Tag: Deepika Padukone

  • ರೀಲ್, ರಿಯಲ್‍ನಲ್ಲಿಯೂ ನೀವು ಬೋಲ್ಡ್: ದೀಪಿಕಾಗೆ ಧನ್ಯವಾದ ಹೇಳಿದ ಪ್ರಕಾಶ್ ರೈ

    ರೀಲ್, ರಿಯಲ್‍ನಲ್ಲಿಯೂ ನೀವು ಬೋಲ್ಡ್: ದೀಪಿಕಾಗೆ ಧನ್ಯವಾದ ಹೇಳಿದ ಪ್ರಕಾಶ್ ರೈ

    ಬೆಂಗಳೂರು: ದೀಪಿಕಾ ಪಡುಕೋಣೆ ನೀವು ರೀಲ್ ಮತ್ತು ರಿಯಲ್ ನಲ್ಲಿಯೂ ಬೋಲ್ಡ್ ಎಂದು ಫೋಟೋ ಹಾಕಿ ನಟ ಪ್ರಕಾಶ್ ರೈ ಮೆಚ್ಚುಗೆ ತಿಳಿಸಿದ್ದಾರೆ.

    ದೀಪಿಕಾ ಪಡುಕೋಣೆ ಅವರ ನಟನೆಯ ಪದ್ಮಾವತ್, ಬಾಜೀರಾವ್ ಮಸ್ತಾನಿ, ರಾಮ್‍ಲೀಲಾ ಮತ್ತು ಛಪಾಕ್ ಸಿನಿಮಾದ ಫೋಟೋ ಹಾಕಿದ್ದಾರೆ. ಕೆಳಗೆ ಜೆಎನ್‍ಯುಗೆ ಭೇಟಿ ನೀಡಿರುವ ಫೋಟೋ ಹಾಕಿದ್ದಾರೆ. ರೀಲ್ ಮತ್ತು ರಿಯಲ್ ಲೈಫ್ ನಲ್ಲಿ ನೀವು ಧೈರ್ಯವಂತೆ (ಬೋಲ್ಡ್) ಎಂದು ಬರೆಯಲಾಗಿದೆ. ನಿಜವಾದ ಭಾರತೀಯಳಾಗಿರುವುದಕ್ಕೆ ದೀಪಿಕಾ ಪಡುಕೋಣೆ ಅವರಿಗೆ ಧನ್ಯವಾದ ಎಂದು ಪ್ರಕಾಶ್ ರೈ ಬರೆದುಕೊಂಡಿದ್ದಾರೆ.

    ಪ್ರಕಾಶ್ ರೈ ಟ್ವೀಟ್ ಗೆ ಪರ-ವಿರೋಧ ಚರ್ಚೆಗಳ ಆರಂಭಗೊಂಡಿವೆ. ಕೆಲವರು ದೀಪಿಕಾ ಪಡುಕೋಣೆ ಅವರ ನಡೆಗೆ ತಮ್ಮ ಬೆಂಬಲ ಸೂಚಿಸಿದ್ರೆ, ಮತ್ತೆ ಕೆಲವರು ಸಿನಿಮಾ ಪ್ರಚಾರಕ್ಕಾಗಿ ದೀಪಿಕಾ ಜೆಎನ್‍ಯು ವಿಷಯವನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಅಲ್ಲಿನ ಶಿಕ್ಷಕರ ಮೇಲೆ ದಾಳಿಯಾದ ನಂತರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್‍ಯುಗೆ ಮಂಗಳವಾರ ಸಂಜೆ ಸುಮಾರು 7.45 ಕ್ಕೆ ಜೆಎನ್‍ಯು ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದರು. 10 ನಿಮಿಷಗಳ ಕಾಲ ಯೂನಿವರ್ಸಿಟಿಯಲ್ಲಿ ಇದ್ದ ದೀಪಿಕಾ, ಬಳಿಕ ಏನೂ ಪ್ರತಿಕ್ರಿಯೆನೀಡದೆ ವಾಪಸ್ ಆಗಿದ್ದರು.

    ಕಳೆದ ಬಾನುವಾರ ಜೆಎನ್‍ಯು ವಿಶ್ವವಿದ್ಯಾಲಯದ ಕ್ಯಾಂಪಸ್‍ಗೆ ನುಗಿದ್ದ ಮುಸುಕು ದಾರಿಗಳು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಜೆಎನ್‍ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶಿ ಘೋಷ್, ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಸೇರಿದಂತೆ ಹಲವು ವಿದ್ಯಾರ್ಥಿಗಳು ಗಾಯಾಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

  • ದೀಪಿಕಾ ಪಡುಕೋಣೆಯವರಿಗೆ ಆಲ್ ದಿ ಬೆಸ್ಟ್, ಆದ್ರೆ: ಪ್ರತಾಪ್ ಸಿಂಹ

    ದೀಪಿಕಾ ಪಡುಕೋಣೆಯವರಿಗೆ ಆಲ್ ದಿ ಬೆಸ್ಟ್, ಆದ್ರೆ: ಪ್ರತಾಪ್ ಸಿಂಹ

    ಮೈಸೂರು: ಜೆಎನ್‍ಯುಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಭೇಟಿ ವಿಚಾರಕ್ಕೆ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.

