Tag: Deepika Padukone

  • ‘ಬೇಬಿ’ ದೀಪಿಕಾ ಫೋಟೋ ಹಂಚಿಕೊಂಡ ರಣ್‍ವೀರ್

    ‘ಬೇಬಿ’ ದೀಪಿಕಾ ಫೋಟೋ ಹಂಚಿಕೊಂಡ ರಣ್‍ವೀರ್

    ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ತಮ್ಮ ಪತ್ನಿ, ನಟಿ ದೀಪಿಕಾ ಪಡುಕೋಣೆಯ ಫೋಟೋವನ್ನು ಫಿಲ್ಟರ್ ಮಾಡಿ ಅದನ್ನು ಮಗುವಿನ ಫೋಟೋ ಮಾಡಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ದೀಪಿಕಾ ಕೇನ್ಸ್ 2019ರಲ್ಲಿ ಹಸಿರು ಬಣ್ಣದ ಉಡುಪು ಧರಿಸಿ ಅದಕ್ಕೆ ಟರ್ಬನ್ ಹಾಕಿ ಭಾಗವಹಿಸಿದ್ದರು. ಈಗ ರಣ್‍ವೀರ್ ಈ ಫೋಟೋವನ್ನು ಬೇಬಿ ದೀಪಿಕಾ ಪಡುಕೋಣೆಯಂತೆ ಫಿಲ್ಟರ್ ಮಾಡಿ ಅದನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    ???????????? @deepikapadukone

    A post shared by Ranveer Singh (@ranveersingh) on

    ರಣ್‍ವೀರ್ ಈ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದೆ. ಈ ಪೋಸ್ಟ್ ಇದುವರೆಗೂ 20 ಲಕ್ಷಕ್ಕೂ ಹೆಚ್ಚು ಲೈಕ್ಸ್ ಹಾಗೂ 11 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ. ಈ ಫೋಟೋ ನೋಡಿ ಜನರು ದೀಪಿಕಾ ಗರ್ಭಿಣಿನಾ ಎಂದು ಕಮೆಂಟ್ ಮಾಡುವ ಮೂಲಕ ರಣ್‍ವೀರ್ ಗೆ ಪ್ರಶ್ನಿಸಿದ್ದಾರೆ.

    ಈ ಪೋಸ್ಟ್ ನೋಡಿದ ಅಭಿಮಾನಿಗಳು, ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಗರ್ಭಿಣಿ ಆಗಿದ್ದಾರಾ?, ಗುಡ್ ನ್ಯೂಸ್ ಸಿಗುವ ಸೂಚನೆ ಸಿಗುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪೋಕಿಮೋನ್‍ನ ‘ಬೇಬಿ ಬಲ್ಬಸಾರ್” ಎಂದು ಕಮೆಂಟ್ ಮಾಡಿ ದೀಪಿಕಾ ಕಾಲೆಳೆದಿದ್ದಾರೆ.

    ಸದ್ಯ ದೀಪಿಕಾ ಈ ಪೋಸ್ಟ್ ಗೆ ಇದುವರೆಗೂ ಯಾವುದೇ ಕಮೆಂಟ್ ಮಾಡಿಲ್ಲ.

  • ಜಾರಿ ಬಿದ್ದ ದೀಪಿಕಾ

    ಜಾರಿ ಬಿದ್ದ ದೀಪಿಕಾ

    ಮುಂಬೈ: ಬಾಲಿವುಡ್ ಅಂಗಳದ ನೀಳಕಾಯ ಚೆಲುವೆ ದೀಪಿಕಾ ಪಡುಕೋಣೆ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ. ಸದಾ ಜಾಹೀರಾತು, ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯ ನಡುವೆ ಜಿಮ್ ನಲ್ಲಿ ದೇಹವನ್ನು ದಂಡಿಸ್ತಾರೆ. ಇಂದು ವರ್ಕೌಟ್ ವೇಳೆ ದೀಪಿಕಾ ಬಿದ್ದಿದ್ದಾರೆ.

    ಇನ್ ಸ್ಟಾಗ್ರಾಮ್‍ನಲ್ಲಿ ಮೂರು ಫೋಟೋಗಳ್ನು ಅಪ್ಲೋಡ್ ಮಾಡಿಕೊಂಡಿರುವ ದೀಪಿಕಾ, ಪುಶ್ ಮಾಡುವ ವೇಳೆ ನಾನು ಬಿದ್ದೆ. ಕೊನೆಗೆ ನನ್ನ ಕೈಗಳ ಸಹಾಯದಿಂದ ಕುಳಿತೆ ಎಂದು ಬರೆದುಕೊಂಡಿದ್ದಾರೆ. ಇನ್ನು ಫೋಟೋ ನೋಡಿದ ಅಭಿಮಾನಿಗಳು ಮಹಿಳೆಯರಿಗೆ ಇಂದು ಜಿಮ್ ನಲ್ಲಿ ವರ್ಕೌಟ್ ಮಾಡುವ ಮೂಲಕ ಸದೃಢರಾಗಬೇಕಿದೆ. ನೀವು ಎಲ್ಲ ಮಹಿಳೆಯರಿಗೆ ಮಾದರಿ ಎಂದು ಕಮೆಂಟ್ ಮಾಡಿದ್ದಾರೆ. ಅಪ್ಲೋಡ್ ಆದ ನಾಲ್ಕು ಗಂಟೆಯಲ್ಲಿ ಫೋಟೋ 14 ಲಕ್ಷಕ್ಕೂ ಹೆಚ್ಚಿನ ಲೈಕ್ಸ್ ಪಡೆದುಕೊಂಡಿದೆ.

    2019ರ ಮೆಟ್ ಗಾಲಾದಲ್ಲಿ ದೀಪಿಕಾ ಡಿಸ್ನಿ ದೇಶದ ರಾಣಿಯ ರೀತಿ ಡ್ರೆಸ್ ಧರಿಸಿ ಕ್ಯಾಟ್ ವಾಕ್ ಮಾಡಿದ್ದರು. ರಾಜಕುಮಾರಿಯ ಡ್ರೆಸ್‍ನಲ್ಲಿ ದೀಪಿಕಾರನ್ನ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದರು. ಮದುವೆ ಬಳಿಕ ದೀಪಿಕಾ ಸದ್ಯ ‘ಛಾಪಕ್’ನಲ್ಲಿ ನಟಿಸುತ್ತಿದ್ದಾರೆ.

    https://www.instagram.com/p/Bxbf8ElAWzW/

  • ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಡಿಂಪಲ್ ಬೆಡಗಿ ದೀಪಿಕಾ: ವಿಡಿಯೋ ನೋಡಿ

    ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಡಿಂಪಲ್ ಬೆಡಗಿ ದೀಪಿಕಾ: ವಿಡಿಯೋ ನೋಡಿ

    -ಸ್ಟನ್ನಿಂಗ್ ಲುಕ್‍ನಲ್ಲಿ ದೇಶಿ ಗರ್ಲ್

    ನ್ಯೂಯಾರ್ಕ್: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ‘ಮೆಟ್ ಗಾಲಾ 2019’ ಕಾರ್ಯಕ್ರಮಕ್ಕೆ ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಆಗಮಿಸಿದ್ದಾರೆ.

    ಸೋಮವಾರ ಸಂಜೆ ದೀಪಿಕಾ ‘ಕ್ಯಾಂಪ್: ಇದುವರೆಗೂ ಯಾರು ಮಾಡದ ಫ್ಯಾಶನ್’ ಎಂಬ ಥೀಮ್ ಇಟ್ಟುಕೊಂಡು ಕಾರ್ಯಕ್ರಮಕ್ಕೆ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ದೀಪಿಕಾ 400 ಕಸೂತಿ ತುಣುಕುಗಳೊಂದಿಗೆ ಅಲಂಕರಿಸಲ್ಪಟ್ಟ, ಝಾಕ ಪೊಸೆನ್ ವಿನ್ಯಾಸದ ಗುಲಾಬಿ ಬಣ್ಣದ ಲೋರೆಕ್ಸ್ ಜಾಕ್ವಾರ್ಡ್ ಗೌನ್ ಧರಿಸಿದ್ದರು.

    ದೀಪಿಕಾ ಮೂರನೇ ಬಾರಿಗೆ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಮೊದಲು ಎರಡು ಬಾರಿ ಅವರು ಸಿಂಪಲ್ ಗೌನ್ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಈ ಬಾರಿ ಗುಲಾಬಿ ಬಣ್ಣದ ಗೌನ್‍ನಲ್ಲಿ ದೀಪಿಕಾ ಡಿಸ್ನಿಯ ರಾಜಕುಮಾರಿಯಂತೆ ಕಾಣಿಸುತ್ತಿದ್ದು, ಎಲ್ಲರ ಗಮನ ತನ್ನತ್ತ ಸೆಳೆದುಕೊಂಡರು.

    ಈ ಕಾರ್ಯಕ್ರಮದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ, ಪಾಪ್ ಸಿಂಗರ್ ನಿಕ್ ಜೋನಸ್ ಜೊತೆ ಆಗಮಿಸಿದ್ದರು. ಪ್ರಿಯಾಂಕಾ ಈ ಕಾರ್ಯಕ್ರಮದಲ್ಲಿ ಸ್ಟನಿಂಗ್ ಲುಕ್‍ನಲ್ಲಿ ಆಗಮಿಸಿದ್ದರು. ಪ್ರಿಯಾಂಕಾ ಚೋಪ್ರಾ ಅವರ ಈ ಲುಕ್ ನೋಡಿ ಭಾರತದ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

  • ಮದ್ವೆಮನೆಯಲ್ಲಿ ದೀಪಿಕಾ ಸ್ಯಾಂಡಲ್ಸ್ ಹಿಡಿದುಕೊಂಡು ಓಡಾಡಿದ ಪತಿ: ಫೋಟೋ ವೈರಲ್

    ಮದ್ವೆಮನೆಯಲ್ಲಿ ದೀಪಿಕಾ ಸ್ಯಾಂಡಲ್ಸ್ ಹಿಡಿದುಕೊಂಡು ಓಡಾಡಿದ ಪತಿ: ಫೋಟೋ ವೈರಲ್

    ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಮದುವೆ ಕಾರ್ಯಕ್ರಮದಲ್ಲಿ ತನ್ನ ಪತ್ನಿ, ನಟಿ ದೀಪಿಕಾ ಪಡುಕೋಣೆ ಅವರ ಸ್ಯಾಂಡಲ್ಸ್ ಹಿಡಿದುಕೊಂಡು ಓಡಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇತ್ತೀಚೆಗೆ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮದುವೆಯಲ್ಲಿ ದೀಪಿಕಾ ಬೇರೆಯವರ ಜೊತೆ ಮಾತನಾಡುವುದರಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ರಣ್‍ವೀರ್ ದೀಪಿಕಾ ಸ್ಯಾಂಡಲ್ಸ್ ಹಿಡಿದು ಅವರ ಹಿಂದೆ ನಿಂತಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ.

    ಈ ಹಿಂದೆ ಕೂಡ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಡಿನ್ನರಿಗೆಂದು ರೆಸ್ಟೋರೆಂಟ್‍ಗೆ ಹೋಗಿದ್ದರು. ಅಲ್ಲಿಂದ ವಾಪಸ್ ಬರುವಾಗ ಅಲ್ಲಿದ್ದ ಮಾಧ್ಯಮದವರು ದೀಪ್‍ವೀರ್ ಗೆ ಫೋಟೋಗೆ ಪೋಸ್ ಕೊಡಿ ಎಂದು ಕೇಳಿಕೊಂಡಿದರು.

    ಇಬ್ಬರು ಫೋಟೋಗೆ ಪೋಸ್ ಕೊಡುವ ವೇಳೆ ರಣ್‍ವೀರ್, ದೀಪಿಕಾ ಪ್ಯಾಂಟ್ ಮೇಲೆ ಕಸ ಇರುವುದನ್ನು ಗಮನಿಸಿದ್ದರು. ಬಳಿಕ ರಣ್‍ವೀರ್ ಪ್ಯಾಂಟ್‍ನಲ್ಲಿದ್ದ ಕಸ ತೆಗೆದು ದೀಪಿಕಾಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಆಕೆಯ ಹಣೆ ಮೇಲೆ ಕಿಸ್ ಮಾಡಿದ್ದರು. ನಂತರ ದೀಪಿಕಾ ಫೋಟೋಗ್ರಾಫರ್ ಗಳಿಗೆ ಧನ್ಯವಾದ ತಿಳಿಸಿ ಅಲ್ಲಿಂದ ಹೊರಟು ಹೋಗಿದ್ದರು.

  • ಟೆರೆಸ್ ಮೇಲೆ ವ್ಯಕ್ತಿ ಜೊತೆ ದೀಪಿಕಾ ಪಡುಕೋಣೆ ಕಿಸ್ಸಿಂಗ್: ವಿಡಿಯೋ ವೈರಲ್

    ಟೆರೆಸ್ ಮೇಲೆ ವ್ಯಕ್ತಿ ಜೊತೆ ದೀಪಿಕಾ ಪಡುಕೋಣೆ ಕಿಸ್ಸಿಂಗ್: ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ‘ಚಾಪಾಕ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಈ ಚಿತ್ರದಲ್ಲಿ ದೀಪಿಕಾ ನಟ ವಿಕ್ರಾಂತ್ ಮಾಸೇ ಜೊತೆ ಟೆರೆಸ್ ಮೇಲೆ ಕಿಸ್ಸಿಂಗ್ ಸೀನ್ ಮಾಡಿದ ವಿಡಿಯೋ ಲೀಕ್ ಆಗಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ ದೀಪಿಕಾ ಟೆರೆಸ್ ಮೇಲೆ ನಿಂತು ನಟ ವಿಕ್ರಾಂತ್ ಜೊತೆ ಲಿಪ್ ಲಾಕ್ ಮಾಡುತ್ತಿದ್ದಾರೆ. ಈ ಸೀನ್ ಚಿತ್ರೀಕರಣದ ವೇಳೆ ಅಕ್ಕಪಕ್ಕದ ಮನೆಯವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಚಾಪಾಕ್ ಚಿತ್ರದ ಚಿತ್ರೀಕರಣ ನವದೆಹಲಿಯಲ್ಲಿ ನಡೆಯುತ್ತಿದೆ. ಈಗಾಗಲೇ ಈ ಚಿತ್ರದ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈಗ ಈ ಚಿತ್ರದ ಕಿಸ್ಸಿಂಗ್ ಸೀನ್ ಲೀಕ್ ಆಗಿದ್ದು, ಸಾಕಷ್ಟು ವೈರಲ್ ಆಗುತ್ತಿದೆ.

    ದೀಪಿಕಾ ಪಡುಕೋಣೆ ಮದುವೆ ನಂತರ `ಚಾಪಾಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮಿ ಅಗರ್‍ವಾಲ್ ಜೀವನಚರಿತ್ರೆ ಆಗಿದ್ದು, ದೀಪಿಕಾ ಮಾಲತಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲಕ್ಷ್ಮಿ ಅಗರ್‍ವಾಲ್ ಈಗ ಟಿವಿ ನಿರೂಪಕಿ ಹಾಗೂ ಆ್ಯಸಿಡ್ ದಾಳಿ ತಡೆಯ ಪ್ರಚಾರಕಿ ಆಗಿದ್ದಾರೆ.

    ದೀಪಿಕಾ ಪಡುಕೋಣೆ ಮದುವೆಯಾದ ನಂತರ ಚಾಪಾಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಅವರು ಫಾಕ್ಸ್ ಸ್ಟಾರ್ ಸ್ಟುಡಿಯೋ ಜೊತೆ ಸೇರಿ ನಿರ್ಮಿಸುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷದ ಜನವರಿ 10ರಂದು ಬಿಡುಗಡೆ ಆಗಲಿದೆ.

  • ಬಿಜೆಪಿ ಪರ ದೀಪ್‍ವೀರ್ ಪ್ರಚಾರ – ವೈರಲ್ ಫೋಟೋ ರಹಸ್ಯ ರಿವೀಲ್

    ಬಿಜೆಪಿ ಪರ ದೀಪ್‍ವೀರ್ ಪ್ರಚಾರ – ವೈರಲ್ ಫೋಟೋ ರಹಸ್ಯ ರಿವೀಲ್

    ಮುಂಬೈ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಗುರುವಾರ ಮುಗಿದಿದೆ. ದೇಶಾದ್ಯಂತ ರಾಜಕೀಯ ಮುಖಂಡರು ಅಬ್ಬರದ ಪ್ರಚಾರದ ಮೊರೆ ಹೋಗುತ್ತಿದ್ದಾರೆ. ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಸಿನಿಮಾ ಕಲಾವಿದರು ತಮ್ಮ ಪಕ್ಷದ ಪರವಾಗಿ ಸಿನಿ ಅಭಿಮಾನಿಗಳ ಜೊತೆ ಪ್ರಚಾರ ನಡೆಸುತ್ತಿದ್ದಾರೆ. ಕೆಲವು ಕಲಾವಿದರು ತಮ್ಮ ಆಪ್ತ ನಾಯಕರ ಪರವಾಗಿ ಮತ ಯಾಚನೆ ಮಾಡುತ್ತಿದ್ದಾರೆ. ಈ ಚುನಾವಣಾ ಸುದ್ದಿಗಳ ಜೊತೆಗೆ ಎರಡು ದಿನಗಳಿಂದ ಬಾಲಿವುಡ್ ಕ್ಯೂಟ್ ಜೋಡಿ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಿಜೆಪಿ ಶಾಲು ಹಾಕಿಕೊಂಡಿರುವ ಫೋಟೋ ವೈರಲ್ ಆಗಿದೆ.

    ಏಕ್ ಬಿಹಾರಿ ಸೌ ಪೆ ಬಿಹಾರಿ ಎಂಬ ಫೇಸ್‍ಬುಕ್ ಖಾತೆಯಲ್ಲಿ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಶಾಲು ಹಾಕಿಕೊಂಡಿರುವ ಫೋಟೋ ಅಪ್ಲೋಡ್ ಮಾಡಲಾಗಿದೆ. ಶಾಲ್ ಮೇಲೆ ‘ವೋಟ್ ಫಾರ್ ಬಿಜೆಪಿ’ ಎಂದು ಸಹ ಬರೆಯಲಾಗಿದೆ. ಫೋಟೋ ಕೆಳಗಡೆ ‘ಕಮಲದ ಬಟನ್ ಒತ್ತಿ, ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಿ’ ಎಂದು ದೊಡ್ಡ ಅಕ್ಷರದಲ್ಲಿ ಬರೆಯಲಾಗಿದೆ.

    ಎರಡು ದಿನಗಳ ಹಿಂದೆ ಈ ಫೋಟೋ ಅಪ್ಲೋಡ್ ಆಗಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ. ದೀಪ್‍ವೀರ್ ಮದುವೆ ಬಳಿಕ ಅಂದರೆ ನವೆಂಬರ್ 2018ರಲ್ಲಿ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಸರಿ ಶಾಲು ಹಾಕಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅಂದು ಕ್ಲಿಕ್ಕಿಸಿದ ಫೋಟೋದಲ್ಲಿ ಶಾಲು ಮೇಲೆ ಯಾವುದೇ ಅಕ್ಷರಗಳು ಇರಲಿಲ್ಲ. ಇದೀಗ ಅದೇ ಫೋಟೋದ ಶಾಲು ಮೇಲೆ ‘ವೋಟ್ ಫಾರ್ ಬಿಜೆಪಿ’ ಎಂಬ ಸಾಲು ಬರೆದು ಕೊಂಚ ಎಡಿಟ್ ಮಾಡಿ ಹರಿಬಿಡಲಾಗಿದೆ.

    ಕೆಲವು ದಿನಗಳ ಹಿಂದೆ ‘ಮಹಾರಾಷ್ಟ್ರೀಯನ್ ಪ್ರಶಸ್ತಿ’ ಸಮಾರಂಭದಲ್ಲಿ ಮಾತನಾಡಿದ್ದ ದೀಪಿಕಾ ಪಡುಕೋಣೆ, ನಾನು ರಾಜಕೀಯದಿಂದ ದೂರ ಇರಲು ಇಷ್ಟಪಡುತ್ತೇನೆ. ಒಂದು ವೇಳೆ ಮಂತ್ರಿಯಾದರೆ ಸ್ವಚ್ಛತೆಯ ಸಚಿವೆಯಾಗಿ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು.

  • ದೀಪಿಕಾ ಜೊತೆ ನಟಿಸದ್ದಕ್ಕೆ ಉತ್ತರ ಕೊಟ್ಟ ಸಲ್ಮಾನ್ ಖಾನ್

    ದೀಪಿಕಾ ಜೊತೆ ನಟಿಸದ್ದಕ್ಕೆ ಉತ್ತರ ಕೊಟ್ಟ ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಜೊತೆ ಇದುವರೆಗೂ ಸಿನಿಮಾ ಏಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

    ಇತ್ತೀಚೆಗೆ ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆಗ ಅವರನ್ನು ದೀಪಿಕಾ ಪಡುಕೋಣೆ ಜೊತೆ ಇದುವರೆಗೂ ಸಿನಿಮಾ ಏಕೆ ಮಾಡಿಲ್ಲ ಎಂದು ಪ್ರಶ್ನಿಸಲಾಗಿತ್ತು. ಆಗ ಸಲ್ಮಾನ್, ಹೌದು. ನನಗೂ ಕೂಡ ಆಶ್ಚರ್ಯವಾಗುತ್ತಿದೆ. ನಾನು ದೀಪಿಕಾ ಜೊತೆ ಯಾವಾಗ ಸಿನಿಮಾ ಮಾಡುತ್ತೇನೆ ಎಂದು ಮರು ಪ್ರಶ್ನೆ ಹಾಕಿದ್ದಾರೆ.

    ಅಲ್ಲದೆ ದೀಪಿಕಾ ಜೊತೆ ನಟಿಸಲು ಇದುವರೆಗೂ ನನಗೆ ಯಾರೂ ಕೇಳಿಲ್ಲ ಎಂದು ನಗುತ್ತಲೇ ಉತ್ತರಿಸಿದ್ದಾರೆ. ಬಳಿಕ ದೀಪಿಕಾ ಬಹುದೊಡ್ಡ ನಟಿ. ಹಾಗಾಗಿ ನನ್ನ ಜೊತೆ ಸಿನಿಮಾ ಮಾಡುವ ಅರ್ಹತೆ ಅವರಿಗಿದೆ. ಆದರೆ ಸದ್ಯಕ್ಕೆ ಅಂತಹ ಸುದ್ದಿ ಇಲ್ಲ ಎಂದು ಹೇಳಿದ್ದಾರೆ.

    ಸಲ್ಮಾನ್ ಖಾನ್ ಬಾಲಿವುಡ್ ಟಾಪ್ ನಟಿಯರ ಜೊತೆ ಸಿನಿಮಾಗಳನ್ನು ಮಾಡಿದ್ದಾರೆ. ಅಲ್ಲದೆ ಹೊಸ ಹೊಸ ಪ್ರತಿಭೆಗಳನ್ನು ತಮ್ಮ ಸಿನಿಮಾಗಳಿಗೆ ನಾಯಕಿ ಪಾತ್ರ ಮಾಡುವ ಅವಕಾಶಗಳು ನೀಡಿದ್ದಾರೆ. ಹೀಗಿರುವಾಗ ಅವರು ಬಾಲಿವುಡ್ ಟಾಪ್ ನಟಿ ದೀಪಿಕಾ ಜೊತೆ ಇದುವರೆಗೂ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.

    ಸಲ್ಮಾನ್ ಖಾನ್ ‘ಭಾರತ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್‍ಗೆ ನಾಯಕಿಯಾಗಿ ಕತ್ರಿನಾ ಕೈಫ್ ನಟಿಸಿದ್ದಾರೆ. ಈ ಚಿತ್ರದಲ್ಲಿ ತಬು, ದಿಶಾ ಪಠಾಣಿ, ಶಶಾಂಕ್ ಅರೋರಾ, ಜಾಕಿ ಶ್ರಾಫ್, ಸುನೀಲ್ ಗ್ರೋವರ್, ಆಸೀಫ್ ಶೇಖ್, ನೋರಾ ಫತೇಹಿ ಸೇರಿದಂತೆ ಹಲವರು ನಟಿಸಿದ್ದಾರೆ. ಜೂನ್ 5ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.

  • ದೀಪಿಕಾ ಹೊಸ ಲುಕ್ ನೋಡಿ ಅಭಿಮಾನಿಗಳು ಶಾಕ್!

    ದೀಪಿಕಾ ಹೊಸ ಲುಕ್ ನೋಡಿ ಅಭಿಮಾನಿಗಳು ಶಾಕ್!

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

    ದೀಪಿಕಾ ಪಡುಕೋಣೆ ಮದುವೆ ನಂತರ ‘ಚಪಾಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮಿ ಅಗರ್‍ವಾಲ್ ಜೀವನಚರಿತ್ರೆ ಆಗಿದ್ದು, ದೀಪಿಕಾ ಮಾಲತಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲಕ್ಷ್ಮಿ ಅಗರ್‍ವಾಲ್ ಈಗ ಟಿವಿ ನಿರೂಪಕಿ ಹಾಗೂ ಆ್ಯಸಿಡ್ ದಾಳಿ ತಡೆಯ ಪ್ರಚಾರಕಿ ಆಗಿದ್ದಾರೆ.

    ದೀಪಿಕಾ ಪಡುಕೋಣೆ ಚಪಾಕ್ ಚಿತ್ರದ ಫಸ್ಟ್ ಲುಕ್ ಅನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ “ಈ ಒಂದು ಪಾತ್ರ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಮಾಲತಿ ಇಂದಿನಿಂದ ಚಿತ್ರೀಕರಣ ಪ್ರಾರಂಭ” ಚಪಾಕ್ ಎಂದು ಹ್ಯಾಶ್‍ಟ್ಯಾಗ್ ಬಳಸಿ ಬಿಡುಗಡೆಯ ದಿನಾಂಕ ಜನವರಿ 10, 2020″ ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/deepikapadukone/status/1110022041950920710

    ಚಿತ್ರದ ನಿರ್ದೇಶಕಿ ಮೇಘನಾ ಗುಲ್ಜಾರ್ ಮಾಲತಿ ಪಾತ್ರವನ್ನು ವರ್ಣಿಸಿದ್ದಾರೆ. ಅವಳು ಧೈರ್ಯ, ಅವಳು ಭರವಸೆ, ಅವಳು ದೀಪಿಕಾ ಪಡುಕೋಣೆ ಚಾಪಕ್ ಚಿತ್ರದಲ್ಲಿ ಮಾಲತಿ ಪಾತ್ರ ನಿರ್ವಹಿಸುತ್ತಿದ್ದಾಳೆ. ಇಂದಿನಿಂದ ಚಿತ್ರೀಕರಣ ಪ್ರಾರಂಭವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

    ದೀಪಿಕಾ ಪಡುಕೋಣೆ ಮದುವೆಯಾದ ನಂತರ ಚಪಾಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಅವರು ಫಾಕ್ಸ್ ಸ್ಟಾರ್ ಸ್ಟುಡಿಯೋ ಜೊತೆ ಸೇರಿ ನಿರ್ಮಿಸುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷದ ಜನವರಿ 10ರಂದು ಬಿಡುಗಡೆ ಆಗಲಿದೆ.

