Tag: Deepika Padukone

  • ಪ್ರಭಾಸ್, ದೀಪಿಕಾ ಪಡುಕೋಣೆಯ ಪ್ರಾಜೆಕ್ಟ್ ಕೆ ಚಿತ್ರೀಕರಣ ಆರಂಭ ಯಾವಾಗ?

    ಪ್ರಭಾಸ್, ದೀಪಿಕಾ ಪಡುಕೋಣೆಯ ಪ್ರಾಜೆಕ್ಟ್ ಕೆ ಚಿತ್ರೀಕರಣ ಆರಂಭ ಯಾವಾಗ?

    ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಬಿಗ್ ಬಿ ಅಮಿತಾಭ್ ಬಚ್ಚನ್ ಅಭಿನಯ ಹೊಸ ಪ್ರಾಜೆಕ್ಟ್ ಕೆ ಜುಲೈನಿಂದ ಆರಂಭವಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೀಗ ಈ ಚಿತ್ರದ ಚಿತ್ರೀಕರಣ ನವೆಂಬರ್‌ನಿಂದ ಆರಂಭವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

    K Project

    ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶಿಸುತ್ತಿರುವ ಈ ಪ್ರಾಜೆಕ್ಟ್ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿದ್ದು, ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ನವೆಂಬರ್‌ನಿಂದ ಆರಂಭವಾಗಲಿದ್ದು, ಒಂದು ವರ್ಷಗಳ ಕಾಲ ಶೂಟಿಂಗ್ ನಡೆಯಲಿದೆ. ಅಲ್ಲದೇ 2022ರ ಅಂತ್ಯದ ವೇಳೆಗೆ ಪ್ರಾಜೆಕ್ಟ್ ಕಂಪ್ಲೀಟ್ ಮಾಡುವ ನಿರೀಕ್ಷೆಯನ್ನು ನಿರ್ಮಾಪಕರು ಹೊಂದಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಪ್ರಾಜೆಕ್ಟ್ ಕೆ ವೈ ಜಯಂತಿ ಮೂವೀಸ್ ನಿರ್ಮಿಸುತ್ತಿದೆ.  ಇದನ್ನೂ ಓದಿ: ಇ-ಹರಾಜಿನಲ್ಲಿ ಭಾಗವಹಿಸಲು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

    K Project

    ಜುಲೈನಲ್ಲಿ ಅಮಿತಾಭ್ ಬಚ್ಚನ್ ಚಿತ್ರೀಕರಣವನ್ನು ಆರಂಭಿಸಿದರು. ದೀಪಿಕಾ ಪಡುಕೋಣೆ ಶಕುನ್ ಬಾತ್ರಾ ಅವರ ಹೆಸರಿಡದ ಪ್ರಾಜೆಕ್ಟ್ ಪೂರ್ಣಗೊಳಿಸಿದ್ದು, ಪ್ರಭಾಸ್ ಆದಿ ಪುರುಷ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಕಂಪ್ಲೀಟ್ ಆಗಲಿದೆ. ಈ ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್‍ನಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿದ್ದು, ಪ್ರಾಜೆಕ್ಟ್ ಕೆ ತಂಡವನ್ನು ಶೀಘ್ರದಲ್ಲಿಯೇ ಕಲಾವಿದರು ಸೇರಿಕೊಳ್ಳಲಿದ್ದಾರೆ.  ಇದನ್ನೂ ಓದಿ: ಐವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಡೆತ್ ನೋಟ್‍ನಲ್ಲಿ ಅಪ್ಪನ ವಿರುದ್ಧವೇ ಮಕ್ಕಳ ಆರೋಪ

    ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಪ್ರಾಜೆಕ್ಟ್ ಕೆ ನಲ್ಲಿ ಒಟ್ಟಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಇನ್ನೂ ಈ ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್‍ನಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿದೆ. ಅತ್ಯಂತ ದುಬಾರಿ ಭಾರತೀಯ ಸಿನಿಮಾಗಳನ್ನು ತೆರೆದ ಹೆಸರಾಂತ ನಿರ್ದೇಶಕರಲ್ಲಿ ನಾಗ್ ಅಶ್ವಿನ್ ಕೂಡ ಒಬ್ಬರಾಗಿದ್ದು, ಪ್ರಾಜೆಕ್ಟ್ ಕೆ ಗೆ ವೈಜಯಂತಿ ಮೂವೀಸ್ ಬಂಡವಾಳ ಹೂಡುತ್ತಿದೆ.

