Tag: Deepika Padukone

  • ಆರೋಗ್ಯ ಚೇತರಿಸಿಕೊಳ್ತಿದಂತೆ ಶೂಟಿಂಗ್‌ಗೆ ಹಾಜರ್: ದೀಪಿಕಾ ನಡೆಗೆ ಭೇಷ್ ಎಂದ `ಪ್ರಾಜೆಕ್ಟ್ ಕೆ’ ನಿರ್ಮಾಪಕಿ

    ಆರೋಗ್ಯ ಚೇತರಿಸಿಕೊಳ್ತಿದಂತೆ ಶೂಟಿಂಗ್‌ಗೆ ಹಾಜರ್: ದೀಪಿಕಾ ನಡೆಗೆ ಭೇಷ್ ಎಂದ `ಪ್ರಾಜೆಕ್ಟ್ ಕೆ’ ನಿರ್ಮಾಪಕಿ

    ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಮತ್ತೆ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ದೀಪಿಕಾ ಆರೋಗ್ಯ ಏರುಪೇರಾಗಿತ್ತು. ಚೇತರಿಸಿದ ಬಳಿಕವೇ ಶೂಟಿಂಗ್‌ಗೆ ಬಂದು ಕ್ಯಾಮೆರಾ ಮುಂದೆ ನಿಂತಿದ್ದರು. ಈಗ `ಪ್ರಾಜೆಕ್ಟ್ ಕೆ’ ನಿರ್ಮಾಪಕಿ ಅಶ್ವಿನಿ ದತ್ ದೀಪಿಕಾ ವೃತ್ತಿಪರತೆಗೆ ಭೇಷ್ ಅಂದಿದ್ದಾರೆ.‌

    ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ದೀಪಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರೀಕರಣವು ಭರದಿಂದ ಸಾಗುತ್ತಿದೆ. ಕೆಲ ದಿನಗಳ ಹಿಂದೆ ಶೂಟಿಂಗ್ ವೇಳೆಯಲ್ಲಿ ಉಸಿರಾಟದಲ್ಲಿ ಏರುಪೇರಾಗಿ ದೀಪಿಕಾ ಆಸ್ಪತ್ರೆಗೆ ದಾಖಲಾಗಿದ್ದರು. ಚೇತರಿಸಿದ ಬಳಿಕವೇ ಮತ್ತೆ ಶೂಟಿಂಗ್‌ಗೆ ಹಾಜರ್ ಆಗಿದ್ದರು. ಆರೋಗ್ಯದ ಸ್ಥಿತಿ ಗತಿ ಹೇಗೆ ಇದ್ದರೂ ಬ್ರೇಕ್ ತೆಗೆದುಕೊಳ್ಳದೇ ಮತ್ತೆ ಚಿತ್ರೀಕರಣಕ್ಕೆ ಹಾಜಾರಾದ ದೀಪಿಕಾ ನಡೆಗೆ `ಪ್ರಾಜೆಕ್ಟ್ ಕೆ’ ನಿರ್ಮಾಪಕಿ ಅಶ್ವಿನಿ ದತ್‌ ಭೇಷ್ ಎಂದಿದ್ದಾರೆ. ಇದನ್ನೂ ಓದಿ: ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?

    ಹಿಂದಿ ಚಿತ್ರರಂಗದ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕಾನ್ ಫೆಸ್ಟಿವಲ್‌ಗೆ ಜ್ಯೂರಿಯಾಗಿ ಕನ್ನಡತಿ ದೀಪಿಕಾ ಭಾಗವಹಿಸಿ ಸೈ ಎನಿಸಿಕೊಂಡಿದ್ದರು. ಇದಾದ ಬಳಿಕ ಪ್ರಾಜೆಕ್ಟ್ ಕೆ ಶೂಟಿಂಗ್‌ಗೆ ಬಂದಿಳಿದಿದ್ದರು. ಬ್ರೇಕ್ ಇಲ್ಲದೆ ಕೆಲಸ ಮಾಡಿದ ನಿಮಿತ್ತ ದೀಪಿಕಾ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾಗಿತ್ತು. ಚಿತ್ರತಂಡವನ್ನು ಕಾಯಿಸಬಾರದು ಎಂಬ ಉದ್ದೇಶದಿಂದ ದೀಪಿಕಾ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಇದೀಗ ದೀಪಿಕಾ ಕೆಲಸದ ಭದ್ದತೆಗೆ ಭೇಷ್ ಅಂತಿದ್ದಾರೆ.

    Live Tv

  • ದೀಪಿಕಾ ಪಡುಕೋಣೆ ಆಸ್ಪತ್ರೆ ಸೇರಲು ಹಾರ್ಟ್ ಆರ್ಹೆತ್ಮಿಯಾ ಕಾರಣ: ಏನದು ಹಾಗೆಂದರೆ?

    ದೀಪಿಕಾ ಪಡುಕೋಣೆ ಆಸ್ಪತ್ರೆ ಸೇರಲು ಹಾರ್ಟ್ ಆರ್ಹೆತ್ಮಿಯಾ ಕಾರಣ: ಏನದು ಹಾಗೆಂದರೆ?

    ಮಿತಾಭ್ ಬಚ್ಚನ್ ನಟನೆಯ ‘ಕೆ’ ಸಿನಿಮಾದ ಶೂಟಿಂಗ್ ಗಾಗಿ ಹೈದರಾಬಾದ್ ಗೆ ಬಂದಿಳಿದಿದ್ದಾರೆ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ. ಮೂರ್ನಾಲ್ಕು ದಿನಗಳಿಂದ ಈ ಸಿನಿಮಾದ ಶೂಟಿಂಗ್ ಸತತವಾಗಿ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು, ಎರಡು ದಿನಗಳ ಹಿಂದೆಯಷ್ಟೇ ಹೃದಯ ಬಡಿತದಲ್ಲಿ ಏರು ಪೇರಾದ ಕಾರಣದಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದರು. ದಿಢೀರ್ ಅಂತ ದೀಪಿಕಾ ಆಸ್ಪತ್ರೆ ದಾಖಲಾಗಿದ್ದಕ್ಕೆ ಸಹಜವಾಗಿಯೇ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳು ಆತಂಕವಾಗಿತ್ತು.

    ಅಷ್ಟಕ್ಕೂ ದೀಪಿಕಾ ಪಡುಕೋಣೆ ಆಸ್ಪತ್ರೆ ಸೇರಿಕೊಳ್ಳಲು ಕಾರಣ ಹಾರ್ಟ್ ಆರ್ಹೆತ್ಮಿಯಾ (Heart Arrhythmia) ಎನ್ನಲಾಗುತ್ತಿದೆ. ಉದ್ವೇಗಕ್ಕೆ ಒಳಗಾದಾಗ ಮತ್ತು ಆತಂಕ ಹೆಚ್ಚಾದಾಗ ಹೀಗೆ ಹೃದಯ ಬಡಿತ ಏರು ಪೇರಾಗುತ್ತದೆಯಂತೆ. ಅದು ಇನ್ನೂ ಹೆಚ್ಚಾದರೆ, ಲಘು ಹೃದಯಾಘಾತವೂ ಸಂಭವಿಸಬಹುದಂತೆ. ಹಾಗಾಗಿ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ದೀಪಿಕಾ. ಯಾವುದೋ ಒಂದು ಕಾರಣದಿಂದಾಗಿ ಆತಂಕಗೊಂಡರೆ, ಹೀಗೆ ಹೃದಯ ಬಡಿತದಲ್ಲಿ ಏರುಪೇರಾಗುವುದು ಸಹಜವಂತೆ. ಆದರೆ, ಅದನ್ನು ನಿರ್ಲಕ್ಷ್ಯ ಮಾಡಬಾರದು ಎನ್ನುತ್ತಾರೆ ವೈದ್ಯರು. ಇದನ್ನೂ ಓದಿ : ಮುಂದಿನ ಚಿತ್ರಕ್ಕಾಗಿ ತೂಕ ಇಳಿಸ್ಕೊತಿರೋ ಯಶ್- ಗಡ್ಡಕ್ಕೂ ಬೀಳಲಿದೆಯಾ ಕತ್ತರಿ?

    ಅಂದು ಶೂಟಿಂಗ್ ಸ್ಪಾಟ್ ನಿಂದ ಹೈದರಾಬಾದ್ ಆಸ್ಪತ್ರೆಗೆ ದಾಖಲಾದ ದೀಪಿಕಾ, ಸೂಕ್ತ ಚಿಕಿತ್ಸೆ ಮತ್ತು ಸಲಹೆಗಳನ್ನು ಪಡೆದು ಮತ್ತೆ ಶೂಟಿಂಗ್ ಸ್ಪಾಟ್ ಗೆ ವಾಪಸ್ಸಾಗಿದ್ದಾರೆ. ಹಾಗಾಗಿ ಆತಂಕ ಪಡುವಂಥದ್ದು ಅವರಿಗೆ ಏನೂ ಆಗಿಲ್ಲ. ಮತ್ತೆ ಅವರು ಎಂದಿನಂತೆ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರಂತೆ. ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದಾಗಿಯೇ ಹೆಚ್ಚು ಜನರ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಹಜವಾಗಿ ಎಲ್ಲರನ್ನೂ ಆತಂಕ ಮೂಡಿತ್ತು.

    Live Tv

  • ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು

    ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು

    ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಈಗವರು ಚೇತರಿಸಿಕೊಳ್ಳುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಬಿಗ್ ಬಿ ಮತ್ತು ಪ್ರಭಾಸ್ ನಟನೆಯ `ಪ್ರಾಜೆಕ್ಟ್ ಕೆ’ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.

    ಕನ್ನಡತಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶೂಟಿಂಗ್ ನಡುವೆಯೇ ಅಸ್ವಸ್ಥರಾಗಿದ್ದು, ಈ ವೇಳೆ ದೀಪಿಕಾರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. `ಪ್ರಾಜೆಕ್ಟ್ ಕೆ’ ಎಂಬ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದ ದೀಪಿಕಾ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದಾರೆ. ಅದಾದ ನಂತರ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

    `ಪ್ರಾಜೆಕ್ಟ್ ಕೆ’ ಶೂಟಿಂಗ್ ವೇಳೆಯಲ್ಲಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ತೀವ್ರ ಬಳಲಿಕೆ ಕಂಡುಬಂದಿತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ದೀಪಿಕಾ ಅವರ ಎದೆಬಡಿತ ಇದ್ದಕ್ಕಿದ್ದಂತೆ ಏರಿಕೆಯಾಯಿತು. ನಂತರ ತುಂಬಾ ಬಳಲಿಕೆಯಿಂದ ಕಂಡುಬಂದರು. ಅವರೇ ಇದನ್ನು ಗಮನಿಸಿ ತಿಳಿಸಿದ್ದಾರೆ. ತಕ್ಷಣ ಚಿಕಿತ್ಸೆ ಬಳಿಕ ಸೆಟ್‌ಗೆ ವಾಪಸಾಗಿದ್ದಾರೆ ಮತ್ತು ಗುಣಮುಖರಾಗುತ್ತಿದ್ದಾರೆ. ಇದನ್ನೂ ಓದಿ: ಸೋನು ಗೌಡ ತನ್ನ ಬೆಸ್ಟ್ ಫ್ರೆಂಡ್ ಕೀರ್ತಿ ಸುರೇಶ್‌ಗೆ ಏನಂತ ಕರೀತಾರೆ ಗೊತ್ತಾ?

    ರಿಯಲ್ ಸ್ಟಾರ್ ಉಪೇಂದ್ರ ನಟನೆಯ `ಐಶ್ವರ್ಯ’ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ಇದಾದ ಬಳಿಕ ಅವರು ದಕ್ಷಿಣ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ `ಪ್ರಾಜೆಕ್ಟ್ ಕೆ’ ಚಿತ್ರದಿಂದ ದಕ್ಷಿಣದ ಸ್ಟಾರ್ ನಟನ ಜತೆ ನಟಿಸುತ್ತಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯುತ್ತಿದೆ. ಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ದಿಶಾ ಪಟಾಣಿ ಕೂಡ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಸದ್ಯ, ಶಾರುಖ್ ಖಾನ್ ಜೊತೆ `ಪಠಾಣ್’ ಮತ್ತು ಹೃತಿಕ್ ರೋಷನ್ ಜೊತೆ `ಫೈಟರ್’ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ.

  • ತಂದೆಯ ಹುಟ್ಟುಹಬ್ಬದಂದು ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ದೀಪಿಕಾ ಪಡುಕೋಣೆ

    ತಂದೆಯ ಹುಟ್ಟುಹಬ್ಬದಂದು ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ದೀಪಿಕಾ ಪಡುಕೋಣೆ

    ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಕಾನ್ ಫೆಸ್ಟಿವಲ್ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಕುಟುಂಬದ ಜೊತೆ ತಿರುಪತಿ ತಿರುಮಲಕ್ಕೆ ಭೇಟಿ ಕೊಟ್ಟಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಹಿಂದಿ ಚಿತ್ರರಂಗದ ಪ್ರತಿಭಾನ್ವಿತ ನಟಿ ಕನ್ನಡತಿ ದೀಪಿಕಾ, 75ನೇ ಕಾನ್ ಚಿತ್ರೋತ್ಸವದಲ್ಲಿ ಜ್ಯೂರಿಯಾಗಿ ಕಾಣಿಸಿಕೊಂಡ ನಂತರ ಇದೀಗ ತಮ್ಮ ಕುಟುಂಬದ ಜತೆ ತಿರುಪತಿ ತಿಮ್ಮಪ್ಪನ ಸನ್ನಿಧಿ ಬಂದಿದ್ದಾರೆ. ತಂದೆ ಪ್ರಕಾಶ್ ಪಡುಕೋಣೆ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದಿದ್ದಾರೆ. ಸದ್ಯ ದೀಪಿಕಾ ತಮ್ಮ ಕುಟುಂಬದ ಜೊತೆ ತಿರುಪತಿಗೆ ಬಂದಿರುವ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮಲಯಾಳಂ ಪೃಥ್ವಿರಾಜ್ ಜೊತೆ ಹೊಂಬಾಳೆ ಫಿಲ್ಮ್ಸ್ ಘೋಷಣೆ : ಐದು ಭಾಷೆಗಳಲ್ಲಿ ಸಿನಿಮಾ

    ಶಾರುಖ್ ನಟನೆಯ `ಪಠಾಣ್’, ಹೃತಿಕ್ ರೋಷನ್ ಜತೆಗಿನ ಚಿತ್ರ ಮತ್ತು ಪ್ರಭಾಸ್ ಮತ್ತು ಬಿಗ್‌ಬಿ ಕಾಂಬಿನೇಷನ್ ಹೊಸ ಚಿತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ದೀಪಿಕಾ ಪಡುಕೋಣೆ ಬ್ಯುಸಿಯಾಗಿದ್ದಾರೆ.

  • ದೊಡ್ಡ ರೆಕ್ಕೆಯಂತಿರುವ ದೀಪಿಕಾ ಪಡುಕೋಣೆ ಡ್ರೆಸ್‌ಗೆ ‘ಅಲ್ಲಾವುದ್ದೀನ್ ಖಿಲ್ಜಿ’ ಎಂದ ನೆಟ್ಟಿಗರು

    ದೊಡ್ಡ ರೆಕ್ಕೆಯಂತಿರುವ ದೀಪಿಕಾ ಪಡುಕೋಣೆ ಡ್ರೆಸ್‌ಗೆ ‘ಅಲ್ಲಾವುದ್ದೀನ್ ಖಿಲ್ಜಿ’ ಎಂದ ನೆಟ್ಟಿಗರು

    ವಿಶ್ವದ ಅತೀ ದೊಡ್ಡ ಸಿನಿಮೋತ್ಸವ ಕಾನ್ ಫೆಸ್ಟಿವಲ್‌ನಲ್ಲಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ವಿಭಿನ್ನ ಡ್ರೇಸ್ ತೊಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಜೊತೆಗೆ ಟ್ರೋಲ್ ಕೂಡ ಆಗುತ್ತಿದ್ದಾರೆ. ದೀಪಿಕಾ ಅವತಾರ ನೋಡಿ `ಅಲ್ಲಾವುದ್ದೀನ್ ಖಿಲ್ಜಿ’ ಎಂದ ನೆಟ್ಟಿಗರು ಕರೆದಿದ್ದಾರೆ.

    ಕಾನ್ ಚಿತ್ರೊತ್ಸವದ ಜ್ಯೂರಿ ತಂಡದಲ್ಲಿರುವ ನಟಿ ದೀಪಿಕಾ ಪಡುಕೋಣೆ ಈಗಾಗಲೇ ಡಿಫರೆಂಟ್ ಡ್ರೆಸ್‌ಗಳಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ್ದಾರೆ. ಕಾನ್ಸ್ ಅಂಗಳದಲ್ಲಿ ಅವರ ಫ್ಯಾಷನ್ ಲುಕ್‌ಗೆ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಅವರು ಇದೀಗ ಧರಿಸಿದ ಕಪ್ಪು ಮತ್ತು ಗೋಲ್ಡ್ ಬಣ್ಣ ಮಿಶ್ರಿತ ಬಾಡಿಕಾನ್ ಗೌನೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಈ ಬಾಡಿಕಾನ್ ಗೌನ್‌ಗೆ ದೈತ್ಯ ಗಾತ್ರದ ಕೇಫ್ಸ್ ಇದ್ದಿದ್ದು, ಅವರ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ. ಇದನ್ನೂ ಓದಿ: `ನಾಯಿ, ಬೆಕ್ಕಿನ ಜೊತೆ ಒಂಟಿಯಾಗಿ ಸಾಯಿ’ ಎಂದವನಿಗೆ ತಕ್ಕ ಉತ್ತರ ಕೊಟ್ಟ ಸಮಂತಾ

     

    View this post on Instagram

     

    A post shared by Deepika Padukone (@deepikapadukone)

    ದೊಡ್ಡ ರೆಕ್ಕೆಯಂತಿರುವ ಈ ಡಿಸೈನರ್ ಗೌನ್‌ನಲ್ಲಿ ದೀಪಿಕಾ ಅಲ್ಲಾವುದ್ದೀನ್ ಖಿಲ್ಜಿಯಂತೆ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇದರ ಫೋಟೊವನ್ನು ಪೋಸ್ಟ್ ಮಾಡಿದ ತಕ್ಷಣ ದೀಪಿಕಾ ಪತಿ ರಣವೀರ್ ಸಿಂಗ್ ವ್ಯಾಪಕ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಕೆಲವು ಅಭಿಮಾನಿಗಳು ರಣವೀರ್ ಸಿಂಗ್‌ರಂತೆ ಈಗ ದೀಪಿಕಾ ಪಡುಕೋಣೆ ಕೂಡ ಚಿತ್ರವಿಚಿತ್ರ ಡ್ರೆಸ್‌ಗಳನ್ನು ಧರಿಸುತ್ತಿದ್ದಾರೆ. ಒಟ್ಟಿನಲ್ಲಿ ದೀಪಿಕಾ ಯಾವುದೇ ಬಗೆಯ ಡ್ರೆಸ್ ತೊಟ್ಟರು ಟ್ರೋಲಿಗರ ಕಣ್ಣಿಗೆ ಗುರಿಯಾಗುತ್ತಿದ್ದಾರೆ.

  • ಬ್ಲೋಯಿಂಗ್‌ ಗೌನ್‌ನಲ್ಲಿ ದೀಪಿಕಾ ಪರದಾಟ: ನೆಟ್ಟಿಗರು ಟ್ರೋಲ್

    ಬ್ಲೋಯಿಂಗ್‌ ಗೌನ್‌ನಲ್ಲಿ ದೀಪಿಕಾ ಪರದಾಟ: ನೆಟ್ಟಿಗರು ಟ್ರೋಲ್

    ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಮತ್ತೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿರುವ ದೀಪಿಕಾ ಪಡುಕೋಣೆಯ ಉಡುಗೆ ತೊಡುಗೆ ನೋಡಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

     

    View this post on Instagram

     

    A post shared by Deepika Padukone (@deepikapadukone)

    ವಿಶ್ವದ ಅತೀ ದೊಡ್ಡ ಸಿನಿಮೋತ್ಸವ ಕಾನ್ ಫೆಸ್ಟಿವಲ್ ಜೋರಾಗಿ ನಡೆಯುತ್ತಿದೆ. ಎಲ್ಲ ದೇಶದ ನಟ ನಟಿಯರು ಈ ಸಿನಿಮಾ ಹಬ್ಬದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕಾನ್ ಫೆಸ್ಟಿವಲ್‌ನ ಜ್ಯೂರಿಯಾಗಿರುವ ದೀಪಿಕಾ ಪಡುಕೋಣೆ ಭಿನ್ನ ಡ್ರೆಸ್‌ನ ಮೂಲಕ ಒಂದಿಷ್ಟು ಅಭಿಮಾನಿಗಳ ಹುಚ್ಚೆಬ್ಬಿಸಿದ್ದಾರೆ. ಜೊತೆಗೆ ಆರೆಂಜ್ ಡ್ರೆಸ್‌ನಲ್ಲಿ ದೀಪಿಕಾ ಪರದಾಟ ನೋಡಿ ಟ್ರೋಲ್ ಕೂಡ ಮಾಡ್ತಿದ್ದಾರೆ.

    ದೀಪಿಕಾ ಪಡುಕೋಣೆ ಮೊದಲ ಎಂಟ್ರಿಯ ದಿನ ಸೀರೆ ಉಟ್ಟಿದ್ದರು. ಇದೀಗ ಆರೆಂಜ್ ಕಲರ್ ಲಾಂಗ್ ಗೌನ್‌ನಲ್ಲಿ ನಡೆಯಲು ಕಷ್ಟಪಡುತ್ತಿರುವುದನ್ನು ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಈ ರೀತಿಯ ಬಟ್ಟೆಯನ್ನು ಸುತ್ತಿಕೊಂಡು ಬರುವ ಬದಲು ಲಕ್ಷಣವಾದ ಬಟ್ಟೆಯಲ್ಲಿ ಬರಬಹುದಲ್ವಾ ಎಂದು ಪ್ರಶ್ನಿಸಿದ್ದಾರೆ. ನೋಡುಗರಿಗೆ ಮಾದರಿಯಾಗುವಂತಹ ಬಟ್ಟೆ ಹಾಕಿ ಅಂತಾ ಕೆಲ ಫ್ಯಾನ್ಸ್ ದೀಪಿಕಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡದ ಖ್ಯಾತ ನಟಿಯೊಬ್ಬಳು ನಿರ್ದೇಶಕನನ್ನೇ ಮಂಚಕ್ಕೆ ಕರೆದ ಕಥೆಗೆ ಮೆಗಾ ಟ್ವಿಸ್ಟ್

     

    View this post on Instagram

     

    A post shared by Deepika Padukone (@deepikapadukone)

    ಈ ಹಿಂದೆಯೂ ಸಾಕಷ್ಟು ಬಾರಿ ಟ್ರೋಲ್ ಆಗಿರುವ ದೀಪಿಕಾ ಇದು ಹೊಸದೇನಲ್ಲ.. ಸದ್ಯ ಕಾನ್ ಫೆಸ್ಟಿವಲ್‌ನಲ್ಲಿ ದೀಪಿಕಾ ಪಡುಕೋಣೆ ತೊಟ್ಟಿರುವ ಡ್ರೆಸ್ ಫೋಟೋ ಬಾರೀ ವೈರಲ್ ಆಗುತ್ತಿದೆ.

  • ಇಂದಿನಿಂದ ಕಾನ್ ಚಿತ್ರೋತ್ಸವ : ರಂಗಾಗಿದೆ ರೆಟ್ ಕಾರ್ಪೆಟ್

    ಇಂದಿನಿಂದ ಕಾನ್ ಚಿತ್ರೋತ್ಸವ : ರಂಗಾಗಿದೆ ರೆಟ್ ಕಾರ್ಪೆಟ್

    ಇಂದಿನಿಂದ ವಿಶ್ವದ ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಒಂದಾದ ಕಾನ್ ಫಿಲ್ಮ್ ಫೆಸ್ಟಿವೆಲ್ ಶುರುವಾಗಲಿದೆ. ಇಂದು ಸಂಜೆ 7 ಗಂಟೆಯಿಂದ ಶುರುವಾಗುವ ಕ್ಯಾನ್ ಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆಯರು ಹೆಜ್ಜೆ ಹಾಕಲಿದ್ದು, ಈಗಾಗಲೇ ಫ್ರಾನ್ಸ್ ನ ಕಾನ್ ನಗರದ ಫ್ರೆಂಚ್ ರಿವೇರಿಯಾಗೆ ಈ ತಾರೆಯರು ಬಂದಿಳಿದಿದ್ದಾರೆ.

    ಮೇ 17 ರಿಂದ ಮೇ 28ರವರೆಗೆ ನಡೆಯಲಿರುವ ಕಾನ್ ಸಿನಿಮೋತ್ಸವವು ವಿಶ್ವದ ನಾನಾ ಸಿನಿಮಾ ರಂಗವನ್ನು ಒಟ್ಟಾಗಿಸುವುದು ಫೆಸ್ಟಿವೆಲ್ ನ ವಿಶೇಷ. ಒಟ್ಟು 12 ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಸಿನಿ ಜಗತ್ತಿನ ಅನೇ ಗಣ್ಯರು ಭಾಗಿಯಾಗಲಿದ್ದು, ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಅವರು ಉಪಸ್ಥಿತರಿರಲಿದ್ದಾರೆ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ಕಳೆದ ಎರಡು ವರ್ಷಗಳಿಂದ ಕೊರೋನಾ ಕರಿನೆರಳಿನಿಂದಾಗಿ ಚಿತ್ರೋತ್ಸವ ಅಷ್ಟೇನೂ ಅದ್ಧೂರಿಯಾಗಿ ನಡೆದಿರಲಿಲ್ಲ. 2020ರಲ್ಲಿ ಚಿತ್ರೋತ್ಸವವನ್ನೇ ರದ್ದುಗೊಳಿಸಿದ್ದರೆ, 2021ರಲ್ಲಿ ಸೀಮಿತ ಮಾದರಿಯಲ್ಲಿ ಮಾತ್ರ ಚಿತ್ರೋತ್ಸವ ನಡೆಸಿದ್ದರು. ಈ ವರ್ಷ ಪ್ರತಿ ಸಲದಂತೆ ರಂಗುರಂಗಾಗಿ ಆಯೋಜಿಸಲಾಗಿದೆ. ರೆಡ್ ಕಾರ್ಪೆಟ್ ಸೇರಿದಂತೆ ಸಿನಿಮಾ ಪ್ರದರ್ಶನ, ಸೆಮಿನಾರ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ಸಾಕಷ್ಟು ಸಲ ಕೇವಲ ಬಾಲಿವುಡ್ ಸಿಲೆಬ್ರಿಟಿಗಳಿಗೆ ಮಾತ್ರ ಕಾನ್ ನಲ್ಲಿ ಅವಕಾಶ ಸಿಗುತ್ತಿತ್ತು. ಈ ಬಾರಿ ದಕ್ಷಿಣದ ಅನೇಕ ತಾರೆಯರು ಈ ಚಿತ್ರೋತ್ಸವದಲ್ಲಿ ಭಾಗಿ ಆಗುತ್ತಿರುವುದು ವಿಶೇಷ. ಪೂಜಾ ಹೆಗ್ಡೆ, ನಯನತಾರಾ, ತಮನ್ನಾ ಭಾಟಿಯಾ, ಮಾಧವನ್, ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್, ನವಾಜುದ್ದೀನ್ ಸಿದ್ಧಿಖಿ, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಹೀಗೆ ಅನೇಕ ಕಲಾವಿದರು ಭಾಗಿಯಾಗಲು ಈಗಾಗಲೇ ಫ್ರಾನ್ಸ್ ಗೆ ಹೋಗಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ಅದರಲ್ಲೂ ಈ ಬಾರಿಯ ಕಾನ್ಸ್ ಫೆಸ್ಟಿವೆಲ್ ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಾನ್ ಚಿತ್ರೋತ್ಸವದ ಜ್ಯೂರಿಯಾಗಿ ಆಯ್ಕೆಯಾಗಿದ್ದಾರೆ. ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಯ ಚಿತ್ರಗಳು ಈ ಬಾರಿ ಫೆಸ್ಟಿವೆಲ್ ನಲ್ಲಿ ಪ್ರದರ್ಶನಗೊಳ್ಳಲಿವೆ.

  • ಅಕ್ಷಯ್ ಕುಮಾರ್ ಗೆ ಕೊರೋನಾ:  ಕೇನ್ಸ್ ಚಿತ್ರೋತ್ಸವದಿಂದ ದೂರ

    ಅಕ್ಷಯ್ ಕುಮಾರ್ ಗೆ ಕೊರೋನಾ: ಕೇನ್ಸ್ ಚಿತ್ರೋತ್ಸವದಿಂದ ದೂರ

    ನಾಳೆಯಿಂದ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವ ಪ್ರಾರಂಭವಾಗಲಿದ್ದು, ಅದರಲ್ಲಿ ಪಾಲ್ಗೊಳ್ಳಲು ಬಾಲಿವುಡ್ ನಿಂದ ಅನೇಕ ತಾರೆಯರು ವಿಮಾನ ಏರಿದ್ದಾರೆ. ಆದರೆ, ಅಕ್ಷಯ್ ಕುಮಾರ್ ಮಾತ್ರ ಕೇನ್ಸ್ ನಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ. ಎರಡನೇ ಬಾರಿಗೆ ಅಕ್ಷಯ್ ಕುಮಾರ್ ಅವರಿಗೆ ಕೊರೋನಾ ಪಾಸಿಟಿವ್ ಆಗಿದ್ದು, ಹಾಗಾಗಿ ತಾವು ಕೇನ್ಸ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಅಕ್ಷಯ್ ಟ್ವಿಟ್ ಮಾಡಿದ್ದಾರೆ.  ಇದನ್ನೂ ಓದಿ: ದೊಡ್ಮನೆ ಕುಡಿ ಯುವರಾಜ್ ಎದುರು ವಿಲನ್ ಆಗಿ ಡಾಲಿ!

    ಕಳೆದ ವರ್ಷ ಏಪ್ರಿಲ್ ನಲ್ಲಿ ಅಕ್ಷಯ್ ಕುಮಾರ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಮನೆಯಲ್ಲೇ ಅವರು ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದರು. ಈಗ ಮತ್ತೆ ಅವರನ್ನು ಕೊರೋನಾ ಕಾಡಿದೆ. ನಿನ್ನೆಯಷ್ಟೇ ಅವರಿಗೆ ಕೋವಿಡ್ ಪಾಸಿಟಿವ್ ಧೃಡಪಟ್ಟಿದ್ದು, ಅದನ್ನು ಟ್ವಿಟ್ ಮೂಲಕ ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. ತಮ್ಮ ಸಂಪರ್ಕದಲ್ಲಿ ಇದ್ದವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

    ಟ್ವಟ್ ನಲ್ಲಿ ಬೇಸರ ವ್ಯಕ್ತ ಪಡಿಸಿರುವ ಅಕ್ಷಯ್ ಕುಮಾರ್, “ಕೇನ್ಸ್ ಚಿತ್ರೋತ್ಸವದಲ್ಲಿ ಭಾರತದ ಚಿತ್ರಗಳನ್ನು ನೋಡಲು ಉತ್ಸುಕನಾಗಿದ್ದೆ. ಹೆಮ್ಮೆಯಿಂದಲೇ ಈ ಬಾರಿಯ ಕೇನ್ಸ್ ನಲ್ಲಿ ಭಾಗಿಯಾಗಲು ಸಿದ್ಧತೆ ಮಾಡಿಕೊಂಡಿದ್ದೆ. ಆದರೆ, ಕೋವಿಡ್ ನಿಂದಾಗಿ ಅದೆಲ್ಲವೂ ನಿರಾಸೆ ಆಗಿದೆ. ನಿರಾಸೆಯಿಂದಲೇ ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಾಗಿದೆ’ ಎಂದು ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.  ಇದನ್ನೂ ಓದಿ:`ಫಿದಾ’ ಬ್ಯೂಟಿ ಸಾಯಿ ಪಲ್ಲವಿಗೆ ಕನ್ನಡ ಹೇಳಿಕೊಟ್ಟ ಶೀತಲ್ ಶೆಟ್ಟಿ

    ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಪೂಜಾ ಹೆಗ್ಡೆ, ಪ್ರಿಯಾಂಕಾ ಚೋಪ್ರಾ, ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಸೇರಿದಂತೆ ಹಲವು ತಾರೆಯರು ಈ ಕೇನ್ಸ್ ಚಿತ್ರೋತ್ಸವದಲ್ಲಿ ಭಾಗಿಯಾಗುತ್ತಿದ್ದು, ನಾಳೆಯಿಂದ ನಡೆಯುವ ಚಿತ್ರೋತ್ಸವದ ಹಲವು ಕಾರ್ಯಕ್ರಮಗಳಲ್ಲಿ ಭಾರತೀಯ ಸಿನಿಮಾ ರಂಗದ ಹಲವು ತಾರೆಯರು ಭಾಗಿಯಾಗಲಿದ್ದಾರೆ.

    ಸಿನಿ ತಾರೆಯರ ನೇತೃತ್ವವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ವಹಿಸಲಿದ್ದು, ಈ ಬಾರಿ ಚಲನಚಿತ್ರೋತ್ಸವದಲ್ಲಿ ಕನ್ನಡ ಮೂಲದ ನಟಿ, ಬಾಲಿವುಡ್  ತಾರೆ ದೀಪಿಕಾ ಪಡುಕೋಣೆ ಅವರು ತೀರ್ಪುಗಾರರ ಸ್ಥಾನ ತುಂಬಿದ್ದಾರೆ. ಇಂಥದ್ದೊಂದ ಗೌರವಕ್ಕೆ ಪಾತ್ರವಾದ ಮೊದಲ ಕನ್ನಡ ಮೂಲದ ನಟಿ ಇವರಾಗಿದ್ದಾರೆ.

  • ಮತ್ತೆ ಒಟ್ಟಿಗೆ ತೆರೆಹಂಚಿಕೊಳ್ಳಲಿದ್ದಾರೆ ದೀಪಿಕಾ – ರಣ್‌ವೀರ್ ಸಿಂಗ್

    ಮತ್ತೆ ಒಟ್ಟಿಗೆ ತೆರೆಹಂಚಿಕೊಳ್ಳಲಿದ್ದಾರೆ ದೀಪಿಕಾ – ರಣ್‌ವೀರ್ ಸಿಂಗ್

    ಬಾಲಿವುಡ್‌ನ ಬೆಸ್ಟ್ ಜೋಡಿಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್ ಸಿಂಗ್ ಕೂಡ ಒಬ್ಬರು. ಈಗಾಗಲೇ ಸಾಕಷ್ಟು ಸಿನಿಮಾಗಳ ಮೋಡಿ ಮಾಡಿರುವ ಈ ಜೋಡಿ, ಮತ್ತೆ ಒಟ್ಟಾಗಿ ತೆರೆಹಂಚಿಕೊಳ್ಳಲು ಸಜ್ಜಾಗಿದ್ದಾರೆ.

    `ರಾಮ್‌ಲೀಲಾ’,`ಬಾಜಿರಾವ್ ಮಸ್ತಾನಿ’, `ಪದ್ಮಾವತ್’, `83′ ಸಿನಿಮಾಗಳ ಮೂಲಕ ಸಿನಿರಸಿಕರ ಗಮನ ಸೆಳೆದಿರುವ ದೀಪಿಕಾ ಮತ್ತು ರಣ್‌ವೀರ್ ಸಿಂಗ್ ಜೋಡಿ `ಮಹಾಭಾರತ’ ಸಿನಿಮಾಗಾಗಿ ಒಟ್ಟಿಗೆ ಬಣ್ಣ ಹಚ್ತಿದ್ದಾರೆ. ರಣ್‌ವೀರ್ ಸಿಂಗ್ ಕರ್ಣನಾಗಿ ಕಾಣಿಸಿಕೊಂಡ್ರೆ, ದೀಪಿಕಾ ಪಡುಕೋಣೆ ದ್ರೌಪದಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಹಿಂದಿ ಚಿತ್ರರಂಗಕ್ಕೆ ನನ್ನ ತಡ್ಕೋಳೋಕೆ ಆಗಲ್ಲ:ಮಹೇಶ್ ಬಾಬು ಖಡಕ್ ಉತ್ತರ

    ಮಧು ಮಂಟೇನಾ ನಿರ್ಮಾಣದಲ್ಲಿ ಮೂಡಿ ಬರಲಿರುವ ಮಹಾಭಾರತ ಚಿತ್ರಕ್ಕಾಗಿ ಇದೀಗ ಸ್ಕ್ರೀಪ್ಟ್‌ ವರ್ಕ್ ನಡೆಯುತ್ತಿದ್ದು, ಸಧ್ಯದಲ್ಲೇ ಶೂಟಿಂಗ್ ಶುರುವಾಗಲಿದೆಯಂತೆ. ದೀಪಿಕಾ ದ್ರೌಪದಿಯಾದ್ರೆ, ರಣ್‌ವೀರ್ ಕರ್ಣನಾಗಿ ನಟಿಸಲಿದ್ದಾರೆ. ಬಾಲಿವುಡ್‌ನ ಘಟಾನುಘಟಿಗಳೇ ಈ ಚಿತ್ರದ ಭಾಗವಾಗಲಿದ್ದರಂತೆ. ಚಿತ್ರತಂಡದಿಂದ ಈ ಚಿತ್ರದ ಕುರಿತು ಅಧಿಕೃತ ಮಾಹಿತಿ ಬರೋದೊಂದೆ ಬಾಕಿ. ಸದ್ಯ `ಮಹಾಭಾರತ’ ಚಿತ್ರದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರೀಲ್ ಆಗಿದ್ದಾರೆ.

  • ದೀಪಿಕಾ ಸ್ಟೈಲ್‌ ಕಾಪಿ ಮಾಡಬೇಡಿ ಎಂದು ಆಲಿಯಾಗೆ ನೆಟ್ಟಿಗರಿಂದ ತರಾಟೆ

    ದೀಪಿಕಾ ಸ್ಟೈಲ್‌ ಕಾಪಿ ಮಾಡಬೇಡಿ ಎಂದು ಆಲಿಯಾಗೆ ನೆಟ್ಟಿಗರಿಂದ ತರಾಟೆ

    ಬಾಲಿವುಡ್ ಪ್ರತಿಭಾವಂತ ನಟಿ ಆಲಿಯಾ ಭಟ್ `ಗಂಗೂಬಾಯಿ ಕಾಠಿಯಾವಾಡಿ’ ಮತ್ತು `ಆರ್‌ಆರ್‌ಆರ್’ ಸೂಪರ್ ಸಕ್ಸಸ್ ನಂತರ ಆಲಿಯಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಬೇಡಿಕೆಯಲ್ಲಿರುವಾಗಲೇ ಹಸೆಮಣೆ ಏರಿರೋ ಆಲಿಯಾ ಭಟ್ ಮತ್ತೆ ಸಿನಿಮಾಗಳತ್ತ ಆಕ್ಟೀವ್ ಆಗಿದ್ದಾರೆ. ಆದರೆ ಈ ಬಾರಿ ಸಿನಿಮಾ ವಿಷ್ಯ ಬಿಟ್ಟು ದೀಪಿಕಾ ಪಡುಕೋಣೆ ವಿಚಾರಕ್ಕೆ ಆಲಿಯಾ ಟ್ರೋಲ್ ಆಗಿದ್ದಾರೆ.

    ಬಿಟೌನ್ ಬ್ಯೂಟಿ ಆಲಿಯಾ ಇತ್ತೀಚೆಗೆ ಕತಾರ್‌ಗೆ ಭೇಟಿ ನೀಡಿದ್ದರು. ಈ ವೇಳೆ ಸೋಮವಾರ ತಡರಾತ್ರಿ ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಕ್ಯಾಶುಯಲ್ ವೈಟ್ ಡ್ರೇಸ್‌ನಲ್ಲಿ ಕಾಣಿಸಿಕೊಂಡಿದ್ರು. ಈ ಫೋಟೋಗಳನ್ನ ಆಲಿಯಾ ತಮ್ಮ ಇನ್ಸ್ಟಾಗ್ರಾಂ ಖಾತೆನಲ್ಲಿ ಶೇರ್ ಮಾಡಿದ್ರು. ಈ ಪೋಸ್ಟ್ ನೋಡಿ ದೀಪಿಕಾ ಸ್ಟೈಲ್‌ ಕಾಪಿ ಮಾಡ್ತಿದ್ದೀರಾ ಅಂತಾ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

    ನಟಿ ಆಲಿಯಾ ಭಟ್ ಮುಂಬೈನಿಂದ ದೋಹಾಗೆ ಹೋಗುವಾಗ ವೈಟ್ ಡ್ರೇಸ್‌ನಲ್ಲಿ ಕಾಣಿಸಿಕೊಂಡಿದ್ರು. ದೀಪಿಕಾ ಪಡುಕೋಣೆ ಕೂಡ ಈ ತರಹದ ಲುಕ್‌ನಲ್ಲೇ ಕಾಣಿಸಿಕೊಳ್ತಾರೆ. ಹಾಗಾಗಿ ಸಹಜವಾಗಿ ನೆಟ್ಟಿಗರು ಪ್ರಶ್ನಿಸಿದ್ದಾರೆ. ಡಿಪ್ಪಿಯ ಸ್ಟೈಲ್ ಕಾಪಿ ಮಾಡ್ತಿದ್ದೀರಾ? ಆಲಿಯಾ ದೀಪಿಕಾರನ್ನು ಕಾಪಿ ಮಾಡುವುದನ್ನು ನಿಲ್ಲಿಸಬೇಕು ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡುವುದರ ಜತೆಗೆ ಟ್ರೋಲ್ ಮಾಡ್ತಿದ್ದಾರೆ. ಇದನ್ನೂ ಓದಿ: ಸೂಪರ್ ಸ್ಟಾರ್ ಕಮಲ್ ಹಾಸನ್ ಚಿತ್ರದಲ್ಲಿ ಸಾಯಿ ಪಲ್ಲವಿ

     

    View this post on Instagram

     

    A post shared by Alia Bhatt ????☀️ (@aliaabhatt)

    ದೀಪಿಕಾ ಅಭಿಮಾನಿಗಳ ಟೀಕೆ ಮತ್ತು ಪ್ರಶ್ನೆ ನೋಡಿ ಆಲಿಯಾ ಫ್ಯಾನ್ಸ್ ಇದನೆಲ್ಲಾ ಇಲ್ಲಿಗೆ ನಿಲ್ಲಿಸಿ ಎಂದು ಕೇಳಿಕೊಂಡಿದ್ದಾರೆ. ಸದ್ಯ ಆಲಿಯಾ ಮತ್ತು ದೀಪಿಕಾ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈ ಕುರಿತು ಆಲಿಯಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.