈನಲ್ಲಿ ಎರಡು ಬಾರಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಮಾಡಿಕೊಂಡಿತು.

    ಕೆಲಸದ ಒತ್ತಡದಿಂದ ದೀಪಿಕಾ ಹಾಗೂ ರಣ್‍ವೀರ್ ಸಿಂಗ್ ಇನ್ನೂ ತಮ್ಮ ಹನಿಮೂನ್ ಪ್ಲಾನ್ ಮಾಡಿಲ್ಲ. ಈ ಬಗ್ಗೆ ದೀಪಿಕಾ ಅವರನ್ನು ಪ್ರಶ್ನಿಸಿದ್ದಾಗ ಅವರು, ನನಗೆ ಏನೂ ಗೊತ್ತಿಲ್ಲ. ನಾವು ಇದುವರೆಗೂ ಯಾವುದೇ ಹನಿಮೂನ್ ಪ್ಲಾನ್ ಮಾಡಿಲ್ಲ. ರಣ್‍ವೀರ್ ಅಭಿನಯದ ‘ಸಿಂಭಾ’ ಚಿತ್ರ ಈಗ ಬಿಡುಗಡೆಯಾಗಲಿದ್ದು, ಚಿತ್ರಕ್ಕಾಗಿ ಕಾಯುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯಲ್ಲಿಯೂ ಸಾಮಾಜಿಕ ಕಳಕಳಿ ಮೆರೆದ ದೀಪಿಕಾ

    ಮದ್ವೆಯಲ್ಲಿಯೂ ಸಾಮಾಜಿಕ ಕಳಕಳಿ ಮೆರೆದ ದೀಪಿಕಾ

    ಮುಂಬೈ: ಬಾಲಿವುಡ್ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ತಮ್ಮ ಬಹುದಿನಗಳ ಗೆಳೆಯ ರಣ್‍ವೀರ್ ಸಿಂಗ್ ರನ್ನು ನವೆಂಬರ್ 14ರಂದು ಮದುವೆ ಆಗಿದ್ದಾರೆ. ಇದೀಗ ದೀಪಿಕಾ ತಮ್ಮ ಮದುವೆಯಲ್ಲಿಯೂ ಸಾಮಾಜಿಕ ಕಳಕಳಿ ಮೆರೆದಿರುವುದು ಬೆಳಕಿಗೆ ಬಂದಿದೆ. ರಣ್‍ವೀರ್ ಸಿಂಗ್ ಇತ್ತೀಚೆಗೆ ತಮ್ಮ ಸಿಂಬಾ ಚಿತ್ರದ ಪ್ರಚಾರಕ್ಕಾಗಿ ಹಿಂದಿಯ ಖಾಸಗಿ ವಾಹಿನಿಯ ರಿಯಾಲಿಟಿ ಶೋದಲ್ಲಿ ಭಾಗಿಯಾಗಿದ್ದರು. ಈ ವೇಳೆ ಪತ್ನಿಯ ಸಮಾಜ ಸೇವೆಯನ್ನು ರಿವೀಲ್ ಮಾಡಿದ್ದಾರೆ.

     

    ರಣ್‍ವೀರ್ ಸಿಂಗ್ ಶೋದಲ್ಲಿ ಭಾಗವಹಿಸಿದ್ದ ವೇಳೆ ಕಾರ್ಯಕ್ರಮದ ನಿರೂಪಕಿ (ಪುಟ್ಟ ಬಾಲಕಿ) ದೀಪಾಲಿ, ಪ್ರೆಶರ್ ಕುಕ್ಕರ್ ಮದುವೆ ಗಿಫ್ಟ್ ಅಂತಾ ನೀಡಿದಳು. ಮನೆಯಲ್ಲಿ ನೀವು ಮತ್ತು ದೀಪಿಕಾ ಅನ್ನ, ರಸಂ ಮಾಡಿಕೊಂಡು ತಿನ್ನಿ ಎಂದು ಹೇಳಿದಳು ಇದೇ ವೇಳೆ ದೀಪಾಲಿ, ನಿಮಗೆ ಮದುವೆಯಲ್ಲಿ ಅತಿಥಿಗಳಿಂದ ಏನೇನು ಸಿಕ್ತು ಅಂತಾ ಕೇಳಿದಾಗ, ನಾವು ಅತಿಥಿಗಳಿಂದ ಯಾವುದೇ ಕಾಣಿಕೆ ತೆಗೆದುಕೊಳ್ಳಬಾರದೆಂದು ದೀಪಿಕಾ ಷರತ್ತು ಹಾಕಿದ್ದರು. ಒಂದು ವೇಳೆ ಅತಿಥಿಗಳು ಗಿಫ್ಟ್ ನೀಡಲೇ ಬೇಕೆಂದ್ರೆ ತಾವು ನಡೆಸಿಕೊಡುವ ಚಾರಿಟಿ ಟ್ರಸ್ಟ್ ಗೆ ದೇಣಿಗೆ ನೀಡಬೇಕೆಂದು ದೀಪಿಕಾ ಹೇಳಿದ್ದರಂತೆ. ಪತ್ನಿಯ ಸಾಮಾಜಿಕ ಕಳಕಳಿಯಿಂದ ನಾನು ಒಪ್ಪಿಕೊಂಡಿದ್ದೆ ಎಂದು ರಣ್‍ವೀರ್ ವೇದಿಕೆಯಲ್ಲಿ ಹೇಳಿದರು.

     

    ಮದುವೆಗೆ ಆಗಮಿಸುವ ಎಲ್ಲ ಅತಿಥಿಗಳಿಗೂ ಯಾವುದೇ ಕಾಣಿಕೆ ತರಕೂಡದು ಎಂದ ಸಂದೇಶವನ್ನು ತಲುಪಿಸಲಾಗಿತ್ತು. ಆದ್ರೆ ದೀಪಾಲಿಗೆ ಗೊತ್ತಿರಲಿಲ್ಲ, ಹಾಗಾಗಿ ಕುಕ್ಕರ್ ತಂದಿದ್ದಾಳೆ. ಕುಕ್ಕರ್ ತೆಗೆದುಕೊಂಡು ನಾನು ಇದರಲ್ಲಿ ಅನ್ನ ಮಾಡ್ತೀನಿ, ನನ್ನ ಪತ್ನಿ ರಸಂ ಮಾಡ್ತಾಳೆ ಎಂದು ಹೇಳಿ ರಣ್‍ವೀರ್ ಕಾರ್ಯಕ್ರಮದಲ್ಲಿದ್ದ ಎಲ್ಲರನ್ನು ನಗಿಸಿದರು.

    ದೀಪಿಕಾ ಪಡುಕೋಣೆ ‘ಲೈವ್ ಲವ್ ಲಾಫ್ ಫೌಂಡೇಶನ್’ ಎಂದು ಎನ್‍ಜಿಓ ನಡೆಸುತ್ತಿದ್ದಾರೆ. ಇದರ ಮೂಲಕ ಮಾನಸಿಕ ಅಸ್ವಸ್ಥ ಮಕ್ಕಳ ಮತ್ತು ಜನರ ರಕ್ಷಣೆ ಮಾಡಲಾಗುತ್ತದೆ. ಮಾನಸಿಕ ಅಸ್ವಸ್ಥ ರಕ್ಷಣಾ ಕೇಂದ್ರಗಳು ನಡೆಸುವ ಇತರೆ ಸಹಾಯ ಸಂಘಗಳಿಗೆ ಇದು ತರಬೇತಿ ಮತ್ತು ಹಣಕಾಸಿನ ಸಹಾಯ ನೀಡಲಿದೆ. 2017 ಅಕ್ಟೋಬರ್ ನಲ್ಲಿ ದೀಪಿಕಾ ತಮ್ಮ ಎನ್‍ಜಿಓ ದಾವಣಗೆರೆಯಲ್ಲಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು, ಪಲ್ಲಾಗಟ್ಟೆ ಹಾಗೂ ಮೆಳ್ಳೆಕಟ್ಟೆ ಗ್ರಾಮಗಳಿಗೆ ಭೇಟಿ ನೀಡಿದ್ದರು.

  • ಪತಿ ರಣ್‍ವೀರ್ ಮಾತನ್ನು ಕೇಳಿ ಕಾರ್ಯಕ್ರಮದಲ್ಲಿ ಅತ್ತ ದೀಪಿಕಾ: ವಿಡಿಯೋ

    ಪತಿ ರಣ್‍ವೀರ್ ಮಾತನ್ನು ಕೇಳಿ ಕಾರ್ಯಕ್ರಮದಲ್ಲಿ ಅತ್ತ ದೀಪಿಕಾ: ವಿಡಿಯೋ

    ಮುಂಬೈ: ರಣ್‍ವೀರ್ ಮಾತುಗಳನ್ನು ಕೇಳಿ ದೀಪಿಕಾ ಪಡುಕೋಣೆ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾವುಕರಾದರು.

    ಭಾನುವಾರ ರಣ್‍ವೀರ್ ಹಾಗೂ ದೀಪಿಕಾ ಮುಂಬೈನಲ್ಲಿ ನಡೆದ ಸ್ಟಾರ್ ಸ್ಕ್ರೀನ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೆಡ್ ಕಾರ್ಪೆಟ್ ಮೇಲೆ ರಣ್‍ವೀರ್ ಹಾಗೂ ದೀಪಿಕಾ ಕಪ್ಪು ಬಣ್ಣದ ಉಡುಪನ್ನು ಧರಿಸಿ ಮಿಂಚಿದರು.

    ಈ ಅವಾರ್ಡ್ ಕಾರ್ಯಕ್ರಮದಲ್ಲಿ ರಣ್‍ವೀರ್ ‘ಪದ್ಮಾವತ್’ ಚಿತ್ರಕ್ಕೆ ಅತ್ಯುತ್ತಮ ನಾಯಕ ಪ್ರಶಸ್ತಿಯನ್ನು ಪಡೆದರು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ನಟಿಸಿ ರಣವೀರ್ ಸಿಂಗ್ ಎಲ್ಲರ ಗಮನ ಸೆಳೆದಿದ್ದರು.

    ರಣ್‍ವೀರ್ ವೇದಿಕೆ ಮೇಲೆ ಹೋಗಿ ಅವಾರ್ಡ್ ಪಡೆದು ಭಾವನಾತ್ಮಕವಾಗಿ ಮಾತನಾಡಿದರು. “ನನಗೆ ಚಿತ್ರದಲ್ಲಿ ರಾಣಿ ಸಿಗದೇ ಇದ್ದರೂ ನಿಜ ಜೀವನದಲ್ಲಿ ನನಗೆ ನನ್ನ ರಾಣಿ ಸಿಕ್ಕಿದ್ದಾಳೆ. ಈ 6 ವರ್ಷದಲ್ಲಿ ನಾನು ಏನೂ ಸಾಧನೆ ಮಾಡಿದ್ದೇನೋ ಅದಕ್ಕೆ ದೀಪಿಕಾ ಕಾರಣ. ಲವ್ ಯೂ ದೀಪಿಕಾ” ಎಂದು ಪತ್ನಿಗೆ ಧನ್ಯವಾದ ತಿಳಿಸಿದರು. ರಣವೀರ್ ಮಾತನ್ನು ಹೇಳುತ್ತಿದ್ದಾಗ ದೀಪಿಕಾ ಪಡುಕೋಣೆ ಭಾವುಕರಾಗಿ ಪತಿಯನ್ನೇ ನೋಡುತ್ತಿದ್ದರು.

    ದೀಪಿಕಾ ಅವರಿಗೆ ಧನ್ಯವಾದ ಹೇಳಿದ ನಂತರ ರಣ್‍ವೀರ್ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ತನ್ನ ತಂದೆ, ತಾಯಿ ಹಾಗೂ ಸಹೋದರಿಗೆ ಧನ್ಯವಾದ ತಿಳಿಸಿದರು. ಬಳಿಕ ಈ ವರ್ಷದಲ್ಲಿ ನಿಧನರಾದ ತನ್ನ ಅಜ್ಜಿಗೆ ರಣ್‍ವೀರ್ ಈ ಅವಾರ್ಡ್ ಅನ್ನು ಡೆಡಿಕೇಟ್ ಮಾಡಿದರು.

    ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಹಾಗೂ ನವೆಂಬರ್ 15ರಂದು ಕೊಂಕಣಿ ಮತ್ತು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಟಲಿಯಿಂದ ಬಂದ ನಂತರ ಈ ಜೋಡಿ ಬೆಂಗಳೂರಿನಲ್ಲಿ ಹಾಗೂ ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಮಾಡಿಕೊಂಡಿತು.

    https://twitter.com/RanveerSinghtbt/status/1074354641926848513

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv