ಸಾಮಾನ್ಯವಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ನಾಯಕಿಯರು ಮಾತನಾಡಿದ್ದನ್ನು ಕೇಳಿದ್ದೇವೆ, ಓದಿದ್ದೇವೆ. ಬಾಲಿವುಡ್ ಸ್ಟಾರ್ ನಟನೊಬ್ಬ ತಮ್ಮಗೂ ಅಂಥದ್ದೊಂದು ಕೆಟ್ಟ ಅನುಭವ ಆಗಿತ್ತು ಎಂದು ಹೇಳುವ ಮೂಲಕ ಲೈಂಗಿಕ ಶೋಷಣೆ ಎಲ್ಲರ ಮೇಲೂ ಆಗುತ್ತಿದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಪತಿ, ನಟ ರಣ್ವೀರ್ ಸಿಂಗ್ ತಮಗೂ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಎಂದು ಹೇಳಿಕೊಳ್ಳುವ ಮೂಲಕ ಬಾಲಿವುಡ್ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.

ಸದ್ಯ ರಣ್ವೀರ್ ಸಿಂಗ್ ಮೊರಾಕೊದಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷಿನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರೋತ್ಸವದಲ್ಲಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಗುತ್ತಿದೆ. ಈ ಸಮಾರಂಭದಲ್ಲಿ ಮಾತನಾಡಿದ ರಣ್ವೀರ್, ತಾವು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಸಂದರ್ಭದಲ್ಲಿ ದುಷ್ಟರು, ದುರುಳರು ತಮಗೂ ಲೈಂಗಿಕ ಶೋಷಣೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದರೆ, ಅವರು ಯಾರು ಎನ್ನುವುದನ್ನು ಅವರು ಹೇಳಲಿಲ್ಲ. ಇದನ್ನೂ ಓದಿ:ಡಿವೋರ್ಸ್ ವದಂತಿಯ ನಡುವೆ ಸಾನಿಯಾ ಮಿರ್ಜಾ ಬರ್ತ್‌ಡೇಗೆ ಶೋಯೆಬ್ ಮಲಿಕ್ ವಿಶ್

‘ಅವರು ಚಿತ್ರವೊಂದರ ನಿರ್ಮಾಪಕರು. ನನಗೆ ತುಂಬಾ ಕೆಟ್ಟದ್ದಾಗಿಯೇ ನಡೆಸಿಕೊಂಡರು. ಕೆಟ್ಟ ಸ್ಥಳಕ್ಕೆ ಕರೆದುಕೊಂಡು ಹೋಗಿ, ಏನೆಲ್ಲ ಪ್ರಶ್ನೆಗಳನ್ನು ಕೇಳಿದರು. ಅವರು ಪ್ರಶ್ನೆಗಳಿಗೆ ನನ್ನ ಉತ್ತರ ಒಂದೇ ಆಗಿತ್ತು. ನಾನು ಹಾರ್ಡ್ ವರ್ಕ್ ಮೂಲಕ ಗೆಲ್ಲುತ್ತೇನೆ ಎಂದು ಹೇಳಿದ್ದೆ. ಆದರೆ, ಅವರು ನನ್ನ ಡಾರ್ಲಿಂಗ್, ಬಿ ಸೆಕ್ಸಿ ಎಂದೆಲ್ಲ ಕರೆದರು. ಅವರು ಯಾಕೆ ಹಾಗೆ ಕರೆಯುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗಲು ತುಂಬಾ ಸಮಯ ಬೇಕಾಗಲಿಲ್ಲ’ ಎಂದು ರಣ್ವೀರ್ ಹೇಳಿದರು.

ಸಿನಿಮಾ ರಂಗಕ್ಕೆ ಎಂಟ್ರಿ ಆದ ನಂತರ ಮೂರುವರೆ ವರ್ಷಗಳ ಕಾಲ ನನಗೆ ಈ ರೀತಿಯ ಅನುಭವಗಳು ಆಗಿವೆ. ಅವುಗಳನ್ನು ನಾನು ಸಮರ್ಥವಾಗಿಯೇ ಎದುರಿಸಿದ್ದೇನೆ. ಹಾಗಂತ ಎಲ್ಲರೂ ಹಾಗೆಯೇ ಮಾಡಲಿಲ್ಲ. ತುಂಬಾ ಗೌರವದಿಂದ ನಡೆಸಿಕೊಂಡವರೂ ಇದ್ದಾರೆ. ನಿರ್ದೇಶಕರಿಗಿಂತ ನಿರ್ಮಾಪಕರಿಂದ ನಾನು ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಿದ್ದೇನೆ. ಮೂರು ವರ್ಷಗಳ ಯಮಯಾತನೆಯ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ಮೈ ಉರಿಯುತ್ತದೆ ಎಂದಿದ್ದಾರೆ ರಣ್ವೀರ್ ಸಿಂಗ್.





















ಕಮಲ್ ಮತ್ತು ಶಂಕರ್ ಕಾಂಬಿನೇಷನ್‌ನ `ಇಂಡಿಯನ್’ ಚಿತ್ರ 1996ರಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಬಳಿಕ ಇದರ ಸೀಕ್ವೇಲ್ 2019ರಿಂದ ಚಿತ್ರೀಕರಣ ಶುರುವಾಯಿತು. 2020ರಲ್ಲಿ ನಡೆದ ಅವಘಡದಲ್ಲಿ ಮೂರು ಕಾರ್ಮಿಕರು ಜೀವ ಕಳೆದುಕಂಡಿದ್ದರು. ಬಳಿಕ ಕೊರೊನಾ ಕಾಟದಿಂದ ಚಿತ್ರೀಕರಣ ಸ್ಥಗಿತಗೊಂಡಿತ್ತು. ಈಗ 60% ಶೂಟಿಂಗ್ ಆಗಿದ್ದ ಈ ಚಿತ್ರಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಇದನ್ನೂ ಓದಿ:
`ವಿಕ್ರಮ್’ ಚಿತ್ರದ ಸಕ್ಸಸ್ ನಂತರ ಸ್ಥಗಿತಗೊಂಡಿದ್ದ `ಇಂಡಿಯನ್ 2′ ಚಿತ್ರವನ್ನ ಕಮಲ್ ಹಾಸನ್ ಮತ್ತೆ ಕೈಗೆತ್ತಿಕೊಂಡಿದ್ದಾರೆ. ಕಮಲ್‌ಗೆ ನಿರ್ದೇಶಕ ಶಂಕರ್ ಸಾಥ್ ನೀಡಿದ್ದಾರೆ. ಆದರೆ ಈಗ ಪ್ಯಾನ್ ಇಂಡಿಯಾ ಚಿತ್ರವಾಗಿ ಬರುತ್ತಿದೆ. ಈ ಚಿತ್ರದ ನಾಯಕಿಯಾಗಿದ್ದ ಕಾಜಲ್ ಮದುವೆಯಾಗಿ, ಮಗನ ಆರೈಕೆಯಲ್ಲಿರುವುದರಿಂದ ಮತ್ತೆ ಚಿತ್ರೀಕರಣದಿಂದ ಮುಂದುವರೆಯುವುದು ಕಷ್ಟವಾಗುತ್ತಿದೆ. ಹಾಗಾಗಿ ಚಿತ್ರತಂಡ ಕಾಜಲ್‌ನ್ನ ಚಿತ್ರದಿಂದ ಕೈ ಬಿಡಲಾಗಿದೆ.
ಇನ್ನು ಕಮಲ್ ಹಾಸನ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್‌ನ `ಇಂಡಿಯನ್ 2’ಗೆ ಫೈನಲ್ ಮಾಡಲು ಯೋಚಿಸಿದೆಯಂತೆ. ಸದ್ಯದಲ್ಲೇ ಚಿತ್ರದ ಕುರಿತು ಅಧಿಕೃತ ಮಾಹಿತಿ ಹೊರಬರಲಿದೆ.