Tag: Deepika Padukone

  • ನಿಮ್ಮ ಪ್ರಶ್ನೆಗೆ ಉತ್ತರಿಸಿದ್ರೆ ರಣ್‍ವೀರ್ ಮನೆಗೆ ಬರಲ್ಲ: ದೀಪಿಕಾ

    ನಿಮ್ಮ ಪ್ರಶ್ನೆಗೆ ಉತ್ತರಿಸಿದ್ರೆ ರಣ್‍ವೀರ್ ಮನೆಗೆ ಬರಲ್ಲ: ದೀಪಿಕಾ

    ಮುಂಬೈ: ಗುಳಿಕೆನ್ನೆ ಬೆಡಗಿ, ರಣ್‍ವೀರ್ ಮಡದಿ ದೀಪಿಕಾ ಪಡುಕೋಣೆ ತಮ್ಮ ಸರಳ ನಟನೆಯ ಮೂಲಕವೇ ಗುರುತಿಸಿಕೊಂಡ ನಟಿ. ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಭಿಮಾನಿಯ ಪ್ರಶ್ನೆಗೆ ದೀಪಿಕಾ ನೀಡಿದ ಉತ್ತರ ಎಲ್ಲರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿದೆ. ಸದ್ಯ ದೀಪಿಕಾ ಜಾಣ ಉತ್ತರದ ವಿಡಿಯೋ ಬಾಲಿವುಡ್ ಗಲ್ಲಿಗಳಲ್ಲಿ ಸದ್ದು ಮಾಡುತ್ತಿದೆ.

    ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರ ಪುತ್ರಿಯಾಗಿರುವ ದೀಪಿಕಾ ಆಟದಲ್ಲಿಯೂ ಗುರುತಿಸಿಕೊಂಡಿದ್ದರು. ಈ ಹಿಂದಿನ ಹಲವು ಸಂದರ್ಶನಗಳಲ್ಲಿ ತಮ್ಮ ಆಟದ ಬಗ್ಗೆ ದೀಪಿಕಾ ಹೇಳಿಕೊಂಡಿದ್ದರು. ಈ ಹಿಂದೆ ರಣ್‍ವೀರ್ ಜೊತೆ ಒಂದು ಬಾರಿ ಬ್ಯಾಡ್ಮಿಂಟನ್ ಆಡಿದ್ದೇನೆ ಎಂದು ತಿಳಿಸಿದ್ದರು. ಗುರುವಾರದ ಸುದ್ದಿಗೋಷ್ಠಿಯಲ್ಲಿ ರಣ್‍ವೀರ್ ಬ್ಯಾಡ್ಮಿಂಟನ್ ಅಂಗಳದಲ್ಲಿ ನಿಮ್ಮನ್ನು ಎದುರಿಸುವ ಧೈರ್ಯ ಮಾಡಿದ್ದಾರಾ? ಪಂದ್ಯ ಆಡಿದ್ದರೆ ಇಬ್ಬರಲ್ಲಿ ಗೆದ್ದಿದ್ಯಾರು ಎಂದು ಪ್ರಶ್ನೆ ಮಾಡಿದ್ದರು.

    ದೀಪಿಕಾ ಉತ್ತರ ಹೀಗಿತ್ತು: ರಣ್‍ವೀರ್ ವಿರುದ್ಧ ಆಡಿರುವ ಪಂದ್ಯದಲ್ಲಿ ನಾನೇ ಗೆದ್ದಿರುತ್ತೇನೆ. ನಿಮಗೆ ನಾನು ಪಂದ್ಯದ ಸ್ಕೋರ್ ಹೇಳಬಹುದು. ಸ್ಕೋರ್ ಹೇಳಿದ್ರೆ ಹೈದರಾಬಾದ್ ನಲ್ಲಿರುವ ಪತಿ ರಣ್‍ವೀರ್ ವಾಪಾಸ್ ಮನೆಗೆ ಬರಲ್ಲ. ಹಾಗಾಗಿ ಪಂದ್ಯದ ಸ್ಕೋರ್ ರಹಸ್ಯ ಹೇಳಲ್ಲ ಎಂದು ನಕ್ಕರು.

    https://www.instagram.com/p/B3aF4-NAnPH/

    2018ರ ನವೆಂಬರ್ 14 ಮತ್ತು 15ರಂದು ಇಟಲಿಯಲ್ಲಿ ರಣ್‍ವೀರ್ ಮತ್ತು ದೀಪಿಕಾ ಸಾಂಸರಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಬೆಂಗಳೂರು ಮತ್ತು ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಜೋಡಿ ಆಯೋಜಿಸಿತ್ತು. ಮದುವೆ ಬಳಿಕ ರಣ್‍ವೀರ್ ನಟನೆಯ ಸಾಲು ಸಾಲು ಸಿನಿಮಾಗಳು ತೆರೆಕಂಡು ಗಲ್ಲಾ ಪೆಟ್ಟಿಗೆಯನ್ನು ದೋಚಿಕೊಂಡಿವೆ. ಸದ್ಯ ರಣ್‍ವೀರ್ ನಟನೆಯ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಜೀವನಾಧರಿತ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ಫೋಟೋಗಳು ಸದ್ದು ಮಾಡುತ್ತಿವೆ. ಇತ್ತ ದೀಪಿಕಾ ನಟನೆಯ ‘ಚಾಪಕ್’ ಬಿಡುಗಡೆಗೆ ಸಿದ್ಧಗೊಂಡಿದೆ.

  • ಮಧ್ಯರಾತ್ರಿ ಶಾರೂಕ್‍ರನ್ನು ನೆನಪಿಸಿಕೊಂಡು ದೀಪಿಕಾ ಟ್ವೀಟ್

    ಮಧ್ಯರಾತ್ರಿ ಶಾರೂಕ್‍ರನ್ನು ನೆನಪಿಸಿಕೊಂಡು ದೀಪಿಕಾ ಟ್ವೀಟ್

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಮಧ್ಯರಾತ್ರಿ ಕಿಂಗ್‍ಖಾನ್ ಶಾರೂಕ್ ಅವರನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ.

    ಶಾರೂಕ್ ಖಾನ್ ಅವರು ತಮ್ಮ ಟ್ವಟ್ಟರಿನಲ್ಲಿ ಬ್ಲಾಕ್ ಅಂಡ್ ವೈಟ್ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಶಾರೂಕ್ ತಲೆಕೂದಲು ಚದುರಿ ಹೋಗಿದೆ. ಅಲ್ಲದೆ, “ನನ್ನ ಲೈಬ್ರರಿ ಕ್ಲೀನ್ ಮಾಡಲು ಇಡೀ ರಾತ್ರಿ ಬೇಕಾಯಿತು. ಪುಸ್ತಕಗಳಲ್ಲಿ ವಾಸನೆ, ಧೂಳು ಮತ್ತು ಸಂತೋಷವನ್ನು ಕಂಡೆ” ಎಂದು ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್ ನೋಡಿದ ದೀಪಿಕಾ, “ಹಲೋ. ನೀವು ನನಗೆ ಫೋನ್ ಮಾಡಬೇಕಿತ್ತು” ಎಂದು ಮಧ್ಯರಾತ್ರಿ ಸುಮಾರು 1.20ಕ್ಕೆ ರೀ-ಟ್ವೀಟ್ ಮಾಡಿದ್ದಾರೆ. ದೀಪಿಕಾ ಮಧ್ಯರಾತ್ರಿ ಟ್ವೀಟ್ ಮಾಡಿರುವುದನ್ನು ನೋಡಿದ ಅಭಿಮಾನಿಗಳು ಅವರ ಕಾಲೆಳೆಯುತ್ತಿದ್ದಾರೆ.

    https://twitter.com/deepikapadukone/status/1178759077851258887?ref_src=twsrc%5Etfw%7Ctwcamp%5Etweetembed%7Ctwterm%5E1178759077851258887&ref_url=https%3A%2F%2Fhindi.news18.com%2Fnews%2Fentertainment%2Fbollywood-deepika-padukone-tweeted-to-shahrukh-khan-you-were-supposed-to-call-me-2471620.html

    ಶಾರೂಕ್ ಹಾಗೂ ದೀಪಿಕಾ ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್ ಪ್ರೆಸ್’, ಹಾಗೂ ‘ಹ್ಯಾಪಿ ನ್ಯೂ ಇಯರ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಶಾರೂಕ್ ಖಾನ್ ಕಳೆದ ವರ್ಷ ಬಿಡುಗಡೆಯಾದ ‘ಝೀರೋ’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅವರು ಯಾವ ಚಿತ್ರದಲ್ಲೂ ನಟಿಸಿಲ್ಲ.

    ಇತ್ತ ದೀಪಿಕಾ ಪಡುಕೋಣೆ, ಮೇಘನಾ ಗುಲ್ಝಾರ್ ನಿರ್ದೇಶಿಸುತ್ತಿರುವ `ಚಾಪಕ್’ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮೀ ಅಗರ್ ವಾಲ್ ಜೀವನಚರಿತ್ರೆ ಆಗಿದೆ. ಈ ಚಿತ್ರದ ನಂತರ ದೀಪಿಕಾ ಪಡುಕೊಣೆ ತಮ್ಮ ಪತಿ, ನಟ ರಣ್‍ವೀರ್ ಸಿಂಗ್ ಅವರ ಜೊತೆ ’83’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ತನಗೆ ಮದುವೆಯಾಗಿರುವ ವಿಷಯವನ್ನೇ ಮರೆತ ದೀಪಿಕಾ: ವಿಡಿಯೋ

    ತನಗೆ ಮದುವೆಯಾಗಿರುವ ವಿಷಯವನ್ನೇ ಮರೆತ ದೀಪಿಕಾ: ವಿಡಿಯೋ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರು ತಮಗೆ ಮದುವೆ ಆಗಿರುವ ವಿಷಯವನ್ನೇ ಮರೆತು ಹೋಗಿದ್ದಾರೆ. ನಾನು ಮದುವೆಯಾಗಿದ್ದೇನೆ ಎಂಬ ವಿಷಯವನ್ನೇ ಮರೆತು ಹೋಗಿದ್ದೇನೆ ಎಂದು ಹೇಳಿದ ವಿಡಿಯೋವೊಂದು ವೈರಲ್ ಆಗುತ್ತಿದೆ.

    ಇತ್ತೀಚೆಗೆ ದೀಪಿಕಾ ಅವರ ಎನ್‍ಜಿಒ(ಸರ್ಕಾರೇತರ ಸಂಸ್ಥೆ) ‘ಲಿವ್, ಲಾಫ್, ಲವ್’ ಲೆಕ್ಚರ್ ಸೀರಿಸ್ ಕಾರ್ಯಕ್ರಮವನ್ನು ಲಾಂಚ್ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ದೀಪಿಕಾ ತಮ್ಮ ಬಗ್ಗೆ ಮಾತನಾಡುತ್ತಾ, “ನಾನು ಒಬ್ಬಳು ಮಗಳು, ನಾನು ಒಬ್ಬಳು ಸಹೋದರಿ, ನಾನು ಒಬ್ಬಳು ನಟಿ” ಎಂದು ಹೇಳಿ ಸುಮ್ಮನಾಗುತ್ತಾರೆ.

    ದೀಪಿಕಾ ಅವರು ಮಾತು ನಿಲ್ಲಿಸುತ್ತಿದ್ದಂತೆ ಕಾರ್ಯಕ್ರಮದ ನಿರೂಪಕ ‘ಪತ್ನಿ’ ಎಂದು ಹೇಳುತ್ತಾರೆ. ನಿರೂಪಕನ ಮಾತು ಕೇಳಿ ದೀಪಿಕಾ ನಗುತ್ತಾ, “ನಾನು ಮರೆತು ಹೋದೆ. ನಾನು ಒಬ್ಬಳು ಪತ್ನಿ ಕೂಡ” ಎಂದು ಹೇಳಿದ್ದಾರೆ. ಸದ್ಯ ದೀಪಿಕಾ ಅವರು ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

    ಈ ಕಾರ್ಯಕ್ರಮದಲ್ಲಿ ದೀಪಿಕಾ ಅವರು ಮಾನಸಿಕ ಆರೋಗ್ಯದ ಬಗ್ಗೆ ನಡೆಸಿದ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಈಗ ಈ ವಿಚಾರದ ಬಗ್ಗೆ ಮಾತುಕತೆ ಪ್ರಾರಂಭವಾಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಇನ್ನು ಬಹಳ ದೂರ ಹೋಗಬೇಕಾಗುತ್ತದೆ ಎಂದು ಹೇಳಿದರು.

    ಸದ್ಯ ದೀಪಿಕಾ, ಮೇಘನಾ ಗುಲ್ಝಾರ್ ನಿರ್ದೇಶಿಸುತ್ತಿರುವ `ಚಾಪಕ್’ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮೀ ಅಗರ್‍ವಾಲ್ ಜೀವನಚರಿತ್ರೆ ಆಗಿದೆ. ಈ ಚಿತ್ರದ ನಂತರ ದೀಪಿಕಾ ಪಡುಕೊಣೆ ತಮ್ಮ ಪತಿ, ನಟ ರಣ್‍ವೀರ್ ಸಿಂಗ್ ಅವರ ಜೊತೆ ’83’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ಪಿ.ವಿ.ಸಿಂಧು ಬಯೋಪಿಕ್‍ನಲ್ಲಿ ಮಿಂಚಲಿದ್ದಾರೆ ದೀಪಿಕಾ

    ಪಿ.ವಿ.ಸಿಂಧು ಬಯೋಪಿಕ್‍ನಲ್ಲಿ ಮಿಂಚಲಿದ್ದಾರೆ ದೀಪಿಕಾ

    ಬೆಂಗಳೂರು: ಭಾರತದ ಬ್ಯಾಡ್ಮಿಂಟನ್ ತಾರೆ, ಚಿನ್ನದ ಹುಡುಗಿ ಪಿ.ವಿ.ಸಿಂಧು ಬಯೋಪಿಕ್‍ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡಕೋಣೆ ನಟಿಸಲಿದ್ದಾರೆ.

    ಈ ಕುರಿತು ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಪಿ.ವಿ.ಸಿಂಧು ಅವರು, ಬಾಲಿವುಡ್ ನಟ ಸೋನು ಸೂದ್ ಇತ್ತೀಚೆಗೆ ಚಿತ್ರದ ಹಕ್ಕನ್ನು ಪಡೆದುಕೊಂಡಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ನೀಡಿದ್ದೇನೆ. ಅಷ್ಟೇ ಅಲ್ಲದೆ ಬಯೋಪಿಕ್ ಅನ್ನು ಚೆನ್ನಾಗಿ ತೆರೆಯ ಮೇಲೆ ತರಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

    ನನ್ನ ಪಾತ್ರವನ್ನು ದೀಪಿಕಾ ಪಡುಕೋಣೆ ನಿರ್ವಹಿಸಿದರೆ ಉತ್ತಮವಾಗಿರುತ್ತದೆ. ಅವರು ಉತ್ತಮ ನಟಿ. ಈಗಾಗಲೇ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಎಲ್ಲರಂತೆ ನಾನೂ ಸಹ ಸಿನಿಮಾ ನೋಡಲು ಎದುರು ನೋಡುತ್ತಿದ್ದೇನೆ ಎಂದು ಸಿಂಧು ಹೇಳಿದ್ದಾರೆ.

    ನನ್ನ ಬಗ್ಗೆ ಸಿನಿಮಾ ನಿರ್ಮಾಣವಾಗುತ್ತಿರವುದು ಖುಷಿ ತಂದಿದೆ. ಆದರೆ ನನ್ನ ಮೊದಲ ಆದ್ಯತೆ ಬ್ಯಾಡ್ಮಿಂಟನ್. ಹೀಗಾಗಿ ಅಭ್ಯಾಸ ಕೂಡ ನಡೆಸುತ್ತಿದ್ದೇನೆ. ನಟಿ ದೀಪಿಕಾ ಪಡುಕೋಣೆ ಸ್ವತಃ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ್ತಿ ಎನ್ನುವುದು ನನಗೆ ತಿಳಿದಿದೆ. ಅವರ ತಂದೆ, ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರು ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅವರು ಬ್ಯಾಡ್ಮಿಂಟನ್ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಪುತ್ರಿ, ನಟಿ ದೀಪಿಕಾ ಪಡುಕೋಣೆ ಈ ಪಾತ್ರಕ್ಕೆ ಸೂಕ್ತ ಎನ್ನುವುದು ನನ್ನ ಅಭಿಪ್ರಾಯ. ಆದರೆ ಅಂತಿಮ ನಿರ್ಧಾರ ಸಿನಿಮಾ ನಿರ್ಮಾಣ ಮಾಡುವವರದ್ದು ಎಂದು ತಿಳಿಸಿದ್ದಾರೆ.

    ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಆಟಗಾರ್ತಿ ಪಿ.ವಿ.ಸಿಂಧು, ಇತಿಹಾಸ ಸೃಷ್ಟಿಸಿದ್ದಾರೆ. 2016ರ ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧು, ಸದ್ಯ ಮುಂದಿನ ವರ್ಷದ ಒಲಿಂಪಿಕ್ಸ್‍ನಲ್ಲಿ ಚಿನ್ನಕ್ಕೆ ಗುರಿಯಿಟ್ಟಿದ್ದು, ಆ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಈ ಹಿಂದೆ ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದ್ದಾಗಲೇ ಅವರ ಜೀವನಾಧಾರಿತ ಸಿನಿಮಾ ನಿರ್ಮಾಣದ ಸುದ್ದಿ ಹರಿದಾಡುತ್ತಿತ್ತು. ಆದರೆ ಅದರ ಬಗ್ಗೆ ಯಾವುದೇ ಸ್ಪಷ್ಟವಾದ ಸುದ್ದಿ ಎಲ್ಲೂ ಹೊರ ಬರಲೇ ಇಲ್ಲ. ಈಗ ಸಿನಿಮಾ ನಿರ್ಮಾಣವು ಸ್ಪಷ್ಟವಾಗಿದೆ.

    ಸಿಂಧು ಅವರ ತರಬೇತುದಾರ ಪುಲ್ಲೇಲ ಗೋಪಿಚಂದ್ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸುವ ಸಾಧ್ಯತೆಯಿದೆ. ಸಿನಿಮಾ ಆರಂಭಿಕ ಹಂತದಲ್ಲಿದ್ದು, ಪಾತ್ರದ ಆಯ್ಕೆ ನಡೆಯುತ್ತಿದೆ.

    ತಮ್ಮ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅವರು ಅಭಿನಯಿಸುವ ಕುರಿತು ಪಿ.ವಿ.ಸಿಂಧು ಅವರ ತರಬೇತುದಾರ ಪುಲ್ಲೇಲ್ಲಾ ಗೋಪಿಚಂದ್ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಅಕ್ಷಯ್ ಎಂದರೆ ನನಗೆ ಇಷ್ಟ. ಅವರು ನನ್ನ ಪಾತ್ರದಲ್ಲಿ ಅಭಿನಯಿಸಿದರೆ ತುಂಬಾ ಚೆನ್ನಾಗಿರುತ್ತದೆ ಎಂದು ತಿಳಿಸಿದ್ದಾರೆ.

  • ತಡರಾತ್ರಿ ಮಾಜಿ ಗೆಳೆಯನ ಜೊತೆ ಕಾಣಿಸಿಕೊಂಡ ದೀಪಿಕಾ

    ತಡರಾತ್ರಿ ಮಾಜಿ ಗೆಳೆಯನ ಜೊತೆ ಕಾಣಿಸಿಕೊಂಡ ದೀಪಿಕಾ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಕಳೆದ ರಾತ್ರಿ ತಮ್ಮ ಮಾಜಿ ಗೆಳೆಯ, ನಟ ರಣ್‍ಬೀರ್ ಕಪೂರ್ ಅವರ ಜೊತೆ ನಿರ್ದೇಶಕ ಲವ್ ರಂಜನ್ ಅವರ ಮನೆಯ ಹೊರಗೆ ಕಾಣಿಸಿಕೊಂಡಿದ್ದಾರೆ.

    ರಣ್‍ಬೀರ್ ಕಪೂರ್ ನಿರ್ದೇಶಕ ಲವ್ ರಂಜನ್ ಅವರ ಇನ್ನು ಹೆಸರಿಡದ ಚಿತ್ರದಲ್ಲಿ ನಟಿಸುವುದಾಗಿ ಕಳೆದ ವರ್ಷ ಹೇಳಿದ್ದರು. ಅಲ್ಲದೆ ಈ ಚಿತ್ರದಲ್ಲಿ ನಟ ಅಜಯ್ ದೇವಗನ್ ಅವರು ಕೂಡ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು.

    ಈಗ ದೀಪಿಕಾ ಪಡುಕೋಣೆ ನಿರ್ದೇಶಕ ಲವ್ ರಂಜನ್ ಮನೆಯಿಂದ ಹೊರ ಬರುವುದನ್ನು ಕಂಡು ಅವರು ರಣ್‍ಬೀರ್ ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ದೀಪಿಕಾ ಆಗಲಿ, ರಣ್‍ಬೀರ್ ಆಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

    ರಣ್‍ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಇದುವರೆಗೂ ಬಾಲಿವುಡ್‍ನಲ್ಲಿ ಬಚನಾ ಹೇ ಹಸಿನೋ, ಯೇ ಜವಾನಿ ಹೇ ದಿವಾನಿ ಹಾಗೂ ತಮಾಶಾ ಚಿತ್ರದಲ್ಲಿ ನಟಿಸಿದ್ದಾರೆ. ಈಗ ಈ ಚಿತ್ರ ಅಧಿಕೃತವಾದರೆ ಇದು ಅವರ ಕಾಂಬಿನೇಷನ್ ನಲ್ಲಿ ಮೂಡಿಬರುವ ನಾಲ್ಕನೇ ಚಿತ್ರ ಆಗಲಿದೆ.

    ದೀಪಿಕಾ ಈಗ ತಮ್ಮ ಪತಿ, ನಟ ರಣ್‍ವೀರ್ ಸಿಂಗ್ ಅವರ ಜೊತೆ ’83’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ರಣ್‍ಬೀರ್ ಕಪೂರ್ ಅವರು ನಟಿ ಅಲಿಯಾ ಭಟ್ ಜೊತೆ ‘ಬ್ರಹ್ಮಸ್ತ್ರಾ’ ಚಿತ್ರದ ಶೂಟಿಂಗ್‍ನಲ್ಲಿ ತೊಡಗಿಕೊಂಡಿದ್ದಾರೆ.

  • ಟ್ರೋಲಾಗುತ್ತಿದೆ ದೀಪಿಕಾ ಪಡುಕೋಣೆ ಮೂಗು

    ಟ್ರೋಲಾಗುತ್ತಿದೆ ದೀಪಿಕಾ ಪಡುಕೋಣೆ ಮೂಗು

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳನ್ನು ನೋಡಿ ಜನರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಇತ್ತೀಚೆಗೆ ದೀಪಿಕಾ ಪಡುಕೋಣೆ ಜ್ಯುವೆಲ್ಲರಿ ಕಂಪನಿಗಾಗಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಶೂಟ್‍ನಲ್ಲಿ ದೀಪಿಕಾ ಬಿಳಿ ಬಣ್ಣ ಬುಸಿನೆಸ್ ಸೂಟ್ ಹಾಗೂ ಹಸಿರು ಬಣ್ಣದ ಉಡುಪು ಧರಿಸಿ ಅದಕ್ಕೆ ವಜ್ರದ ಆಭರಣವನ್ನು ಧರಿಸಿದ್ದರು. ಈ ಫೋಟೋ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ. ಆದರೆ ಸಾಮಾಜಿಕ ಜಾಲತಾಣದ ಬಳಕೆದಾರರು ಈ ಫೋಟೋವನ್ನು ದೀಪಿಕಾರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಈ ಫೋಟೋಶೂಟ್‍ನಲ್ಲಿ ದೀಪಿಕಾ ಅವರ ಮೇಕಪ್ ಸರಿ ಆಗಿಲ್ಲ. ಹಾಗಾಗಿ ಜನರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ‘ಕೆಲವರು ನಿಮ್ಮ ಮೂಗಿಗೆ ಏನಾಗಿದೆ?’ ಎಂದು ಕಾಮೆಂಟ್ ಮಾಡಿದರೆ, ಮತ್ತೆ ‘ಕೆಲವರು ಮೇಕಪ್ ಆರ್ಟಿಸ್ಟ್ ಮೂಗಿನ ಮೇಲಿದ್ದ ಮೇಕಪ್ ತೆಗೆಯಲು ಮರೆತಿದ್ದಾನೆ’ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಇನ್ನೂ ಕೆಲವರು ದೀಪಿಕಾ ಈ ಫೋಟೋಗೆ ಹೆಚ್ಚು ಫೋಟೋಶಾಪ್ ಮಾಡಿಸಿದ್ದಾರೆ ಎಂದು ಕಾಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

    ದೀಪಿಕಾ ಪಡುಕೋಣೆ ಮೇಘನಾ ಗುಲ್ಝಾರ್ ನಿರ್ದೇಶಿಸುತ್ತಿರುವ `ಚಾಪಕ್’ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮೀ ಅಗರ್‍ವಾಲ್ ಜೀವನಚರಿತ್ರೆ ಆಗಿದೆ. ಈ ಚಿತ್ರದ ಚಿತ್ರೀಕರಣ ಮುಗಿಸಿದ ಬಳಿಕ ದೀಪಿಕಾ ಪಡುಕೊಣೆ ತಮ್ಮ ಪತಿ, ನಟ ರಣ್‍ವೀರ್ ಸಿಂಗ್ ಅವರ ಜೊತೆ ’83’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ದೀಪಿಕಾ ಲಂಡನ್‍ನಲ್ಲಿ ತಮ್ಮ ಪತಿ ರಣ್‍ವೀರ್ ಜೊತೆ ’83’ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ.

  • ಪತ್ನಿಯಲ್ಲಿ ಮಗುವಿನ ಮುಗ್ಧತೆ ಇದೆ, ನಾನು ಮಾತ್ರ ನೋಡಬಲ್ಲೆ: ರಣ್‍ವೀರ್ ಸಿಂಗ್

    ಪತ್ನಿಯಲ್ಲಿ ಮಗುವಿನ ಮುಗ್ಧತೆ ಇದೆ, ನಾನು ಮಾತ್ರ ನೋಡಬಲ್ಲೆ: ರಣ್‍ವೀರ್ ಸಿಂಗ್

    ಮುಂಬೈ: ದೀಪಿಕಾಳಲ್ಲಿ ಮಗುವಿನಂತಹ ಮುಗ್ಧತೆ ಇದೆ. ಇದು ಕೇವಲ ನಾನು ಮಾತ್ರ ನೋಡಬಲ್ಲೆ ಎಂದು ಬಾಲಿವುಡ್ ನಟ ರಣ್‍ವೀರ್ ಸಿಂಗ್ ಹೇಳಿದ್ದಾರೆ.

    ಇತ್ತೀಚೆಗೆ ರಣ್‍ವೀರ್ ಸಿಂಗ್ ಫೆಮಿನಾ ಮ್ಯಾಗಜೀನ್‍ಗೆ ಸಂದರ್ಶನ ನೀಡಿದ್ದರು. ಈ ವೇಳೆ ನೀವು ದೀಪಿಕಾ ಜೊತೆ ಜಗಳವಾಡುತ್ತೀರಾ ಎಂದು ಪ್ರಶ್ನೆ ಕೇಳಲಾಯಿತು. ಆಗ ರಣ್‍ವೀರ್ ಸಿಂಗ್, ನಾವಿಬ್ಬರು ಎಂದಿಗೂ ಜಗಳವಾಡುವುದಿಲ್ಲ. ನಮ್ಮಿಬ್ಬರ ಸಂಬಂಧ ಸಮಯದ ಜೊತೆ ಉತ್ತಮವಾಗುತ್ತೆ. ನಮ್ಮಿಬ್ಬರ ನಡುವೆ ಕೇವಲ ಪ್ರೀತಿ ಇದೆ. ಸಂಶಯಕ್ಕೆ ನಮ್ಮಿಬ್ಬರ ಮಧ್ಯೆ ಜಾಗ ಇಲ್ಲ. ನಾವಿಬ್ಬರು ತುಂಬಾ ಖುಷಿಯಾಗಿದ್ದೇವೆ. ನಾವಿಬ್ಬರು ನಮ್ಮ ಅನುಭವವನ್ನು ಹಂಚಿಕೊಂಡು ತುಂಬಾ ನಗುತ್ತೇವೆ ಎಂದರು.

    ಬಳಿಕ ರಣ್‍ವೀರ್, ದೀಪಿಕಾ ಒಳಗೆ ಮಗುವಿನ ಮುಗ್ಧತೆ ಇದೆ. ಇದು ಕೇವಲ ನಾನು ನೋಡಬಹುದೇ ಹೊರತು ಯಾರು ನೋಡಲು ಸಾಧ್ಯವಿಲ್ಲ. ದೀಪಿಕಾ ನನ್ನ ಜೀವನದ ಮುಖ್ಯ ವ್ಯಕ್ತಿ ಎಂದು ಪತ್ನಿ ದೀಪಿಕಾ ಪಡುಕೋಣೆ ಅವರನ್ನು ಹೊಗಳಿದ್ದಾರೆ.

    ಇತ್ತೀಚೆಗೆ ದೀಪಿಕಾ ತಮ್ಮ ಪತಿ ರಣ್‍ವೀರ್ ಅವರ 34ನೇ ಹುಟ್ಟುಹಬ್ಬವನ್ನು ಲಂಡನ್‍ನಲ್ಲಿ ಆಚರಿಸಿಕೊಂಡರು. ಈ ವೇಳೆ ದೀಪಿಕಾ, ರಣ್‍ವೀರ್ ಬಾಲ್ಯದಲ್ಲಿ ಐಸ್ ತಿನ್ನುತ್ತಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಲಂಡನ್‍ನಲ್ಲಿ ದೀಪಿಕಾ ಹಾಗೂ ರಣ್‍ವೀರ್ ’83’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಬಿಡುವಿನ ಸಮಯದಲ್ಲಿ ರಣ್‍ವೀರ್, ದೀಪಿಕಾ ಫೋಟೋವನ್ನು ಕ್ಲಿಕ್ಕಿಸಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    High on Cake! ???????? @deepikapadukone #happybirthdaytome

    A post shared by Ranveer Singh (@ranveersingh) on

  • ವಿಮಾನ ನಿಲ್ದಾಣದಲ್ಲಿ ದೀಪಿಕಾ ನಡೆಗೆ ಫ್ಯಾನ್ಸ್ ಫಿದಾ: ವಿಡಿಯೋ ನೋಡಿ

    ವಿಮಾನ ನಿಲ್ದಾಣದಲ್ಲಿ ದೀಪಿಕಾ ನಡೆಗೆ ಫ್ಯಾನ್ಸ್ ಫಿದಾ: ವಿಡಿಯೋ ನೋಡಿ

    ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆ ನಡೆದುಕೊಂಡ ರೀತಿ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಇತ್ತೀಚೆಗೆ ದೀಪಿಕಾ ತಮ್ಮ ತಂದೆ ಪ್ರಕಾಶ್ ಪಡುಕೋಣೆ ಜೊತೆ ಮುಂಬೈ ವಿಮಾನ ನಿಲ್ದಾಣದೊಳಗೆ ಹೋಗುತ್ತಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ದೀಪಿಕಾ ಪಡುಕೋಣೆ ಅವರಿಗೆ ತಮ್ಮ ಐಡಿ ಕಾರ್ಡ್ ತೋರಿಸಲು ಹೇಳಿದ್ದಾರೆ.

    ಸಿಬ್ಬಂದಿಯ ಧ್ವನಿ ಕೇಳಿ ದೀಪಿಕಾ ‘ನಿಮಗೆ ಐಡಿ ಕಾರ್ಡ್ ಬೇಕಾ’ ಎಂದು ಹೇಳಿದ್ದಾರೆ. ಅಲ್ಲದೆ ಸಿಬ್ಬಂದಿ ಬಳಿ ಬಂದು ತಮ್ಮ ಐಡಿ ಕಾರ್ಡ್ ತೋರಿಸಿದ್ದಾರೆ. ಈ ವೇಳೆ ದೀಪಿಕಾ ಬೇಸರ ಹಾಗೂ ಕೋಪ ಮಾಡಿಕೊಳ್ಳದೆ, ಅಲ್ಲದೆ ದೊಡ್ಡ ಸ್ಟಾರ್ ನಟಿ ಎಂಬ ಅಹಂಕಾರವೂ ಇಲ್ಲದೆ ಐಡಿ ಕಾರ್ಡ್ ತೋರಿಸಿದ್ದಾರೆ. ದೀಪಿಕಾ ಅವರ ಈ ನಡತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

     

    View this post on Instagram

     

    Thy shall always obey rules ???? #deepikapadukone

    A post shared by Viral Bhayani (@viralbhayani) on

    ಈ ವಿಡಿಯೋ ನೋಡಿ ಕೆಲವು ಅಭಿಮಾನಿಗಳು, ‘ದೀಪಿಕಾ ತುಂಬಾ ಸರಳ ವ್ಯಕ್ತಿ. ಹಾಗಾಗಿ ಜನರು ಅವರನ್ನು ಇಷ್ಟಪಡುತ್ತಾರೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ದೀಪಿಕಾ ಅವರ ಈ ನಡವಳಿಕೆ ನೋಡಿ ಅವರನ್ನು ‘ಕ್ವೀನ್’ ಎಂದು ಕರೆಯುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.

    ದೀಪಿಕಾ ಈಗ ಮೇಘನಾ ಗುಲ್ಝಾರ್ ನಿರ್ದೇಶಿಸುತ್ತಿರುವ ‘ಚಾಪಕ್’ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮೀ ಅಗರ್ ವಾಲ್ ಜೀವನಚರಿತ್ರೆ ಆಗಿದೆ. ಇದಾದ ಬಳಿಕ ದೀಪಿಕಾ ತಮ್ಮ ಪತಿ, ನಟ ರಣ್‍ವೀರ್ ಸಿಂಗ್ ಅವರ ಜೊತೆ ’83’ ಚಿತ್ರದಲ್ಲಿ ನಟಿಸಲಿದ್ದಾರೆ.

  • ಕ್ರಿಕೆಟ್ ಬ್ಯಾಟ್‍ನಿಂದ ಪತಿಗೆ ಹೊಡೆದ ದೀಪಿಕಾ: ವಿಡಿಯೋ ನೋಡಿ

    ಕ್ರಿಕೆಟ್ ಬ್ಯಾಟ್‍ನಿಂದ ಪತಿಗೆ ಹೊಡೆದ ದೀಪಿಕಾ: ವಿಡಿಯೋ ನೋಡಿ

    ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣ್‍ವೀರ್ ಸಿಂಗ್‍ಗೆ ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದಿದ್ದಾರೆ. ಈ ವಿಡಿಯೋವನ್ನು ರಣ್‍ವೀರ್ ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

    ರಣ್‍ವೀರ್ ಸಿಂಗ್ ತಮ್ಮ ಪತ್ನಿ ದೀಪಿಕಾ ಪಡುಕೋಣೆ ಕ್ರಿಕೆಟ್ ಬ್ಯಾಟ್‍ನಿಂದ ಬೂಮರಾಂಗ್ ವಿಡಿಯೋ ಮಾಡಿ ಅದನ್ನು ಟ್ವಿಟ್ಟರ್ ಹಾಗೂ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, “ನನ್ನ ಜೀವನದ ಕತೆ ಇದು – ರಿಯಲ್ ಹಾಗೂ ರೀಲ್” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

    ರಣ್‍ವೀರ್ ಸಿಂಗ್ ಮಾಜಿ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಬಯೋಪಿಕ್‍ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಪಿಲ್ ದೇವ್ ಪತ್ನಿಯಾಗಿ ದೀಪಿಕಾ ಪಡುಕೋಣೆ ರೋಮಿ ದೇವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವಿಷಯವನ್ನು ದೀಪ್‍ವೀರ್ ನಿರ್ದೇಶಕ ಕಬೀರ್ ಖಾನ್ ಜೊತೆಯಿರುವ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ದೀಪಿಕಾ ತಮ್ಮ ಪತಿ ರಣ್‍ವೀರ್ ಸಿಂಗ್ ಪೋಸ್ಟ್ ಗೆ, ‘ನಂಬಲಾಗದ ಗೌರವ ನೀಡಿದ್ದಕ್ಕೆ ಧನ್ಯವಾದಗಳು ಕಬೀರ್ ಖಾನ್’ ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ರಣ್‍ವೀರ್ ‘ಈ ಬಾರಿ ಕೊನೆಯಲ್ಲಿ ನಾವಿಬ್ಬರು ಸಾಯುವುದಿಲ್ಲ, ಯೇ’ ಎಂದು ಕಮೆಂಟ್ ಮಾಡಿದ್ದಾರೆ.

    ಈ ಮೊದಲು ದೀಪಿಕಾ ಹಾಗೂ ರಣ್‍ವೀರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ರಾಮ್‍ಲೀಲಾ’, ‘ಬಾಜಿರಾವ್ ಮಸ್ತಾನಿ’ ಹಾಗೂ ‘ಪದ್ಮಾವತ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದಲ್ಲಿ ಕೊನೆಯದಾಗಿ ಇಬ್ಬರು ಸಾವನ್ನಪ್ಪುವ ಕ್ಲೈಮ್ಯಾಕ್ಸ್ ಇರುತಿತ್ತು. ಈ ಚಿತ್ರದಲ್ಲಿ ಆ ಕ್ಲೈಮ್ಯಾಕ್ಸ್ ಇಲ್ಲದಿರುವ ಕಾರಣ ರಣ್‍ವೀರ್ ಖುಷಿಯಾಗಿದ್ದಾರೆ.

  • ಪತಿಯಂತೆ ಉಡುಪು ಧರಿಸಿ ಟ್ರೋಲ್ ಆದ ದೀಪಿಕಾ ಪಡುಕೋಣೆ

    ಪತಿಯಂತೆ ಉಡುಪು ಧರಿಸಿ ಟ್ರೋಲ್ ಆದ ದೀಪಿಕಾ ಪಡುಕೋಣೆ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಪತಿ, ನಟ ರಣ್‍ವೀರ್ ಸಿಂಗ್‍ರಂತೆ ಉಡುಪು ಧರಿಸಿ ಟ್ರೋಲ್ ಆಗುತ್ತಿದ್ದಾರೆ.

    ದೀಪಿಕಾ ಪಡುಕೋಣೆ ತನ್ನ ಪತಿ ರಣ್‍ವೀರ್ ಸಿಂಗ್‍ರನ್ನು ಭೇಟಿ ಆಗಲು ಲಂಡನ್‍ಗೆ ಹೋಗುತ್ತಿದ್ದರು. ಈ ವೇಳೆ ಅವರು ವಿಮಾನ ನಿಲ್ದಾಣದಲ್ಲಿ ವಿಭಿನ್ನ ಗೆಟಪ್‍ನಲ್ಲಿ ಮಿಂಚಿದ್ದಾರೆ. ದೀಪಿಕಾ ಅವರ ಈ ಲುಕ್ ನೋಡಿ ಅಭಿಮಾನಿಗಳು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.

    ವಿಮಾನ ನಿಲ್ದಾಣಕ್ಕೆ ದೀಪಿಕಾ ಬಿಳಿ ಬಣ್ಣದ ಟೀ-ಶರ್ಟ್ ಧರಿಸಿ ಅದಕ್ಕೆ ನಿಯಾನ್ ಪ್ಯಾಂಟ್ ಹಾಗೂ ಲಾಂಗ್ ಜಾಕೆಟ್ ಧರಿಸಿದ್ದರು. ಅಲ್ಲದೆ ಈ ಉಡುಪಿಗ ಅವರು ನ್ಯೂಡ್ ಮೇಕಪ್ ಹಾಕಿದ್ದರು. ದೀಪಿಕಾರ ಈ ಲುಕ್ ನೋಡಿ ಅಭಿಮಾನಿಗಳು ಆಶ್ಚರ್ಯಗೊಂಡರು.

    ಈ ಫೋಟೋ ನೋಡಿ ಅಭಿಮಾನಿಗಳು ದೀಪಿಕಾ ತನ್ನ ಪತಿ ರಣ್‍ವೀರ್ ಸಿಂಗ್ ಜೊತೆ ಇದ್ದು, ಅವರಂತೆ ಪ್ರಭಾವಗೊಂಡಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ವಾಸ್ತವವಾಗಿ ಈಗ ನೀವು ಮಿಸೆಸ್ ರಣ್‍ವೀರ್ ಸಿಂಗ್ ರೀತಿ ಕಾಣುತ್ತಿದ್ದೀರಿ ಎಂದು ಕಮೆಂಟ್ ಮಾಡುವ ಮೂಲಕ ಟ್ರೋಲ್ ಆಗುತ್ತಿದ್ದಾರೆ.

    ಮತ್ತೆ ಕೆಲವರು ಅವರಿಬ್ಬರಿಗೆ ಮಕ್ಕಳಿದ್ದು ಹಾಗೂ ಅವರು ಈ ರೀತಿ ಉಡುಪು ಧರಿಸಿದರೆ ಇಡೀ ಕುಟುಂಬ ಸರ್ಕಸ್ ಕಂಪನಿಯಂತೆ ಕಾಣುತ್ತೆ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಕೆಲವರು ದೀಪಿಕಾ ನಿಮ್ಮ ಈ ಲುಕ್ ಕಣ್ಣಿಗೆ ಹೊಡೆಯುತ್ತಿದೆ ಎಂದು ಬರೆದಿದ್ದಾರೆ.

    ರಣ್‍ವೀರ್ ಸಿಂಗ್ ಈ ನಡುವೆ ಲಂಡನ್‍ನಲ್ಲಿ ತಮ್ಮ ಮುಂಬರುವ ’83’ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ರಣ್‍ವೀರ್ ಸಿಂಗ್ ಅವರ ಜೊತೆ ಮಾಜಿ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಕೂಡ ಇದ್ದಾರೆ. ರಣ್‍ವೀರ್ ತಮ್ಮ ಚಿತ್ರೀಕರಣದ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.