Tag: deepak rao

  • ದುಷ್ಕರ್ಮಿಗಳ ದಾಳಿಗೆ ತುತ್ತಾಗಿದ್ದ ಬಶೀರ್ ಸ್ಥಿತಿ ಚಿಂತಾಜನಕ- ಆಸ್ಪತ್ರೆಗೆ ಸಚಿವ ಯುಟಿ ಖಾದರ್ ಭೇಟಿ

    ದುಷ್ಕರ್ಮಿಗಳ ದಾಳಿಗೆ ತುತ್ತಾಗಿದ್ದ ಬಶೀರ್ ಸ್ಥಿತಿ ಚಿಂತಾಜನಕ- ಆಸ್ಪತ್ರೆಗೆ ಸಚಿವ ಯುಟಿ ಖಾದರ್ ಭೇಟಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಸುರತ್ಕಲ್ ನ ಕಾಟಿಪಳ್ಳದಲ್ಲಿ ದೀಪಕ್ ರಾವ್ ಹತ್ಯೆಯ ದಿನದಂದೇ ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ಬಶೀರ್‍ರನ್ನು ನೋಡಲು ಸಚಿವ ಯುಟಿ ಖಾದರ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

    ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಶೀರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರಿಂದ ಯುಟಿ ಖಾದರ್ ಮಾಹಿತಿ ಪಡೆದುಕೊಂಡಿದ್ದಾರೆ. ಬಶೀರ್ ಕುಟುಂಬಸ್ಥರಿಗೆ ಯು.ಟಿ.ಖಾದರ್ ಸಾಂತ್ವನವನ್ನು ಹೇಳಿದ್ದು, ಸರ್ಕಾರದಿಂದ ಚಿಕಿತ್ಸೆಯ ವೆಚ್ಚ ಭರಿಸಲು ಸಹಕರಿಸೋದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ದೀಪಕ್ ಹತ್ಯೆ ನಡೆದ ರಾತ್ರಿ ಮಂಗ್ಳೂರಿನಲ್ಲಿ ವ್ಯಾಪಾರಿಯ ಮೇಲೆ ಮಾರಣಾಂತಿಕ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ

    ಸದ್ಯ ಬಶೀರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಗಂಟಲು ತಲೆ ಮತ್ತು ಎದೆಯ ಕೆಳಭಾಗಗಕ್ಕೆ ತೀವ್ರ ಪೆಟ್ಟಾಗಿದೆ. ಹೀಗಾಗಿ ದೇಹದ ಕೆಲ ಭಾಗಗಳು ನಿಷ್ಕ್ರಿಯಗೊಂಡಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

    ಜನವರಿ 3ರಂದು ಕೊಟ್ಟಾರ ಚೌಕಿಯಲ್ಲಿರುವ ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೊರಡುವ ಸಂದರ್ಭದಲ್ಲಿ 3 ಬೈಕ್ ನಲ್ಲಿ ಬಂದ 7 ಮಂದಿ ದುಷ್ಕರ್ಮಿಗಳು ಬಶೀರ್ ಮೇಲೆ ತಲ್ವಾರ್ ನಿಂದ ಮನಬಂದಂತೆ ದಾಳಿ ನಡೆಸಿದ್ದರು. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.youtube.com/watch?v=prf8LAzRcus

    https://www.youtube.com/watch?v=XIln_78eJlQ

    https://www.youtube.com/watch?v=nqZ3ZShX1q0

  • ಒಂದೇ ದಿನದಲ್ಲಿ ದೀಪಕ್ ರಾವ್ ಕುಟುಂಬಕ್ಕೆ ಹರಿದುಬಂತು 17,43,859 ರೂ.!

    ಒಂದೇ ದಿನದಲ್ಲಿ ದೀಪಕ್ ರಾವ್ ಕುಟುಂಬಕ್ಕೆ ಹರಿದುಬಂತು 17,43,859 ರೂ.!

    ಮಂಗಳೂರು: ಇಲ್ಲಿನ ಸುರತ್ಕಲ್ ಸಮೀಪದ ಕಾಟಿಪಳ್ಳ ಎಂಬಲ್ಲಿ ದೀಪಕ್ ರಾವ್ ಹತ್ಯೆ ನಡೆದ ಬಳಿಕ ಜನಸಾಮಾನ್ಯರು ಬಡ ಕುಟುಂಬದ ಪರವಾಗಿ ಸ್ಪಂದಿಸಿದ್ದಾರೆ. ಇದಕ್ಕೆ ಸಾಕ್ಷಿ ದೀಪಕ್ ತಾಯಿಯ ಬ್ಯಾಂಕ್ ಖಾತೆಗೆ  ಜಮೆಯಾದ ಹಣ.

    ಹೌದು. ದೀಪಕ್ ತಾಯಿ ಪ್ರೇಮಾ ರಾವ್ ಅವರ ಮಂಗಳೂರಿನ ಕಾಟಿಪಳ್ಳದ ಸಿಂಡಿಕೇಟ್ ಬ್ಯಾಂಕಿನಲ್ಲಿ ಬರೋಬ್ಬರಿ 17,43,859 ರೂಪಾಯಿ ಸಂಗ್ರಹವಾಗಿದೆ. ತಂದೆಯನ್ನು ಸಣ್ಣ ವಯಸ್ಸಲ್ಲಿಯೇ ಕಳಕೊಂಡ ದೀಪಕ್ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಹೀಗಾಗಿ ದೀಪಕ್ ಕೊಲೆಯಾಗಿದ್ದು ಕುಟುಂಬ ಮತ್ತು ಗ್ರಾಮಸ್ಥರನ್ನು ದಿಗ್ಭ್ರಾಂತಿಗೊಳಿಸಿತ್ತು.

    ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ದೀಪಕ್ ತಾಯಿಯ ಅಕೌಂಟ್ ಡಿಟೈಲ್ಸ್ ಹಾಕಿ, ಸಹೃದಯಿಗಳು ಈ ಬಡ ಕುಟುಂಬಕ್ಕೆ ಹಣದ ಸಹಾಯ ನೀಡುವಂತೆ ವಿನಂತಿಸಿಕೊಂಡಿದ್ದರು. ಇದಕ್ಕೆ ಭಾರೀ ಸ್ಪಂದನೆ ವ್ಯಕ್ತವಾಗಿದ್ದು ಒಂದೇ ದಿನದಲ್ಲಿ 17 ಲಕ್ಷಕ್ಕಿಂತ ಹೆಚ್ಚು ಮೊತ್ತ ಜಮಾವಣೆಯಾಗಿದೆ.

    ಇನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಹತ್ತು ಲಕ್ಷ ರೂ. ಹಾಗೂ ಬಿಜೆಪಿ ವತಿಯಿಂದ 5 ಲಕ್ಷ ರೂ. ಮತ್ತು ಮಾಜಿ ಸಚಿವ ಕೃಷ್ಣ ಪಾಲೆಮಾರ್ ವೈಯಕ್ತಿಕವಾಗಿ 5 ಲಕ್ಷ ರೂ. ಮೊತ್ತ ನೀಡಿದ್ದಾರೆ. ಈ ಮೂಲಕ ದೀಪಕ್ ಪರವಾಗಿ ಸಮಾಜ ಕಂಬನಿ ಮಿಡಿದಿದೆ ಅನ್ನುವುದಕ್ಕಿದು ಸಾಕ್ಷಿ. ಇದೇ ವೇಳೆ, ದೀಪಕ್ ಕುಟುಂಬಸ್ಥರು ಸ್ಥಳೀಯ ಶಾಸಕ ಮೊಯ್ದೀನ್ ಬಾವಾ ನೀಡಿದ್ದ 5 ಲಕ್ಷ ರೂಪಾಯಿ ಚೆಕ್ಕನ್ನು ನಿರಾಕರಿಸಿದ್ದಾರೆ.

    ಬುಧವಾರ ಮಧ್ಯಾಹ್ನ ಸುಮಾರು 1.30ರ ಸಮಯಕ್ಕೆ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದೀಪಕ್ ರಾವ್ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ರು. ಕೂಡಲೇ ಎಚ್ಚೆತ್ತ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

    https://www.youtube.com/watch?v=h2ySxt7VrtE

    https://www.youtube.com/watch?v=0iJpHrCbDbc

     

     

     

     

  • ದೀಪಕ್ ಹತ್ಯೆ ನಡೆದ ರಾತ್ರಿ ಮಂಗ್ಳೂರಿನಲ್ಲಿ ವ್ಯಾಪಾರಿಯ ಮೇಲೆ ಮಾರಣಾಂತಿಕ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ

    ದೀಪಕ್ ಹತ್ಯೆ ನಡೆದ ರಾತ್ರಿ ಮಂಗ್ಳೂರಿನಲ್ಲಿ ವ್ಯಾಪಾರಿಯ ಮೇಲೆ ಮಾರಣಾಂತಿಕ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ

    ಮಂಗಳೂರು: ದೀಪಕ್ ರಾವ್ ಹತ್ಯೆಯಾದ ಬುಧವಾರದಂದು ಮಂಗಳೂರಿನ ಕೊಟ್ಟಾರಚೌಕಿಯಲ್ಲಿ ವ್ಯಾಪಾರಿ ಬಶೀರ್ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆಯ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.

    ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಶೀರ್ ರಾತ್ರಿ 11.30ರ ಸುಮಾರಿಗೆ ತನ್ನ ಮನೆಯತ್ತ ತೆರಳುತ್ತಿದ್ದರು. ಈ ವೇಳೆ 3 ಬೈಕ್‍ನಲ್ಲಿ ಬಂದ 7 ಜನರ ತಂಡ ಏಕಾಏಕಿ ಬಶೀರ್ ಮೇಲೆ ತಲ್ವಾರ್ ದಾಳಿ ನಡೆಸಿ ಪರಾರಿಯಾಗಿದ್ದರು.

    ಈ ದಾಳಿ ಭಯಾನಕವಾಗಿದ್ದು ಅಂಬುಲೆನ್ಸ್ ಚಾಲಕ ಶೇಖರ್ ಎಂಬುವವರು ಬಶೀರ್ ಅವರನ್ನು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಶೀರ್ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ.

    ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಶೇಖರ್, ರಾತ್ರಿ  ನಾನು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದೆ. ಈ ವೇಳೆ ದಾರಿ ಮಧ್ಯೆ ವ್ಯಕ್ತಿ ಒಬ್ಬರು ಬಿದ್ದಿದ್ದರು. ಅಪಘಾತವಾಗಿ ರಸ್ತೆಗೆ ಬಿದ್ದಿರಬಹುದು ಎಂದು ಭಾವಿಸಿ ಅವರನ್ನು ಅಂಬುಲೆನ್ಸ್ ಹಾಕಿ ಆಸ್ಪತ್ರೆಗೆ ದಾಖಲಿಸಿದೆ. 5, 10 ನಿಮಿಷ ತಡವಾಗಿದ್ದರೂ ಅವರು ಬದುಕಿ ಉಳಿಯುವುದು ಕಷ್ಟವಾಗಿತ್ತು. ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇವತ್ಯಾಕೆ ಬಂದೆ..ನೀನ್ ಹೋಗು ಮೊದ್ಲು, ಚೆಕ್ ಬೇಡ ಏನು ಬೇಡ – ಶಾಸಕ ಬಾವಾಗೆ ದೀಪಕ್ ಕುಟುಂಬಸ್ಥರ ಬೈಯ್ಗುಳ

    https://youtu.be/prf8LAzRcus

  • ಇವತ್ಯಾಕೆ ಬಂದೆ..ನೀನ್ ಹೋಗು ಮೊದ್ಲು, ಚೆಕ್ ಬೇಡ ಏನು ಬೇಡ – ಶಾಸಕ ಬಾವಾಗೆ ದೀಪಕ್ ಕುಟುಂಬಸ್ಥರ ಬೈಯ್ಗುಳ

    ಇವತ್ಯಾಕೆ ಬಂದೆ..ನೀನ್ ಹೋಗು ಮೊದ್ಲು, ಚೆಕ್ ಬೇಡ ಏನು ಬೇಡ – ಶಾಸಕ ಬಾವಾಗೆ ದೀಪಕ್ ಕುಟುಂಬಸ್ಥರ ಬೈಯ್ಗುಳ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಸರತ್ಕಲ್ ನ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ದೀಪಕ್ ರಾವ್ ಮನೆಗೆ ಇಂದು ದ.ಕ ಜಿಲ್ಲೆಯ ಸುರತ್ಕಲ್ ಶಾಸಕ ಮೊಯ್ದೀನ್ ಬಾವಾ ಭೇಟಿ ನೀಟಿದ್ರು.

    ಬಾವಾ ಅವರು ದೀಪಕ್ ಮನೆಗೆ ಭೇಟಿ ನೀಡುತ್ತಿದ್ದಂತೆಯೇ ಮೃತನ ಕುಟುಂಬಸ್ಥರು, ನಿನ್ನೆ, ಮೊನ್ನೆ ಎಲ್ಲಿದ್ರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ದೀಪಕ್ ಅವರ ತಾಯಿ ಪ್ರೇಮಾ ರಾವ್, ಮಗನನ್ನು ಕೊಂದವರಿಗೆ ಹೀಗೆಯೇ ಶಿಕ್ಷೆಯಾಗಬೇಕು. ಅವರಿಗೆ ಯಾರೂ ರಕ್ಷಣೆ ಕೊಡಬಾರದು ಅಂತ ಒತ್ತಾಯಿಸಿ ಶಾಸಕರ ಎದುರು ಕಣ್ಣೀರು ಹಾಕಿದ್ರು. ಈ ವೇಳೆ ದೀಪಕ್ ತಾಯಿಗೆ ಸಾಂತ್ವಾನ ಹೇಳಿದ ಬಾವಾ, ಭಗವಂತನಲ್ಲಿ ನಿಮ್ಮ ಕುಟಂಬಕ್ಕೆ ಪ್ರಾರ್ಥನೆ ಮಾಡುತ್ತೇನೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ನಾನು ಮಸೀದಿಯಲ್ಲಿ ನಮಾಜ್ ಸಂದರ್ಭ ಬೇಡುತ್ತೇನೆ. ದೀಪಕ್ ಕೊಲೆಯ ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಅಂದ್ರು.

    ಚೆಕ್ ನಿರಾಕರಣೆ: ಸಾಂತ್ವಾನ ಹೇಳಿದ ಬಳಿಕ ಬಾವಾ ಅವರು ದೀಪಕ್ ತಾಯಿಗೆ ಒತ್ತಾಯಪೂರ್ವಕವಾಗಿ ಚೆಕ್ ನೀಡಲು ಮುಂದಾದ್ರು. ಈ ವೇಳೆ ಪ್ರೇಮಾ ಅವರು ಚೆಕ್ ಬೇಡವೇ ಬೇಡ ಎಂದು ದೂರ ತಳ್ಳಿದ್ರು.

    ಈ ಸಂದರ್ಭದಲ್ಲಿ ನೆರೆದಿದ್ದ ದೀಪಕ್ ಕುಟುಂಬಸ್ಥರು ಹಾಗೂ ಸ್ಥಳೀಯರು ಶಾಸಕ ಅವರಿಗೆ ಬೈಗುಳದ ಸುರಿಮಳೆಗೈದ್ರು. ಅಲ್ಲದೇ ನಂತ್ರ ಮನೆಯಿಂದ ಹೊರ ಕಳುಹಿಸಿದ್ರು. ಶಾಸಕರ ಜೊತೆ ದಕ್ಷಿಣ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕೂಡ ಆಗಮಿಸಿದ್ದರು.

    https://www.youtube.com/watch?v=TmFE1kqWa2w

  • ದೀಪಕ್ ರಾವ್ ಹತ್ಯೆ ಪ್ರಕರಣ- ಪೊಲೀಸರ ಕೆಲಸವನ್ನು ಶ್ಲಾಘಿಸಿದ ಸಚಿವ ಆಂಜನೇಯ

    ದೀಪಕ್ ರಾವ್ ಹತ್ಯೆ ಪ್ರಕರಣ- ಪೊಲೀಸರ ಕೆಲಸವನ್ನು ಶ್ಲಾಘಿಸಿದ ಸಚಿವ ಆಂಜನೇಯ

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕೆಲಸ ಶ್ಲಾಘನೀಯ ಎಂದು ಸಚಿವ ಆಂಜನೇಯ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವರು, ಹತ್ಯೆ, ಸಾವು ಯಾವುದೂ ಆಗಬಾರದು. ಕೊಲೆ ಹಿಂದಿನ ಸತ್ಯ ತನಿಖೆಯಲ್ಲಿ ಬೆಳಕಿಗೆ ಬರುತ್ತೆ. ಸಾವಿನಲ್ಲಿ ಯಾವುದೇ ರಾಜಕೀಯ ಮಾಡಬಾರದು. ಘಟನೆಯಾದ ಕೆಲವೇ ಗಂಟೆಯಲ್ಲಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕೆಲಸ ನಿಜಕ್ಕೂ ಶ್ಲಾಘನೀಯವಾಗಿದೆ ಅಂದ್ರು.

    ಪ್ರಕರಣ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರುತ್ತದೆ. ಬಳಿಕ ತಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲಿದೆ ಅಂತ ಅವರು ಹೇಳಿದ್ರು.

    ಇದೇ ವೇಳೆ ತನ್ನ ರಾಜಕೀಯ ನಡೆಯ ಬಗ್ಗೆ ಮಾತನಾಡಿದ ಅವರು, ನಾನು ಕ್ಷೇತ್ರ ಬದಲಾವಣೆ ಮಾಡುವುದಿಲ್ಲ. ಹೊಳಲ್ಕೆರೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ನನ್ನ ಜಿಲ್ಲೆ ಚಿತ್ರದುರ್ಗ. 44 ವರ್ಷದಿಂದ ಇಲ್ಲೆ ರಾಜಕೀಯ ಮಾಡಿದ್ದೇನೆ. ಸೋಲು, ಗೆಲುವು ಮಂತ್ರಿ ಸ್ಥಾನ ಎಲ್ಲವನ್ನು ಇದೇ ಕ್ಷೇತ್ರ ಕೊಟ್ಟಿದೆ. ನನ್ನ ಅಭಿಮಾನಿಗಳು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಕೇಳಿಕೊಳ್ತಿದ್ದಾರೆ. ಆದ್ರೆ ನಾನು ಕ್ಷೇತ್ರ ಬದಲಾಯಿಸೊಲ್ಲ. ಹೀಗಾಗಿ ಹೊಳಲ್ಕೆರೆಯಿಂದಲೇ ಈ ಬಾರಿ ಸ್ಪರ್ಧೆ ಮಾಡಿ ಗೆಲ್ತೀನಿ ಅಂತ ತಿಳಿಸಿದ್ರು.

    ಬಹುಮಾನ ಘೋಷಣೆ: ದೀಪಕ್ ರಾವ್ ಹತ್ಯೆ ಪ್ರಕರಣ ಭೇದಿಸುವಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರನ್ನು ಎಡಿಜಿಪಿ ಕಮಲ್ ಪಂತ್ ಅವರು ಪ್ರಶಂಸಿಸಿದ್ದು, ರೂ.1,20,000 ಬಹುಮಾನ ಘೋಷಣೆ ಮಾಡಿದ್ದಾರೆ. ದೀಪಕ್ ಹತ್ಯೆ ನಡೆದ 5 ಗಂಟೆಗಳ ಒಳಗಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಒಟ್ಟು ನಾಲ್ವರು ಆರೋಪಿಗಳನ್ನು ಬುಧವಾರ ಬಂಧನಕ್ಕೊಳಪಡಿಸಿದ್ದರು. ಗೃಹ ರಕ್ಷಕ ದಳದ ಸಿಬ್ಬಂದಿ ಹರೀಶ್ ಸೇರಿದಂತೆ ಒಟ್ಟು 6 ಮಂದಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

  • ಜಾಸ್ತಿ ಪೊಗರು ಮಾಡ್ಬೇಡ.. ಬೀದಿ ಹೆಣ ಆಗ್ತಿಯಾ – ಹಿಂದೂ ಯುವಕನಿಗೆ ಫೇಸ್‍ಬುಕ್ ಥ್ರೆಟ್

    ಜಾಸ್ತಿ ಪೊಗರು ಮಾಡ್ಬೇಡ.. ಬೀದಿ ಹೆಣ ಆಗ್ತಿಯಾ – ಹಿಂದೂ ಯುವಕನಿಗೆ ಫೇಸ್‍ಬುಕ್ ಥ್ರೆಟ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದೀಪಕ್ ರಾವ್ ಹತ್ಯೆ ನಡೆದ ಬೆನ್ನಲ್ಲೇ ಮತ್ತೊಂದು ಕೊಲೆಗೆ ಫೇಸ್ಬುಕ್ ಮೂಲಕ ಬಹಿರಂಗ ಬೆದರಿಕೆ ಹಾಕಲಾಗಿದೆ.

    `ಟ್ರೂ ಮೀಡಿಯಾ ನೆಟ್ವರ್ಕ್’ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಸುಬ್ಬು ಎಂಬ ಯವಕನಿಗೆ ಈ ಬೆದರಿಕೆ ಹಾಕಲಾಗಿದೆ. ತೊಡೆಯಲ್ಲಿ ಕಾಲು ಕಿಲೊ ಮಾಂಸ ಇಲ್ಲ. ಪೊಗರು ಜಾಸ್ತಿ ಮಾಡ್ಬೇಡ. ನೀನು ಎಲ್ಲಾದ್ರು ಬೀದಿ ಹೆಣವಾಗ್ತೀಯ ಅಷ್ಟೇ. ಮರ್ಯಾದಿಯಾಗಿ ಕುಟುಂಬ ಸಾಕಲು ಕಲಿ. ಮತ್ತೆ ಮತ್ತೆ ಜಿಹಾದಿ ಜಿಹಾದಿ ಅಂತ ಬೊಬ್ಬೆ ಹೊಡೆದರೆ ತಾಳ್ಮೆ ಕಳೆದುಕೊಂಡು ನಿನ್ನ ಬೀದಿ ಹೆಣ ಮಾಡಿ ಬಿಸಾಕ್ತಾರೆ ಅಷ್ಟೇ ಎಂದು ಮತ್ತೊಬ್ಬ ಹಿಂದು ಕಾರ್ಯಕರ್ತನ ಹತ್ಯೆ ಮಾಡುವುದಾಗಿ ಬಹಿರಂಗ ಎಚ್ಚರಿಕೆ ನೀಡಿದ್ದು ಜಿಲ್ಲೆಯ ಜನರಲ್ಲಿ ಭಯದ ವಾತಾವರಣವನ್ನು ಉಂಟುಮಾಡಿದೆ.

    ಸಾಮಾಜಿಕ ಜಾಲತಾಣಗಳ ಅತಿರೇಕದ ವರ್ತನೆ ಬಗ್ಗೆ ಪೊಲೀಸರು ಗಮನಿಸಬೇಕಾಗಿದೆ. ದೀಪಕ್ ರಾವ್ ವಿರುದ್ಧವೂ ಹತ್ಯೆಗೆ ಮೊದಲೇ ಬೆದರಿಕೆ ಹಾಕಿದ್ದ ಅಂಶ ಬಯಲಾಗಿದೆ. ಇದೀಗ ಆ ವಿಚಾರದಲ್ಲಿ ವಿರುದ್ಧ ಕೋಮಿನವರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಕಾದಾಡುತ್ತಿದ್ದಾರೆ.

  • ದೀಪಕ್ ರಾವ್ ಹತ್ಯೆಗೆ ಫಾರಿನ್ ಫಂಡಿಂಗ್- ಟಾರ್ಗೆಟ್ ಗ್ರೂಪ್ ಮೂಲಕ ಸುಪಾರಿ

    ದೀಪಕ್ ರಾವ್ ಹತ್ಯೆಗೆ ಫಾರಿನ್ ಫಂಡಿಂಗ್- ಟಾರ್ಗೆಟ್ ಗ್ರೂಪ್ ಮೂಲಕ ಸುಪಾರಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಹತ್ಯೆಗೆ ಸ್ಫೋಟಕ ತಿರುವೊಂದು ದೊರೆತಿದೆ.

    ದೀಪಕ್ ರಾವ್ ಹತ್ಯೆಗೆ ಫಾರಿನ್ ಫಂಡಿಂಗ್ ಬಂದಿದ್ದು, ಉಳ್ಳಾಲದ ಟಾರ್ಗೆಟ್ ಗ್ರೂಪ್ ಮೂಲಕ ಹತ್ಯೆಗೆ ಸುಪಾರಿ ಕೊಡಲಾಗಿತ್ತು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರೋ ನಾಲ್ವರು ಈ ಟಾರ್ಗೆಟ್ ಗ್ರೂಪ್ ಪ್ರಮುಖನ ಸಹಚರರಾಗಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್

    ಟಾರ್ಗೆಟ್ ಗ್ರೂಪಿನಲ್ಲಿದ್ದ ಕಾಟಿಪಳ್ಳದ ಸಫ್ವಾನ್ ಸುರತ್ಕಲ್ ಪ್ರದೇಶದಲ್ಲಿ ಗ್ಯಾಂಗ್ ಕಟ್ಟಿಕೊಂಡಿದ್ದ. ಹೀಗಾಗಿ ಪೊಲೀಸರು ರೌಡಿ ಸಫ್ವಾನ್ ಬಂಧನಕ್ಕೆ ಬಲೆ ಬೀಸಿದ್ದರು. ಆದ್ರೆ ರಾಜಕಾರಣಿಗಳಿಂದ ಇದಕ್ಕೆ ತಡೆಹಿಡಿಯಲಾಗುತ್ತಿತ್ತು. ಎರಡು ತಿಂಗಳ ಹಿಂದೆಯಷ್ಟೇ ರೌಡಿ ತಂಡವೊಂದು ಸಫ್ವಾನ್ ನನ್ನು ಕೊಲೆ ಮಾಡಿತ್ತು. ಇತ್ತೀಚೆಗೆ ಚಾರ್ಮಡಿಯಲ್ಲಿ ಸಫ್ವಾನ್ ಎಂಬಾತನ ಶವ ಪತ್ತೆಯಾಗಿತ್ತು. ಆತನ ಕೊಲೆಯನ್ನು ಉಳ್ಳಾಲದ ಟಾರ್ಗೆಟ್ ಗುಂಪಿನ ಇನ್ನೊಬ್ಬ ಸಫ್ವಾನ್ ಎಂಬಾತ ನಡೆಸಿದ್ದ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿತ್ತು. ಸದ್ಯ ಆರೋಪಿ ಸಫ್ವಾನ್ ಜೈಲಿನಲ್ಲಿದ್ದಾನೆ ಅಂತ ಪಬ್ಲಿಕ್ ಟಿವಿಗೆ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ. ಇದನ್ನೂ ಓದಿ: ನಾನು ನಂಬಿದ ದೇವರು ಆರೋಪಿಗಳಿಗೆ ಶಿಕ್ಷೆ ನೀಡ್ತಾನೆ: ದೀಪಕ್ ತಾಯಿ ಕಣ್ಣೀರು

    ಟ್ರಾವೆಲ್ ಏಜೆನ್ಸಿ ಮೂಲಕ ತೆರೆದುಕೊಂಡಿದ್ದ ಟಾರ್ಗೆಟ್ ಗ್ರೂಪ್, ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಎಂಟು ವರ್ಷಗಳ ಹಿಂದೆ ಆರಂಭಗೊಂಡಿತ್ತು. ಸುರತ್ಕಲ್, ಮಂಗಳೂರು, ಉಳ್ಳಾಲದಲ್ಲಿ ಸಕ್ರಿಯವಾಗಿರುವ ಈ ತಂಡದಿಂದ ಮೂರು ತಿಂಗಳ ಹಿಂದೆ ಉಳ್ಳಾಲದಲ್ಲಿ ಬಿಜೆಪಿ ಕಾರ್ಯಕರ್ತ ಝುಬೈರ್ ಎಂಬವರನ್ನು ಕೊಲೆ ಮಾಡಲಾಗಿದೆ. ಇನ್ನು ಈ ಟಾರ್ಗೆಟ್ ಗ್ರೂಪ್ ಗೆ ಸೌದಿ, ದುಬೈನಿಂದ ಹಣಕಾಸಿನ ನೆರವು ಹರಿದುಬರುತ್ತಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: 7 ವರ್ಷಗಳ ಕಾಲ ನನ್ನ ಜೊತೆಯಿದ್ದ ದೀಪಕ್ ಸಾವು ಊಹಿಸಲು ಸಾಧ್ಯವಿಲ್ಲ: ಮಾಲೀಕ ಮಜೀದ್

    ಬುಧವಾರ ಮಧ್ಯಾಹ್ನ ಸುಮಾರು 1.30ರ ಸಮಯಕ್ಕೆ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದೀಪಕ್ ರಾವ್ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ರು. ಕೂಡಲೇ ಎಚ್ಚೆತ್ತ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ

    https://www.youtube.com/watch?v=h2ySxt7VrtE

    https://www.youtube.com/watch?v=0iJpHrCbDbc

    ಝುಬೈರ್ ಕೊಲೆ ಆರೋಪಿಗಳು

                                                                                    

  • ಪೊಲೀಸರು ಸದ್ದಿಲ್ಲದೇ ದೀಪಕ್ ರಾವ್ ಮೃತದೇಹ ಸಾಗಿಸಿದ್ದು ಯಾಕೆ ಗೊತ್ತಾ?

    ಪೊಲೀಸರು ಸದ್ದಿಲ್ಲದೇ ದೀಪಕ್ ರಾವ್ ಮೃತದೇಹ ಸಾಗಿಸಿದ್ದು ಯಾಕೆ ಗೊತ್ತಾ?

    ಮಂಗಳೂರು: ನಗರದ ಸುರತ್ಕಲ್ ಬಳಿಯ ಕಾಟಿಪಳ್ಳ ಎಂಬಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ದೀಪಕ್ ರಾವ್ ಹತ್ಯೆ ಬಳಿಕ ಗುರುವಾರ ಮಂಗಳೂರಿನಲ್ಲಿ ನಡೆಯಬೇಕಿದ್ದ ದೊಡ್ಡ ರಕ್ತಪಾತವನ್ನು ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ತಡೆದಿದ್ದಾರೆ.

    ನಿನ್ನೆ ಮಂಗಳೂರಿನ ಎಜೆ ಆಸ್ಪತ್ರೆಯಿಂದ ಸುರತ್ಕಲ್‍ವರೆಗೆ ದೀಪಕ್ ರಾವ್ ಶವಯಾತ್ರೆಗೆ ಹಿಂದೂ ಸಂಘಟನೆಗಳು ನಿರ್ಧರಿಸಿದ್ದವು. ಈ ವೇಳೆ ಮತ್ತೂ ಮೂವರ ಹೆಣ ಬೀಳುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಕೆಂಪಯ್ಯ ಮುನ್ನೆಚ್ಚರಿಕಾ ಕ್ರಮವಾಗಿ ಶವಯಾತ್ರೆಗೆ ಬ್ರೇಕ್ ಹಾಕಿದ್ರು. ಇದನ್ನೂ ಓದಿ: ಸದ್ದಿಲ್ಲದೇ ದೀಪಕ್ ಮೃತದೇಹ ಸಾಗಿಸಿದ ಪೊಲೀಸರು- ಆಂಬುಲೆನ್ಸ್ ನಿಂದ ಶವ ಇಳಿಸದಂತೆ ಆಕ್ರೋಶ

    ವಿಷಯ ತಿಳಿದ ಕೂಡಲೇ ಯಾರಿಗೂ ಗೊತ್ತಾಗದಂತೆ ಶವವನ್ನು ಮನೆಗೆ ತಲುಪಿಸುವಂತೆ ಎಡಿಜಿಪಿ ಕಮಲ್ ಪಂತ್‍ಗೆ ಸೂಚನೆ ನೀಡಿದ್ರು. ಬಳಿಕ ಎಡಿಜಿಪಿ ಕಮಲ್ ಪಂತ್, ಕಮಿಷನರ್ ಸುರೇಶ್ ಮತ್ತು ಎಸ್ಪಿ ಸುದೀಂದ್ರ ಸಹಾಯ ಪಡೆದು ಆಸ್ಪತ್ರೆಯ ವೈದ್ಯರಿಗೂ ತಿಳಿಯದಂತೆ ಶವವನ್ನು ಸುರತ್ಕಲ್‍ನ ಮನೆಗೆ ಸಾಗಿಸಿದ್ರು. ಇದನ್ನೂ ಓದಿ: ದೀಪಕ್ ಹತ್ಯೆ ಖಂಡಿಸಿ ಇಂದು ಸುರತ್ಕಲ್ ಬಂದ್- ಪೊಲೀಸ್ ನಿರ್ಬಂಧದ ನಡುವೆಯೂ ಶವಯಾತ್ರೆಗೆ ಸಿದ್ಧತೆ

    ಮನೆಯ ಸುತ್ತ ಪೊಲೀಸರ ಏಳು ಸುತ್ತಿನ ಕೋಟೆ ನಿರ್ಮಾಣ ಮಾಡಿ, ಏನಾದ್ರು ಆಗೋದಾದ್ರೆ ಸೂರತ್ಕಲ್ ಅಲ್ಲಿಯೇ ಆಗ್ಲಿ ರಸ್ತೆಯಲ್ಲಿ ಬೇರೆಯವರಿಗೆಲ್ಲಾ ಆಗೋದನ್ನ ತಡೆಯೋಣಾ ಅಂತ ಪ್ಲಾನ್ ಮಾಡಿ ಯಶಸ್ವಿಯೂ ಆಗಿದ್ರು ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

  • ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಹೆಚ್ಚಿದ ಒತ್ತಡ- ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆಗೆ ಬಿಜೆಪಿ ಕರೆ

    ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಹೆಚ್ಚಿದ ಒತ್ತಡ- ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆಗೆ ಬಿಜೆಪಿ ಕರೆ

    ಮಂಗಳೂರು: ಬಜರಂಗದಳ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತೆ ಉದ್ವಿಗ್ನಗೊಂಡಿದ್ದು, ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇದನ್ನೂ ಓದಿ: ನಾನು ನಂಬಿದ ದೇವರು ಆರೋಪಿಗಳಿಗೆ ಶಿಕ್ಷೆ ನೀಡ್ತಾನೆ: ದೀಪಕ್ ತಾಯಿ ಕಣ್ಣೀರು

    ಕಳೆದೆರಡು ದಿನಗಳಿಂದ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಗುರುವಾರ ರಾತ್ರಿ 10 ಗಂಟೆಗೆ ಪೊಲೀಸರು ತೆರವುಗೊಳಿಸಿದ್ದಾರೆ. ಇನ್ನು ನಿನ್ನೆ ಬಂದ್ ಇದ್ದ ಸುರತ್ಕಲ್‍ನಲ್ಲಿ ವಾಹನ ಸಂಚಾರ ಎಂದಿನಂತಿದ್ದು ಅಂಗಡಿ ಮುಂಗಟ್ಟುಗಳು ತೆರೆದಿವೆ. ಆದರೂ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಇದನ್ನೂ ಓದಿ: 7 ವರ್ಷಗಳ ಕಾಲ ನನ್ನ ಜೊತೆಯಿದ್ದ ದೀಪಕ್ ಸಾವು ಊಹಿಸಲು ಸಾಧ್ಯವಿಲ್ಲ: ಮಾಲೀಕ ಮಜೀದ್

    ಈ ಮಧ್ಯೆ ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಒತ್ತಡ ಹೆಚ್ಚಾಗ್ತಿದ್ದು, ರಾಜ್ಯಾದ್ಯಂತ ಹೋರಾಟ ಮಾಡಲು ಬಿಜೆಪಿ ನಿರ್ಧರಿಸಿದೆ. ಇಂದು ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಮತ್ತು ಪಿಎಫ್‍ಐ ನಿಷೇಧಕ್ಕೆ ಒತ್ತಾಯಿಸಿ ರಾಜ್ಯಾದ್ಯಂತ ರಸ್ತೆ ತಡೆ ಪ್ರತಿಭಟನೆಗೆ ಬಿಜೆಪಿ ಕರೆ ಕೊಟ್ಟಿದೆ. ಆದ್ರೆ ದೀಪಕ್ ರಾವ್ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಇದನ್ನೂ ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ

    ಬುಧವಾರ ಮಧ್ಯಾಹ್ನ ಸುಮಾರು 1.30 ರ ಸಮಯಕ್ಕೆ ಸುರತ್ಕಲ್ ಬಳಿಕ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕಡಿದು ದೀಪಕ್ ರಾವ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸದ್ಯ ಈ ಆರೋಪಿಗಳನ್ನು ಅಜ್ಞಾನ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ದೀಪಕ್ ಬರ್ಬರ ಹತ್ಯೆಗೈದ ನಾಲ್ವರು ಅರೆಸ್ಟ್: ಪೊಲೀಸರ ಮೇಲೆ ತಲ್ವಾರ್ ಬೀಸಿದ್ದ ಆರೋಪಿಗಳು