Tag: Deepika Padukone

  • Special- ‘ಆಸ್ಕರ್’ ಪ್ರಶಸ್ತಿ ಮೌಲ್ಯ ಕೇವಲ ರೂ.82: ಅಚ್ಚರಿಯಾದರೂ ಸತ್ಯ

    Special- ‘ಆಸ್ಕರ್’ ಪ್ರಶಸ್ತಿ ಮೌಲ್ಯ ಕೇವಲ ರೂ.82: ಅಚ್ಚರಿಯಾದರೂ ಸತ್ಯ

    ಗತ್ತಿನಾದ್ಯಂತ ಸದ್ಯ ಆಸ್ಕರ್ (Oscar) ಪ್ರಶಸ್ತಿಯ ಬಗ್ಗೆಯೇ ಮಾತನಾಡಲಾಗುತ್ತಿದೆ. ಭಾರತಿಯ ಕಾಲಮಾನದ ಪ್ರಕಾರ ಮಾರ್ಚ್ 13ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕಾಗಿ ಒಂದು ತಿಂಗಳಿಂದ ನಿರಂತರವಾಗಿ ಅಕಾಡೆಮಿಯು ಹಗಲಿರುಳು ಕೆಲಸ ಮಾಡುತ್ತಿದೆ. ಜಗತ್ತಿನ ಪ್ರಸಿದ್ಧ ಕಲಾವಿದರು ಮತ್ತು ತಂತ್ರಜ್ಞರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಪ್ರಶಸ್ತಿ ಕುರಿತಾಗಿ ಹಲವು ವಿಶೇಷ ಸಂಗತಿಗಳನ್ನು ಹುಡುಕಿ, ಆ ಕುರಿತು ಪ್ರಚಾರ ಮಾಡಲಾಗುತ್ತಿದೆ.

    ಆಸ್ಕರ್ ಪ್ರಶಸ್ತಿ ಮೌಲ್ಯದ (Price) ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಈ ಪ್ರಶಸ್ತಿಯನ್ನು ಪ್ರಶಸ್ತಿ ವಿಜೇತರು ಯಾರಾದರೂ ಮಾರಲು ಬಯಸಿದರೆ, ಅದು ಮೌಲ್ಯ ಕೇವಲ 82 ರೂಪಾಯಿಗಳು ಮಾತ್ರ. ನಿಜ. ಆಸ್ಕರ್ ಅಕಾಡೆಮಿಯೇ ಈ ಮೌಲ್ಯವನ್ನು ನಿರ್ಧಾರ ಮಾಡಿದೆ. ಅಲ್ಲದೇ, ಈ ಪ್ರಶಸ್ತಿಯನ್ನು ಬೇರೆಲ್ಲೂ ಮಾರುವಂತಿಲ್ಲ. ಮಾರುವುದಾದರೆ ಅದನ್ನು ಅಕಾಡೆಮಿ ವಾಪಸ್ಸು ಮಾರಬೇಕು. ಈ ಕಾರಣದಿಂದಾಗಿಯೇ ಅತೀ ಕಡಿಮೆ ಬೆಲೆಯನ್ನು ನಿಗದಿ ಮಾಡಿದೆ. ಈ ಪ್ರಶಸ್ತಿಯನ್ನೂ ಯಾರು ಮಾರಬಾರದು ಎನ್ನುವ ಉದ್ದೇಶವೂ ಇದರ ಹಿಂದಿದೆ. ಪ್ರಶಸ್ತಿ ನೀಡುವಾಗಲೇ ವಿಜೇತರು ಒಪ್ಪಂದಕ್ಕೆ ಸಹಿ ಕೂಡ ಮಾಡಬೇಕಾಗುತ್ತದೆ. ಇದನ್ನೂ ಓದಿ: ಧ್ವನಿಯಿಂದ ಎದುರಿಸಿದ ಟೀಕೆ ಬಗ್ಗೆ ಬಾಯ್ಬಿಟ್ಟ ರಾಣಿ ಮುಖರ್ಜಿ

    ಮಾರಾಟದ ಬೆಲೆ 82 ರೂಪಾಯಿಗಳಾದರೆ, ಅದನ್ನು ತಯಾರಿಸುವ ವೆಚ್ಚ ಬರೋಬ್ಬರು 32,813 ರೂಪಾಯಿಗಳಾಗಿರುತ್ತದೆ. 13.5 ಇಂಚು ಎತ್ತರದ ಬಂಗಾರದ ಬಣ್ಣದ ಮೂರ್ತಿ ಇದಾಗಿದ್ದು, ತಲೆ ಮೇಲೆ ಕೂದಲು ಇಲ್ಲದ ವ್ಯಕ್ತಿಯೊಬ್ಬ ಕತ್ತಿಯೊಂದನ್ನು ಹಿಡಿದುಕೊಂಡು ನಿಂತಿರುವ ಮೂರ್ತಿ ಅದಾಗಿದೆ. ಪ್ರಶಸ್ತಿ ವಿಜೇತರಿಗೆ ಯಾವುದೇ ಗೌರವ ಮೊತ್ತವನ್ನು ನೀಡದೇ ಕೇವಲ ಈ ಮೂರ್ತಿಯನ್ನು ಮಾತ್ರ ನೀಡಲಾಗುತ್ತದೆ.

    ಆಸ್ಕರ್ 2023 ಪ್ರಶಸ್ತಿ ಪ್ರದಾನ ಸಮಾರಂಭವು ಅಮೆರಿಕಾದ (America) ಲಾಸ್ ಏಂಜಲ್ಸ್‍  ಡಾಲ್ಬಿ ಥಿಯೇಟರ್ ನಲ್ಲಿ ನಡೆಯಲಿದ್ದು, ಭಾರತದಿಂದ ಒಂದು ಸಿನಿಮಾ ಮತ್ತು ಎರಡು ಡಾಕ್ಯುಮೆಂಟರಿಗಳು ಪ್ರಶಸ್ತಿಯ ಕಣದಲ್ಲಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಈಗಾಲೇ ಆರ್.ಆರ್.ಆರ್ ಸಿನಿಮಾ ತಂಡ ಕಾರ್ಯಕ್ರಮ ನೀಡುವುದಕ್ಕಾಗಿ ಅಮೆರಿಕಾಗೆ ತೆರಳಿದೆ.

  • ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

    ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

    ರಿಯಲ್ ಸ್ಟಾರ್ ಉಪೇಂದ್ರ (Upendra) ಸದ್ಯ `ಕಬ್ಜ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನಲ್ಲಿ ಚಿತ್ರತಂಡ ಬೀಡು ಬಿಟ್ಟಿದ್ದಾರೆ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ದೀಪಿಕಾ ಪಡುಕೋಣೆ (Deepika Padukone) ಬಗ್ಗೆ ನಟ ಉಪ್ಪಿ ಮೆಚ್ಚುಗೆಯ ಮಾತುಗಳನ್ನ ಹೇಳಿದ್ದಾರೆ.

    ಆರ್.ಚಂದ್ರು (R.Chandru) ನಿರ್ದೇಶನದ `ಕಬ್ಜ’ ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಕಿಚ್ಚ ಮತ್ತು ಉಪ್ಪಿ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಉಪ್ಪಿ, ದೀಪಿಕಾ ಜೊತೆ ನಟಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.

    ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ನಾನು ʻಲಕ್ಕಿʼ ಎಂದು ನಟ ಉಪೇಂದ್ರ ಅವರು `ಕಬ್ಜ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ದೀಪಿಕಾ ಬಗ್ಗೆ ಉಪ್ಪಿ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ. ಇದನ್ನೂ ಓದಿ: ರೆಟ್ರೋ ಲುಕ್‌ನಲ್ಲಿ ಕಂಗೊಳಿಸಿದ ರಕ್ಷಿತ್ ಶೆಟ್ಟಿ ನಾಯಕಿ

    ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರು. ಅವರು ಕನ್ನಡದ `ಐಶ್ವರ್ಯಾ’ ಚಿತ್ರದ ಮೂಲಕ ಉಪೇಂದ್ರ ಅವರಿಗೆ ನಾಯಕಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಬಾಲಿವುಡ್‌ನಲ್ಲಿ ಸಕ್ಸಸ್ ಕಂಡರು. ಇತ್ತೀಚಿನ `ಪಠಾಣ್’ ಚಿತ್ರದ ಮೂಲಕ ದೀಪಿಕಾ ಗಮನ ಸೆಳೆದಿದ್ದಾರೆ.

  • ಅಮಿತಾಭ್ ಬಚ್ಚನ್ ಗೆ ಗಂಭೀರ ಗಾಯ: ಆರೋಗ್ಯದ ಮಾಹಿತಿ ಹಂಚಿಕೊಂಡ ಬಿಗ್ ಬಿ

    ಅಮಿತಾಭ್ ಬಚ್ಚನ್ ಗೆ ಗಂಭೀರ ಗಾಯ: ಆರೋಗ್ಯದ ಮಾಹಿತಿ ಹಂಚಿಕೊಂಡ ಬಿಗ್ ಬಿ

    ಹೈದರಾಬಾದ್ ನಲ್ಲಿ ನಡೆದ ಪ್ರಾಜೆಕ್ಟ್ ಕೆ (Project K) ಸಿನಿಮಾದ ಶೂಟಿಂಗ್ ವೇಳೆ ಗಂಭೀರ ಗಾಯಗೊಂಡಿದ್ದ ಬಾಲಿವುಡ್ ಹೆಸರಾಂತ ನಟ ಅಮಿತಾಭ್ ಬಚ್ಚನ್ (Amitabh Bachchan), ಇಂದು ತಮ್ಮ ಆರೋಗ್ಯದ ಕುರಿತಂತೆ ಅಪ್ ಡೇಟ್ ನೀಡಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಅನಾರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಕುಟುಂಬಕ್ಕೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ವೈದ್ಯರ ಸಲಹೆಗಳನ್ನು ಪಾಲಿಸುತ್ತಿದ್ದೇನೆ.ಇದು ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ. ನನ್ನ ಎಲ್ಲ ಕೆಲಸಗಳು ಸ್ಥಗಿತಗೊಂಡಿವೆ. ಪರಿಸ್ಥಿತಿ ಸುಧಾರಿಸಿ, ವೈದ್ಯರು ಭರವಸೆ ನೀಡಿದ ಬಳಿಕ ಮತ್ತೆ ಕೆಲಸ ಪ್ರಾರಂಭಿಸುತ್ತೇನೆ. ಎಲ್ಲರಿಗೂ ನನ್ನ ಕೃತಜ್ಞತೆಗಳು’ ಎಂದು ಬರೆದುಕೊಂಡಿದ್ದಾರೆ.

    ನಿನ್ನೆಯಷ್ಟೇ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ಅವರು,  ‘ಗಾಯವು ತೀವ್ರ ನೋವಿನಿಂದ ಕೂಡಿದ್ದು ನಡೆದಾಡಲು ಕಷ್ಟವಾಗಿದೆ ಮತ್ತು ಉಸಿರಾಟದ ಸಮಸ್ಯೆಯೂ ಇದೆ. ಅದಾಗ್ಯೂ ಯಾವುದೇ ತೊಂದರೆಗಳಿಲ್ಲ, ಚೇತರಿಕೆ ಕಾಣಲು ಹಲವು ವಾರಗಳ ಸಮಯ ಬೇಕಾಗಬಹುದು ಹೀಗಾಗಿ ಯಾವ ಹಿತೈಷಿಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ, ಮನೆಯ ಬಳಿ ಯಾರು ಬರಬೇಡಿ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು’ ಎಂದು ಪೋಸ್ಟ್ ಮಾಡಿದ್ದರು.

    ಇನ್ನು ಈ ಬಗ್ಗೆ ವೈಜಯಂತಿ ಮೂವೀಸ್ ತಂಡ ಟ್ವೀಟ್ ಮಾಡಿದ್ದು, 5 ದಶಕಗಳಿಗೂ ಹೆಚ್ಚು ಕಾಲ ಮನರಂಜನೆ ನೀಡಿದ ಶಕ್ತಿಕೇಂದ್ರ ನೀವು, ಈ ಬಾರಿ ಬಿಡುಗಡೆ ಮಾಡಿದ ಹೊಸ ಅವತಾರವನ್ನು ಜಗತ್ತಿಗೆ ತೋರಿಸಲು ಕಾಯಲು ಸಾಧ್ಯವಿಲ್ಲ. ಶಕ್ತಿ ಯಾವಾಗಲೂ ನಿಮ್ಮೊಂದಿಗೆ ಇರಲಿ ಮತ್ತು ನೀವು ನಮ್ಮ ಹಿಂದಿರುವ ಶಕ್ತಿ ಎಂದು ಹೇಳಿದೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಪ್ರಪೋಸ್ ಮಾಡಿದ ಯುವ ಕ್ರಿಕೆಟಿಗ

    ಪ್ರಾಜೆಕ್ಟ್ ಕೆ ಹಿಂದೆ ಮತ್ತು ತೆಲುಗಿನಲ್ಲಿ ಸಿದ್ದವಾಗುತ್ತಿರುವ ದ್ವಿಭಾಷಾ ಸಿನಿಮಾವಾಗಿದ್ದು ಅಶ್ವಿನ್ ಇದನ್ನು ನಿರ್ದೇಶಿಸುತ್ತಿದ್ದಾರೆ. ಪ್ರಭಾಸ್ (Prabhas) ಮತ್ತು ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪ್ರಾತ್ರದಲ್ಲಿದ್ದು, ಜನವರಿ 12, 2024ಕ್ಕೆ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

  • ಶೂಟಿಂಗ್ ವೇಳೆ ಅವಘಡ: ಅಮಿತಾಭ್ ಬಚ್ಚನ್ ಗೆ ಗಂಭೀರ ಗಾಯ

    ಶೂಟಿಂಗ್ ವೇಳೆ ಅವಘಡ: ಅಮಿತಾಭ್ ಬಚ್ಚನ್ ಗೆ ಗಂಭೀರ ಗಾಯ

    ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಗಾಯಗೊಂಡಿದ್ದಾರೆ. ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಅವರು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಬಳಿಕ ಅವರಿಗೆ ಬೆಡ್ ರೆಸ್ಟ್‌ಗೆ ವೈದ್ಯರು ಸಲಹೆ ನೀಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಖುದ್ದು ಮಾಹಿತಿ ನೀಡಿರುವ ಅಮಿತಾಭ್ ಬಚ್ಚನ್, ಚಿತ್ರೀಕರಣದ ವೇಳೆ ಪಕ್ಕೆಲುಬಿನ ಕಾರ್ಟಿಲೇಜ್ ಮುರಿದಿದೆ, ಹೈದರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮುಂಬೈನಲ್ಲಿರುವ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಗಂಗವ್ವಗೆ ಮನೆ ಕಟ್ಟಲು ಸಹಾಯ ಮಾಡಿದ ನಟ ನಾಗಾರ್ಜುನ

    ಗಾಯವು ತೀವ್ರ ನೋವಿನಿಂದ ಕೂಡಿದ್ದು ನಡೆದಾಡಲು ಕಷ್ಟವಾಗಿದೆ ಮತ್ತು ಉಸಿರಾಟದ ಸಮಸ್ಯೆಯೂ ಇದೆ. ಅದಾಗ್ಯೂ ಯಾವುದೇ ತೊಂದರೆಗಳಿಲ್ಲ, ಚೇತರಿಕೆ ಕಾಣಲು ಹಲವು ವಾರಗಳ ಸಮಯ ಬೇಕಾಗಬಹುದು ಹೀಗಾಗಿ ಯಾವ ಹಿತೈಷಿಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ, ಮನೆಯ ಬಳಿ ಯಾರು ಬರಬೇಡಿ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಅವರು ತಮ್ಮ ಪೊಸ್ಟ್ ನಲ್ಲಿ ತಿಳಿಸಿದ್ದಾರೆ.

    ಇನ್ನು ಈ ಬಗ್ಗೆ ವೈಜಯಂತಿ ಮೂವೀಸ್ ತಂಡ ಟ್ವೀಟ್ ಮಾಡಿದ್ದು, 5 ದಶಕಗಳಿಗೂ ಹೆಚ್ಚು ಕಾಲ ಮನರಂಜನೆ ನೀಡಿದ ಶಕ್ತಿಕೇಂದ್ರ ನೀವು, ಈ ಬಾರಿ ಬಿಡುಗಡೆ ಮಾಡಿದ ಹೊಸ ಅವತಾರವನ್ನು ಜಗತ್ತಿಗೆ ತೋರಿಸಲು ಕಾಯಲು ಸಾಧ್ಯವಿಲ್ಲ. ಶಕ್ತಿ ಯಾವಾಗಲೂ ನಿಮ್ಮೊಂದಿಗೆ ಇರಲಿ ಮತ್ತು ನೀವು ನಮ್ಮ ಹಿಂದಿರುವ ಶಕ್ತಿ ಎಂದು ಹೇಳಿದೆ.

    amitabh bachchan full hd wallpaper

    ಪ್ರಾಜೆಕ್ಟ್ ಕೆ (Project K)  ಹಿಂದೆ ಮತ್ತು ತೆಲುಗಿನಲ್ಲಿ ಸಿದ್ದವಾಗುತ್ತಿರುವ ದ್ವಿಭಾಷಾ ಸಿನಿಮಾವಾಗಿದ್ದು ಅಶ್ವಿನ್ ಇದನ್ನು ನಿರ್ದೇಶಿಸುತ್ತಿದ್ದಾರೆ. ಪ್ರಭಾಸ್  (Prabhas) ಮತ್ತು ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪ್ರಾತ್ರದಲ್ಲಿದ್ದು, ಜನವರಿ 12, 2024ಕ್ಕೆ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

  • ಆಸ್ಕರ್ ವೇದಿಕೆಯಲ್ಲಿ ದೀಪಿಕಾ : ‘ಅಚ್ಚೇ ದಿನ್’ ಎಂದ ವಿವೇಕ್ ಅಗ್ನಿಹೋತ್ರಿ

    ಆಸ್ಕರ್ ವೇದಿಕೆಯಲ್ಲಿ ದೀಪಿಕಾ : ‘ಅಚ್ಚೇ ದಿನ್’ ಎಂದ ವಿವೇಕ್ ಅಗ್ನಿಹೋತ್ರಿ

    ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಈ ಬಾರಿಯ ಆಸ್ಕರ್ (Oscar) ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಡಲಿದ್ದಾರೆ. ಈ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಒಟ್ಟು 16 ಜನರನ್ನು ನಿರೂಪಕರನ್ನಾಗಿ ಆಯ್ಕೆ ಮಾಡಿದ್ದು, ಅದರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು ಎನ್ನುವುದು ವಿಶೇಷ. ಈ ಆಯ್ಕೆಯನ್ನು ದಿ ಕಾಶ್ಮೀರ್ ಫೈಲ್ಸ್  (The Kashmir Files) ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಸ್ವಾಗತಿಸಿದ್ದಾರೆ. ಭಾರತವು ಎಲ್ಲ ಕ್ಷೇತ್ರದಲ್ಲೂ ಮುನ್ನುಗ್ಗುತ್ತಿದೆ. ಇದೇ ಅಚ್ಚೇ ದಿನ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಪ್ರತಿ ವರ್ಷವೂ ಒಂದಿಲ್ಲೊಂದು ಮಹತ್ವದ ಜವಾಬ್ದಾರಿಯನ್ನು ದೀಪಿಕಾ ನಿರ್ವಹಿಸುತ್ತಿದ್ದಾರೆ. 2022ನೇ ಸಾಲಿನ ಕೇನ್ಸ್ ನಲ್ಲಿ ತೀರ್ಪುಗಾರರಾಗಿ ದೀಪಿಕಾ, ಆಸ್ಕರ್ ನಲ್ಲಿ ನಿರೂಪಕಿಯಾಗಿ ಮಿಂಚಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ದೀಪಿಕಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆ ದಿನಕ್ಕಾಗಿ ಕಾಯುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ನಟ ಗೋಪಿಚಂದ್‌ಗೆ ಸ್ಯಾಂಡಲ್‌ವುಡ್‌ ನಿರ್ದೇಶಕ ಎ.ಹರ್ಷ ಆ್ಯಕ್ಷನ್ ಕಟ್

    ಇದೇ ಮಾರ್ಚ್ 12ರಂದು (ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್ 13) ಲಾಸ್ ಏಂಜಲೀಸ್ ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಹತ್ತು ಜನ ನಿರೂಪಕರು ಕೆಲಸ ಮಾಡಲಿದ್ದಾರೆ. ಅದರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. ದೀಪಿಕಾ ಜೊತೆ ಮೆಲಿಸ್ಸಾ ಮೆಕಾರ್ಥಿ, ಜಾನೆಲ್ಲೆ ಮೋನೆ, ಜೆನ್ನಿಫರ್ ಕೊನ್ನೆಲ್ಲಿ, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಜೋ ಸಲ್ಡಾನಾ ಸೇರಿದಂತೆ ಇತರರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

    ಈ ಬಾರಿ ಆಸ್ಕರ್ ವೇದಿಕೆಯ ಮೇಲೆ ನಿರಂತರವಾಗಿ ದೀಪಿಕಾ ಕಾಣಿಸಿಕೊಂಡರೆ, ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಲೈವ್ ಆಗಿ ಡ್ಯಾನ್ಸ್ ಮಾಡಲಿದ್ದಾರೆ. ಅಲ್ಲದೇ, ಅದೇ ವೇದಿಕೆಯಲ್ಲೇ ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಾ ಭೈರವ ಹಾಡಲಿದ್ದಾರೆ. ಭಾರತದಿಂದ ಆಲ್ ದಟ್ ಬ್ರೀಥ್ಸ್, ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರಗಳು ನಾಮ ನಿರ್ದೇಶನಗೊಂಡಿವೆ. ಆರ್.ಆರ್.ಆರ್ ಸಿನಿಮಾದ ನಾಟು ನಾಟು ಕೂಡ ಪ್ರಶಸ್ತಿಯ ರೇಸ್ ನಲ್ಲಿದೆ.

  • ನಟ ಶಾರುಖ್ ಮನೆಗೆ ನುಗ್ಗಿದ ಫ್ಯಾನ್ಸ್ ವಿರುದ್ಧ ದಾಖಾಲಾಯ್ತು ಕೇಸ್

    ನಟ ಶಾರುಖ್ ಮನೆಗೆ ನುಗ್ಗಿದ ಫ್ಯಾನ್ಸ್ ವಿರುದ್ಧ ದಾಖಾಲಾಯ್ತು ಕೇಸ್

    `ಠಾಣ್’ ಸೂಪರ್ ಸ್ಟಾರ್ ಶಾರುಖ್ ಖಾನ್‌ಗೆ (Sharukh Khan) ಅಪಾರ ಅಭಿಮಾನಿಗಳಿದ್ದಾರೆ. ಅವರ ಮನ್ನತ್ ನಿವಾಸದ ಮುಂದೆ ಸದಾ ಜಾತ್ರೆಯಂತೆ ಅಭಿಮಾನಿಗಳು ಒಟ್ಟಾಗಿರುತ್ತಾರೆ. ಶಾರುಖ್‌ನ ಮೀಟ್ ಮಾಡಲೆಂದೇ ಮನೆಯ ಬಳಿ ಫ್ಯಾನ್ಸ್ ಕಾಯುತ್ತಿರುತ್ತಾರೆ. ಇದೀಗ ನೆಚ್ಚಿನ ನಟ ಶಾರುಖ್‌ನ ನೋಡಲು ಮನೆಗೆ ನುಗ್ಗಿದ ಅಭಿಮಾನಿ ವಿರುದ್ಧ ಪ್ರಕರಣ ದಾಖಲಾಗಿದೆ.

    ನಟ-ನಟಿಯರನ್ನ ಮೀಟ್ ಮಾಡೋಕೆ ಫ್ಯಾನ್ಸ್ (Fans)ನಾನಾ ತರಹದ ಕಸರತ್ತು ನಡೆಸುತ್ತಾರೆ. ಇದಕ್ಕಾಗಿ ಅವರು ಯಾವ ಹಂತಕ್ಕೆ ಹೋಗೋಕೂ ರೆಡಿ ಇರುತ್ತಾರೆ. ಈಗಲೂ ಹಾಗೆಯೇ ಆಗಿದೆ. ಶಾರುಖ್ ಖಾನ್ ಅವರನ್ನು ಭೇಟಿ ಮಾಡೋಕೆ ಗುಜರಾತ್‌ನಿಂದ (Gujrat) ಇಬ್ಬರು ಬಂದಿದ್ದಾರೆ. ಮನ್ನತ್ ನಿವಾಸದ ಹೊರಗೆ ಅವರು ಪಠಾಣ್ ಹೋರೋಗಾಗಿ ಕಾದು ನಿಂತಿದ್ದರು. ಆದರೆ, ಶಾರುಖ್ ಬರುವ ಸೂಚನೆ ಸಿಕ್ಕಿಲ್ಲ. ಹೀಗಾಗಿ, ಅವರು ಮನೆಯ ಗೋಡೆ ಏರಿ ನಿವಾಸದ ಆವರಣಕ್ಕೆ ಜಿಗಿದಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೇ ʻಟೋಬಿʼ ಚಿತ್ರದ ಶೂಟಿಂಗ್‌ ಮುಗಿಸಿದ ರಾಜ್‌ ಬಿ ಶೆಟ್ಟಿ

    ಇದನ್ನು ನೋಡಿದ ಭದ್ರತಾ ಸಿಬ್ಬಂದಿ, ಅವರನ್ನು ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಇಬ್ಬರ ವಿರುದ್ಧ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಓರ್ವ 20 ವರ್ಷದವನು, ಮತ್ತೋರ್ವ 22 ವರ್ಷದವನು. `ನಾವು ಶಾರುಖ್ ಖಾನ್ ಅಭಿಮಾನಿಗಳು. ಅವರನ್ನು ಭೇಟಿ ಆಗೋಕೆ ಈ ರೀತಿ ಮಾಡಿದೆವು’ ಎಂದು ಅವರು ಹೇಳಿಕೊಂಡಿದ್ದಾರೆ. ಇದರ ಹಿಂದೆ ಬೇರೆ ಯಾವುದಾದರೂ ಉದ್ದೇಶ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

    ಶಾರುಖ್ ಖಾನ್ ಹಲವು ವರ್ಷಗಳ ಬಳಿಕ ಪಠಾಣ್ ಚಿತ್ರದ ಮೂಲಕ ಸೂಪರ್ ಸಕ್ಸಸ್ ಸಿಕ್ಕಿದೆ. ವಿಶ್ವದೆಲ್ಲೆಡೆ 1000 ಕೋಟಿ ರೂ. ಬಾಚಿದ್ರೆ ಹಿಂದಿ ಬಾಕ್ಸಾಫೀಸ್‌ನಲ್ಲಿ ಪಠಾಣ್ 509 ಕೋಟಿ ರೂ. ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ.

  • ‘ಆಸ್ಕರ್’ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೀಪಿಕಾ ಪಡುಕೋಣೆ ನಿರೂಪಕಿ

    ‘ಆಸ್ಕರ್’ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೀಪಿಕಾ ಪಡುಕೋಣೆ ನಿರೂಪಕಿ

    ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್ ಗೆ (Oscar) ದಿನಗಣನೆ ಶುರುವಾಗಿದೆ. ಹಲವಾರು ಕಾರಣಗಳಿಂದಾಗಿ ಈ ಬಾರಿ ಆಸ್ಕರ್ ವೇದಿಕೆ ಕಲರ್ ಫುಲ್ ಆಗಿರುತ್ತದೆ. ಭಾರತದ ಹೆಸರಾಂತ ನಟರಾದ ರಾಮ್ ಚರಣ್ (Ram Charan) ಮತ್ತು ಜ್ಯೂನಿಯರ್ ಎನ್.ಟಿ.ಆರ್ (Jr.NTR) ‘ನಾಟು ನಾಟು’ ಹಾಡಿಗೆ ವೇದಿಕೆಯ ಮೇಲೆ ಹೆಜ್ಜೆ ಹಾಕುತ್ತಿದ್ದರೆ, ಈ ಬಾರಿಯ ಆಸ್ಕರ್ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಹೊರಲಿದ್ದಾರೆ.

    ಪ್ರತಿ ವರ್ಷವೂ ಒಂದಿಲ್ಲೊಂದು ಮಹತ್ವದ ಜವಾಬ್ದಾರಿಯನ್ನು ದೀಪಿಕಾ ನಿರ್ವಹಿಸುತ್ತಿದ್ದಾರೆ. 2022ನೇ ಸಾಲಿನ ಕೇನ್ಸ್ ನಲ್ಲಿ ತೀರ್ಪುಗಾರರಾಗಿ ದೀಪಿಕಾ, ಆಸ್ಕರ್ ನಲ್ಲಿ ನಿರೂಪಕಿಯಾಗಿ ಮಿಂಚಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ದೀಪಿಕಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆ ದಿನಕ್ಕಾಗಿ ಕಾಯುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮೌನ ಮುರಿದ ಕನ್ನಡದ `ಗಿಲ್ಲಿ’ ನಟಿ ರಾಕುಲ್

    ಇದೇ ಮಾರ್ಚ್ 12ರಂದು (ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್ 13) ಲಾಸ್ ಏಂಜಲೀಸ್ ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಹತ್ತು ಜನ ನಿರೂಪಕರು ಕೆಲಸ ಮಾಡಲಿದ್ದಾರೆ. ಅದರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. ದೀಪಿಕಾ ಜೊತೆ ಮೆಲಿಸ್ಸಾ ಮೆಕಾರ್ಥಿ, ಜಾನೆಲ್ಲೆ ಮೋನೆ, ಜೆನ್ನಿಫರ್ ಕೊನ್ನೆಲ್ಲಿ, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಜೋ ಸಲ್ಡಾನಾ ಸೇರಿದಂತೆ ಇತರರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

    ಈ ಬಾರಿ ಆಸ್ಕರ್ ವೇದಿಕೆಯ ಮೇಲೆ ನಿರಂತರವಾಗಿ ದೀಪಿಕಾ ಕಾಣಿಸಿಕೊಂಡರೆ, ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಲೈವ್ ಆಗಿ ಡ್ಯಾನ್ಸ್ ಮಾಡಲಿದ್ದಾರೆ. ಅಲ್ಲದೇ, ಅದೇ ವೇದಿಕೆಯಲ್ಲೇ ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಾ ಭೈರವ ಹಾಡಲಿದ್ದಾರೆ. ಭಾರತದಿಂದ ಆಲ್ ದಟ್ ಬ್ರೀಥ್ಸ್, ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರಗಳು ನಾಮ ನಿರ್ದೇಶನಗೊಂಡಿವೆ. ಆರ್.ಆರ್.ಆರ್ ಸಿನಿಮಾದ ನಾಟು ನಾಟು ಕೂಡ ಪ್ರಶಸ್ತಿಯ ರೇಸ್ ನಲ್ಲಿದೆ.

  • ಪ್ರಭಾಸ್ ನಟನೆಯ ‘ಪ್ರೊಜೆಕ್ಟ್ ಕೆ’ ಚಿತ್ರದಲ್ಲಿದೆ ಮಹಾರಹಸ್ಯ

    ಪ್ರಭಾಸ್ ನಟನೆಯ ‘ಪ್ರೊಜೆಕ್ಟ್ ಕೆ’ ಚಿತ್ರದಲ್ಲಿದೆ ಮಹಾರಹಸ್ಯ

    ಕೊನೆಗೂ ಮಹಾ ರಹಸ್ಯವೊಂದು ಹೊರ ಬಿದ್ದಿದೆ. ಇಷ್ಟು ದಿನ ಪ್ರಭಾಸ್ (Prabhas) ಪ್ರೊಜೆಕ್ಟ್ ಕೆ  (Project K)ಸಿನಿಮಾದ ಯಾವುದೇ ಗುಟ್ಟು ಗೊತ್ತಾಗಿರಲಿಲ್ಲ. ಎಲ್ಲರೂ ಸೈಲೆಂಟ್ ಆಗಿದ್ದರು. ಇದೀಗ ಇದರ ನಿರ್ಮಾಪಕನೇ ಕತೆ ಹಾಗೂ ಪ್ರಭಾಸ್ ಪಾತ್ರದ ಸತ್ಯವನ್ನು ಹರವಿಟ್ಟಿದ್ದಾನೆ. ಮೊಟ್ಟ ಮೊದಲ ಬಾರಿಗೆ ಪ್ರೊಜೆಕ್ಟ್ ಕೆ ಚಿತ್ರದ ದಿವ್ಯ ಕತೆ ಅನಾವರಣಗೊಂಡಿದೆ. ಹಾಗಿದ್ದರೆ ಇದರಲ್ಲಿ ಪ್ರಭಾಸ್ ಅದ್ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ, ಇದರ ಕಥಾ ಹಂದರ ಏನು, ಐದು ನೂರು ಕೋಟಿ ಬಜೆಟ್ ಹೇಗೆ ಖರ್ಚಾಗಲಿದೆ? ಇಂತಹ ಹಲವು ಅನುಮಾನಗಳು ಪ್ರೇಕ್ಷಕರಲ್ಲಿ ಮೂಡಿವೆ,

    ಪ್ರೊಜೆಕ್ಟ್ ಕೆ ಸಿನಿಮಾ ಹೆಸರು ಮೊದಲು ಹೊರಬಿದ್ದಾಗ ಎಲ್ಲರ ಕಿವಿ ನೆಟ್ಟಗಾಗಿದ್ದವು. ಸೈನ್ಸ್ ಫಿಕ್ಷನ್ ಕತೆ ಎನ್ನುವುದನ್ನು ಮಾತ್ರ ನಿರ್ದೇಶಕ ಅಶ್ವಿನಿ ದತ್ತಾ (Ashwini Dutta) ಹೇಳಿದ್ದರು. ಐದು ನೂರು ಕೋಟಿ ಬಜೆಟ್ ಎನ್ನುವುದು ಹೈಲೈಟ್ ಆಗಿತ್ತು. ಅದು ಬಿಟ್ಟರೆ ಅದೊಂದು ಚಿಕ್ಕ ಮೇಕಿಂಗ್ ವಿಶುವಲ್ ತೋರಿಸಿದ್ದರು. ಆಗಲೂ ಈ ಸಿನಿಮಾದ ಕ್ಯಾನ್ವಾಸ್ ಅರ್ಥವಾಗಿರಲಿಲ್ಲ. ಯಾಕೆಂದರೆ ನಿರ್ದೇಶಕ ಅಶ್ವಿನಿ ದತ್ತಾ ಈ ಹಿಂದೆ ಮಹಾನಟಿ ನಿರ್ದೇಶಿಸಿದ್ದರು. ಅದಕ್ಕೂ ಇದಕ್ಕೂ ಹೋಲಿಕೆ ಸಾಧ್ಯ ಇರಲಿಲ್ಲ. ಈಗ ನಿರ್ಮಾಪಕರು ರಹಸ್ಯ ಬಿಚ್ಚಿಟ್ಟಿದ್ದಾರೆ. ಇದರಲ್ಲಿ ಪ್ರಭಾಸ್ ಆಧುನಿಕ ವಿಷ್ಣು ಅವತಾರದ ಪಾತ್ರದಲ್ಲಿ ಮೆರವಣಿಗೆ ಹೊರಡಲಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಹುಡುಗಿಗೆ ಹೊಡೆದ ಲವರ್‌ಗೆ ಜಾಡಿಸಿದ ನಟ ನಾಗಶೌರ್ಯ

    ಇದೊಂದು ರೀತಿಯಲ್ಲಿ ಕಲಿಯುಗದ ವಿಷ್ಣು ಅವತಾರ ಎಂದವರು ಇದ್ದಾರೆ. ದುಷ್ಟ ಶಕ್ತಿಗಳ ದಮನಕ್ಕೆ ಮಹಾ ವಿಷ್ಣು ನಾನಾ ಅವತಾರ ಎತ್ತಿದ್ದು ಎಲ್ಲರಿಗೂ ಗೊತ್ತಿದೆ. ನಮ್ಮ ಪುರಾಣದಲ್ಲಿ ಇದಕ್ಕೆ ಉಲ್ಲೇಖ ಇದೆ. ಈಗ ಅದೇ ಮಾದರಿಯಲ್ಲಿ ಈಗಿನ ಕಾಲದ ದುಷ್ಟ ಶಕ್ತಿಗಳನ್ನು ನಾಶ ಮಾಡಲು ಪ್ರಭಾಸ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಹಾಗಂತ ಬರೀ ಹೊಡಿ ಬಡಿ ದೃಶ್ಯಗಳೇ ಇರುತ್ತವೆ ಎಂದು ತಿಳಿಯಬೇಡಿ. ಮನುಷ್ಯನ ಸಂಬಂಧ, ಭಾವನೆಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಿ ಚಿತ್ರಕತೆ ಹೆಣೆದಿದ್ದಾರಂತೆ ಅಶ್ವಿನಿ ದತ್ತಾ.

    ಭಾರತೀಯ ಚಿತ್ರರಂಗ ಹಿಂದೆಂದೂ ಕಂಡಿರದ ದಿವ್ಯ ಲೋಕದ ಅನಾವರಣ ಮಾಡಲಿದ್ದಾರೆ ನಿರ್ದೇಶಕರು. ಗ್ರಾಫಿಕ್ಸ್, ಮೋಶನ್ ಗ್ರಾಫಿಕ್ಸ್ ಹಾಗೂ ಅದ್ಭುತ ಸೆಟ್‌ಗಳನ್ನು ಇದಕ್ಕಾಗಿ ನಿರ್ಮಿಸಿದ್ದಾರೆ. ಈಗಾಗಲೇ ಶೇಕಡಾ ಎಪ್ಪತ್ತರಷ್ಟು ಶೂಟಿಂಗ್ ಮುಗಿದಿದೆ. ಇನ್ನು ಕೆಲವು ತಿಂಗಳಲ್ಲಿ ಎಲ್ಲವೂ ಫೈನಲ್ ಫೈನಲ್. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ (Deepika Padukone), ಅಮಿತಾಭ್ ಬಚ್ಚನ್ (Amitabh Bachchan) ಹಾಗೂ ದಿಶಾ ಪಠಾಣಿ ಕೂಡ ಇದ್ದಾರೆ. ಮುಂದಿನ ವರ್ಷ ಜನವರಿ ಹನ್ನೆರಡರಂದು ವಿಶ್ವದ ತುಂಬಾ ಪ್ರೊಜೆಕ್ಟ್ ಕೆ ದಿಬ್ಬಣ ಹೊರಡಲಿದೆ.

  • ಬಾಕ್ಸ್ ಆಫೀಸ್ ಚಿಂದಿ: 1000 ಕೋಟಿ ಕ್ಲಬ್ ಸೇರಿದ ‘ಪಠಾಣ್’ ಸಿನಿಮಾ

    ಬಾಕ್ಸ್ ಆಫೀಸ್ ಚಿಂದಿ: 1000 ಕೋಟಿ ಕ್ಲಬ್ ಸೇರಿದ ‘ಪಠಾಣ್’ ಸಿನಿಮಾ

    ಶಾರುಖ್ ಖಾನ್ ನಟನೆಯ ಪಠಾಣ್ (Pathan) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿದೆ. ಸಿನಿಮಾ ರಿಲೀಸ್ ಆಗಿ 27ನೇ ದಿನಕ್ಕೆ ಸಾವಿರ ಕೋಟಿ (Thousand Crore) ಕ್ಲಬ್ (Club) ಸೇರಿದೆ. ಈ ವರ್ಷದಲ್ಲಿ ರಿಲೀಸ್ ಆದ ಬಾಲಿವುಡ್ ಸಿನಿಮಾಗಳಲ್ಲಿ ಅತೀ ಹೆಚ್ಚು ಹಣ ಮಾಡಿದ ಚಿತ್ರ ಎನ್ನುವ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿದೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಪಠಾಣ್ ಸಿನಿಮಾದ ಹಾಡೊಂದು ವಿವಾದಕ್ಕೀಡಾದಾಗ ಈ ಸಿನಿಮಾವನ್ನು ಗೆಲ್ಲಿಸಲೇಬಾರದು ಎಂದು ಹಲವರು ಕರೆ ನೀಡಿದರು. ಪ್ರತಿಭಟನೆಗಳು ನಡೆದವು, ಬಾಯ್ಕಾಟ್ ಪಠಾಣ್ ಅಭಿಯಾನ ಶುರುವಾಯಿತು. ಚಿತ್ರಮಂದಿರಗಳ ಮೇಲೆ ದಾಳಿ ನಡೆದವು. ಸಿನಿಮಾದ ಪೋಸ್ಟರ್ ಹರಿದು ಹಾಕಲಾಯಿತು. ಪೋಸ್ಟರ್ ಸುಡಲಾಯಿತು. ಏನೆಲ್ಲ ಸಂಕಷ್ಟಗಳು ಎದುರಾದರೂ, ಪಠಾಣ್ ಮಾತ್ರ ಗೆಲುವು ಸಾಧಿಸಿದೆ.

    ಪಠಾಣ್ ಒಂದೊಳ್ಳೆ ಸಿನಿಮಾ. ಎಲ್ಲರ ಮೆಚ್ಚುಗೆಗೂ ಅದು ಪಾತ್ರವಾಗಲಿದೆ. ದೇಶಭಕ್ತಿ ಸಾರುವಂತಹ ಕಥೆಯನ್ನು ಇದು ಒಳಗೊಂಡಿದೆ ಎಂದು ಶಾರುಖ್ ಹೇಳಿದರೂ, ವಿರೋಧಿಗಳು ಮಾತ್ರ ಕೇಳಲಿಲ್ಲ. ಕೆಲವು ರಾಜ್ಯಗಳಲ್ಲಿ ಸಿನಿಮಾವನ್ನು ನಿಷೇಧ ಮಾಡುವಂತೆ ಒತ್ತಡ ತರಲಾಯಿತು. ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಿದರು. ಆದರೂ, ಪ್ರತಿಭಟನೆ ಮಾತ್ರ ನಿಲ್ಲಲಿಲ್ಲ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಪಠಾಣ್ ಸಿನಿಮಾಗಾಗಿ ಇಡೀ ಬಾಲಿವುಡ್ ಒಂದಾಯಿತು. ಈ ಸಿನಿಮಾವನ್ನು ಗೆಲ್ಲಿಸುವ ಮೂಲಕ ಬಾಲಿವುಡ್ ಗೆಲ್ಲಿಸೋಣ ಎನ್ನುವ ಮಾತು ಕೇಳಿ ಬಂತು. ಹಾಗಾಗಿ ಶಾರುಖ್ ವಿರೋಧಿಗಳು ಕೂಡ ಈ ಸಿನಿಮಾವನ್ನು ಮೆಚ್ಚಿ ಮಾತನಾಡಿದರು. ಮೊದ ಮೊದಲು ತೆಗಳುತ್ತಿದ್ದವರು, ಆ ಮೇಲೆ ಸಿನಿಮಾ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದರು. ಇದೆಲ್ಲದರ ಪರಿಣಾಮ ಇದೀಗ ಪಠಾಣ್ ಸಾವಿರ ಕೋಟಿ ಬಾಚಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಠಾಣ್’ ಸಿನಿಮಾ ಏಟಿಗೆ, ಸಖತ್ ತಿರುಗೇಟು ನೀಡಿದ ‘ಶೆಹ್ಜಾದ’ ಟೀಮ್

    ‘ಪಠಾಣ್’ ಸಿನಿಮಾ ಏಟಿಗೆ, ಸಖತ್ ತಿರುಗೇಟು ನೀಡಿದ ‘ಶೆಹ್ಜಾದ’ ಟೀಮ್

    ಹೊಸ ಸಿನಿಮಾವೊಂದನ್ನು ತುಳಿಯಲು ಪಠಾಣ್ (Pathan) ಟೀಮ್ ಮಸಲತ್ತು ಮಾಡಿತಾ? ಇಂಥದ್ದೊಂದು ಆರೋಪ ಪಠಾಣ್ ತಂಡದ ಮೇಲೆ ಮಾಡಲಾಗಿತ್ತು. ಶಾರುಖ್ ಖಾನ್ (Shah Rukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ನ ಪಠಾಣ್ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸಿನಲ್ಲಿ 1000 ಕೋಟಿ ಕ್ಲಬ್ ತಲುಪಿದೆ. ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕೂಡ ಕಾಣುತ್ತಿದೆ. ಆದರೂ, ಹಣದಾಹ ನಿಂತಿಲ್ಲ ಎನ್ನುವ ಆರೋಪ ಮಾಡಿದ ಶೆಹ್ಜಾದ ಟೀಮ್.

    ಈ ವಾರ ಕಾರ್ತಿಕ್ ಆರ್ಯನ್ ಮತ್ತು ಕೃತಿ ಸೆನನ್ ಕಾಂಬಿನೇಷನ್ ನ ‘ಶೆಹ್ಜಾದ’ (Shehzad) ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾವನ್ನು ಹಣೆಯುವುದಕ್ಕಾಗಿಯೇ ಪಠಾಣ್ ಸಿನಿಮಾ ಏಕಾಏಕಿ ತನ್ನ ಟಿಕೆಟ್ ದರವನ್ನು ಕಡಿಮೆ ಮಾಡಿದೆ. ಇಂದು ಪಠಾಣ್ ಸಿನಿಮಾವನ್ನು ಕೇವಲ ರೂ.110ಕ್ಕೆ ನೋಡಬಹುದು ಎಂದು ಪೊಸ್ಟರ್ ರಿಲೀಸ್ ಮಾಡಿದೆ. ಸಡನ್ನಾಗಿ ಟಿಕೆಟ್ ಬೆಲೆ ಕಡಿಮೆ ಮಾಡುವುದಕ್ಕೆ ಕಾರಣ, ಹೊಸ ಸಿನಿಮಾ ಬಿಡುಗಡೆ. ಇದನ್ನೂ ಓದಿ: ಮಲಯಾಳಂ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾದ ರಾಜ್ ಬಿ ಶೆಟ್ಟಿ

    ಪಠಾಣ್ ಇಂಥದ್ದೊಂದು ನಡೆಯನ್ನು ಘೋಷಿಸುತ್ತಿದ್ದಂತೆಯೇ ಶೆಹ್ಜಾದ್ ಟೀಮ್ ಕೂಡ ಸುಮ್ಮನೆ ಕೂತಿಲ್ಲ. ಅದು ಕೂಡ ಭರ್ಜರಿಯಾಗಿಯೇ ತಿರುಗೇಟು ನೀಡಿದೆ. ಒಂದು ಟಿಕೆಟ್ ಕೊಂಡರೆ ಮತ್ತೊಂದು ಟಿಕೆಟ್ ಉಚಿತ ಎಂದು ಘೋಷಣೆ ಮಾಡಿದೆ. ಈ ಮೂಲಕ ಪಠಾಣ್‍ ಗೆ ಅದು ಮುಟ್ಟಿ ನೋಡಿಕೊಳ್ಳುವಂತಹ ಏಟನ್ನೇ ನೀಡಿದೆ.

    ಈ ಟಿಕೆಟ್ ಸಮರವನ್ನು ಬಾಲಿವುಡ್ ತುಂಬಾ ಸೂಕ್ಷ್ಮವಾಗಿ ಗಮನಿಸಿದ್ದು, ಈ ರೀತಿಯ ಪೈಪೋಟಿ ಯಾರಿಗೂ ಸರಿಯಾದದ್ದು ಅಲ್ಲ ಎಂದಿದೆ. ಸಿನಿ ಪಂಡಿತರು ಇದರಿಂದ ಮುಂದೆ ಆಗುವ ಅನಾಹುತದ ಲೆಕ್ಕಾಚಾರವನ್ನೂ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ನೆಟ್ಟಿಗರು ಪಠಾಣ್ ನಡೆಯನ್ನು ಖಂಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k