Tag: Deepika Padukone

  • ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

    ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

    ಬಾಲಿವುಡ್ ನ ಅತ್ಯಂತ ಹ್ಯಾಪಿ ಕಪಲ್ ಅನಿಸಿಕೊಂಡಿರುವ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮಗು ಮಾಡಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರಂತೆ. ಹಾಗಂತ ರಣವೀರ್ ಸಿಂಗ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮದುವೆಯಾಗಿ ಮೂರು ವರ್ಷಗಳ ನಂತರ ಇಂಥದ್ದೊಂದು  ನಿರ್ಧಾರಕ್ಕೆ ಬಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

    ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018 ನವೆಂಬರ್ 14ರಂದು ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ತಮ್ಮ ಕೆರಿಯರ್ ಅತ್ತ ಗಮನ ಕೊಟ್ಟಿದ್ದರು. ಇದೀಗ ಅವರು ಕುಟುಂಬವನ್ನು ವಿಸ್ತಾರ ಮಾಡಿಕೊಳ್ಳುವ ಕುರಿತು ಆಲೋಚನೆ ಮಾಡಿದ್ದಾರಂತೆ. ಸರಿಯಾದ ಸಮಯಕ್ಕೆ ಮದುವೆಯಾಗಿ ಸರಿಯಾದ ವೇಳೆಯಲ್ಲೇ ಮಗು ಮಾಡಿಕೊಳ್ಳಲು ನಾವು ಮಾತುಕತೆ ಮಾಡಿದ್ದೇವೆ ಎಂದು ರಣವೀರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

    ದೀಪಿಕಾ ಬಗ್ಗೆ ರಣವೀರ್ ಗೆ ಅಪಾರ ಹೆಮ್ಮೆಯಂತೆ. ಅವರ ವೃತ್ತಿ ಬದ್ಧತೆ, ಸಂಸಾರವನ್ನು ನಿಭಾಯಿಸಿಕೊಂಡು ಹೋಗುವ ಜಾಣ್ಮೆ ಮತ್ತು ಒಬ್ಬರಿಗೊಬ್ಬರು ಗೌರವಕೊಟ್ಟುಕೊಂಡು ಬದುಕುತ್ತಿರುವ ರೀತಿಯ ಬಗ್ಗೆ ರಣವೀರ್ ಹೆಮ್ಮೆಯಿಂದ ಮಾತನಾಡಿದ್ದಾರೆ. ಪತ್ನಿ ದೀಪಿಕಾ ಎಲ್ಲ ರೀತಿಯಲ್ಲೂ ಪ್ರತಿಭಾವಂತೆ. ಪ್ರತಿ ಬಾರಿಯೂ ಹೊಸದನ್ನು ಕಲಿಯುವುದಕ್ಕೆ ಅವರು ಪ್ರೇರಕ ಎಂದು ಪತ್ನಿಯ ಬಗ್ಗೆ ಹೊಗಳಿದ್ದಾರೆ ರಣವೀರ್. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ಸದ್ಯ ರಣವೀರ್ ಸರ್ಕಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜತೆಗೆ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಚಿತ್ರದಲ್ಲಿ ಹೊಸ ಬಗೆಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅಲಿಯಾ ಭಟ್ ನಾಯಕಿಯಾಗಿ ನಟಿಸುತ್ತಿದ್ದು ಕರಣ್ ಜೋಹಾರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.

  • ಕಾನ್ ಫೆಸ್ಟಿವೆಲ್ : ದೀಪಿಕಾ ಪಡುಕೋಣೆ ತೀರ್ಪುಗಾರರಾಗಿ ಆಯ್ಕೆ

    ಕಾನ್ ಫೆಸ್ಟಿವೆಲ್ : ದೀಪಿಕಾ ಪಡುಕೋಣೆ ತೀರ್ಪುಗಾರರಾಗಿ ಆಯ್ಕೆ

    ಹಿಂದೆ ಜಿಯೋ ಮಾಮಿ ಮುಂಬೈ ಫಿಲ್ಮ್ ಫೆಸ್ಟಿವಲ್ ನ್ಲಿ ಎರಡು ವರ್ಷಗಳ ಕಾಲ ಅಧ್ಯಕ್ಷರಾಗಿ ಕೆಲಸ ಮಾಡಿರುವ ಗುಳಿಕೆನ್ನೆ ಚೆಲುವು, ಕನ್ನಡತಿ ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆಗೆ ಪ್ರತಿಷ್ಠಿತ ಕ್ಯಾನ್ ಫೆಸ್ಟಿವೆಲ್ ನಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುವಂತಹ ಅವಕಾಶ ಸಿಕ್ಕಿದೆ. ಇಂತಹ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಈ ರೀತಿಯ ಗೌರವ ಸಿಗುವುದು ಅಪರೂಪ. ಹಾಗಾಗಿ ದೀಪಿಕಾ ಪಡುಕೋಣೆ ಇಂಥದ್ದೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ಇದನ್ನೂ ಓದಿ : ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ

    ಮೇ 17 ರಿಂದ 28ರವರೆಗೆ 2022ರ ಕಾನ್ ಫಿಲ್ಮ್ ಫೆಸ್ಟಿವೆಲ್ ನಡೆಯಲಿದ್ದು, 75ನೇ ಕಾನ್ ಚಲನಚಿತ್ರೋತ್ಸವ ಜ್ಯೂರಿಯಾಗಿ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಕಾನ್ ಪೇಜ್ ನಲ್ಲೇ ಘೋಷಿಸಲಾಗಿದೆ. ಅಲ್ಲದೇ ಇವರೊಂದಿಗೆ ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಕೂಡ ಮುಖ್ಯ ತೀರ್ಪುಗಾರರಾಗಿ ಕೆಲಸ ಮಾಡಲಿದ್ದಾರೆ. ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

    ಒಟ್ಟು 21 ಸಿನಿಮಾಗಳು ಆಯ್ಕೆಯ ಸುತ್ತಿನಲ್ಲಿದ್ದು, ಎಂಟು ತೀರ್ಪುಗಾರರ ತಂಡವು ಪ್ರಶಸ್ತಿಗಾಗಿ ಸಿನಿಮಾಗಳನ್ನು ಆರಿಸಲಿದೆ. ಮೇ.28 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಆಯ್ಕೆಯಾದ ವಿಜೇತ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

  • ಪ್ರಭಾಸ್ ನಟನೆಯ `ಪ್ರಾಜೆಕ್ಟ್ ಕೆ’ ಚಿತ್ರದ ಶೂಟಿಂಗ್ ಸ್ಟಾರ್ಟ್

    ಪ್ರಭಾಸ್ ನಟನೆಯ `ಪ್ರಾಜೆಕ್ಟ್ ಕೆ’ ಚಿತ್ರದ ಶೂಟಿಂಗ್ ಸ್ಟಾರ್ಟ್

    ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ `ಸಲಾರ್ ನಂತರ `ಪ್ರಾಜೆಕ್ಟ್ ಕೆ’ ಸಿನಿಮಾಗಾಗಿ ರೆಡಿಯಾಗ್ತಿದ್ದಾರೆ. ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ `ಪ್ರಾಜೆಕ್ಟ್ ಕೆ’ ಶೂಟಿಂಗ್‌ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಹೊಸ ಗೆಟಪ್‌ನಲ್ಲಿ ಮಿಂಚಲು ಬಾಹುಬಲಿ ಸ್ಟಾರ್ ರೆಡಿಯಾಗಿದ್ದಾರೆ.

    ನಾಗ ಅಶ್ವೀನ್ ನಿರ್ದೇಶನದಲ್ಲಿ ಮೂಡಿ ಬರಲಿರುವ `ಪ್ರಾಜೆಕ್ಟ್ ಕೆ’ ಚಿತ್ರಕ್ಕಾಗಿ ಪ್ರಭಾಸ್ ಸಜ್ಜಾಗಿದ್ದಾರೆ. ಚಿತ್ರದ ಪ್ರಭಾಸ್ ಪಾತ್ರದ ಪೋರ್ಷನ್ ಮಾತ್ರ ಒಂದು ವಾರಗಳ ಕಾಲ ಚಿತ್ರೀಕರಣ ಮಾಡಿಕೊಳ್ಳಲು ಟೀಮ್ ಪ್ಲ್ಯಾನ್ ಮಾಡಿಕೊಂಡಿದೆ. ಹೈದರಾಬಾದ್‌ನಲ್ಲಿ `ಪ್ರಾಜೆಕ್ಟ್ ಕೆ’ ಶೂಟಿಂಗ್ ಶುರುವಾಗಲಿದೆ.ಇದನ್ನೂ ಓದಿ: ನಾಳೆ ರಾಮ್ ಗೋಪಾಲ್ ವರ್ಮಾ ಮತ್ತು ಉಪೇಂದ್ರ ಕಾಂಬಿನೇಷನ್ ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್

    `ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ತಿದ್ದು, ಚಿತ್ರರಂಗದ ದಂತಕಥೆ ಅಮಿತಾಭ್ ಬಚ್ಚನ್ ಪವರ್‌ಫುಲ್ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಒಟ್ಟಾರೆ ಈ ಮೂರು ಸ್ಟಾರ್ ಜುಗಲ್‌ಬಂದಿ ತೆರೆಯ ಮೇಲೆ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

  • ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ತಂಡ ರಾತ್ರೋರಾತ್ರಿ ತಲೆಕೆಡಿಸಿಕೊಂಡಿದೆ. ಎಷ್ಟೇ ಮುತುವರ್ಜಿ ತಗೆದುಕೊಂಡಿದ್ದರೂ, ಬಿಕಿನಿ ಫೋಟೋ ಲೀಕ್ ಮಾಡಿದವನ ಹುಡುಕಾಟ ನಡೆಸಿದೆ.

    ಹೌದು, ಪರಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಮಹತ್ವದ ಪಾತ್ರ. ಆ ಪಾತ್ರಕ್ಕಾಗಿ ಅವರು ಬಿಕಿನಿ ತೊಟ್ಟಿದ್ದಾರೆ. ಯಾರೋ ರಸಿಕ ಆ ಫೋಟೋವನ್ನು ಸೆರೆ ಹಿಡಿದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಫೋಟೋ ಲೀಕ್ ಆಗುತ್ತಿದ್ದಂತೆಯೇ ಕೋಟ್ಯಾಂತರ ಜನರು ಅದನ್ನು ಶೇರ್ ಮಾಡಿದ್ದಾರೆ. ಹೀಗಾಗಿ ಚಿತ್ರತಂಡ ಸಖತ್ ಬೇಸರದಲ್ಲಿದೆ. ಇದನ್ನೂ ಓದಿ : ಮೊದಲ ದಿನವೇ 30 ಕೋಟಿ ಕಲೆಕ್ಷನ್ – 100 ಕೋಟಿ ಕ್ಲಬ್ ಸೇರುತ್ತಾ ಜೇಮ್ಸ್..?

    ಸಿನಿಮಾದ ಫೋಟೋಗಳು, ಗೆಟಪ್ ಹಾಗೂ ಇತರ ವಿಷಯಗಳು ಆಚೆ ಹೋಗದಂತೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮುತುವರ್ಜಿ ತಗೆದುಕೊಳ್ಳಲಾಗುತ್ತದೆ. ಕನ್ನಡದಲ್ಲೂ ಎಷ್ಟೋ ಸಿನಿಮಾಗಳ ಶೂಟಿಂಗ್ ಗೆ ಮೊಬೈಲ್ ನಿಷೇಧ ಹೇರಲಾಗಿದೆ. ಆದರೂ, ಈ ರೀತಿಯ ಘಟನೆಗಳು ನಡೆದು ಬಿಡುತ್ತವೆ.

    ಪಠಾಣ್ ಸಿನಿಮಾದ ಶೂಟಿಂಗ್ ವಿದೇಶದಲ್ಲಿ ನಡೆಯುತ್ತಿದೆ. ಸ್ಪೇನ್ ನಲ್ಲಿ ನಡೆಯುತ್ತಿರುವ ಶೂಟಿಂಗ್ ನಲ್ಲಿ ದೀಪಿಕಾ ಪಡುಕೋಣೆ ಗಾಢ ಹಳದಿ ಬಣ್ಣದ ಬಿಕಿನಿ ತೊಟ್ಟಿದ್ದಾರೆ. ಆ ಬಿಕಿನಿಯ ಮೇಲೆ ನಿಲುವಂಗಿ ತೊಟ್ಟ ಮತ್ತು ಅದನ್ನು ಕಳಚಿದ ಫೋಟೋಗಳು ಕೂಡ ಬಹಿರಂಗವಾಗಿವೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್

    ದೀಪಿಕಾ ಬಿಕಿನಿ ಹಾಕುವುದು ಹೊಸದೇನೂ ಅಲ್ಲ, ಕ್ಯಾಲಂಡರ್ ಶೂಟ್ ಗಾಗಿ ಅವರು ಬಿಕಿನಿ ಹಾಕಿದ್ದೂ ಇದೆ. ಅದೆಷ್ಟೋ ಫೋಟೋಶೂಟ್ ಗಳಲ್ಲಿ ಹಾಟ್ ಹಾಟ್ ಆಗಿ ಕಂಡದ್ದೂ ಇದೆ. ಆದರೆ, ಮದುವೆ ಆದ ನಂತರ ಇದೇ ಮೊದಲ ಬಾರಿಗೆ ಅವರು ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳು ನಾನಾ ರೀತಿಯಲ್ಲಿ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಹಳೆಯ ಕ್ಯಾಲೆಂಡರ್ ಫೋಟೋಶೂಟ್ ಅನ್ನು ನೆನಪಿಸಿಕೊಂಡಿದ್ದಾರೆ.

  • ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!

    ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!

    ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರಿಗೆ ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಮಿರ್ಚಿ ಪ್ರಶ್ನೆಯನ್ನು ಕೇಳಿದ್ದು, ಈ ಕುರಿತು ಪ್ರಭಾಸ್  ಹಂಚಿಕೊಂಡಿದ್ದಾರೆ.

     `ರಾಧೆ ಶ್ಯಾಮ್’ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು `ಪ್ರಾಜೆಕ್ಟ್-ಕೆ’ ಶೂಟಿಂಗ್ ಸಮಯದಲ್ಲಿ ದೀಪಿಕಾ ಜೊತೆ ಕಳೆದ ಸಮಯ ಕುರಿತು ಹಂಚಿಕೊಂಡಿದ್ದಾರೆ. ಪ್ರಭಾಸ್, ದೀಪಿಕಾ ಕುರಿತು ಮಾತನಾಡಿದ್ದು, ನಾನು ದೀಪಿಕಾ ಅವರನ್ನು `ಪ್ರಾಜೆಕ್ಟ್-ಕೆ’ ಸೆಟ್‍ನಲ್ಲೇ ಮೊದಲ ಬಾರಿಗೆ ಭೇಟಿಯಾದೆ. ನನ್ನನ್ನು ದೀಪಿಕಾ ಏಕೆ ನೀವು ಹೆಚ್ಚು ನಾಚಿಕೆ ಪಡುತ್ತೀರಾ ಎಂದು ಕೇಳಿದ್ದರು ಎಂದು ದೀಪಿಕಾ ನಡುವಿನ ಅವರ ಸಂಭಾಷಣೆಯನ್ನು ಬಹಿರಂಗಪಡಿಸಿದರು. ಇದನ್ನೂ ಓದಿ: ಭಾಸ್ಕರ್.ವಿ.ರೆಡ್ಡಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು

    ಜನರೊಂದಿಗೆ ನಾನು ಯಾವುದೇ ರೀತಿಯ ನಾಚಿಕೆಯಿಲ್ಲದೆ ಮಾತನಾಡಬೇಕು ಎಂದರೆ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತೇನೆ. ಯಾವುದೇ ವ್ಯಕ್ತಿ ಜೊತೆ ನಾನು ಫ್ರೀಯಾಗಿ ಮಾತನಾಡಬೇಕು ಎಂದರೆ ನನಗೆ ಹೊಂದಾಣಿಕೆಯಾಗಬೇಕು. ನಾನು ಒಬ್ಬ ವ್ಯಕ್ತಿ ಜೊತೆ ಮಾತನಾಡಬೇಕು ಎನಿಸಿದರೆ ಅವರನ್ನು ನಿರಂತರವಾಗಿ ಮಾತನಾಡಿಸಲು ಪ್ರಾರಂಭಿಸುತ್ತೇನೆ. ಅವರು ನನ್ನ ಕಂಪನಿ ಇಷ್ಟ ಪಡುವಂತೆ ಮಾಡುತ್ತೇನೆ ಎಂದು ತಮ್ಮ ವ್ಯಕ್ತಿತ್ವದ ಬಗ್ಗೆ ಹೇಳಿಕೊಂಡರು.

    ನಾನು ದೀಪಿಕಾ ಅವರನ್ನು ಮೊದಲಬಾರಿಗೆ ನೋಡಿದ್ರಿಂದ ಅವರ ಜೊತೆ ಅಷ್ಟು ಸುಲಭವಾಗಿ ಮಾತನಾಡಲು ಸಾಧ್ಯವಾಗಿರಲಿಲ್ಲ. ಅದಕ್ಕೆ ನಾನು ದೀಪಿಕಾ ಜೊತೆ ಮಾತನಾಡುವುದಕ್ಕೆ ಮೊದಲು ಹಿಂಜರಿಯುತ್ತಿದ್ದೆ. ಅದಕ್ಕೆ ದೀಪಿಕಾ ಅವರು ನನಗೆ ಏಕೆ ಹೆಚ್ಚು ನಾಚಿಕೆ ಪಡುತ್ತೀರಾ ಎಂದು ಕೇಳಿದ್ದರು ಎಂದು ನಕ್ಕರು. ಇದನ್ನೂ ಓದಿ: 16 ಗಂಟೆ ಟ್ರಾನ್‍ನಲ್ಲೇ ನಿಂತುಕೊಂಡೆ ಪ್ರಯಾಣ ಮಾಡಿದ್ದೇವೆ: ನೋವು ಹಂಚಿಕೊಂಡ ವಿದ್ಯಾರ್ಥಿಗಳು!

    ಇದೇ ಮೊದಲಬಾರಿಗೆ ಬಾಲಿವುಡ್ ಬ್ಯೂಟಿ ದೀಪಿಕಾ ಮತ್ತು ಪ್ರಭಾಸ್ `ಪ್ರಾಜೆಕ್ಟ್-ಕೆ’ ಸಿನಿಮಾ ಮೂಲಕ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. `ಪ್ರಾಜೆಕ್ಟ್-ಕೆ’ ಸಿನಿಮಾಗೆ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದು, ದಕ್ಷಿಣ ಸಿನಿರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಇದು ಒಂದಾಗಿದೆ.

  • 18 ವರ್ಷದವಳಿದ್ದಾಗಲೇ ಸ್ತನ ಕಸಿ ಮಾಡಲು ಸಲಹೆ ಕೊಟ್ಟಿದ್ದರು: ದೀಪಿಕಾ

    18 ವರ್ಷದವಳಿದ್ದಾಗಲೇ ಸ್ತನ ಕಸಿ ಮಾಡಲು ಸಲಹೆ ಕೊಟ್ಟಿದ್ದರು: ದೀಪಿಕಾ

    ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತುಂಬಾ ಓಪನ್ ಅಪ್ ಆಗಿ ಮಾತನಾಡುತ್ತಾರೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಈಗ ಅವರು ತಮ್ಮ ದೇಹ ಸೌಂದರ್ಯದ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    ನನಗೊಮ್ಮೆ ಬಾಡಿ ಶೇಮಿಂಗ್ ಆಗಿತ್ತು. ಆಗ ನನಗೆ ಇನ್ನೂ 18 ವರ್ಷವಾಗಿತ್ತು. 18 ವರ್ಷಕ್ಕೆ ಸ್ತನವನ್ನು ಕಸಿ ಮಾಡಿಸಿಕೊಳ್ಳಲು ಒಬ್ಬರು ಸಲಹೆ ನೀಡಿದ್ದರು ಎಂದು ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ದೀಪಿಕಾ ಪಡುಕೋಣೆ ಫಿಲಂಫೇರ್ ಸಂದರ್ಶನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ನಿಮಗೆ ಒಳ್ಳೆಯ ಮತ್ತು ಕೆಟ್ಟ ಸಲಹೆಯನ್ನು ಯಾರಾದರೂ ನೀಡಿದ್ದಾರಾ? ಎಂದು ಕೇಳಲಾಗಿತ್ತು. ಒಳ್ಳೆಯ ಸಲಹೆಯನ್ನು ನನಗೆ ಶಾರೂಖ್ ಖಾನ್ ಕೊಟ್ಟಿದ್ದಾರೆ. 15 ವರ್ಷಗಳ ಹಿಂದೆ ನಾನು ಅವರೊಂದಿಗೆ ಸಿನಿಮಾ ಮಾಡಿದ್ದೆ. ಅವರು ನನಗೆ ಸಾಕಷ್ಟು ಒಳ್ಳೆಯ ಹಾಗೂ ಮೌಲ್ಯಯುತವಾದ ಸಲಹೆ ಕೊಟ್ಟಿದ್ದಾರೆ. ನಿಮಗೆ ಒಳ್ಳೆಯ ಸಮಯ ಬರುತ್ತದೆ, ಸಿನಿಮಾದಲ್ಲಿ ಗುರುತಿಸಿಕೊಳ್ಳುತ್ತೀರಿ, ಒಳ್ಳೆಯ ಕ್ಷಣಗಳನ್ನು ನೀವು ಅನುಭವಿಸುತ್ತೀರಿ ಎಂದು ಹೇಳಿದ್ದರು ಎಂದಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ನನಗೆ ಕೆಟ್ಟ ಸಲಹೆಯನ್ನು ಒಬ್ಬರು ಕೊಟ್ಟಿದ್ದರು. ನಾನು 18 ವರ್ಷವಳಿದ್ದಾಗಲೇ ನನಗೆ ಸ್ತನವನ್ನು ಕಸಿ ಮಾಡಿಸಿಕೊಳ್ಳಲು ಹೇಳಿದ್ದರು. ಆದರೆ ನಾನು ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಹೇಳಿದರು. ದೀಪಿಕಾ ಪಡುಕೋಣೆ ಅವರ ಈ ಉತ್ತರ ಮಾತ್ರ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿರುವುದು ಅಂತೂ ಸತ್ಯ.  ಇದನ್ನೂ ಓದಿ: ಮತ್ತೆ ಕಂಗನಾಗೆ ಬಂತು ಕಂಟಕ – ‘ಲಾಕ್‍ಆಪ್’ ವಿರುದ್ಧ ಕಾಪಿರೈಟ್

    ಗೆಹ್ರೈಯಾನ್ ಸಿನಿಮಾವನ್ನು ಶಕುನ್ ಬಾತ್ರಾ ನಿರ್ದೇಶಿಸಿದ್ದು, ಈ ಸಿನಿಮಾದಲ್ಲಿ ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ನಟಿಸಿದ್ದರು. ಅಲ್ಲೆದೆ ಈ ಸಿನಿಮಾದಲ್ಲಿ ದೀಪಿಕಾ ಭಿನ್ನ ಪಾತ್ರವನ್ನು ನಿರ್ವಹಿಸಿದ್ದು, ಪ್ರೇಕ್ಷಕರು ಯಾವ ರೀತಿ ತನ್ನನ್ನು ಒಪ್ಪಿಕೊಳ್ಳುತ್ತಾರೆ ಎಂಬ ಕುತೂಹಲ ಅವರಲ್ಲಿಯೂ ಇತ್ತು. ಇದೇ ತಿಂಗಳು ಗೆಹ್ರೈಯಾನ್ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಸಹ ಆಗಿತ್ತು. ಸಿನಿಮಾ ನೋಡಿದ ಪ್ರೇಕ್ಷಕರು, ಸಿನಿಮಾ ತಾರೆಯರು ಮತ್ತು ವಿಮರ್ಶಕರಿಂದ ದೀಪಿಕಾ ಅಭಿನಯಕ್ಕೆ ಮತ್ತು ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಗೆಹ್ರೈಯಾನ್’ ಸಕ್ಸಸ್ ಸೆಲೆಬ್ರೇಟ್ ಮಾಡಲು ಬೆಂಗಳೂರಿಗೆ ಬರ್ತಿದ್ದಾರೆ ದೀಪಿಕಾ!

     

     

  • ‘ಗೆಹ್ರೈಯಾನ್’ ಸಕ್ಸಸ್ ಸೆಲೆಬ್ರೇಟ್ ಮಾಡಲು ಬೆಂಗಳೂರಿಗೆ ಬರ್ತಿದ್ದಾರೆ ದೀಪಿಕಾ!

    ‘ಗೆಹ್ರೈಯಾನ್’ ಸಕ್ಸಸ್ ಸೆಲೆಬ್ರೇಟ್ ಮಾಡಲು ಬೆಂಗಳೂರಿಗೆ ಬರ್ತಿದ್ದಾರೆ ದೀಪಿಕಾ!

    ಮುಂಬೈ: ಕನ್ನಡದ ಬೆಡಗಿ, ಬಾಲಿವುಡ್ ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ ತಮ್ಮ ‘ಗೆಹ್ರೈಯಾನ್’ ಸಿನಿಮಾ ಸಕ್ಸಸ್‍ನನ್ನು ಕುಟುಂಬದ ಜೊತೆ ಆಚರಿಸಲು ಬೆಂಗಳೂರಿಗೆ ಬರುತ್ತಿದ್ದಾರೆ.

    ‘ಗೆಹ್ರೈಯಾನ್’ ಸಿನಿಮಾವನ್ನು ‘ಶಕುನ್ ಬಾತ್ರಾ’ ನಿರ್ದೇಶಿಸಿದ್ದು, ಈ ಸಿನಿಮಾದಲ್ಲಿ ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ನಟಿಸಿದ್ದರು. ಅಲ್ಲೆದೆ ಈ ಸಿನಿಮಾದಲ್ಲಿ ದೀಪಿಕಾ ಭಿನ್ನ ಪಾತ್ರವನ್ನು ನಿರ್ವಹಿಸಿದ್ದು, ಪ್ರೇಕ್ಷಕರು ಯಾವ ರೀತಿ ತನ್ನನ್ನು ಒಪ್ಪಿಕೊಳ್ಳುತ್ತಾರೆ ಎಂಬ ಕುತೂಹಲ ಅವರಲ್ಲಿಯೂ ಇತ್ತು. ಇದೇ ತಿಂಗಳು ‘ಗೆಹ್ರೈಯಾನ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಸಹ ಆಗಿತ್ತು. ಇದನ್ನೂ ಓದಿ: ಮತ್ತೆ ಕಂಗನಾಗೆ ಬಂತು ಕಂಟಕ – ‘ಲಾಕ್‍ಆಪ್’ ವಿರುದ್ಧ ಕಾಪಿರೈಟ್

     

    View this post on Instagram

     

    A post shared by Deepika Padukone (@deepikapadukone)

    ಸಿನಿಮಾ ನೋಡಿದ ಪ್ರೇಕ್ಷಕರು, ಸಿನಿಮಾ ತಾರೆಯರು ಮತ್ತು ವಿಮರ್ಶಕರಿಂದ ದೀಪಿಕಾ ಅಭಿನಯಕ್ಕೆ ಮತ್ತು ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ಬಂತು. ವಿಮರ್ಶಕರು, ದೀಪಿಕಾ ಅಭಿನಯಿಸಿದ ರೀತಿಯಲ್ಲಿ ಯಾರೂ ಆ ಪಾತ್ರವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಪ್ರಸಂಸಿದ್ದಾರೆ. ಅದಕ್ಕೆ ದೀಪಿಕಾ ಈ ಖುಷಿಯನ್ನು ಕುಟುಂಬದ ಜೊತೆ ಸಂಭ್ರಮಿಸಲು ನಿರ್ಧರಿಸಿದ್ದಾರೆ.

    ವೀಕೆಂಡ್ ನಲ್ಲಿ ತಮ್ಮ ಕುಟುಂಬದ ಜೊತೆಗೆ ಸಿನಿಮಾ ಸಕ್ಸಸ್ ಸೆಲೆಬ್ರೇಟ್ ಮಾಡಿ, ನಂತರ ಮತ್ತೆ ಅವರು ತಮ್ಮ ಕೆಲಸಕ್ಕೆ ಹಿಂದುರುಗಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ‘ಗೆಹ್ರೈಯಾನ್’ ಸಿನಿಮಾದಲ್ಲಿ ದೀಪಿಕಾ ಬೋಲ್ಡ್ ಮತ್ತು ಮೆಚ್ಯುರಿಟಿ ಅಭಿನಯದಿಂದ ಸಿನಿಪ್ರಿಯರಿಗೆ ಮತ್ತಷ್ಟು ಹತ್ತಿರವಾಗಿದ್ದು, ಮತ್ತೆ ಯಾವ ರೀತಿ ಪಾತ್ರ ಮಾಡುತ್ತಾರೆ ಎಂದು ಪ್ರೇಕ್ಷಕರಲ್ಲಿಯೂ ಕುತೂಹಲವಿದೆ.

  • ಬಾಲಿವುಡ್‌ನಲ್ಲಿ ನಟಿಸಲು ಸಲ್ಮಾನ್‌ ಕೊಟ್ಟ ಆಫರ್‌ ನಿರಾಕರಿಸಿದ್ದೆ: ಕಾರಣ ಬಿಚ್ಚಿಟ್ಟ ದೀಪಿಕಾ ಪಡುಕೋಣೆ

    ಬಾಲಿವುಡ್‌ನಲ್ಲಿ ನಟಿಸಲು ಸಲ್ಮಾನ್‌ ಕೊಟ್ಟ ಆಫರ್‌ ನಿರಾಕರಿಸಿದ್ದೆ: ಕಾರಣ ಬಿಚ್ಚಿಟ್ಟ ದೀಪಿಕಾ ಪಡುಕೋಣೆ

    ನವದೆಹಲಿ: ಬಾಲಿವುಡ್‌ನಲ್ಲಿ ನಟಿಸಲು ನನಗೆ ಮೊದಲ ಬಾರಿಗೆ ಆಫರ್‌ ಕೊಟ್ಟವರು ನಟ ಸಲ್ಮಾನ್‌ ಖಾನ್‌. ಆದರೆ ನಾನು ನಟಿಸಲು ಒಪ್ಪಲಿಲ್ಲ ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

    ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ ದೀಪಿಕಾ, ಬಾಲಿವುಡ್‌ನಲ್ಲಿ ನಟಿಸಲು ಮೊದಲು ನನಗೆ ಆಫರ್‌ ಕೊಟ್ಟವರು ಸ್ಟಾರ್‌ ನಟ ಸಲ್ಮಾನ್‌ ಖಾನ್.‌ ಆಗ ನಾನಿನ್ನೂ ರೂಪದರ್ಶಿಯಾಗಿದ್ದೆ. ಆದರೂ ಸಿನಿಮಾದಲ್ಲಿ ನಟಿಯಾಗಿ ಕಾಣಿಸಿಕೊಳ್ಳಲು ಆಗ ನಾನು ಒಪ್ಪಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಿರಿಕ್ ಪ್ರಶ್ನೆಯನ್ನು ಕೇಳಿದ ಅಭಿಮಾನಿಯ ಬಾಯಿ ಮುಚ್ಚಿಸಿದ ಸಮಂತಾ

    ಸಲ್ಮಾನ್‌ ಮತ್ತು ತಮ್ಮ ನಡುವಿನ ಸಿನಿಮಾ ಬಾಂಧವ್ಯದ ಬಗ್ಗೆ ಬಾಲಿವುಡ್‌ ಹಂಗಾಮದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೀಪಿಕಾ, ನಾವಿಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಸಿನಿಮಾದಲ್ಲಿ ನಟಿಸಲು ನನಗೆ ಮೊದಲ ಬಾರಿಗೆ ಅವಕಾಶ ನೀಡಲು ಮುಂದಾಗಿದ್ದ ಅವರಿಗೆ ನಾನು ಕೃತಜ್ಞಳಾಗಿದ್ದೇನೆ. ಅಂತಹ ಆಫರ್‌ ನಿರಾಕರಿಸಿದ್ದನ್ನು ನೆನೆಸಿಕೊಂಡರೆ ಈಗಲೂ ಅಚ್ಚರಿಯಾಗುತ್ತೆ. ನಾನು ಮಾಡೆಲ್ ಆಗಿ ಗುರುತಿಸಿಕೊಂಡಿದ್ದೆ. ಅದನ್ನು ಯಾರೋ ಅವರಿಗೆ ಹೇಳಿರಬೇಕು. ಇಲ್ಲವೆ ಅವರೇ ನನ್ನ ಮಾಡೆಲಿಂಗ್‌ ಪ್ರವೃತ್ತಿಯನ್ನು ಗುರುತಿಸಿರಬೇಕು ಎಂದು ತಿಳಿಸಿದ್ದಾರೆ.

    ಆದರೆ ಯಾವ ಸಿನಿಮಾದಲ್ಲಿ ನಟಿಸಲು ಸಲ್ಮಾನ್‌ ಆಫರ್‌ ನೀಡಿದ್ದರು ಎಂಬ ಬಗ್ಗೆ ದೀಪಿಕಾ ಗುಟ್ಟು ಬಿಟ್ಟುಕೊಟ್ಟಿಲ್ಲ. ಆಗ ನನಗೆ ಸಿನಿಮಾದಲ್ಲಿ ನಟಿಸಲು ಇಷ್ಟವಿರಲಿಲ್ಲ. ನಟಿಯಾಗಬೇಕು ಎಂದು ಕೂಡ ಬಯಸಿರಲಿಲ್ಲ. ಆದರೆ ಅದಾದ ಎರಡು ವರ್ಷಗಳ ನಂತರ ʼಓಂ ಶಾಂತಿ ಓಂʼ ಸಿನಿಮಾದಲ್ಲಿ ನಟಿಸಬೇಕಾಗಿ ಬಂತು ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ

    ನನ್ನಲ್ಲಿ ನಟಿಸುವ ಸಾಮರ್ಥ್ಯವಿದೆ ಎಂದು ನನಗೇ ತಿಳಿದಿರಲಿಲ್ಲ. ಅಂತಹ ಸಂದರ್ಭದಲ್ಲಿ ಅವರು ನನ್ನಲ್ಲಿ ಪ್ರತಿಭೆಯನ್ನು ಗುರುತಿಸಿದ್ದಾರೆ ಎಂದು ಹೇಳಿದ್ದಾರೆ.

    ಸಲ್ಮಾನ್ ಮತ್ತು ದೀಪಿಕಾ ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಿಲ್ಲ. ಆದರೆ ದೀಪಿಕಾ ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು ಬಿಗ್ ಬಾಸ್ ಶೋನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ಒಮ್ಮೆ ದೀಪಿಕಾ ಕುರಿತು ಸಲ್ಮಾನ್‌ ಮಾತನಾಡಿ, ದೀಪಿಕಾ ದೊಡ್ಡ ತಾರೆ. ಆದ್ದರಿಂದ ನನ್ನೊಂದಿಗೆ ಚಲನಚಿತ್ರ ಮಾಡಲು ಬಯಸದಿರಬಹುದು ಎಂದು ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ಕಂಚಿನ ಕಂಠದ ಆರ್.ಜೆ ರಚನಾ ಹೃದಯಾಘಾತದಿಂದ ನಿಧನ

  • ಕೊನೆಗೂ ತನ್ನ ಕನಸು ನೆರವೇರಿತು ಎಂದ ಪ್ರಭಾಸ್ !

    ಕೊನೆಗೂ ತನ್ನ ಕನಸು ನೆರವೇರಿತು ಎಂದ ಪ್ರಭಾಸ್ !

    ಮುಂಬೈ: ನನ್ನ ಕನಸು ಕೊನೆಗೂ ನೆರವೇರಿತು ಎಂದು ದಕ್ಷಿಣ ಸಿನಿಮಾಗಳ ಬಾಹುಬಲಿ ಪ್ರಭಾಸ್ ಸಂತೋಷ ವ್ಯಕ್ತಪಡಿಸಿದ್ದಾರೆ.

    Project K: Prabhas says shooting with Amitabh Bachchan 'a dream come true' | Entertainment News,The Indian Express

    ಬಾಲಿವುಡ್ ಸೂಪರ್‍ಸ್ಟಾರ್ ಅಮಿತಾಬ್ ಬಚ್ಚನ್ ಜೊತೆ ನಟಿಸಬೇಕು ಎಂಬುದು ಎಲ್ಲ ಕಲಾವಿದರ ಕನಸು. ಈ ಕನಸು ರೆಬೆಲ್ ಹುಡುಗ ಪ್ರಭಾಸ್‍ಗೂ ಸಹ ಇತ್ತು ಎಂದು ಸ್ವತಃ ಅವರೇ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಬಿಗ್ ಬಿ ಜೊತೆ ಇದೇ ಮೊದಲ ಬಾರಿಗೆ ಪ್ರಭಾಸ್ ‘ಪ್ರಾಜೆಕ್ಟ್ ಕೆ’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಗಾಗಿ ಅವರೇ ಬಹಳ ಎಕ್ಸೈಟ್ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ತುಂಗಾಭದ್ರಾ ಆರತಿಯಿಂದ ಹರಿಹರದ ಗತವೈಭವ ಮರಳಿ ಪಡೆಯುವ ಗುರಿ: ವಚನಾನಂದ ಸ್ವಾಮೀಜಿ

     

    View this post on Instagram

     

    A post shared by Prabhas (@actorprabhas)

    ಇನ್‍ಸ್ಟಾಗ್ರಾಮ್‍ನಲ್ಲಿ ಬಿಗ್ ಬಿ ಸಿನಿಮಾ ಸ್ಟಿಲ್ ಹಂಚಿಕೊಂಡ ಪ್ರಭಾಸ್, ‘ಕನಸು ನನಸಾಗಿದೆ’. ಲೆಜೆಂಡರಿ ಅಮಿತಾಬಚ್ಚನ್ ಸರ್ ಅವರೊಂದಿಗೆ ನನ್ನ ಮೊದಲ ಶಾಟ್. ಇಂದು ಪೂರ್ಣಗೊಂಡಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಕುರಿತು ನಿನ್ನೆ ಬಚ್ಚನ್ ಸಹ ಸೋಶಿಯಲ್ ಮೀಡಿಯಾದಲ್ಲಿ ‘ಪ್ರಾಜೆಕ್ಟ್ ಕೆ’ ಸಿನಿಮಾದ ತಮ್ಮ ಮೊದಲ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಎಂದು ಬಹಿರಂಗಪಡಿಸಿದರು. ಟ್ವೀಟ್‍ನಲ್ಲಿ ಬಿಗ್ ಬಿ, ಮೊದಲ ದಿನ.. ಮೊದಲ ಶಾಟ್.. ‘ಬಾಹುಬಲಿ’ ಪ್ರಭಾಸ್ ಅವರೊಂದಿಗಿನ ಮೊದಲ ಚಿತ್ರ. ಅವರ ಪ್ರತಿಭೆ ಮತ್ತು ನಮ್ರತೆ, ಕಲಿಯಲು ತೊಡಗಿಸಿಕೊಳ್ಳಲು ಅವರಿಗಿರುವ ಕಾತುರತೆ ತುಂಬಾ ಚೆನ್ನಾಗಿದೆ ಎಂದು ಬರೆದು ಟ್ವೀಟ್ ಮಾಡಿದರು.

    ಬಿಗ್ ಬಿ ಈ ಹಿಂದೆಯೂ, ಬಾಹುಬಲಿ ಸಿನಿಮಾ ಮೂಲಕ ದೇಶ ಮತ್ತು ಪ್ರಪಂಚದಾದ್ಯಂತ ಸಿನಿಮೀಯ ಮಾಂತ್ರಿಕ ಅಲೆಗಳನ್ನು ಸೃಷ್ಟಿಸಿದ ಐಕಾನ್ ಎಂದು ಪ್ರಭಾಸ್ ಅವರನ್ನು ಉಲ್ಲೇಖಿಸಿ ಹೊಗಳಿದ್ದರು. ಪ್ರಭಾಸ್ ಕೂಡ, ಅಮಿತಾಬ್ ಅವರನ್ನು ಭಾರತೀಯ ಚಿತ್ರರಂಗದ ಗುರು ಎಂದೂ ಕರೆದಿದ್ದರು.

    ‘ಪ್ರಾಜೆಕ್ಟ್ ಕೆ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೂಡ ನಟಿಸಿದ್ದು, ಇದು ಇವರಿಬ್ಬರ ಮೊದಲ ಸಿನಿಮಾವಾಗಿದೆ. ಡಿಸೆಂಬರ್‌ನಲ್ಲಿ ‘ಪ್ರಾಜೆಕ್ಟ್ ಕೆ’ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಶೂಟಿಂಗ್ ವೇಳೆ ದೀಪಿಕಾ ಅವರನ್ನು ನಿರ್ಮಾಪಕರು ಅದ್ಧೂರಿಯಾಗಿ ಸ್ವಾಗತಿಸಿದ್ದು, ರಾಷ್ಟ್ರ ಮಟ್ಟದಲ್ಲಿ ಎಲ್ಲರ ಹೃದಯ ಆಳುತ್ತಿರುವ ದಕ್ಷಿಣದ ಮಗಳಿಗೆ, ರಾಜಕುಮಾರಿಗೆ ಮತ್ತೆ ಮನೆಗೆ ಸ್ವಾಗತ ಎಂದು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ಪಂಜಾಬ್ ಚುನಾವಣೆಗೂ ಮುನ್ನಾ ದಿನ 12,430 ಹೊಸ ಸ್ಮಾರ್ಟ್ ತರಗತಿ ಉದ್ಘಾಟಿಸಿದ ಕೇಜ್ರಿವಾಲ್

    ‘ಪ್ರಾಜೆಕ್ಟ್ ಕೆ’ ಸಿನಿಮಾಗೆ ನಾಗ್‍ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದು, ‘ವೈಜಯಂತಿ ಮೂವೀಸ್’ ಸಿನಿಮಾವನ್ನು ನಿರ್ಮಿಸುತ್ತಿದೆ. ಸಿನಿಮಾ ಕುರಿತು ಮಾತನಾಡಿದ ನಿರ್ದೇಶಕರು, ದೀಪಿಕಾ ಮತ್ತು ಪ್ರಭಾಸ್ ಜೋಡಿಯು ಸಿನಿಮಾದ ಪ್ರಮುಖ ಹೈಲೈಟ್‍ಗಳಲ್ಲಿ ಒಂದಾಗಲಿದೆ. ಅವರ ನಡುವಿನ ಕಥೆ ಪ್ರೇಕ್ಷಕರನ್ನು ರಜಿಸುತ್ತೆ ಎಂದಿದ್ದರು. ‘ಪ್ರಾಜೆಕ್ಟ್ ಕೆ’ ಸಿನಿಮಾ ಸೂಪರ್ ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿದ್ದು, ಈ ಸಿನಿಮಾಗಾಗಿ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಪ್ರಸ್ತುತ ಈ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ.

  • ಕಡಲ ತೀರದಲ್ಲಿ ನಿಂತು ಪತಿಯನ್ನು ತಬ್ಬಿ ಚುಂಬಿಸಿದ ದೀಪಿಕಾ ಪಡುಕೋಣೆ

    ಕಡಲ ತೀರದಲ್ಲಿ ನಿಂತು ಪತಿಯನ್ನು ತಬ್ಬಿ ಚುಂಬಿಸಿದ ದೀಪಿಕಾ ಪಡುಕೋಣೆ

    ಮುಂಬೈ: ಬಾಲಿವುಡ್ ನಟಿ ದಿಪೀಕಾ ಪಡುಕೋಣೆ ಮತ್ತು ಅವರ ಪತಿ ಪತಿ ರಣವೀರ್ ಸಿಂಗ್ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಿರುತ್ತಾರೆ. ದೀಪಿಕಾ ಪಡುಕೋಣೆ ಪತಿಯ ತುಟಿಗೆ ಚುಂಬಿಸಿದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಪತಿ ರಣವೀರ್ ಸಿಂಗ್ ಯಾವಾಗಲೂ ನನ್ನನ್ನು ತಬ್ಬಿಕೊಳ್ಳಲು ಮತ್ತು ಚುಂಬಿಸಲು ಇಷ್ಟಪಡುತ್ತಾರೆ ಎಂದು ಈ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು. ಈಗ ಹೇಳಿಕೆಯಂತೆ ಈಗ ಒಂದು ಫೋಟೋವನ್ನು ಅಭಿಮಾನಿಗಳು ಮೆಚ್ಚಿಕೊಂಡು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ

     

    View this post on Instagram

     

    A post shared by Ranveer Singh (@ranveersingh)

    ದಂಪತಿ ತಮ್ಮ ರಜೆಯನ್ನು ಬೀಚ್‍ನಲ್ಲಿ ಕಳೆಯುತ್ತಿದ್ದಾರೆ. ಆ ಫೋಟೋದಲ್ಲಿ ಇಬ್ಬರು ಬೀಚ್‍ನಲ್ಲಿ ನಿಂತಿದ್ದಾರೆ ರಣವೀರ್‌ನನ್ನು ದೀಪಿಕಾ ಗಟ್ಟಿಯಾಗಿ ತಬ್ಬಿಕೊಂಡು  ಚುಂಬಿಸಿದ್ದಾರೆ. ಈ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡ ರಣವೀರ್ ಸಿಂಗ್ ಮಜವಾದ ಕ್ಯಾಪಶನ್ ಕೊಟ್ಟಿದ್ದಾರೆ.

    ದೀಪಿಕಾ ಪಡುಕೋಣೆ ಅಭಿನಯದ ಗೆಹ್ರೈಯಾನ್ ಶೀರ್ಷಿಕೆ ಗೀತೆ ಡೂಬೆಯ ಸಾಹಿತ್ಯದೊಂದಿಗೆ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಬಾಲಿವುಡ್ ಸೆಲೆಬ್ರೆಟಿಗಳು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ.