Tag: Deepika Padukone

  • ಡ್ರಗ್ಸ್ ಚಾಟ್‍ನಲ್ಲಿ ದೀಪಿಕಾ ಹೆಸ್ರು- ಹೈ ಸೊಸೈಟಿಯ ಮಕ್ಕಳು ಮಾಲ್ ಕೇಳ್ತಾರೆ ಎಂದ ಕಂಗನಾ

    ಡ್ರಗ್ಸ್ ಚಾಟ್‍ನಲ್ಲಿ ದೀಪಿಕಾ ಹೆಸ್ರು- ಹೈ ಸೊಸೈಟಿಯ ಮಕ್ಕಳು ಮಾಲ್ ಕೇಳ್ತಾರೆ ಎಂದ ಕಂಗನಾ

    ಮುಂಬೈ: ಡ್ರಗ್ಸ್ ಚಾಟ್‍ನಲ್ಲಿ ನಟಿ ದೀಪಿಕಾ ಪಡುಕೋಣೆ ಹೆಸರು ಕೇಳಿ ಬರುತ್ತಿದ್ದಂತೆ, ಹೈ ಸೊಸೈಟಿಯ ಮಕ್ಕಳು ಮಾಲ್ ಕೇಳುತ್ತಾರೆ ಎಂದು ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ. ದೀಪಿಕಾಗೆ ಸಂಬಂಧಿಸಿದ ಖಾಸಗಿ ವಾಹಿನಿಯ ಸುದ್ದಿಗೆ ಕಂಗನಾ ರಣಾವತ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಆಶಿಕಿ ಚೆಲುವೆ, ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ ನಡೆಸಿರುವ ವಾಟ್ಸಪ್ ಸಂಭಾಷಣೆ ರಿವೀಲ್ ಆಗಿದೆ.

    ಕಂಗನಾ ಟ್ವೀಟ್: ಡ್ರಗ್ಸ್ ಸೇವನೆ ಖಿನ್ನತೆಯುನ್ನುಂಟು ಮಾಡುತ್ತೆ ಮತ್ತೊಮ್ಮೆ (ರಿಪೀಟ್ ಆಫ್ಟರ್ ಮಿ) ಹೇಳುತ್ತಿದ್ದೇನೆ. ತಮ್ಮನ್ನು ದೊಡ್ಡ ಸ್ಟಾರ್, ಹೈ ಸೊಸೈಟಿಯ ಮಕ್ಕಳು ಎಂದು ಕರೆದುಕೊಳ್ಳುವರು ಉತ್ತಮ ಲಾಲನೆ-ಪಾಲನೆಯಲ್ಲಿ ಬೆಳೆದಿರುತ್ತಾರೆ. ಆದ್ರೂ ತಮ್ಮ ಮ್ಯಾನೇಜರ್ ಬಳಿ ಮಾಲ್ ಇದೆಯಾ ಎಂದು ಕೇಳುತ್ತಾರೆ.

    ಮಗದೊಂದು ಟ್ವೀಟ್ ಮಾಡಿರುವ ಕಂಗನಾ, ನೆರೆಯ ದೇಶಗಳ ಸ್ವಾರ್ಥಿಗಳು ನಮ್ಮ ರಾಷ್ಟ್ರ ಮತ್ತು ಯುವ ಜನತೆಯ ಭವಿಷ್ಯವನ್ನ ವ್ಯವಸ್ಥಿತವಾಗಿ ಹಾಳು ಮಾಡಲಾಗುತ್ತಿದೆ. ಯುವ ಜನತೆಗೆ ಡ್ರಗ್ಸ್ ಸೇವನೆಗೆ ಪ್ರಚೋದಿಸುತ್ತಿವೆ. ನಮ್ಮ ಮುಂದಿರುವ ದೊಡ್ಡ ಸವಾಲುಗಳಲ್ಲಿ ಇದು ಒಂದಾಗಿದೆ. ಈ ವಿಷಯದಲ್ಲಿ ಚರ್ಚಿಸಲು ಸಿದ್ಧರಿದ್ದೇವಾ ಎಂದು ಪ್ರಶ್ನೆ ಮಾಡಿದ್ದಾರೆ.

    ರಿಪೀಟ್ ಆಫ್ಟರ್ ಮಿ: ಜೂನ್ ನಲ್ಲಿ ದೀಪಿಕಾ ಪಡುಕೋಣೆ ರಿಪೀಟ್ ಆಫ್ಟರ್ ಮಿ ಎಂಬ ಪದಗಳನ್ನು ಬಳಸಿ ಟ್ವೀಟ್ ಮಾಡಿದ್ದರು. ಇದೀಗ ಕಂಗನಾ ಅದೇ ಪದಗಳನ್ನ ಬಳಸುವ ಮೂಲಕ ದೀಪಿಕಾರಿಗೆ ಟಾಂಗ್ ನೀಡಿದ್ದಾರೆ.

    https://twitter.com/deepikapadukone/status/1274598814767144961

    ದೀಪಿಕಾ ಟ್ವೀಟ್: ರಿಪೀಟ್ ಆಫ್ಟರ್ ಮಿ: ಮಾನಸಿಕ ಖಿನ್ನತೆಯನ್ನ ಗುಣಮುಖ ಮಾಡಬಹುದು. ರಿಪೀಟ್ ಆಫ್ಟರ್ ಮಿ: ಖಿನ್ನತೆಗೆ ಚಿಕಿತ್ಸೆ ಇದೆ. ರಿಪೀಟ್ ಆಫ್ಟರ್ ಮಿ: ಖಿನ್ನತೆಗೆ ತಡೆಯೊಡ್ಡಬಹುದು ಎಂದು ದೀಪಿಕಾ ಟ್ವೀಟ್ ಮಾಡಿದ್ದರು. ಮಾನಸಿಕ ಖಿನ್ನತೆಗೆ ಒಳಗಾದವರಿಗೆ ಚಿಕಿತ್ಸೆ ನೀಡಬಹುದು ಎಂಬುದರ ಬಗ್ಗೆ ತಿಳಿಸಿದ್ದರು.

    ಈ ವಾರ ಗುಳಿಕೆನ್ನೆ ಚೆಲುವೆಗೆ ಎನ್‍ಸಿಬಿ ಸಮನ್ಸ್ ನೀಡುವ ಸಾಧ್ಯತೆಗಳಿವೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ದೀಪಿಕಾ ಡ್ರಗ್ಸ್ ಖರೀದಿಗಾಗಿ ನಡೆಸಿದ್ದಾರೆ ಎನ್ನಲಾದ ವಾಟ್ಸಪ್ ಸಂಭಾಷಣೆಯ ಸ್ಕ್ರೀನ್‍ಶಾಟ್ ಗಳು ರಿವೀಲ್ ಆಗಿವೆ. ಜಯ್ ಸಾಹಾ ಮತ್ತು ಖಾಸಗಿ ಕಂಪನಿಯ ಮ್ಯಾನೇಜರ್ ಕರೀಷ್ಮಾ ಎಂಬವರ ಜೊತೆಗಿನ ವಾಟ್ಸಪ್ ಚಾಟ್ ನಶೆಯ ಘಾಟಿನ ಸುಳಿವು ನೀಡಿದೆ. ವಾಟ್ಸಪ್ ಚಾಟ್ ನಲ್ಲಿ ಡಿ ಮತ್ತು ಕೆ ಎಂಬ ಕೋಡ್‍ವರ್ಡ್ ಗಳನ್ನ ಬಳಕೆ ಮಾಡಲಾಗಿದೆ. ಡಿ ಅಂದ್ರೆ ದೀಪಿಕಾ ಪಡುಕೋಣೆ ಮತ್ತು ಕೆ ಅಂದ್ರೆ ಕರೀಷ್ಮಾ ಎಂದು ಖಾಸಗಿ ವಾಹಿನಿ ತಿಳಿಸಿದೆ. ಈ ವಾಟ್ಸಪ್ ಚಾಟ್ ನಲ್ಲಿ ಅಮಿತ್ ಮತ್ತು ಶಾಲ್ ಎಂಬ ಹೆಸರುಗಳು ರಿವೀಲ್ ಆಗಿದ್ದು, ಇಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಮಾಲ್ ಇದೆಯಾ? ಡ್ರಗ್ಸ್ ಜಾಲದಲ್ಲಿ ಬಿಟೌನ್ ಪದ್ಮಾವತಿ ದೀಪಿಕಾ

    ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಧು ಮಾಂಟೇನಾ ವರ್ಮಾ ಹೆಸರು ಡ್ರಗ್ಸ್ ನಶೆಯಲ್ಲಿ ಕೇಳಿ ಬಂದಿದೆ. ಇನ್ನು ಕರೀಷ್ಮಾ ಕೆಲಸ ಮಾಡುತ್ತಿದ್ದ ಕಂಪನಿಯ ನಿರ್ದೇಶಕ ಧೃವ ಎಂಬವರಿಗೆ ಎನ್‍ಸಿಬಿ ಸಮನ್ಸ್ ನೀಡಿದೆ. ಇಂದು ಜಯ್ ಸಾಹಾ, ಕರೀಷ್ಮಾ ಮತ್ತು ಸುಶಾಂತ್ ಮ್ಯಾನೇಜರ್ ಶೃತಿ ಮೋದಿಯನ್ನ ಎನ್‍ಸಿಬಿ ವಿಚಾರಣೆ ನಡೆಸಲಿದೆ. ಈ ಮೂವರ ವಿಚಾರಣೆಯಲ್ಲಿ ಮತ್ತಷ್ಟು ಹೆಸರುಗಳು ಹೊರ ಬರುವ ಸಾಧ್ಯತೆಗಳಿವೆ. ಇನ್ನು ಬಂಧನದಲ್ಲಿರುವ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಡ್ರಗ್ಸ್ ಸೇವನೆ ಮಾಡುವ 25 ಸೆಲೆಬ್ರಿಟಿಗಳ ಹೆಸರು ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಡ್ರಗ್ಸ್‌ ಕೇಸ್‌- ಐಎಸ್‌ಡಿಯಿಂದ ಲೂಸ್‌ ಮಾದ ಯೋಗಿ, ಅಯ್ಯಪ್ಪ ವಿಚಾರಣೆ

  • ಮಾಲ್ ಇದೆಯಾ? ಡ್ರಗ್ಸ್ ಜಾಲದಲ್ಲಿ ಬಿಟೌನ್ ಪದ್ಮಾವತಿ ದೀಪಿಕಾ

    ಮಾಲ್ ಇದೆಯಾ? ಡ್ರಗ್ಸ್ ಜಾಲದಲ್ಲಿ ಬಿಟೌನ್ ಪದ್ಮಾವತಿ ದೀಪಿಕಾ

    -ದೀಪಿಕಾ ವಾಟ್ಸಪ್ ಚಾಟ್ ಔಟ್
    -ಈ ವಾರ ಮಸ್ತಾನಿಗೆ ಎನ್‍ಸಿಬಿ ನೋಟಿಸ್?

    ಮುಂಬೈ: ಡ್ರಗ್ಸ್ ನಶೆಯಲ್ಲಿ ಬಾಲಿವುಡ್ ಬೆಡಗಿ, ದೀಪಿಕಾ ಪಡುಕೋಣೆ ಹೆಸರು ಕೇಳಿ ಬಂದಿದ್ದು, ಈ ವಾರ ಗುಳಿಕೆನ್ನೆ ಚೆಲುವೆಗೆ ಎನ್‍ಸಿಬಿ ಸಮನ್ಸ್ ನೀಡುವ ಸಾಧ್ಯತೆಗಳಿವೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ದೀಪಿಕಾ ಡ್ರಗ್ಸ್ ಖರೀದಿಗಾಗಿ ನಡೆಸಿದ್ದಾರೆ ಎನ್ನಲಾದ ವಾಟ್ಸಪ್ ಸಂಭಾಷಣೆಯ ಸ್ಕ್ರೀನ್‍ಶಾಟ್ ಗಳು ರಿವೀಲ್ ಆಗಿವೆ. ಇದನ್ನೂ ಓದಿ: ಡ್ರಗ್ಸ್‌ ಕೇಸ್‌- ಐಎಸ್‌ಡಿಯಿಂದ ಲೂಸ್‌ ಮಾದ ಯೋಗಿ, ಅಯ್ಯಪ್ಪ ವಿಚಾರಣೆ

    ಜಯ್ ಸಾಹಾ ಮತ್ತು ಖಾಸಗಿ ಕಂಪನಿಯ ಮ್ಯಾನೇಜರ್ ಕರೀಷ್ಮಾ ಎಂಬವರ ಜೊತೆಗಿನ ವಾಟ್ಸಪ್ ಚಾಟ್ ನಶೆಯ ಘಾಟಿನ ಸುಳಿವು ನೀಡಿದೆ. ವಾಟ್ಸಪ್ ಚಾಟ್ ನಲ್ಲಿ ಡಿ ಮತ್ತು ಕೆ ಎಂಬ ಕೋಡ್‍ವರ್ಡ್ ಗಳನ್ನ ಬಳಕೆ ಮಾಡಲಾಗಿದೆ. ಡಿ ಅಂದ್ರೆ ದೀಪಿಕಾ ಪಡುಕೋಣೆ ಮತ್ತು ಕೆ ಅಂದ್ರೆ ಕರೀಷ್ಮಾ ಎಂದು ಖಾಸಗಿ ವಾಹಿನಿ ತಿಳಿಸಿದೆ. ಈ ವಾಟ್ಸಪ್ ಚಾಟ್ ನಲ್ಲಿ ಅಮಿತ್ ಮತ್ತು ಶಾಲ್ ಎಂಬ ಹೆಸರುಗಳು ರಿವೀಲ್ ಆಗಿದ್ದು, ಇಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಕಲಿಯಬಾರದ ಚಟವನ್ನ ಕಲಿತು, ಮಾಡಬಾರದ ಅನಿಷ್ಟಗಳನ್ನ ಮಾಡಿದ್ದೇನೆ: ಯೋಗಿ

    ವಾಟ್ಸಪ್ ಸಂಭಾಷಣೆ:
    ದೀಪಿಕಾ: ನಿಮ್ಮ ಬಳಿ ಮಾಲ್ ಇದೆಯಾ?
    ಕರೀಷ್ಮಾ: ಇದೆ, ಆದ್ರೆ ಮನೆಯಲ್ಲಿದೆ. ಆದ್ರೆ ನಾನು ಬಾಂದ್ರಾದಲ್ಲಿದ್ದೇನೆ.
    ದೀಪಿಕಾ: ಯೆಸ್, ಪ್ಲೀಸ್
    ಕರೀಷ್ಮಾ: ಅಮಿತ್ ಬಳಿ ಇದೆ. ಅವನು ಅದನ್ನು ತೆಗೆದುಕೊಂಡು ಹೋಗುತ್ತಿದ್ದಾನೆ.
    ದೀಪಿಕಾ: ಹ್ಯಾಶ್ ತಾನೇ? ವೀಡ್ ಅಲ್ಲವಲ್ಲಾ?
    ಕರೀಷ್ಮಾ: ಹ್ಯಾಶ್ ಅಲ್ಲ, ಗಾಂಜಾ ಇದೆ. ಬೇಕಾದ್ರೆ ಅಮಿತ್‍ಗೆ ಹೇಳುತ್ತೇನೆ.

    ಹೀಗೆ ಈ ಸಂಭಾಷಣೆ ಮುಂದುವರಿಯುತ್ತದೆ. ದೀಪಿಕಾ ತಮಗೆ ಮಾಲ್ ತಲುಪಿಸುವ ಸಮಯದ ಬಗ್ಗೆಯೂ ಹೇಳುತ್ತಾರೆ. ಈ ಚಾಟ್ ವೇಳೆ ಶಾಲ್ ಎಂಬಾತನ ಹೆಸರು ಬರುತ್ತದೆ. ಚಾಟ್ ರಿವೀಲ್ ಬಳಿಕ ದೀಪಿಕಾ ಪಡುಕೋಣೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ರೀತಿ ನಟಿಯರಾದ ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ನಡೆಸಿರುವ ವಾಟ್ಸಪ್ ಸಂಭಾಷಣೆಯ ಮಾಹಿತಿ ರಿವೀಲ್ ಆಗಿದೆ. ಇದನ್ನೂ ಓದಿ: ಫ್ಯಾನ್, ಬೆಡ್ ಇಲ್ಲ- ಇಂದ್ರಾಣಿ ಪಕ್ಕದಲ್ಲೇ ರಿಯಾ ಜೈಲುವಾಸ

    ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಿಯಾ ಚಕ್ರವರ್ತಿ ಹೇಳಿಕೆಯನ್ನಾಧರಿಸಿ ಎನ್‍ಸಿಬಿ ಸಮನ್ಸ್ ನೀಡಲಿದೆ ಎನ್ನಲಾಗಿದೆ. ವಿಚಾರಣೆ ವೇಳೆ ರಿಯಾ ಚಕ್ರವರ್ತಿ ನಾಲ್ವರ ಹೆಸರು ಹೇಳಿದ್ದಾರೆ ಎಂದು ಹೇಳಲಾಗಿದೆ. ರಿಯಾ, ಸಾರಾ ಮತ್ತು ರಕುಲ್ ಒಂದೇ ಜಿಮ್ ಗೆ ತೆರಳುತ್ತಿದ್ದರು. ಹೀಗಾಗಿ ಮೂವರ ಮಧ್ಯೆ ಸ್ನೇಹ ಗಾಢವಾಗಿತ್ತು. ತನಿಖೆ ವೇಳೆ ಎನ್‍ಸಿಬಿಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದ್ದರಿಂದ ಸಾರಾ, ರಕುಲ್ ಜೊತೆಗೆ ಶ್ರದ್ಧಾ ಕಪೂರ್ ಅವರಿಗೂ ಸಮನ್ಸ್ ಹೋಗುವ ಸಾಧ್ಯತೆಗಳಿವೆ. ಡ್ರಗ್ ಪೆಡ್ಲರ್ ರಾಹಿಲ್ ವಿಶ್ರಾಮ್ ಎಂಬಾತನ ಬಂಧನವಾಗಿದ್ದು, ಈತನಿಂದಲೂ ಸಾಕಷ್ಟು ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಈ ವಾರ ಸಾರಾ, ಶ್ರದ್ಧಾ, ರಕುಲ್‍ಗೆ ಎನ್‍ಸಿಬಿ ಸಮನ್ಸ್?

    ಇಂದು ಜಯ್ ಸಾಹಾ, ಕರೀಷ್ಮಾ ಮತ್ತು ಸುಶಾಂತ್ ಮ್ಯಾನೇಜರ್ ಶೃತಿ ಮೋದಿಯನ್ನ ಎನ್‍ಸಿಬಿ ವಿಚಾರಣೆ ನಡೆಸಲಿದೆ. ಈ ಮೂವರ ವಿಚಾರಣೆಯಲ್ಲಿ ಮತ್ತಷ್ಟು ಹೆಸರುಗಳು ಹೊರ ಬರುವ ಸಾಧ್ಯತೆಗಳಿವೆ. ಇನ್ನು ಬಂಧನದಲ್ಲಿರುವ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಡ್ರಗ್ಸ್ ಸೇವನೆ ಮಾಡುವ 25 ಸೆಲೆಬ್ರಿಟಿಗಳ ಹೆಸರು ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಾಧ್ಯಮಗಳಿಂದ ತೇಜೋವಧೆ – ದೆಹಲಿ ಹೈಕೋರ್ಟ್‌ ಮೊರೆ ಹೋದ ರಾಕುಲ್‌

    ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಧು ಮಾಂಟೇನಾ ವರ್ಮಾ ಹೆಸರು ಡ್ರಗ್ಸ್ ನಶೆಯಲ್ಲಿ ಕೇಳಿ ಬಂದಿದೆ. ಇನ್ನು ಕರೀಷ್ಮಾ ಕೆಲಸ ಮಾಡುತ್ತಿದ್ದ ಕಂಪನಿಯ ನಿರ್ದೇಶಕ ಧೃವ ಎಂಬವರಿಗೆ ಎನ್‍ಸಿಬಿ ಸಮನ್ಸ್ ನೀಡಿದೆ. ಇದನ್ನೂ ಓದಿಸಾರಾ, ರಾಕುಲ್ ಡ್ರಗ್ ಸೇವಿಸ್ತಿದ್ದಾರೆ – ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ ರಿಯಾ

  • ದೀಪಿಕಾ ನೋಡಿ ಕಲಿಯಿರಿ – ಬಿಟೌನ್ ರಾಣಿಗೆ ಸ್ಯಾಂಡಲ್‍ವುಡ್ ಕ್ವೀನ್ ಪಾಠ

    ದೀಪಿಕಾ ನೋಡಿ ಕಲಿಯಿರಿ – ಬಿಟೌನ್ ರಾಣಿಗೆ ಸ್ಯಾಂಡಲ್‍ವುಡ್ ಕ್ವೀನ್ ಪಾಠ

    -ಹೇಳುವುದು, ಮಾಡೋದರಲ್ಲಿ ವ್ಯತ್ಯಾಸ ಇರುತ್ತೆ

    ಬೆಂಗಳೂರು: ಬಾಲಿವುಡ್ ಕ್ವೀನ್ ನಟಿ ಕಂಗನಾ ರಣಾವತ್‍ಗೆ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಪಾಠ ಮಾಡಿದ್ದಾರೆ. ನಿಮ್ಮ ಸಹೋದ್ಯೋಗಿ ದೀಪಿಕಾ ಪಡುಕೋಣೆಯವರನ್ನು ನೋಡಿ ಕಲಿತುಕೊಳ್ಳಿ ಎಂದು ಮೊನಚಾದ ಮಾತುಗಳ ಮೂಲಕ ಮಣಿಕರ್ಣಿಕಾಗೆ ಟ್ವೀಟಿನೇಟು ನೀಡಿದ್ದಾರೆ.

    ರಮ್ಯಾ ಟ್ವೀಟ್‍ನಲ್ಲಿ ಏನಿದೆ?
    ನೀವು ನಿಜವಾಗಿಲೂ ಮಾದಕ ವ್ಯಸನದ ಬಗ್ಗೆ ಏನಾದರೂ ಮಾಡಲು ಇಚ್ಛಿಸಿದ್ರೆ ಡ್ರಗ್ಸ್ ಕ್ರುಸೇಡರ್ ವಿರುದ್ಧ ಫೈಟ್ ಮಾಡಿ. ಡ್ರಗ್ ಅಡಿಕ್ಟ್ ಆಗಿದ್ದೆ ಎಂದು ಹೇಳಿಕೊಂಡಿರುವ ನಿಮ್ಮ ಧೈರ್ಯ ಮೆಚ್ಚುವಂತದ್ದು. ವಿಡಿಯೋದಲ್ಲಿ ನಿಮ್ಮ ಅನುಭವ ಮತ್ತು ಆ ಡ್ರಗ್ಸ್ ಜಾಲದಿಂದ ಹೊರ ಬಂದಿದ್ದು ಹೇಗೆ ಹಾಗೂ ಡ್ರಗ್ಸ್ ಯಾಕೆ ಕೆಟ್ಟದ್ದು ಅನ್ನೋದನ್ನ ತಿಳಿಸಿ. ಇದನ್ನ ಸಂಜಯ್ ದತ್ ತಾನು ಡ್ರಗ್ ಅಡಿಕ್ಟ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಂಕಿತಾ ಲೋಖಂಡೆ ಪೋಸ್ಟ್ ಗೆ ರಮ್ಯಾ ಪ್ರತಿಕ್ರಿಯೆ

    ಮಾತನಾಡುವದಕ್ಕಿಂತ ನಿಜ ಜೀವನದಲ್ಲಿ ಮಾಡಿ ತೋರಿಸುವದರಲ್ಲಿ ವ್ಯತ್ಯಾಸ ಇರುತ್ತೆ. ನಿಮ್ಮ ಸಹೋದ್ಯೋಗಿ ದೀಪಿಕಾ ಪಡುಕೋಣೆ ಅವರು ಮೆಂಟಲ್ ಹೆಲ್ತ್ ಬಗ್ಗೆ ಮಾಡಿದ ಒಳ್ಳೆಯ ಕೆಲಸಗಳನ್ನ ನೋಡಿ ಕಲಿತುಕೊಳ್ಳಿ. ತಮ್ಮ ಜೀವನದಲ್ಲಿ ಖಿನ್ನತೆಗೊಳಾಗಿರೋದನ್ನ ಹೇಳಿಕೊಳ್ಳುವ ಜೊತೆ ಅದಕ್ಕಾಗಿ ಫೌಂಡೇಶನ್ ಸ್ಥಾಪಿಸಿದ್ದಾರೆ. ದೀಪಿಕಾ ಸ್ಥಾಪನೆಯ ಫೌಂಡೇಷನ್ ನಲ್ಲಿ ಖಿನ್ನತೆಗೆ ಲಕ್ಷಾಂತರ ಜನರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇಂತಹವರಿಂದ ಕಲಿತುಕೊಳ್ಳಬೇಕಿದೆ. ಇದನ್ನೂ ಓದಿ: ಈ ಫೋಟೋಗಳಿಗಿಂತಲೂ ನಾನು ಚೆನ್ನಾಗಿದ್ದೇನೆ- ವರ್ಷದ ಬಳಿಕ ರಮ್ಯಾ ಪೋಸ್ಟ್

    ಡ್ರಗ್ಸ್ ದಾಸರನ್ನು ಬಯಲು ಮಾಡಲು ಇದು ಒಳ್ಳೆಯ ಸಮಯ ಅಂತ ಅನಿಸಿದ್ರೆ ಈ ರೀತಿ ಪ್ರತಿಕ್ರಿಯಿಸುವುದು ಒಳಿತಲ್ಲ. ನಿಮ್ಮಲ್ಲಿರುವ ದಾಖಲೆ ಮತ್ತು ಮಾಹಿತಿ ನೀಡಿ ಪೊಲೀಸರ ತನಿಖೆಗೆ ಸಹಕರಿಸಿ. ನಿಮ್ಮಲ್ಲಿರುವ ಮಾಹಿತಿ ಎನ್‍ಸಿಬಿ ಉಪಯುಕ್ತವಾಗುತ್ತದೆ. ನಿಮ್ಮ ಉದ್ದೇಶ ಒಳ್ಳೆಯದಾಗಿರಲಿ, ಅದು ಪ್ರತೀಕಾರವಾಗದಿರಲಿ. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು ಎಂಬುವುದು ನೆನಪಿರಲಿ. ಇದನ್ನೂ ಓದಿ:  ನನ್ನ ಮನೆಯಂತೆ ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ: ಸಿಎಂ ಠಾಕ್ರೆ ವಿರುದ್ಧ ಕಂಗನಾ ಪ್ರಹಾರ

    ನಿಮ್ಮ ಉದ್ದೇಶಗಳು ಒಳ್ಳೆಯದಾಗಿರಬಹುದು, ಆದ್ರೆ ನೀವು ಆಯ್ಕೆ ಮಾಡಿಕೊಂಡ ಮಾರ್ಗ ತಪ್ಪಾಗಿರೋದಕ್ಕೆ ಬೇಸರವಿದೆ. ಬಹಿರಂಗ ಮಾಡುವ ಬೆದರಿಕೆ ಹಾಕುವ ಬದಲು ನಿಮ್ಮ ಸಲಹೆ ಮತ್ತು ಸಹಾನೂಭೂತಿ ನೀಡಿ. ಇಷ್ಟವಿದ್ದಲ್ಲಿ ಮಾದಕ ವ್ಯಸನಿಗೆ ಹೊಸ ಜೀವನ ಕಟ್ಟಿಕೊಳ್ಳಲು ನೆರವಾಗಿ. ಡ್ರಗ್ಸ್ ಜಾಲದಲ್ಲಿ ಸಿಲುಕಿದವರು ಜೀವನದ ಸುಂದರ ಕ್ಷಣ ಮತ್ತು ಸಂತೋಷದಿಂದ ವಂಚಿತರಾಗಿರುತ್ತಾರೆ. ಆಧ್ಯಾತ್ಮದ ಬಗ್ಗೆ ತಿಳುವಳಿಗೆ ಇರುವ ನಿಮಗೆ ಈ ಬಗ್ಗೆ ಗೊತ್ತಿರುತ್ತದೆ. ಇದನ್ನೂ ಓದಿ: ರಣವೀರ್‌, ರಣ್‌ಬೀರ್‌, ವಿಕ್ಕಿ ಡ್ರಗ್ಸ್‌ ಪರೀಕ್ಷೆಗೆ ಒಳಪಡಬೇಕು – ಕಂಗನಾ

    ಕಂಗನಾ ವಿಡಿಯೋ: ನಟಿ ಕಂಗನಾ ವಿರುದ್ಧ ಡ್ರಗ್ಸ್ ಸೇವನೆಯ ಆರೋಪ ಕೇಳಿ ಬಂದ ಹಿನ್ನೆಲೆ ನಟಿಯ ಹಳೆಯ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ತಾನು ಸಿನಿ ಕೆರಿಯರ್ ಆರಂಭದ ದಿನಗಳಲ್ಲಿ ಡ್ರಗ್ ಅಡಿಕ್ಟ್ ಆಗಿದ್ದೆ, ನಂತರ ಅದರಿಂದ ಹೇಗೆ ಹೊರ ಬಂದೆ ಹೇಳಿಕೊಂಡಿದ್ದರು. ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳು ಸತ್ಯವಾದ್ರೆ ಮುಂಬೈ ತೊರೆತಯುವದಾಗಿ ಕಂಗನಾ ಮಹಾಸರ್ಕಾರಕ್ಕೆ ಚಾಲೆಂಜ್ ಸಹ ಹಾಕಿದ್ದರು. ಇದನ್ನೂ ಓದಿ: ನಾನು ಡ್ರಗ್ಸ್ ಅಡಿಕ್ಟ್ ಆಗಿದ್ದೆ – ಕಂಗನಾ ಹಳೆ ವಿಡಿಯೋ ವೈರಲ್

    ಅದೇ ರೀತಿ ಸಂಜಯ್ ದತ್ ಡ್ರಗ್ಸ್ ಸೇವನೆ ಮಾಡುತ್ತಾರೆ. ಅವರು ಸ್ಟಾರ್ ಕುಟುಂಬದ ವ್ಯಕ್ತಿಯಾಗಿದ್ದರಿಂದ ಬಾಲಿವುಡ್ ನಲ್ಲಿ ತಪ್ಪಾಗಿ ಕಾಣಲ್ಲ ಎಂದು ಕಂಗನಾ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದ್ದರು. ಬಾಲಿವುಡ್ ಸ್ಟಾರ್ ಗಳಾದ ರಣ್‍ವೀರ್ ಸಿಂಗ್, ರಣಬೀರ್ ಕಪೂರ್, ವಿಕ್ಕಿ ಕೌಶಲ್ ಎಲ್ಲರೂ ಡ್ರಗ್ಸ್ ಪರೀಕ್ಷೆಗೆ ಒಳಗಾಗಬೇಕು ಎಂದು ಆಗ್ರಹಿಸಿದ್ದರು.

    ಅಂಕಿತಾ ಪೋಸ್ಟ್ ಗೆ ರಮ್ಯಾ ಕಮೆಂಟ್: ಈ ಹಿಂದೆ ನಟಿ ರಿಯಾ ಚಕ್ರವರ್ತಿ ಬಂಧನವಾದಾಗ ಸುಶಾಂತ್ ಮಾಜಿ ಗೆಳತಿ ಅಂಕಿತಾ ಲೋಖಂಡೆ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದ ರಮ್ಯಾ, ನ್ಯಾಯಕ್ಕಾಗಿ ಪ್ರಾರ್ಥಿಸೋದು ಬೇಡ. ಅಲ್ಲಿ ನಮಗೆ ಕೆಲವು ಮಾತ್ರ ಸಿಗುತ್ತದೆ ಎಂದು ಸಾಲುಗಳನ್ನ ಬರೆದುಕೊಂಡಿದ್ದರು. ಅಂಕಿತಾ ಲೋಖಂಡೆ, ಅದೃಷ್ಟದಿಂದ ಏನು ಸಾಧಿಸಲು ಸಾಧ್ಯವಿಲ್ಲ. ಅದು ಕೇವಲ ಕ್ಷಣಿಕ. ನೀವು ಮಾಡುವ ಕೆಲಸಗಳು ನಿಮ್ಮ ಅದೃಷ್ಟವನ್ನ ಬದಲಾಯಿಸುತ್ತದೆ. ಅದುವೇ ಕರ್ಮ ಎಂದು ಬರೆದಿರುವ ಸಾಲುಗಳ ಫೋಟೋ ಹಾಕಿ ಜಸ್ಟಿಸ್ ಎಂದು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಚಂಡೀಗಢ ತಲುಪ್ತಿದ್ದಂತೆ ನಾನು ಬದುಕುಳಿದೆ ಎಂದ ಕಂಗನಾ

    ರಮ್ಯಾ ಟ್ವೀಟ್‍ಗೆ ನೆಟ್ಟಿಗರು ನ್ಯಾಯಕ್ಕಾಗಿ ಪ್ರಾರ್ಥಿಸಿದ್ರೆ ಎಲ್ಲ ಸತ್ಯಗಳ ಹೊರ ಬರಲ್ಲ. ಹಾಗಾಗಿ ಸತ್ಯಕ್ಕಾಗಿ ಪ್ರಾರ್ಥಿಸಬೇಕಿದೆ. ಸತ್ಯ ಹೊರ ಬಂದ್ರೆ ನ್ಯಾಯ ಖಂಡಿತ ಸಿಗುತ್ತದೆ ಎಂದು ಮೆಚ್ಚುಗೆ ಸೂಚಿಸಿದ್ದರು. ಇದನ್ನೂ ಓದಿ: ಭಿಕ್ಷೆ ಬೇಡೋಕೆ ಮುಂಬೈಗೆ ಯಾಕೆ ಬಂದೆ- ಕಂಗನಾಗೆ ರಾಖಿ ಪ್ರಶ್ನೆ

    https://www.instagram.com/tv/B-T4iCHlGIo/?utm_source=ig_embed

  • ಪ್ರಭಾಸ್ ಜೊತೆ ನಟಿಸಲು 20 ಕೋಟಿ ಪಡೆದ ಪದ್ಮಾವತಿ!

    ಪ್ರಭಾಸ್ ಜೊತೆ ನಟಿಸಲು 20 ಕೋಟಿ ಪಡೆದ ಪದ್ಮಾವತಿ!

    ಮುಂಬೈ: ಟಾಲಿವುಡ್ ಪ್ರಭಾಸ್ ಜೊತೆ ರಾಧೆ ಶ್ಯಾಮ್ ಸಿನಿಮಾದಲ್ಲಿ ಬಾಲಿವುಡ್ ಚೆಲುವೆ ದೀಪಿಕಾ ಪಡುಕೋಣೆ ನಟಿಸೋದು ಪಕ್ಕಾ ಆಗಿದೆ. ಈ ಸಿನಿಮಾದಲ್ಲಿ ನಟಿಸಲು ಗುಳಿ ಕೆನ್ನೆ ಬೆಡಗಿ ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

    ನಾಗ ಆಶ್ವಿನ್ ಸಾರಥ್ಯದಲ್ಲಿ ರಾಧೆ ಶ್ಯಾಮ್ ಸಿದ್ಧಗೊಳ್ಳುತ್ತಿದೆ. ಪ್ರಭಾಸ್ ಜೊತೆಯಲ್ಲಿ ಪೂಜಾ ಹೆಗ್ಡೆ ಸಹ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಎಂದು ಹೇಳಲಾಗುತ್ತಿದ್ದು, ಚಿತ್ರಕಥೆಯನ್ನು ಸಿನಿ ತಂಡ ಬಿಟ್ಟುಕೊಟ್ಟಿಲ್ಲ. ಮೊದಲ ಬಾರಿಗೆ ತೆಲುಗು ಅಂಗಳದಲ್ಲಿ ಪದ್ಮಾವತಿ ಕಮಾಲ್ ಮಾಡಲು ಸಿದ್ಧವಾಗ್ತಿದ್ದಾರೆ. ಇದನ್ನೂ ಓದಿದೇವಸೇನಾಳಿಂದ ದೂರವಾದ್ರಾ ಬಾಹುಬಲಿ?- ಮೂವರು ಕನ್ನಡತಿಯರ ನಡ್ವೆ ಡಾರ್ಲಿಂಗ್

    ದೀಪಿಕಾ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದರಿಂದ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಬಾಜೀರಾವ್ ಮಸ್ತಾನಿ, ತಮಾಶಾ, ಪದ್ಮಾವತಿ ಸೂಪರ್ ಹಿಟ್ ಸಿನಿಮಾಗಳಲ್ಲಿ ದೀಪಿಕಾ ನಟಿಸಿದ್ದಾರೆ. ದೀಪಿಕಾ ಎಂಟ್ರಿಯಿಂದಾಗಿ ಚಿತ್ರದ ಸ್ಟಾರ್ ಡಮ್ ಮತ್ತಷ್ಟು ಹೆಚ್ಚಾಗಿದ್ದು, ಸಿನಿಮಾದ ಅಪ್‍ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ದೀಪಿಕಾ ನಟನೆಯ ’83’ ಸಿನಿಮಾ ತೆರೆಕಾಣಲು ಸಿದ್ಧವಾಗಿದೆ.

  • ಬಾಹುಬಲಿ ಪ್ರಭಾಸ್‍ಗೆ ಬಾಲಿವುಡ್ ಪದ್ಮಾವತಿ ದೀಪಿಕಾ ಜೋಡಿ

    ಬಾಹುಬಲಿ ಪ್ರಭಾಸ್‍ಗೆ ಬಾಲಿವುಡ್ ಪದ್ಮಾವತಿ ದೀಪಿಕಾ ಜೋಡಿ

    ಹೈದರಾಬಾದ್: ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್ ಅವರಿಗೆ ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ಅವರು ನಾಯಕಿ ಆಗುತ್ತಾರಾ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿತ್ತು. ಇದೀಗ ಈ ವಿಚಾರ ಅಧಿಕೃತವಾಗಿ ಘೋಷಣೆಯಾಗಿದೆ.

    ಹೌದು.ಪ್ರಭಾಸ್ ಜೊತೆ ನಟಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ತೆಲುಗು ಚಲನಚಿತ್ರ ನಿರ್ಮಾಣ ಸಂಸ್ಥೆ ‘ವೈಜಯಂತಿ ಮೂವೀಸ್’ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಪ್ರಭಾಸ್ ಮತ್ತು ದೀಪಿಕಾ ಒಟ್ಟಿಗೆ ಅಭಿನಯಿಸುತ್ತಿರುವ ವಿಚಾರವನ್ನು ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ. ಜೊತೆಗೆ ಒಂದು ವಿಡಿಯೋ ರಿಲೀಸ್ ಮಾಡುವ ಮೂಲಕ ದೀಪಿಕಾ ಪಡುಕೋಣೆ ಅವರನ್ನು ಚಿತ್ರತಂಡ ಸ್ವಾಗತ ಮಾಡಿದೆ.

    ಈ ಚಿತ್ರವು ‘ವೈಜಯಂತಿ ಮೂವೀಸ್’ ನ 50ನೇ ವಾರ್ಷಿಕೋತ್ಸವದ ವಿಶೇಷ ಉಡುಗೊರೆಯಾಗಲಿದ್ದು, ಹೆಚ್ಚಿನ ಬಜೆಟ್‍ನ ಬಹುಭಾಷಾ ಚಿತ್ರವಾಗಲಿದೆ ಎಂದು ಹೇಳಲಾಗುತ್ತಿದೆ. ಮಹಾನಟಿ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಈ ಸಿನಿಮಾವನ್ನು ನಿರ್ದೇಶನದ ಮಾಡುತ್ತಿದ್ದು, ಈ ಚಿತ್ರವನ್ನು ತಾತ್ಕಾಲಿಕವಾಗಿ ‘ಪ್ರಭಾಸ್ 21’ ಎಂದು ಕರೆಯಲಾಗುತ್ತಿದೆ. ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಅವರು ನಟಿಸುತ್ತಿದ್ದಾರೆ.

    ಮೊದಲ ಬಾರಿಗೆ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಜೋಡಿಯಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಹೀಗಾಗಿ ಟಾಪ್ ಕಲಾವಿದರಾಗಿರುವ ಇಬ್ಬರ ಕೆಮಿಸ್ಟ್ರಿಯನ್ನು ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ನಟಿಯ ಹೆಸರನ್ನು ಘೋಷಣೆ ಮಾಡುತ್ತಿದ್ದಂತೆ ಅಭಿಮಾನಿಗಳು ದೀಪಿಕಾ ಪಡುಕೋಣೆ ಎಂಬ ಹ್ಯಾಶ್‍ಟ್ಯಾಗ್‍ನೊಂದಿಗೆ ದೀಪಿಕಾ ಹೆಸರನ್ನು ಟ್ರೆಂಡಿಂಗ್ ಮಾಡುತ್ತಿದ್ದಾರೆ.

    ಇತ್ತೀಚೆಗಷ್ಟೆ ಅಭಿಮಾನಿಗಳಿಗೆ ಪ್ರಭಾಸ್ ಅಭಿನಯದ 20ನೇ ಸಿನಿಮಾವಾದ ‘ರಾಧೆ ಶ್ಯಾಮ್’ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಸರ್ಪ್ರೈಸ್ ನೀಡಲಾಗಿತ್ತು. ಈಗ ಪ್ರಭಾಸ್ ಅವರ 21ನೇ ಸಿನಿಮಾದಲ್ಲಿ ನಾಯಕಿ ದೀಪಿಕಾ ಪಡುಕೋಣೆ ಎಂಬುದನ್ನು ರಿವೀಲ್ ಮಾಡುವ ಮೂಲಕ ಅಭಿಮಾನಿಗಳಿಗೆ ಮತ್ತೊಂದು ಬಿಗ್ ಸರ್ಪ್ರೈಸ್ ನೀಡಿದಂತಾಗಿದೆ. ಈ ಹಿಂದೆಯೇ ಈ ವಿಚಾರವಾಗಿ ಚಿತ್ರತಂಡ ದೀಪಿಕಾ ಪಡುಕೋಣೆ ಅವರನ್ನು ಸಂಪರ್ಕ ಮಾಡಿ ಮಾತುಕತೆ ನಡೆಸಿತ್ತು. ಆದರೆ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ. ಇದೀಗ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

    ನಟ ಪ್ರಭಾಸ್ ಈ ಹಿಂದೆ ಕರಣ್ ಜೋಹರ್ ನಿರೂಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ದೀಪಿಕಾ ಜೊತೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಕನ್ನಡ, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ದೀಪಿಕಾ ಇದುವರೆಗೂ ತೆಲುಗು ಸಿನಿಮಾದಲ್ಲಿ ನಟಿಸಿರಲಿಲ್ಲ. ಈ ಸಿನಿಮಾದ ಮೂಲಕ ದೀಪಿಕಾ ಟಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಡುತ್ತಿದ್ದಾರೆ.

  • ತವರು ಮನೆ ನೆನಪು ಮಾಡಿಕೊಂಡ ದೀಪಿಕಾ ಪಡುಕೋಣೆ

    ತವರು ಮನೆ ನೆನಪು ಮಾಡಿಕೊಂಡ ದೀಪಿಕಾ ಪಡುಕೋಣೆ

    – ನಿಮ್ಮ ಪ್ರಶ್ನೆ ರಣ್‍ವೀರ್​ಗೆ ಕೇಳಿ ಎಂದ ದೀಪಿಕಾ

    ಮುಂಬೈ: ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ತವರು ಮನೆ ನೆನಪು ಮಾಡಿಕೊಂಡಿದ್ದಾರೆ.

    ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೂ ಶೂಟಿಂಗ್ ಆರಂಭಗೊಂಡಿಲ್ಲ. ಕಳೆದ ಮೂರು ತಿಂಗಳಿನಿಂದ ಸೆಲೆಬ್ರಿಟಿಗಳು ಮನೆಯಲ್ಲಿಯೇ ಲಾಕ್ ಆಗಿದ್ದಾರೆ. ಕನ್ನಡತಿ ದೀಪಿಕಾ ಪಡುಕೋಣೆ ಸಹ ಮುಂಬೈನಲ್ಲಿದ್ದು, ಪತಿ ರಣ್‍ವೀರ್ ಜೊತೆ ಲಾಕ್‍ಡೌನ್ ಸಮಯವನ್ನು ಕಳೆಯುತ್ತಿದ್ದಾರೆ. ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಮೂಲಕ ಅಭಿಮಾನಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ.

    ಇನ್‍ಸ್ಟಾಗ್ರಾಂನಲ್ಲಿ ಅಭಿಮಾನಿ, ನೀವು ಲಾಕ್‍ಡೌನ್ ಮುಗಿದ ಬಳಿಕ ಏನ್ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಮೊದಲು ಬೆಂಗಳೂರಿಗೆ ತೆರಳಿ ಅಪ್ಪ, ಅಮ್ಮ ಮತ್ತು ತಂಗಿಯನ್ನು ಭೇಟಿಯಾಗುತ್ತೇನೆ ಎಂದು ತವರೂರನ್ನು ನೆನಪು ಮಾಡಿಕೊಂಡಿದ್ದಾರೆ.

    ಮತ್ತೋರ್ವ ಅಭಿಮಾನಿ ವಿಚಿತ್ರ ಟ್ಯಾಲೆಂಟ್ ಅಂದ್ರೆ ಏನು ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಯನ್ನು ನೀವು ರಣ್‍ವೀರ್ ಅಥವಾ ನನ್ನ ಸೋದರಿಗೆ ಕೇಳಿದ್ರೆ ಚೆನ್ನಾಗಿರುತ್ತದೆ. ಇವರಿಬ್ಬರಿಗೂ ತಾವು ಏನು ಮಾಡುತ್ತಿದ್ದೇವೆ ಎಂಬುವುದೇ ಗೊತ್ತಿರಲ್ಲ ಎಂದು ಫನ್ನಿಯಾಗಿ ಉತ್ತರಿಸಿದ್ದಾರೆ.

  • ಒಂದ್ಕಡೆ ದೀಪಿಕಾ ಎಂಟ್ರಿ, ಮತ್ತೊಂದ್ಕಡೆ ರಣ್‍ವೀರ್ ಎಕ್ಸಿಟ್

    ಒಂದ್ಕಡೆ ದೀಪಿಕಾ ಎಂಟ್ರಿ, ಮತ್ತೊಂದ್ಕಡೆ ರಣ್‍ವೀರ್ ಎಕ್ಸಿಟ್

    – ಆಯುಷ್ಮಾನ್ ಫುಲ್ ಕನ್ಫ್ಯೂಸ್

    ಮುಂಬೈ: ಬಾಲಿವುಡ್ ಕ್ಯೂಟ್ ಜೋಡಿಗಳಲ್ಲೊಂದಾದ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸದಾ ಫನ್ನಿ ವಿಷಯಗಳಿಗೆ ಚರ್ಚೆ ಆಗುತ್ತಿರುತ್ತಾರೆ. ಪತ್ನಿ ದೀಪಿಕಾಗಾಗಿ ನಟ ಆಯುಷ್ಮಾನ್ ಖುರಾನಾ ಜೊತೆಗಿನ ಲೈವ್ ಚಾಟ್‍ನಿಂದ ರಣ್‍ವೀರ್ ಸಿಂಗ್ ಹೊರ ಬಂದಿದ್ದಾರೆ.

    ಲಾಕ್‍ಡೌನ್ ಆದಾಗಿನಿಂದ ಹೋಮ್ ಕ್ವಾರಂಟೈನ್ ನಲ್ಲಿರೋ ಸೆಲೆಬ್ರಿಟಿಗಳ ಪೈಕಿ ಬಹುತೇಕರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಲಾಕ್‍ಡೌನ್ ವೇಳೆ ಮನೆಯಲ್ಲಿ ಮಾಡುತ್ತಿರುವ ಕೆಲಸಗಳ ಬಗ್ಗೆ ಅಪ್‍ಡೇಡ್ ನೀಡುತ್ತಿದ್ದಾರೆ. ಅದರಂತೆ ಗುಳಿಕೆನ್ನೆ ಮಸ್ತಾನಿ ಮತ್ತು ಬಾಜೀರಾವ್ ಮನೆಯಲ್ಲಿ ಬಂಧಿಯಾಗಿದ್ದು, ಜೊತೆಯಾಗಿ ಕ್ವಾಲಿಟಿ ಟೈಮ್ ಕಳೆಯುತ್ತಿದ್ದಾರೆ.

    ಆಯುಷ್ಮಾನ್ ಖುರಾನಾ ಮತ್ತು ರಣ್‍ವೀರ್ ಸಿಂಗ್ ಇನ್‍ಸ್ಟಾಗ್ರಾಂನಲ್ಲಿ ಲೈವ್ ಚಾಟ್ ಮಾಡುತ್ತಿದ್ದಾರೆ. ಲಾಕ್‍ಡೌನ್ ಸಂಬಂಧ ಕುರಿತ ಚರ್ಚೆಯಲ್ಲಿ ಇಬ್ಬರು ಫುಲ್ ಬ್ಯುಸಿಯಾಗಿದ್ದರು. ಲೈವ್ ಮಧ್ಯೆ ದಿಢೀರ್ ಅಂತ ರಣ್‍ವೀರ್ ಸಿಂಗ್ ಬೈ ಹೇಳಲು ಆರಂಭಿಸಿದ್ರು. ಆಗ ಆಯುಷ್ಮಾನ್ ಯಾರಿಗೆ ಬೈ ಹೇಳ್ತಿದ್ದೀಯಾ ಎಂದು ಪ್ರಶ್ನಿಸಿದರು.

    ಆಯುಷ್ಮಾನ ಪ್ರಶ್ನೆಗೆ ಉತ್ತರಿಸಿದ ರಣ್‍ವೀರ್, ನಿಮ್ಮ ಅತ್ತಿಗೆ (ದೀಪಿಕಾ) ಬೈಯುತ್ತಿದ್ದಾಳೆ. ಆಕೆ ಜೂಮ್ ನಲ್ಲಿ ಕರೆ ಮಾಡಿ ಮಾತನಾಡುತ್ತಿದ್ದು, ಕಿರುಚಾಡಬೇಡ ಎಂದು ಹೇಳುತ್ತಿದ್ದಾಳೆ. ಬೈ ಐ ಲವ್ ಯು ಅಂತಾ ಹೇಳಿ ಚಾಟ್‍ನಿಂದ ಹೊರ ಬಂದಿದ್ದಾರೆ. ಒಂದು ಕಡೆ ದೀಪಿಕಾ ಆನ್‍ಲೈನ್‍ಗೆ ಎಂಟ್ರಿಯಾಗುತ್ತಿದ್ದಂತೆ ಪತ್ನಿಗೆ ತೊಂದರೆ ನೀಡಬಾರದು ಅಂತಾ ರಣ್‍ವೀರ್ ತಮ್ಮ ಲೈವ್ ಚಾಟ್ ನಿಂದ ಎಕ್ಸಿಟ್ ಆಗಿದ್ದಾರೆ.

  • ಹಳೆ ಬಾಯ್‍ಫ್ರೆಂಡ್ ನೆನೆದ ದೀಪಿಕಾ ಪಡುಕೋಣೆ

    ಹಳೆ ಬಾಯ್‍ಫ್ರೆಂಡ್ ನೆನೆದ ದೀಪಿಕಾ ಪಡುಕೋಣೆ

    ನವದೆಹಲಿ: ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ವಿವಾಹವಾಗಿ ಎರಡು ವರ್ಷಗಳೇ ಕಳೆಯಿತು. ಹೀಗಿದ್ದರೂ ಇದೀಗ ದೀಪಿಕಾ ತಮ್ಮ ಹಳೆಯ ಬಾಯ್‍ಫ್ರೆಂಡ್ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

    ವಿವಾಹವಾಗುವುದಕ್ಕೂ ಮುನ್ನ ದೀಪಿಕಾ ಪಡುಕೋಣೆ ಹೆಸರು ಉದ್ಯಮಿಗಳು, ಕ್ರಿಕೆಟಿಗರು ಹಾಗೂ ಸಿನಿಮಾ ತಾರೆಯರೊಂದಿಗೆ ತಳುಕು ಹಾಕಿಕೊಂಡಿತ್ತು. ಆದರೆ ಪ್ರೀತಿಸಿದ್ದು ನಟ ರಣಬೀರ್ ಕಪೂರ್ ಅವರನ್ನು. ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್‍ನ ಕ್ಯೂಟ್ ಕಪಲ್ ಅಂತಾ ಗುರುತಿಸಿಕೊಂಡಿದ್ದರು. ಅದೇ ರೀತಿ ಇಬ್ಬರೂ ಓಡಾಡುತ್ತಿದ್ದರು ಸಹ. ಇದೇ ಸಂದರ್ಭದಲ್ಲಿ ದೀಪಿಕಾ ಕತ್ತಿನ ಮೇಲೆ ರಣ್ಬೀರ್ ಕಪೂರ್ ಹೆಸರಿನ ಟ್ಯಾಟು ಹಾಕಿಸಿಕೊಂಡಿದ್ದರು. ಆದರೆ ಇವರಿಬ್ಬರ ಪ್ರೀತಿ ಹೆಚ್ಚು ಕಾಲ ಉಳಿಯಲಿಲ್ಲ. ವೈಮನಸ್ಸಿನಿಂದಾಗಿ ಬೇರೆಯಾದರು.

    ಈ ಎಲ್ಲ ಘಟನೆ ನಡೆದ ಬಳಿಕ ಕೆಲ ದಿನಗಳ ಕಾಲ ದೀಪಿಕಾ ತುಂಬಾ ಬೇಸರಗೊಂಡಿದ್ದರು. ಕೊನೆಗೆ ರಣ್ವೀರ್ ಸಿಂಗ್ ಅವರನ್ನು ವಿವಾಹವಾದರು. ಈ ಜೋಡಿ ವಿವಾಹವಾಗಿ ಎರಡು ವರ್ಷಗಳು ಕಳೆದಿದ್ದು, ಇದೀಗ ಇದ್ದಕ್ಕಿದ್ದಂತೆ ಹಳೆ ಬಾಯ್‍ಪ್ರೆಂಡ್ ಜೊತೆಗಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲವು ಭಾವನಾತ್ಮಕ ಸಾಲುಗಳನ್ನೂ ಬರೆದುಕೊಂಡಿದ್ದಾರೆ. ಆದರೆ ಇದು ಅವರ ಪ್ರೀತಿಯ ಬಗ್ಗೆ ಅಲ್ಲ. ಬದಲಿಗೆ ಅವರ ಸಿನಿಮಾದ ನೆನಪಿನ ಕುರಿತು.

    ಹೌದು ದೀಪಿಕಾ, ರಣ್ಬೀರ್ ಕಪೂರ್ ಒಟ್ಟಿಗೆ ನಟಿಸಿದ್ದ ‘ಯೇ ಜವಾನಿ ಹೈ ದಿವಾನಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಏಳು ವರ್ಷ. ಈ ಸಿನಿಮಾ 2013ರಲ್ಲಿ ಬಿಡುಗಡೆಯಾಗಿತ್ತು. ಬಾಲಿವುಡ್‍ನಲ್ಲಿ ಸಖತ್ ಸದ್ದು ಮಾಡಿತ್ತು ಸಹ. ಈ ಸವಿ ನೆನಪಿನ ಚಿತ್ರಗಳನ್ನು ದೀಪಿಕಾ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಿಗೆ ಸಾಲುಗಳನ್ನು ಬರೆದಿರುವ ಅವರು, ‘ನೆನಪುಗಳು ಸಿಹಿ ತಿಂಡಿಯ ಡಬ್ಬಾ ಇದ್ದಂತೆ, ಒಮ್ಮೆ ತೆರೆದರೆ ಕೇವಲ ಒಂದು ತುಣುಕನ್ನು ತಿಂದು ಸುಮ್ಮನಿರಲಾಗದು’ ಎಂದು ಬರೆದುಕೊಂಡಿದ್ದಾರೆ.

    ಸಿನಿಮಾ ಕುರಿತ ವಿಡಿಯೋವನ್ನು ನಿರ್ಮಾಪಕ ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ಸ್ ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿಯೂ ಹಂಚಿಕೊಂಡಿದ್ದು, ಈ ಒಂದು ಚಿತ್ರ ಯುವ ಪೀಳಿಗೆಗೆ ಬದುಕೋದನ್ನ ಕಲಿಸ್ತು. ಕೀಪ್ ರನ್ನಿಂಗ್, ಇವನ್ ಕೀಪ್ ಫಾಲಿಂಗ್ ಬಟ್ ನೆವರ್ ಸ್ಟಾಪಿಂಗ್’ ಎಂಬ ಸಾಲುಗಳನ್ನು ಬರೆಯಲಾಗಿದೆ. ಅಲ್ಲದೆ ಸೆಲೆಬ್ರೇಟಿಂಗ್, ಹ್ಯಾಷ್‍ಟ್ಯಾಗ್‍ನೊಂದಿಗೆ 7ಇಯರ್ಸ್‍ಆಫ್‍ವೈಜೆಎಚ್‍ಡಿ ಎಂದು ಬರೆಯಲಾಗಿದೆ.

    ಈ ಚಿತ್ರ 2013ರಲ್ಲಿ ಬಾಲಿವುಡ್‍ನಲ್ಲಿ ಭಾರಿ ಸದ್ದು ಮಾಡಿತ್ತು. ಹೀಗಾಗಿ ದೀಪಿಕಾ ಪಡುಕೋಣೆ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಿನಿಮಾ ತಂಡವನ್ನು ನೆನೆದಿದ್ದಾರೆ. ಆದರೆ ದೀಪಿಕಾ ಅವರ ಇನ್‍ಸ್ಟಾ ಸಾಲುಗಳು ತಮ್ಮ ಹಳೆಯ ಪ್ರೀತಿಯನ್ನು ನೆನಪಿಸಿದೆಯೇ ಎಂಬ ಕುರಿತು ಸಹ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

  • ದೀಪಿಕಾರಿಂದ ಮಾವಿನ ಕಾಯಿ ಫೋಟೋ ಪೋಸ್ಟ್ – ಗರ್ಭಿಣಿನಾ ಎಂದು ಫ್ಯಾನ್ಸ್ ಪ್ರಶ್ನೆ

    ದೀಪಿಕಾರಿಂದ ಮಾವಿನ ಕಾಯಿ ಫೋಟೋ ಪೋಸ್ಟ್ – ಗರ್ಭಿಣಿನಾ ಎಂದು ಫ್ಯಾನ್ಸ್ ಪ್ರಶ್ನೆ

    ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅಪ್ಲೋಡ್ ಮಾಡಿರುವ ಫೋಟೋ ನೋಡಿ ಅಭಿಮಾನಿಗಳು ನೀವು ಗರ್ಭಿಣಿನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

    ದೀಪಿಕಾ ಪಡುಕೋಣೆ ಮತ್ತು ನಟ ರಣ್‍ವೀರ್ ಸಿಂಗ್ ಮದುವೆ ಆದ ಕೆಲವು ದಿನಗಳ ನಂತರ ದೀಪಿಕಾ ಗರ್ಭಿಣಿ ಆಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವದಂತಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ದೀಪಿಕಾ ಕೂಡ ಸ್ಪಷ್ಟಪಡಿಸಿದ್ದರು. ಆದರೆ ಇದೀಗ ಲಾಕ್‍ಡೌನ್ ಸಮಯದಲ್ಲಿ ದೀಪಿಕಾ ಸಿಹಿ ಸುದ್ದಿ ನೀಡಿದ್ದಾರ ಎಂಬ ಅನುಮಾನ ಮೂಡಿದೆ. ಯಾಕೆಂದರೆ ದೀಪಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಫೋಟೋ ನೋಡಿ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

    ದೀಪಿಕಾ ಕಟ್ ಮಾಡಿರುವ ಮಾವಿನ ಕಾಯಿ ಪೀಸ್‍ಗಳನ್ನು ಒಂದು ಪ್ಲೇಟಿನಲ್ಲಿ ಹಾಕಿದ್ದಾರೆ. ಅದಕ್ಕೆ ಉಪ್ಪು, ಖಾರ ಹಾಕಿದ್ದು, ಆ ಫೋಟೋವನ್ನು ಶೇರ್ ಮಾಡಿದ್ದಾರೆ. ದೀಪಿಕಾ ಈ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ನೀವು ಗರ್ಭಿಣಿಯೇ?, ಏನಾದರು ಒಳ್ಳೆಯ ಸುದ್ದಿ ಇದಿಯಾ? ಎಂದು ಕಮೆಂಟ್ ಮಾಡುವ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ.

    ಸಾಮಾನ್ಯವಾಗಿ ಗರ್ಭಿಣಿಯಾದವರು ಮಾವಿನ ಕಾಯಿ ತಿಂದು ಬಯಕೆ ಈಡೇರಿಸಿಕೊಳ್ಳುತ್ತಾರೆ. ಈಗ ದೀಪಿಕಾ ಕೂಡ ಮಾವಿನ ಕಾಯಿ ಫೋಟೋ ಪೋಸ್ಟ್ ಮಾಡಿರುವುದರಿಂದ ದೀಪಿಕಾ ಸಹ ಮಾವಿನ ಕಾಯಿ ತಿಂದು ಬಯಕೆ ಈಡೇರಿಕೊಳ್ಳುತ್ತಿದ್ದಾರಾ ಎಂದು ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ. ಆದರೆ ದೀಪಿಕಾ ಮಾತ್ರ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿಲ್ಲ.

    ಇತ್ತೀಚೆಗೆ ದೀಪಿಕಾ ಲಾಕ್‍ಡೌನ್ ಸಮಯದಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ನೆನೆದು ಪೋಸ್ಟ್ ಮಾಡಿದ್ದರು. ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬಾಲ್ಯದ ಫೋಟೋಗಳನ್ನು ದೀಪಿಕಾ ಹಂಚಿಕೊಂಡಿದ್ದರು. ಅದಕ್ಕೆ ‘ಬಾಲ್ಯದಲ್ಲೇ ಆರಂಭಿಸಿದ್ದೆ’ ಎಂದು ಕ್ಯಾಪ್ಷನ್ ಹಾಕಿ ಸ್ಟೇಜ್ ಮೇಲೆ ಕ್ಯೂಟ್ ಪೋಸ್ ಕೊಡುತ್ತಾ ನಿಂತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಹಾಗೆಯೇ ಇನ್ನೊಂದು ಪೋಸ್ಟ್ ನಲ್ಲಿ ಸ್ನೇಹಿತರ ಜೊತೆ ಆಟವಾಡುತ್ತಾ, ಪರಾಟ ತಿನ್ನುತ್ತಿರುವ ಬಾಲ್ಯದ ಫೋಟೋವನ್ನು ಹಂಚಿಕೊಂಡು ಖುಷಿಯನ್ನು ವ್ಯಕ್ತಪಡಿಸಿದ್ದರು.

    ಬಾಲಿವುಡ್‍ನ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣ್‍ವೀರ್ ಸಿಂಗ್ 2018ರ ನವೆಂಬರ್ 14 ಮತ್ತು 15ರಂದು ಇಟಲಿಯ ಕೊಮೊ ಸಿಟಿಯಲ್ಲಿ ಮದುವೆಯಾಗಿದ್ದರು. ನವೆಂಬರ್ 14ರಂದು ಕೊಂಕಣಿ ಹಾಗೂ ನವೆಂಬರ್ 15ರಂದು ಸಿಂಧ್ ಸಂಪ್ರದಾಯದಲ್ಲಿ ದೀಪ್‍ವೀರ್ ವಿವಾಹವಾಗಿದ್ದರು.

    https://www.instagram.com/p/B_t33A_DmF9/?igshid=1wax1sbopplwg

  • ಲಾಕ್‍ಡೌನ್‍ನಲ್ಲಿ ಬಾಲ್ಯವನ್ನು ನೆನೆದ ದೀಪಿಕಾ ಪಡುಕೋಣೆ

    ಲಾಕ್‍ಡೌನ್‍ನಲ್ಲಿ ಬಾಲ್ಯವನ್ನು ನೆನೆದ ದೀಪಿಕಾ ಪಡುಕೋಣೆ

    ಮುಂಬೈ: ದೀಪಿಕಾ ಪಡುಕೋಣೆ ಲಾಕ್‍ಡೌನ್‍ನಲ್ಲಿ ಅಡುಗೆ ಮಾಡುತ್ತಾ, ತಮ್ಮ ಮನೆ ಕೆಲಸ ಮಾಡಿ ಎಂಜಾಯ್ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿ ಲಾಕ್‍ಡೌನ್ ಅವಧಿಯಲ್ಲಿ ಏನೇನು ಕೆಲಸ ಮಾಡುತ್ತಿದ್ದಾರೆ ಎನ್ನೋದನ್ನ ಆಗಾಗ ದೀಪಿಕಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಈಗ ತಮ್ಮ ಬಾಲ್ಯದ ನೆನಪುಗಳನ್ನು ನೆನೆದು ದೀಪಿಕಾ ಪೋಸ್ಟ್ ಮಾಡಿದ್ದಾರೆ.

    ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬಾಲ್ಯದ ಫೋಟೋಗಳನ್ನು ದೀಪಿಕಾ ಹಂಚಿಕೊಂಡಿದ್ದಾರೆ. ಬಾಲ್ಯದಲ್ಲೇ ಆರಂಭಿಸಿದ್ದೆ ಎಂದು ಕ್ಯಾಪ್ಷನ್ ಹಾಕಿ ಸ್ಟೇಜ್ ಮೇಲೆ ಕ್ಯೂಟ್ ಪೋಸ್ ಕೊಡುತ್ತಾ ನಿಂತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ ಇನ್ನೊಂದು ಪೋಸ್ಟ್ ನಲ್ಲಿ ಸ್ನೇಹಿತರ ಜೊತೆ ಆಟವಾಡುತ್ತಾ, ಪರಾಟ ತಿನ್ನುತ್ತಿರುವ ಬಾಲ್ಯದ ಫೋಟೋವನ್ನು ಹಂಚಿಕೊಂಡು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

    https://www.instagram.com/p/B-_eaG3jr-V/

    ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ನೀವು ಯಾವಾಗಲೂ ಕ್ಯೂಟ್ ದೀಪಿಕಾ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ಫೋಟೋಗಳ ಕಥೆ ಏನು ಎಂದು ಹೇಳಿ ಅಂತ ಬೇಡಿಕೆ ಇಟ್ಟಿದ್ದಾರೆ. ಸದ್ಯ ಸಮಾಜಿಕ ಜಾಲತಾಣಗಳಲ್ಲಿ ದೀಪಿಕಾರ ಫೋಟೋಗಳು ಸಖತ್ ವೈರಲ್ ಆಗುತ್ತಿದ್ದು, ತಮ್ಮ ಬಾಲ್ಯದ ಕ್ಯೂಟ್ ಲುಕ್‍ನಿಂದ ದೀಪಿಕಾ ಅಭಿಮಾನಿಗಳ ಮನಗೆದ್ದಿದ್ದಾರೆ.

    https://www.instagram.com/p/B-o2TwRD2-s/

    ದೀಪಿಕಾಗೆ ಬಾಲ್ಯದಿಂದಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಆಸೆ ಇತ್ತು. ಹೀಗಾಗಿ ಶಾಲೆಯಲ್ಲಿ ಓದುತ್ತಿರುವಾಗಲೇ ದೀಪಿಕಾ ಮಾಡೆಲಿಂಗ್ ಮಾಡುವ ಮನಸ್ಸು ಮಾಡಿದ್ದರು. ಆದರೆ ಮನೆಯವರು ಕಾಲೇಜು ವಿದ್ಯಾಭ್ಯಾಸ ಮುಗಿಸಿ ಆಮೇಲೆ ಮಾಡೆಲಿಂಗ್ ಮಾಡು ಎಂದು ಹೇಳಿದ್ದರಂತೆ.

    https://www.instagram.com/p/B-j7QLcD0XB/

    ಹೀಗಾಗಿ ಪದವಿ ಮುಗಿಸುವ ಮುನ್ನವೇ ದೀಪಿಕಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಜೊತೆ ಐಶ್ವರ್ಯಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಸಿನಿ ಲೋಕಕ್ಕೆ ಕಾಲಿಟ್ಟಿದ್ದರು. ಆ ನಂತರ ಬಾಲಿವುಡ್‍ಗೆ ಲಗ್ಗೆಯಿಟ್ಟ ಗುಳಿ ಕೆನ್ನೆ ಚೆಲುವೆ ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ಬಿಟೌನ್‍ನಲ್ಲಿ ತಮ್ಮ ಅಭಿನಯ, ಬ್ಯೂಟಿಯಿಂದಲೇ ದೀಪಿಕಾ ಛಾಪು ಮೂಡಿಸಿದ್ದಾರೆ.