  • ವಿಶೇಷ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟ ದೀಪಿಕಾ ಪಡುಕೋಣೆ

    ವಿಶೇಷ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟ ದೀಪಿಕಾ ಪಡುಕೋಣೆ

    ಮುಂಬೈ: ಬಾಲಿವುಡ್ ಗುಳಿಕೆನ್ನೆ ಚೆಲುವೆ, ಬಾಜೀರಾವ್ ನ ಮಸ್ತಾನಿ ದೀಪಿಕಾ ಪಡುಕೋಣೆ ವಿಶೇಷ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತೀಚೆಗೆ ಪತ್ರಿಕೆಯೊಂದರ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ನಟಿ ದೀಪಿಕಾ ಇಬ್ಬರು ಘಟಾನುಘಟಿ ನಾಯಕರ ಮುಂದೆ ಸ್ವಚ್ಛ ಭಾರತ ಮಂತ್ರಿಯಾಗಬೇಕೆಂಬ ಆಸೆಯನ್ನು ಹೊರಹಾಕಿದ್ದಾರೆ.

    ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವೀಸ್, ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಉಪಸ್ಥಿತರಿದ್ದರು. 2019ರ ವರ್ಷದ ಮಹಾರಾಷ್ಟ್ರೀಯನ್ ಪ್ರಶಸ್ತಿ ಸ್ವೀಕರಿಸಿದ ದೀಪಿಕಾ ಪಡುಕೋಣೆ, ನಾನು ಮೂಲತಃ ಕರ್ನಾಟಕದ ಬೆಂಗಳೂರಿನ ನಿವಾಸಿ. ನನ್ನ 18ನೇ ವಯಸ್ಸಿನಲ್ಲಿ ಹಲವು ಕನಸುಗಳನ್ನಿಟ್ಟುಕೊಂಡು ಸಣ್ಣದೊಂದು ಸೂಟ್‍ಕೇಸ್ ಹಿಡಿದುಕೊ0ಡು ಮುಂಬೈಗೆ ಬಂದೆ. ಕರ್ನಾಟಕ ನನ್ನ ತವರೂರು ಆದ್ರೆ, ಮಹಾರಾಷ್ಟ್ರ ನನ್ನ ಕರ್ಮಭೂಮಿ. ನನ್ನ ಕನಸುಗಳನ್ನು ನನಸು ಮಾಡಿದ್ದು ಮುಂಬೈ ಮಹಾನಗರಿ. ಅಂದಿನಿಂದ ಮುಂಬೈನಲ್ಲಿಯೇ ವಾಸವಾಗಿದ್ದೇನೆ. ಇಂದು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೀರೋದಕ್ಕೆ ಖುಷಿಯಾಗ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ಸ್ವಚ್ಛ ಭಾರತ್ ಮಂತ್ರಿ ಯಾಕೆ?
    ಚಿಕ್ಕವಳಿದ್ದಾಗ ನನ್ನ ಗೆಳತಿಯರು ತಮ್ಮ ಮನೆಗೆ ನನ್ನನ್ನು ಕರೆಯುತ್ತಿದ್ದರು. ನಾನು ಅಸ್ತವ್ಯಸ್ಥವಾಗಿದ್ದ ಅವರ ಕೋಣೆಯನ್ನು ಸ್ವಚ್ಛ ಮಾಡಿ ಬರುತ್ತಿದ್ದೆ. ಹೀಗೆ ಎಲ್ಲರೂ ನನ್ನ ಮನೆಗೆ ಬಾ ಎಂದು ಕರೆಯುತ್ತಿದ್ದರು. ಎಲ್ಲರಗಿಂತ ಭಿನ್ನ, ವಿಶೇಷ ವ್ಯಕ್ತಿಯಾಗಿದ್ದರಿಂದ ನನ್ನನ್ನು ಕರೆಯುತ್ತಾರೆ ಅಂತಾನೇ ತಿಳಿದಿದ್ದೆ. ಅವರೆಲ್ಲ ತಮ್ಮ ರೂಮ್ ಕ್ಲೀನ್ ಮಾಡಲು ನನ್ನನ್ನು ಕರೆಯುತ್ತಿದ್ದರು ಎಂಬುವುದು ತಿಳಿಯಿತು. ಆದರೂ ಮನೆಯೆಲ್ಲ ಕ್ಲೀನ್ ಮಾಡಿದಾಗ ಸಂತೃಪ್ತಿ ಸಿಗುತ್ತದೆ. ಶೂಟಿಂಗ್ ನಿಂದ ಬಳಿಕ ಮನೆಯನ್ನೆಲ್ಲ ಮೊದಲು ಸ್ವಚ್ಛ ಮಾಡುತ್ತೇನೆ. ರಾಜಕೀಯದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಒಂದು ವೇಳೆ ಮಂತ್ರಿಯಾದ್ರೆ ಸ್ವಚ್ಛ ಭಾರತ ಯೋಜನೆಗೆ ಮಿನಿಸ್ಟರ್ ಆಗಬೇಕೆಂಬ ಆಸೆ ಇದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಲ್ಲಿ ಬಾಯ್ ಜೊತೆ ಕಾರಿನಲ್ಲಿ ಕಾಣಿಸಿಕೊಂಡ ದೀಪಿಕಾ

    ಗಲ್ಲಿ ಬಾಯ್ ಜೊತೆ ಕಾರಿನಲ್ಲಿ ಕಾಣಿಸಿಕೊಂಡ ದೀಪಿಕಾ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರು ‘ಗಲ್ಲಿ ಬಾಯ್’ ರಣ್‍ವೀರ್ ಸಿಂಗ್ ಜೊತೆ ಕಾರಿನಲ್ಲೇ ರೊಮ್ಯಾನ್ಸ್ ಮಾಡಿದ್ದಾರೆ.

    ರಣ್‍ವೀರ್ ಸಿಂಗ್ ಹಾಗೂ ಅಲಿಯಾ ಭಟ್ ನಟನೆಯ ಗಲ್ಲಿ ಬಾಯ್ ಚಿತ್ರದ ಪ್ರೀಮಿಯರ್ ಶೋವನ್ನು ಬಾಲಿವುಡ್ ಕಲಾವಿದರಿಗಾಗಿ ಆಯೋಜಿಸಲಾಗಿತ್ತು. ಈ ವೇಳೆ ರಣ್‍ವೀರ್ ತಮ್ಮ ಪತ್ನಿ ದೀಪಿಕಾ ಜೊತೆ ಆಗಮಿಸಿದರೆ, ಅಲಿಯಾ ತಮ್ಮ ಗೆಳೆಯ ರಣ್‍ಬೀರ್ ಕಪೂರ್ ಜೊತೆ ಆಗಮಿಸಿದ್ದಾರೆ.

    ಗಲ್ಲಿ ಬಾಯ್ ಚಿತ್ರ ನೋಡಿ ಹಿಂತಿರುಗುವಾಗ ರಣ್‍ವೀರ್ ಹಾಗೂ ದೀಪಿಕಾ ಕಾರಿನಲ್ಲಿ ತಬ್ಬಿಕೊಂಡು ಕಿಸ್ ಮಾಡುತ್ತಿರುವುದು ಕ್ಯಾಮೆರಾ ಕಣ್ಣಿಗೆ ಸೆರೆ ಆಗಿದೆ. ಸದ್ಯ ಅವರಿಬ್ಬರು ಕಾರಿನಲ್ಲಿ ಜೊತೆಯಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ರಣ್‍ವೀರ್ ಹಾಗೂ ದೀಪಿಕಾ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಡ್ರೈವರ್ ಕಾರು ಚಲಾಯಿಸುತ್ತಿದ್ದರೆ, ಹಿಂದೆ ಕುಳಿತಿದ್ದ ರಣ್‍ವೀರ್ ಹಾಗೂ ದೀಪಿಕಾ ಮಾಧ್ಯಮದ ಕ್ಯಾಮೆರಾಗಳನ್ನು ನೋಡಿ ನಗುತ್ತಿದ್ದರು.

    ಗಲ್ಲಿ ಬಾಯ್ ಚಿತ್ರದ ಪ್ರಿಮಿಯರ್ ಶೋಗೆ ಶ್ವೇತಾ ಬಚ್ಚನ್ ನಂದ, ಅನನ್ಯ ಪಾಂಡೆ, ಕಿರಣ್ ರಾವ್, ದಿಯಾ ಮಿರ್ಜಾ, ಕುಬ್ರಾ ಸೇಠ್ ಹಾಗೂ ಅಲಿ ಫೆಜಲ್ ಆಗಮಿಸಿದ್ದರು. ಜೊತೆಗೆ ಚಿತ್ರದ ನಿರ್ದೇಶಕರಾದ ಜೋಯಾ ಅಖ್ತರ್ ಅವರ ತಂದೆ ಜಾವೀದ್ ಅಖ್ತರ್ ಹಾಗೂ ಸಹೋದರ ಫಾರ್ಹಾನ್ ಅಖ್ತರ್ ಕೂಡ ಆಗಮಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv