Tag: Deepika Padukone

  • ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ಮುಂಬೈ: ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಜ್ಯೂನಿಯರ್ ಎನ್‍ಟಿಆರ್ ಜೊತೆ ನಟಿಸಲು ಆಸೆಯನ್ನು ವ್ಯಕ್ತಪಡಿಸಿದರು.

    ದೀಪಿಕಾ ಪಡುಕೋಣೆ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಕೆಲಸ ಮಾಡಲು ಬಯಸುವ ನಟರು ಮತ್ತು ನಿರ್ದೇಶಕರ ಪಟ್ಟಿಯನ್ನು ಬಹಿರಂಗಪಡಿಸಿದ್ದಾರೆ. ತಾನು ಜ್ಯೂನಿಯರ್ ಎನ್‌ಟಿಆರ್‌ನೊಂದಿಗೆ ನಟಿಸಲು ಇಷ್ಟ ಪಡುತ್ತೇನೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಜೊತೆಯೂ ನಟಿಸಲು ಇಷ್ಟ ಎಂದು ತಿಳಿಸಿದರು. ಇದನ್ನೂ ಓದಿ: ಕೊನೆಗೂ ನಮ್ಮ ಕನಸು ನನಸಾಗಿದೆ: ಆಲಿಯಾ ಹೀಗೆಂದಿದ್ದೇಕೆ?

    ನಾನು ಎಲ್ಲರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಅದರಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಆದರೆ ನಾನು ಜೂನಿಯರ್ ಎನ್‍ಟಿಆರ್ ಮತ್ತು ಅಲ್ಲು ಅರ್ಜುನ್ ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಅದರಲ್ಲಿಯೂ ನಾನು ಜೂನಿಯರ್ ಎನ್‍ಟಿಆರ್ ಅವರೊಂದಿಗೆ ನಟಿಸಲು ಇಷ್ಟಪಡುತ್ತೇನೆ. ಆದ ವ್ಯಕ್ತಿತ್ವ ನನಗೆ ಇಷ್ಟವಾಯ್ತು ಎಂದು ಹೊಗಳಿದರು.

    ನಿರ್ದೇಶಕರ ಬಗ್ಗೆ ಮಾತನಾಡಿದ ಅವರು, ‘ಯೇ ಜವಾನಿ ಹೈ ದೀವಾನಿ’ ಸಿನಿಮಾದ ನಿರ್ದೇಶಕ ‘ಅಯಾನ್ ಮುಖರ್ಜಿ’ ಅವರೊಂದಿಗೆ ಮತ್ತೆ ಕೆಲಸ ಮಾಡಲು ಬಯಸುತ್ತೇನೆ. ಅದೇ ರೀತಿ ನಾನು ರಾಜಮೌಳಿ ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ತಿಳಿಸಿದರು.

    ಶೂಟಿಂಗ್ ಬಗ್ಗೆ ವಿವರಿಸಿದ ಅವರು, ನಾನು ಕಲಿಯುವ ಮನಸ್ಸಿನಿಂದ ಸೆಟ್‍ಗೆ ಹೋಗುತ್ತೇನೆ. ಪ್ರತಿಯೊಂದು ಅನುಭವಗಳನ್ನು ಎಂಜಾಯ್ ಮಾಡಲು ಬಯಸುತ್ತೇನೆ. ಎಲ್ಲರಿಗಿಂತ ನನಗೆ ಚೆನ್ನಾಗಿ ಗೊತ್ತು ಎಂದು ನಾನು ಆಲೋಚನೆ ಮಾಡುವುದಿಲ್ಲ. ಆ ರೀತಿ ನಾನು ಸೆಟ್‍ಗೆ ಹೋಗುವುದಿಲ್ಲ. ನಾನು ಹೆಚ್ಚು ಹೊಸ ರೀತಿ ಪ್ರಯೋಗ ಮಾಡುವ ಗುಂಪಿನಿಂದ ಕಲಿಯಲು ಬಯಸುತ್ತೇನೆ. ‘ಗೆಹ್ರೈಯಾನ್’ ಸಿನಿಮಾ ಪೂರ್ತಿ ಹೊಸ ತಂಡ. ಈ ತಂಡದ ಜೊತೆ ಕೆಲಸ ಮಾಡಲು ಖುಷಿಯಾಗುತ್ತೆ ಎಂದು ಅನುಭವವನ್ನು ಹಂಚಿಕೊಂಡರು. ಇದನ್ನೂ ಓದಿ: ಅಪ್ಪು ಜೊತೆಗೆ ಕೊನೆ ಕ್ಷಣದ ವೀಡಿಯೋ ಹಂಚಿಕೊಂಡ ನವರಸ ನಾಯಕ!

    ಪ್ರಸ್ತುತ, ದೀಪಿಕಾ ತಮ್ಮ ಮುಂಬರುವ ‘ಗೆಹ್ರೈಯಾನ್’ ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾವನ್ನು ‘ಶಕುನ್ ಬಾತ್ರಾ’ ನಿರ್ದೇಶಿಸಿದ್ದು, ಈ ಸಿನಿಮಾದಲ್ಲಿ ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ಸಹ ನಟಿಸಿದ್ದಾರೆ. ಈ ಸಿನಿಮಾ ಇಂದು ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

  • ಇಂಟಿಮೇಟ್ ಸೀನ್ ಮಾಡಲು ರಣವೀರ್ ಅನುಮತಿ ಇತ್ತಾ? – ಖಡಕ್ ಉತ್ತರ ಕೊಟ್ಟ ದೀಪಿಕಾ

    ಇಂಟಿಮೇಟ್ ಸೀನ್ ಮಾಡಲು ರಣವೀರ್ ಅನುಮತಿ ಇತ್ತಾ? – ಖಡಕ್ ಉತ್ತರ ಕೊಟ್ಟ ದೀಪಿಕಾ

    ಮುಂಬೈ: ‘ಗೆಹ್ರೈಯಾನ್’ ಸಿನಿಮಾದಲ್ಲಿ ಇಂಟಿಮೇಟ್ ಸೀನ್ ಮಾಡಲು ರಣವೀರ್ ಸಿಂಗ್ ಅನುಮತಿ ನೀಡಿದ್ರಾ ಎಂಬ ಪ್ರಶ್ನೆಗೆ ಬಾಲಿವುಡ್ ಪದ್ಮವತಿ ದೀಪಿಕಾ ಪಡುಕೋಣೆ ಖಡಕ್ ಉತ್ತರ ಕೊಟ್ಟಿದ್ದಾರೆ.

    ‘ಗೆಹ್ರೈಯಾನ್’ ಸಿನಿಮಾದಲ್ಲಿ ದೀಪಿಕಾ ಅವರು ತನ್ನ ಸಹನಟನ ಜೊತೆ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸೀನ್ ನೋಡಿದ ಪ್ರೇಕ್ಷಕರು ರಣವೀರ್ ಇದಕ್ಕೆ ಒಪ್ಪಿಕೊಂಡ್ರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ದೀಪಿಕಾ ‘ಅಯ್ಯೋ! ಇದು ತುಂಬಾ ಮೂರ್ಖತನದ ಪ್ರಶ್ನೆಯಾಗಿದೆ’ ಎಂದು ಉತ್ತರಿಸಿದ್ದು, ಈ ಸಿನಿಮಾ ಸಂಬಂಧಗಳ ಸಂಕೀರ್ಣತೆಯ ಕುರಿತು ಚಿತ್ರೀಕರಿಸಲಾಗಿದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ‘ಅಮ್ಮನ ಮಡಿಲು ಸ್ವರ್ಗ’ – ಅಮ್ಮನ ಜೊತೆ ಫೋಟೋ ಶೇರ್ ಮಾಡಿದ ಸಲ್ಲು

    ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಕಮೆಂಟ್ ಗಳನ್ನು ಓದುವುದಿಲ್ಲ. ನಾವು ಅದಕ್ಕೆ ಪ್ರತಿಕ್ರಿಯಿಸುತ್ತಿರುವುದು ಮೂರ್ಖತನ. ನಾನು ಈ ಸಿನಿಮಾ ಮಾಡಿದಕ್ಕೆ ಅವರು ಎಂದೂ ವಿರೋಧ ವ್ಯಕ್ತಪಡಿಸಿಲ್ಲ. ನಾನು ಕಮೆಂಟ್‍ಗೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

    ರಣವೀರ್ ಸಿಂಗ್ ಪ್ರತಿಕ್ರಿಯೆಯ ಬಗ್ಗೆ ಹೇಳಿದ ಅವರು, ರಣವೀರ್ ಸಿನಿಮಾ ಬಗ್ಗೆ ಅತ್ಯಂತ ಹೆಮ್ಮೆಪಡುತ್ತಾರೆ. ನನ್ನ ಅಭಿನಯದ ಬಗ್ಗೆ ತುಂಬಾ ಹೆಮ್ಮೆಪಡುತ್ತಾರೆ ಎಂದು ಉತ್ತರಿಸಿದ್ದಾರೆ.

    ‘ಗೆಹ್ರೈಯಾನ್’ ಚಿತ್ರದ ಟ್ರೇಲರ್ ಬಿಡುಗಡೆಯಾದಾಗ, ರಣವೀರ್ ಸಿಂಗ್ ಸಿನಿಮಾ ಪೋಸ್ಟ್ ಹಂಚಿಕೊಂಡಿದ್ದರು. ಈ ವೇಳೆ ದೀಪಿಕಾ ಅವರನ್ನು ರಣವೀರ್ ಹೊಗಳಿದ್ದರು. ಇನ್‍ಸ್ಟಾದಲ್ಲಿ ಫೋಟೋ ಶೇರ್ ಮಾಡಿದ ರಣವೀರ್ ‘ಮೂಡಿ, ಸೆಕ್ಸಿ ಮತ್ತು ಇಂಟೆನ್ಸ್!’ ಎಂದು ಬರೆದು ಪೋಸ್ಟ್ ಮಾಡಿಸದ್ದರು.

     

    View this post on Instagram

     

    A post shared by Ranveer Singh (@ranveersingh)

    ‘ಗೆಹ್ರೈಯಾನ್’ ಸಿನಿಮಾವನ್ನು ‘ಧರ್ಮಾ ಪ್ರೊಡಕ್ಷನ್ಸ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ಜಂಟಿಯಾಗಿ ನಿರ್ಮಾಣ ಮಾಡಿತ್ತು. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ಕೂಡ ನಟಿಸಿದ್ದಾರೆ. ಫೆಬ್ರವರಿ 11 ರಂದು ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: ತಲೈವಾನ 169ನೇ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್

    ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು 2018ರಲ್ಲಿ ಮದುವೆಯಾಗಿದ್ದು, ಆರು ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್ ಮಾಡಿದ್ದಾರೆ. ಇವರಿಬ್ಬರನ್ನು ಬಾಲಿವುಡ್ ನಲ್ಲಿ ಪವರ್ ಕಪಲ್ ಎಂದೇ ಕರೆಯುತ್ತಾರೆ. ಇವರು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

    ಇತ್ತೀಚೆಗೆ ಬಿಡುಗಡೆಯಾದ ಕಬೀರ್ ಖಾನ್ ನಿರ್ದೇಶನದ ’83’ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಭಾರತದ ಮಾಜಿ ನಾಯಕ ಕಪಿಲ್ ದೇವ್ ಮತ್ತು ದೀಪಿಕಾ ಪಡುಕೋಣೆ ರೋಮಿ ಭಾಟಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ಸೂಪರ್ ಹಾಟ್ ದೀಪಿಕಾ ಪಡುಕೋಣೆ ತೊಟ್ಟ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    ಸೂಪರ್ ಹಾಟ್ ದೀಪಿಕಾ ಪಡುಕೋಣೆ ತೊಟ್ಟ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಸಿನಿಮಾ ವಿಚಾರವಾಗಿ, ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುವುದು ಹೊಸತೇನು ಅಲ್ಲ. ಅವರು ತೊಡುವ ವಿಭಿನ್ನವಾದ ಮತ್ತು ದುಬಾರಿ ಬೆಲೆಯ ಬಟ್ಟೆಗಳು ನೆಟ್ಟಿಗರ ಕಣ್ಣನ್ನು ಕುಕ್ಕುತ್ತಿವೆ. ಇದೀಗ ದೀಪಿಕಾ ಪಡುಕೋಣೆ ಅವರ ಹಾಟ್ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Shaleena Nathani (@shaleenanathani)

    ಶಕುನ್ ಬಾತ್ರಾ ನಿರ್ದೇಶನದ ಗೆಹ್ರೈಯಾನ್ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸೂಪರ್ ಹಾಟ್ ದೀಪಿಕಾ ಪಡುಕೋಣೆ ಕಪ್ಪು ಬಣ್ಣದ (faux leather mini dress) ಮಿನಿ ಡ್ರೆಸ್ ತೊಟ್ಟು ಮಿಂಚಿದ್ದಾರೆ. ಈ ಫೋಟೋಗಳನ್ನು ಸ್ಟೈಲಿಸ್ಟ್ ಶಲೀನ್ ನಥಾನಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ನಟಿ ಕಪ್ಪು ಬಣ್ಣದ ಮಿನಿ ಡ್ರೆಸ್ ಧರಿಸಿದ್ದಾರೆ. ಲಂಡನ್ ಮೂಲದ ವಸ್ತ್ರವಿನ್ಯಾಸಕಾರ ಈ ಬಟ್ಟೆಯನ್ನು ಡಿಸೈನ್ ಮಾಡಿದ್ದಾರೆ. ಈ ಉಡುಪಿನ ಬೆಲೆ 41 ಸಾವಿರ ರೂಪಾಯಿ ಎಂದು ತಿಳಿದು ಬಂದಿದೆ.

    ದೀಪಿಕಾ ಪಡುಕೋಣೆ ಮಿನಿ ಡ್ರೆಸ್‍ಗೆ ಹೊಂದಿಕೆಯಾಗುವಂತೆ ಗೋಲ್ಡನ್ ಬಣ್ಣದ ಕಿವಿಯೋಲೆ, ಕಪ್ಪು ಬಣ್ಣದ ಪಾಯಿಂಟ್ ಹೀಲ್ಸ್ ಧರಿಸಿದ್ದಾರೆ. ಈ ಮಿನಿ ಡ್ರೆಸ್‍ನಲ್ಲಿ ದೀಪಿಕಾ ಪಡುಕೋಣೆ ಸಖತ್ ಬೋಲ್ಡ್ ಅಗಿ ಮಾದಕ ನೋಟವನ್ನು ಬೀರುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ನೋಡಿದ ಪಡ್ಡೆ ಹುಡುಗರ ದೀಪಿಕಾ ಅವರ ಹಾಟ್ ಅವತಾರಕ್ಕೆ ಕ್ಲಿನ್ ಬೋಲ್ಡ್ ಆಗಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯುತ್ತಿದೆ ಮೌನಿ ರಾಯ್ ಅರಿಶಿನ ಶಾಸ್ತ್ರ

    ಕೆಲವು ದಿನಗಳ ಹಿಂದೆ ಆಕರ್ಷಕ ವಿನ್ಯಾಸದ ಜೀಬ್ರಾ ಪ್ರಿಂಟ್‍ನ ಉಡುಪು ಧರಿಸಿ ನಟಿ ದೀಪಿಕಾ ಪಡುಕೋಣೆ ಫೋಟೊಗೆ ಪೋಸ್ ಕೊಟ್ಟಿದ್ದು, ಇಂಟರ್‍ನೆಟ್‍ನಲ್ಲಿ ವೈರಲ್ ಆಗಿತ್ತು. ಆದರೆ ಇದು ಪತಿ ಡ್ರೆಸ್ ಎಂದು ನೆಟ್ಟಿಗರು ಟ್ರೋಲ್ ಕೂಡಾ ಮಾಡಿದ್ದರು. ದೀಪಿಕಾ ಪತಿ ರಣವೀರ್ ಸಿಂಗ್ ಅವರು ವೈವಿಧ್ಯಮಯ ಫ್ಯಾಷನ್‍ಗೆ ಹೆಸರುವಾಸಿ. ಅವರ ವಿವಿಧ ರೀತಿಯ ಫ್ಯಾಷನ್ ಉಡುಗೆಗಳು ಹೊಸ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಕಾಣಸಿಗುತ್ತವೆ. ಅದೇ ರೀತಿಯಲ್ಲಿ ದೀಪಿಕಾ ಕೂಡ ಸಾಗುತ್ತಿದ್ದಾರೆ ಎಂದು ನೆಟ್ಟಿಗರು ದೀಪಿಕಾ ಅವರ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.

  • ದೈಹಿಕ ಅನ್ಯೋನ್ಯತೆ ಸಂಬಂಧದ ಪ್ರಮುಖ ಭಾಗವಲ್ಲ: ದೀಪಿಕಾ ಪಡುಕೋಣೆ

    ದೈಹಿಕ ಅನ್ಯೋನ್ಯತೆ ಸಂಬಂಧದ ಪ್ರಮುಖ ಭಾಗವಲ್ಲ: ದೀಪಿಕಾ ಪಡುಕೋಣೆ

    ಮುಂಬೈ: ದೈಹಿಕ ಅನ್ಯೋನ್ಯತೆ ಸಂಬಂಧದ ಪ್ರಮುಖ ಭಾಗವಲ್ಲ ಎಂದು ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.

    ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬಾಲಿವುಡ್ ನ ಪವರ್‌ಫುಲ್ ಕಪಾಲ್. ಇವರಿಬ್ಬರು ಆಗಾಗ್ಗೆ ಒಬ್ಬರನ್ನೊಬ್ಬರು ಹೊಗಳಿಕೊಳ್ಳುವುದು, ಕಾಲೆಳೆಯುತ್ತಿರುವುದು ಸಾಮಾನ್ಯವಾಗಿದೆ. ಅದೇ ರೀತಿ ದೀಪಿಕಾ ಸಂದರ್ಶನವೊಂದರಲ್ಲಿ ರೀಲೇಷನ್‍ಶಿಪ್‍ನಲ್ಲಿ ದೈಹಿಕ ಅನ್ಯೋನ್ಯತೆಯ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು, ದೈಹಿಕ ಅನ್ಯೋನ್ಯತೆ ಮುಖ್ಯ. ಆದರೆ ಅದಕ್ಕಿಂತ ಇಬ್ಬರ ನಡುವೆ ನಂಬಿಕೆ ಮತ್ತು ಸ್ನೇಹ ಇರುವುದು ತುಂಬಾ ಮುಖ್ಯ. ಇವು ಶಾರೀರಿಕ ಅನ್ಯೋನ್ಯತೆಗಿಂತ ಬಹಳ ಮುಖ್ಯವಾದವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತನಿಖಾಧಿಕಾರಿ ವಿರುದ್ಧ ಕೊಲೆ ಸಂಚು ಆರೋಪ – 3ನೇ ದಿನಕ್ಕೆ ಕಾಲಿಟ್ಟ ನಟ ದಿಲೀಪ್ ವಿಚಾರಣೆ!

    ನಂತರ ಅವರು, ದೈಹಿಕ ಅನ್ಯೋನ್ಯತೆ ರೀಲೇಷನ್‍ಶಿಪ್‍ನಲ್ಲಿ ಪ್ರಮುಖ ಭಾಗವಾಗಿದೆ ಅದನ್ನು ನಾನು ಒಪ್ಪುತ್ತೇನೆ. ಆದರೆ ರೀಲೇಷನ್‍ಶಿಪ್‍ಗೆ ಅದೇ ತುಂಬಾ ಮುಖ್ಯ ಎಂದು ನಾನು ಎಂದೂ ಒಪ್ಪುವುದಿಲ್ಲ ಎಂದಿದ್ದಾರೆ. ಇದೇ ವೇಳೆ ರಣವೀರ್ ಹಾಡುವುದರ ಕುರಿತು ಮಾತನಾಡಿದ್ದು, ಅವರು ಹಾಡುತ್ತಾರೆ. ಆದರೆ ಅಷ್ಟೊಂದು ಚೆನ್ನಾಗಿ ಹಾಡುವುದಿಲ್ಲ. ರಣವೀರ್ ರಾಪಿಂಗ್ ಕೌಶಲ್ಯ ಅದ್ಭುತವಾಗಿದೆ. ಆದರೆ ಅವರ ಹಾಡುಗಾರಿಕೆ ನನಗೆ ಅಷ್ಟೊಂದು ಇಷ್ಟವಾಗುವುದಿಲ್ಲ. ಅದಕ್ಕೆ ನಾನು ಅವರಿಗೆ 10 ರಲ್ಲಿ 2 ಅಂಕ ಕೊಡುತ್ತೇನೆ ಎಂದು ಪತಿಯ ಕಾಲೆಳೆದಿದ್ದಾರೆ.

    ದೀಪಿಕಾ ‘ಪಠಾಣ್’ ಸಿನಿಮಾ ಕುರಿತು ಮಾತನಾಡಿದ್ದು, ನಾನು ಮತ್ತೆ ಶಾರೂಖ್ ಖಾನ್ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದೇನೆ. ಈ ಚಿತ್ರದಲ್ಲಿ ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕಥೆ ತುಂಬಾ ಚೆನ್ನಾಗಿತ್ತು. ಅದಕ್ಕೆ ಈ ಸಿನಿಮಾವನ್ನು ಒಪ್ಪಿಕೊಂಡೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ದೀಪಿಕಾ, ಶಾರೂಖ್ ಜೊತೆ ಓಂ ಶಾಂತಿ ಓಂ, ಹ್ಯಾಪಿ ನ್ಯೂ ಇಯರ್ ಮತ್ತು ಚೆನ್ನೈ ಎಕ್ಸ್‍ಪ್ರೆಸ್ ಸಿನಿಮಾಗಳಲ್ಲಿ ನಟಿಸಿದ್ದು, ಸೂಪರ್ ಜೋಡಿ ಎನ್ನಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೈ ತಪ್ಪಿದ್ದಕ್ಕೆ ಅಸಮಾಧಾನ ಇಲ್ಲ, ತುಮಕೂರು ಸಿಕ್ಕಿದ್ರೆ ಖುಷಿಯಾಗ್ತಿತ್ತು: ಮಾಧುಸ್ವಾಮಿ

    ಪ್ರಸುತ್ತ ದೀಪಿಕಾ ನಟನೆಯ ‘ಗೆಹ್ರೈಯಾನ್’ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದು, ಈ ಸಿನಿಮಾ ಓಟಿಟಿಯಲ್ಲಿ ಫೆ.11 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ದೀಪಿಕಾ ಪಾತ್ರ ಭಿನ್ನವಾಗಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿದ್ದಾರೆ. ‘ಗೆಹ್ರೈಯಾನ್’ ಸಿನಿಮಾದಲ್ಲಿ ದೀಪಿಕಾಗೆ ಸಿದ್ಧಾಂತ್ ಚತುರ್ವೇದಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಧೈರ್ಯ ಕರ್ವಾ ಮತ್ತು ಅನನ್ಯಾ ಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  • ನನಗೆ ತಿಳಿಯದೆ ಇರುವ ವಿಚಾರ ಹೇಳಿಕೊಡುವ ವ್ಯಕ್ತಿ ಆಕರ್ಷಕ – ಪತಿ ಬಗ್ಗೆ ದೀಪಿಕಾ ಮೆಚ್ಚುಗೆ

    ನನಗೆ ತಿಳಿಯದೆ ಇರುವ ವಿಚಾರ ಹೇಳಿಕೊಡುವ ವ್ಯಕ್ತಿ ಆಕರ್ಷಕ – ಪತಿ ಬಗ್ಗೆ ದೀಪಿಕಾ ಮೆಚ್ಚುಗೆ

    ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪತಿ ರಣ್‍ವೀರ್ ಸಿಂಗ್ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಬಾಲಿವುಡ್ ಕ್ಯೂಟ್ ಕಪಲ್ ಅಂದರೆ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಎಂದರೆ ತಪ್ಪಾಗಲಾರದು. ಸದಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ರಣ್‍ವೀರ್ ಸಿಂಗ್ ಅವರು ಆಗಾಗ ದೀಪಿಕಾ ಪಡುಕೋಣೆ ಜೊತೆಗಿರುವ ಫೋಟೋ ಹಾಗೂ ವೀಡಿಯೋಗಳನ್ನು ಪೋಸ್ಟ್ ಮಾಡಿಕೊಳ್ಳುವ ಮೂಲಕ ಪತ್ನಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ಇದನ್ನೂ ಓದಿ: ಕತ್ರಿನಾ,ವಿಕ್ಕಿ ವಿವಾಹ – 120 ವ್ಯಾಕ್ಸಿನೇಟೆಡ್ ಅತಿಥಿಗಳಿಗೆ ಮಾತ್ರ ಆಹ್ವಾನ

    ಇದೀಗ ದೀಪಿಕಾ ಪಡುಕೋಣೆ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಪತಿ ರಣ್‍ಸಿಂಗ್ ಬಗ್ಗೆ ಪೋಸ್ಟ್‌ವೊಂದನ್ನು ಹಾಕುವುದರ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಪೋಸ್ಟರ್‌ನಲ್ಲಿ ನನಗೆ ತಿಳಿಯದೇ ಇರುವ ವಿಚಾರದ ಬಗ್ಗೆ ಹೇಳಿಕೊಡುವ ವ್ಯಕ್ತಿಗಿಂತ ಆಕರ್ಷಕವಾದದ್ದು ಯಾವುದು ಇಲ್ಲ ಎಂದು ಇರುವುದನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಈ ಪೋಸ್ಟ್ ಅನ್ನು ದೀಪಿಕಾ ರಣ್‍ವೀರ್ ಸಿಂಗ್‍ಗೆ ಟ್ಯಾಗ್ ಮಾಡಿದ್ದಾರೆ.  ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ

     

    View this post on Instagram

     

    A post shared by Deepika Padukone (@deepikapadukone)

    ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ ಕಪ್ಪು ಬಣ್ಣದ ಸೀರೆ ತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನೂ ಈ ಫೋಟೋಗೆ ರಣ್‍ವೀರ್ ಸಿಂಗ್ ಕಾಮೆಂಟ್ ಮಾಡಿದ್ದರು.

  • 3ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ ದೀಪ್‍ವೀರ್

    3ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ ದೀಪ್‍ವೀರ್

    ಮುಂಬೈ: ಬಾಲಿವುಡ್ ಪವರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಂದು ತಮ್ಮ 3ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ.

    14 ನವೆಂಬರ್ 2018 ರಂದು ಹೊಸ ಜೀವನಕ್ಕೆ ಕಾಲಿಟ್ಟ ಈ ದಂಪತಿ, ಬಾಲಿವುಡ್ ನಲ್ಲಿ ಪವರ್ ಕಪಲ್ ಎಂದು ಗುರುತಿಸಿಕೊಂಡಿದ್ದಾರೆ. ಇಬ್ಬರು ತಮ್ಮ-ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನಕ್ಕೂ ಅವರು ಅಷ್ಟೇ ಪ್ರಮುಖ್ಯತೆಯನ್ನು ಕೊಡುತ್ತಾರೆ. ಈ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ ದೀಪ್‍ವೀರ್ ಎಂದು ಕರೆಯುತ್ತಾರೆ. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ

    ರಣವೀರ್, ದೀಪಿಕಾ ಅವರನ್ನು ಯಾವುದೇ ಸಂದರ್ಶನಕ್ಕೆ ಹೋದರು ನೆನಪಿಸಿಕೊಳ್ಳದೆ ಇರುವುದಿಲ್ಲ. ಇಬ್ಬರು ಒಬ್ಬರನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು, ತಮ್ಮ ಕೆಲಸವನ್ನು ಗೌರವಿಸುತ್ತಾರೆ. ವೈಯಕ್ತಿಕ ಜೀವನದ ಜೊತೆಗೆ ವೃತ್ತಿ ಜೀವನವನ್ನು ಈ ಜೋಡಿ ಸಂಭಾಳಿಸಿಕೊಂಡು ಹೋಗುತ್ತಿದೆ.

     

    View this post on Instagram

     

    A post shared by Ranveer Singh (@ranveersingh)

    ಇತ್ತೀಚೆಗೆ ರಣವೀರ್ ಅಪ್ಪನಾಗು ಆಸೆಯನ್ನು ವ್ಯಕ್ತಪಡಿಸಿದ್ದು, ಅಷ್ಟೆ ಅಲ್ಲದೇ, ದೀಪಿಕಾ ಚಿಕ್ಕವರಿದ್ದಾಗ ಇದ್ದಂತೆ ಕ್ಯೂಟ್ ಆಗಿರುವ ಹೆಣ್ಣು ಮಗು ಆದರೆ ತಮ್ಮ ಲೈಫ್ ಸೆಟ್ ಆದಂತೆ ಎಂದು ಹೇಳಿಕೊಂಡಿದ್ದರು. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿರುವ ರಣವೀರ್ ಈ ಕಾರ್ಯಕ್ರಮದ ಪ್ರೋಮೋ ವೀಡಿಯೋದಲ್ಲಿ, ನಿಮಗೆ ಗೊತ್ತಿರುವಂತೆ ನನಗೆ ಮದುವೆಯಾಗಿದೆ. ಕೆಲವೇ ವರ್ಷದಲ್ಲಿ ನಮಗೂ ಮಕ್ಕಳಾಗುತ್ತವೆ ಎಂದು ನಾಚುತ್ತಾ ಹೇಳಿಕೊಂಡಿದ್ದರು. ಇದನ್ನೂ ಓದಿ: 6 ದಿನಗಳ ಕಾಲ ನಡೆಯಲಿದೆ ಕತ್ರಿನಾ, ವಿಕ್ಕಿ ಮದುವೆ – ಯಾರಿಗೆಲ್ಲ ಇದೆ ಆಮಂತ್ರಣ?

  • ಹೊಸ IPL ತಂಡ ಖರೀದಿಸಲು ಮುಂದಾದ ರಣವೀರ್, ದೀಪಿಕಾ

    ಹೊಸ IPL ತಂಡ ಖರೀದಿಸಲು ಮುಂದಾದ ರಣವೀರ್, ದೀಪಿಕಾ

    ಮುಂಬೈ: ಬಾಲಿವುಡ್ ಸೆಲೆಬ್ರಿಟಿ ಸ್ಟಾರ್ ಆಗಿರುವ ರಣವೀರ್, ದೀಪಿಕಾ ಜೋಡಿ ಐಪಿಎಲ್ ತಂಡ ಖರೀದಿಸಲು ಮುಂದಾಗಿದ್ದಾರೆ. 2022ರ ಐಪಿಎಲ್‍ಗೆ 2 ಹೊಸ ಫ್ರಾಂಚೈಸಿಗಳು ಸೇರ್ಪಡೆಗೊಳ್ಳಲಿದ್ದು, ರಣವೀರ್ ಐಪಿಎಲ್ ತಂಡ ಖರೀದಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.

    ಈಗಾಗಲೇ ಅದಾನಿ ಗ್ರೂಪ್, ಆರ್‌ಪಿಜಿ ಸಂಜೀವ್ ಗೋಯೆಂಕಾ ಗ್ರೂಪ್ ಸೇರಿದಂತೆ ವಿದೇಶಿ ಕಾರ್ಪೋರೇಟ್ ಕಂಪೆನಿಗಳು ಬಿಡ್ ಸಲ್ಲಿಸಲು ಮುಂದಾಗಿವೆ. ಆದರೆ ಈ ನಡುವೆ ಬಾಲಿವುಡ್ ಸೂಪರ್ ಸ್ಟಾರ್ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಐಪಿಎಲ್ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಜೈಲಿಗೆ ಹೋಗೋ ಸ್ಥಿತಿ ಬಂದರೆ ಹೋಗೋಕೆ ಸಿದ್ಧವಾಗಿದ್ದೇನೆ: ರಮೇಶ್ ಕುಮಾರ್

     

    ಐಪಿಎಲ್ ಹಾಗೂ ಬಾಲಿವುಡ್ ನಡುವೆ ವಿಶೇಷ ಸಂಬಂಧ ಹೊಂದಿದ್ದು, ಈಗಾಗಲೇ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಮತ್ತು ಜೂಹಿ ಚಾವ್ಲಾ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ಪ್ರೀತಿ ಝಿಂಟಾ ಒಡೆತನದ ಪಂಜಾಬ್ ಕಿಂಗ್ಸ್ ತಂಡಗಳನ್ನು ನೋಡಬಹುದಾಗಿದೆ. ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ನಿಮ್ಮಪ್ಪನ ಮನೆ ಆಸ್ತಿನಾ? – ರಮೇಶ್ ಕುಮಾರ್ ವಿರುದ್ಧ ಸುಧಾಕರ್ ವಾಗ್ದಾಳಿ

    ದೀಪಿಕಾ ಕ್ರೀಡೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು, ಆಕೆಯ ತಂದೆ ಪ್ರಕಾಶ್ ಪಡುಕೋಣೆ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಮಾಜಿ ಚಾಂಪಿಯನ್ ಆಗಿದ್ದಾರೆ. ರಣವೀರ್ ಇಂಗ್ಲಿಷ್ ಪ್ರೀಮಿಯರ್ ಲೀಗ್‍ನಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಬ್ಯಾಸ್ಕೆಟ್‍ಬಾಲ್ ಲೀಗ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.

  • ದೀಪಿಕಾರಂತೆ ಕ್ಯೂಟ್ ಮಗು ಬೇಕು: ರಣವೀರ್ ಸಿಂಗ್

    ದೀಪಿಕಾರಂತೆ ಕ್ಯೂಟ್ ಮಗು ಬೇಕು: ರಣವೀರ್ ಸಿಂಗ್

    ಮುಂಬೈ: ಬಾಲಿವುಡ್ ನಟಿ ದೀಪಿಕಾ ಮತ್ತು ನಟ ರಣವೀರ್ ಸಿಂಗ್ ಜೋಡಿ ಜನಪ್ರಿಯ ತಾರಾಜೋಡಿಗಳಲ್ಲಿ ಒಂದಾಗಿದೆ. ರಣವೀರ್ ಸಿಂಗ್ ದೀಪಿಕಾರಂತೆ ಇರುವ ಮಗು ಬೇಕು ಎಂದು ತಮ್ಮ ಆಸೆಯನ್ನು ಹೇಳಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ದೀಪಿಕಾ ಪತಿ ರಣವೀರ್ ಸಿಂಗ್ ಅಪ್ಪನಾಗು ಆಸೆಯನ್ನು ಹೇಳಿಕೊಂಡಿದ್ದಾರೆ. ಅಷ್ಟೆ ಅಲ್ಲದೇ, ದೀಪಿಕಾ ಚಿಕ್ಕವರಿದ್ದಾಗ ಇದ್ದಂತೆ ಕ್ಯೂಟ್ ಆಗಿರುವ ಹೆಣ್ಣು ಮಗು ಆದರೆ ತಮ್ಮ ಲೈಫ್ ಸೆಟ್ ಆದಂತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟಾಪ್‌ಲೆಸ್ ಅವತಾರದಲ್ಲಿ ಇಷಾ ಗುಪ್ತ – ಹೆಚ್ಚಾಯ್ತು ತುಂಡೈಕ್ಳ ಎದೆ ಬಡಿತ

     

    View this post on Instagram

     

    A post shared by ColorsTV (@colorstv)

    ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರ ಮೂಲಕವಾಗಿ ರಣವೀರ್ ಸಿಂಗ್ ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ ಈ ಕಾರ್ಯಕ್ರಮದ ಪ್ರೋಮೋ ವೀಡಿಯೋದಲ್ಲಿ ರಣವೀರ್ ನಿಮಗೆ ಗೊತ್ತಿರುವಂತೆ ನನಗೆ ಮದುವೆಯಾಗಿದೆ ಕೆಲವೇ ವರ್ಷದಲ್ಲಿ ನಮಗೂ ಮಕ್ಕಳಾಗುತ್ತವೆ ಎಂದು ನಾಚುತ್ತಾ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಆಲಿಯಾ ಹಾಟ್ ಫಿಟ್ನೆಸ್ ಫೋಟೋ ವೈರಲ್ – ಬೆರಗಾದ ಕತ್ರಿನಾ

    ನೀವು ದೀಪಿಕಾ ಚಿಕ್ಕವಯಸ್ಸಿನ ಫೋಟೋವನ್ನು ನೋಡಿರಬೇಕು. ಎಷ್ಟು ಕ್ಯೂಟ್ ಬೇಬಿಯಾಗಿದ್ದಳು. ಆತರಹದ ಕ್ಯೂಟ್ ಬೇಬಿ ಆದರೆ ನಮ್ಮ ಜೀವನ ಸೆಟ್ ಆದಂತೆ. ನಾವು ಮಗುವಿನ ಹೆರುಗಳ ಪಟ್ಟಿಯನ್ನು ಮಾಡುತ್ತಿದ್ದೇವೆ ಎಂದು ರಣವೀರ್ ತಾವು ಅಪ್ಪನಾಗುವ ಆಸೆಯನ್ನು ಹೇಳಿಕೊಂಡಿದ್ದಾರೆ.

  • 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    ಮುಂಬೈ: ಪ್ರೇಮಿಗಳ ದಿನದಂದು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ರಿಲೀಸ್ ಮಾಡುವುದಾಗಿ ಎಂದು ಅಮೀರ್ ಖಾನ್ ಪ್ರೊಡಕ್ಷನ್ಸ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.

    ಅಮೀರ್ ಖಾನ್ ಪ್ರೊಡಕ್ಷನ್ಸ್ ಇನ್‍ಸ್ಟಾಗ್ರಾಮ್ ನಲ್ಲಿ, ಅಕ್ಟೋಬರ್ 22 ರಿಂದ ಚಿತ್ರಮಂದಿರಗಳನ್ನು ಮತ್ತೆ ತೆರೆಯಲು ಆಡಳಿತವು ಅವಕಾಶ ನೀಡಿದೆ. ಈ ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ನಮ್ಮ ಸಿನಿಮಾ ರಿಲೀಸ್ ಮಾಡಲು ವಿಳಂಬವಾಗಿದೆ. ನಮ್ಮ ‘ಲಾಲ್ ಸಿಂಗ್ ಚಡ್ಡಾ’ ಈ ಕ್ರಿಸ್‍ಮಸ್‍ನಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ. 2022ರ ಫೆ.14 ರಂದು ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತೆ ಎಂದು ಬರೆದು ಪೋಸ್ಟ್ ಮಾಡಿದೆ. ಇದನ್ನೂ ಓದಿ: ಬಾಕ್ಸ್ ಆಫೀಸ್‍ನಲ್ಲಿ ಬಿಗ್ ಫೈಟ್ – ಒಂದೇ ದಿನ ಸ್ಯಾಂಡಲ್‍ವುಡ್‍ನ 2 ಸಿನಿಮಾ ರಿಲೀಸ್

    ಅಮೀರ್ ಖಾನ್ ಪ್ರೊಡಕ್ಷನ್ಸ್ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ರಣವೀರ್ ಸಿಂಗ್ ಇನ್‍ಸ್ಟಾಗ್ರಾಮ್ ನಲ್ಲಿ, ’83’ ಸಿನಿಮಾ ಈ ಕ್ರಿಸ್‍ಮಸ್‍ನಲ್ಲಿ ಚಿತ್ರಮಂದಿರಕ್ಕೆ ಬರಲಿದೆ. ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಇವರ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

    ರಣವೀರ್ ನಟನೆಯ ’83’ ಸಿನಿಮಾ ಈ ಜೂನ್‍ನಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ತಡವಾಗಿತ್ತು. ಅದು ಅಲ್ಲದೇ ದೊಡ್ಡ ಬಾಲಿವುಡ್ ಎಷ್ಟೋ ಸಿನಿಮಾಗಳು ಓಟಿಟಿ ಪ್ಲಾಟ್‍ಫಾರ್ಮ್‍ಗಳಲ್ಲಿ ಬಿಡುಗಡೆಯಾಯಿತು. ಅದರಲ್ಲಿ ’83’ ಸಿನಿಮಾ ಸಹ ಒಂದಾಗಬೇಕಿತ್ತು. ಆದರೆ ಚಿತ್ರತಂಡ ಲಾಕ್‍ಡೌನ್ ನಂತರ ಚಿತ್ರಮಂದಿರಗಳಲ್ಲೇ ಸಿನಿಮಾ ಬಿಡುಗಡೆ ಮಾಡುವುದಾಗಿ ತಯಾರಕರು ಅಧಿಕೃತವಾಗಿ ಘೋಷಿಸಿದ್ದರು. ಇಂದು ಆ ಮಾತಿನಂತೆ ಬಿಡುಗಡೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಿಕಿನಿ ತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಹೆಬ್ಬುಲಿ ಬೆಡಗಿ

     

    View this post on Instagram

     

    A post shared by Ranveer Singh (@ranveersingh)

    ’83’ ಸಿನಿಮಾಗೆ ಕಬೀರ್ ಖಾನ್ ಆಕ್ಷನ್ ಕಟ್ ಹೇಳುತ್ತಿದ್ದು, ಕ್ರಿಕೆಟರ್ ಕಪಿಲ್ ದೇವ್ ದಂತ ಕಥೆಯನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗುತ್ತಿದೆ. ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದು, ಇದು 1983 ರ ಭಾರತದ ಐತಿಹಾಸಿಕ ವಿಶ್ವಕಪ್ ಗೆಲುವಿನ ಕಥೆಯನ್ನು ಆಧರಿಸಿದೆ. ಕಪಿಲ್ ದೇವ್ ಅವರ ಪತ್ನಿ ರೋಮಿ ಪಾತ್ರದಲ್ಲಿ ರಣವೀರ್ ಪತ್ನಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ.

  • ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ ದೀಪಿಕಾ ಪಡುಕೋಣೆ

    ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ ದೀಪಿಕಾ ಪಡುಕೋಣೆ

    ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಎರಡು ಬಾರಿ ಒಲಿಂಪಿಕ್ಸ್ ಪದಕ ತನ್ನದಾಗಿಸಿಕೊಂಡಿರುವ ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ್ದಾರೆ.

    ಒಲಂಪಿಕ್ಸ್ ವಿಜೇತೆ ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿ ದೀಪಿಕಾ ಗಮನ ಸೆಳೆದಿದ್ದಾರೆ. ಅಲ್ಲದೆ ಈ ಫೋಟೋಗಳನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕ್ಯಾಲರಿ ಬರ್ನ್ ಆಗಿ ಮುಖದಲ್ಲಿ ಬೆವರಿಳಿದಿದೆ. ಇದರಿಂದ ಮುಖದ ಕಾಂತಿ ಹೆಚ್ಚಿದೆ ಎಂದು ನಟಿ ದೀಪಿಕಾ ಬರೆದುಕೊಂಡಿದ್ದರು. ಪಿವಿ ಸಿಂಧು ಕಾಮೆಂಟ್ ಮಾಡಿ ಎಷ್ಟು ಕ್ಯಾಲರಿ ಬರ್ನ್ ಆಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:  ಅರಣ್ಯಕ್ಕೆ ಬಿಟ್ಟು ಬಂದರೂ ಗೊಬ್ಬರದ ಲಾರಿ ಏರಿ ಮತ್ತೆ ಪೇಟೆಗೆ ಬಂದ ಕೋತಿ

     

    View this post on Instagram

     

    A post shared by Deepika Padukone (@deepikapadukone)

    ಈ ವಿಶೇಷ ಪಂದ್ಯಕ್ಕಾಗಿ ದೀಪಿಕಾ ಕಪ್ಪು ಧಿರಿಸು ಧರಿಸಿದ್ದರು. ಸಿಂಧೂ ಕೂಡ ಅದೇ ರೀತಿಯ ಬಟ್ಟೆ ಧರಿಸಿದ್ದು ವಿಶೇಷವಾಗಿತ್ತು. ಸಿಂಧು ನೇರಳೆ ಮತ್ತು ಗುಲಾಬಿ ಬಣ್ಣಗಳ ಟಾಪ್ ಧರಿಸಿದ್ದರು. ಇಬ್ಬರು ಬೆವರಿಳಿಸುವಂತೆ ಆಟವಾಡಿದ್ದು, ಈ ಆಟದಲ್ಲಿ ಯಾರಿಗೆ ಗೆಲುವು ಆಯಿತು ಎಂಬುದನ್ನು ಮಾತ್ರ ತಿಳಿಸಿಲ್ಲ. ಆದರೆ ನಟಿ ದೀಪಿಕಾ ಈ ಆಟದಿಂದ ತಮ್ಮ ಮುಖದ ಕಾಂತಿ ಹೆಚ್ಚಿತು ಎಂದಿದ್ದಾರೆ.

     

    View this post on Instagram

     

    A post shared by Deepika Padukone (@deepikapadukone)

    ನಟಿ ದೀಪಿಕಾ ಇತ್ತೀಚಿನ ದಿನಗಳಲ್ಲಿ ಒಲಿಂಪಿಕ್ಸ್ ವಿಜೇತೆ ಪಿವಿ ಸಿಂಧು ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಸಿಂಧುಗಾಗಿ ವಿಶೇಷ ಔತಣ ಕೂಟವನ್ನು ಮುಂಬೈನ ರೆಸ್ಟೋರೆಂಟ್‍ನಲ್ಲಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಆಯೋಜಿಸಿದ್ದರು. ನಟಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆ ಕೂಡ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದರು. ನಟಿ ದೀಪಿಕಾ ಕೂಡ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಟುವಾಗಿದ್ದರು. ನಟಿ ದೀಪಿಕಾ ಕೂಡ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಟುವಾಗಿದ್ದರು. ಇದೀಗ ಪಿವಿ ಸಿಂಧು ಜೊತೆಗೆ ಮೈದಾನಲ್ಲಿ ಕಾಣಿಸಿಕೊಂಡಿರುವುದು ಸಖತ್ ಸುದ್ದಿಯಲ್ಲಿದೆ.