Tag: Deepika Padukone

  • ಕರ್ನಾಟಕದ ಅಳಿಯ, ನಟ ರಣವೀರ್ ಸಿಂಗ್ ಬೆತ್ತಲೆ ಪ್ರಕರಣ : ಮುಂಬೈನಲ್ಲಿ ದೂರು ದಾಖಲು

    ಕರ್ನಾಟಕದ ಅಳಿಯ, ನಟ ರಣವೀರ್ ಸಿಂಗ್ ಬೆತ್ತಲೆ ಪ್ರಕರಣ : ಮುಂಬೈನಲ್ಲಿ ದೂರು ದಾಖಲು

    ಬಾಲಿವುಡ್ ಖ್ಯಾತ ನಟ, ಕರ್ನಾಟಕದ ಅಳಿಯ ರಣವೀರ್ ಸಿಂಗ್ ಬೆತ್ತಲೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡು ಅಚ್ಚರಿಗೆ ಕಾರಣವಾಗಿದ್ದರು. ಸದಾ ಮೈ ತುಂಬಾ ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದ ರಣವೀರ್, ಇದ್ದಕ್ಕಿದ್ದಂತೆಯೇ ಪೂರ್ಣ ಬೆತ್ತಲೆಯಾಗಿ ಕಾಣಿಸಿಕೊಂಡು ಕುತೂಹಲಕ್ಕೂ ಕಾರಣವಾಗಿದ್ದರು. ಈ ಕಾರಣಕ್ಕಾಗಿ ಇದೀಗ ಅವರ ಮೇಲೆ ದೂರು ದಾಖಲಾಗಿದೆ. ಬೆತ್ತಲೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡು, ಸಮಾಜ ಸ್ವಾಸ್ತ್ಯವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಮುಂಬೈನ ಶ್ಯಾಮ್ ಮಂಗರಮ್ ಫೌಂಡೇಶನ್ ಮುಂಬೈನಲ್ಲಿ ದೂರು ದಾಖಲಿಸಲಾಗಿದ್ದು, ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಟರು ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಫೌಂಡೇಶನ್ ಆಗ್ರಹಿಸಿದೆ. ಕ್ರಮ ತಗೆದುಕೊಳ್ಳುವ ಮೂಲಕ ನಟರಿಗೆ ಸ್ಪಷ್ಟ ಸಂದೇಶವನ್ನು ನೀಡಬೇಕು ಎಂದು ಪೊಲೀಸ್ ಇಲಾಖೆಗೆ ಅದು ಮನವಿ ಮಾಡಿದೆ. ಅಲ್ಲದೇ, ರಣವೀರ್ ಅಭಿಮಾನಿಗಳಿಗೆ ಕ್ಷಮೆ ಕೇಳಬೇಕೆಂದು ಹೇಳಿದೆ. ಇದನ್ನೂ ಓದಿ:ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್

    ರಣವೀರ್ ಪೂರ್ಣ ಬೆತ್ತಲೆಯಾಗಿ ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಕೂಡ ರಣವೀರ್ ಸಿಂಗ್ ಈ ರೀತಿಯಲ್ಲಿ ಕಾಣಿಸಿಕೊಳ್ಳಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಸ್ವತಃ ಪತ್ನಿ ದೀಪಿಕಾ ಪಡುಕೋಣೆ ಕೂಡ ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • `ಪಠಾಣ್’ ಲುಕ್ ಔಟ್: ಗನ್ ಹಿಡಿದು ರಗಡ್ ಲುಕ್ಕಿನಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ

    `ಪಠಾಣ್’ ಲುಕ್ ಔಟ್: ಗನ್ ಹಿಡಿದು ರಗಡ್ ಲುಕ್ಕಿನಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ

    ಬಾಲಿವುಡ್ ಬ್ಯೂಟಿ ಕ್ವೀನ್ ದೀಪಿಕಾ ಪಡುಕೋಣೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶಾರುಖ್ ಖಾನ್‌ಗೆ ನಾಯಕಿಯಾಗಿ `ಪಠಾಣ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ದೀಪಿಕಾ ಲುಕ್ ರಿವೀಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬಾದಶಾ ಶಾರುಖ್ ಖಾನ್ ಜತೆ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ಮೋಡಿ ಮಾಡಿದ್ದಾರೆ. ಈಗ ಪಠಾಣ್ ಚಿತ್ರದಲ್ಲೂ ಶಾರುಖ್‌ಗೆ ದೀಪಿಕಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಸದ್ಯ ಈ ಚಿತ್ರದಲ್ಲಿನ ದೀಪಿಕಾ ಫಸ್ಟ್ ಲುಕ್ ರಿವೀಲ್ ಆಗಿದ್ದು, ದೀಪಿಕಾ ಎಂದೂ ಕಾಣಿಸಿಕೊಂಡಿರದ ಲುಕ್ಕಿನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:53ನೇ ವಯಸ್ಸಿನಲ್ಲಿ ಬೆತ್ತಲಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಜನ್ನಿಫರ್ ಲೊಪೇಜ್

     

    View this post on Instagram

     

    A post shared by Deepika Padukone (@deepikapadukone)

    ಸಿದ್ಧಾರ್ಥ್ ನಿರ್ದೇಶನದ, ಯಶ್ ರಾಜ್ ಫಿಲ್ಮ್ಸ್‌ ನಿರ್ಮಾಣದ `ಪಠಾಣ್’ ಚಿತ್ರದಲ್ಲಿ ಗನ್ ಹಿಡಿದು, ಫುಲ್ ಮಾಸ್ ಲುಕ್ಕಿನಲ್ಲಿ ದೀಪಿಕಾ ಮಿಂಚಿದ್ದಾರೆ. ಡಿಪ್ಪಿ ರಗಡ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮುಂದಿನ ವರ್ಷ ಜನವರಿ 25ಕ್ಕೆ ಹಿಂದಿ, ತಮಿಳು, ತೆಲುಗುನಲ್ಲಿ ತೆರೆಗೆ ಅಬ್ಬರಿಸಲಿದೆ. ರಿಲೀಸ್‌ಗೂ ಮುಂಚೆನೇ `ಪಠಾಣ್’ ಸಿನಿಮಾ ಪ್ರೇಕ್ಷಕರ ವಲಯದಲ್ಲಿ ಹಲ್‌ಚಲ್ ಸೃಷ್ಟಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ

    ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ

    ಬಿಟೌನ್‌ನಲ್ಲಿ ವಿಚಿತ್ರ ಬಟ್ಟೆ ಧರಿಸುವ ಮೂಲಕ ಸೆನ್ಸೇಷನ್‌ ಕ್ರಿಯೇಟ್‌ ಮಾಡಿರುವ ನಟ ರಣ್‌ವೀರ್ ಸಿಂಗ್, ಸದಾ ಚಿತ್ರ ವಿಚಿತ್ರ ಬಟ್ಟೆ ತೊಟ್ಟು ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ ಈ ಬಾರಿ ಬಟ್ಟೆ ಧರಿಸದೇ ಇರೋದಕ್ಕೆ ರಣ್‌ವೀರ್ ಸಿಂಗ್ ಟ್ರೋಲ್ ಆಗಿದ್ದಾರೆ. ರಣ್‌ವೀರ್ ಸಿಂಗ್ ನಗ್ನ ಅವತಾರಕ್ಕೆ ದೀಪಿಕಾ ಪಡುಕೋಣೆ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಈ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

     

    View this post on Instagram

     

    A post shared by DietSabya® (@dietsabya)

    ಹಿಂದಿ ಚಿತ್ರರಂಗದ ಸ್ಟಾರ್ ನಟ ರಣ್‌ವೀರ್ ಸಿಂಗ್ ಈ ಬಾರಿ ವಿಚಿತ್ರ ಬಟ್ಟೆ ತೊಡದೇ ಸಂಪೂರ್ಣ ನಗ್ನ ಅವತಾರದಲ್ಲಿ ಬಂದಿರೋದು ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಖಾಸಗಿ ಮ್ಯಾಗಜಿನ್‌ನ ಮುಖಪುಟಕ್ಕಾಗಿ ಸಂಪೂರ್ಣ ನಗ್ನವಾಗಿ ಕ್ಯಾಮೆರಾ ಕಣ್ಣಿಗೆ ರಣ್‌ವೀರ್ ಪೋಸ್ ಮಾಡಿದ್ದಾರೆ. ನಟನ ಬೆತ್ತಲೆ ಅವತಾರಕ್ಕೆ ದೀಪಿಕಾರನ್ನು ಪ್ರಶ್ನಿಸಿದ್ದಾರೆ. ದೀಪಿಕಾ ಪಡುಕೋಣೆ ಅವರೇ ಸ್ವಲ್ಪ ಈ ಕಡೆ ನೋಡಿ ಎಂದು ದೀಪಿಕಾಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಪತಿಗೆ ತಿಳಿ ಹೇಳಿ ಎಂದು ನಟಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಚಿತ್ರ ನಿರ್ಮಾಣಕ್ಕಿಳಿದ ನಟಿ ಮೇಘನಾ ರಾಜ್

    ಖಾಸಗಿ ಮ್ಯಾಗಜಿನ್‌ವೊಂದಕ್ಕೆ ಬೆತ್ತಲೆ ಫೋಟೋಶೂಟ್ ಅಷ್ಟೇ ನೀಡಿರುವುದಲ್ಲ. ಸಂದರ್ಶನ ಕೂಡ ನೀಡಿದ್ದಾರೆ. ನಟಿಸುವಾಗ ನನಗೆ ಬೆತ್ತಲಾಗುವುದು ನನಗೆ ತುಂಬಾ ಸುಲಭ ಆದರೆ ನೋಡುಗರು ನನ್ನ ನೋಡಿ ಮುಜುಗರ ಪಡುತ್ತಾರೆ ಅಂತಾ ಹೇಳಿಕೆ ನೀಡಿದ್ದಾರೆ. ಒಟ್ನಲ್ಲಿ ರಣ್‌ವೀರ್ ಸಿಂಗ್ ಎನೇ ಮಾಡಿದ್ದರು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುವುದು ಮಾತ್ರ ತಪ್ಪಲ್ಲ. ರಣ್‌ವೀರ್ ಸಿಂಗ್ ನಗ್ನ ಫೋಟೋಶೂಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ಸ್ ಹರಿದು ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಹಳೆಯ ಬಾಯ್‌ಫ್ರೆಂಡ್ ಸಿನಿಮಾದಲ್ಲಿ ನಟಿಸಲಿದ್ದಾರೆ ದೀಪಿಕಾ ಪಡುಕೋಣೆ

    ಮತ್ತೆ ಹಳೆಯ ಬಾಯ್‌ಫ್ರೆಂಡ್ ಸಿನಿಮಾದಲ್ಲಿ ನಟಿಸಲಿದ್ದಾರೆ ದೀಪಿಕಾ ಪಡುಕೋಣೆ

    ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಸಾಲು ಸಾಲು ಸಿನಿಮಾ ಅವಕಾಶಗಳನ್ನ ಬಾಚಿಕೊಳ್ಳುತ್ತಿದ್ದಾರೆ. ಎಲ್ಲಾ ಬಗೆಯ ಪಾತ್ರಗಳ ಮೂಲಕ ರಂಜಿಸಿರುವ ನಟಿ ದೀಪಿಕಾ ಪಡುಕೋಣೆ ಈಗ ಮತ್ತೆ ಈಗ ತಮ್ಮ ಹಳೆಯ ಬಾಯ್‌ಫ್ರೆಂಡ್ ಜೊತೆ ನಟಿಸಲು ದೀಪಿಕಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಬಿಟೌನ್‌ನ ದಿವಾ ದೀಪಿಕಾ ಪಡುಕೋಣೆಗೆ ಭರ್ಜರಿ ಡಿಮ್ಯಾಂಡ್ ಇದೆ. ಸೂಪರ್ ಸ್ಟಾರ್‌ಗಳ ಸಿನಿಮಾದಲ್ಲಿ ನಟಿಸುತ್ತಿರುವ ಬೆನ್ನಲ್ಲೇ ಈಗ ತಮ್ಮ ಹಳೆಯ ಬಾಯ್‌ಫ್ರೆಂಡ್ ಚಿತ್ರದಲ್ಲಿ ನಟಿಸಲು ಬುಲಾವ್ ಬಂದಿದೆ. ದೀಪಿಕಾ ಪಡುಕೋಣೆ ರಣ್‌ವೀರ್ ಸಿಂಗ್ ಅವರನ್ನು ಮದುವೆ ಆಗುವುದಕ್ಕೂ ಮುಂಚೆಯೇ ರಣ್‌ಬೀರ್ ಕಪೂರ್ ಜತೆ ಡೇಟಿಂಗ್ ಮಾಡುತ್ತಿದ್ದರು. ಮದುವೆ ಆಗುವ ಹಂತದವರೆಗೂ ಈ ವಿಚಾರ ತಲುಪಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈಗ ರಣ್‌ಬೀರ್ ಕಪೂರ್ ಜತೆ ನಟಿಸಲು ದೀಪಿಕಾಗೆ ಆಫರ್ ನೀಡಲಾಗಿದೆ. ಇದನ್ನೂ ಓದಿ:ಕೆ.ಎಲ್ ರಾಹುಲ್ -ಅಥಿಯಾ ಶೆಟ್ಟಿ ಮದುವೆ ಡೇಟ್ ಫೈನಲ್

    ರಣ್‌ಬೀರ್ ಕಪೂರ್ ನಟನೆಯ `ಶಂಷೇರಾ’ ಚಿತ್ರದ ನಂತರ `ಬ್ರಹ್ಮಾಸ್ತ್ರ’ ಚಿತ್ರದ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಸೆಪ್ಟೆಂಬರ್ 9ಕ್ಕೆ ತೆರೆಯ ಮೇಲೆ ಅಪ್ಪಳಿಸಲು ರೆಡಿಯಾಗಿದೆ. ಮೂರು ಭಾಗಗಳಲ್ಲಿ ತೆರೆಗೆ ಬರಲಿರುವ ಈ ಸಿನಿಮಾಗೆ `ಬ್ರಹ್ಮಾಸ್ತ್ರ’ ಪಾರ್ಟ್ 2ನಲ್ಲಿ ನಟಿಸಲು ದೀಪಿಕಾ ಪಡುಕೋಣೆ ಅವರನ್ನ ಕೇಳಲಾಗಿದೆಯಂತೆ. ಪಾರ್ವತಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಆಫರ್ ನೀಡಲಾಗಿದೆ.

    ರಣ್‌ಬೀರ್ ಮತ್ತು ದೀಪಿಕಾ ಪಡುಕೋಣೆ ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಜೋಡಿಯ ತೆರೆಯ ಮೇಲಿನ ಕೆಮಿಸ್ಟ್ರಿ ಅಪಾರ ಅಭಿಮಾನಿಗಳಿಗೆ ಇಷ್ಟವಾಗಿದೆ. ಕಡೆಯದಾಗಿ ಈ ಜೋಡಿ `ಹೇ ಜವಾನಿ ಹೇ ದಿವಾನಿ’ ಚಿತ್ರದಲ್ಲಿ ನಟಿಸಿದ್ದರು. ಮತ್ತೆ ಈ ಜೋಡಿ ತೆರೆಯ ಮೇಲೆ ಯಾವಾಗ ಕಾಣಿಸಿಕೊಳ್ಳುತ್ತಾರೆ ಅಂತಾ ಕಾಯುತ್ತಿರುವ ಬೆನ್ನಲ್ಲೇ `ಬ್ರಹ್ಮಾಸ್ತ್ರ 2’ನಲ್ಲಿ ಪಾರ್ವತಿಯಾಗಿ ನಟಿಸಲು ಬಿಗ್ ಆಫರ್ ನೀಡಿದೆ. ಈ ಆಫರ್‌ಗೆ ಡಿಂಪಲ್ ಕ್ವೀನ್ ದೀಪಿಕಾ ಗ್ರೀನ್ ಸಿಗ್ನಲ್ ಕೊಡುತ್ತಾರಾ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ವಿಭಿನ್ನವಾಗಿ ರಣ್‌ವೀರ್ ಸಿಂಗ್ ಹುಟ್ಟುಹಬ್ಬವನ್ನ ಆಚರಿಸಿದ ದೀಪಿಕಾ ಪಡುಕೋಣೆ

    ವಿಭಿನ್ನವಾಗಿ ರಣ್‌ವೀರ್ ಸಿಂಗ್ ಹುಟ್ಟುಹಬ್ಬವನ್ನ ಆಚರಿಸಿದ ದೀಪಿಕಾ ಪಡುಕೋಣೆ

    ಬಾಲಿವುಡ್ ಬ್ಯೂಟಿ ಕನ್ನಡತಿ ದೀಪಿಕಾ ಪಡುಕೋಣೆ, ಪತಿ ರಣ್‌ವೀರ್ ಸಿಂಗ್ ಹುಟ್ಟುಹಬ್ಬದ ಆಚರಣೆ ಹೇಗಿತ್ತು ಎಂಬುದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪತಿಯ ಹುಟ್ಟುಹಬ್ಬವನ್ನು ಸ್ಪೆಷಲ್‌ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.

     

    View this post on Instagram

     

    A post shared by Deepika Padukone (@deepikapadukone)

    ಬಿಟೌನ್ ಮುದ್ದಾದ ಜೋಡಿಗಳಲ್ಲಿ ಒಂದಾಗಿರುವ ದೀಪಿಕಾ ಮತ್ತು ರಣ್‌ವೀರ್ ಸಿಂಗ್ ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕೊಂಕಣಿ ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ನಂತರ ಅಲ್ಲಿಯೇ ಪತಿ ಹುಟ್ಟುಹಬ್ಬವನ್ನು ವಿಶೇಷವಾಗಿ ದೀಪಿಕಾ ಆಚರಿಸಿದ್ದಾರೆ. ವಿದೇಶದಲ್ಲಿ ಟ್ರೆಕ್ಕಿಂಗ್, ಬೈಕ್‌ ರೈಡ್ ಮಾಡುತ್ತಿರುವ ಫೋಟೋ‌ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಸುದೀಪ್‌ ನಟನೆಯ `ವಿಕ್ರಾಂತ್‌ರೋಣ’ ಚಿತ್ರದ ಮತ್ತೊಂದು ಸಾಂಗ್ ಔಟ್

     

    View this post on Instagram

     

    A post shared by Deepika Padukone (@deepikapadukone)

    ಯುಸ್‌ನ ಸುಂದರ ತಾಣಗಳಿಗೆ ಭೇಟಿ ಕೊಟ್ಟಿದಲ್ಲದೇ, ಒಂದೊಳ್ಳೆ ಕ್ಷಣವನ್ನ ದೀಪಿಕಾ ಮತ್ತು ರಣ್‌ವೀರ್ ಕಳೆದಿದ್ದಾರೆ. ಪತಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ದೀಪಿಕಾ ವಿಶ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಣ್‌ವೀರ್ ಸಿಂಗ್ ಕೊಂಕಣಿ ಕಲಿಯುವ ಇಚ್ಛೆ ಹಿಂದಿನ, ವಿಚಿತ್ರ ಕಾರಣ ತಿಳಿಸಿದ ದೀಪಿಕಾ ಪಡುಕೋಣೆ

    ರಣ್‌ವೀರ್ ಸಿಂಗ್ ಕೊಂಕಣಿ ಕಲಿಯುವ ಇಚ್ಛೆ ಹಿಂದಿನ, ವಿಚಿತ್ರ ಕಾರಣ ತಿಳಿಸಿದ ದೀಪಿಕಾ ಪಡುಕೋಣೆ

    ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೇ ಕೊಂಕಣಿ ಸಮುದಾಯದ ಕಾರ್ಯಕ್ರಮವೊಂದಲ್ಲಿ ಭಾಗಿಯಾಗಿದ್ದರು. ಈ ವೇಳೆ ರಣ್‌ವೀರ್‌ಗೆ ಕೊಂಕಣಿ ಕಲಿಯುವ ಇಚ್ಛೆ ಇದ್ದು, ಈ ಹಿಂದಿನ ಉದ್ದೇಶವನ್ನ ದೀಪಿಕಾ ಪಡುಕೋಣೆ ರಿವೀಲ್ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ನಟಿ ದೀಪಿಕಾ ಕರ್ನಾಟಕದ ಮೂಲದವರು, ಅವರ ಮಾತೃ ಭಾಷೆ ಕೊಂಕಣಿ ಹಾಗಾಗಿ ಇತ್ತೀಚೆಗಷ್ಟೇ ಕೊಂಕಣಿ ಸಮುದಾಯದ ಕ್ಯಾಲಿಫೋರ್ನಿಯಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ದೀಪಿಕಾ ಕೊಂಕಣಿ ಇಚ್ಛೆಯ ಹಿಂದಿರುವ ವಿಚಾರವನ್ನ ರಿವೀಲ್ ಮಾಡಿದ್ದಾರೆ. ಈ ಮೊದಲು ಕೊಂಕಣಿ ಕಲಿಯುವ ಇಚ್ಛೆ ವ್ಯಕ್ತಪಡಿಸಿದರ ಅಸಲಿ ವಿಚಾರ ಕೇಳಿ ದೀಪಿಕಾ ಅಚ್ಚರಿ ಪಟ್ಟಿದ್ದರಂತೆ. ಇದನ್ನೂ ಓದಿ:ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ಗೆ ಕರ್ನಾಟಕದಲ್ಲಿ ಧರ್ಮ ಸಂಕಟ

    ನಾನು ಕೊಂಕಣೆ ಅರ್ಥಮಾಡಿಕೊಳ್ಳುತ್ತೇನೆ. ಇದರ ಹಿಂದೆ ಒಂದು ಕಾರಣವಿದೆ. ನನಗೆ ಮಕ್ಕಳು ಹುಟ್ಟಿದ ನಂತರ ದೀಪಿಕಾ ಮತ್ತು ಮಕ್ಕಳು ಕೊಂಕಣಿಯಲ್ಲಿ ಮಾತನಾಡಿದರೆ ನನಗೆ ಅರ್ಥವಾಗದಿದ್ದರೆ ಎಂಬ ಭಯ ಹಾಗಾಗಿ ಸ್ಪಷ್ಟವಾಗಿ ಕೊಂಕಣಿ ಕಲಿಯಲು ಬಯಸುತ್ತೇನೆ ಎಂದು ಈ ವೇಳೆ ರಣ್‌ವೀರ್ ಮಾತನಾಡಿದ್ದಾರೆ.

    ನಂತರ ದೀಪಿಕಾ, ರಣ್‌ವೀರ್ ನನ್ನ ಬಳಿ ಬಂದು ಕೊಂಕಣಿ ಕಲಿಯಲು ಆಸೆ ಎಂದಾಗ ಖುಷಿಪಟ್ಟೆ ಆದರೆ ನಂತರ ಕಾರಣ ತಿಳಿಸಿದ್ದು ಅಚ್ಚರಿ ಮೂಡಿಸಿತ್ತು. ರಣ್‌ವೀರ್‌ಗೆ ನಿಜಕ್ಕೂ ಕೊಂಕಣಿ ಕಲಿಯಬೇಕು ಎಂಬ ಇಚ್ಛೆಯಿಲ್ಲ. ನಮ್ಮ ಮಕ್ಕಳು ಅವರ ವಿರುದ್ಧ ತಿರುಗಿ ಬಿದ್ದರೆ ಎಂಬ ಭಯವಿದೆ ಎಂದು ದೀಪಿಕಾ ತಿಳಿಸಿದ್ದಾರೆ. ಒಟ್ನಲ್ಲಿ ಇದೀಗ ಇಬ್ಬರು ಕೊಂಕಣಿ ವಿಚಾರವಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • `ವಿ ಲವ್ ಯೂ’ ಎಂದ ಅಭಿಮಾನಿಗೆ ದೀಪಿಕಾ ಖಡಕ್ ರಿಯಾಕ್ಷನ್

    `ವಿ ಲವ್ ಯೂ’ ಎಂದ ಅಭಿಮಾನಿಗೆ ದೀಪಿಕಾ ಖಡಕ್ ರಿಯಾಕ್ಷನ್

    ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಅಪಾರ ಅಭಿಮಾನಿಗಳ ಬಳಗವಿದೆ. ದೇಶದೆಲ್ಲೆಡೆ ನಟಿ ದೀಪಿಕಾಗೆ ಅದ್ಭುತ ಫ್ಯಾನ್ಸ್ ಫಾಲೋವಿಂಗ್ ಇದೆ. ಹೀಗಿರುವಾಗ ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕೊಂಕಣಿ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ದೀಪಿಕಾ ಭಾಗವಹಿಸಿದ್ದರು. ಈ ವೇಳೆ ಓರ್ವ ಅಭಿಮಾನಿಯೊಬ್ಬ ನಾವು ನಿಮ್ಮನ್ನು ಪ್ರೀತಿಸುತ್ತೇವೆ ದೀಪಿಕಾ ಎಂದು ಕೂಗಿದ್ದಾರೆ. ದೀಪಿಕಾ ಕೂಡ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಬಿಟೌನ್‌ನ ಸ್ಟಾರ್ ನಟಿಯಾಗಿ ಮಿಂಚ್ತಿರುವ ದೀಪಿಕಾ, ಮಾತೃಭಾಷೆ ಕೊಂಕಣಿ ಹಾಗಾಗಿ ಇತ್ತೀಚೆಗೆಷ್ಟೇ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕೊಂಕಣಿ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ದೀಪಿಕಾ ಪಡುಕೋಣೆ ಪತಿ ಜತೆ ಭಾಗವಹಿಸಿದ್ದರು. ಶಂಕರ್ ಮಹಾದೇವ ಅವರ ಸಂಗೀತ ಕಾರ್ಯಕ್ರಮ ಕೂಡ ನಡೆಯುತ್ತಿತ್ತು. ಈ ವೇಳೆ ಓರ್ವ ಅಭಿಮಾನಿಯೊಬ್ಬ ನಾವು ನಿಮ್ಮನ್ನು ಪ್ರೀತಿಸುತ್ತೇವೆ ದೀಪಿಕಾ ಎಂದು ಜೋರಾಗಿ ಕೂಗಿದ್ದಾರೆ. ಅದಕ್ಕೆ ನಟಿ ಕೂಡ ನಾನು ಮದುವೆಯಾಗಿರುವ ಗೃಹಿಣಿ ಎಂದು ಅಭಿಮಾನಿಗೆ ಉತ್ತರಿಸಿದ್ದಾರೆ. ನಂತರ ಪತಿಯ ಸಮಾರಂಭದಲ್ಲಿ ದೀಪಿಕಾ ಮಿಂಚಿದ್ದಾರೆ.ಇದನ್ನೂ ಓದಿ:ಮೈಸೂರಿನಲ್ಲಿ ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ನ ಆರ್ಭಟ

    ಇದೀಗ ನಟಿ ದೀಪಿಕಾ ತನ್ನ ಕೊಂಕಣಿ ಭಾಷೆ ಮತ್ತು ಸಮುದಾಯದ ಜನರಿಗೆ ಧನ್ಯವಾದ ತಿಳಿಸಿರುವ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಹಿಂದಿನ ಇತಿಹಾಸ, ಮೂಲ ಮತ್ತು ಸಂಸ್ಕೃತಿಯ ಅರಿವಿಲ್ಲದ ಜನರು ಬೇರುಗಳಿಲ್ಲದ ಮರದಂತೆ ಎಂದು ಕೊಂಕಣಿ ಸಮುದಾಯದವರಿಗೆ ಧನ್ಯವಾದ ತಿಳಿಸಿದ್ದಾರೆ. ಜತೆಗೆ ನಾನು ಕೊಂಕಣಿ ಸಮುದಾಯಕ್ಕೆ ಸೇರಿದವಳು ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಾರುಖ್ ಖಾನ್ ಗೆ ಕನ್ನಡಿಗರಿಂದ ಮಂಗಳಾರತಿ: ಕನ್ನಡದಲ್ಲೇಕಿಲ್ಲ ಪಠಾಣ್?

    ಶಾರುಖ್ ಖಾನ್ ಗೆ ಕನ್ನಡಿಗರಿಂದ ಮಂಗಳಾರತಿ: ಕನ್ನಡದಲ್ಲೇಕಿಲ್ಲ ಪಠಾಣ್?

    ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸಿನಿಮಾ ರಂಗಕ್ಕೆ ಬಂದು ಮೂವತ್ತು ವರ್ಷ ತುಂಬಿದ ಸಂದರ್ಭದಲ್ಲಿ ಅವರ ಪಠಾಣ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಯಿತು. ನಾಲ್ಕು ಭಾಷೆಗಳಲ್ಲಿ ಮೂಡಿ ಬಂದಿರುವ ಈ ಸಿನಿಮಾದ ನಾಲ್ಕು ಪೋಸ್ಟರ್ ಬಿಡುಗಡೆ ಮಾಡಲಾಯಿತು. ಆ ನಾಲ್ಕು ಭಾಷೆಗಳಲ್ಲಿ ಕನ್ನಡ ಇಲ್ಲದ್ದಕ್ಕೆ ಕನ್ನಡದ ಪ್ರೇಕ್ಷಕರು ಗರಂ ಆಗಿದ್ದಾರೆ. ಯಾಕೆ ಕನ್ನಡದಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿಲ್ಲ ಎಂದು ಕೇಳಿದ್ದಾರೆ.

    ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಕಾಂಬಿನೇಷನ್ ನ ಪಠಾಣ್ ಸಿನಿಮಾ ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಆದರೆ, ಕನ್ನಡದಲ್ಲಿ ಮಾತ್ರ ಅದು ಬಿಡುಗಡೆ ಆಗುತ್ತಿಲ್ಲ. ಇದನ್ನು ಪ್ರಶ್ನಿಸಿ, ಸೋಷಿಯಲ್ ಮೀಡಿಯಾದಲ್ಲಿ ಬೈಕಾಟ್ ಪಠಾಣ್ ಟ್ರೆಂಡ್ ಕೂಡ ಮಾಡಿದ್ದಾರೆ. ಶಾರುಖ್ ಖಾನ್ ಗೆ ಟ್ಯಾಗ್ ಮಾಡಿ, ನಾವು ಈ ಸಿನಿಮಾವನ್ನು ಕನ್ನಡದಲ್ಲಿ ಮಾತ್ರ ನೋಡುತ್ತೇವೆ ಎಂದು ಸಂದೇಶ ರವಾಣಿಸಿದ್ದಾರೆ. ಇದನ್ನೂ ಓದಿ:ಅಂಡರ್ ವರ್ಲ್ಡ್ ನಿಂದಾಗಿ ಬಾಲಿವುಡ್ ನಟಿ ಸೋನಾಲಿ ಬೇಂದ್ರೆಗೆ ಹಿನ್ನೆಡೆ

    ಹಲವು ವರ್ಷಗಳ ನಂತರ ಶಾರುಖ್ ಖಾನ್ ಸಿನಿಮಾ ರಿಲೀಸ್ ಆಗುತ್ತಿದ್ದು, ಈಗಿನಿಂದಲೇ ಚಿತ್ರವು ಕುತೂಹಲ ಮೂಡಿಸಿದೆ. ಈ ಸಿನಿಮಾಗಾಗಿ ಶಾರುಖ್ ಭಾರೀ ಕಸರತ್ತು ಕೂಡ ನಡೆಸಿದ್ದಾರೆ. ಹಲವು ಶೇಡ್ ಗಳಲ್ಲಿ ಕಾಣಿಸಿಕೊಂಡಿರುವುದರಿಂದ, ನೆಚ್ಚಿನ ನಟ ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ನೆರೆಯ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗುವುದಾದರೆ, ಕನ್ನಡದಲ್ಲಿ ಯಾಕಿಲ್ಲ ಎನ್ನುವ ಪ್ರಶ್ನೆ ಕನ್ನಡಿಗರು ಈ ಸಂದರ್ಭದಲ್ಲಿ ಇಟ್ಟಿದ್ದಾರೆ.

    Live Tv

  • 2023 ಜನವರಿ 25ಕ್ಕೆ ಶಾರುಖ್ ಖಾನ್ ನಟನೆಯ ‘ಪಠಾಣ್’  ಸಿನಿಮಾ ರಿಲೀಸ್

    2023 ಜನವರಿ 25ಕ್ಕೆ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ರಿಲೀಸ್

    ಶಾರುಖ್ ಖಾನ್ ನಟನೆಯ ಸಿನಿಮಾಗಾಗಿ ಐದು ವರ್ಷಗಳಿಂದ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಇಂದು ಗುಡ್ ನ್ಯೂಸ್ ಸಿಕ್ಕಿದೆ. ಹಲವು ವರ್ಷಗಳಿಂದ ‘ಪಠಾಣ್’ ಸಿನಿಮಾದಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಶಾರುಖ್ ಖಾನ್, ಕೊನೆಗೂ ಈ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷ ಜನವರಿ 25 ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಮಾಡುವುದಾಗಿ ಅವರು ಟ್ವಿಟ್ ಮಾಡಿದ್ದಾರೆ. ಸಖತ್ತಾಗಿರುವ ಪೋಸ್ಟರ್ ಕೂಡ ಹಾಕಿದ್ದಾರೆ.

    ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ ಸೇರಿದಂತೆ ಹೆಸರಾಂತ ತಾರಾ ಬಳಗವೇ ಇರುವ ಈ ಸಿನಿಮಾ ಈಗಾಗಲೇ ನಿರೀಕ್ಷೆ ಮೂಡಿಸಿದೆ. ಸಿನಿಮಾದ ಫಸ್ಟ್ ಲುಕ್ ಕೂಡ ವೈರಲ್ ಆಗಿದೆ. ಈ ಚಿತ್ರಕ್ಕಾಗಿ ಶಾರುಖ್ ಖಾನ್ ಲುಕ್ ಕೂಡ ಬದಲಾಯಿಸಿಕೊಂಡಿದ್ದಾರೆ. ಶಾರುಖ್ ಲುಕ್ ಬದಲಿಸಿಕೊಂಡಿದ್ದರೆ, ದೀಪಿಕಾ ಪಡುಕೋಣೆ ಬಿಕನಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಶೂಟಿಂಗ್ ಸಮಯದಲ್ಲಿ ದೀಪಿಕಾ ಬಿಕನಿಯಲ್ಲಿರುವ ಫೋಟೋ ಲೀಕ್ ಆಗಿ ವೈರಲ್ ಕೂಡ ಆಗಿತ್ತು. ಇದನ್ನೂ ಓದಿ : ಚಾಮುಂಡಿ ದರ್ಶನ ಮುಗಿಸಿ ಮೈಸೂರಿನಲ್ಲಿ ಉಪಾಧ್ಯಕ್ಷನನ್ನು ಭೇಟಿಯಾದ ಶಿವರಾಜ್ ಕುಮಾರ್

    ಶಾರುಖ್ ಖಾನ್ ಪೋಸ್ಟ್ ಮಾಡಿರುವ ಪ್ರಕಾರ ಈ ಸಿನಿಮಾ ಮೂರು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಮಾಡುವುದಾಗಿ ಅವರು ಘೋಷಣೆ ಮಾಡಿದ್ದಾರೆ. ಶಾರುಖ್ ಖಾನ್ ಸಿನಿಮಾ ರಂಗಕ್ಕೆ ಬಂದು ಮೂರು ದಶಕ ಕಂಡ ಖುಷಿಯಾಗಿ ಇವತ್ತು ಪಠಾಣ್ ಸಿನಿಮಾದ ರಿಲೀಸ್ ದಿನಾಂಕವನ್ನು ಘೋಷಣೆ ಮಾಡಿದ್ದಾರೆ ಶಾರುಖ್. ಅಂದಹಾಗೆ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಐವತ್ತನೇ ಸಿನಿಮಾ ಇದಾಗಿದೆ.

    Live Tv

  • ರಣ್‌ವೀರ್ ಅವರನ್ನು ದೀಪಿಕಾ ಪಡುಕೋಣೆ ಮದುವೆಯಾಗಿದ್ದು ಏಕೆ? ರಿವೀಲ್ ಆಯ್ತು ಸೀಕ್ರೆಟ್

    ರಣ್‌ವೀರ್ ಅವರನ್ನು ದೀಪಿಕಾ ಪಡುಕೋಣೆ ಮದುವೆಯಾಗಿದ್ದು ಏಕೆ? ರಿವೀಲ್ ಆಯ್ತು ಸೀಕ್ರೆಟ್

    ಬಾಲಿವುಡ್‌ನ ಬೆಸ್ಟ್ ಜೋಡಿಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್ ಸಿಂಗ್ ಕೂಡ ಒಬ್ಬರು. ಒಬ್ಬರಿಗೊಬ್ಬರು ತಮ್ಮ ಕೆಲಸಗಳಲ್ಲಿ ಸಾಥ್ ನೀಡುತ್ತಾ ಸಾಕಷ್ಟು ಅಭಿಮಾನಿಗಳಿಗೆ ಈ ಜೋಡಿ ಪ್ರೇರಣೆ ನೀಡಿದೆ. ಇದೀಗ ಸಂದರ್ಶನವೊಂದರಲ್ಲಿ ರಣ್‌ವೀರ್ ಸಿಂಗ್ ಅವರನ್ನು ದೀಪಿಕಾ ಮದುವೆಯಾಗಿದ್ದು ಯಾಕೆ ಎಂಬುದನ್ನ ರಿವೀಲ್ ಮಾಡಿದ್ದಾರೆ.

    ಬಿಟೌನ್‌ನ ಸಕ್ಸಸ್‌ಫುಲ್ ನಟಿ ದೀಪಿಕಾ ಪಡುಕೋಣೆ ನವೆಂಬರ್ 14, 2018ರಲ್ಲಿ ಸ್ಟಾರ್ ನಟ ರಣ್‌ವೀರ್ ಸಿಂಗ್ ಅವರನ್ನು ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಸಾಕಷ್ಟು ವರ್ಷಗಳ ಡೇಟಿಂಗ ನಂತರ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದರು. ಅಂದಿನಿಂದ ಇಂದಿನವರೆಗೂ ಖುಷಿ ಖುಷಿಯಾಗಿ ದೀಪಿಕಾ ಮತ್ತು ರಣ್‌ವೀರ್ ದಂಪತಿ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ದೀಪಿಕಾ ರಣ್‌ವೀರ್ ಸಿಂಗ್ ಅವರ ಪ್ರೀತಿಗೆ ಒಪ್ಪಿಗೆ ನೀಡಿ ಹಸೆಮಣೆ ಏರಿದ್ದು ಯಾಕೆ ಎಂಬದನ್ನು ಖಾಸಗಿ ಸಂದರ್ಶನವೊಂದರಲ್ಲಿ ದೀಪಿಕಾ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಒಲವೇ ಜೀವನ ಲೆಕ್ಕಾಚಾರ ಅಂತಿದ್ದಾರೆ ಯುವ ಜೋಡಿ

    ನಾವು ಒಬ್ಬರನೊಬ್ಬರು ಗೌರವಿಸುತ್ತೇವೆ. ಒಬ್ಬರ ಕೆಲಸಕ್ಕೆ ಮತ್ತೊಬ್ಬರು ಸಾಥ್ ನೀಡುತ್ತೇವೆ. ಅವರು ನನ್ನ ಉತ್ತಮ ಸ್ನೇಹಿತ ಹಾಗಾಗಿ ನಾವು ಹೊಸ ಜೀವನಕ್ಕೆ ಕಾಲಿಡಲು ಸಾಧ್ಯವಾಯಿತು ಎಂದು ದೀಪಿಕಾ ಮಾತನಾಡಿದ್ದಾರೆ. ರಾಮ್‌ಲೀಲಾ, ಬಾಜಿರಾವ್ ಮಸ್ತಾನಿ, ಪದ್ಮಾವತ್ ಸಿನಿಮಾಗಳಲ್ಲಿ ಮದುವೆಗೂ ಮುನ್ನವೇ ಈ ಜೋಡಿ ಒಟ್ಟಿಗೆ ನಟಿಸಿತ್ತು. ಈ ಚಿತ್ರಗಳು ಸೂಪರ್ ಡೂಪರ್ ಹಿಟ್ ಕೂಡ ಆಗಿತ್ತು. ಈ ಸಿನಿಮಾದ ಚಿತ್ರೀಕರಣ ವೇಳೆ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಎಂದು ದೀಪಿಕಾ ಹೇಳಿಕೊಂಡಿದ್ದಾರೆ.

    ಬೆಸ್ಟ್ ಸ್ನೇಹಿತನೇ, ಬೆಸ್ಟ್ ಪತಿ ಎಂದು ರಣ್‌ವೀರ್ ಸಿಂಗ್ ಕುರಿತು ದೀಪಿಕಾ ಪಡುಕೋಣೆ ಮುಕ್ತವಾಗಿ ಮಾತನಾಡಿದ್ದಾರೆ. ಒಟ್ನಲ್ಲಿ ಈ ಜೋಡಿಯ ಬಾಡಿಂಗ್ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.

    Live Tv