  • ಫರಾ ಖಾನ್‍ಗೆ ಕೊರೊನಾ – ದೀಪಿಕಾ, ಅಮಿತಾಭ್ ಬಗ್ಗೆ ಅಭಿಮಾನಿಗಳ ಪ್ರಶ್ನೆ

    ಫರಾ ಖಾನ್‍ಗೆ ಕೊರೊನಾ – ದೀಪಿಕಾ, ಅಮಿತಾಭ್ ಬಗ್ಗೆ ಅಭಿಮಾನಿಗಳ ಪ್ರಶ್ನೆ

    ಮುಂಬೈ: ಬಾಲಿವುಡ್ ನಿರ್ದೇಶಕಿ, ನಿರ್ಮಾಪಕಿ ಫರಾ ಖಾನ್‍ಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರ ಜೊತೆಗಿದ್ದ ನಟಿ ದೀಪಿಕಾ ಪಡುಕೋಣೆ, ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೂ ಬಂದಿದೆಯಾ ಎಂಬ ಸಂದೇಹ ಅಭಿಮಾನಿಗಳಲ್ಲಿದೆ.

    ‘ಕೌನ್ ಬನೇಗಾ ಕರೋಡ್‍ಪತಿ – ಸೀಸನ್ 13’ ಶೂಟಿಂಗ್‍ನಲ್ಲಿ ಫರಾ ಖಾನ್ ಭಾಗವಹಿಸಿದ್ದು, ಈ ವೇಳೆ ಬಾಲಿವುಡ್ ಬಚ್ಚನ್ ಮತ್ತು ದೀಪಿಕಾ ಜೊತೆಗೆ ಕಾಲ ಕಳೆದಿದ್ದಾರೆ. ಈ ವೇಳೆ ಒಂದು ಸೆಲ್ಫಿಯನ್ನು ತೆಗೆದುಕೊಂಡಿದ್ದು, ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಲಾಗಿತ್ತು. ಇದನ್ನೂ ಓದಿ: ಮಾರ್ಷಲ್‍ನನ್ನೇ ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋದ ಚಾಲಕ

    ಈ ಫೋಟೋ ನೋಡಿದವರು ಫರಾ ಖಾನ್ ಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರ ಜೊತೆಗಿದ್ದ ದೀಪಿಕಾ ಮತ್ತು ಅಮಿತಾಭ್ ಗತಿ ಏನು ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ನಾನು ಫುಲ್ ಥ್ರಿಲ್ ಆಗಿದ್ದೇನೆ ಅಂದ್ರು ಡಿಂಪಲ್ ಕ್ವೀನ್ ರಚಿತಾ

     

    View this post on Instagram

     

    A post shared by Farah Khan Kunder (@farahkhankunder)

    ಫರಾ ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ, ಲೆಜೆಂಡ್ ಕೈಯಿಂದ ಸೆಲ್ಫಿಯನ್ನು ತೆಗೆದುಕೊಳ್ಳುವ ಸೌಭಾಗ್ಯ ನಮ್ಮದಾಗಿದೆ. ಶಿಕ್ಷಕರ ದಿನಾಚರಣೆಯ ನಡೆಸಿದ ವಿಶೇಷ ಸಂಚಿಕೆಯಲ್ಲಿ ಈ ಅದ್ಭುತ ಅವಕಾಶ ಸಿಕ್ಕಿರುವುದು ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ. ಈ ದಿನ ದೀಪಿಕಾ ಸಹ ಭಾಗವಹಿಸಿದ್ದು, ಅವರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಈ ಫೊಟೋವನ್ನು ನನಗೆ ಪಾಸಿಟಿವ್ ಬರುವ ಮುನ್ನ ತೆಗೆಯಲಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಸಮಾಧಾನ ಸಿಕ್ಕಿದೆ.

  • 7 ಕೋಟಿಗೆ ಬೆಂಗಳೂರಲ್ಲಿ ಫ್ಲ್ಯಾಟ್ ಖರೀದಿಸಿದ ದೀಪಿಕಾ

    7 ಕೋಟಿಗೆ ಬೆಂಗಳೂರಲ್ಲಿ ಫ್ಲ್ಯಾಟ್ ಖರೀದಿಸಿದ ದೀಪಿಕಾ

    – ತಂದೆ ಜೊತೆ ಗಂಗಾನಗರದಲ್ಲಿ ಮನೆ ಖರೀದಿ

    ಬೆಂಗಳೂರು: ಮೂಲತಃ ಕರ್ನಾಟಕದವರಾದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತವರಿನತ್ತ ಕೊಂಚ ಒಲವು ಹೊಂದಿದ್ದಾರೆ. ಹೀಗಾಗಿ ನಗರದ ಬಳ್ಳಾರಿ ರಸ್ತೆಯ ಗಂಗಾನಗರದಲ್ಲಿ 6.79 ಕೋಟಿ ರೂ.ಗಳನ್ನು ನೀಡಿ ಫ್ಲ್ಯಾಟ್ ಖರೀದಿಸಿದ್ದಾರೆ. ಆದರೆ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರಾ ಅಥವಾ ರಾಜ್ಯಕ್ಕೆ ಭೇಟಿ ನೀಡಿದಾಗ ಉಳಿದುಕೊಳ್ಳಲು ಫ್ಲ್ಯಾಟ್ ಖರೀದಿಸಿದ್ದಾರಾ ತಿಳಿಯಬೇಕಿದೆ.

    ದೀಪಿಕಾ ಪಡುಕೋಣೆಯವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪಡುಕೋಣೆಯವರು. ಇವರ ತಂದೆ ಪ್ರಕಾಶ್ ಪಡುಕೋಣೆ ಭಾರತದ ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರರು. ದೀಪಿಕಾ ಅವರು ತವರಿನ ಬಗ್ಗೆ ಒಲವು ಹೊಂದಿದ್ದಾರೆ. ಆಗಾಗ ರಾಜ್ಯಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ಇದೀಗ ಬೆಂಗಳೂರಲ್ಲಿ ಮನೆ ಫ್ಲ್ಯಾಟ್ ಖರೀದಿಸುವ ಮೂಲಕ ಗಮನಸೆಳೆದಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣ ಸಿನಿಮಾಗೆ ಸಲ್ಮಾನ್ ಖಾನ್ ಮೆಚ್ಚುಗೆ

    ಬಾಲಿವುಡ್‍ಗೆ ಕಾಲಿಟ್ಟ ಬಳಿಕ ಹ್ಯಾಟ್ರಿಕ್ ಸಿನಿಮಾಗಳಲ್ಲಿ ನಟಿಸಿರುವ ದೀಪಿಕಾ, ಮುಂಬೈನಲ್ಲೇ ವಾಸಿಸುತ್ತಿದ್ದರು. ಬಳಿಕ ನಟ ರಣವೀರ್ ಸಿಂಗ್ ಜೊತೆ ವಿವಾಹವಾದರು. ಇದೀಗ ತಂದೆ ಜೊತೆ ಸೇರಿ ಬೆಂಗಳೂರಿನಲ್ಲಿ ಮನೆ ಖರೀದಿಸುವ ಮೂಲಕ ತವರಿಗೆ ಮರಳುತ್ತಿದ್ದಾರೆ. ಆದರೆ ಇದೇ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರಾ ಅಥವಾ ಆಗಾಗ ಭೇಟಿ ಕೊಡಲಿದ್ದಾರಾ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ:  ಜನ್ಮದಿನಾಚರಣೆಯ ಸಂಭ್ರಮದಲ್ಲಿ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್

    ಆ.7ರಂದು 6.79 ಕೋಟಿ ರೂ.ಗೆ ಫ್ಲ್ಯಾಟ್ ಖರೀದಿಸಿದ್ದು, ಸ್ಟಾಂಪ್ ತೆರಿಗೆಯಾಗಿ 34.64 ಲಕ್ಷ ರೂ.ಪಾವತಿಸಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿ ಅಂದರೆ ಹೊಸ ವಿಮಾನ ನಿಲ್ದಾಣದ ರಸ್ತೆಯ ಗಂಗಾನಗರದಲ್ಲಿನ ಎಂಬಸಿ ಗ್ರೂಪ್‍ನ ಫೋರ್ ಸೀಸನ್ಸ್ ಎಂಬ 27 ಅಂತಸ್ತಿನ ಅಪಾರ್ಟ್‍ಮೆಂಟ್‍ನಲ್ಲಿ 22ನೇ ಅಂತಸ್ತಿನಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ.

    ಫ್ಲ್ಯಾಟ್ ವಿಶೇಷತೆ
    ಒಟ್ಟು 3451.37 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಈ ಅಪಾರ್ಟ್‍ಮೆಂಟ್‍ನಲ್ಲಿ ಪ್ರತಿಯೊಬ್ಬರಿಗೂ ಖಾಸಗಿ ನಿವಾಸವನ್ನು ನೀಡುತ್ತದೆ. ವಿಸ್ತಾರವಾದ 2 ಮಲಗುವ ಕೋಣೆಗಳು ಹಾಗೂ 2 ಕಾರ್ ಪಾರ್ಕಿಂಗ್‍ಗಳನ್ನು ಹೊಂದಿದೆ.

  • ಹಾಲಿವುಡ್ ಸಿನ್ಮಾದಲ್ಲಿ ನಟಿಸುವ ಜೊತೆಗೆ ನಿರ್ಮಾಣಕ್ಕೆ ಮುಂದಾದ ಪದ್ಮಾವತಿ

    ಹಾಲಿವುಡ್ ಸಿನ್ಮಾದಲ್ಲಿ ನಟಿಸುವ ಜೊತೆಗೆ ನಿರ್ಮಾಣಕ್ಕೆ ಮುಂದಾದ ಪದ್ಮಾವತಿ

    ಮುಂಬೈ: ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ಮತ್ತೊಂದು ಹಾಲಿವುಡ್ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣವನ್ನು ಮಾಡುತ್ತಿದ್ದಾರೆ.

    ‘ಎಕ್ಸ್ ಎಕ್ಸ್ ಎಕ್ಸ್-ರಿಟರ್ನ್ ಆಫ್ ಸ್ಯಾಂಡರ ಕೇಜ್’ ಸಿನಿಮಾ ಮೂಲಕ ದೀಪಿಕಾ ಹಾಲಿವುಡ್ ಪ್ರವೇಶಿದ್ದರು. ಈಗ ಮತ್ತೆ ಹಾಲಿವುಡ್ ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲ ನಿರ್ಮಾಣವನ್ನು ಮಾಡುವುದಾಗಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

     

    View this post on Instagram

     

    A post shared by Deepika Padukone (@deepikapadukone)

    ದೀಪಿಕಾ ತಮ್ಮ ಹಾಲಿವುಡ್ ಸಿನಿಮಾದಲ್ಲಿ ನಟಿಸುವ ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಕಂಡಿದ್ದು, ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದರು. 4 ವರ್ಷಗಳ ನಂತರ ದೀಪಿಕಾ ‘ಎರೋಸ್ ಎಸ್ಟಿಎಕ್ಸ್ ಗ್ಲೋಬಲ್ ಕಾಪೆರ್Çರೇಷನ್ಸ್ ಡಿವಿಷನ್’ (ಎಸ್ಟಿಎಕ್ಸ್) ಫಿಲ್ಮ್ಸ್‍ನ ಕ್ರಾಸ್ ಕಲ್ಚರಲ್‍ನ ಕಾಮಿಡಿ ರೋಮ್ಯಾಂಟಿಕ್ ಸಿನಿಮಾಗೆ ಸಹಿ ಹಾಕಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ನಟಿಸುವುದು ಮಾತ್ರವಲ್ಲ ತಮ್ಮ ‘ಕಾ’ ಪ್ರೊಡಕ್ಷನ್ ಮೂಲಕ ನಿರ್ಮಾಣವನ್ನು ಮಾಡುತ್ತಿದ್ದಾರೆ.ಇದನ್ನೂ ಓದಿ:ಯುವನಟನಿಗೆ ಲಾಂಗ್ ಹಿಡಿಯುವುದನ್ನು ಹೇಳಿಕೊಟ್ಟ ಜೋಗಿ

    ಈ ಕುರಿತು ದೀಪಿಕಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ‘ವಿಶ್ವವಿಖ್ಯಾತ ನಟಿ ದೀಪಿಕಾ ಪಡುಕೋಣೆ ಎಸ್ಟಿಎಕ್ಸ್ ಫಿಲ್ಮ್‍ಗೆ ಕೈಜೋಡಿಸಿದ್ದು, ರಾಮ್‍ಕಾಮ್ ಸಿನಿಮಾವನ್ನು ಜಗತ್ತಿನಾದ್ಯಂತ ತಲುಪಿಸುವ ಪ್ರಯತ್ನದಲ್ಲಿದ್ದಾರೆ’ ಎಂದು ಹೇಳಲಾಗಿದೆ..ಇದನ್ನೂ ಓದಿ:ಚೊಚ್ಚಲ ಬಾಲಿವುಡ್ ಸಿನಿಮಾ ಶೂಟಿಂಗ್ ಮುಗಿದ ಖುಷಿಯಲ್ಲಿ ಕೂಡಗಿನ ಕುವರಿ

  • ದೀಪಿಕಾ ಪಡುಕೋಣೆ ತಾಯಿಯಾಗುತ್ತಿದ್ದಾರಾ?

    ದೀಪಿಕಾ ಪಡುಕೋಣೆ ತಾಯಿಯಾಗುತ್ತಿದ್ದಾರಾ?

    ಮುಂಬೈ: ಬಾಲಿವುಡ್‍ನಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕುರಿತು ಗಾಸಿಪ್‍ಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಆದರೆ ಈ ಬಾರಿ ದೀಪ್‍ವೀರ್ ದಂಪತಿ ಮಗುವಿನ ನಿರೀಕ್ಷೆಯಲ್ಲಿರುವ ಕುರಿತು ಸುದ್ದಿಯಾಗಿದ್ದಾರೆ.

    ಹೌದು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ದೀಪ್‍ವೀರ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಪರಿಣಿತಿ ಚೋಪ್ರಾ ಅವರು ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಿದ್ದು, ಈ ವೇಳೆ ಅಭಿಮಾನಿಯೊಬ್ಬರು ಈ ವಿಚಾರ ಹೇಳಿದ್ದಾರೆ. ರಣವೀರ್ ಸಿಂಗ್ ಪಾಪಾ ಬನ್‍ಗಯಾ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪರಿಣಿತಿ ಚೋಪ್ರಾ, ದಯವಿಟ್ಟು ಖಚಿತಪಡಿಸಿ ಎಂದು ರಣವೀರ್ ಸಿಂಗ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ರಾಖಿಗೆ ಕಚ್ಚಿದ ನಾಯಿ – ನಾನು ಅದನ್ನ ಕಚ್ತೀನಿ ಅಂದ ನಟಿ

    ಪರಿಣಿತಿ ಅವರ ಪ್ರಶ್ನೆಗೆ ರಣವೀರ್ ಸಿಂಗ್ ಇನ್ನೂ ಉತ್ತರಿಸಿಲ್ಲ. ಆದರೆ ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ರಣವೀರ್ ಸಿಂಗ್ ಅವರೇ ಖಚಿತಪಡಿಸಬೇಕಿದೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು 2013ರಲ್ಲಿ ಡೇಟಿಂಗ್ ಆರಂಭಿಸಿ, 2018ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ವರೆಗೆ ಮಕ್ಕಳ ವಿಚಾರದಲ್ಲಿ ಈ ಜೋಡೆ ಅಷ್ಟೇನು ಸುದ್ದಿಯಾಗಿರಲಿಲ್ಲ. ಇದೀಗ ಪರಿಣಿತಿ ಚೋಪ್ರಾಗೆ ಅಭಿಮಾನಿಯೊಬ್ಬರು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಗೋಲಿಯೋನ್ ಕಿ ರಾಸ್‍ಲೀಲಾ: ರಾಮ್-ಲೀಲಾ, ಬಾಜಿರಾವ್ ಮಸ್ತಾನಿ, ಪದ್ಮಾವತ್ ಸೇರಿದಂತೆ ಹಲವು ಚಿತ್ರಗಳಲ್ಲಿ ಈ ಜೋಡಿ ಒಟ್ಟಿಗೆ ತೆರೆ ಹಂಚಿಕೊಂಡಿದೆ. ಹೀಗೆ ನಟನೆ ಹಾಗೂ ಖಾಸಗಿ ಜೀವನವನ್ನು ಜೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

  • ಬನಿಯನ್‍ನಲ್ಲಿ ರಣ್‍ವೀರ್ ಡ್ಯಾನ್ಸ್ – ನಾಚಿ ನೀರಾದ ದೀಪಿಕಾ

    ಬನಿಯನ್‍ನಲ್ಲಿ ರಣ್‍ವೀರ್ ಡ್ಯಾನ್ಸ್ – ನಾಚಿ ನೀರಾದ ದೀಪಿಕಾ

    ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಭಾನುವಾರ ರಣ್‍ವೀರ್ ಸಿಂಗ್ ತಾಯಿ ಅಂಜು ಭಾವನಾನಿಯವರ ಹುಟ್ಟುಹಬ್ಬವನ್ನು ಸೆಲಬ್ರೆಟ್ ಮಾಡಿದ್ದಾರೆ.

    ಈ ವಿಶೇಷ ದಿನದಂದು ರಣ್‍ವೀರ್ ಹಾಗೂ ದೀಪಿಕಾ ತಮ್ಮ ಆಪ್ತರಿಗೆ ಮುಂಬೈನ ವರ್ಲಿಯಾ ಬಾಸ್ಟಿಯನ್‍ನಲ್ಲಿ ಔತಣ ಕೂಟವನ್ನು ಏರ್ಪಡಿಸಿದ್ದರು. ಈ ವೇಳೆ ರಣ್‍ವೀರ್ ಸಿಂಗ್ ಬನಿಯನ್‍ನಲ್ಲಿ ದೀಪಿಕಾ ಮುಂದೆ ಮಸ್ತ್, ಮಸ್ತ್ ಸ್ಟೆಪ್ ಹಾಕಿದ್ದು, ದೀಪಿಕಾ ನಾಚಿ ನೀರಾಗಿದ್ದಾರೆ.

     

    View this post on Instagram

     

    A post shared by Bollywood Pap (@bollywoodpap)

    ಸದ್ಯ ರಣ್‍ವೀರ್ ಡ್ಯಾನ್ಸ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ವೀಡಿಯೋದಲ್ಲಿ ದೀಪಿಕಾ ಸೋಫಾ ಮೇಲೆ ಕುಳಿತುಕೊಂಡಿರುತ್ತಾರೆ. ಆಗ ರಣ್‍ವೀರ್ ದೀಪಿಕಾರನ್ನು ಮೆಚ್ಚಿಸಲು ಬನಿಯನ್‍ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ದೀಪಿಕಾ ರಣ್‍ವೀರ್ ಡ್ಯಾನ್ಸ್ ನೋಡಿ ನಗುತ್ತಾ ನಾಚಿ ನೀರಾಗಿದ್ದಾರೆ. ಈ ವೀಡಿಯೋ ಎಲ್ಲರ ಹೃದಯ ಗೆಲ್ಲುತ್ತಿದೆ. ಇದನ್ನೂ ಓದಿ:ನಿಮಗೇನು ಮಾಡಲು ಕೆಲಸ ಇಲ್ಲವೇ- ಟ್ರೋಲಿಗರ ವಿರುದ್ಧ ರಣ್‍ವೀರ್ ಸಿಂಗ್ ಗರಂ

     

    View this post on Instagram

     

    A post shared by Bollywood Pap (@bollywoodpap)

    ಮತ್ತೊಂದು ವೀಡಿಯೋದಲ್ಲಿ ರಣ್‍ವೀರ್ ಹಾಗೂ ದೀಪಿಕಾ ಅಭಿನಯದ ಸೂಪರ್ ಹಿಟ್ ‘ಪದ್ಮವತ್’ ಸಿನಿಮಾದ ‘ಖಾಲಿಬಲಿ’ ಹಾಡಿಗೆ ರಣ್‍ವೀರ್ ತಮ್ಮ ತಂದೆ ಜಗಜೀತ್ ಸಿಂಗ್ ಜೊತೆ ಸ್ಟೆಪ್ಸ್ ಹಾಕಿದ್ದಾರೆ. ಈ ಬರ್ತ್‍ಡೇ ಕಾರ್ಯಕ್ರಮದಲ್ಲಿ ದೀಪಿಕಾ ಪೋಷಕರಾದ ಪ್ರಕಾಶ್ ಮತ್ತು ಉಜ್ಜಲಾ ಪಡುಕೋಣೆ, ಜಗಜೀತ್ ಸಿಂಗ್, ಸಹೋದರಿ ರಿತಿಕಾ ಭಾವನಾನಿ ಸೇರಿದಂತೆ ಕುಟುಂಬಸ್ಥರು ಪಾಲ್ಗೊಂಡಿದ್ದರು. ಇದನ್ನೂ ಓದಿ:ರಣ್‍ವೀರ್ ಸ್ಟ್ರಾಂಗ್ ಲುಕ್‍ಗೆ ದೀಪಿಕಾ ಕಮೆಂಟ್

     

    View this post on Instagram

     

    A post shared by Bollywood Pap (@bollywoodpap)

  • ಪ್ರಭಾಸ್ ಜೊತೆ ನಟಿಸ್ತಿದ್ದಾರಾ ಅಮಿತಾಬ್ ಬಚ್ಚನ್?

    ಪ್ರಭಾಸ್ ಜೊತೆ ನಟಿಸ್ತಿದ್ದಾರಾ ಅಮಿತಾಬ್ ಬಚ್ಚನ್?

    ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ನಟ ಬಾಹುಬಲಿ ಪ್ರಭಾಸ್ ಜೊತೆ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಇದೀಗ ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅಮಿತಾಬ್ ಬಚ್ಚನ್ ಶುಕ್ರವಾರ ಟ್ವೀಟ್ ಮಾಡಿದ್ದು, ಈ ಟ್ವೀಟ್ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

    ಹೌದು, ಬಿಗ್-ಬಿ ಅಮಿತಾಬ್ ಬಚ್ಚನ್ ಶುಕ್ರವಾರ ಹೊಸ ಸಿನಿಮಾದ ಮುಹೂರ್ತವೊಂದಕ್ಕೆ ಹಾಜರಾಗಿದ್ದು, ಈ ಕುರಿತಂತೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಹೊಸ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಪ್ರಯಾಣಿಸಿದೆ. ಹೊಸ ಸಿನಿಮಾ, ಹೊಸ ಆರಂಭ, ಹೊಸ ವಾತಾವರಣ, ಹೊಸತು ಯಾವಾಗಲೂ ಉತ್ಸಾಹ ತುಂಬುತ್ತದೆ. ಹೊಸತು ಎಂಬುದು ಹಳತಾಗುವುದಿಲ್ಲ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    ಸದ್ಯ ಸಲಾರ್ ಹಾಗೂ ಅವತಾರ ಪುರುಷ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಪ್ರಭಾಸ್ ಈ ಸಿನಿಮಾಗಳ ನಂತರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೊತೆ ಹೊಸ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಕೂಡ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈ ಚಿತ್ರದ ಮುಹೂರ್ತ ಶುಕ್ರವಾರ ನಡೆದಿದ್ದು, ಅಮಿತಾಬ್ ಬಚ್ಚನ್ ಈ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಕುಟುಂಬ ಸಮೇತರಾಗಿ ಈ ಸಿನಿಮಾ ನೋಡಿ: ಶಿಲ್ಪಾ ಶೆಟ್ಟಿ

  • 69 ದಿನಗಳ ಬಳಿಕ ದೀಪಿಕಾ ಕಮ್‍ಬ್ಯಾಕ್ – ಅಭಿಮಾನಿಗಳು ಫುಲ್ ಖುಷ್

    69 ದಿನಗಳ ಬಳಿಕ ದೀಪಿಕಾ ಕಮ್‍ಬ್ಯಾಕ್ – ಅಭಿಮಾನಿಗಳು ಫುಲ್ ಖುಷ್

    ಮುಂಬೈ: ನಟಿ ದೀಪಿಕಾ ಪಡುಕೋಣೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರಲ್ಲ. ತುಂಬಾ ಅಪರೂಪಕ್ಕೆ ಎಂಬಂತೆ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ 69 ದಿನಗಳ ಬಳಿಕ ಮಸ್ತಾನಿ, ಮಜವಾದ ಇನ್‍ಸ್ಟಾ ಪೋಸ್ಟ್ ಮಾಡಿದ್ದಾರೆ. ಮಸ್ತಾನಿಯ ಮಸ್ತ ಪೋಸ್ಟ್ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಲೈಕ್ ನೀಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

    ಏಪ್ರಿಲ್ 20ರಂದು ದೀಪಿಕಾ ತಮ್ಮ ಫೋಟೋವನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. ತದನಂತರ ಮೇ 2ರಂದು ಮೆಂಟಲ್ ಹೆಲ್ತ್ ಹೆಲ್ಪ್ ಲೈನ್‍ಗೆ ಸಂಬಂಧಿಸಿದ ಕುರಿತ ಪೋಸ್ಟ್ ಮಾಡಿದ್ರು. ಆದಾದ ನಂತರ ದೀಪಿಕಾ ಅದ್ಯಾಕೋ ಸೋಶಿಯಲ್ ಮೀಡಿಯಾದಿಂದ ದೂರ ಉಳಿದುಕೊಂಡಿದ್ದರು. ಎರಡು ಫೋಟೋಗಳನ್ನು ಹಂಚಿಕೊಂಡು ಕೆಲ ಸಾಲುಗಳನ್ನು ದೀಪಿಕಾ ಬರೆದುಕೊಂಡಿದ್ದಾರೆ.

    ನಿರೀಕ್ಷೆ ವರ್ಸಸ್ ನೈಜತೆ Expectation vs Reality
    ಎಕ್ಸಪೆಕ್ಟೇಶನ್ ವರ್ಸಸ್ ರಿಯಾಲಿಟಿ ಎಂದು ಬರೆದು ಎರಡು ಫೋಟೋಗಳನ್ನು ದೀಪಿಕಾ ಪೋಸ್ಟ್ ಮಾಡಿದ್ದಾರೆ. ಎಕ್ಸ್ ಪೆಕ್ಟೇಶನ್ ನಲ್ಲಿ ಯೋಗ ಮಾಡುವ ಭಂಗಿಯ ಫೋಟೋ ಇದ್ರೆ, ರಿಯಾಲಿಟಿಯಲ್ಲಿ ನಿದ್ದೆ ಮಾಡ್ತಿರೋ ಫೋಟೋ ಇದೆ.

     

    View this post on Instagram

     

    A post shared by Deepika Padukone (@deepikapadukone)

    ದೀಪಿಕಾ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ವೈರಲ್ ಆಗಿದೆ. ಓರ್ವ ಅಭಿಮಾನಿ 69 ದಿನಗಳ ಬಳಿಕ ನಿಮ್ಮನ್ನು ನೋಡುವ ಭಾಗ್ಯ ಸಿಕ್ಕಿತಲ್ಲ ಅಂತ ಖುಷಿಪಟ್ಟಿದ್ದಾನೆ. ಮತ್ತೊಬ್ಬರು ಲವ್ ಯು ಕ್ವೀನ್ ಅಂತ ಕಮೆಂಟ್ ಮಾಡಿದ್ರು, ಮತ್ತೋರ್ವ ಅಭಿಮಾನಿ, ಇವತ್ತಿನ ನನ್ನ ದಿನ ಸುಂದರವಾಯ್ತು ಎಂದು ಹೊಗಳಿದ್ದಾನೆ.

    ಕೆಲ ದಿನಗಳ ಹಿಂದೆ ಪತಿ ರಣ್‍ವೀರ್ ಸಿಂಗ್ ಕಪ್ಪು ಬಣ್ಣದ ಟೀಶರ್ಟ್ ತೊಟ್ಟು ಸ್ಟ್ರಾಂಗ್ ಆ್ಯಂಡ್ ಆ್ಯಂಗ್ರಿ ಮ್ಯಾನ್ ರೀತಿ ಲುಕ್ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋಗಳನ್ನ ರಣ್‍ವೀರ್ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಮಹಿಳಾ ಅಭಿಮಾನಿಗಳು ಹಾಟ್ ಆ್ಯಂಡ್ ಸೆಕ್ಸಿ ಅಂತ ಕಮೆಂಟ್ ಮಾಡಲಾರಂಭಿಸಿದ್ದರು. ಪತಿಯ ಫೋಟೋಗೆ ಕಮೆಂಟ್ ಮಾಡಿದ್ದ ದೀಪಿಕಾ, ಇವನು ನನ್ನವನು ಎಂದು ಬರೆದು ಪತಿಯನ್ನ ಬಿಟ್ಟುಕೊಡಲಾರೆ ಅಂತ ಹೇಳಿದ್ರು.

  • ದೀಪಿಕಾ ಪಡುಕೋಣೆಗೆ ಕೊರೊನಾ ಪಾಸಿಟಿವ್

    ದೀಪಿಕಾ ಪಡುಕೋಣೆಗೆ ಕೊರೊನಾ ಪಾಸಿಟಿವ್

    ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.

    ತಂದೆಗೆ ಕೊರೊನಾ ಕಾಣಿಸಿಕೊಂಡಿರು ಬೆನ್ನಲ್ಲೆ ದೀಪಿಕಾ ಅವರಿಗೂ ಸೋಂಕು ದೃಢವಾಗಿದೆ. ದೀಪಿಕಾ ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಬೆಂಗಳೂರಿನಲ್ಲಿದ್ದಾರೆ. ಲಾಕ್‍ಡೌನ್ ಪ್ರಾರಂಭವಾಗುವ ಮೊದಲೇ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ಕಳೆದ ತಿಂಗಳು ಬೆಂಗಳೂರಿಗೆ ಬಂದಿದ್ದಾರೆ. ಇದನ್ನು ಓದಿ: ಪ್ರಕಾಶ್ ಪಡುಕೋಣೆಗೆ ಕೊರೊನಾ – ಆಸ್ಪತ್ರೆಗೆ ದಾಖಲು

    ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕುಟುಂಬದ ಎಲ್ಲರಿಗೂ ಕೊರೊನಾ ವಕ್ಕರಿಸಿದ್ದು, ತಂದೆ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಪ್ರಕಾಶ್ ಪಡುಕೋಣೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ವಾರ ಕಳೆದರೂ ಜ್ವರ ಕಡಿಮೆ ಆಗದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಲಾಗಿದ್ದು ಈ ವೇಳೆ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನಲೆಯಲ್ಲಿ ಅವರನ್ನು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಪ್ರಕಾಶ್ ಪಡುಕೋಣೆ ಅವರ ಪತ್ನಿ ಉಜ್ವಲ ಹಾಗೂ ಎರಡನೇ ಪುತ್ರಿಗೂ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ. ಅವರು ಮನೆಯಲ್ಲೇ ಐಸೋಲೆಟ್ ಆಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

  • ಮೋದಿ ಮನ್ ಕಿ ಬಾತ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ ದೀಪಿಕಾ

    ಮೋದಿ ಮನ್ ಕಿ ಬಾತ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ ದೀಪಿಕಾ

    ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿತಿಂಗಳು ನಡೆಸುವ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಹೇಳಿದ್ದರು. ಈ ಬಗ್ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಟ್ವೀಟ್ ಮಾಡುವ ಮೂಲಕವಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಮೋದಿ ಅವರು ಮನದ ಮಾತು ಸರಣಿಯ 73ನೇ ಹಾಗೂ ಈ ವರ್ಷದ ಮೊದಲ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ್ದರು. ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ನಾಲ್ವರು ಮಹಿಳಾ ಪೈಲಟ್‍ಗಳು, ಸ್ಯಾನ್ ಫ್ರಾನ್ಸಿಸ್ಕೊ-ಬೆಂಗಳೂರು ನಡುವಣ ವಿಶ್ವದ ಅತೀ ದೀರ್ಘ ವಾಯು ಮಾರ್ಗದ ವಿಮಾನಯಾನವನ್ನು ಸಂಪೂರ್ಣವಾಗಿ ಕ್ರಮಿಸಿ ಇತಿಹಾಸ ನಿರ್ಮಿಸಿದ್ದಾರೆ. ದೇಶದ ಪ್ರಮುಖ ವಿಚಾರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗುತ್ತಿರುವ ಕುರಿತಾಗಿ ಮೆಚ್ಚುಗೆಯ ಮಾತನಾಡಿದ್ದರು.

    ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದರು. ಈ ಬಗ್ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಸಾಮಾಜಿಕಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕವಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಸಾಧನೆಗಳ ಬಿಂಬಿಸುವ ಚಿತ್ರಗಳನ್ನು  ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಭಾರತ ನಮ್ಮ ನಾರೀಯರ ಶಕ್ತಿಗೆ ನಮಿಸುತ್ತದೆ ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದರು.

    ಪ್ರಧಾನಿಯವರು ಮಾಡಿರುವ ಈ ಟ್ವೀಟ್ ಅನ್ನು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ರೀಟ್ವೀಟ್ ಮಾಡಿಕೊಂಡಿದ್ದಾರೆ. ನೀವು ಜಗತ್ತಿನಲ್ಲಿ ಕಾಣಬಯಸುವ ಬದಲಾವಣೆಯನ್ನು ನಿಮ್ಮಲ್ಲಿ ತಂದುಕೊಳ್ಳಿ ಎಂಬ ಮಹಾತ್ಮಾ ಗಾಂಧಿಯವರ ಮಾತನ್ನು ಉಲ್ಲೇಖಿಸಿ, ಈ ಪದಗಳು ಈ ಅಸಾಮಾನ್ಯ ಮಹಿಳೆಯರು ಮತ್ತು ಪ್ರಪಂಚದಾದ್ಯಂತ ಇರುವ ಪ್ರತಿಯೊಬ್ಬ ಮಹಿಳೆಯರ ಪಾಲಿಗೆ ನಿಜವಾಗಲಾರವು ಎಂದು ಬರೆದುಕೊಂಡಿದ್ದಾರೆ.