    ಮಾಧ್ಯಮದವರ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ದೀಪಿಕಾ ಪಡುಕೋಣೆಯವರ ಹೊಸ ಚಿತ್ರ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಅವರಿಗೆ ಬೆಸ್ಟ್ ಆಫ್ ಲಕ್ ಹೇಳುತ್ತೇನೆ. ಅವರು ಒಳ್ಳೆಯ ವಿಚಾರಗಳಿಗೆ ಬೆಂಬಲ ಸೂಚಿಸಿದರೆ ಒಳಿತು. ಒಳ್ಳೆಯ ಸಿನಿಮಾ ಮಾಡಿದರೆ ಜನ ಮೆಚ್ಚಿ ನೋಡುತ್ತಾರೆ ಎಂದರು.

    ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ದೇಶದಲ್ಲಿ ಕೇವಲ ಜೆಎನ್‍ಯು, ಜಾಮಿಯಾ ಮಿಯಾ ವಿವಿಗಳು ಮಾತ್ರ ಇಲ್ಲ. ದೇಶಾದ್ಯಂತ 600ಕ್ಕೂ ಹೆಚ್ಚು ವಿವಿಗಳಿವೆ ಅವುಗಳತ್ತವೂ ನೋಡಲಿ. ಹೋರಾಟಗಳಲ್ಲಿ ಭಾಗಿಯಾಗಬೇಡಿ ಎಂದು ಹೇಳುವುದಿಲ್ಲ. ಒಳ್ಳೆಯ ವಿಚಾರಗಳಿಗೆ ಬೆಂಬಲ ಕೊಡಲಿ ಎಂದು ನಟಿ ದೀಪಿಕಾ ಪಡುಕೋಣೆಗೆ ಟಾಂಗ್ ನೀಡಿದರು.

    ದೆಹಲಿಯ ಜೆಎನ್‍ಯುನಲ್ಲಿ ನಡೆದಿರುವ ಗೂಂಡಾಗಿರಿಗೆ ಸಂಬಂಧಿಸಿದಂತೆ ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ. ಘಟನೆಯಲ್ಲಿ ಎಬಿವಿಪಿ ಕಾರ್ಯಕರ್ತರಿಗೂ ಪೆಟ್ಟು ಬಿದ್ದಿದೆ. ಇದೀಗ ಸಿನಿಮಾ ನಟ-ನಟಿಯರನ್ನು ಕರೆತಂದು ಪ್ರಕರಣಕ್ಕೆ ಬೇರೆ ರೂಪ ಕೊಡುವ ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಿದರು.

    ಜವಾಹರಲಾಲ್ ನೆಹರು ಸ್ಥಾಪಿಸಿದ ಜೆಎನ್‍ಯುಗೆ ಸ್ವತಃ ಇಂದಿರಾಗಾಂಧಿಯವರು ಪ್ರವೇಶಿಸಲು ಅನುಮತಿ ನೀಡಿರಲಿಲ್ಲ. ಇಂದಿರಾ ಗಾಂಧಿಯವರಿಗೂ ಭಾಷಣ ಮಾಡದಂತೆ ಅಡ್ಡಿ ಪಡಿಸಲಾಗಿತ್ತು. ಪರಿಣಾಮ 45 ದಿನಗಳ ಕಾಲ ಜೆಎನ್‍ಯು ವನ್ನು ಇಂದಿರಾಗಾಂಧಿಯವರು ಬಂದ್ ಮಾಡಿಸಿದ್ದರು. ಇದು ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

  • ಕಪ್ಪು ವಸ್ತ್ರಧರಿಸಿ ಜೆಎನ್‍ಯುಗೆ ಭೇಟಿ ನೀಡಿದ ದೀಪಿಕಾ ಪಡುಕೋಣೆ

    ಕಪ್ಪು ವಸ್ತ್ರಧರಿಸಿ ಜೆಎನ್‍ಯುಗೆ ಭೇಟಿ ನೀಡಿದ ದೀಪಿಕಾ ಪಡುಕೋಣೆ

    ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಅಲ್ಲಿನ ಶಿಕ್ಷಕರ ಮೇಲೆ ದಾಳಿಯಾದ ನಂತರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್‍ಯುಗೆ ಭೇಟಿ ನೀಡಿದ್ದಾರೆ.

    ಬಿಡುಗಡೆಗೆ ಸಿದ್ಧವಾಗಿರುವ ತಮ್ಮ ಛಪಾಕ್ ಸಿನಿಮಾದ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ್ದ ದೀಪಿಕಾ ಪಡುಕೋಣೆಯವರು, ಇಂದು ಸಂಜೆ ಸುಮಾರು 7.45 ಕ್ಕೆ ಜೆಎನ್‍ಯು ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದರು. 10 ನಿಮಿಷಗಳ ಕಾಲ ಯೂನಿವರ್ಸಿಟಿಯಲ್ಲಿ ಇದ್ದ ದೀಪಿಕಾ, ಬಳಿಕ ಏನೂ ಪ್ರತಿಕ್ರಿಯೇ ನೀಡದೆ ವಾಪಸ್ ಆಗಿದ್ದಾರೆ.

    https://twitter.com/filmesthete/status/1214556983786786817

    ಕಳೆದ ಬಾನುವಾರ ಜೆಎನ್‍ಯು ವಿಶ್ವವಿದ್ಯಾಲಯದ ಕ್ಯಾಂಪಸ್‍ಗೆ ನುಗಿದ್ದ ಮುಸುಕು ದಾರಿಗಳು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಜೆಎನ್‍ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶಿ ಘೋಷ್, ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಸೇರಿದಂತೆ ಹಲವು ವಿದ್ಯಾರ್ಥಿಗಳು ಗಾಯಾಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಈ ಘಟನೆಯಾದ ಬಳಿಕ ಬಹಳಷ್ಟು ಮಂದಿ ಬಾಲಿವುಡ್ ನಟ ನಟಿಯರು ಸಾಮಾಜಿಕ ಜಾಲತಾಣದ ಮೂಲಕ ಹಲ್ಲೆಯನ್ನು ಖಂಡಿಸಿ, ವಿದ್ಯಾರ್ಥಿಗಳ ಪರ ನಿಂತಿದ್ದರು. ಈಗ ಛಪಾಕ್ ಸಿನಿಮಾದ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ್ದ ದೀಪಿಕಾ, ವಿದ್ಯಾರ್ಥಿಗಳ ಒಗ್ಗಟ್ಟಿನ ಸಂಕೇತವಾದ ಕಪ್ಪು ಬಣ್ಣದ ಬಟ್ಟೆತೊಟ್ಟು ಯುನಿವರ್ಸಿಟಿಗೆ ಭೇಟಿ ನೀಡಿದ್ದಾರೆ. ತಮ್ಮ ಬೆಂಬಲಿಕ್ಕೆ ಬಂದ ಪದ್ಮಾವತಿಯನ್ನು ವಿದ್ಯಾರ್ಥಿಗಳು ಅಜಾದಿ ಎಂಬ ಘೋಷಣೆ ಕೂಗುವ ಮೂಲಕ ಬರಮಾಡಿಕೊಂಡಿದ್ದಾರೆ. ಜೆಎನ್‍ಯು ಗೆ ದೀಪಿಕಾ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

    ಜೆಎನ್‍ಯುನಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ದಾಳಿಯನ್ನು ಖಂಡಿಸಿ ಸೋಮವಾರ ಮುಂಬೈನ ಗೇಟ್ ವೇ ಆಫ್ ಇಂಡಿಯಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಾಲಿವುಡ್ ತಾರೆಗಳಾದ ತಾಪ್ಸಿ ಪನ್ನು, ಅನುರಾಗ್ ಕಶ್ಯಪ್, ಜೋಯಾ ಅಖ್ತರ್, ವಿಶಾಲ್ ಭರದ್ವಾಜ್, ಅನುಭವ್ ಸಿನ್ಹಾ, ರಿಚಾ ಚಾಧಾ ಮತ್ತು ಅಲಿ ಫಜಲ್ ಸೇರಿದಂತೆ ಬಾಲಿವುಡ್ ಗಣ್ಯರು ಭಾಗವಹಿಸಿದ್ದರು.

    ಹಲ್ಲೆಗೊಳಗಾದ ಐಶಿ ಘೋಷ್ ಅವರು ಘಟನೆಯ ಬಗ್ಗೆ ಮಾತನಾಡಿ, ಮಾಸ್ಕ್ ಧರಿಸಿಕೊಂಡ ಬಂದಿದ್ದ ಗುಂಪು ನಮ್ಮ ಮೇಲೆ ದಾಳಿ ಮಾಡಿದೆ ಎಂದು ಹೇಳಿದ್ದರು. ಫೀ ಹೆಚ್ಚಳ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಾದಿ ತಪ್ಪಿಸಲು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಪ್ರಯತ್ನಿಸುತ್ತಿದ್ದು, ಘಟನೆ ಹಿಂದೆ ಎಬಿವಿಪಿ ಕೈವಾಡವಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಇದಕ್ಕೆ ಪ್ರತ್ಯಾರೋಪ ಮಾಡಿದ್ದ ಎಬಿವಿಪಿ, ಘಟನೆಯಲ್ಲಿ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ದಾಳಿ ಆಗಿದ್ದು, 25 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. 11 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಘಟನೆ ಹಿಂದೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಕೈವಾಡ ಇದೆ ಎಂದು ಟ್ವೀಟ್ ಮಾಡಿತ್ತು.

    ಆದರೆ ಇಂದು ಬೆಳಗ್ಗೆ ಜೆಎನ್‍ಯು ಕ್ಯಾಂಪಸ್ ನಲ್ಲಿ ನಡೆದ ಹಿಂಸಾಚಾರದ ಜವಾಬ್ದಾರಿಯನ್ನು `ಹಿಂದೂ ರಕ್ಷಾ ದಳ’ ಸಂಘಟನೆ ಹೊತ್ತುಕೊಂಡಿದೆ. ಸಂಘಟನೆಯ ಅಧ್ಯಕ್ಷ ಪಿಂಕಿ ಚೌಧರಿ ಸ್ವತಃ ಘಟನೆಯು ಜವಾಬ್ದಾರಿ ಹೊತ್ತುಕೊಂಡಿದ್ದು ಕ್ಯಾಂಪಸ್ ನಲ್ಲಿ ರಾಷ್ಟ್ರ ವಿರೋಧಿ ಚಟುವಟಿಗಳು ನಡೆಯುತ್ತಿದ್ದು ಅದನ್ನು ನಾವು ಸಹಿಸುವುದಿಲ್ಲ ಎಂದಿದ್ದಾರೆ.

    ಸೋಮವಾರ ರಾತ್ರಿ ಘಟನೆಯ ಸಂಬಂಧ ಸೋಷಿಯಲ್ ಮಿಡಿಯಾಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಮಾತನಾಡಿರುವ ಪಿಂಕಿ ಚೌಧರಿ ಕ್ಯಾಂಪಸ್‍ನಲ್ಲಿ ನಡೆದ ಹಿಂಸಾಚಾರದ ಹಿಂದೆ ನಮ್ಮ ಸಂಘಟನೆಯ ಪಾತ್ರವಿದೆ. ನಮ್ಮ ಸಂಘಟನೆಯ ಸದಸ್ಯರು ಈ ಘಟನೆಯಲ್ಲಿ ಭಾಗಿಯಾಗಿದ್ದು ನಾವು ಈ ದಾಳಿಯನ್ನು ಒಪ್ಪಿಕೊಳುತ್ತೇವೆ ಎಂದು ಹೇಳಿದ್ದಾರೆ.

  • ಆ್ಯಸಿಡ್ ಸಂತ್ರಸ್ತರ ಜೊತೆ ದೀಪಿಕಾ ಹುಟ್ಟುಹಬ್ಬ ಆಚರಣೆ

    ಆ್ಯಸಿಡ್ ಸಂತ್ರಸ್ತರ ಜೊತೆ ದೀಪಿಕಾ ಹುಟ್ಟುಹಬ್ಬ ಆಚರಣೆ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಜನವರಿ 5ರಂದು ತಮ್ಮ ಹುಟ್ಟುಹಬ್ಬವನ್ನು ಆ್ಯಸಿಡ್ ಸಂತ್ರಸ್ತರ ಜೊತೆ ಆಚರಿಸಲು ನಿರ್ಧರಿಸಿದ್ದಾರೆ.

    ದೀಪಿಕಾ ತಮ್ಮ ಹುಟ್ಟುಹಬ್ಬದಂದು ಲಕ್ನೋನ ಶಿರೋಜ್ ಕೆಫೆಯಲ್ಲಿ ಕಾಲ ಕಳೆಯಲಿದ್ದಾರೆ. ಶಿರೋಜ್ ಕೆಫೆಯನ್ನು ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರು ನಡೆಸುತ್ತಿದ್ದಾರೆ. ಕೆಫೆಯಲ್ಲಿ ಸಮಯ ಕಳೆದ ಬಳಿಕ ದೀಪಿಕಾ ಇನ್ನು ಕೆಲವು ಮಂದಿಯನ್ನು ಭೇಟಿ ಆಗಲಿದ್ದಾರೆ.

    ತಮ್ಮ ಮುಂಬರುವ ‘ಚಾಪಕ್’ ಚಿತ್ರದಲ್ಲಿ ದೀಪಿಕಾ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ನೈಜ ಕತೆಯಾಗಿದ್ದು, ಆ್ಯಸಿಡ್ ದಾಳಿಗೆ ಒಳಗಾದ ಲಕ್ಷ್ಮಿ ಅಗರ್‌ವಾಲ್ ಪಾತ್ರದಲ್ಲಿ ದೀಪಿಕಾ ನಟಿಸಿದ್ದಾರೆ. ಲಕ್ಷ್ಮಿ ಅಗರ್‌ವಾಲ್ ಈಗ ಟಿವಿ ನಿರೂಪಕಿ ಹಾಗೂ ಆ್ಯಸಿಡ್ ದಾಳಿ ತಡೆಯ ಪ್ರಚಾರಕಿ ಆಗಿದ್ದಾರೆ.

    ಮದುವೆ ಬಳಿಕ ದೀಪಿಕಾ ನಟಿಸಿರುವ ಮೊದಲ ಚಿತ್ರ ಇದಾಗಿದ್ದು, ಈ ಬಾರಿ ಆ್ಯಸಿಡ್ ದಾಳಿಗೆ ಒಳಗಾದ ಮಾಲತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ವಿಷಯಗಳಿಗೆ ಚಿತ್ರ ಸದ್ದು ಮಾಡಿಕೊಂಡು ಬರುತ್ತಿದೆ.

    ಈ ಚಿತ್ರವನ್ನು ನಿರ್ದೇಶಕಿ ಮೇಘನಾ ಗುಲ್ಜಾರ್ ನಿರ್ದೇಶನ ಮಾಡಿದ್ದು, ಫಾಕ್ಸ್ ಸ್ಟಾರ್ ಸ್ಟುಡಿಯೋ ನಿರ್ಮಿಸಿದೆ. ಈ ಚಿತ್ರ ಜನವರಿ 10ರಂದು ಬಿಡುಗಡೆ ಆಗುತ್ತಿದ್ದು, ಸದ್ಯ ದೀಪಿಕಾ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ.

  • ರಣ್‍ವೀರ್ ಬಾತ್‍ರೂಂ ಡ್ಯಾನ್ಸ್ ವಿಡಿಯೋ ವೈರಲ್

    ರಣ್‍ವೀರ್ ಬಾತ್‍ರೂಂ ಡ್ಯಾನ್ಸ್ ವಿಡಿಯೋ ವೈರಲ್

    ಮುಂಬೈ: ಬಾಲಿವುಡ್‍ನ ಬಾಜೀರಾವ್, ರಣ್‍ವೀರ್ ಸಿಂಗ್ ಸದಾ ತಮ್ಮ ವಿಭಿನ್ನ ಡ್ರೆಸ್‍ಗಳಿಂದಲೇ ಸುದ್ದಿ ಆಗುತ್ತಿರುತ್ತಾರೆ. ಇದೀಗ ಕಾಜೋಲ್ ನಟನೆಯ ಹಾಡಿಗೆ ಬಾತ್‍ರೂಮಿನಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಬಾಲಿವುಡ್‍ನ ಸೂಪರ್ ಹಿಟ್ ಡಿಡಿಎಲ್‍ಜೆ (ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೇ) ಸಿನಿಮಾದ ‘ಆಯೇ ಮೇರೆ ಖಾಬೋ’ ಹಾಡಿಗೆ ರಣ್‍ವೀರ್ ಬಾತ್‍ರೂಮಿನಲ್ಲಿ ಸಖತ್ ಹೆಜ್ಜೆ ಹಾಕಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ದು, ಸದ್ಯ ವೈರಲ್ ಆಗುತ್ತಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

    ರಣ್‍ವೀರ್ ಸಿಂಗ್ ನಟನೆ ’83’ ಸಿನಿಮಾ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಚಿತ್ರತಂಡ ಪೋಸ್ಟ್ ಪ್ರೊಡೆಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ರಣ್‍ವೀರ್ ಸಿಂಗ್ ನಟಿಸಿದ್ದಾರೆ. ಸಿನಿಮಾದಲ್ಲಿ ರಣ್‍ವೀರ್ ಗೆ ಜೊತೆಯಾಗಿ ಪತ್ನಿ ದೀಪಿಕಾ ಜೋಡಿಯಾಗಿದ್ದಾರೆ. ಮದುವೆ ಬಳಿಕ ಇಬ್ಬರು ಜೊತೆಯಾಗಿ ನಟಿಸಿರುವ ಮೊದಲ ಚಿತ್ರ ಇದಾಗಿದೆ. ಈ ಹಿಂದೆ ರಾಮ್‍ಲೀಲಾ, ಬಾಜೀರಾವ್ ಮಸ್ತಾನಿ, ಪದ್ಮಾವತ್ ಚಿತ್ರಗಳಲ್ಲಿ ದೀಪಿಕಾ ಮತ್ತು ರಣ್‍ವೀರ್ ಜೊತೆಯಾಗಿ ನಟಿಸಿದ್ದರು. ಇತ್ತ ದೀಪಿಕಾ ನಟನೆಯ ಛಪಾಕ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಬಾಲಿವುಡ್ ಲೋಕದಲ್ಲಿ ಸಂಚಲನ ಮೂಡಿಸಿದೆ.

    https://www.instagram.com/p/B6XJvb8BGjr/

  • ಆ್ಯಸಿಡ್ ದಾಳಿಗೊಳಗಾದ ಯುವತಿಯ ನೈಜ ಕಥೆಯೇ ಛಪಾಕ್

    ಆ್ಯಸಿಡ್ ದಾಳಿಗೊಳಗಾದ ಯುವತಿಯ ನೈಜ ಕಥೆಯೇ ಛಪಾಕ್

    – ಯುವತಿಯರಿಗೆ ಧೈರ್ಯ ತುಂಬುತ್ತೆ ಛಪಾಕ್ ಟ್ರೈಲರ್
    – ಹೊಸ ಪಾತ್ರದಲ್ಲಿ ದೀಪಿಕಾ ಪಡುಕೋಣೆ

    ಮುಂಬೈ: ಪದ್ಮಾವತ್ ಬಳಿಕ ದೀಪಿಕಾ ಪಡುಕೋಣೆ ನಟನೆಯ ಛಪಾಕ್ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಟ್ರೈಲರ್ ರಿಲೀಸ್ ಗೊಂಡ ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಮಹಾಪೂರವೇ ಚಿತ್ರತಂಡಕ್ಕೆ ಹರಿದು ಬರುತ್ತಿದೆ. ಟ್ರೈಲರ್ ನೋಡುಗರ ರೋಮಗಳಲ್ಲಿ ರೋಮಾಂಚನ ತರುವಲ್ಲಿ ಯಶಸ್ವಿಯಾಗಿದ್ದು, ಕೊನೆಗೆ ನಾವು ಸಿನಿಮಾ ನೋಡಲೇಬೇಕೆಂಬ ತುಡಿತವನ್ನು ಉಂಟು ಮಾಡುವಲ್ಲಿ ಛಪಾಕ್ ಯಶಸ್ವಿಯಾಗಿದೆ.

    ಮದುವೆ ಬಳಿಕ ದೀಪಿಕಾ ನಟಿಸಿರುವ ಮೊದಲ ಚಿತ್ರ ಇದಾಗಿದ್ದು, ಈ ಬಾರಿ ಆ್ಯಸಿಡ್ ದಾಳಿಗೆ ಒಳಗಾದ ಮಾಲತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ವಿಷಯಗಳಿಗೆ ಚಿತ್ರ ಸದ್ದು ಮಾಡಿಕೊಂಡು ಬರುತ್ತಿದೆ. ದೀಪಿಕಾ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾದ ದಿನವೇ ಚಿತ್ರ ಭರವಸೆಯನ್ನು ಮೂಡಿಸಿತ್ತು. ಪ್ರತಿ ಸಿನಿಮಾಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ದೀಪಿಕಾ ಮತ್ತೊಮ್ಮೆ ಆ ವಿಷಯದಲ್ಲಿ ಸೈ ಅನ್ನಿಸಿಕೊಂಡಿದ್ದಾರೆ.

    https://twitter.com/deepikapadukone/status/1204312689977253888

    ಓದಬೇಕೆಂಬ ದೊಡ್ಡ ಕನಸು ಕಂಡ ಯುವತಿಯ ಮೇಲೆ ದುಷ್ಕರ್ಮಿಗಳ ಆ್ಯಸಿಡ್ ದಾಳಿ. ಸ್ಪುರದ್ರೂಪಿಯಾಗಿದ್ದ ಯುವತಿ ತನ್ನನ್ನ ಕನ್ನಡಿಯಲ್ಲಿ ನೋಡಿಕೊಂಡು ಭಯಬೀಳುವ ದೃಶ್ಯಗಳು ನೋಡುಗರ ಮನ ಮುಟ್ಟುವಂತಿವೆ. ಆ್ಯಸಿಡ್ ದಾಳಿ ಬಳಿಕ ಮನೆಯಿಂದ ಹೊರ ಬರಲು ಹಿಂಜರಿತ, ಆಕೆಯ ಬೆನ್ನಲುಬಾಗಿ ನಿಲ್ಲುವ ಹೋರಾಟಗಾರ್ತಿಯರು, ಸ್ನೇಹಿತರ ಬಾಂಧವ್ಯವನ್ನು ಚಿತ್ರತಂಡ ತೋರಿಸಿರೋದು ಕಣ್ಣಿಗೆ ಕಟ್ಟುವಂತಿದೆ.

    https://twitter.com/deepikapadukone/status/1204312684747010048

    ಆಸ್ಪತ್ರೆಯಿಂದ ಮನೆಗೆ ಆಗಮಿಸುವ ಮಾಲತಿ ತನ್ನ ಎಲ್ಲ ಕಿವಿಯೊಲೆ, ಮೂಗುತಿ ತೆಗೆದಿಡುವಾಗ ಮೂಗು, ಕಿವಿ ಇಲ್ಲ, ಹೇಗೆ ಈ ಆಭರಣಗಳನ್ನ ಧರಿಸಲಿ ಎಂದು ಹೇಳುವ ಮಾತು ನೋಡಗರಿಗೆ ಸಂತ್ರಸ್ತೆಯ ಕತ್ತಲೆಯ ಬದುಕುನ್ನು ಪರಿಚಯಿಸುತ್ತದೆ. ಧೈರ್ಯಗುಂದದೇ ನ್ಯಾಯಕ್ಕಾಗಿ ಹೋರಾಟ, ಸಮಾಜ ಸಂತ್ರಸ್ತೆಯನ್ನು ಕಾಣುವ ದೃಷ್ಟಿ, ಕಷ್ಟಗಳ ಸಂಕೋಲೆಯಲ್ಲಿ ಬದುಕುತ್ತಿದ್ದ ಜೀವಕ್ಕೆ ಗೆಳೆಯನ ತಂಪಾದ ಆಸರೆ ಎಲ್ಲವೂ ಟ್ರೈಲರ್ ನಲ್ಲಿದೆ.

    ತನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದವರ ಹೋರಾಟ ನಡೆಸುವ ಮಾಲತಿಗೆ ನ್ಯಾಯ ಸಿಗುತ್ತಾ? ಕತ್ತಲೆಯಲ್ಲಿ ಹೊಂಗಿರಣವಾಗಿ ಬಂದ ಗೆಳೆಯನ ಆಸರೆ ಮಾಲತಿಗೆ ಸಿಗುತ್ತಾ? ಮತ್ತೆ ಮಾಲತಿ ಬದುಕು ಎಲ್ಲರಂತೆ ನಡೆಯುತ್ತಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕಾದ್ರೆ ಜನವರಿ 10ರವರೆಗೆ ನೀವು ಕಾಯಬೇಕು. ಚಿತ್ರ ಜನವರಿ 10 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

    https://twitter.com/deepikapadukone/status/1203926836016795648

  • ನನ್ನನ್ನು ಕೊಲೆ ಮಾಡು – ಪತ್ನಿ ಬಳಿ ಬೇಡಿಕೆಯಿಟ್ಟ ರಣ್‍ವೀರ್

    ನನ್ನನ್ನು ಕೊಲೆ ಮಾಡು – ಪತ್ನಿ ಬಳಿ ಬೇಡಿಕೆಯಿಟ್ಟ ರಣ್‍ವೀರ್

    ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ನನ್ನನ್ನು ಕೊಲೆ ಮಾಡು ಎಂದು ತನ್ನ ಪತ್ನಿ, ನಟಿ ದೀಪಿಕಾ ಪಡುಕೋಣೆ ಅವರ ಬಳಿ ಬೇಡಿಕೆ ಇಟ್ಟಿದ್ದಾರೆ.

    ದೀಪಿಕಾ ತಮ್ಮ ಇನ್‍ಸ್ಟಾದಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಈ ಫೋಟೋಗೆ ಅಲಿಯಾ ಭಟ್ ಸೇರಿದಂತೆ ಹಲವು ಕಲಾವಿದರು ಹಾಗೂ ಅಭಿಮಾನಿಗಳು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ರಣ್‍ವೀರ್ ಸಿಂಗ್ ಕೂಡ ಈ ಪೋಸ್ಟ್ ಗೆ ನನ್ನನ್ನು ಕೊಲೆ ಮಾಡು ಎಂದು ಕಮೆಂಟ್ ಮಾಡಿದ್ದಾರೆ.

     

    View this post on Instagram

     

    Tadaaaaa!!!????????‍♀️

    A post shared by Deepika Padukone (@deepikapadukone) on

    ಶಾರ್ಟ್ ಹೇರ್ ಸ್ಟೈಲ್‍‍ನಲ್ಲಿ ದೀಪಿಕಾ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ “ತಾಡಾ” ಎಂದು ಬರೆದುಕೊಂಡಿದ್ದಾರೆ. ದೀಪಿಕಾ ಅವರ ಸೆಲ್ಫಿಗೆ ರಣ್‍ವೀರ್ ಫಿದಾ ಆಗಿದ್ದು, ಕಮೆಂಟ್ ಮಾಡುವ ಮೂಲಕ ಪತ್ನಿಯ ಸೌಂದರ್ಯವನ್ನು ಹೊಗಳಿದ್ದಾರೆ.

    ರಣ್‍ವೀರ್ ಅಲ್ಲದೆ ನಟಿ ಅಲಿಯಾ ಭಟ್ ‘ಬ್ಯೂಟಿ’ ಎಂದು ಕಮೆಂಟ್ ಮಾಡಿದರೆ, ಇತ್ತ ಫರಾ ಖಾನ್ ‘ತುಂಬಾ ಚೆನ್ನಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ನಟಿ ಎವಲಿನ್ ಶರ್ಮಾ ‘ಲವ್’ ಎಂದು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ರಣ್‍ವೀರ್ ನಟನೆಯ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಜೀವನಾಧರಿತ ’83’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಣ್‍ವೀರ್ ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಅಭಿನಯಿಸುತ್ತಿದ್ದಾರೆ. ಇತ್ತ ದೀಪಿಕಾ ನಟನೆಯ `ಚಾಪಕ್’ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ.

  • ವಿವಾಹ ವಾರ್ಷಿಕೋತ್ಸವದಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ದೀಪ್‍ವೀರ್

    ವಿವಾಹ ವಾರ್ಷಿಕೋತ್ಸವದಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ದೀಪ್‍ವೀರ್

    ಹೈದರಾಬಾದ್: ಬಾಲಿವುಡ್ ಸ್ಟಾರ್ ಕಪಲ್ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಂದು ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

    ದೀಪಿಕಾ ಹಾಗೂ ರಣ್‍ವೀರ್ ಕುಟುಂಬ ಸಮೇತ ತಿರುಪತಿಗೆ ಆಗಮಿಸಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಲು ಇಬ್ಬರು ನಿರ್ಧರಿಸಿದ್ದರು. ದಂಪತಿ ಮೊದಲು ತಿರುಪತಿಗೆ ಭೇಟಿ ನೀಡಿ ನಂತರ ಅಮೃತಸರ ಸ್ವರ್ಣ ಮಂದಿರದ ದರ್ಶನ ಪಡೆಯಲು ತೆರಳಿದರು.

    ತಿರುಪತಿಯಲ್ಲಿ ರಣ್‍ವೀರ್ ಹಾಗೂ ದೀಪಿಕಾ ನವವಧು-ವರರಂತೆ ಮಿಂಚಿದ್ದು, ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಫೋಟೋದಲ್ಲಿ ದೀಪಿಕಾ ಸಬ್ಯಾಸಾಚಿ ವಿನ್ಯಾಸದ ಕೆಂಪು ಬಣ್ಣದ ಸೀರೆ ಉಟ್ಟು, ಆಭರಣಗಳನ್ನು ಧರಿಸಿದ್ದಾರೆ. ಇತ್ತ ರಣ್‍ವೀರ್ ಗೋಲ್ಡನ್ ಕಲರ್ ಕುರ್ತಾ ಹಾಕಿದ್ದಾರೆ.

    ಕಳೆದ ವರ್ಷ ಎಂದರೆ ನ.14 ಹಾಗೂ 15ರಂದು ರಣ್‍ವೀರ್ ಹಾಗೂ ದೀಪಿಕಾ ಇಟಲಿಯ ಲೇಕ್ ಕೊಮೊದಲ್ಲಿ ಕೊಂಕಣಿ ಹಾಗೂ ಸಿಂಧ್ ಸಂಪ್ರದಾಯದಲ್ಲಿ ಮದುವೆಯಾಗಿದ್ದರು. ಬಳಿಕ ಇಬ್ಬರು ಬೆಂಗಳೂರು ಹಾಗೂ ಮುಂಬೈನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಆಯೋಜಿಸಿದ್ದರು.

  • ಅನಾರೋಗ್ಯದಿಂದ ಬಳಲುತ್ತಿರುವ ದೀಪಿಕಾ: ಫೋಟೋ ವೈರಲ್

    ಅನಾರೋಗ್ಯದಿಂದ ಬಳಲುತ್ತಿರುವ ದೀಪಿಕಾ: ಫೋಟೋ ವೈರಲ್

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅನಾರೋಗ್ಯದಿಂದ ಬಳಲುತ್ತಿದ್ದು, ಸ್ವತಃ ಅವರೇ ಈ ವಿಷಯವನ್ನು ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ಇತ್ತೀಚೆಗೆ ದೀಪಿಕಾ ತನ್ನ ಪತಿ, ನಟ ರಣ್‍ವೀರ್ ಸಿಂಗ್ ಜೊತೆ ಆತ್ಮೀಯ ಗೆಳತಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೆ ಈ ಕಾರ್ಯಕ್ರಮದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಕಾರ್ಯಕ್ರಮದಲ್ಲಿ ದೀಪಿಕಾ ಸಾಕಷ್ಟು ಎಂಜಾಯ್ ಮಾಡಿದ್ದು, ಇದೀಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ.

    ದೀಪಿಕಾ ತನ್ನ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಅನಾರೋಗ್ಯದಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಈ ಫೋಟೋಗೆ ಅವರು ಥರ್ಮಾಮೀಟರ್ ಎಮೋಜಿ ಹಾಕಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ದೀಪಿಕಾ ಜ್ವರದಿಂದ ಬಳಲುತ್ತಿದ್ದಾರೆ ಅವರು ಬೇಗ ಗುಣಮುಖರಾಗಲಿ ಎಂದು ಆಶಿಸುತ್ತಿದ್ದಾರೆ.

    ಈ ಫೋಟೋ ಪೋಸ್ಟ್ ಮಾಡಿ ದೀಪಿಕಾ ಅದಕ್ಕೆ, “ನೀವು ನಿಮ್ಮ ಆತ್ಮೀಯ ಗೆಳತಿಯ ಮದುವೆಯಲ್ಲಿ ತುಂಬಾನೇ ಎಂಜಾಯ್ ಮಾಡಿದರೆ ಈ ರೀತಿ ಆಗುತ್ತದೆ” ಎಂದು ಬರೆದುಕೊಂಡಿದ್ದಾರೆ. ಸದ್ಯ ದೀಪಿಕಾ ತಮಗೆ ಏನಾಗಿದೆ ಎಂಬುದನ್ನು ಅಧಿಕೃತವಾಗಿ ಹೇಳಲಿಲ್ಲ.

    ದೀಪಿಕಾ, ಮೇಘನಾ ಗುಲ್ಝಾರ್ ನಿರ್ದೇಶಿಸುತ್ತಿರುವ ‘ಚಾಪಕ್’ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮೀ ಅಗರ್ ವಾಲ್ ಜೀವನಚರಿತ್ರೆ ಆಗಿದೆ. ಈ ಚಿತ್ರದ ನಂತರ ದೀಪಿಕಾ ಪಡುಕೋಣೆ ತಮ್ಮ ಪತಿ, ನಟ ರಣ್‍ವೀರ್ ಸಿಂಗ್ ಅವರ ಜೊತೆ ’83’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ಪಬ್ಲಿಕ್‍ನಲ್ಲಿ ಸೊಂಟ ನೋಡಿದ ರಣ್‌ವೀರ್‌ಗೆ ದೀಪಿಕಾ ಖಡಕ್ ಪ್ರತಿಕ್ರಿಯೆ

    ಪಬ್ಲಿಕ್‍ನಲ್ಲಿ ಸೊಂಟ ನೋಡಿದ ರಣ್‌ವೀರ್‌ಗೆ ದೀಪಿಕಾ ಖಡಕ್ ಪ್ರತಿಕ್ರಿಯೆ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಪಬ್ಲಿಕ್‍ನಲ್ಲಿ ಸೊಂಟ ನೋಡಿದ ಪತಿ, ನಟ ರಣ್‍ವೀರ್ ಸಿಂಗ್‍ಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

    ರಣ್‍ವೀರ್ ಸಿಂಗ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ 2013ರಲ್ಲಿ ತೆರೆಕಂಡ `ರಾಮ್‍ಲೀಲಾ’ ಸಿನಿಮಾ ಶೂಟಿಂಗ್ ಸಮಯದಲ್ಲಿ ತೆಗೆದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಣ್‍ವೀರ್ ಪಬ್ಲಿಕ್‍ನಲ್ಲಿಯೇ ದೀಪಿಕಾ ಸೊಂಟವನ್ನು ದುರುಗುಟ್ಟು ನೋಡುತ್ತಿದ್ದಾರೆ.

    ಈ ಫೋಟೋ ಅಪ್ಲೋಡ್ ಮಾಡಿದ ರಣ್‍ವೀರ್, “ಈ ಫೋಟೋಗೆ ಯಾವುದೇ ಕ್ಯಾಪ್ಶನ್ ಅಗತ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ. ರಣ್‍ವೀರ್ ಅವರ ಈ ಪೋಸ್ಟ್ ಗೆ ದೀಪಿಕಾ ಪಡುಕೋಣೆ ಖಡಕ್ಕಾಗಿಯೇ ಪ್ರತಿಕ್ರಿಯಿಸಿದ್ದಾರೆ.

     

    View this post on Instagram

     

    No caption needed ???? @deepikapadukone #RamLeela

    A post shared by Ranveer Singh (@ranveersingh) on

    ದೀಪಿಕಾ, ರಣ್‍ವೀರ್ ಪೋಸ್ಟ್ ಗೆ “ಏಳು ವರ್ಷವಾಗಿದೆ. ಆದರೆ ಏನೂ ಬದಲಾವಣೆ ಆಗಿಲ್ಲ” ಎಂದು ಕಮೆಂಟ್ ಮಾಡಿ ಜೊತೆಗೆ ಹೃದಯದ ಎಮೋಜಿಯನ್ನು ಹಾಕಿದ್ದಾರೆ. ಈ ಮೂಲಕ ರಣವೀರ್ ಏಳು ವರ್ಷಗಳಲ್ಲಿ ಸ್ವಲ್ಪವೂ ಬದಲಾಗಿಲ್ಲ ಎನ್ನುವುದನ್ನು ದೀಪಿಕಾ ಅವರು ಪರೋಕ್ಷವಾಗಿ ಹೇಳಿದ್ದಾರೆ.

    ಈ ಫೋಟೋ ಪೋಸ್ಟ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ರಣ್‍ವೀರ್ ಅವರ ಕಾಲೆಳೆಯುತ್ತಿದ್ದಾರೆ. ಈಗಾಗಲೇ ಈ ಫೋಟೋ 21 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ.

    ರಣ್‍ವೀರ್ ಮತ್ತು ದೀಪಿಕಾ 2018ರ ನವೆಂಬರ್ 14 ಮತ್ತು 15ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಣ್‍ವೀರ್ ನಟನೆಯ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಜೀವನಾಧರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತ ದೀಪಿಕಾ ನಟನೆಯ `ಚಾಪಕ್’ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ.