Tag: Deepawali

  • ದೀಪಾವಳಿ 2025 – ನಿಮ್ಮ ನೆಚ್ಚಿನವರಿಗೆ ವಿಶಿಷ್ಟ ಉಡುಗೊರೆ ನೀಡಿ ಮನ-ಮನೆ ಬೆಳಗಿಸಿ

    ದೀಪಾವಳಿ 2025 – ನಿಮ್ಮ ನೆಚ್ಚಿನವರಿಗೆ ವಿಶಿಷ್ಟ ಉಡುಗೊರೆ ನೀಡಿ ಮನ-ಮನೆ ಬೆಳಗಿಸಿ

    ಲ್ಲೆಡೆಯೂ ದೀಪಾವಳಿ ಸಂಭ್ರಮ ಮನೆಮಾಡಿದೆ. ಇದು ಕೇವಲ ಹಬ್ಬವಲ್ಲ. ಬೆಳಕು, ನಗು ಮತ್ತು ಸಮೃದ್ಧಿಯ ಆಚರಣೆ. ನಿಮ್ಮ ಪ್ರೀತಿಯನ್ನು ಇನ್ನೊಬ್ಬರಿಗೆ ಹಂಚುತ್ತಾ ಪ್ರೀತಿಯ ಬೆಳಕನ್ನು ಪಸರಿಸುವುದು ಈ ಹಬ್ಬದ ಉದ್ದೇಶ. ಈ ಶುಭ ಸಂದರ್ಭದಲ್ಲಿ ನಿಮ್ಮ ನೆಚ್ಚಿನವರಿಗೆ ನಿಮ್ಮ ಪ್ರೀತಿಯ ಬೆಳಕನ್ನು ನೀಡಿ, ಅವರ ಮನ-ಮನೆ ಬೆಳಗುವಂತೆ ಮಾಡಿ.

    ಹಿಂದಿನ ಕಾಲದಲ್ಲಿ ಹಬ್ಬದ ಸಂದರ್ಭದಲ್ಲಿ ಸಿಹಿತಿನಿಸುಗಳನ್ನು ನೀಡುವ ಮೂಲಕ ತಮ್ಮ ಪ್ರೀತಿ, ಕೃತಜ್ಞತಾ ಭಾವವನ್ನು ತೋರ್ಪಡಿಸುತ್ತಿದ್ದರು. ಆದರೆ ಇದೀಗ ಸಿಹಿತಿನಿಸುಗಳನ್ನು ನೀಡುವುದಕ್ಕಿಂತ ಹೆಚ್ಚಾಗಿ ಉಡುಗೊರೆಗಳನ್ನು ನೀಡುವುದು ಒಂದು ಆಚರಣೆಯಾಗಿ ಬೆಳೆದುಬಿಟ್ಟಿದೆ. ನೀಡುವ ಉಡುಗೊರೆಗಳು ಅರ್ಥಪೂರ್ಣವಾಗಿ, ವಿಶೇಷವಾಗಿರಬೇಕು ಎನ್ನುವುದು ಎಲ್ಲರ ಆಸೆಯಾಗಿದೆ.

    ಉಡುಗೊರೆ ನೀಡುವುದು ಸುಲಭ. ಆದರೆ ದೀಪಾವಳಿಗೆ ಯಾವ ಉಡುಗೊರೆ ನೀಡಬೇಕು ಎನ್ನುವುದು ದೊಡ್ಡ ಪ್ರಶ್ನೆಯಾಗಿ ಉಳಿದುಬಿಡುತ್ತದೆ. ಹೀಗಾಗಿ ನಿಮ್ಮ ನೆಚ್ಚಿನವರಿಗೆ ಇಷ್ಟವಾಗುವ ಹಾಗೂ ವಿಶೇಷವಾಗಿಯೂ ಎನ್ನಿಸುವ ಈ ಕೆಲವು ಉಡುಗೊರೆಗಳನ್ನು ನೀಡಿ. ಈ ದೀಪಾವಳಿಯನ್ನು ಸಂಭ್ರಮಿಸಿ.

    ಗೃಹಾಲಂಕಾರ ವಸ್ತುಗಳು:
    ದೀಪಾವಳಿ ಎಂದರೆ ಮನೆ ಬೆಳಗಿಸುವ ದೀಪಗಳ ಹಬ್ಬ. ಈ ಸಂದರ್ಭದಲ್ಲಿ ಮನೆಯ ಸೌಂದರ್ಯ ಹೆಚ್ಚಿಸುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿ. ಅಲಂಕಾರಿಕ ದೀಪಗಳು, ಮೇಣದ ಬತ್ತಿಗಳು, ಗೋಡೆಯ ಮೇಲಿನ ಚಿತ್ರಣಗಳು ಮತ್ತು ಶೋಕೇಸ್ ಸಾಮಗ್ರಿಗಳು ಮನೆಯ ಅಂದವನ್ನು ದ್ವಿಗುಣಗೊಳಿಸುತ್ತವೆ. ಜೊತೆಗೆ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಲ್ಪಟ್ಟ ವಸ್ತುಗಳನ್ನು ನೀಡಬಹುದು.

    ಕಸ್ಟಮೈಸ್ ಮಾಡಿದ ಉಡುಗೊರೆಗಳು:
    ನಿಮ್ಮ ಪ್ರೀತಿಪಾತ್ರರಿಗಾಗಿ ಕೆಲವು ಕಸ್ಟಮೈಸ್ ಮಾಡಿದ ಉಡುಗೊರೆಗಳನ್ನು ನೀಡಿ. ಕಸ್ಟಮೈಸ್ ಎಂದರೆ ಅವರ ಫೋಟೋ ಇರುವ ಫ್ರೇಮ್, ನಾಮಫಲಕ, ಫೋಟೋ ಇರುವ ದಿಂಬು ಅಥವಾ ಕ್ಯಾಲೆಂಡರ್ ಇವುಗಳು ಹೆಚ್ಚು ಆಕರ್ಷಣೀಯವಾಗಿರುತ್ತದೆ. ಅಲ್ಲದೇ ಈ ಉಡುಗೊರೆಗಳೊಂದಿಗೆ ಹೆಚ್ಚು ಭಾವನಾತ್ಮಕ ಸಂಬಂಧ ಬೆಳೆಯುತ್ತದೆ.

    ಸ್ವಆರೈಕೆ ಮಾಡುವ ವಸ್ತುಗಳು:
    ಕೆಲವೊಮ್ಮೆ ಸ್ವಆರೈಕೆ ವಸ್ತುಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಪ್ರೀತಿಯಿಂದ ಕೆಲವು ಆರೋಗ್ಯಕ್ಕೆ ಒಳ್ಳೆಯದಾಗುವ ಕೆಲವು ವಸ್ತುಗಳನ್ನು ನೀಡಿ. ಸ್ಕಿನ್ ಕೇರ್, ಹೇರ್ ಕೇರ್ ಸೇರಿದಂತೆ ಡ್ರೈಫ್ರೂಟ್ಸ್‌ ಹ್ಯಾಂಪರ್‌ಗಳನ್ನು ನೀಡಬಹುದು.

    ಬಟ್ಟೆಗಳು:
    ದೀಪಾವಳಿ ಹಬ್ಬಕ್ಕಾಗಿ ಬಟ್ಟೆ ಕೊಡಿಸುವುದು ಇನ್ನೊಂದು ರೀತಿಯ ಉಡುಗೊರೆ. ಬಟ್ಟೆಯೊಂದಿಗೆ ನಮ್ಮ ಅಂದವನ್ನು ಹೆಚ್ಚಿಸುವ ಕರಕುಶಲ ಆಭರಣಗಳು, ಕೈಚೀಲಗಳು ಅಥವಾ ಕೈಗಡಿಯಾರಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ.

    ಪರಿಸರ ಸ್ನೇಹಿ ಉಡುಗೊರೆಗಳು
    ಇನ್ನೂ ಕೆಲವರು ಪರಿಸರ ಸ್ನೇಹಿ ವಸ್ತುಗಳನ್ನು ಇಷ್ಟಪಡುತ್ತಾರೆ. ಸಸಿಗಳು, ಅಲಂಕಾರಿಕ ವಸ್ತುಗಳು ಮತ್ತು ಅಡುಗೆಮನೆ ವಸ್ತುಗಳು, ಮಡಕೆಯಂತಹ ಅಲಂಕಾರಿಕ ವಸ್ತುಗಳನ್ನು ನೀಡಬಹುದು. ಇವುಗಳು ಆನಂದವನ್ನು ನೀಡುವುದರ ಜೊತೆಗೆ ಪರಿಸರ ಸ್ನೇಹಿಯಾಗಿಯೂ ಇರುತ್ತದೆ.

    ಸಿಹಿತಿಂಡಿ, ಚಾಕ್‌ಲೇಟ್‌ಗಳು:
    ಹಬ್ಬದ ಸಂದರ್ಭದಲ್ಲಿ ಎಲ್ಲರೂ ಸಿಹಿ ತಿನ್ನಲು ಇಷ್ಟಪಡುತ್ತಾರೆ. ಹೀಗಾಗಿ ನಿಮ್ಮ ಪ್ರೀತಿಪಾತ್ರರಿಗೆ ಸಿಹಿತಿಂಡಿ ಹಾಗೂ ಚಾಕ್‌ಲೇಟ್ ಬಾಕ್ಸ್ಗಳು ನೀಡಿ, ಲಡ್ಡು, ಕಾಜು ಕಟ್ಲೆಟ್, ಬರ್ಫಿ ಸೇರಿದಂತೆ ಇನ್ನಿತರ ಸಿಹಿತಿಂಡಿಗಳನ್ನು ನೀಡಬಹುದು. ಕಸ್ಟಮೈಸ್ ಮಾಡಿದ ಪ್ಯಾಕೇಜಿಂಗ್ ಹಾಗೂ ಗಿಫ್ಟ್ ಹ್ಯಾಂಪರ್‌ಗಳನ್ನು ನೀಡುವ ಮೂಲಕ ಉಡುಗೊರೆಗಳಿಗೆ ವಿಶೇಷವಾಗಿಸಬಹುದು.

    ಈ ಉಡುಗೊರೆಗಳನ್ನು ನೀಡುವ ಮೂಲಕ ನೀವು ನಿಮ್ಮ ನೆಚ್ಚಿನವರೊಂದಿಗೆ ಹಬ್ಬ ಆಚರಿಸಿ, ಸಂಭ್ರಮ ದ್ವಿಗುಣಗೊಳಿಸಿ.

  • ಶ್ರೀರಾಮ ಘನತೆಯ ಸಂಕೇತ, ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿ – ದೀಪಾವಳಿಗೆ ದೇಶವಾಸಿಗಳಿಗೆ ಪತ್ರ ಬರೆದ ಮೋದಿ

    ಶ್ರೀರಾಮ ಘನತೆಯ ಸಂಕೇತ, ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿ – ದೀಪಾವಳಿಗೆ ದೇಶವಾಸಿಗಳಿಗೆ ಪತ್ರ ಬರೆದ ಮೋದಿ

    ನವದೆಹಲಿ: ಭಗವಾನ್ ಶ್ರೀರಾಮ ಘನತೆಯ ಸಂಕೇತ, ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿ, ಶ್ರೀರಾಮ ಕೇವಲ ಧಾರ್ಮಿಕ ಸಂಕೇತವಲ್ಲ, ಧರ್ಮ ಮತ್ತು ನ್ಯಾಯದ ಮಾರ್ಗದರ್ಶಕ ಎಂದು ಪ್ರಧಾನಿ ನರೇಂದ್ರ ಮೋದಿ  (PM Modi) ಬಣ್ಣಿಸಿದ್ದಾರೆ.

    ದೀಪಾವಳಿ ಹಬ್ಬದ ನಿಮಿತ್ಯ ದೇಶದ ಜನರಿಗೆ ಪತ್ರ ಬರೆದ ಅವರು, ಹಬ್ಬದ ಶುಭಾಶಯ ಕೋರಿದರು. ಶ್ರೀರಾಮನು ಧರ್ಮವನ್ನು ಹೇಗೆ ಅನುಸರಿಸಬೇಕು ಮತ್ತು ಅನ್ಯಾಯದ ವಿರುದ್ಧ ದೃಢವಾಗಿ ನಿಲ್ಲಬೇಕು ಎಂಬುದನ್ನು ನಮಗೆ ಕಲಿಸುತ್ತಾನೆ ಎಂದಿದ್ದಾರೆ. ಇದನ್ನೂ ಓದಿ: ಕೋಮುಹತ್ಯೆ, ಹಿಂಸಾಚಾರ ಹತ್ತಿಕ್ಕಲು ಸ್ಪೆಷಲ್‌ ಆಕ್ಷನ್‌ ಫೋರ್ಸ್‌ ರಚನೆ: ಸಿದ್ದರಾಮಯ್ಯ

    ಇದೇ ವೇಳೆ `ಆಪರೇಷನ್ ಸಿಂಧೂರ’ವನ್ನು ಉಲ್ಲೇಖಿಸಿದ ಅವರು, ಶ್ರೀರಾಮನ ಹಾಗೇ ಭಾರತವು ಧರ್ಮವನ್ನು ರಕ್ಷಿಸಿತು ಮತ್ತು ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಂಡಿತು. ಈ ಕಾರ್ಯಾಚರಣೆ ಭಾರತದ ಶಕ್ತಿ, ನೈತಿಕತೆ ಮತ್ತು ಸಂಕಲ್ಪವನ್ನು ಸೂಚಿಸುತ್ತದೆ. ದೇಶವಾಸಿಗಳು ಸದಾಚಾರ, ಸತ್ಯ ಮತ್ತು ನ್ಯಾಯದ ಮಾರ್ಗವನ್ನು ಅನುಸರಿಸಬೇಕೆಂದು ಅವರು ಕರೆ ನೀಡಿದ್ದಾರೆ.

    ನವರಾತ್ರಿಯ ಮೊದಲ ದಿನದಂದು ಕಡಿಮೆ ಜಿಎಸ್‌ಟಿ ದರಗಳನ್ನು ಜಾರಿಗೆ ತರಲಾಗಿದ್ದು, ಜಿಎಸ್‌ಟಿ ಉಳಿತಾಯ ಉತ್ಸವದಲ್ಲಿ ದೇಶವಾಸಿಗಳ ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸುತ್ತಿದ್ದಾರೆ. ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಜಗತ್ತಿನಲ್ಲಿ, ನಮ್ಮ ಭಾರತವು ಸ್ಥಿರತೆ ಮತ್ತು ಸೂಕ್ಷ್ಮತೆಯ ಸಂಕೇತವಾಗಿ ಹೊರಹೊಮ್ಮಿದೆ. ಮುಂಬರುವ ದಿನಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಲಿದೆ. ಅಭಿವೃದ್ಧಿಹೊಂದಿದ ಮತ್ತು ಸ್ವಾವಲಂಬಿ ಭಾರತದತ್ತ ಈ ಪ್ರಯಾಣದಲ್ಲಿ ನಾಗರಿಕರಾಗಿ ನಮ್ಮ ಮುಖ್ಯ ಜವಾಬ್ದಾರಿ ದೇಶದಕ್ಕಾಗಿ ನಮ್ಮ ಕರ್ತವ್ಯ ನಿರ್ವಹಿಸುವುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಏಷ್ಯಾ ಕಪ್‌ ಟ್ರೋಫಿಯನ್ನ ಭಾರತಕ್ಕೆ ಹಸ್ತಾಂತರಿಸಿ – ಮೊಹ್ಸಿನ್‌ ನಖ್ವಿಗೆ ಬಿಸಿಸಿಐ ವಾರ್ನಿಂಗ್‌

  • ದೇವರ ಮಕ್ಕಳ ಜೊತೆ ದೀಪಾವಳಿ ಆಚರಿಸಿದ ನಟಿ ಸಮಂತಾ

    ದೇವರ ಮಕ್ಕಳ ಜೊತೆ ದೀಪಾವಳಿ ಆಚರಿಸಿದ ನಟಿ ಸಮಂತಾ

    ಟಾಲಿವುಡ್ ನಟಿ ಸಮಂತಾ ರುತ್‌ಪ್ರಭು (Samantha Ruth Prabhu) ಸಿನಿಮಾಗಳ ಜೊತೆ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬ ಹಾಗೂ ಹಬ್ಬದ ಆಚರಣೆ ವೇಳೆ ಎನ್‌ಜಿಓಗಳಿಗೆ ಭೇಟಿ ನೀಡಿ, ಅರ್ಥಪೂರ್ಣ ಆಚರಣೆ ಮಾಡುತ್ತಾರೆ. ಇದೀಗ ದೀಪಾವಳಿ ಹಬ್ಬವನ್ನ ಅನಾಥಾಶ್ರಮದ ಮಕ್ಕಳ ಜೊತೆ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ.

    ದೇವರ ಮಕ್ಕಳ ಜೊತೆ ದೀಪಾವಳಿ ಆಚರಿಸಿರುವ ನಟಿ ಸಮಂತಾ, ಸರಳವಾಗಿ ಅನಾಥಾಶ್ರಮದಲ್ಲಿ ದೀಪ ಹಚ್ಚಿ ದೀಪಾವಳಿ ಆಚರಿಸಿದ್ದಾರೆ. ಮಕ್ಕಳ ಜೊತೆ ಕೆಲಹೊತ್ತು ಕಾಲ ಕಳೆದಿದ್ದಾರೆ. ಈ ವೇಳೆ ದೀಪಾವಳಿ ಉಡುಗೊರೆ ನೀಡಿ ಅವ್ರ ಮುಖದಲ್ಲಿ ಸಂತಸ ಮೂಡಲು ಕಾರಣರಾಗಿದ್ದಾರೆ. ವಿಚ್ಛೇದನದ ನಂತರ ಸಾಕಷ್ಟು ಸವಾಲುಗಳನ್ನ ಎದುರಿಸುತ್ತಿರುವ ಸಮಂತಾ ಈಗ ಇಂಡಿಪೆಂಡೆಂಟ್ ಉಮೆನ್.ಇದನ್ನೂ ಓದಿ: ‘ಜೈ’ ಚಿತ್ರದ ‘ಲವ್ ಯು’ ಹಾಡು ರಿಲೀಸ್ ಮಾಡಿದ ರಿಯಲ್ ಲವ್ ಬರ್ಡ್ಸ್

    ಕಳೆದ ವರ್ಷ ತಂದೆಯನ್ನೂ ಕಳೆದುಕೊಂಡಿರುವ ಸಮಂತಾ, ಅನಾರೋಗ್ಯದ ವಿರುದ್ಧ ನಿತ್ಯ ಹೋರಾಟ ನಡೆಸಿದ್ದಾರೆ. ಸ್ಪೂರ್ತಿ ಫೌಂಡೇಶನ್, ಹ್ಯಾಪಿ ಹೋಮ್ಸ್ ಹಾಗೂ ಡಿಸೈರ್ ಸೊಸೈಟಿ ಎನ್‌ಜಿಓಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಮಂತಾ ಪ್ರತಿ ವರ್ಷವೂ ಅತಿಥಿಯಾಗಿ ಬಂದು ಮಕ್ಕಳ ಜೊತೆ ದೀಪಾವಳಿ ಆಚರಣೆ ಮಾಡುತ್ತಾರೆ. ಅದರಂತೆ ಈ ವರ್ಷವೂ ಹಬ್ಬದ ಆಚರಣೆ ಮಾಡಿದ್ದಾರೆ.

  • ದೀಪಾವಳಿಗೆ ಮೊಸರು ಕೋಡುಬಳೆ ಮಾಡಿ, ಆನಂದಿಸಿ

    ದೀಪಾವಳಿಗೆ ಮೊಸರು ಕೋಡುಬಳೆ ಮಾಡಿ, ಆನಂದಿಸಿ

    ದೀಪಾವಳಿ ಹಬ್ಬ ಶುರುವಾಗಿದೆ. ಎಲ್ಲರ ಮನೆಯಲ್ಲೂ ದೀಪ ಬೆಳಗುತ್ತಾ, ದೀಪದ ಜೊತೆಗೆ ಸಂತೋಷವು ಬೆಳಗುತ್ತಿದೆ. ಈ ಸಂತೋಷದಲ್ಲಿ ಎಲ್ಲರ ಬಾಯಿಯು ಸಿಹಿಯೊಂದಿಗೆ ಸಂಭ್ರಮಿಸುತ್ತಿದೆ. ಅದರಂತೆ ಚೂರು ಸಿಹಿಯೊಂದಿಗೆ ಚೂರು ಖಾರವು ಬೇಕು. ಅದಕ್ಕೆ ದೀಪಾವಳಿಯಂದು ಅತಿಥಿಗಳಿಗೆ ಮೊಸರು ಕೋಡುಬಳೆ ಮಾಡಿಕೊಡಿ. ತುಂಬಾ ಇಷ್ಟವಾಗುತ್ತೆ.

    ಬೇಕಾಗುವ ಪದಾರ್ಥಗಳು;
    ಅಕ್ಕಿ ಹಿಟ್ಟು
    ಗಟ್ಟಿ ಮೊಸರು
    ಹಸಿ ತೆಂಗಿನಕಾಯಿ ತುರಿ
    ಜೀರಿಗೆ
    ಹಸಿ ಮೆಣಸಿನಕಾಯಿ
    ಕರಿಬೇವು
    ಇಂಗು
    ಉಪ್ಪು
    ಎಣ್ಣೆ

    ಮಾಡುವ ವಿಧಾನ;
    ಮೊದಲು, ಒಂದು ಪಾತ್ರೆಯಲ್ಲಿ ಗಟ್ಟಿ ಮೊಸರು, ಹಸಿ ತೆಂಗಿನಕಾಯಿ ತುರಿ, ಜೀರಿಗೆ, ಹಸಿ ಮೆಣಸಿನಕಾಯಿ ಪೇಸ್ಟ್ , ಕರಿಬೇವಿನ ಎಲೆಗಳು, ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಅದು ಸ್ವಲ್ಪ ಬಿಸಿಯಾದ ನಂತರ, ಅಕ್ಕಿ ಹಿಟ್ಟನ್ನು ನಿಧಾನವಾಗಿ ಸೇರಿಸುತ್ತಾ ಗಂಟುಗಳಾಗದಂತೆ ಕಲಸಿ. ಹಿಟ್ಟಿನ ಮಿಶ್ರಣವು ಗಟ್ಟಿಯಾಗುವವರೆಗೂ ಬೇಯಿಸಿ. ನಂತರ ಒಲೆ ಆರಿಸಿ, ಪಾತ್ರೆಗೆ ಮುಚ್ಚಳ ಹಾಕಿ ಹತ್ತು ನಿಮಿಷ ಹಾಗೆಯೇ ಬಿಡಿ.

    ಹಿಟ್ಟು ಸ್ವಲ್ಪ ತಣ್ಣಗಾದ ನಂತರ, ಕೈಯಿಂದ ಚೆನ್ನಾಗಿ ನಾದಿ ಮೃದುವಾದ ಹಿಟ್ಟಿನ ಉಂಡೆ ಮಾಡಿ. ಹಿಟ್ಟು ಗಟ್ಟಿಯಾಗಿದ್ದರೆ, ಸ್ವಲ್ಪ ಬಿಸಿನೀರು ಸೇರಿಸಿ ನಾದಿಕೊಳ್ಳಬಹುದು. ಈ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ನಿಮ್ಮ ಅಂಗೈಯಲ್ಲಿ ಇಟ್ಟು ಉದ್ದವಾಗಿ ದಾರದಂತೆ ಮಾಡಿಕೊಳ್ಳಿ ನಂತರ ಕೊನೆಯಲ್ಲಿ ಎರಡೂ ತುದಿಗಳನ್ನು ಸೇರಿಸಿ ಕೋಡುಬಳೆಯ ಆಕಾರಕ್ಕೆ ತಂದುಕೊಳ್ಳಿ.

    ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಕೋಡುಬಳೆಗಳನ್ನು ಎರಡೂ ಬದಿ ಕಂದು ಬಣ್ಣ ಬರುವವರೆಗೂ ಕರಿಯಿರಿ. ಕರಿದ ಕೋಡುಬಳೆಗಳನ್ನು ಎಣ್ಣೆಯಿಂದ ಹೊರತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿ. ಈಗ ರುಚಿಕರವಾದ, ಗರಿಗರಿಯಾದ ಮೊಸರು ಕೋಡುಬಳೆ ಬೆಳಿ.

     

  • ದೀಪಾವಳಿ ಪಟಾಕಿ ಹೊಡೆಯುತ್ತಿದ್ದಾಗ ದುಷ್ಕರ್ಮಿಗಳಿಂದ ಗುಂಡಿನ ದಾಳಿ – ಇಬ್ಬರು ಸಾವು

    ದೀಪಾವಳಿ ಪಟಾಕಿ ಹೊಡೆಯುತ್ತಿದ್ದಾಗ ದುಷ್ಕರ್ಮಿಗಳಿಂದ ಗುಂಡಿನ ದಾಳಿ – ಇಬ್ಬರು ಸಾವು

    ನವದೆಹಲಿ: ಪಟಾಕಿ ಹೊಡೆಯುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ದೆಹಲಿಯ (Delhi) ಶಹದಾರ (Shahadar) ಪ್ರದೇಶದ ಫಾರ್ಶ್ ಬಜಾರ್‌ನಲ್ಲಿ ನಡೆದಿದೆ.

    ಮೃತರನ್ನು ಆಕಾಶ್ ಶರ್ಮಾ(44), ಆತನ ಸೋದರಳಿಯ ರಿಷಬ್ ಶರ್ಮಾ(16) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಮೃತ ಆಕಾಶ್ ಮಗ ಕ್ರಿಶ್ ಶರ್ಮಾ ಗಂಭೀರವಾಗಿ ಗಾಯಗೊಂಡಿದ್ದಾನೆ.

    ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಗುಂಡಿಕ್ಕಿ ಕೊಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಹೆಚ್‍ಡಿಕೆ

    ಸೆರೆಯಾದ ದೃಶ್ಯದಲ್ಲಿ, ಮೂವರು ತಮ್ಮ ಮನೆಯ ಹೊರಗೆ ಕಿರಿದಾದ ರಸ್ತೆಯಲ್ಲಿ ಪಟಾಕಿ ಹೊಡೆಯುತ್ತಿರುವುದು ಕಂಡು ಬಂದಿದೆ. ಇದೇ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಅಪ್ರಾಪ್ತ ಬಾಲಕ ಹಾಗೂ ಶೂಟರ್, ಆಕಾಶ್‌ಗೆ ಸತತವಾಗಿ 5 ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಈ ಸಮಯದಲ್ಲಿ ರಕ್ಷಿಸಲು ಬಂದಿದ್ದ ಆಕಾಶ್ ಸೋದರಳಿಯ ರಿಷಬ್ ಶರ್ಮಾಗೂ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ಓಡಿಕೊಂಡು ಬಂದ ಆಕಾಶ್ ಮಗನಿಗೂ ಗುಂಡು ತಗುಲಿದ್ದು, ಗಂಭೀರ ಗಾಯಗೊಂಡಿದ್ದಾನೆ.

    ಪೊಲೀಸರ ಮಾಹಿತಿಯ ಪ್ರಕಾರ, ಅಪ್ರಾಪ್ತ ಬಾಲಕ ಹಾಗೂ ಮೃತ ಆಕಾಶ್‌ನ ದೂರದ ಸಂಬಂಧಿಯಾಗಿದ್ದು, ಕೆಲವು ತಿಂಗಳ ಹಿಂದೆ ಆತನಿಂದ 70,000 ರೂ. ಹಣ ಸಾಲ ಪಡೆದಿದ್ದರು. ತಿಂಗಳುಗಳು ಕಳೆದಿದ್ದರೂ ಹಣವನ್ನು ಹಿಂದಿರುಗಿಸಿರಲಿಲ್ಲ ಹಾಗೂ ಆತ ಎಷ್ಟೇ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಇದರಿಂದಾಗಿ ಆತನನ್ನು ಕೊಲೆ ಮಾಡುವಂತೆ ಶೂಟರ್‌ಗೆ ಅಪ್ರಾಪ್ತ ಬಾಲಕ ಸುಪಾರಿ ಕೊಟ್ಟಿರುವುದಾಗಿ ತಿಳಿದುಬಂದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 17 ವರ್ಷದ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಹಗರಣಗಳ ಬಗ್ಗೆ ಸಿನಿಮಾ ಮಾಡಿದ್ರೆ ಬಾಕ್ಸ್ಆಫೀಸ್ ಹಿಟ್ ಆಗುತ್ತೆ: ಸಿ.ಸಿ ಪಾಟೀಲ್

  • ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರ ಮಹತ್ವವೇನು?

    ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರ ಮಹತ್ವವೇನು?

    ಹಿಂದೂಗಳ ಅತಿದೊಡ್ಡ ಹಬ್ಬವೆಂದರೆ ಅದು ಬೆಳಕಿನ ಹಬ್ಬ ದೀಪಾವಳಿ. ದೀಪಾವಳಿ ಹಬ್ಬದ ವೈಭವಕ್ಕೆ ಜನರು ಆಕರ್ಷಿತರಾಗುತ್ತಾರೆ ಅದರಲ್ಲಿ ಪಟಾಕಿ ಹಾರಿಸುವುದು ಒಂದು. ಅದು ಜನರಿಗೆ ದೀಪಾವಳಿಯನ್ನು ಮರುಕಳಿಸುವಲ್ಲಿ ಸಹಾಯಮಾಡುತ್ತದೆ. ಈ ಮೂಲಕ ದೀಪಾವಳಿಯ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.

    ದೀಪಾವಳಿ ಹಬ್ಬವು ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನವನ್ನು ಸಂಕೇತಿಸುತ್ತದೆ. ಇದು ಸಾವಿರಾರು ವರ್ಷಗಳ ಹಿಂದಿನ ಒಂದು ದೊಡ್ಡ ಆಚರಣೆಯಾಗಿದೆ. 14 ವರ್ಷಗಳ ವನವಾಸದ ನಂತರ ಶ್ರೀರಾಮನು ಅಯೋಧ್ಯೆಗೆ ಮರಳುವ ಸಂಕೇತವನ್ನು ಇದು ಸೂಚಿಸುತ್ತದೆ. ಗಿದೆ .

    ಹತ್ತು ತಲೆಯ ರಾಕ್ಷಸ ರಾಜ ರಾವಣನನ್ನು ಕೊಂದು ತನ್ನ ಪತ್ನಿ ಸೀತಾ ದೇವಿಯನ್ನು ಭಗವಾನ್ ರಾಮನು ವಿಜಯಶಾಲಿಯಾಗಿ ರಕ್ಷಿಸಿದನು . ಆದ್ದರಿಂದ ಈ ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯತನ ವಿಜಯವನ್ನು ಸಾಧಿಸುವುದನ್ನು ಪ್ರತಿನಿಧಿಸುತ್ತದೆ.

    ಈ ಹಬ್ಬದಂದು ಜನರು ನಡೆಸುವ ಪ್ರಮುಖ ಆಚರಣೆಯೆಂದರೆ ಲಕ್ಷ್ಮಿ ಪೂಜೆ. ಸಂಪತ್ತು ಮತ್ತು ಸಮೃದ್ಧಿಯ ದೈವಿಕ ಸಾಕಾರವಾದ ಲಕ್ಷ್ಮಿ ದೇವಿಯು ತನ್ನ ಭಕ್ತರ ಮನೆಗಳಿಗೆ ದಯೆಯಿಂದ ಭೇಟಿ ನೀಡುತ್ತಾಳೆ ಮತ್ತು ಭಕ್ತರಿಗೆ ಆಶೀರ್ವಾದ ಮತ್ತು ಅದೃಷ್ಟವನ್ನು ನೀಡುತ್ತಾಳೆ ಎಂದು ನಂಬಲಾಗಿದೆ.

    ಈ ಸಮಯದಲ್ಲಿ ಆಭರಣಗಳು ಮನೆ ಹಾಗೂ ರಸ್ತೆಗಳಲ್ಲಿ ಕೃತಕ ದೀಪಗಳು ಮತ್ತು ದೀಪಗಳಿಂದ ಬೆಳಗಿಸಲಾಗುತ್ತದೆ. ಹಬ್ಬಗಳ ಭಾಗವಾಗಿ ಪ್ರೀತಿಪಾತ್ರರ ಜೊತೆ ಪಟಾಕಿಗಳನ್ನು ಹಾರಿಸುವುದು ಇನ್ನೊಂದು ರೀತಿಯ ಸಂಭ್ರಮವಾಗಿದೆ.

    ಪಟಾಕಿ ಹಾರಿಸುವುದರ ಮಹತ್ವವೇನು?
    ಪಟಾಕಿ ಪ್ರದರ್ಶನ:
    ದೀಪಾವಳಿಯನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಇದು ಅಪಾರವಾದ ಸಂತೋಷ ಮತ್ತು ಉಲ್ಲಾಸವನ್ನು ತರುತ್ತದೆ. ಈ ಉತ್ಸಾಹಭರಿತ ಆಚರಣೆಯನ್ನು ವ್ಯಾಖ್ಯಾನಿಸುವ ಆಚರಣೆಗಳಲ್ಲಿ, ಪಟಾಕಿ ಹಾರಿಸುವುದು ಕೂಡ ಒಂದು. ರಾತ್ರಯಾಗುತ್ತಿದ್ದಂತೆ ಆಕಾಶವನ್ನು ವಿಭಿನ್ನ ಶಬ್ದಗಳಿಂದ, ಬಣ್ಣಗಳಿಂದ ಬೆಳಗುತ್ತದೆ.

    AI Photo
    AI Photo

    ದೀಪಾವಳಿಯ ಸಮಯದಲ್ಲಿ ಪಟಾಕಿಗಳನ್ನು ಹಾರಿಸುವುದು ಶತಮಾನಗಳ ಹಿಂದಿನ ಅಭ್ಯಾಸ. ಪಟಾಕಿ ಸಿಡಿಸುವುದರಲ್ಲಿ ಹಬ್ಬದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯನ್ನು ಆಳವಾಗಿ ಬೇರೂರಿದೆ. ಪಟಾಕಿಗಳು ಸಂಭ್ರಮದ ಸಂಕೇತವಾಗಿದೆ ಮತ್ತು ಆಚರಣೆಯ ಅವಿಭಾಜ್ಯ ಅಂಗವಾಗಿದೆ, ಕತ್ತಲೆಯ ಮೇಲೆ ಬೆಳಕಿನ ವಿಜಯ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದನ್ನು ಪ್ರತಿನಿಧಿಸುತ್ತದೆ.

    ಪಟಾಕಿಗಳ ಸಿಡಿಸುವಿಕೆಯು ಭವ್ಯವಾದ ಆಚರಣೆಯನ್ನು ಪುನರಾವರ್ತಿಸುತ್ತದೆ. ಆಕಾಶವು ಬೆಳಕು ಮತ್ತು ಬಣ್ಣದಿಂದ ಉರಿಯುತ್ತದೆ. ಇದು ಸಂಭ್ರಮದ ಸೂಚಕವಾಗಿದೆ,

    ಲಕ್ಷ್ಮಿದೇವಿಯನ್ನು ಸ್ವಾಗತ
    ದೀಪಾವಳಿಯು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಈ ರಾತ್ರಿಯಲ್ಲಿ ದೇವಿ ಭೂಮಿಯನ್ನು ಸುತ್ತುತ್ತಾಳೆ, ಮನೆಗಳಿಗೆ ಭೇಟಿ ನೀಡುತ್ತಾಳೆ ಮತ್ತು ಅವಳನ್ನು ಪ್ರಕಾಶಮಾನವಾದ ಬೆಳಕಿನಿಂದ ಸ್ವಾಗತಿಸಲಾಗುತ್ತದೆ. ಅದಕ್ಕಾಗಿ ಪಟಾಕಿಯನ್ನು ಹಾರಿಸಲಾಗುವುದು. ದೀಪಗಳನ್ನು ಬೆಳಗಿಸುವುದು ಮತ್ತು ಪಟಾಕಿಗಳನ್ನು ಹಚ್ಚುವುದು ಅವಳನ್ನು ಸ್ವಾಗತಿಸಲು ಮತ್ತು ಮುಂಬರುವ ವರ್ಷದಲ್ಲಿ ಸಂಪತ್ತು ಮತ್ತು ಸಮೃದ್ಧಿಗಾಗಿ ಅವಳ ಆಶೀರ್ವಾದವನ್ನು ಪಡೆಯಲು ಒಂದು ಮಾರ್ಗವಾಗಿದೆ.

    ಸಾಂಸ್ಕೃತಿಕ ಆಚರಣೆಗಳು
    ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಮೀರಿ, ದೀಪಾವಳಿಯ ಸಮಯದಲ್ಲಿ ಪಟಾಕಿಗಳನ್ನು ಸಿಡಿಸುವುದು ಒಂದು ಸಾಂಸ್ಕೃತಿಕ ರೂಢಿಯಾಗಿದೆ, ಕುಟುಂಬಗಳು ಮತ್ತು ಸಮುದಾಯಗಳು ಒಟ್ಟಾಗಿ ಸೇರಿ ದೀಪಾವಳಿಯನ್ನು ಆಚರಿಸಲು ಒಂದು ಮಾರ್ಗವಾಗಿದೆ. ಆಕಾಶದಲ್ಲಿ ವರ್ಣರಂಜಿತ ಪ್ರದರ್ಶನಗಳು ಎಲ್ಲಾ ವಯಸ್ಸಿನ ಜನರನ್ನು ಒಟ್ಟಿಗೆ ತರುತ್ತವೆ, ಸಮುದಾಯಗಳ ನಡುವೆ ಉತ್ಸಾಹ ಮತ್ತು ಏಕತೆಯ ಭಾವವನ್ನು ಸೃಷ್ಟಿಸುತ್ತವೆ.

  • ಬೆಳಕಿನ ಹಬ್ಬವನ್ನು ಕಣ್ತುಂಬಿಕೊಳ್ಳಬೇಕಾ? ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ!

    ಬೆಳಕಿನ ಹಬ್ಬವನ್ನು ಕಣ್ತುಂಬಿಕೊಳ್ಳಬೇಕಾ? ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ!

    ದೀಪಾವಳಿಯನ್ನು ಸಾಮಾನ್ಯವಾಗಿ “ಬೆಳಕುಗಳ ಹಬ್ಬ” ಎಂದು ಕರೆಯಲಾಗುತ್ತದೆ, ಇದು ಭಾರತದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಉತ್ಸಾಹ ಮತ್ತು ವಿಜೃಂಭಣೆಯೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಧರ‍್ಮಿಕವಾಗಿ ಹಾಗೂ ಭೌಗೋಳಿಕವಾಗಿ ಈ ಹಬ್ಬವು ವಿಭನ್ನತೆಯನ್ನು ಹೊಂದಿದೆ.

    ಲಂಕಾದ ರಾಕ್ಷಸ ರಾಜನಾದ ರಾವಣನ ಮೇಲೆ ವಿಜಯದ ನಂತರ ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗಿದ ದಿನವನ್ನು ದೀಪಾವಳಿಯಾಗಿ ಆಚರಿಸಲಾಗುತ್ತದೆ. ದೇಶಾದ್ಯಂತ ಹಬ್ಬದ ಆಚರಣೆಯು ವೈವಿಧ್ಯತೆಯಿಂದ ಕೂಡಿದ್ದು, ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಪತ್ರಿಯೊಂದು ಸ್ಥಳದಲ್ಲಿಯೂ ಮೆರಗನ್ನು ಹೆಚ್ಚಿಸುವ ಹಬ್ಬ ಇದಾಗಿದೆ.

    ಇಡೀ ರಾಷ್ಟ್ರವು ಉತ್ಸಾಹದಿಂದ ದೀಪಾವಳಿಯನ್ನು ಆಚರಿಸುತ್ತಿರುವಾಗ, ಕೆಲವು ಪವಿತ್ರ ಸ್ಥಳಗಳಲ್ಲಿ ವಿಶೇಷವಾಗಿ ರೋಮಾಂಚಕ ವಾತಾವರಣದೊಂದಿಗೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಾರತದ ಕೆಲವು ಸ್ಥಳಗಳಲ್ಲಿ ಮರೆಯಲಾಗದ ದೀಪಾವಳಿಯ ಅನುಭವವನ್ನು ನೀಡುತ್ತವೆ. ಬೆಳಕಿನ ಹಬ್ಬ ದೀಪಾವಳಿಯಲ್ಲಿ ಬೆಳಕೆಂಬ ಭರವಸೆಯೊಂದಿಗೆ ಕತ್ತಲೆಯ ಭಯವನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

    ದೇಶದಲ್ಲಿ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವ ಕೆಲವು ಪ್ರಮುಖ ನಗರಗಳು ಇಲ್ಲಿವೆ.
    ಅಯೋಧ್ಯೆ:
    ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿನ ದೀಪಾವಳಿ ನೋಡುತ್ತಲೇ ಅದರಲ್ಲಿ ತಲ್ಲೀನರಾಗಿ ಬಿಡುತ್ತೇವೆ.
    ಲಕ್ಷಾಂತರ ಮಣ್ಣಿನ ದೀಪಗಳು, ಮೇಣದಬತ್ತಿಗಳು ಪ್ರತಿ ಮೂಲೆಯನ್ನು ಬೆಳಗಿಸುವ ಮೂಲಕ ನಗರವನ್ನು ಪ್ರಕಾಶಮಾನವಾಗಿಸುತ್ತದೆ. ಭವ್ಯವಾದ ರಾಮ್ ಲೀಲಾ ಮರ‍್ತಿಯು ಪ್ರವಾಸಿಗರನ್ನು ರ‍್ಕಷಿಸುತ್ತದೆ. ದೀಪಗಳಿಂದ ಸೃಷ್ಟಿಯಾದ ಮನಮೋಹಕ ದೃಶ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಶ್ರೀರಾಮನು ತನ್ನ ವನವಾಸದಿಂದ ಹಿಂದಿರುಗಿದ ಮತ್ತು ಅವನ ಪಟ್ಟಾಭಿಷೇಕವನ್ನು ಗುರುತಿಸುವಲ್ಲಿ ಮಹತ್ವ ಅಡಗಿದೆ.

    ವಾರಣಾಸಿ:
    ಭಾರತದ ಆಧ್ಯಾತ್ಮಿಕ ರಾಜಧಾನಿ ವಾರಣಾಸಿಯಲ್ಲಿ ದೀಪಾವಳಿಯು ವಿಭಿನ್ನ ಅನುಭವವಾಗಿದೆ. ಗಂಗಾ ನದಿಯ ಉದ್ದಕ್ಕೂ ಇರುವ ಘಾಟ್‌ಗಳು ದೀಪಗಳಿಂದ ಮಿನುಗುತ್ತಿರುತ್ತವೆ. ಭಕ್ತರು ಪ್ರರ‍್ಥಿಸುತ್ತಾ, ಸಾವಿರಾರು ಎಣ್ಣೆ ದೀಪಗಳನ್ನು ಬೆಳಗಿಸುತ್ತಾರೆ. ಗಾಳಿಯು ಪವಿತ್ರ ಸ್ತೋತ್ರಗಳೊಂದಿಗೆ ಪ್ರತಿಧ್ವನಿಸುತ್ತದೆ. ವಾತಾವರಣವು ಆಧ್ಯಾತ್ಮಿಕ ಶಕ್ತಿಯಿಂದ ತುಂಬಿಕೊಂಡಿರುತ್ತದೆ. ವಾರಣಾಸಿಯ ದೀಪಾವಳಿಯು ಅದರ ಆಧ್ಯಾತ್ಮಿಕ ಸಾರಕ್ಕೆ ಬಹಳ ಮಹತ್ವದ್ದಾಗಿದೆ. ಏಕೆಂದರೆ ಈ ಸಮಯದಲ್ಲಿ ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡುವುದು ಪಾಪಗಳನ್ನು ತೊಳೆದು ಆತ್ಮವನ್ನು ಶುದ್ಧಗೊಳಿಸುತ್ತದೆ ಎಂದು ನಂಬಲಾಗಿದೆ.

    ಜೈಪುರ:
    ದೀಪಾವಳಿಯ ಸಮಯದಲ್ಲಿ ಜೈಪುರ ರಾಜ ವೈಭವದಿಂದ ಕಂಗೊಳಿಸುತ್ತಿದೆ. ಇಡೀ ನಗರವು ರೋಮಾಂಚಕ ದೀಪಗಳು ಮತ್ತು ಅಲಂಕಾರದಿಂದ ತುಂಬಿ ತುಳುಕುತ್ತಿರುತ್ತದೆ. ಸಿಟಿ ಪ್ಯಾಲೇಸ್, ಹವಾ ಮಹಲ್ ಮತ್ತು ವಿವಿಧ ಕೋಟೆಗಳು ಮತ್ತು ಅರಮನೆಗಳು ವಿಭಿನ್ನ ದೃಶ್ಯವನ್ನು ಪರ‍್ಶಿಸುತ್ತದೆ. ಪಟಾಕಿಗಳು ರಾತ್ರಿಯ ಆಕಾಶವನ್ನು ಬೆಳಗಿಸಿ, ವೈಭವವನ್ನು ಹೆಚ್ಚಿಸುತ್ತವೆ. ಜೈಪುರದ ದೀಪಾವಳಿಯು ರಾಜಸ್ಥಾನದ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಆಚರಿಸುವ ರಾಜಮನೆತನದ ಮೌಲ್ಯವನ್ನು ಬಿತ್ತರಿಸುತ್ತದೆ.

     ಅಮೃತಸರ:
    ಸಿಖ್ ಧರ್ಮದ ಆಧ್ಯಾತ್ಮಿಕ ಹೃದಯವೆಂದರೆ ಅದು ಅಮೃತಸರ. ಅತ್ಯಂತ ಪವಿತ್ರವಾದ ಸಿಖ್ ದೇಗುಲವಾದ ಗೋಲ್ಡನ್ ಟೆಂಪಲ್, ಅಮೃತ ಸರೋವರದಲ್ಲಿ ದೀಪಗಳ ಪ್ರತಿಬಿಂಬ ಅದ್ಭುತವಾಗಿ ಪ್ರಕಾಶಿಸುತ್ತಿರುತ್ತದೆ. ಸಿಖ್ಖರು ಪ್ರಾರ್ಥನೆ, ಸಮುದಾಯದ ಊಟದಲ್ಲಿ ತೊಡಗಿ, ಉತ್ಸಾಹದಿಂದ ಹಬ್ಬವನ್ನು ಆಚರಿಸುತ್ತಾರೆ. ಗುರು ಹರಗೋಬಿಂದ್ ಅವರನ್ನು ಸೆರೆವಾಸದಿಂದ ಬಿಡುಗಡೆಗೊಳಿಸಿದ ದಿನವನ್ನು ದೀಪಾವಳಿಯನ್ನಾಗಿ ಆಚರಿಸುತ್ತಾರೆ. ಅದಕ್ಕೆ ದೀಪಾಚಳಿ ಇಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಇದು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ತೋರಿಸುತ್ತದೆ.

    ಉದಯಪುರ:
    ಸರೋವರಗಳ ನಗರವಾದ ಉದಯಪುರವು ದೀಪಾವಳಿಯ ಸಮಯದಲ್ಲಿ ಪ್ರಶಾಂತ ವಾತಾವರಣವನ್ನು ಹೊಂದಿರುತ್ತದೆ. ಅದ್ಭುತವಾದ ಅರಮನೆಗಳು ಮತ್ತು ಪ್ರಶಾಂತ ಸರೋವರಗಳು ಭವ್ಯವಾದ ಆಚರಣೆಗಳಿಗೆ ಸಂಭ್ರಮಿಸುತ್ತಿರುತ್ತದೆ. ಸಿಟಿ ಪ್ಯಾಲೇಸ್ ಮತ್ತು ಪಿಚೋಲಾ ಸರೋವರವು ಸುಂದರವಾಗಿ ಪ್ರಕಾಶಿಸಲ್ಪಟ್ಟಿರುತ್ತದೆ. ಇದು ಮಾಂತ್ರಿಕ ವಾತಾವರಣವನ್ನು ಸೃಷ್ಟಿಸುವುದಲ್ಲದೇ ಉದಯಪುರದಲ್ಲಿ ದೀಪಾವಳಿಯು ಹಬ್ಬದ ರಾಜಮನೆತನದ ಆಕರ್ಷಣೆಯನ್ನು ಸೂಚಿಸುತ್ತದೆ. ಇದು ರಾಜಮನೆತನದ ಸಾರವನ್ನು ಎತ್ತಿಹಿಡಿಯುತ್ತದೆ.

    ಕೋಲ್ಕತ್ತಾ:
    ದೀಪಾವಳಿಯನ್ನು ವಿಶೇಷವಾಗಿ ಹೂಗ್ಲಿ ನದಿಯ ದಡದಲ್ಲಿ ವೈಭವದಿಂದ ಆಚರಿಸಲಾಗುತ್ತದೆ. ಅಲಂಕಾರಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಅದ್ಭುತ ಮೆರವಣಿಗೆಗಳು ನಗರವನ್ನು ಶಕ್ತಿ ಮತ್ತು ಬಣ್ಣದಿಂದ ವಿಜೃಂಭಿಸುತ್ತದೆ. ದೀಪಾವಳಿಯ ಸಂರ‍್ಭದಲ್ಲಿ ಹೌರಾ ಸೇತುವೆ ಮತ್ತು ವಿಕ್ಟೋರಿಯಾ ಸ್ಮಾರಕವು ನೋಡಲೇಬೇಕಾದ ಆಕರ್ಷಣೆಯ ಸ್ಥಳಗಳು. ಕೋಲ್ಕತ್ತಾದಲ್ಲಿ ದೀಪಾವಳಿಯು ಸಂಸ್ಕೃತಿಗಳ ಏಕತೆಯನ್ನು ಸೂಚಿಸುತ್ತದೆ, ವಿವಿಧ ಹಿನ್ನೆಲೆಯ ಜನರು ಒಟ್ಟಾಗಿ ಹಬ್ಬವನ್ನು ಸಂತೋಷ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ.

    ದೀಪಾವಳಿಯು ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುವ ಹಬ್ಬವಾಗಿದೆ. ದೀಪಾವಳಿಯ ಸಮಯದಲ್ಲಿ ಈ ನಗರಗಳಿಗೆ ಭೀಟಿ ನೀಡುವುದು ಮರೆಯಲಾಗದ ಸಾಂಸ್ಕೃತಿಕ ಅನುಭವವನ್ನು ನೀಡುತ್ತದೆ.

  • ನಮಗೆ ಶಾಂತಿ, ಸಹೋದರತ್ವ ಬೇಕು – ನಿಜಾಮುದ್ದೀನ್‌ ದರ್ಗಾಕ್ಕೆ ಆರ್‌ಎಸ್‌ಎಸ್‌ ನಾಯಕ ಭೇಟಿ

    ನಮಗೆ ಶಾಂತಿ, ಸಹೋದರತ್ವ ಬೇಕು – ನಿಜಾಮುದ್ದೀನ್‌ ದರ್ಗಾಕ್ಕೆ ಆರ್‌ಎಸ್‌ಎಸ್‌ ನಾಯಕ ಭೇಟಿ

    ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಮತ್ತು ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಇಂದ್ರೇಶ್ ಕುಮಾರ್ ಅವರು ಶನಿವಾರ ನವದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾಕ್ಕೆ (Nizamuddin Dargah) ಭೇಟಿ ನೀಡಿ, ದೀಪಾವಳಿಯ ಪೂರ್ವಭಾವಿಯಾಗಿ ದೇಗುಲದ ಆವರಣದಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸಿದರು.

    ಆರ್‌ಎಸ್‌ಎಸ್‌ನ ಮುಸ್ಲಿಂ ವಿಭಾಗ, ಮುಸ್ಲಿಂ ರಾಷ್ಟ್ರೀಯ ಮಂಚ್ ದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಕರೆ ನೀಡಿತು. ಮುಸ್ಲಿಂ ರಾಷ್ಟ್ರೀಯ ಮಂಚ್ ಪೋಷಕ ಮತ್ತು ಹಿರಿಯ ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ಮಾತನಾಡಿ, ನಿಜಾಮುದ್ದೀನ್ ದರ್ಗಾ ಸಂಕೀರ್ಣದೊಳಗೆ ಮಣ್ಣಿನ ದೀಪಗಳನ್ನು ಬೆಳಗಿಸುವ ಕ್ರಮವು ಶಾಂತಿ, ಸಮೃದ್ಧಿ ಮತ್ತು ಕೋಮು ಸೌಹಾರ್ದತೆಯ ಸಂದೇಶವನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿಂತಿದ್ದ ರೈಲಿನೊಳಗೆ ನಮಾಜ್ – ಮತ್ತೆ ವಿವಾದ

    ಆರ್‌ಎಸ್‌ಎಸ್‌ ಮುಖಂಡ ಇಂದ್ರೇಶ್ ಕುಮಾರ್ ನಿನ್ನೆ ದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾ ತಲುಪಿದ್ದರು. ಸೂಫಿ ಸಂತರ ದರ್ಗಾಕ್ಕೆ ಪುಷ್ಪ ಹಾಗೂ ಚಾದರ್ ಅರ್ಪಿಸಿದರು.

    ದೀಪಾವಳಿ ಹಬ್ಬವನ್ನು ಭಾರತ ಸೇರಿದಂತೆ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ಪ್ರತಿ ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಭಾರತವು ತೀರ್ಥಯಾತ್ರೆಗಳು, ಉತ್ಸವಗಳು ಮತ್ತು ಜಾತ್ರೆಗಳ ನಾಡು. ಎಲ್ಲರೂ ಬಡವರಿಗೆ ರೊಟ್ಟಿಯನ್ನು ನೀಡಿ ತಮ್ಮಲ್ಲಿ ಸಹೋದರತ್ವವನ್ನು ಹೆಚ್ಚಿಸುತ್ತಾರೆ. ಧರ್ಮಾಂಧತೆ, ದುಶ್ಚಟ, ದ್ವೇಷ, ಗಲಭೆ, ಯುದ್ಧ ಬೇಡ ಎಂಬುದನ್ನು ಪ್ರತಿ ಹಬ್ಬವೂ ಕಲಿಸುತ್ತದೆ. ನಾವು ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಬಯಸುತ್ತೇವೆ ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: 5 ವರ್ಷದಲ್ಲಿ 166 ಕ್ರಿಮಿನಲ್‌ಗಳ ಎನ್‌ಕೌಂಟರ್‌, 4453 ಮಂದಿಗೆ ಗಾಯ: ಯೋಗಿ ಆದಿತ್ಯನಾಥ್‌

    ಯಾರನ್ನೂ ಬಲವಂತವಾಗಿ ಮತಾಂತರ ಮಾಡಿ ಹಿಂಸಾಚಾರ ಮಾಡಬಾರದು. ಪ್ರತಿಯೊಬ್ಬರೂ ಅವರವರ ಧರ್ಮ, ಜಾತಿಯನ್ನು ಅನುಸರಿಸಬೇಕು. ಅನ್ಯ ಧರ್ಮವನ್ನು ಟೀಕಿಸಿ ಅವಮಾನಿಸಬೇಡಿ. ದೇಶದಲ್ಲಿ ಎಲ್ಲ ಧರ್ಮಗಳನ್ನು ಗೌರವಿಸಿದಾಗ, ಕಲ್ಲು ಹೊಡೆಯುವ ಮೂಲಭೂತವಾದಿಗಳಿಂದ ದೇಶ ಮುಕ್ತವಾಗುತ್ತದೆ. ಎಲ್ಲಾ ಧರ್ಮಗಳನ್ನು ಗೌರವಿಸುವ ಮತ್ತು ಸ್ವೀಕರಿಸುವ ಏಕೈಕ ದೇಶ ಭಾರತ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದಕ್ಕೂ ಮೊದಲು ಸೆಪ್ಟೆಂಬರ್‌ನಲ್ಲಿ ಇಂದ್ರೇಶ್ ಕುಮಾರ್ ಆರ್‌ಎಸ್‌ಎಸ್ ನಾಯಕ ಮೋಹನ್ ಭಾಗವತ್ ಅವರೊಂದಿಗೆ ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿಯಾಗಿದ್ದರು. ಆರ್‌ಎಸ್‌ಎಸ್ ಮುಖ್ಯಸ್ಥರು ಆ ದಿನದ ಹಿಂದೆ ರಾಷ್ಟ್ರ ರಾಜಧಾನಿಯ ಮಸೀದಿ ಮತ್ತು ಮದರಸಾಗೆ ಭೇಟಿ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಈಗ ಬಿಡುಗಡೆಯಾಗಲ್ಲ, ದೀಪಾವಳಿಗೂ ಮೊದಲು ಬರಲಿದೆ ಜಿಯೋ ಫೋನ್

    ಈಗ ಬಿಡುಗಡೆಯಾಗಲ್ಲ, ದೀಪಾವಳಿಗೂ ಮೊದಲು ಬರಲಿದೆ ಜಿಯೋ ಫೋನ್

    ಮುಂಬೈ: ಗಣೇಶ ಚತುರ್ಥಿಗೆ ಬಿಡುಗಡೆಯಾಗಬೇಕಿದ್ದ ಕಡಿಮೆ ಬೆಲೆಯ ಜಿಯೋ ಆಂಡ್ರಾಯ್ಡ್ ಫೋನ್ ದೀಪಾವಳಿ ಮೊದಲು ಬಿಡುಗಡೆಯಾಗಲಿದೆ.

    ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಜಿಯೋ, ಈ ಫೋನ್ ಈಗ ಪ್ರಯೋಗದ ಹಂತದಲ್ಲಿದೆ. ದೀಪಾವಳಿಗೆ ಮೊದಲು ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.

    ಜೂನ್ ತಿಂಗಳಿನಲ್ಲಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್ 44ನೇ ವಾರ್ಷಿಕ ಸಭೆಯಲ್ಲಿ ಮುಖ್ಯಸ್ಥ ಮುಕೇಶ್ ಅಂಬಾನಿ, ಗಣೇಶ ಚತುರ್ಥಿ ಸಮಯದಲ್ಲಿ ಗೂಗಲ್ ಜೊತೆಗೂಡಿ ಕಡಿಮೆ ಬೆಲೆಯ ಜಿಯೋ ಫೋನ್ ನೆಕ್ಸ್ಟ್ ಫೋನ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದರು.

    ಈಗ ವಿಶ್ವಾದ್ಯಂತ ಎಲ್ಲ ಕಂಪನಿಗಳಿಗೆ ಚಿಪ್ ಅಭಾವ ಕಾಡುತ್ತಿದೆ. ಸೆಮಿಕಂಡಕ್ಟರ್ ಕೊರತೆ ಜಿಯೋ ಫೋನಿಗೆ ತಟ್ಟಿದ್ದು ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ.

    ಭಾರತದಲ್ಲಿ ಮಾತ್ರವೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಆಗಿರಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದರು.  ರಿಲಯನ್ಸ್ ಇಂಡಸ್ಟ್ರೀಸ್ 44ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ್ದ ಗೂಗಲ್ ಸಿಇಒ ಸುಂದರ್ ಪಿಚೈ, ಈ ಸ್ಮಾರ್ಟ್‍ಫೋನ್ ಭಾರತಕ್ಕೆಂದೇ ನಿರ್ಮಿಸಲಾಗಿದ್ದು, ಮೊತ್ತಮೊದಲ ಬಾರಿಗೆ ಅಂತರಜಾಲ ಬಳಸುವ ಲಕ್ಷಾಂತರ ಹೊಸ ಬಳಕೆದಾರರಿಗೆ ಅದು ಹೊಸ ಸಾಧ್ಯತೆಗಳನ್ನು ತೆರೆದಿಡಲಿದೆ ಎಂದು ಹೇಳಿದ್ದರು.

    ಫೋನಿನಲ್ಲಿ ಏನಿರಲಿದೆ?
    ವಾಯ್ಸ್ ಅಸಿಸ್ಟೆಂಟ್, ಪರದೆಯ ಮೇಲಿನ ಪಠ್ಯವನ್ನು ಓದಿ ಹೇಳುವ ಸೌಲಭ್ಯ, ಅನುವಾದ ಸೌಲಭ್ಯ, ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್ ಗಳಿರುವ ಸ್ಮಾರ್ಟ್ ಕ್ಯಾಮೆರಾ ಇರಲಿದೆ. ಗೂಗಲ್ ಹಾಗೂ ಜಿಯೋ ಅಪ್ಲಿಕೇಶನ್ ಅಲ್ಲದೆ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿರುವ ಆಪ್ ಗಳನ್ನು ಬಳಸಬಹುದಾಗಿದೆ.

    ಕಡಿಮೆ ಬೆಲೆಯ ಫೋನಿನಲ್ಲಿ ಕ್ಯಾಮೆರಾ ಗುಣಮಟ್ಟ ಅಷ್ಟೇನೂ ಉತ್ತಮ ಇರುವುದಿಲ್ಲ. ಆದರೆ ಗೂಗಲ್ ಈ ಫೋನಿಗೆ ಫಾಸ್ಟ್ ಹೈ ಕ್ವಾಲಿಟಿ ಕ್ಯಾಮೆರಾ ನೀಡುವುದಾಗಿ ಹೇಳಿದೆ. ಅಲ್ಲದೇ ಎಚ್‍ಡಿಆರ್ ಮೋಡ್ ಇರಲಿದೆ. ಗೂಗಲ್ ಸ್ನಾಪ್‍ಚಾಟ್ ಜೊತೆಗೂಡಿ ಹೊಸ ಲೆನ್ಸ್ ಅಭಿವೃದ್ಧಿ ಪಡಿಸಿದೆ. ಹೀಗಾಗಿ ಉತ್ತಮ ಗುಣಮಟ್ಟದ ಕ್ಯಾಮೆರಾ ಇರುವ ಸಾಧ್ಯತೆಯಿದೆ. ಗೂಗಲ್ ಈ ಜಿಯೋ ಫೋನಿಗೆ ಲೇಟೆಸ್ಟ್ ಆಂಡ್ರಾಯ್ಡ್ ಓಎಸ್ ಭದ್ರತಾ ನವೀಕರಣಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಆದರೆ ಯಾವ ಆಂಡ್ರಾಯ್ ಆವೃತ್ತಿ ಇರಲಿದೆ ಎನ್ನುವುದು ಸಷ್ಟವಾಗಿ ತಿಳಿದು ಬಂದಿಲ್ಲ.  ಇದನ್ನೂ ಓದಿ: ಜಿಯೋದಲ್ಲಿ ಯಾರ ಹೂಡಿಕೆ ಎಷ್ಟಿದೆ?

    ಬೆಲೆ ಎಷ್ಟು?
    ಜಿಯೋ ಫೋನ್ ಬೆಲೆ ಎಷ್ಟು ಎನ್ನುವುದನ್ನು ಮುಕೇಶ್ ಅಂಬಾನಿ ತಿಳಿಸಿಲ್ಲ. ಆದರೆ ಕಡಿಮೆ ಬೆಲೆ ಎಂಬ ಸುಳಿವು ನೀಡಿದ ಹಿನ್ನೆಲೆಯಲ್ಲಿ 4-5 ಸಾವಿರ ರೂ. ಒಳಗಡೆ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್‍ಬಿಲ್ಟ್ ಜಿಯೋ ಸಿಮ್ ಇರುವ ಕಾರಣ ಈ ಫೋನ್ ಬಳಕೆದಾರರಿಗೆ ಜಿಯೋ ವಿಶೇಷ ಡೇಟಾ ಪ್ಲ್ಯಾನ್ ಬಿಡುಗಡೆ ಮಾಡುವ ಸಾಧ್ಯತೆಯಿದೆ.

    2017ರ ಜನವರಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಭಾರತಕ್ಕೆ ಬಂದಿದ್ದಾಗ ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಫೋನ್  ತಯಾರಿಸಲಾಗುವುದು ಎಂದು ತಿಳಿಸಿದ್ದರು. ಭಾರತಕ್ಕೆ 30 ಡಾಲರ್(2 ಸಾವಿರ ರೂ.) ಬೆಲೆಯ ಆಂಡ್ರಾಯ್ಡ್ ಫೋನ್ ಅಗತ್ಯವಿದೆ ಎಂದು ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ಜಿಯೋ ಕಂಪನಿ ಮತ್ತು ಗೂಗಲ್ ಜೊತೆಗೂಡಿ ಆಂಡ್ರಾಯ್ಡ್ ಫೋನ್ ತಯಾರಿಸಲಿದೆ ಎಂದು ಟೆಕ್ ಮೂಲಗಳ ಮಾಹಿತಿಯನ್ನು ಆಧರಿಸಿ ಅಂದೇ ವರದಿ ಪ್ರಕಟವಾಗಿತ್ತು.

  • ಕಸ ಎತ್ತುವ ಮಹಿಳೆಯರಿಗೆ ಆಯುಷ್ಮಾನ್ ಸಹಾಯ – ಹಣತೆ ಖರೀದಿಸಿ ಸಂಬಂಧಿಕರಿಗೆ ಗಿಫ್ಟ್

    ಕಸ ಎತ್ತುವ ಮಹಿಳೆಯರಿಗೆ ಆಯುಷ್ಮಾನ್ ಸಹಾಯ – ಹಣತೆ ಖರೀದಿಸಿ ಸಂಬಂಧಿಕರಿಗೆ ಗಿಫ್ಟ್

    ಮುಂಬೈ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರು ಕಸ ಎತ್ತುವ ಮಹಿಳೆಯರಿಂದ ಹಣತೆ ಖರೀದಿಸುವ ಮೂಲಕ ಸಹಾಯ ಮಾಡಿದ್ದಾರೆ.

    ಆಯುಷ್ಮಾನ್ ಹಾಗೂ ಅವರ ಪತ್ನಿ ತಾಹಿರಾ ಕಶ್ಯಪ್ ಅವರು ದೀಪಾವಳಿಗಾಗಿ ಕಸ ಎತ್ತುವ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡುವುದಕ್ಕಾಗಿ ಹಾಗೂ ಕೌಶಲ್ಯ ವಿಕಾಸಕ್ಕಾಗಿ ಅವರ ಬಳಿ ದೀಪಗಳು ಹಾಗೂ ಮೇಣದಬತ್ತಿಯನ್ನು ಖರೀದಿಸಿದ್ದಾರೆ. ಈ ವರ್ಷ ದೀಪಾವಳಿಗೆ ತಮ್ಮ ಸಂಬಂಧಿಕರಿಗೆ ಉಡುಗೊರೆಯನ್ನು ಕಳುಹಿಸಿಕೊಡುತ್ತಿದ್ದಾರೆ. ಉಡುಗೊರೆಯಲ್ಲಿ ಈ ಮಹಿಳೆಯರು ತಯಾರಿಸಿದ ದೀಪಗಳನ್ನು ಹಾಗೂ ಮೇಣದಬತ್ತಿಯನ್ನು ಕೂಡ ನೀಡುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಷ್ಮಾನ್, ದೀಪಾವಳಿ ಎಂದರೆ ಬೇರೊಬ್ಬರ ಜೀವನದಲ್ಲಿ ಖುಷಿ ತರುವುದು. ನಾವು ಈ ಹಬ್ಬವನ್ನು ನಮ್ಮ ನಮ್ಮ ಕುಟುಂಬಸ್ಥರ ಜೊತೆ ಆಚರಿಸುತ್ತೇವೆ. ಆದರೆ ನಾವು ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಈಗಲೂ ಹಲವು ಜನರಿಗೆ ನಮ್ಮ ಬೆಂಬಲ ಬೇಕಾಗಿದೆ. ನಾವು ಅವರ ಮುಖದಲ್ಲಿ ನಗುವನ್ನು ತರಬಹುದು. ನಾವು ಈ ಉಡುಗೊರೆಗಳ ಮೂಲಕ ಅವರ ಜೀವನದಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದ್ದೆವೆ ಎಂದು ಹೇಳಿದ್ದಾರೆ.

    ಆಯುಷ್ಮಾನ್ ಪತ್ನಿ ತಾಹಿರಾ ಕೂಡ, ನಾವು ಈ ಮಹಿಳೆಯರು ತಯಾರಿಸಿದ ವಸ್ತುಗಳನ್ನು ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದೆವೆ. ಏಕೆಂದರೆ ಅವರ ಅದ್ಭುತ ಕೆಲಸ ಹಾಗೂ ಕಠಿಣ ಪರಿಶ್ರಮವನ್ನು ಜಗತ್ತಿನ ಮುಂದೆ ತರಬಹುದು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೆವೆ. ನಾವೆಲ್ಲರೂ ಈ ರೀತಿಯ ಮಹಿಳೆಯರ ಭವಿಷ್ಯವನ್ನು ಸುರಕ್ಷಿತ ಮಾಡಬೇಕು. ಅಲ್ಲದೆ ಸಾಕಷ್ಟು ಮಂದಿ ಅವರ ಕೆಲಸವನ್ನು ತಿಳಿದು ಅವರಿಗೆ ಸಹಾಯ ಮಾಡಬೇಕು ಎಂಬುದು ನಮ್ಮ ಉದ್ದೇಶ ಎಂದು ಪ್ರತಿಕ್ರಿಯಿಸಿದ್ದಾರೆ.

    ಈ ವರ್ಷ ದೀಪಾವಳಿ ಹಬ್ಬವನ್ನು ಆಯುಷ್ಮಾನ್ ತಮ್ಮ ಪತ್ನಿ ಮಕ್ಕಳ ಜೊತೆ ಜಾರ್ಖಂಡ್‍ನಲ್ಲಿ ಆಚರಿಸುತ್ತಿದ್ದಾರೆ. ಇಡೀ ಖುರಾನಾ ಕುಟುಂಬ ಒಟ್ಟಿಗೆ ಹಬ್ಬ ಆಚರಿಸಲಿದೆ ಎಂದು ವರದಿಯಾಗಿದೆ.