Tag: Deepawali Celebration

  • ದೀಪಾವಳಿ 2025 – ನಿಮ್ಮ ನೆಚ್ಚಿನವರಿಗೆ ವಿಶಿಷ್ಟ ಉಡುಗೊರೆ ನೀಡಿ ಮನ-ಮನೆ ಬೆಳಗಿಸಿ

    ದೀಪಾವಳಿ 2025 – ನಿಮ್ಮ ನೆಚ್ಚಿನವರಿಗೆ ವಿಶಿಷ್ಟ ಉಡುಗೊರೆ ನೀಡಿ ಮನ-ಮನೆ ಬೆಳಗಿಸಿ

    ಲ್ಲೆಡೆಯೂ ದೀಪಾವಳಿ ಸಂಭ್ರಮ ಮನೆಮಾಡಿದೆ. ಇದು ಕೇವಲ ಹಬ್ಬವಲ್ಲ. ಬೆಳಕು, ನಗು ಮತ್ತು ಸಮೃದ್ಧಿಯ ಆಚರಣೆ. ನಿಮ್ಮ ಪ್ರೀತಿಯನ್ನು ಇನ್ನೊಬ್ಬರಿಗೆ ಹಂಚುತ್ತಾ ಪ್ರೀತಿಯ ಬೆಳಕನ್ನು ಪಸರಿಸುವುದು ಈ ಹಬ್ಬದ ಉದ್ದೇಶ. ಈ ಶುಭ ಸಂದರ್ಭದಲ್ಲಿ ನಿಮ್ಮ ನೆಚ್ಚಿನವರಿಗೆ ನಿಮ್ಮ ಪ್ರೀತಿಯ ಬೆಳಕನ್ನು ನೀಡಿ, ಅವರ ಮನ-ಮನೆ ಬೆಳಗುವಂತೆ ಮಾಡಿ.

    ಹಿಂದಿನ ಕಾಲದಲ್ಲಿ ಹಬ್ಬದ ಸಂದರ್ಭದಲ್ಲಿ ಸಿಹಿತಿನಿಸುಗಳನ್ನು ನೀಡುವ ಮೂಲಕ ತಮ್ಮ ಪ್ರೀತಿ, ಕೃತಜ್ಞತಾ ಭಾವವನ್ನು ತೋರ್ಪಡಿಸುತ್ತಿದ್ದರು. ಆದರೆ ಇದೀಗ ಸಿಹಿತಿನಿಸುಗಳನ್ನು ನೀಡುವುದಕ್ಕಿಂತ ಹೆಚ್ಚಾಗಿ ಉಡುಗೊರೆಗಳನ್ನು ನೀಡುವುದು ಒಂದು ಆಚರಣೆಯಾಗಿ ಬೆಳೆದುಬಿಟ್ಟಿದೆ. ನೀಡುವ ಉಡುಗೊರೆಗಳು ಅರ್ಥಪೂರ್ಣವಾಗಿ, ವಿಶೇಷವಾಗಿರಬೇಕು ಎನ್ನುವುದು ಎಲ್ಲರ ಆಸೆಯಾಗಿದೆ.

    ಉಡುಗೊರೆ ನೀಡುವುದು ಸುಲಭ. ಆದರೆ ದೀಪಾವಳಿಗೆ ಯಾವ ಉಡುಗೊರೆ ನೀಡಬೇಕು ಎನ್ನುವುದು ದೊಡ್ಡ ಪ್ರಶ್ನೆಯಾಗಿ ಉಳಿದುಬಿಡುತ್ತದೆ. ಹೀಗಾಗಿ ನಿಮ್ಮ ನೆಚ್ಚಿನವರಿಗೆ ಇಷ್ಟವಾಗುವ ಹಾಗೂ ವಿಶೇಷವಾಗಿಯೂ ಎನ್ನಿಸುವ ಈ ಕೆಲವು ಉಡುಗೊರೆಗಳನ್ನು ನೀಡಿ. ಈ ದೀಪಾವಳಿಯನ್ನು ಸಂಭ್ರಮಿಸಿ.

    ಗೃಹಾಲಂಕಾರ ವಸ್ತುಗಳು:
    ದೀಪಾವಳಿ ಎಂದರೆ ಮನೆ ಬೆಳಗಿಸುವ ದೀಪಗಳ ಹಬ್ಬ. ಈ ಸಂದರ್ಭದಲ್ಲಿ ಮನೆಯ ಸೌಂದರ್ಯ ಹೆಚ್ಚಿಸುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿ. ಅಲಂಕಾರಿಕ ದೀಪಗಳು, ಮೇಣದ ಬತ್ತಿಗಳು, ಗೋಡೆಯ ಮೇಲಿನ ಚಿತ್ರಣಗಳು ಮತ್ತು ಶೋಕೇಸ್ ಸಾಮಗ್ರಿಗಳು ಮನೆಯ ಅಂದವನ್ನು ದ್ವಿಗುಣಗೊಳಿಸುತ್ತವೆ. ಜೊತೆಗೆ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಲ್ಪಟ್ಟ ವಸ್ತುಗಳನ್ನು ನೀಡಬಹುದು.

    ಕಸ್ಟಮೈಸ್ ಮಾಡಿದ ಉಡುಗೊರೆಗಳು:
    ನಿಮ್ಮ ಪ್ರೀತಿಪಾತ್ರರಿಗಾಗಿ ಕೆಲವು ಕಸ್ಟಮೈಸ್ ಮಾಡಿದ ಉಡುಗೊರೆಗಳನ್ನು ನೀಡಿ. ಕಸ್ಟಮೈಸ್ ಎಂದರೆ ಅವರ ಫೋಟೋ ಇರುವ ಫ್ರೇಮ್, ನಾಮಫಲಕ, ಫೋಟೋ ಇರುವ ದಿಂಬು ಅಥವಾ ಕ್ಯಾಲೆಂಡರ್ ಇವುಗಳು ಹೆಚ್ಚು ಆಕರ್ಷಣೀಯವಾಗಿರುತ್ತದೆ. ಅಲ್ಲದೇ ಈ ಉಡುಗೊರೆಗಳೊಂದಿಗೆ ಹೆಚ್ಚು ಭಾವನಾತ್ಮಕ ಸಂಬಂಧ ಬೆಳೆಯುತ್ತದೆ.

    ಸ್ವಆರೈಕೆ ಮಾಡುವ ವಸ್ತುಗಳು:
    ಕೆಲವೊಮ್ಮೆ ಸ್ವಆರೈಕೆ ವಸ್ತುಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಪ್ರೀತಿಯಿಂದ ಕೆಲವು ಆರೋಗ್ಯಕ್ಕೆ ಒಳ್ಳೆಯದಾಗುವ ಕೆಲವು ವಸ್ತುಗಳನ್ನು ನೀಡಿ. ಸ್ಕಿನ್ ಕೇರ್, ಹೇರ್ ಕೇರ್ ಸೇರಿದಂತೆ ಡ್ರೈಫ್ರೂಟ್ಸ್‌ ಹ್ಯಾಂಪರ್‌ಗಳನ್ನು ನೀಡಬಹುದು.

    ಬಟ್ಟೆಗಳು:
    ದೀಪಾವಳಿ ಹಬ್ಬಕ್ಕಾಗಿ ಬಟ್ಟೆ ಕೊಡಿಸುವುದು ಇನ್ನೊಂದು ರೀತಿಯ ಉಡುಗೊರೆ. ಬಟ್ಟೆಯೊಂದಿಗೆ ನಮ್ಮ ಅಂದವನ್ನು ಹೆಚ್ಚಿಸುವ ಕರಕುಶಲ ಆಭರಣಗಳು, ಕೈಚೀಲಗಳು ಅಥವಾ ಕೈಗಡಿಯಾರಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ.

    ಪರಿಸರ ಸ್ನೇಹಿ ಉಡುಗೊರೆಗಳು
    ಇನ್ನೂ ಕೆಲವರು ಪರಿಸರ ಸ್ನೇಹಿ ವಸ್ತುಗಳನ್ನು ಇಷ್ಟಪಡುತ್ತಾರೆ. ಸಸಿಗಳು, ಅಲಂಕಾರಿಕ ವಸ್ತುಗಳು ಮತ್ತು ಅಡುಗೆಮನೆ ವಸ್ತುಗಳು, ಮಡಕೆಯಂತಹ ಅಲಂಕಾರಿಕ ವಸ್ತುಗಳನ್ನು ನೀಡಬಹುದು. ಇವುಗಳು ಆನಂದವನ್ನು ನೀಡುವುದರ ಜೊತೆಗೆ ಪರಿಸರ ಸ್ನೇಹಿಯಾಗಿಯೂ ಇರುತ್ತದೆ.

    ಸಿಹಿತಿಂಡಿ, ಚಾಕ್‌ಲೇಟ್‌ಗಳು:
    ಹಬ್ಬದ ಸಂದರ್ಭದಲ್ಲಿ ಎಲ್ಲರೂ ಸಿಹಿ ತಿನ್ನಲು ಇಷ್ಟಪಡುತ್ತಾರೆ. ಹೀಗಾಗಿ ನಿಮ್ಮ ಪ್ರೀತಿಪಾತ್ರರಿಗೆ ಸಿಹಿತಿಂಡಿ ಹಾಗೂ ಚಾಕ್‌ಲೇಟ್ ಬಾಕ್ಸ್ಗಳು ನೀಡಿ, ಲಡ್ಡು, ಕಾಜು ಕಟ್ಲೆಟ್, ಬರ್ಫಿ ಸೇರಿದಂತೆ ಇನ್ನಿತರ ಸಿಹಿತಿಂಡಿಗಳನ್ನು ನೀಡಬಹುದು. ಕಸ್ಟಮೈಸ್ ಮಾಡಿದ ಪ್ಯಾಕೇಜಿಂಗ್ ಹಾಗೂ ಗಿಫ್ಟ್ ಹ್ಯಾಂಪರ್‌ಗಳನ್ನು ನೀಡುವ ಮೂಲಕ ಉಡುಗೊರೆಗಳಿಗೆ ವಿಶೇಷವಾಗಿಸಬಹುದು.

    ಈ ಉಡುಗೊರೆಗಳನ್ನು ನೀಡುವ ಮೂಲಕ ನೀವು ನಿಮ್ಮ ನೆಚ್ಚಿನವರೊಂದಿಗೆ ಹಬ್ಬ ಆಚರಿಸಿ, ಸಂಭ್ರಮ ದ್ವಿಗುಣಗೊಳಿಸಿ.

  • ದೇವರ ಮಕ್ಕಳ ಜೊತೆ ದೀಪಾವಳಿ ಆಚರಿಸಿದ ನಟಿ ಸಮಂತಾ

    ದೇವರ ಮಕ್ಕಳ ಜೊತೆ ದೀಪಾವಳಿ ಆಚರಿಸಿದ ನಟಿ ಸಮಂತಾ

    ಟಾಲಿವುಡ್ ನಟಿ ಸಮಂತಾ ರುತ್‌ಪ್ರಭು (Samantha Ruth Prabhu) ಸಿನಿಮಾಗಳ ಜೊತೆ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬ ಹಾಗೂ ಹಬ್ಬದ ಆಚರಣೆ ವೇಳೆ ಎನ್‌ಜಿಓಗಳಿಗೆ ಭೇಟಿ ನೀಡಿ, ಅರ್ಥಪೂರ್ಣ ಆಚರಣೆ ಮಾಡುತ್ತಾರೆ. ಇದೀಗ ದೀಪಾವಳಿ ಹಬ್ಬವನ್ನ ಅನಾಥಾಶ್ರಮದ ಮಕ್ಕಳ ಜೊತೆ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ.

    ದೇವರ ಮಕ್ಕಳ ಜೊತೆ ದೀಪಾವಳಿ ಆಚರಿಸಿರುವ ನಟಿ ಸಮಂತಾ, ಸರಳವಾಗಿ ಅನಾಥಾಶ್ರಮದಲ್ಲಿ ದೀಪ ಹಚ್ಚಿ ದೀಪಾವಳಿ ಆಚರಿಸಿದ್ದಾರೆ. ಮಕ್ಕಳ ಜೊತೆ ಕೆಲಹೊತ್ತು ಕಾಲ ಕಳೆದಿದ್ದಾರೆ. ಈ ವೇಳೆ ದೀಪಾವಳಿ ಉಡುಗೊರೆ ನೀಡಿ ಅವ್ರ ಮುಖದಲ್ಲಿ ಸಂತಸ ಮೂಡಲು ಕಾರಣರಾಗಿದ್ದಾರೆ. ವಿಚ್ಛೇದನದ ನಂತರ ಸಾಕಷ್ಟು ಸವಾಲುಗಳನ್ನ ಎದುರಿಸುತ್ತಿರುವ ಸಮಂತಾ ಈಗ ಇಂಡಿಪೆಂಡೆಂಟ್ ಉಮೆನ್.ಇದನ್ನೂ ಓದಿ: ‘ಜೈ’ ಚಿತ್ರದ ‘ಲವ್ ಯು’ ಹಾಡು ರಿಲೀಸ್ ಮಾಡಿದ ರಿಯಲ್ ಲವ್ ಬರ್ಡ್ಸ್

    ಕಳೆದ ವರ್ಷ ತಂದೆಯನ್ನೂ ಕಳೆದುಕೊಂಡಿರುವ ಸಮಂತಾ, ಅನಾರೋಗ್ಯದ ವಿರುದ್ಧ ನಿತ್ಯ ಹೋರಾಟ ನಡೆಸಿದ್ದಾರೆ. ಸ್ಪೂರ್ತಿ ಫೌಂಡೇಶನ್, ಹ್ಯಾಪಿ ಹೋಮ್ಸ್ ಹಾಗೂ ಡಿಸೈರ್ ಸೊಸೈಟಿ ಎನ್‌ಜಿಓಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಮಂತಾ ಪ್ರತಿ ವರ್ಷವೂ ಅತಿಥಿಯಾಗಿ ಬಂದು ಮಕ್ಕಳ ಜೊತೆ ದೀಪಾವಳಿ ಆಚರಣೆ ಮಾಡುತ್ತಾರೆ. ಅದರಂತೆ ಈ ವರ್ಷವೂ ಹಬ್ಬದ ಆಚರಣೆ ಮಾಡಿದ್ದಾರೆ.

  • ಪಟಾಕಿ ಸಿಡಿತದಿಂದ ಜನರ ಕಣ್ಣಿಗೆ ಕುತ್ತು – ಮಿಂಟೋ ಆಸ್ಪತ್ರೆಯಲ್ಲಿ 29 ಮಂದಿಗೆ ಚಿಕಿತ್ಸೆ

    ಪಟಾಕಿ ಸಿಡಿತದಿಂದ ಜನರ ಕಣ್ಣಿಗೆ ಕುತ್ತು – ಮಿಂಟೋ ಆಸ್ಪತ್ರೆಯಲ್ಲಿ 29 ಮಂದಿಗೆ ಚಿಕಿತ್ಸೆ

    ಬೆಂಗಳೂರು: ಎಲ್ಲೆಡೆ ದೀಪಾವಳಿ ಆಚರಣೆ (Deepawali Celebration) ಜೋರಾಗಿದ್ದು, ಅದರ ಜೊತೆಗೆ ಪಟಾಕಿ ಸಿಡಿತದಿಂದ ಅವಘಡಗಳು ಹೆಚ್ಚಾಗುತ್ತಿವೆ. ಬೆಂಗಳೂರು ನಗರದಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡವರ ಹೆಚ್ಚಾಗುತ್ತಿದ್ದು, ಮಿಂಟೋ ಆಸ್ಪತ್ರೆಯಲ್ಲಿ (Minto Hospital) 29 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪಟಾಕಿ ಹಚ್ಚುವವರಿಗಿಂತ ಅಕ್ಕಪಕ್ಕ ಇದ್ದವರಿಗೆ ಹೆಚ್ಚು ಗಾಯಗಳಾಗುತ್ತಿದೆ. ಮಿಂಟೋ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 15 ಪ್ರಕರಣ ದಾಖಲಾಗಿದ್ದು, ಒಟ್ಟು 29 ಜನ ಚಿಕಿತ್ಸೆ ಪಡೆದಿದ್ದಾರೆ. ಈಗಾಗಲೇ 8 ಮಂದಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಇನ್ನುಳಿದ 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯಸ್ಕರು 9 ಜನ ಸೇರಿದಂತೆ 9 ಮಕ್ಕಳು, ಅಕ್ಕಪಕ್ಕ ಇದ್ದ 8 ಜನ, ಪಟಾಕಿ ಹಚ್ಚಿದ 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರಿಗೆ ಸರ್ಜರಿ ಮಾಡಲಾಗಿದೆ.ಇದನ್ನೂ ಓದಿ: ಕಾರು ಮಾರಾಟ ಭಾರೀ ಕುಸಿತ – 7.90 ಲಕ್ಷ ವಾಹನಗಳು ಸಿದ್ದವಾಗಿದ್ದರೂ ಖರೀದಿಸುತ್ತಿಲ್ಲ ಜನ

    ಇಲ್ಲಿಯವರೆಗೂ ಮಿಂಟೋ ಆಸ್ಪತ್ರೆಯಲ್ಲಿ 29 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 14 ಜನರಿಗೆ ಗಂಭೀರ ಗಾಯ, 15 ಮಂದಿಗೆ ಸಣ್ಣ ಪುಟ್ಟ ಗಾಯಗೊಂಡಿದ್ದರು. ಕಣ್ಣಿಗೆ ಗಂಭೀರ ಗಾಯಗೊಂಡಿದ್ದ ನಾಲ್ವರಿಗೆ ಆಪರೇಷನ್ ಮಾಡಲಾಗಿದೆ.

    ಯಾವ್ಯಾವ ಪಟಾಕಿ ಸಿಡಿತದಿಂದ ಎಷ್ಟು ಮಂದಿಗೆ ಗಾಯ?
    ಬಿಜ್ಲಿ ಪಟಾಕಿ- 8
    ಫ್ಲವರ್ ಪಾಟ್ – 4
    ಲಕ್ಷ್ಮಿ ಪಟಾಕಿ- 2
    ಸ್ಕೈ ಶಾಟ್ ರಾಕೆಟ್-1
    ಇನ್ಸೆನ್ಸ್ ಸ್ಟಿಲ್-1
    ಬೆಳ್ಳುಳ್ಳಿ ಪಟಾಕಿ-1
    ಆಟೋಂಬಾಂಬ್-1
    ಡಬಲ್ ಶಾಟ್-1
    ಭೂ ಚಕ್ರ-1
    ರಾಕೆಟ್-1

    ಇನ್ನೂ ಸಿಲಿಕಾನ್ ಸಿಟಿಯಲ್ಲಿ ದೀಪಾವಳಿಯ ವೇಳೆ ಅನಧಿಕೃತವಾಗಿ ಅಂಗಡಿ ತೆರೆದು ಅಕ್ರಮವಾಗಿ ಪಟಾಕಿ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಸಂಜೆಯವರೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು ಒಟ್ಟು 56 ಪ್ರಕರಣಗಳನ್ನು ದಾಖಲಿಸಿದ್ದಾರೆ.

    ಯಾವ ವಿಭಾಗದಲ್ಲಿ ಎಷ್ಟು ಪ್ರಕರಣಗಳು?
    ಉತ್ತರ -9
    ದಕ್ಷಿಣ-4
    ಪೂರ್ವ-6
    ಈಶಾನ್ಯ-19
    ಆಗ್ನೇಯ, ವೈಟ್‌ಫೀಲ್ಡ್ -9 ಇದನ್ನೂ ಓದಿ: ಸ್ನೇಹಿತ ಅಂತ ನಂಬಿ ಮೊಬೈಲ್‌ ಕೊಟ್ಟ ಮಹಿಳೆ – ಆಕೆಯ ಬೆತ್ತಲೆ ವೀಡಿಯೋ ರೆಕಾರ್ಡ್‌ ಮಾಡಿ ಬ್ಲ್ಯಾಕ್‌ಮೇಲ್‌

     

  • ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರ ಮಹತ್ವವೇನು?

    ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರ ಮಹತ್ವವೇನು?

    ಹಿಂದೂಗಳ ಅತಿದೊಡ್ಡ ಹಬ್ಬವೆಂದರೆ ಅದು ಬೆಳಕಿನ ಹಬ್ಬ ದೀಪಾವಳಿ. ದೀಪಾವಳಿ ಹಬ್ಬದ ವೈಭವಕ್ಕೆ ಜನರು ಆಕರ್ಷಿತರಾಗುತ್ತಾರೆ ಅದರಲ್ಲಿ ಪಟಾಕಿ ಹಾರಿಸುವುದು ಒಂದು. ಅದು ಜನರಿಗೆ ದೀಪಾವಳಿಯನ್ನು ಮರುಕಳಿಸುವಲ್ಲಿ ಸಹಾಯಮಾಡುತ್ತದೆ. ಈ ಮೂಲಕ ದೀಪಾವಳಿಯ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.

    ದೀಪಾವಳಿ ಹಬ್ಬವು ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನವನ್ನು ಸಂಕೇತಿಸುತ್ತದೆ. ಇದು ಸಾವಿರಾರು ವರ್ಷಗಳ ಹಿಂದಿನ ಒಂದು ದೊಡ್ಡ ಆಚರಣೆಯಾಗಿದೆ. 14 ವರ್ಷಗಳ ವನವಾಸದ ನಂತರ ಶ್ರೀರಾಮನು ಅಯೋಧ್ಯೆಗೆ ಮರಳುವ ಸಂಕೇತವನ್ನು ಇದು ಸೂಚಿಸುತ್ತದೆ. ಗಿದೆ .

    ಹತ್ತು ತಲೆಯ ರಾಕ್ಷಸ ರಾಜ ರಾವಣನನ್ನು ಕೊಂದು ತನ್ನ ಪತ್ನಿ ಸೀತಾ ದೇವಿಯನ್ನು ಭಗವಾನ್ ರಾಮನು ವಿಜಯಶಾಲಿಯಾಗಿ ರಕ್ಷಿಸಿದನು . ಆದ್ದರಿಂದ ಈ ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯತನ ವಿಜಯವನ್ನು ಸಾಧಿಸುವುದನ್ನು ಪ್ರತಿನಿಧಿಸುತ್ತದೆ.

    ಈ ಹಬ್ಬದಂದು ಜನರು ನಡೆಸುವ ಪ್ರಮುಖ ಆಚರಣೆಯೆಂದರೆ ಲಕ್ಷ್ಮಿ ಪೂಜೆ. ಸಂಪತ್ತು ಮತ್ತು ಸಮೃದ್ಧಿಯ ದೈವಿಕ ಸಾಕಾರವಾದ ಲಕ್ಷ್ಮಿ ದೇವಿಯು ತನ್ನ ಭಕ್ತರ ಮನೆಗಳಿಗೆ ದಯೆಯಿಂದ ಭೇಟಿ ನೀಡುತ್ತಾಳೆ ಮತ್ತು ಭಕ್ತರಿಗೆ ಆಶೀರ್ವಾದ ಮತ್ತು ಅದೃಷ್ಟವನ್ನು ನೀಡುತ್ತಾಳೆ ಎಂದು ನಂಬಲಾಗಿದೆ.

    ಈ ಸಮಯದಲ್ಲಿ ಆಭರಣಗಳು ಮನೆ ಹಾಗೂ ರಸ್ತೆಗಳಲ್ಲಿ ಕೃತಕ ದೀಪಗಳು ಮತ್ತು ದೀಪಗಳಿಂದ ಬೆಳಗಿಸಲಾಗುತ್ತದೆ. ಹಬ್ಬಗಳ ಭಾಗವಾಗಿ ಪ್ರೀತಿಪಾತ್ರರ ಜೊತೆ ಪಟಾಕಿಗಳನ್ನು ಹಾರಿಸುವುದು ಇನ್ನೊಂದು ರೀತಿಯ ಸಂಭ್ರಮವಾಗಿದೆ.

    ಪಟಾಕಿ ಹಾರಿಸುವುದರ ಮಹತ್ವವೇನು?
    ಪಟಾಕಿ ಪ್ರದರ್ಶನ:
    ದೀಪಾವಳಿಯನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಇದು ಅಪಾರವಾದ ಸಂತೋಷ ಮತ್ತು ಉಲ್ಲಾಸವನ್ನು ತರುತ್ತದೆ. ಈ ಉತ್ಸಾಹಭರಿತ ಆಚರಣೆಯನ್ನು ವ್ಯಾಖ್ಯಾನಿಸುವ ಆಚರಣೆಗಳಲ್ಲಿ, ಪಟಾಕಿ ಹಾರಿಸುವುದು ಕೂಡ ಒಂದು. ರಾತ್ರಯಾಗುತ್ತಿದ್ದಂತೆ ಆಕಾಶವನ್ನು ವಿಭಿನ್ನ ಶಬ್ದಗಳಿಂದ, ಬಣ್ಣಗಳಿಂದ ಬೆಳಗುತ್ತದೆ.

    AI Photo
    AI Photo

    ದೀಪಾವಳಿಯ ಸಮಯದಲ್ಲಿ ಪಟಾಕಿಗಳನ್ನು ಹಾರಿಸುವುದು ಶತಮಾನಗಳ ಹಿಂದಿನ ಅಭ್ಯಾಸ. ಪಟಾಕಿ ಸಿಡಿಸುವುದರಲ್ಲಿ ಹಬ್ಬದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯನ್ನು ಆಳವಾಗಿ ಬೇರೂರಿದೆ. ಪಟಾಕಿಗಳು ಸಂಭ್ರಮದ ಸಂಕೇತವಾಗಿದೆ ಮತ್ತು ಆಚರಣೆಯ ಅವಿಭಾಜ್ಯ ಅಂಗವಾಗಿದೆ, ಕತ್ತಲೆಯ ಮೇಲೆ ಬೆಳಕಿನ ವಿಜಯ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದನ್ನು ಪ್ರತಿನಿಧಿಸುತ್ತದೆ.

    ಪಟಾಕಿಗಳ ಸಿಡಿಸುವಿಕೆಯು ಭವ್ಯವಾದ ಆಚರಣೆಯನ್ನು ಪುನರಾವರ್ತಿಸುತ್ತದೆ. ಆಕಾಶವು ಬೆಳಕು ಮತ್ತು ಬಣ್ಣದಿಂದ ಉರಿಯುತ್ತದೆ. ಇದು ಸಂಭ್ರಮದ ಸೂಚಕವಾಗಿದೆ,

    ಲಕ್ಷ್ಮಿದೇವಿಯನ್ನು ಸ್ವಾಗತ
    ದೀಪಾವಳಿಯು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಈ ರಾತ್ರಿಯಲ್ಲಿ ದೇವಿ ಭೂಮಿಯನ್ನು ಸುತ್ತುತ್ತಾಳೆ, ಮನೆಗಳಿಗೆ ಭೇಟಿ ನೀಡುತ್ತಾಳೆ ಮತ್ತು ಅವಳನ್ನು ಪ್ರಕಾಶಮಾನವಾದ ಬೆಳಕಿನಿಂದ ಸ್ವಾಗತಿಸಲಾಗುತ್ತದೆ. ಅದಕ್ಕಾಗಿ ಪಟಾಕಿಯನ್ನು ಹಾರಿಸಲಾಗುವುದು. ದೀಪಗಳನ್ನು ಬೆಳಗಿಸುವುದು ಮತ್ತು ಪಟಾಕಿಗಳನ್ನು ಹಚ್ಚುವುದು ಅವಳನ್ನು ಸ್ವಾಗತಿಸಲು ಮತ್ತು ಮುಂಬರುವ ವರ್ಷದಲ್ಲಿ ಸಂಪತ್ತು ಮತ್ತು ಸಮೃದ್ಧಿಗಾಗಿ ಅವಳ ಆಶೀರ್ವಾದವನ್ನು ಪಡೆಯಲು ಒಂದು ಮಾರ್ಗವಾಗಿದೆ.

    ಸಾಂಸ್ಕೃತಿಕ ಆಚರಣೆಗಳು
    ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಮೀರಿ, ದೀಪಾವಳಿಯ ಸಮಯದಲ್ಲಿ ಪಟಾಕಿಗಳನ್ನು ಸಿಡಿಸುವುದು ಒಂದು ಸಾಂಸ್ಕೃತಿಕ ರೂಢಿಯಾಗಿದೆ, ಕುಟುಂಬಗಳು ಮತ್ತು ಸಮುದಾಯಗಳು ಒಟ್ಟಾಗಿ ಸೇರಿ ದೀಪಾವಳಿಯನ್ನು ಆಚರಿಸಲು ಒಂದು ಮಾರ್ಗವಾಗಿದೆ. ಆಕಾಶದಲ್ಲಿ ವರ್ಣರಂಜಿತ ಪ್ರದರ್ಶನಗಳು ಎಲ್ಲಾ ವಯಸ್ಸಿನ ಜನರನ್ನು ಒಟ್ಟಿಗೆ ತರುತ್ತವೆ, ಸಮುದಾಯಗಳ ನಡುವೆ ಉತ್ಸಾಹ ಮತ್ತು ಏಕತೆಯ ಭಾವವನ್ನು ಸೃಷ್ಟಿಸುತ್ತವೆ.

  • ಬೆಳಕಿನ ಹಬ್ಬವನ್ನು ಕಣ್ತುಂಬಿಕೊಳ್ಳಬೇಕಾ? ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ!

    ಬೆಳಕಿನ ಹಬ್ಬವನ್ನು ಕಣ್ತುಂಬಿಕೊಳ್ಳಬೇಕಾ? ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ!

    ದೀಪಾವಳಿಯನ್ನು ಸಾಮಾನ್ಯವಾಗಿ “ಬೆಳಕುಗಳ ಹಬ್ಬ” ಎಂದು ಕರೆಯಲಾಗುತ್ತದೆ, ಇದು ಭಾರತದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಉತ್ಸಾಹ ಮತ್ತು ವಿಜೃಂಭಣೆಯೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಧರ‍್ಮಿಕವಾಗಿ ಹಾಗೂ ಭೌಗೋಳಿಕವಾಗಿ ಈ ಹಬ್ಬವು ವಿಭನ್ನತೆಯನ್ನು ಹೊಂದಿದೆ.

    ಲಂಕಾದ ರಾಕ್ಷಸ ರಾಜನಾದ ರಾವಣನ ಮೇಲೆ ವಿಜಯದ ನಂತರ ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗಿದ ದಿನವನ್ನು ದೀಪಾವಳಿಯಾಗಿ ಆಚರಿಸಲಾಗುತ್ತದೆ. ದೇಶಾದ್ಯಂತ ಹಬ್ಬದ ಆಚರಣೆಯು ವೈವಿಧ್ಯತೆಯಿಂದ ಕೂಡಿದ್ದು, ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಪತ್ರಿಯೊಂದು ಸ್ಥಳದಲ್ಲಿಯೂ ಮೆರಗನ್ನು ಹೆಚ್ಚಿಸುವ ಹಬ್ಬ ಇದಾಗಿದೆ.

    ಇಡೀ ರಾಷ್ಟ್ರವು ಉತ್ಸಾಹದಿಂದ ದೀಪಾವಳಿಯನ್ನು ಆಚರಿಸುತ್ತಿರುವಾಗ, ಕೆಲವು ಪವಿತ್ರ ಸ್ಥಳಗಳಲ್ಲಿ ವಿಶೇಷವಾಗಿ ರೋಮಾಂಚಕ ವಾತಾವರಣದೊಂದಿಗೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಾರತದ ಕೆಲವು ಸ್ಥಳಗಳಲ್ಲಿ ಮರೆಯಲಾಗದ ದೀಪಾವಳಿಯ ಅನುಭವವನ್ನು ನೀಡುತ್ತವೆ. ಬೆಳಕಿನ ಹಬ್ಬ ದೀಪಾವಳಿಯಲ್ಲಿ ಬೆಳಕೆಂಬ ಭರವಸೆಯೊಂದಿಗೆ ಕತ್ತಲೆಯ ಭಯವನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

    ದೇಶದಲ್ಲಿ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವ ಕೆಲವು ಪ್ರಮುಖ ನಗರಗಳು ಇಲ್ಲಿವೆ.
    ಅಯೋಧ್ಯೆ:
    ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿನ ದೀಪಾವಳಿ ನೋಡುತ್ತಲೇ ಅದರಲ್ಲಿ ತಲ್ಲೀನರಾಗಿ ಬಿಡುತ್ತೇವೆ.
    ಲಕ್ಷಾಂತರ ಮಣ್ಣಿನ ದೀಪಗಳು, ಮೇಣದಬತ್ತಿಗಳು ಪ್ರತಿ ಮೂಲೆಯನ್ನು ಬೆಳಗಿಸುವ ಮೂಲಕ ನಗರವನ್ನು ಪ್ರಕಾಶಮಾನವಾಗಿಸುತ್ತದೆ. ಭವ್ಯವಾದ ರಾಮ್ ಲೀಲಾ ಮರ‍್ತಿಯು ಪ್ರವಾಸಿಗರನ್ನು ರ‍್ಕಷಿಸುತ್ತದೆ. ದೀಪಗಳಿಂದ ಸೃಷ್ಟಿಯಾದ ಮನಮೋಹಕ ದೃಶ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಶ್ರೀರಾಮನು ತನ್ನ ವನವಾಸದಿಂದ ಹಿಂದಿರುಗಿದ ಮತ್ತು ಅವನ ಪಟ್ಟಾಭಿಷೇಕವನ್ನು ಗುರುತಿಸುವಲ್ಲಿ ಮಹತ್ವ ಅಡಗಿದೆ.

    ವಾರಣಾಸಿ:
    ಭಾರತದ ಆಧ್ಯಾತ್ಮಿಕ ರಾಜಧಾನಿ ವಾರಣಾಸಿಯಲ್ಲಿ ದೀಪಾವಳಿಯು ವಿಭಿನ್ನ ಅನುಭವವಾಗಿದೆ. ಗಂಗಾ ನದಿಯ ಉದ್ದಕ್ಕೂ ಇರುವ ಘಾಟ್‌ಗಳು ದೀಪಗಳಿಂದ ಮಿನುಗುತ್ತಿರುತ್ತವೆ. ಭಕ್ತರು ಪ್ರರ‍್ಥಿಸುತ್ತಾ, ಸಾವಿರಾರು ಎಣ್ಣೆ ದೀಪಗಳನ್ನು ಬೆಳಗಿಸುತ್ತಾರೆ. ಗಾಳಿಯು ಪವಿತ್ರ ಸ್ತೋತ್ರಗಳೊಂದಿಗೆ ಪ್ರತಿಧ್ವನಿಸುತ್ತದೆ. ವಾತಾವರಣವು ಆಧ್ಯಾತ್ಮಿಕ ಶಕ್ತಿಯಿಂದ ತುಂಬಿಕೊಂಡಿರುತ್ತದೆ. ವಾರಣಾಸಿಯ ದೀಪಾವಳಿಯು ಅದರ ಆಧ್ಯಾತ್ಮಿಕ ಸಾರಕ್ಕೆ ಬಹಳ ಮಹತ್ವದ್ದಾಗಿದೆ. ಏಕೆಂದರೆ ಈ ಸಮಯದಲ್ಲಿ ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡುವುದು ಪಾಪಗಳನ್ನು ತೊಳೆದು ಆತ್ಮವನ್ನು ಶುದ್ಧಗೊಳಿಸುತ್ತದೆ ಎಂದು ನಂಬಲಾಗಿದೆ.

    ಜೈಪುರ:
    ದೀಪಾವಳಿಯ ಸಮಯದಲ್ಲಿ ಜೈಪುರ ರಾಜ ವೈಭವದಿಂದ ಕಂಗೊಳಿಸುತ್ತಿದೆ. ಇಡೀ ನಗರವು ರೋಮಾಂಚಕ ದೀಪಗಳು ಮತ್ತು ಅಲಂಕಾರದಿಂದ ತುಂಬಿ ತುಳುಕುತ್ತಿರುತ್ತದೆ. ಸಿಟಿ ಪ್ಯಾಲೇಸ್, ಹವಾ ಮಹಲ್ ಮತ್ತು ವಿವಿಧ ಕೋಟೆಗಳು ಮತ್ತು ಅರಮನೆಗಳು ವಿಭಿನ್ನ ದೃಶ್ಯವನ್ನು ಪರ‍್ಶಿಸುತ್ತದೆ. ಪಟಾಕಿಗಳು ರಾತ್ರಿಯ ಆಕಾಶವನ್ನು ಬೆಳಗಿಸಿ, ವೈಭವವನ್ನು ಹೆಚ್ಚಿಸುತ್ತವೆ. ಜೈಪುರದ ದೀಪಾವಳಿಯು ರಾಜಸ್ಥಾನದ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಆಚರಿಸುವ ರಾಜಮನೆತನದ ಮೌಲ್ಯವನ್ನು ಬಿತ್ತರಿಸುತ್ತದೆ.

     ಅಮೃತಸರ:
    ಸಿಖ್ ಧರ್ಮದ ಆಧ್ಯಾತ್ಮಿಕ ಹೃದಯವೆಂದರೆ ಅದು ಅಮೃತಸರ. ಅತ್ಯಂತ ಪವಿತ್ರವಾದ ಸಿಖ್ ದೇಗುಲವಾದ ಗೋಲ್ಡನ್ ಟೆಂಪಲ್, ಅಮೃತ ಸರೋವರದಲ್ಲಿ ದೀಪಗಳ ಪ್ರತಿಬಿಂಬ ಅದ್ಭುತವಾಗಿ ಪ್ರಕಾಶಿಸುತ್ತಿರುತ್ತದೆ. ಸಿಖ್ಖರು ಪ್ರಾರ್ಥನೆ, ಸಮುದಾಯದ ಊಟದಲ್ಲಿ ತೊಡಗಿ, ಉತ್ಸಾಹದಿಂದ ಹಬ್ಬವನ್ನು ಆಚರಿಸುತ್ತಾರೆ. ಗುರು ಹರಗೋಬಿಂದ್ ಅವರನ್ನು ಸೆರೆವಾಸದಿಂದ ಬಿಡುಗಡೆಗೊಳಿಸಿದ ದಿನವನ್ನು ದೀಪಾವಳಿಯನ್ನಾಗಿ ಆಚರಿಸುತ್ತಾರೆ. ಅದಕ್ಕೆ ದೀಪಾಚಳಿ ಇಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಇದು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ತೋರಿಸುತ್ತದೆ.

    ಉದಯಪುರ:
    ಸರೋವರಗಳ ನಗರವಾದ ಉದಯಪುರವು ದೀಪಾವಳಿಯ ಸಮಯದಲ್ಲಿ ಪ್ರಶಾಂತ ವಾತಾವರಣವನ್ನು ಹೊಂದಿರುತ್ತದೆ. ಅದ್ಭುತವಾದ ಅರಮನೆಗಳು ಮತ್ತು ಪ್ರಶಾಂತ ಸರೋವರಗಳು ಭವ್ಯವಾದ ಆಚರಣೆಗಳಿಗೆ ಸಂಭ್ರಮಿಸುತ್ತಿರುತ್ತದೆ. ಸಿಟಿ ಪ್ಯಾಲೇಸ್ ಮತ್ತು ಪಿಚೋಲಾ ಸರೋವರವು ಸುಂದರವಾಗಿ ಪ್ರಕಾಶಿಸಲ್ಪಟ್ಟಿರುತ್ತದೆ. ಇದು ಮಾಂತ್ರಿಕ ವಾತಾವರಣವನ್ನು ಸೃಷ್ಟಿಸುವುದಲ್ಲದೇ ಉದಯಪುರದಲ್ಲಿ ದೀಪಾವಳಿಯು ಹಬ್ಬದ ರಾಜಮನೆತನದ ಆಕರ್ಷಣೆಯನ್ನು ಸೂಚಿಸುತ್ತದೆ. ಇದು ರಾಜಮನೆತನದ ಸಾರವನ್ನು ಎತ್ತಿಹಿಡಿಯುತ್ತದೆ.

    ಕೋಲ್ಕತ್ತಾ:
    ದೀಪಾವಳಿಯನ್ನು ವಿಶೇಷವಾಗಿ ಹೂಗ್ಲಿ ನದಿಯ ದಡದಲ್ಲಿ ವೈಭವದಿಂದ ಆಚರಿಸಲಾಗುತ್ತದೆ. ಅಲಂಕಾರಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಅದ್ಭುತ ಮೆರವಣಿಗೆಗಳು ನಗರವನ್ನು ಶಕ್ತಿ ಮತ್ತು ಬಣ್ಣದಿಂದ ವಿಜೃಂಭಿಸುತ್ತದೆ. ದೀಪಾವಳಿಯ ಸಂರ‍್ಭದಲ್ಲಿ ಹೌರಾ ಸೇತುವೆ ಮತ್ತು ವಿಕ್ಟೋರಿಯಾ ಸ್ಮಾರಕವು ನೋಡಲೇಬೇಕಾದ ಆಕರ್ಷಣೆಯ ಸ್ಥಳಗಳು. ಕೋಲ್ಕತ್ತಾದಲ್ಲಿ ದೀಪಾವಳಿಯು ಸಂಸ್ಕೃತಿಗಳ ಏಕತೆಯನ್ನು ಸೂಚಿಸುತ್ತದೆ, ವಿವಿಧ ಹಿನ್ನೆಲೆಯ ಜನರು ಒಟ್ಟಾಗಿ ಹಬ್ಬವನ್ನು ಸಂತೋಷ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ.

    ದೀಪಾವಳಿಯು ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುವ ಹಬ್ಬವಾಗಿದೆ. ದೀಪಾವಳಿಯ ಸಮಯದಲ್ಲಿ ಈ ನಗರಗಳಿಗೆ ಭೀಟಿ ನೀಡುವುದು ಮರೆಯಲಾಗದ ಸಾಂಸ್ಕೃತಿಕ ಅನುಭವವನ್ನು ನೀಡುತ್ತದೆ.