Tag: deepak rao

  • ನಾನು ನಂಬಿದ ದೇವರು ಆರೋಪಿಗಳಿಗೆ ಶಿಕ್ಷೆ ನೀಡ್ತಾನೆ: ದೀಪಕ್ ತಾಯಿ ಕಣ್ಣೀರು

    ನಾನು ನಂಬಿದ ದೇವರು ಆರೋಪಿಗಳಿಗೆ ಶಿಕ್ಷೆ ನೀಡ್ತಾನೆ: ದೀಪಕ್ ತಾಯಿ ಕಣ್ಣೀರು

    ಮಂಗಳೂರು: ನನ್ನ ಮಗನನ್ನು ಕೊಂದವರಿಗೆ ಕಠಿಣ ಶಿಕ್ಷೆಯಾಗಲಿ. ನಾನು ನಂಬಿದ ದೇವರು ಅವರನ್ನು ಬಿಡಲ್ಲ. ಕೊಂದವರಿಗೆ ತಕ್ಕುದಾದ ಶಿಕ್ಷೆಯನ್ನು ದೇವರು ಕೊಡುತ್ತಾನೆ ಎಂದು ಮೃತ ದೀಪಕ್ ತಾಯಿ ಪ್ರೇಮರಾವ್ ಕಣ್ಣೀರು ಹಾಕಿದ್ದಾರೆ.

    ಮಗನ ಸಾವಿನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನ್ನ ಮಗ ಪಾಪದ ಹುಡುಗ. ಯಾವ ಗಲಾಟೆಗೂ ಹೋಗುವವನಲ್ಲ, ಬೆಳಗ್ಗೆ ಚಹಾ ಕುಡಿದು ಹೋದವ ಮತ್ತೆ ವಾಪಾಸ್ ಬರಲಿಲ್ಲ. ದೀಪಕ್ ಕೊಲೆಯಾದ ಬಗ್ಗೆ ಯಾರೂ ನನಗೆ ಹೇಳಲಿಲ್ಲ. ಪ್ರಸ್ತುತ ನಮ್ಮ ಕುಟುಂಬದ ಆಧಾರವೇ ಇಲ್ಲವಾಗಿದೆ ಎಂದು ಕಣ್ಣೀರಿಟ್ಟರು.

    ಮಗನಿಗೆ ಮದುವೆ ಮಾಡುವ ಕನಸು ಹೊತ್ತಿದ್ದೆವು. ಆದರೆ ಮದುವೆ ಒಂದು ವರ್ಷ ಬೇಡ ಎಂದು ದೀಪಕ್ ಹೇಳಿದ್ದ. ವಿದೇಶದಲ್ಲಿ ಉದ್ಯೋಗ ಮಾಡುತ್ತೇನೆ ಎಂದು ಹಠ ಮಾಡುತ್ತಿದ್ದ. ನಾನೇ ವಿದೇಶದಲ್ಲಿ ಕೆಲಸ ಬೇಡ ಎಂದು ಹೇಳಿದ್ದೆ. ಸಾಲ ಮಾಡಿ ಮನೆ ಕಟ್ಟಿಸಿದ್ದ. ಮನೆಯ ಸಾಲ ಇನ್ನೂ ತೀರಿಸಿಲ್ಲ ಎಂದು ದು:ಖ ವ್ಯಕ್ತಪಡಿಸಿದರು. ಇದನ್ನೂ ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ 

    ಸರ್ಕಾರ ದೀಪಕ್ ಸಾವಿಗೆ ಪರಿಹಾರವಾಗಿ ಘೋಷಣೆ ಮಾಡಿದ್ದ 10 ಲಕ್ಷ ರೂ.ಪರಿಹಾರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸುವ ಸಲುವಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದೀಪಕ್ ಮನೆಗೆ ಆಗಮಿಸಿ ತಾಯಿಗೆ ಚೆಕ್ ಹಸ್ತಾಂತರಿಸಲು ಮುಂದಾದರು. ಆದರೆ ದೀಪಕ್ ತಾಯಿ ಸರ್ಕಾರದ ಚೆಕ್ ಬೇಡ ಎಂದು ಕಣ್ಣೀರಿಟ್ಟರು. ಈ ವೇಳೆ ಡಿಸಿ ಸಸಿಕಾಂತ್ ಅವರು, ನಾನು ನಿಮ್ಮ ಮಗನ ಹಾಗೇ, ಸರಕಾರ ಕೊಟ್ಟ ಪರಿಹಾರ ಬೇಡ ಎನ್ನಬೇಡಿ ಎಂದು ದೀಪಕ್ ಅವರ ತಾಯಿಯನ್ನು ಮನವೊಲಿಸಿದರು. ಇದನ್ನೂ ಓದಿ: 7 ವರ್ಷಗಳ ಕಾಲ ನನ್ನ ಜೊತೆಯಿದ್ದ ದೀಪಕ್ ಸಾವು ಊಹಿಸಲು ಸಾಧ್ಯವಿಲ್ಲ: ಮಾಲೀಕ ಮಜೀದ್

    ಈ ನಡುವೆ ದೀಪಕ್ ಮೂಗ ತಮ್ಮ ಸತೀಶ್ ತನ್ನ ನೋವನ್ನು ಯಾರಿಗೂ ಹೇಳಲು ಆಗದೇ ರೋದನ ಅನುಭವಿಸುತ್ತಿದ್ದು ಕಂಡು ಬಂತು. ದೀಪಕ್ ಸಾವಿನಿಂದ ಸುರತ್ಕಲ್ ಕಾಟಿಪಳ್ಳದಲ್ಲಿರುವ ಮನೆಯಲ್ಲಿ ಮಡುಗಟ್ಟಿದ ವಾತಾವರಣ ನಿರ್ಮಾಣವಾಗಿದೆ.

    ಇದನ್ನೂ ಓದಿ: Exclusive: ಪೊಲೀಸ್ ಇಲಾಖೆಯಲ್ಲಿನ ‘ಹಸ್ತ’ಕ್ಷೇಪವೇ ಕರಾವಳಿಯಲ್ಲಿ ಶಾಂತಿ ಕದಡಲು ಕಾರಣ!

    ಇದನ್ನೂ ಓದಿ: ಕೊಲೆ ಸಂಖ್ಯೆ 21. ಇನ್ನು ಎಷ್ಟು ಕೊಲೆಯಾಗಬೇಕು: ಸಿಎಂಗೆ ಪ್ರತಾಪ್ ಸಿಂಹ ಪ್ರಶ್ನೆ

    ಇದನ್ನೂ ಓದಿ: ಆಗ ಸುಮ್ಮನಿದ್ದವರು ಈಗೇನು ಮಾತನಾಡೋದು: ಬಿಜೆಪಿ ನಾಯಕರ ವಿರುದ್ಧ ಮುತಾಲಿಕ್ ಕಿಡಿ

    https://www.youtube.com/watch?v=h2ySxt7VrtE

  • 7 ವರ್ಷಗಳ ಕಾಲ ನನ್ನ ಜೊತೆಯಿದ್ದ ದೀಪಕ್ ಸಾವು ಊಹಿಸಲು ಸಾಧ್ಯವಿಲ್ಲ: ಮಾಲೀಕ ಮಜೀದ್

    7 ವರ್ಷಗಳ ಕಾಲ ನನ್ನ ಜೊತೆಯಿದ್ದ ದೀಪಕ್ ಸಾವು ಊಹಿಸಲು ಸಾಧ್ಯವಿಲ್ಲ: ಮಾಲೀಕ ಮಜೀದ್

    ಮಂಗಳೂರು: ದೀಪಕ್ ಒಳ್ಳೆಯ ಹುಡುಗನಾಗಿದ್ದ. ಆತನನ್ನು ಹತ್ಯೆ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಅಂಗಡಿ ಮಾಲೀಕ ಮಜೀದ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ 7 ವರ್ಷಗಳಿಂದ ಆತ ನನ್ನ ಜೊತೆ ಕೆಲಸಕ್ಕೆ ಇದ್ದ. ಅಂಗಡಿಯಲ್ಲಿ ನಮ್ಮ ಭಾಷೆಯಲ್ಲೇ ವ್ಯವಹರಿಸುತ್ತಿದ್ದ. ಎಲ್ಲರ ಜೊತೆ ಸ್ನೇಹ ಮನೋಭಾವ ಹೊಂದಿದ್ದ ಆತನ ಹತ್ಯೆಗೆ ಕಾರಣ ಏನು ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದರು.

    ಯಾರ ಮೇಲೂ ದೀಪಕ್ ದ್ವೇಷ ಹೊಂದಿರಲಿಲ್ಲ. ಆತನ ಸಾವು ನನಗೆ ಊಹಿಸಲೂ ಸಾಧ್ಯ ಇಲ್ಲ. ನಮ್ಮೆಲ್ಲರ ಜೊತೆ ಚೆನ್ನಾಗಿ ವ್ಯವಹರಿಸುತ್ತಿದ್ದ ದೀಪಕ್ ಕೊಂದಿದ್ದು ಯಾಕೆ ಎನ್ನುವುದು ನನಗೆ ಇನ್ನು ತಿಳಿಯುತ್ತಿಲ್ಲ ಎಂದರು. ಇದನ್ನು ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ 

    ಇದೇ ವೇಳೆ ದೀಪಕ್ ಕುಟುಂಬದ ಆಧಾರ ಸ್ತಂಭವಾಗಿದ್ದ, ಯಾವುದೇ ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಹೇಳಿ ಮಜೀದ್ ಕಣ್ಣೀರಟ್ಟರು.  ಇದನ್ನು ಓದಿ: ಕೊಲೆ ಸಂಖ್ಯೆ 21. ಇನ್ನು ಎಷ್ಟು ಕೊಲೆಯಾಗಬೇಕು: ಸಿಎಂಗೆ ಪ್ರತಾಪ್ ಸಿಂಹ ಪ್ರಶ್ನೆ

