ಬಿಟೌನ್ ಸ್ಟಾರ್‌ಜೋಡಿ ದೀಪಿಕಾ ಪಡುಕೋಣೆ (Deepika Padukone) ಹಾಗೂ ರಣ್‌ವೀರ್ ಸಿಂಗ್ (Ranveer Singh) ದಂಪತಿಯ ಮುದ್ದು ಮಗಳ ಹೆಸರು ದುವಾ. ಮಗು ಜನಿಸಿ ಒಂದು ವರ್ಷ ಕಳೆದಿದೆ. ಆದರೆ ಇದುವರೆಗೂ ಮಗುವಿನ ಮುಖವನ್ನ ದಂಪತಿ ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಇದೀಗ ಪ್ರಥಮ ಬಾರಿ ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿ ಪೋಸ್ಟ್ ಹಾಕುವ ಮೂಲಕ ಮಗಳ ಫೋಟೋವನ್ನ ರಿವೀಲ್ ಮಾಡಿದ್ದಾರೆ.
ಇದೀಗ ದೀಪಿಕಾ ತಮ್ಮ ಮೆಟರ್ನಿಟಿ ಸಮಯವನ್ನ ಮುಗಿಸಿ ಅಭಿನಯಕ್ಕೆ ಮರಳಿದ್ದಾರೆ. ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದ ದೀಪಿಕಾ ಅಮ್ಮನಾದ ಬಳಿಕ ಕೆಲಸದ ಸಮಯ ಕಡಿತ ಮಾಡುವ ವಿಚಾರಕ್ಕೆ ಮನವಿ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ದೀಪಾವಳಿ ಹಬ್ಬದ ದಿನ ಮನೆಯಲ್ಲಿ ಪೂಜೆ ಮಾಡುವ ಫೋಟೋದೊಂದಿಗೆ ಮುದ್ದು ಮಗಳ ಮುಖವನ್ನ ಜಗತ್ತಿಗೆ ಪರಿಚಯಿಸಿದ್ದಾರೆ ದೀಪಿಕಾ ಪಡುಕೋಣೆ.

ರಣ್‌ವೀರ್ ಸಿಂಗ್, ದೀಪಿಕಾ ಹಾಗೂ ದುವಾ ಕ್ಯಾಂಡಿಡ್ ಫೋಟೋದಲ್ಲಿ ಮಿಂಚಿದ್ದಾರೆ. ಅಮ್ಮ ದೀಪಿಕಾ ಹಾಗೂ ಮಗಳು ದುವಾ ಟ್ವಿನ್ನಿಂಗ್ ಕೆಂಪು ಬಣ್ಣದ ಸಲ್ವಾರ್ ಧರಿಸಿದ್ದಾರೆ. ದೀಪಿಕಾ ಮಗಳಿಗೆ ಖ್ಯಾತ ತಾರೆಯರಾದ ಸೋನಂ ಕಪೂರ್, ಬಿಪಾಶಾ ಬಸು, ಪೂಜಾ ಹೆಗಡೆ, ಶಿಲ್ಪಾ ಶೆಟ್ಟಿ, ದಿಯಾ ಮಿರ್ಜಾ, ನೇಹಾ ಧೂಪಿಯಾ ಸೇರಿದಂತೆ ಹಲವರು ಕಾಮೆಂಟ್ ಮಾಡಿ ಶುಭ ಹಾರೈಸಿದ್ದಾರೆ. ಕೊನೆಗೂ ದೀಪಿಕಾ ಮಗುವಿನ ಮುಖ ನೋಡಿದ್ದಕ್ಕೆ ಖುಷಿಯಾದ ಅಭಿಮಾನಿಗಳಿಂದ 7 ಮಿಲಿಯನ್ ಲೈಕ್ಸ್ ಬಂದಿದೆ.

















ಮಗುವಿನ ತಾಯಿ ಆದ್ಮೇಲೆಯೂ ದೀಪಿಕಾ ಫಿಟ್‌ನೆಸ್ ಕಡೆ ಹೆಚ್ಚು ಗಮನ ವಹಸುತ್ತಿದ್ದಾರೆ. ಬ್ಯೂಟಿ, ಫಿಟ್‌ನೆಸ್, ವರ್ಕೌಟ್ ಅಂತ ಮಗುವಿನ ಪಾಲನೆಯೊಂದಿಗೆ ಮಾಡುತ್ತಿದ್ದಾರೆ. ಇದರ ನಡುವೆ ನಟಿಯ ಸ್ಟೈಲೀಶ್ ಫೋಟೋಶೂಟ್ ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಇದನ್ನೂ ಓದಿ:
ಕೆಂಪು ಬಣ್ಣದ ಗೌನ್‌ನಲ್ಲಿ ನಟಿ ಕಂಗೊಳಿಸಿದ್ದಾರೆ. ವಿವಿಧ ಭಂಗಿಯಲ್ಲಿ ಜವಾನ್ ಬೆಡಗಿ ಫೋಟೋಶೂಟ್ ಮಾಡಿಸಿದ್ದಾರೆ. ಗೌನ್ ಜೊತೆ ದುಬಾರಿ ಬೆಲೆ ಆಭರಣ ಧರಿಸಿ ಗ್ಲ್ಯಾಮರಸ್ ಅವತಾರ ತಾಳಿದ್ದಾರೆ. ಇದನ್ನೂ ಓದಿ:
ಇದೀಗ ಮತ್ತೆ ಕ್ಯಾಮೆರಾ ಮುಂದೆ ನಿಲ್ಲಲು ನಟಿ ಸಜ್ಜಾಗಿದ್ದಾರೆ. ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಪವರ್‌ಫುಲ್ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಶಾರುಖ್ ಸಂದರ್ಶನವೊಂದರಲ್ಲಿ ಖಚಿತಪಡಿಸಿದ್ದಾರೆ.
‘ಸ್ಪಿರಿಟ್’ ಸಿನಿಮಾ (Spirit) ದೀಪಿಕಾ ಕೈತಪ್ಪಿದ್ರೂ ಕೂಡ ಅವರಿಗೆ ಬೇಡಿಕೆಯೇನು ಕಮ್ಮಿಯಾಗಿಲ್ಲ. ‘ಕಲ್ಕಿ 2878 ಎಡಿ’ ಸಿನಿಮಾದ ಪಾರ್ಟ್ 2ನಲ್ಲಿ ನಟಿಸಲಿದ್ದಾರಂತೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ಪ್ರಿ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ ಎನ್ನಲಾಗಿದೆ. ಇದರೊಂದಿಗೆ ದಕ್ಷಿಣದ ಸಿನಿಮಾದಲ್ಲಿ ನಟಿಸಲು ಅವರಿಗೆ ಅವಕಾಶ ಅರಸಿ ಬರುತ್ತಿವೆ.

ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್ ಸಿನಿಮಾ ‘ಸ್ಪಿರಿಟ್’ ಈ ವರ್ಷದ ಅಂತ್ಯದಲ್ಲಿ ಶೂಟಿಂಗ್ ಶುರುವಾಗಲಿದೆ. ಇದಕ್ಕೆ ತೃಪ್ತಿ ದಿಮ್ರಿ ನಾಯಕಿ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ.
ದೀಪಿಕಾ ರೀ ಎಂಟ್ರಿ ಆರಂಭದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಮೂಲಕ ದೊಡ್ಡಮಟ್ಟದ ಸುದ್ದಿ ಮಾಡಿದ್ದಾರೆ. ಅನಿಮಲ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್ʼ (Spirit) ಸಿನಿಮಾದಲ್ಲಿ ನಟಿಸಲು ದೀಪಿಕಾಗೆ 20 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನು ಕೇಳಿ ನಟಿಯ ಫ್ಯಾನ್ಸ್ ಅಚ್ಚರಿಯ ಜೊತೆ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:
