Tag: Deepika padakone

  • ʻಗೆಹರಾಯಿಯಾʼ ಸಿನಿಮಾದಲ್ಲಿ ದೀಪಿಕಾ ಮಾಡಿದ್ದನ್ನು ನಾನು 15 ವರ್ಷಗಳ ಹಿಂದೆಯೇ ಮಾಡಿದ್ದೆ: ಮಲ್ಲಿಕಾ ಶೆರಾವತ್

    ʻಗೆಹರಾಯಿಯಾʼ ಸಿನಿಮಾದಲ್ಲಿ ದೀಪಿಕಾ ಮಾಡಿದ್ದನ್ನು ನಾನು 15 ವರ್ಷಗಳ ಹಿಂದೆಯೇ ಮಾಡಿದ್ದೆ: ಮಲ್ಲಿಕಾ ಶೆರಾವತ್

    ಬಾಲಿವುಡ್‌ನ ಹಾಟ್ ಬ್ಯೂಟಿ ಮಲ್ಲಿಕಾ ಶೆರಾವತ್ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ. `RK/RKAY’ ಚಿತ್ರದ ಮೂಲಕ ಬಿಟೌನ್‌ನಲ್ಲಿ ಮಲ್ಲಿಕಾ ಸದ್ದು ಮಾಡ್ತಿದ್ದಾರೆ. ಈ ವೇಳೆ ತಮ್ಮ `ಮರ್ಡರ್’ ಚಿತ್ರವನ್ನು ದೀಪಿಕಾ ಪಡುಕೋಣೆ ನಟನೆಯ `ಗೆಹರಾಯಿಯಾ’ ಚಿತ್ರಕ್ಕೆ ಹೋಲಿಸಿ ಮಾತನಾಡಿದ್ದಾರೆ.

    ಬೋಲ್ಡ್ ಪಾತ್ರಗಳ ಮೂಲಕ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ ನಟಿ ಮಲೈಕಾ ಶೆರಾವತ್ ಕೆಲ ಸಮಯ ಚಿತ್ರರಂಗದಿಂದ ದೂರ ಸರಿದಿದ್ದರು. ಈಗ ಮತ್ತೆ ಬಿಟೌನ್‌ನಲ್ಲಿ ನಟಿ ಸದ್ದು ಮಾಡುತ್ತಿದ್ದಾರೆ. ತಮ್ಮ ಹೊಸ ಚಿತ್ರದ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಈ ವೇಳೆ ತಾವು ನಟಿಸಿರುವ ಮರ್ಡರ್ ಚಿತ್ರವನ್ನು ಈಗಿನ ದೀಪಿಕಾ ನಟನೆಯ `ಗೆಹರಾಯಿಯಾ’ ಚಿತ್ರಕ್ಕೆ ಕಂಪೇರ್ ಮಾಡಿ, ಮಾತನಾಡಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಮಾಡಿದ್ದನ್ನು 15 ವರ್ಷಗಳ ಹಿಂದೆಯೇ ನಾನು ಮಾಡಿದ್ದೆ ಎಂದು ಬೋಲ್ಡ್ ಉತ್ತರ ಕೊಟ್ಟಿದ್ದಾರೆ.

    ನಟಿ ಮಲೈಕಾ ಹಾಟ್ ಮತ್ತು ಬೋಲ್ಡ್ ಸೀನ್‌ಗಳ ಮೂಲಕ ಗುರುತಿಸಿಕೊಂಡಿರುವ ನಟಿ, ಆಗ ಬೋಲ್ಡ್ ಸೀನ್‌ಗಳಲ್ಲಿ ಕಾಣಿಸಿಕೊಂಡ್ರೆ ಸಂಕೋಚ ಸ್ವಭಾವದಿಂದ ನೋಡುತ್ತಿದ್ದರು. ಜತೆಗೆ ನಮ್ಮ ನಟನೆಗೆ ಬೆಲೆ ಕೊಡುತ್ತಿರಲಿಲ್ಲ. ನಾನು `ಮರ್ಡರ್’ ಚಿತ್ರದಲ್ಲಿ ಕಿಸ್ ಮತ್ತು ಬಿಕಿನಿ ದೃಶ್ಯದಲ್ಲಿ ಕಾಣಿಸಿಕೊಂಡಾಗ ಜನರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಜನ ಬೋಲ್ಡ್ ಸಿನಿಮಾಗಳತ್ತ ವಾಲುತ್ತಿದ್ದಾರೆ. `ಗೆಹರಾಯಿಯಾ’ ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಂಡಂತೆ ನಾನು 15 ವರ್ಷಗಳ ಹಿಂದೆಯೇ ಕಾಣಿಸಿಕೊಂಡಿದ್ದೆ, ಆಗ ನನ್ನ ನಟನೆಯ ಬಗ್ಗೆ ಯಾರು ಮಾತನಾಡಲಿಲ್ಲ ಎಂದು ಮಲೈಕಾ ಮನಬಿಚ್ಚಿ ಮಾತನಾಡಿದ್ದಾರೆ.

    ಮಲೈಕಾ ಅವರು ಸದ್ಯ ತಮ್ಮ ಹೊಸ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಜುಲೈ 22ರಂದು ಮಲೈಕಾ ನಟನೆಯ RK/RKAY ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಮಲೈಕಾ ಜತೆ ಕುಬ್ರಾ ಸೇಠ್ ಕೂಡ ಕಾಣಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 119 ಕೋಟಿಯ ದುಬಾರಿ ಪ್ಲ್ಯಾಂಟ್ ಖರೀದಿಸಿದ ರಣ್‌ವೀರ್ ಸಿಂಗ್-ದೀಪಿಕಾ ಪಡುಕೋಣೆ

    119 ಕೋಟಿಯ ದುಬಾರಿ ಪ್ಲ್ಯಾಂಟ್ ಖರೀದಿಸಿದ ರಣ್‌ವೀರ್ ಸಿಂಗ್-ದೀಪಿಕಾ ಪಡುಕೋಣೆ

    ಬಾಲಿವುಡ್‌ನ ಸ್ಟಾರ್ ಜೋಡಿ ರಣ್‌ವೀರ್ ಮತ್ತು ದೀಪಿಕಾ ಪಡುಕೋಣೆ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಈ ಜೋಡಿ ಮುಂಬೈನ ಬಾಂದ್ರಾದಲ್ಲಿ ಹೊಸ ಪ್ಲ್ಯಾಂಟ್ ಅನ್ನು ಖರೀದಿಸಿದೆ. 119 ಕೋಟಿಯ ದುಬಾರಿ ಮನೆಯನ್ನ ರಣ್‌ವೀರ್ ಸಿಂಗ್ ದಂಪತಿ ಖರೀದಿ ಮಾಡಿದ್ದಾರೆ.

    ಜೋಡಿ ಹಕ್ಕಿಗಳಾಗಿ ಸಾಕಷ್ಟು ಹಿಟ್ ಚಿತ್ರಗಳನ್ನ ಕೊಟ್ಟಿರೋ ದೀಪಿಕಾ ಮತ್ತು ರಣ್‌ವೀರ್ ನಿಜಜೀವನದಲ್ಲೂ ಬೆಸ್ಟ್ ಜೋಡಿಯಾಗಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಿದ್ದಾರೆ. ಇದೀಗ ಮುಂಬೈನ ಐಷರಾಮಿ ಮನೆಯನ್ನ 119 ಕೋಟಿಗೆ ಖರೀದಿ ಮಾಡಿದ್ದಾರೆ. ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್‌ಗೆ ನೆರೆಹೊರೆಯವರಾಗಿದ್ದು, ಇವರಿಬ್ಬರ ಮನೆಯ ಮಧ್ಯೆ ದೀಪಿಕಾ ದಂಪತಿ ಮನೆ ಖರೀದಿಸಿದ್ದಾರೆ. ಇದನ್ನೂ ಓದಿ:ಡಾರ್ಲಿಂಗ್ ಪ್ರಭಾಸ್ ಚಿತ್ರದಲ್ಲಿ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್

    ಯುಎಸ್ ಪ್ರವಾಸದಲ್ಲಿದ್ದ ಈ ಜೋಡಿ ಮುಂಬೈನಲ್ಲಿ ಇದೀಗ ಐಷರಾಮಿ ಮನೆ ಖರೀದಿಸಿರುವುದು ಬಿಟೌನ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಬಾಲಿವುಡ್ ಬಿಗ್ ಸ್ಟಾರ್ ಶಾರುಖ್ ಮತ್ತು ಸಲ್ಮಾನ್ ಮನೆಯ ಬಳಿ ದೀಪಿಕಾ ದಂಪತಿ ಮನೆ ಖರೀದಿಸಿರುವುದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ದೇವಸೇನಾಳಿಂದ ದೂರವಾದ್ರಾ ಬಾಹುಬಲಿ?- ಮೂವರು ಕನ್ನಡತಿಯರ ನಡ್ವೆ ಡಾರ್ಲಿಂಗ್

    ದೇವಸೇನಾಳಿಂದ ದೂರವಾದ್ರಾ ಬಾಹುಬಲಿ?- ಮೂವರು ಕನ್ನಡತಿಯರ ನಡ್ವೆ ಡಾರ್ಲಿಂಗ್

    ಬೆಂಗಳೂರು: ಟಾಲಿವುಡ್ ದೇವಸೇನಾ ಅನುಷ್ಕಾ ಶೆಟ್ಟಿಯಿಂದ ಡಾರ್ಲಿಂಗ್ ಬಾಹುಬಲಿ ದೂರ ಆಗ್ತಿದ್ದೀರಾ ಅನ್ನೋ ಮಾತು ಬಣ್ಣದ ಲೋಕದಲ್ಲಿ ಸುಳಿದಾಡುತ್ತಿದೆ. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಬಾಹುಬಲಿಯಲ್ಲಿ ಅನುಷ್ಕಾ ಮತ್ತು ಪ್ರಭಾಸ್ ಕೆಮಿಸ್ಟ್ರಿ ನೋಡಿದ ಅಭಿಮಾನಿಳು ರಿಯಲ್ ಲೈಫ್ ನಲ್ಲಿಯೂ ಒಂದಾದ್ರೆ ಚೆನ್ನಾಗಿರುತ್ತೆ ಅಂತ ಕನಸು ಕಂಡಿದ್ದರು. ಆದ್ರೆ ಅಭಿಮಾನಿಗಳು ಕಂಡ ಕನಸು ಕನಸಾಗಿಯೇ ಉಳಿಯಲಿದೆಯಾ ಅನ್ನೋ ಪ್ರಶ್ನೆಯನ್ನು ಖುದ್ದು ಪ್ರಭಾಸ್ ಮುನ್ನಲೆಗೆ ತಂದಿದ್ದಾರೆ.

    ಪ್ರಭಾಸ್ ಮುಂದಿನ ಸಿನಿಮಾ ರಾಧೆ-ಶ್ಯಾಮ್ ಚಿತ್ರದ ಫಸ್ಟ್ ಲುಕ್ ಭಾರತೀಯ ಸಿನಿ ಅಂಗಳದಲ್ಲಿ ಸೆನ್ಸಷನಲ್ ಕ್ರಿಯೇಟ್ ಮಾಡಿದೆ. ಚಿತ್ರದ ಫಸ್ಟ್ ಲುಕ್ ನಲ್ಲಿ ಮಾಸ್ ಪ್ರಭಾಸ್ ಲವರ್ ಬಾಯ್ ಆಗಿ ಕನ್ನಡತಿ ಪೂಜಾ ಹೆಗ್ಡೆ ರೊಮ್ಯಾಂಟಿಕ್ ಪೋಸ್ ನೀಡಿದ್ದಾರೆ. ರಾಧೆ ಶ್ಯಾಮ್ ಟೀಂಗೆ ಬಾಲಿವುಡ್ ಪದ್ಮಾವತಿ, ಗುಳಿ ಕೆನ್ನೆಯ ಚೆಲುವೆ ದೀಪಿಕಾ ಪಡುಕೋಣೆ ಎಂಟ್ರಿ ಕೊಟ್ಟಿದ್ದಾರೆ. ಫಿಲಂ ಟೀಂಗೆ ಎಂಟ್ರಿ ಕೊಡುತ್ತಿದ್ದಂತೆ ದೀಪಿಕಾ ಇನ್‍ಸ್ಟಾಗ್ರಾಂ ಖಾತೆಯನ್ನು ಪ್ರಭಾಸ್ ಫಾಲೋ ಮಾಡಲಾರಂಭಿಸಿದ್ದಾರೆ.

    ಪ್ರಭಾಸ್ ಇನ್‍ಸ್ಟಾಗ್ರಾಂನಲ್ಲಿ ಕೇವಲ ಐವರು ಫಾಲೋ ಮಾಡುತ್ತಿದ್ದಾರೆ. ಗೆಳೆಯ ಸುಜಿತ್, ನಟಿಯರಾದ ದೀಪಿಕಾ ಪಡುಕೋಣೆ, ಪೂಜಾ ಹೆಗ್ಡೆ, ಶ್ರದ್ಧಾ ಕಪೂರ್ ಮತ್ತು ಭಾಗ್ಯಶ್ರೀಯವರ ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ. ಆದ್ರೆ ಬಹುದಿನಗಳ ಗೆಳತಿ ಅನುಷ್ಕಾ ಶೆಟ್ಟಿಯ ಖಾತೆಯನ್ನು ಮಾತ್ರ ಫಾಲೋ ಮಾಡಿಲ್ಲ. ಇತ್ತ ದೇವಸೇನಾ ಗೆಳಯ ಬಾಹುಬಲಿಯ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ.

    ಇತ್ತೀಚೆಗೆ ನಟಿಸುತ್ತಿರುವ ನಟಿಯರ ಖಾತೆಗಳನ್ನು ಫಾಲೋ ಮಾಡುತ್ತಿರುವ ಪ್ರಭಾಸ್ ಹಳೆಯ ಗೆಳತಿ ಅರುಂಧತಿಯನ್ನು ಮರೆತ್ರಾ ಅನ್ನೋ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ದೀಪಿಕಾ, ಅನುಷ್ಕಾ ಮತ್ತು ಪೂಜಾ ಮೂವರು ಕರ್ನಾಟಕದವರಾಗಿದ್ದು, ಕನ್ನಡತಿಯರ ನಡುವೆ ಪ್ರಭಾಸ್ ಸಿಲುಕಿಕೊಂಡಿದ್ದಾರೆ ಅನ್ನೋ ಚರ್ಚೆಗಳು ಟಾಲಿವುಡ್ ಅಂಗಳದಲ್ಲಿ ಆರಂಭಗೊಂಡಿವೆ.

  • ತೈಮೂರ್ ಬಳಿಕ ಮಾರುಕಟ್ಟೆಯಲ್ಲಿ ದೀಪಿಕಾ ಗೊಂಬೆ

    ತೈಮೂರ್ ಬಳಿಕ ಮಾರುಕಟ್ಟೆಯಲ್ಲಿ ದೀಪಿಕಾ ಗೊಂಬೆ

    ಮುಂಬೈ: ನಟ ಸೈಫ್ ಅಲಿ ಖಾನ್ ಪುತ್ರ ತೈಮೂರ್ ಗೊಂಬೆಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕಿರಿಸಲಾಗಿತ್ತು. ಇದೀಗ ತೈಮೂರ್ ಬಳಿಕ ಬಾಲಿವುಡ್ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಗೊಂಬೆಗಳ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಪದ್ಮಾವತ್ 2018ರ ಯಶಸ್ವಿ ಸಿನಿಮಾಗಳಲ್ಲಿ ಒಂದಾಗಿದೆ. ಪದ್ಮಾವತಿ ಪಾತ್ರಕ್ಕೆ ನಟಿ ದೀಪಿಕಾ ಜೀವ ತುಂಬಿದ್ದರು. ಸಿನಿಮಾದಲ್ಲಿ ಪ್ರತಿಯೊಂದು ಪಾತ್ರಗಳು, ಕಥೆ, ಕ್ಯಾಮೆರಾ ಕೈ ಚಳಕ, ನೃತ್ಯ, ಸಂಗೀತ ವೀಕ್ಷಕರನ್ನು ಸೆಳೆದಿದ್ದವು. ಇವೆಲ್ಲದರ ಜೊತೆ ದೀಪಿಕಾ ಧರಿಸಿದ್ದ ಒಡವೆಗಳು ಮಹಿಳೆಯರನ್ನು ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿದ್ದವು.

    ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಪದ್ಮಾವತ್ ಜ್ಯೂವೆಲ್ಸ್ ಹೆಸರಿನಲ್ಲಿ ಚಿನ್ನಾಭರಣಗಳನ್ನು ಮಾರಾಟ ಮಾಡಲಾಗಿತ್ತು. ಕೆಲ ಮಹಿಳೆಯರು ಬೆಲೆ ಬಾಳುವ ಪದ್ಮಾವತ್ ಚಿನ್ನಾಭರಣ ಧರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಪದ್ಮಾವತ್ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಂಡ ಮಾದರಿಯಲ್ಲಿ ಗೊಂಬೆಗಳ ತಯಾರಿಸಲಾಗಿದೆ. ಇನ್ನು ಗೊಂಬೆಗಳಿಗೆ ಅದೇ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ.

    ಇತ್ತೀಚೆಗೆ ದೀಪಿಕಾ ಪಡುಕೋಣೆ ನಟನೆಯ ಮಹಿಳಾ ಪ್ರಧಾನ ಚಿತ್ರ ಛಪಾಕ್ ಸದ್ದು ಮಾಡುವಲ್ಲಿ ವಿಫಲವಾಗಿತ್ತು. ಕ್ರಿಕೆಟಿಗ ಕಪಿಲ್ ದೇವ್ ಜೀವನಾಧರಿತ ಸಿನಿಮಾದಲ್ಲಿ ಪತಿ ರಣ್‍ವೀರ್ ಗೆ ಜೊತೆಯಾಗಿ ನಟಿಸುತ್ತಿದ್ದಾರೆ. ರಾಮ್‍ಲೀಲಾ, ಬಾಜೀರಾವ್ ಮಸ್ತಾನಿ ಮತ್ತು ಪದ್ಮಾವತ್ ಬಳಿಕ ನಾಲ್ಕನೇ ಬಾರಿಗೆ ತೆರೆಯ ಮೇಲೆ ದೀಪ್-ವೀರ್ ಜೋಡಿ ಮೋಡಿ ಮಾಡಲು ಸಜ್ಜಾಗಿದೆ.