    ದೀಪಕ್ ಅವರು ಅಬ್ದುಲ್‌ ಮಜೀದ್‌ ಅವರ ಮೊಬೈಲ್‌ ಮತ್ತು ಸಿಮ್‌ ವ್ಯಾಪಾರ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಮಧ್ಯಾಹ್ನ ಮಜೀದ್‌ ಅವರ ಮನೆಗೆ ಹೋಗಿ ಸಿಮ್‌ ವಿತರಣೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿಕೊಂಡು ಮರಳುತ್ತಿರುವಾಗ ಅವರನ್ನು ಅಡ್ಡಗಟ್ಟಿ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.  ಇದನ್ನು ಓದಿ: ಆಗ ಸುಮ್ಮನಿದ್ದವರು ಈಗೇನು ಮಾತನಾಡೋದು: ಬಿಜೆಪಿ ನಾಯಕರ ವಿರುದ್ಧ ಮುತಾಲಿಕ್ ಕಿಡಿ

    https://www.youtube.com/watch?v=0iJpHrCbDbc

     

  • ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ

    ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ

    ಮಂಗಳೂರು: ಸಿನಿಮಾದಲ್ಲಿ ರೌಡಿಗಳನ್ನು ಪೊಲೀಸರು ಬೆನ್ನಟ್ಟಿ ಹಿಡಿಯುವುದನ್ನು ನೀವು ನೋಡಿರಬಹುದು. ಈ ದೃಶ್ಯ ಸಿನಿಮಾದಲ್ಲಿ ನೋಡಲು ಎಷ್ಟು ಥ್ರಿಲ್ಲಿಂಗ್ ಆಗಿರುತ್ತದೋ ಅದೇ ರೀತಿಯಾಗಿ ಪೊಲೀಸರು ದೀಪಕ್ ರಾವ್ ಹತ್ಯೆಯಾದ ಮೂರುವರೆ ಗಂಟೆಯ ಒಳಗಡೆ ನಾಲ್ಕು ಆರೋಪಿಗಳನ್ನು ಕಾರಿನಲ್ಲಿ 27 ಕಿ.ಮೀ ಚೇಸಿಂಗ್ ಮಾಡಿ ಬಂಧಿಸಿದ್ದಾರೆ.

    ಸುರತ್ಕಲ್ ಸಮೀಪದ ಕಾಟಿಪಳ್ಳ 2 ನೇ ಬ್ಲಾಕ್ ನ ಕೈಕಂಬದಲ್ಲಿ ಬುಧವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ದೀಪಕ್ ರಾವ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಆರೋಪಿಗಳು ಹತ್ಯೆ ಮಾಡಿದ್ದರು. ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಆರೋಪಿಗಳು ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗುತ್ತಿದ್ದರು.

    ಮಧ್ಯಾಹ್ನ ಹತ್ಯೆಯಾದ ನಂತರ ಸಮೀಪದ ವ್ಯಕ್ತಿಗಳು ನೀಡಿದ ಮಾಹಿತಿಯಂತೆ ಪೊಲೀಸರು ಸುತ್ತಮುತ್ತಲಿನ ಎಲ್ಲ ಪೊಲೀಸ್ ಠಾಣೆಗಳಿಗೆ ತುರ್ತು ಸಂದೇಶ ಕಳುಹಿಸಿದರು. ಆರೋಪಿಗಳು ರಕ್ತಸಿಕ್ತ ತಲಾವರುಗಳನ್ನು ಇಟ್ಟುಕೊಂಡು ಕಾಟಿಪಳ್ಳದಿಂದ ಸೂರಿಂಜೆ-ಶಿಬರೂರು ಮೂಲಕ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತು. ಈ ಮಾಹಿತಿಯನ್ನು ಕೂಡಲೇ ಕಿನ್ನಿಗೋಳಿಯಲ್ಲಿದ್ದ ಗಸ್ತು ವಾಹನಕ್ಕೆ ತಿಳಿಸಲಾಯಿತು. ವಾಹನಗಳ ತಪಾಸಣೆ ವೇಳೆ ಬಿಳಿ ಬಣ್ಣದ ಸ್ವಿಫ್ಟ್ ಕಾರು ಆಗಮಿಸಿತು. ನಿಲ್ಲಿಸುವಂತೆ ಸೂಚನೆ ನೀಡಿದರೂ ಕಾರನ್ನು ನಿಲ್ಲಿಸದೇ ವೇಗವಾಗಿ ಮುಂದಕ್ಕೆ ಹೋಯಿತು. ಸೂಚನೆ ಧಿಕ್ಕರಿಸಿ ಮುಂದಕ್ಕೆ ಹೋದಾಗ ಕೂಡಲೇ ಪೊಲೀಸರಿಗೆ ಅನುಮಾನ ಬಂತು.

    ಚೇಸಿಂಗ್ ಆರಂಭವಾಯ್ತು:
    ಕಾರು ನಿಲ್ಲಿಸದೆ ಎರ್ರಾಬಿರ್ರಿ ಓಡಿಸುತ್ತಾ ತಪ್ಪಿಸಿಕೊಂಡು ಹೋಗಿದ್ದನ್ನು ಕಂಡ ಮೂಲ್ಕಿ ಪೊಲೀಸರು ಎಚ್ಚೆತ್ತುಕೊಂಡು ಖಾಸಗಿ ಕಾರೊಂದನ್ನು ಬಾಡಿಗೆಗೆ ಪಡೆದುಕೊಂಡು ದುಷ್ಕರ್ಮಿಗಳ ಕಾರನ್ನು ಬೆನ್ನಟ್ಟುವುದಕ್ಕೆ ಶುರು ಮಾಡಿದರು. ಆ ಮಧ್ಯೆ ಆರೋಪಿಗಳು ಕಿನ್ನಿಗೋಳಿಯಿಂದ ದಾಬಸ್‍ಕಟ್ಟೆ, ಪಟ್ಟೆಕ್ರಾಸ್, ಕದ್ರಿ ಪದವು, ನಿಡ್ಡೋಡಿ ಮಾರ್ಗವಾಗಿ ಸಂಚರಿಸಿ ಧೂಮಚಡವು ಕ್ರಾಸ್‍ಗೆ ಹೋಗಿ ಅಲ್ಲಿಂದ ಮಿಜಾರುಗುತ್ತು ದೋಟದ ಮನೆ ಮೂಲಕ ತಪ್ಪಿಸಿಕೊಳ್ಳುವುದಕ್ಕೆ ಯೋಜನೆ ಮಾಡಿದ್ದರು.

    ಕಾರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಪೊಲೀಸರು ಆರೋಪಿಗಳಿಗೆ ಕಾರು ನಿಲ್ಲಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಎಚ್ಚರಿಕೆಗೆ ತಲೆ ಕೆಡಿಸಿಕೊಳ್ಳದ ಆರೋಪಿಗಳು ಅತೀವೇಗದಲ್ಲಿ ಸಿಕ್ಕ ಸಿಕ್ಕ ಒಳ ರಸ್ತೆಗಳಲ್ಲಿ ಕಾರನ್ನು ನುಗ್ಗಿಸುತ್ತಿದ್ದರು.

    ಹಲಗೆ ಮೇಲೆ ಕಾರು ಹೋಯ್ತು:
    ಆರೋಪಿಗಳು ಎಡಪದವು ಸಮೀಪದ ಮಿಜಾರು ಗುತ್ತು ಗರಡಿ ಹಿಂಭಾಗದಲ್ಲಿರುವ ಒಳದಾರಿಯ ಮೋರಿಯೊಂದರ ಮೂಲಕ ಹಾದು ಹೋಗಲು ಮುಂದಾಗಿದ್ದರು. ಆದರೆ ಈ ಮೋರಿಗೆ ಹಾಕಿದ್ದ ಸೇತುವೆ ಮುರಿದು ಹೋಗಿದ್ದರಿಂದ ತಾತ್ಕಾಲಿಕವಾಗಿ ಜನರ ಓಡಾಟಕ್ಕೆ ಮರದ ಹಲಗೆಯನ್ನು ಹಾಕಲಾಗಿತ್ತು. ಹಿಂದುಗಡೆಯಿಂದ ಪೊಲೀಸರು ಚೇಸಿಂಗ್ ಮಾಡುತ್ತಿರುವುದನ್ನು ನೋಡಿ ಆರೋಪಿಗಳು ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲೇಬೇಕೆಂಬ ಯೋಚನೆ ಮಾಡಿ ಹಲಗೆ ಮೇಲೆಯೇ ಕಾರು ಚಲಾಯಿಸಿದ್ದಾರೆ. ಈ ಸಂದರ್ಭದಲ್ಲಿ ಭಾರವನ್ನು ತಾಳಲಾರದೇ ಹಲಗೆ ಮುರಿದು ಕಾರು ಮೋರಿಯೊಳಗೆ ಸಿಲುಕಿಕೊಂಡಿತ್ತು. ಇದರಿಂದಾಗಿ ಕಾರು ಹಿಂದಕ್ಕೂ ಮುಂದಕ್ಕೂ ಓಡಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಸಿಲುಕಿಕೊಂಡಿತ್ತು.

    ಕಾರು ಮುಂದಕ್ಕೆ ಹೋಗುವುದಿಲ್ಲ ಎಂದು ತಿಳಿದ ಆರೋಪಿಗಳು ನಂತರ ಅಲ್ಲಿಂದಲೇ ಓಡಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಕಿರಿದಾದ ಜಾಗದಲ್ಲಿ ಕಾರು ಸಿಕ್ಕಿಕೊಂಡಿದ್ದ ಕಾರಣ ಅವರಿಗೆ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಷ್ಟರಲ್ಲೇ ಆರೋಪಿಗಳ ಹಿಂದೆಯೇ ಬಂದ ಪೊಲೀಸರ ತಂಡವು ಕಾರಿನ ಮೇಲೆ ಫೈರಿಂಗ್ ಮಾಡಿ ಹೆದರಿಕೆಯನ್ನು ಹುಟ್ಟಿಸಿತ್ತು.

    ಆರೋಪಿಗಳು ಈ ದಾರಿ ಮೂಲಕ ಪರಾರಿಯಾಗುತ್ತಿದ್ದಾರೆ ಎನ್ನುವ ವಿಚಾರ ತಿಳಿದು ಇನ್ನೊಂದು ಕಡೆಯಿಂದ ಬಜಪೆಯ ಠಾಣೆ ಪೊಲೀಸರು ಕೂಡ ಪ್ರತ್ಯೇಕ ವಾಹನವೊಂದರಲ್ಲಿ ಸ್ಥಳಕ್ಕೆ ದೌಡಾಯಿಸಿದ್ದರು. ಮತ್ತೊಂದು ಕಡೆಯಿಂದ ಮೂಡಬಿದಿರೆ ಠಾಣೆ ಪೊಲೀಸರು ಕೂಡ ಅದೇ ಜಾಗಕ್ಕೆ ಬಂದಿದ್ದಾರೆ. ಕೊನೆಗೆ ಆರೋಪಿಗಳನ್ನು ಪೊಲೀಸರು ಸುತ್ತುವರಿದಿದ್ದಾರೆ. ಈ ವೇಳೆ ಕಾರಿನಿಂದ ಇಳಿದು ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದ ನಾಲ್ವರ ಪೈಕಿ ಓರ್ವ ತನ್ನ ಬಳಿಯಿದ್ದ ತಲ್ವಾರಿನಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇದರಿಂದ ಇನ್ಸ್ ಪೆಕ್ಟರ್ ಒಬ್ಬರ ಕೈಗೂ ಸಣ್ಣ-ಪುಟ್ಟ ಗಾಯವಾಗಿತ್ತು. ಎರಡು ಬಾರಿ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಮತ್ತೆ ನಾವು ಸ್ಥಳದಿಂದ ಪರಾರಿಯಾದರೆ ಗ್ಯಾರಂಟಿ ಶೂಟೌಟ್ ಮಾಡುತ್ತಾರೆ ಎಂದು ಭಾವಿಸಿದ ಆರೋಪಿಗಳು ಕೊನೆಗೆ ವಿಧಿಯಿಲ್ಲದೇ ಶರಣಾಗಿದ್ದಾರೆ.

    ಬಟ್ಟೆ ಬದಲಾಯಿಸಿದ್ರು:
    ದೀಪಕ್ ಹತ್ಯೆ ಮಾಡಿ ಕಾಟಿಪಳ್ಳದಿಂದ ಪರಾರಿಯಾಗಬೇಕಾದರೆ, ದಾರಿ ಮಧ್ಯೆ ರಕ್ತಸಿಕ್ತವಾಗಿದ್ದ ತಮ್ಮ ಬಟ್ಟೆಗಳನ್ನು ಆರೋಪಿಗಳನ್ನು ಬದಲಿಸಿದ್ದಾರೆ. ಕೊಲೆ ಮಾಡುವ ಸಂದರ್ಭದಲ್ಲಿ ದೀಪಕ್ ಮೈ ಮೇಲಿನಿಂದ ರಕ್ತವು ದುಷ್ಕರ್ಮಿಗಳು ಧರಿಸಿದ್ದ ಟಿ-ಶರ್ಟ್ ಮೇಲೆ ಚಿಮ್ಮಿತ್ತು. ಇದರಿಂದ ನೋಡುವವರಿಗೆ ನಮ್ಮ ಮೇಲೆ ಅನುಮಾನ ಬರಬಾರದು ಎಂದು ತಾವು ಧರಿಸಿದ್ದ ಬಟ್ಟೆಯನ್ನು ಕಾರಿನಲ್ಲಿಯೇ ಬದಲಿಸಿದ್ದರು. ವಶಪಡಿಸಿಕೊಂಡಿದ್ದ ಸ್ವಿಫ್ಟ್ ಕಾರಿನೊಳಗೆ ರಕ್ತಸಿಕ್ತವಾಗಿದ್ದ ಬಟ್ಟೆಗಳು ಪತ್ತೆಯಾಗಿತ್ತು.

    ಕಾರು ಚಾಲಕನ ಸಮಯ ಪ್ರಜ್ಞೆ.
    ನಾಲ್ವರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ವ್ಯಕ್ತಿ ಮೂಲ್ಕಿ ಪೊಲೀಸರು ಬಾಡಿಗೆಗೆ ಪಡೆದುಕೊಂಡಿದ್ದ ಖಾಸಗಿ ಕಾರಿನ ಚಾಲಕ. ಏಕೆಂದರೆ ಕಿನ್ನಿಗೋಳಿಯಿಂದ ಮಿಜಾರು ಗುತ್ತು ವರೆಗಿನ ಸುಮಾರು 28 ಕಿಮೀ. ಕಡಿದಾದ ಒಳ ದಾರಿಯಲ್ಲಿ ದುಷ್ಕರ್ಮಿಗಳನ್ನು ಬೆನ್ನಟ್ಟಿಕೊಂಡು ಹೋಗುವುದು ತುಂಬಾ ಕಷ್ಟ ಇತ್ತು. ಕಡಿದಾದ ದಾರಿಯಲ್ಲಿ ಯಾವುದಕ್ಕೂ ಹೆದರದೇ ಧೈರ್ಯವಾಗಿ ಅತೀ ವೇಗದಲ್ಲಿ ಆರೋಪಿಗಳ ಹಿಂದೆಯೇ ಖಾಸಗಿ ಚಾಲಕ ಕಾರನ್ನು ಓಡಿಸಿದ್ದರು. 25 ವರ್ಷದ ಒಳಗಿನ ಯುವ ಚಾಲಕನ ಚಾಣಾಕ್ಷತನ, ಸಮಯ ಪ್ರಜ್ಞೆಯಿಂದ ಕೊನೆಗೂ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಅಜ್ಞಾತ ಸ್ಥಳದಲ್ಲಿ ವಿಚಾರಣೆ
    ಈ ರೀತಿ ಸಿನಿಮೀಯ ಶೈಲಿಯಲ್ಲಿ ಸೆರೆ ಸಿಕ್ಕಿರುವ ನಾಲ್ವರು ಆರೋಪಿಗಳನ್ನು ಮಿಜಾರು ಗುತ್ತುವಿನಿಂದ ಪೊಲೀಸರ ವಾಹನದಲ್ಲಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ದೀಪಕ್ ಕೊಲೆ ವಿಚಾರವಾಗಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ದೀಪಕ್ ಹತ್ಯೆಗೆ ನಿಜವಾದ ಕಾರಣ ಏನು ಎಂಬುದು ಕೂಡ ಸದ್ಯದಲ್ಲೇ ಬಹಿರಂಗಗೊಳ್ಳುವ ಸಾಧ್ಯತೆಯಿದೆ.

     

     

     

     

     

     

  • ಸದ್ದಿಲ್ಲದೇ ದೀಪಕ್ ಮೃತದೇಹ ಸಾಗಿಸಿದ ಪೊಲೀಸರು- ಆಂಬುಲೆನ್ಸ್ ನಿಂದ ಶವ ಇಳಿಸದಂತೆ ಆಕ್ರೋಶ

    ಸದ್ದಿಲ್ಲದೇ ದೀಪಕ್ ಮೃತದೇಹ ಸಾಗಿಸಿದ ಪೊಲೀಸರು- ಆಂಬುಲೆನ್ಸ್ ನಿಂದ ಶವ ಇಳಿಸದಂತೆ ಆಕ್ರೋಶ

    ಮಂಗಳೂರು: ಹತ್ಯೆಯಾದ ಭಜರಂಗದಳ ಕಾರ್ಯಕರ್ತ ದೀಪಕ್ ರಾವ್ ಶವವನ್ನು ಪೊಲೀಸರು ಸದ್ದಿಲ್ಲದೇ ಆಸ್ಪತ್ರೆಯಿಂದ ಸಾಗಿಸಿದ್ದು ಕುಟುಂಬಸ್ಥರು ಹಾಗೂ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

    ಕುಟುಂಬ ಸದಸ್ಯರಿಗೂ ಸಣ್ಣ ಮಾಹಿತಿ ನೀಡದೇ ದೀಪಕ್ ಶವವನ್ನು ಸಾಗಿಸಲಾಗಿದೆ. ಸುರತ್ಕಲ್‍ನಲ್ಲಿರುವ ದೀಪಕ್ ಮನೆಗೆ ಸದ್ದಿಲ್ಲದೇ ಮೃತದೇಹ ರವಾನೆ ಆಗಿದೆ. ಆಂಬುಲೆನ್ಸ್ ನಲ್ಲಿ ರೋಗಿಯನ್ನು ಸಾಗಿಸುವಂತೆ ದೀಪಕ್ ಶವವನ್ನು ಪೊಲೀಸರು ಸಾಗಿಸಿದ್ದು, ಗಣೇಶಕಟ್ಟೆಯಲ್ಲಿ ದೀಪಕ್ ರಾವ್ ಅಂತಿಮ ದರ್ಶನಕ್ಕೆ ಅವಕಾಶ ಮಾಡಲು ಮುಂದಾಗಿದ್ದರು.

    ಆದ್ರೆ ಪೊಲೀಸರ ಸೈಲೆಂಟ್ ಆಪರೇಷನ್‍ಗೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ದೀಪಕ್ ರಾವ್ ನಿವಾಸದ ಬಳಿ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದ ಕುಟುಂಬಸ್ಥರು ಹಾಗೂ ಸ್ಥಳೀಯರು ಶವ ವಾಪಾಸ್ ಕೊಂಡೊಯ್ಯಲು ಒತ್ತಾಯಿಸಿದ್ದು, ಆಂಬುಲೆನ್ಸ್ ನಿಂದ ಶವ ಇಳಿಸದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗೃಹ ಸಚಿವರು ಮಂಗಳೂರಿಗೆ ಬರಬೇಕು. ರಾಮಲಿಂಗಾ ರೆಡ್ಡಿ ಬರದೆ ಶವ ಇಳಿಸಲ್ಲ ಎಂದು 50 ಲಕ್ಷ ರುಪಾಯಿ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಎಡಿಜಿಪಿ ಕಮಲ್ ಪಂತ್ ಹಾಗೂ ಹಿಂದೂ ನಾಯಕರಾದ ಸತ್ಯಜಿತ್ ಸುರತ್ಕಲ್ ಮತ್ತು ಶರಣ್ ಜೊತೆ ಮಾತುಕತೆ ವಿಫಲವಾಗಿದ್ದು, ಸ್ಥಳದಿಂದ ಕಮಲ್ ಪಂತ್ ಹೊರನಡೆದಿದ್ದಾರೆ.  ಇದನ್ನೂ ಓದಿ: ಸಿನಿಮೀಯ ರೀತಿ ಕಾರ್ ಚೇಸಿಂಗ್- ಬಜರಂಗದಳ ಕಾರ್ಯಕರ್ತ ದೀಪಕ್ ಹತ್ಯೆಗೈದ ಶಂಕಿತರು ವಶಕ್ಕೆ

    ಉದ್ಧೇಶಿತ ಶವ ಯಾತ್ರೆಗೆ ಬ್ರೇಕ್ ಹಾಕೋ ಸಲುವಾಗಿ ಪೊಲೀಸರು ಶವ ಸಾಗಿಸಿದ್ರಾ? ಹಿಂಸಾಚಾರ ನಡೆಯಬಹುದು ಅನ್ನೋ ಕಾರಣಕ್ಕೆ ಪೊಲೀಸರು ಹೀಗೆ ಮಾಡಿರಬಹುದಾ? ಎಂಬ ಪ್ರಶ್ನೆ ಮೂಡಿದೆ. ಪೊಲೀಸ್ ನಿರ್ಬಂಧದ ನಡುವೆಯೂ ಬೆಳಗ್ಗೆ 10 ಗಂಟೆಗೆ ದೀಪಕ್ ಶವಯಾತ್ರೆ ನಡೆಸಲು ಹಿಂದೂ ಸಂಘಟನೆಗಳು ಉದ್ದೇಶಿಸಿದ್ದವು. ಇದನ್ನೂ ಓದಿ: ದೀಪಕ್ ಬರ್ಬರ ಹತ್ಯೆಗೈದ ನಾಲ್ವರು ಅರೆಸ್ಟ್: ಪೊಲೀಸರ ಮೇಲೆ ತಲ್ವಾರ್ ಬೀಸಿದ್ದ ಆರೋಪಿಗಳು

  • ದೀಪಕ್ ಹತ್ಯೆ ಖಂಡಿಸಿ ಇಂದು ಸುರತ್ಕಲ್ ಬಂದ್- ಪೊಲೀಸ್ ನಿರ್ಬಂಧದ ನಡುವೆಯೂ ಶವಯಾತ್ರೆಗೆ ಸಿದ್ಧತೆ

    ದೀಪಕ್ ಹತ್ಯೆ ಖಂಡಿಸಿ ಇಂದು ಸುರತ್ಕಲ್ ಬಂದ್- ಪೊಲೀಸ್ ನಿರ್ಬಂಧದ ನಡುವೆಯೂ ಶವಯಾತ್ರೆಗೆ ಸಿದ್ಧತೆ

    ಮಂಗಳೂರು: ಬಜರಂಗದಳ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆಗಳು ಇಂದು ಸುರತ್ಕಲ್ ಮತ್ತು ಕಾಟಿಪಳ್ಳ ಬಂದ್‍ಗೆ ಕರೆ ಕೊಟ್ಟಿವೆ.

    ಸುರತ್ಕಲ್ ಕೋಮು ಸೂಕ್ಷ್ಮತೆಯ ಪ್ರದೇಶವಾಗಿದ್ದು, ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಜೊತೆಗೆ ಬುಧವಾರ ರಾತ್ರಿಯಿಂದ ಇಂದು ರಾತ್ರಿ 10 ಗಂಟೆಯವರೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಆಕ್ಟ್ 35ರ ಪ್ರಕಾರ ನಿರ್ಬಂಧಕಾಜ್ಞೆ ಜಾರಿ ಮಾಡಲಾಗಿದೆ. ನಿರ್ಬಂಧಕಾಜ್ಞೆ ಯ ಪ್ರಕಾರ ಸಭೆ, ಮೆರವಣಿಗೆಗೆ ಅನುಮತಿ ಇಲ್ಲ. ಮಂಗಳೂರು ನಗರ ಪೊಲೀಸ್ ಕಮೀಷನರ್ ಟಿಆರ್ ಸುರೇಶ್ ನಿರ್ಬಂಧಕಾಜ್ಞೆ ಜಾರಿಗೊಳಿಸಿ ಆದೇಶ ನೀಡಿದ್ದಾರೆ.

    ಪೊಲೀಸ್ ನಿರ್ಬಂಧದ ಹೊರತಾಗಿಯೂ ದೀಪಕ್ ಶವಯಾತ್ರೆ ನಡೆಸಲು ಹಿಂದೂ ಸಂಘಟನೆಗಳಿಂದ ಸಿದ್ಧತೆ ನಡೆದಿದೆ. ಬೆಳಗ್ಗೆ 10 ಗಂಟೆ ವೇಳೆಗೆ ದೀಪಕ್ ರಾವ್ ಶವಯಾತ್ರೆ ಆರಂಭವಾಗಲಿದ್ದು, ಎಜೆ ಆಸ್ಪತ್ರೆಯ ಶವಗಾರದಿಂದ ಕಾಟಿಪಳ್ಳದಲ್ಲಿರುವ ದೀಪಕ್ ಮನೆ ತನಕ ಯಾತ್ರೆ ಸಾಗಲಿದೆ. ಶವಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿರುವ ನಿರೀಕ್ಷೆ ಇದೆ.  ಮಧ್ಯಾಹ್ನದ ವೇಳೆಗೆ ಸುರತ್ಕಲ್‍ನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

    ಪ್ರಕರಣ ಸಂಬಂಧ ನೌಶಾದ್, ರಿಜ್ವಾನ್, ಪಿಂಕಿ ನವಾಜ್ ಹಾಗೂ ನಿರ್ಷಾನ್ ಎಂಬ ನಾಲ್ವರು ಆರೋಪಿಗಳನ್ನು ಮುಲ್ಕಿ ಮತ್ತು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಆದ್ರೆ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರ ವಶಕ್ಕೆ ನೀಡುವ ವೇಳೆ ಪರಾರಿಯಾಗಲು ಯತ್ನಿಸಿದ್ದು, ರಿಜ್ವಾನ್ ಮತ್ತು ನೌಶಾದ್ ಕಾಲಿಗೆ ಗುಂಡು ಹಾರಿಸಿರುವ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಏನಿದು ಪ್ರಕರಣ?: ಡೊಕೊಮೊ ಮೊಬೈಲ್ ಕಂಪನಿಯಲ್ಲಿ ಕರೆನ್ಸಿ ಡಿಸ್ಟ್ರಿಬ್ಯೂಟರ್ ಆಗಿದ್ದ ಕೃಷ್ಣಾಪುರದ ಗಣೇಶ್ ಪುರ ನಿವಾಸಿ ದೀಪಕ್ ಅವರನ್ನು ಕಾಟಿಪಳ್ಳದಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಕಾರಿನಲ್ಲಿ ಬಂದ ನಾಲ್ವರ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಕಲೆಕ್ಷನ್ ಹಣವನ್ನು ಅಂಗಡಿಗೆ ಕೊಟ್ಟು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಸ್ವಿಫ್ಟ್ ಕಾರಿನಲ್ಲಿ ಬಂದವರು ಬೈಕನ್ನು ಅಡ್ಡಗಟ್ಟಿ ಮೂಡಾಯಿಕೋಡಿ ಎಂಬಲ್ಲಿ ಅಡ್ಡಗಟ್ಟಿ ಈ ಕೃತ್ಯ ಎಸಗಿದ್ದರು.

    ಕೊಲೆ ಮಾಡಿ ಸ್ವಿಫ್ಟ್ ಕಾರಿನಲ್ಲಿ ಮೂಡುಬಿದಿರೆ ಮೂಲಕ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಮೂಲ್ಕಿ ಸಬ್ ಇನ್ಸ್ ಪೆಕ್ಟರ್ ಶೀತಲ್ ಕುಮಾರ್ ಸಿನಿಮೀಯ ರೀತಿ ಬೆನ್ನಟ್ಟಿ ಮಿಜಾರು ಎಂಬಲ್ಲಿ ಅಡ್ಡಗಟ್ಟಿ ಬಂಧಿಸಿದ್ದಾರೆ.  ಪೂರ್ವ ದ್ವೇಷದಿಂದ ಕೃತ್ಯ ನಡೆದಿರುವ ಶಂಕೆಯಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಹೇಳಿಕೆ ನೀಡಿದ್ದಾರೆ. ಕೊಲೆ ನಡೆದ ಬಳಿಕ ಸುರತ್ಕಲ್‍ನಲ್ಲಿ ಕಿಡಿಗೇಡಿಗಳು ಖಾಸಗಿ ಬಸ್ ಮೇಲೆ ಕಲ್ಲು ಎಸೆದಿದ್ದು, ಬಸ್ಸಿನ ಮುಂದಿನ ಗಾಜು ಪುಡಿಪುಡಿಯಾಗಿದೆ.