Tag: deepak rao

  • ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಆರೋಪಿಯ ಹತ್ಯೆಗೆ ಯತ್ನ

    ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಆರೋಪಿಯ ಹತ್ಯೆಗೆ ಯತ್ನ

    ಮಂಗಳೂರು: ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಆರೋಪಿಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.

    ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಕಾಟಿಪಳ್ಳ ಸೆಕೆಂಡ್ ಬ್ಲಾಕ್ ಬಳಿ ಘಟನೆ ನಡೆದಿದ್ದು, ಕೊಲೆಯ ಪ್ರಮುಖ ಆರೋಪಿ ಪಿಂಕಿ ನವಾಜ್ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಪಿಂಕಿ ನವಾಜ್ ಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಬಂದ ಆರು ಜನರ ತಂಡ ಪಿಂಕಿ ನವಾಜ್ ಮೇಲೆ ದಾಳಿ ನಡೆಸಿದೆ.

    ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆರು ಜನರ ತಂಡ ಪಿಂಕಿ ನವಾಜ್ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಪಿಂಕಿ ನವಾಜ್‍ಗೆ ಗಂಭೀರ ಗಾಯವಾಗಿದೆ.

    2018ರ ಜ.3ರಂದು ಮಧ್ಯಾಹ್ನ 1.30ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯದ್ವಾತದ್ವಾ ದೀಪಕ್ ರಾವ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ಕೂಡಲೇ ಮಾಹಿತಿ ಪಡೆದ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದರು.

  • ವಿಜಯದ ಬೆನ್ನಲ್ಲೇ ದೀಪಕ್ ರಾವ್ ಮನೆಗೆ ಡಾ.ವೈ ಭರತ್ ಶೆಟ್ಟಿ ಭೇಟಿ

    ವಿಜಯದ ಬೆನ್ನಲ್ಲೇ ದೀಪಕ್ ರಾವ್ ಮನೆಗೆ ಡಾ.ವೈ ಭರತ್ ಶೆಟ್ಟಿ ಭೇಟಿ

    ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊಯಿದ್ದೀನ್ ಬಾವಾ ಅವರನ್ನು ಬಿಜೆಪಿಯ ಡಾ.ಭರತ್ ಶೆಟ್ಟಿ ಸೋಲಿಸಿದ್ದಾರೆ.

    ಭರತ್ ಶೆಟ್ಟಿ ಜಯಗಳಿಸುತ್ತಿದ್ದಂತೆಯೇ ಇತ್ತೀಚೆಗೆ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ದಾಳಿಗೆ ತುತ್ತಾಗಿದ್ದ ದೀಪಕ್ ರಾವ್ ಕುಟುಂಬಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದೀಪಕ್ ತಾಯಿ ಭರತ್ ಶೆಟ್ಟಿಯವರ ಹಣೆಗೆ ಪ್ರಸಾದ ಹಚ್ಚಿ, ದೃಷ್ಟಿ ತೆಗೆದು, ಹೂಹಾರ ಹಾಕಿ ಸ್ವಾಗತಿಸಿದ್ದಾರೆ.

    ನಂತರ ಭರತ್ ಅವರು ದೀಪಕ್ ಫೋಟೋಗೆ ಹೂ ಹಾರ ಹಾಕಿ, ಕೈಮುಗಿದಿದ್ದಾರೆ. ಈ ಸಂದರ್ಭದಲ್ಲಿ ದೀಪಕ್ ತಾಯಿ ಕಣ್ಣೀರು ಸುರಿಸಿದ್ದು, ಭರತ್ ಶೆಟ್ಟಿ ಸಾಂತ್ವಾನ ನೀಡಿದ್ದಾರೆ.

    ಸದ್ಯ ಕರ್ನಾಟಕ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಏಕೈಕ ಪಕ್ಷವಾಗಿ ಹೊರಹೊಮ್ಮಿದ್ದು, ದಕ್ಷಿಣ ಕನ್ನಡದ ಒಟ್ಟು 8 ಕ್ಷೇತ್ರಗಳ ಪೈಕಿ 7ರಲ್ಲಿ ಜಯಭೇರಿ ಬಾರಿಸಿದೆ.

    ದಕ್ಷಿಣ ಕನ್ನಡ ಜಿಲ್ಲೆ ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದಾರೆ?
    * ಮೂಡಬಿದಿರೆ – ಉಮಾನಾಥ್ ಕೊಟ್ಯಾನ್(ಬಿಜೆಪಿ) – ಅಭಯ್‍ಚಂದ್ರ ಜೈನ್(ಕಾಂಗ್ರೆಸ್)
    * ಮಂಗಳೂರು ಉತ್ತರ – ಡಾ.ಭರತ್ ಶೆಟ್ಟಿ(ಬಿಜೆಪಿ) – ಮೊಯಿದ್ದೀನ್ ಬಾವಾ(ಕಾಂಗ್ರೆಸ್)
    * ಮಂಗಳೂರು ದಕ್ಷಿಣ – ವೇದವ್ಯಾಸ ಕಾಮತ್(ಬಿಜೆಪಿ) – ಜೆ.ಆರ್.ಲೋಬೋ(ಕಾಂಗ್ರೆಸ್)
    * ಮಂಗಳೂರು – ಯು.ಟಿ ಖಾದರ್(ಕಾಂಗ್ರೆಸ್) – ಸಂತೋಷ್ ಕುಮಾರ್ ರೈ(ಬಿಜೆಪಿ)
    * ಬಂಟ್ವಾಳ – ಯು.ರಾಜೇಶ್ ನಾಯ್ಕ್(ಬಿಜೆಪಿ) – ಬಿ.ರಮಾನಾಥ್ ರೈ(ಕಾಂಗ್ರೆಸ್)
    * ಪುತ್ತೂರು – ಸಂಜೀವ ಮಠಂದೂರ್(ಬಿಜೆಪಿ) – ಶಕುಂತಳಾ ಶೆಟ್ಟಿ(ಕಾಂಗ್ರೆಸ್)
    * ಸುಳ್ಯ – ಎಸ್.ಅಂಗಾರ(ಬಿಜೆಪಿ) – ಬಿ.ರಘು(ಕಾಂಗ್ರೆಸ್)
    * ಬೆಳ್ತಂಗಡಿ – ಹರೀಶ್ ಪೂಂಜಾ(ಬಿಜೆಪಿ) – ವಸಂತ ಬಂಗೇರ(ಕಾಂಗ್ರೆಸ್)

  • ಚರ್ಚೆ ನಡೆಯಲೆಂದೇ ತಪ್ಪಾಗಿ ವಿದ್ವತ್ ಹೆಸರನ್ನು ಹೇಳಿದ್ದೇನೆ: ಸ್ಪಷ್ಟನೆಯೊಂದಿಗೆ ಸಿಎಂಗೆ ಶಾ ಟಾಂಗ್

    ಚರ್ಚೆ ನಡೆಯಲೆಂದೇ ತಪ್ಪಾಗಿ ವಿದ್ವತ್ ಹೆಸರನ್ನು ಹೇಳಿದ್ದೇನೆ: ಸ್ಪಷ್ಟನೆಯೊಂದಿಗೆ ಸಿಎಂಗೆ ಶಾ ಟಾಂಗ್

    ಮಂಗಳೂರು: ಬೆಂಗಳೂರಿನ ಶಾಂತಿ ನಗರದ ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆಗೊಳಾಗಿರುವ ವಿದ್ವತ್ ಬಿಜೆಪಿ ಕಾರ್ಯಕರ್ತ ಎಂಬುದಾಗಿ ಚರ್ಚೆ ನಡೆಯಲೆಂದೇ ತಪ್ಪಾಗಿ ಹೇಳಿಕೆ ನೀಡಿದ್ದೇನೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ.

    ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ದೀಪಕ್ ರಾವ್ ಮನೆಗೆ ಭೇಟಿ ನೀಡಿ ಬಳಿಕ ಅಮಿತ್ ಶಾ ಸುರತ್ಕಲ್ ನಲ್ಲಿ ಪ್ರತಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನಾನು ವಿದ್ವತ್ ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೆ ನೀಡಿದ್ದರಿಂದ ಚರ್ಚೆ ಆರಂಭವಾಗಿದೆ. ಆದರೆ ನನ್ನ ಹೇಳಿಕೆಯಿಂದ ಕನಿಷ್ಠ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ಗೊತ್ತಾಗಿದೆ. ನನ್ನ ಹೇಳಿಕೆ ಚರ್ಚೆಯಾಗುತ್ತಿರುವುದಕ್ಕೆ ಮಾಧ್ಯಮಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.

    ನಾನು ಭಾಜಪದ ಅಧ್ಯಕ್ಷ ನೆಲೆಯಲ್ಲಿ ದೀಪಕ್ ರಾವ್ ಮನೆಗೆ ಭೇಟಿ ನೀಡಿದ್ದೇನೆ. ದೀಪಕ್ ಮನೆಯವರಿಗೆ ಸಾಂತ್ವಾನ ಹೇಳುವುದು ನನ್ನ ಕರ್ತವ್ಯ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಆಗಿದೆ. ಇಲ್ಲಿಯವರೆಗೆ ಮುಖ್ಯಮಂತ್ರಿ ಎಷ್ಟು ಮನೆಗೆ ಭೇಟಿ ನೀಡಿದ್ದಾರೆ. ದೀಪಕ್ ರಾವ್ ಮನೆಗೆ ಮಾತ್ರ ಭೇಟಿ ನೀಡಿದ್ದಾರೆ. ಬಶೀರ್ ಮನೆಗೆ ಭೇಟಿ ನೀಡಬೇಕಾದ್ದರಿಂದ ದೀಪಕ್ ಮನೆಗೆ ಹೋಗಿದ್ದರು. ಬೇರೆ ಹಿಂದೂ ಕಾರ್ಯಕರ್ತರ ಮನೆಗೆ ಏಕೆ ಭೇಟಿ ನೀಡಿಲ್ಲ ಎಂದು ಬಶೀರ್ ಮನೆಗೆ ಭೇಟಿ ನೀಡದ ಕುರಿತ ಪ್ರಶ್ನೆಗೆ ಉತ್ತರಿಸಿದರು. ಇದನ್ನೂ ಓದಿ: 68 ವರ್ಷ ಮುಚ್ಚಿದ್ದ ದೇಶದ ಭವಿಷ್ಯದ ಬಾಗಿಲನ್ನು 2014ರಲ್ಲಿ ತೆರೆದೆವು- ಕಾಂಗ್ರೆಸ್ಸಿಗೆ ಶಾ ಪಂಚ್

    ಇದಕ್ಕೂ ಮುನ್ನ ದೀಪಕ್ ರಾವ್ ಭಾವಚಿತ್ರಕ್ಕೆ ಅಮಿತ್ ಶಾ ಕೈ ಮುಗಿದು ನಮಸ್ಕರಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ದೀಪಕ್ ರಾವ್ ಕುಟುಂಕ್ಕೆ ಸಾಂತ್ವನ ಹೇಳಿದರು. ಅಮಿತ್ ಶಾ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯವಾರಿ ಉಸ್ತುವಾರಿ ಮುರಳೀಧರ್ ರಾವ್ ಸಾಥ್ ನೀಡಿದರು. ಇದನ್ನೂ ಓದಿ: ಸ್ವಲ್ಪ ಮಿಸ್ ಆಗಿದ್ರೆ ರೌಡಿ ನಲಪಾಡ್ ಸೌದಿಗೆ ಪರಾರಿ!

    https://www.youtube.com/watch?v=cc0Gkb0XdLw

  • ಕುಕ್ಕೆಯಲ್ಲಿ ವಿಶೇಷ ಪೂಜೆಯ ಬಳಿಕ ದೀಪಕ್ ರಾವ್ ಮನೆಗೆ ಭೇಟಿ ನೀಡಲಿರೋ ಅಮಿತ್ ಶಾ

    ಕುಕ್ಕೆಯಲ್ಲಿ ವಿಶೇಷ ಪೂಜೆಯ ಬಳಿಕ ದೀಪಕ್ ರಾವ್ ಮನೆಗೆ ಭೇಟಿ ನೀಡಲಿರೋ ಅಮಿತ್ ಶಾ

    ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರಾವಳಿಯಿಂದಲೇ ಆರಂಭಿಕ ಪ್ರವಾಸ ಹಮ್ಮಿಕೊಂಡಿದ್ದಾರೆ.

    ಇಂದು ಸಂಜೆ 5.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅಮಿತ್ ಶಾರನ್ನು ಸಾವಿರಾರು ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಳ್ಳಲಿದ್ದಾರೆ. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ.

    ಮಂಗಳವಾರ ಕುಕ್ಕೆಯಲ್ಲಿ ಬೆಳಗ್ಗೆ 7 ಗಂಟೆಗೆ ಅಮಿತ್ ಶಾ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಕರ್ನಾಟಕ ಚುನಾವಣೆ ಪ್ರಚಾರಕ್ಕೆ ಅಧಿಕೃತವಾಗಿ ಅಮಿತ್ ಶಾ ಇಳಿಯಲಿದ್ದಾರೆ. ನಾಳೆ ಬೆಳಗ್ಗೆ 9 ಗಂಟೆಗೆ ಸುಬ್ರಹ್ಮಣ್ಯದ ಕುಲ್ಕುಂದದಲ್ಲಿ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಮಾತನಾಡಲಿದ್ದಾರೆ. ಬಳಿಕ ಇತ್ತೀಚೆಗೆ ಕೊಲೆಯಾದ ಬಿಜೆಪಿ ಕಾರ್ಯಕರ್ತ ಸುರತ್ಕಲ್‍ನ ಕಾಟಿಪಳ್ಳದ ದೀಪಕ್ ರಾವ್ ಮನೆಗೆ ಭೇಟಿ ನೀಡಲಿದ್ದಾರೆ.

    ಮೈಸೂರಿನಲ್ಲಿ ಮೋದಿ: ಇತ್ತ ಪ್ರಧಾನಿ ನರೇಂದ್ರ ಮೋದಿಯವರು ಹಮ್ ಸಫರ್ ರೈಲು ಮತ್ತು ಹಲವು ಯೋಜನೆಗಳಿಗೆ ಚಾಲನೆ ನೀಡಲು ಮೈಸೂರಿಗೆ ಆಗಮಿಸಿದ್ದಾರೆ. ಭಾನುವಾರ ತಡರಾತ್ರಿ 11 ಗಂಟೆಗೆ ಮೋದಿ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಶಿಷ್ಠಾಚಾರದ ಅನ್ವಯ ಸ್ವಾಗತ ಕೋರಿದ್ರು. ರಾಜ್ಯಪಾಲ ವಜುಭಾಯಿ ವಾಲಾ ಕೂಡ ಮೋದಿಗೆ ಸ್ವಾಗತ ಕೋರಿದ್ರು. ಬಳಿಕ ಮೋದಿ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ರು.

    ಮೋದಿ ಆಗಮನಕ್ಕೆ ಕಾಯುತ್ತಿದ್ದ ನೂರಾರು ಅಭಿಮಾನಿಗಳು ಮೋದಿ ಆಗಮಿಸ್ತಿದ್ದಂತೆ ಜಯಘೋಷ ಕೂಗಿದರು. ಮೋದಿ ವಿಮಾನ ನಿಲ್ದಾಣದಿಂದ ನಿರ್ಗಮಿಸ್ತಿದ್ದಂತೆ ಸಿಎಂ ಕೂಡ ತೆರಳಲು ವಿಮಾನ ನಿಲ್ದಾಣದಿಂದ ಹೊರ ಬಂದರು. ಆಗಲೂ ಎಲ್ಲರು ಮೋದಿ ಮೋದಿ ಎಂದು ಘೋಷಣೆ ಕೂಗಿದರು.

    ದೀಪಕ್ ತಾಯಿ
  • ದೀಪಕ್ ರಾವ್, ಬಶೀರ್ ರಕ್ಷಣೆಗೆ ಮುಂದಾಗಿದ್ದ ಇಬ್ಬರಿಗೆ 50 ಸಾವಿರ ರೂ. ನೀಡಿದ ನ್ಯಾಯಮೂರ್ತಿ

    ದೀಪಕ್ ರಾವ್, ಬಶೀರ್ ರಕ್ಷಣೆಗೆ ಮುಂದಾಗಿದ್ದ ಇಬ್ಬರಿಗೆ 50 ಸಾವಿರ ರೂ. ನೀಡಿದ ನ್ಯಾಯಮೂರ್ತಿ

    ಮಂಗಳೂರು: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಹಾಗೂ ಬಶೀರ್ ಅವರ ಪ್ರಾಣ ರಕ್ಷಣೆಗೆ ಪ್ರಯತ್ನಿಸಿ ಮಾನವೀಯತೆ ಮೆರೆದಿದ್ದ ಇಬ್ಬರಿಗೆ ಕಲಬುರಗಿಯ ನ್ಯಾಯವಾದಿಯೊಬ್ಬರು 50 ಸಾವಿರ ರೂ. ನೀಡಿದ್ದಾರೆ.

    ಕಾಟಿಪಳ್ಳದ ಅಬ್ದುಲ್ ಮಜೀದ್ ಹಾಗೂ ಕೊಟ್ಟಾರದ ಶೇಖರ್ ಕುಲಾಲ್ ಅವರ ಮಾನವೀಯತೆಯನ್ನು ಗಮನಿಸಿದ್ದ ಕಲಬುರಗಿಯ ನ್ಯಾಯವಾದಿ ವಿಲಾಸ್ ಕುಮಾರ್ ಇಬ್ಬರಿಗೂ ತಲಾ 50 ಸಾವಿರದ ಚೆಕ್‍ಗಳನ್ನು ನೀಡಿದ್ದಾರೆ. ಆದರೆ ತಾನು ಮಾಡಿದ ಸಹಾಯ ಪ್ರಚಾರವಾಗಬಾರದೆಂದು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಚೆಕ್ಕನ್ನು ರವಾನಿಸಿದ್ದು ಇಬ್ಬರಿಗೂ ಹಸ್ತಾಂತರಿಸುವಂತೆ ಪತ್ರದಲ್ಲಿ ಕೇಳಿಕೊಂಡಿದ್ದರು.

    ಇಂತಹ ಒಳ್ಳೆಯ ಕಾರ್ಯ ಎಲ್ಲರಿಗೂ ತಿಳಿಯಬೇಕೆನ್ನುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್ ಅವರು ಇಬ್ಬರಿಗೂ ಚೆಕ್ ಅನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲೇ ವಿತರಿಸಿದರು. ಕಳೆದ ಜನವರಿ 3 ರಂದು ಕಾಟಿಪಳ್ಳದಲ್ಲಿ ದೀಪಕ್ ರಾವ್ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಅಲ್ಲಿನ ನಿವಾಸಿ ಅಬ್ದುಲ್ ಮಜೀದ್ ತಕ್ಷಣ ಆಸ್ಪತ್ರೆಗೆ ಸಾಗಿಸಿ ಬದುಕಿಸುವ ಯತ್ನ ಮಾಡಿದ್ದರು. ಅದೇ ದಿನ ಕೊಟ್ಟಾರದಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಅಬ್ದುಲ್ ಬಶೀರ್ ಅವರನ್ನು ಕೊಟ್ಟಾರ ನಿವಾಸಿ ಅಂಬುಲೆನ್ಸ್ ಚಾಲಕ ಶೇಖರ್ ಕುಲಾಲ್ ತಕ್ಷಣ ಆಸ್ಪತ್ರೆಗೆ ಸಾಗಿಸಿ ಬದುಕಿಸುವ ಪ್ರಯತ್ನಿಸಿದ್ದರು, ಆದರೆ ಜ.7 ರಂದು ಬಶೀರ್ ಸಾವನ್ನಪ್ಪಿದ್ದರು. ಈ ಇಬ್ಬರೂ ಮಾನವೀಯತೆ ಮೆರೆದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.

  • ಕೊಲೆಗೆ ಕೊಲೆಯೇ ಪ್ರತೀಕಾರ, ದೀಪಕ್ ರಾವ್ ಕೊಲೆಗೆ ಬಶೀರ್ ಹತ್ಯೆ – ವಿಹೆಚ್‍ಪಿ ಮುಖಂಡ ಶೇಣವ ಸಮರ್ಥನೆ

    ಕೊಲೆಗೆ ಕೊಲೆಯೇ ಪ್ರತೀಕಾರ, ದೀಪಕ್ ರಾವ್ ಕೊಲೆಗೆ ಬಶೀರ್ ಹತ್ಯೆ – ವಿಹೆಚ್‍ಪಿ ಮುಖಂಡ ಶೇಣವ ಸಮರ್ಥನೆ

    ಮಂಗಳೂರು: ಇತ್ತೀಚೆಗೆ ನಗರದ ಕೊಟ್ಟಾರದಲ್ಲಿ ದುಷ್ಕರ್ಮಿಗಳ ಮಾರಣಾಂತಿಕ ಹಲ್ಲೆಗೆ ಬಲಿಯಾದ ಬಶೀರ್ ಹತ್ಯೆಯನ್ನು ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಜಗದೀಶ ಶೇಣವ ಸಮರ್ಥಿಸಿಕೊಂಡಿದ್ದಾರೆ.

    ಮಂಗಳೂರಿನಲ್ಲಿ ನಡೆದ `ಹಡೆದವ್ವನ ಶಾಪ’ ಅನ್ನುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬಶೀರ್ ಎನ್ನುವ ಯುವಕನ ಹತ್ಯೆಯಾಗಿದೆ. ಮಾಧ್ಯಮಗಳಲ್ಲಿ ಒಬ್ಬ ಮುಗ್ಧ ಮುಸ್ಲಿಮನ ಹತ್ಯೆಯಾಯ್ತು ಅಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದ್ರೆ ಬಶೀರ್ ಸಾವಿನ ಮೊದಲು ಒಬ್ಬ ಅಮಾಯಕ ದೀಪಕ್ ರಾವ್ ಕೊಲೆಯಾಗಿದೆ. ಹೀಗಾಗಿ ಕಾಟಿಪಳ್ಳದ ಯುವಕ ದೀಪಕ್ ರಾವ್ ಹತ್ಯೆಗೆ ಪ್ರತಿಕಾರವಾಗಿ ಬಶೀರ್ ಹತ್ಯೆಯಾಗಿದೆ. ಬಶೀರ್ ಹತ್ಯೆಯಾಗಿದ್ದಕ್ಕೆ ನಮಗೇನೂ ಚಿಂತೆಯಿಲ್ಲ. ವಿಎಚ್‍ಪಿ ಅಧ್ಯಕ್ಷನಾಗಿ ನಾನು ಇದನ್ನು ಸಮರ್ಥಿಸಿಕೊಳ್ಳುತ್ತೇನೆಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

    ಇತ್ತೀಚೆಗೆ ಭಾರೀ ವಿವಾದಕ್ಕೀಡಾಗಿ ಬಿಡುಗಡೆಯಾದ ಪದ್ಮಾವತ್ ಚಿತ್ರದಲ್ಲಿ ಮೂರು ಬಾರಿ ಶಸ್ತ್ರ ಇಲ್ಲದೆ ಕೊಲ್ಲಲ್ಲ. ಹೀಗಾಗಿ ಪ್ರಾಣ ಭಿಕ್ಷೆ ನೀಡಿದ್ದರ ಫಲವಾಗಿ ಅವನ ಕೊಲೆಯಾಗುತ್ತೆ. ಇಂತಹ ಅನೇಕ ಪ್ರಕರಣಗಳು ನಮ್ಮಲ್ಲಿ ನಡೆದಿವೆ. ಪ್ರಶಾಂತ್ ಪೂಜಾರಿ, ಕುಟ್ಟಪ್ಪ, ಶರತ್ ಮಡಿವಾಳ ಇವರೆಲ್ಲರು ಏನ್ ಮಾಡಿದ್ದಾರೆ ಅಂತ ಅವರನ್ನು ಹತ್ಯೆ ಮಾಡಿದ್ದಾರೆ. ಅಂದ್ರೆ ಯಾರೋ ಒಬ್ಬ ಅಶ್ರಫ್ ಕೊಲೆಯಾಗಿದ್ದಕ್ಕೆ ಪ್ರತೀಕಾರವಾಗಿ ಒಬ್ಬ ಮುಗ್ಧನನ್ನು ಕೊಲೆ ಮಾಡಬಹುದು. ಹಾಗಾದ್ರೆ ದೀಪಕ್ ರಾವ್ ಎನ್ನುವ ಮುಗ್ಧನ ಹತ್ಯೆಗೆ ಬಶೀರ್ ಅನ್ನೋವವನ ಹತ್ಯೆ ಮಾಡಬಾರದಾ ಎಂದು ಪ್ರಶ್ನಿಸಿದ್ದಾರೆ.

    ಈ ಕುರಿತು ನಮ್ಮ ಮೇಲೆ ಕೇಸ್ ಆದ್ರೂ, ಅದಕ್ಕೆ ನಾವು ಬದ್ಧರು. ಯಾಕಂದ್ರೆ ಸಮಾಜ ರೊಚ್ಚಿಗೇಳುತ್ತದೆ. ಸಮಾಜದ ಒಂದು ವರ್ಗ ಅದಕ್ಕೆ ಸ್ಪಂದಿಸಲು ತಯಾರಿದೆ. ಅಂತವರಿಗೆ ರಕ್ಷಣೆ ಕೊಡುವುದು ನಮ್ಮ ಸಮಾಜದ ಕರ್ತವ್ಯ ಅಂತ ಹೇಳಿದ್ರು.

    ದೀಪಕ್ ಹತ್ಯೆ: ಜನವರಿ 3ರಂದು ಮಧ್ಯಾಹ್ನ ದೀಪಕ್ ರಾವ್ ಅವರು ತನ್ನ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಪರಿಣಾಮ ದೀಪಕ್ ಸ್ಥಳದಲ್ಲೇ ಮೃತಪಟ್ಟಿದ್ದರು. ಕೂಡಲೇ ಘಟನೆಯ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದರು. ನಂತರ ಅವರನ್ನು ಅಜ್ಞಾತಸ್ಥಳದಲ್ಲಿಟ್ಟು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗಿದ್ದು, ಹಲವಾರು ಪ್ರತಿಭಟನೆಗಳು ನಡೆದವು. ಅಲ್ಲದೇ ಬಡ ಕುಟುಂಬದಿಂದ ಬಂದಿರುವ ದೀಪಕ್, ಮನೆಗೆ ಆಧಾರಸ್ತಂಭವಾಗಿದ್ದರಿಂದ ಮಗನನ್ನು ಕಳೆದುಕೊಂಡ ತಾಯಿಗೆ ನೆರವು ನೀಡಲು ಹಲವಾರು ಸಂಘ-ಸಂಸ್ಥೆಗಳು ಮುಂದೆ ಬಂದವು. ಸುಮಾರು 43 ಲಕ್ಷ ರೂ. ನೆರವು ದೊರೆತಿದೆ.

    ಬಶೀರ್ ಮೇಲೆ ಹಲ್ಲೆ: ಇತ್ತ ದೀಪಕರ್ ರಾವ್ ದುಷ್ಕರ್ಮಿಗಳ ದಾಳಿಗೆ ಬಲಿಯಾದ ಸುದ್ದಿ ಹರಡುತ್ತಿದ್ದಂತೆಯೇ ಮಂಗಳೂರು ಬೂದಿ ಮುಚ್ಚಿ ಕೆಂಡದಂತಾಗಿದ್ದು, ಅಂದೇ ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಬಶೀರ್ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಪರಿಣಾಮ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು, ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಬಳಿಕ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು. ಬಶೀರ್ ಮೇಲಿನ ಹಲ್ಲೆಯ ಸಿಸಿಟಿವಿ ದೃಶ್ಯ ಲಭ್ಯವಾಗಿತ್ತು. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    https://www.youtube.com/watch?v=orOh2reo_XM

  • ಬಶೀರ್ ಮಗನಿಗೆ ಉದ್ಯೋಗ ಕೊಡಿಸುವ ಭರವಸೆಯಿತ್ತ ಮಾಜಿ ಪ್ರಧಾನಿ ಎಚ್‍ಡಿಡಿ

    ಬಶೀರ್ ಮಗನಿಗೆ ಉದ್ಯೋಗ ಕೊಡಿಸುವ ಭರವಸೆಯಿತ್ತ ಮಾಜಿ ಪ್ರಧಾನಿ ಎಚ್‍ಡಿಡಿ

    ಮಂಗಳೂರು: ದುಷ್ಕರ್ಮಿಗಳ ದಾಳಿಗೆ ಬಲಿಯಾದ ನಗರದ ಆಕಾಶಭವನ ನಿವಾಸಿ ಅಬ್ದುಲ್ ಬಶೀರ್ ಮನೆಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ಭೇಟಿ ನೀಡಿದ್ದಾರೆ.

    ನಗರದ ಜೆಡಿಎಸ್ ಮುಖಂಡರೊಂದಿಗೆ ಮಾಜಿ ಪ್ರಧಾನಿಯವರು ಬಶೀರ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಬಶೀರ್ ಅವರ ಕಿರಿಯ ಮಗನ ಬಯೋಡಾಟಾ ಪಡೆದ ಅವರು, ಉದ್ಯೋಗ ಕೊಡಿಸುವ ಭರವಸೆ ನೀಡಿದ್ದಾರೆ.

    ಇದಕ್ಕೂ ಮೊದಲು ಸುರತ್ಕಲ್ ನ ಕಾಟಿಪಳ್ಳದಲ್ಲಿರೋ ದೀಪಕ್ ರಾವ್ ಮನೆಗೆ ಭೇಟಿ ನೀಡಿದ್ದರು. ದೀಪಕ್ ರಾವ್ ಅವರ ತಾಯಿ ಪ್ರೇಮಾರವರ ಪರಿಸ್ಥಿತಿ ಕಂಡು ದುಖಿಃತರಾದ ದೇವೇಗೌಡರು, ದೀಪಕ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಎಚ್‍ಡಿಡಿ ಅವರಿಗೆ ಜೆಡಿಎಸ್ ಮುಖಂಡರಾದ ಬಿ.ಎಂ. ಫಾರೂಕ್, ಮಹಮ್ಮದ್ ಕುಂಞ  ಸಾಥ್ ನೀಡಿದರು.

    ದೀಪಕ್ ಹತ್ಯೆ: ಜನವರಿ 3ರಂದು ಮಧ್ಯಾಹ್ನ ದೀಪಕ್ ರಾವ್ ಅವರು ತನ್ನ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಪರಿಣಾಮ ದೀಪಕ್ ಸ್ಥಳದಲ್ಲೇ ಮೃತಪಟ್ಟಿದ್ದರು. ಕೂಡಲೇ ಘಟನೆಯ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದರು. ನಂತರ ಅವರನ್ನು ಅಜ್ಞಾತಸ್ಥಳದಲ್ಲಿಟ್ಟು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗಿದ್ದು, ಹಲವಾರು ಪ್ರತಿಭಟನೆಗಳು ನಡೆದವು. ಅಲ್ಲದೇ ಬಡ ಕುಟುಂಬದಿಂದ ಬಂದಿರುವ ದೀಪಕ್, ಮನೆಗೆ ಆಧಾರಸ್ತಂಭವಾಗಿದ್ದರಿಂದ ಮಗನನ್ನು ಕಳೆದುಕೊಂಡ ತಾಯಿಗೆ ನೆರವು ನೀಡಲು ಹಲವಾರು ಸಂಘ-ಸಂಸ್ಥೆಗಳು ಮುಂದೆ ಬಂದವು. ಸುಮಾರು 43 ಲಕ್ಷ ರೂ. ನೆರವು ದೊರೆತಿದೆ.

    ಬಶೀರ್ ಮೇಲೆ ಹಲ್ಲೆ: ಇತ್ತ ದೀಪಕರ್ ರಾವ್ ದುಷ್ಕರ್ಮಿಗಳ ದಾಳಿಗೆ ಬಲಿಯಾದ ಸುದ್ದಿ ಹರಡುತ್ತಿದ್ದಂತೆಯೇ ಮಂಗಳೂರು ಬೂದಿ ಮುಚ್ಚಿ ಕೆಂಡದಂತಾಗಿದ್ದು, ಅಂದೇ ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಬಶೀರ್ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಪರಿಣಾಮ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು, ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಬಳಿಕ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು. ಬಶೀರ್ ಮೇಲಿನ ಹಲ್ಲೆಯ ಸಿಸಿಟಿವಿ ದೃಶ್ಯ ಲಭ್ಯವಾಗಿತ್ತು. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

  • ದೀಪಕ್ ರಾವ್ ಮನೆಗೆ ಎಚ್‍ಡಿಡಿ ಭೇಟಿ-ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಮಾಜಿ ಪ್ರಧಾನಿ

    ದೀಪಕ್ ರಾವ್ ಮನೆಗೆ ಎಚ್‍ಡಿಡಿ ಭೇಟಿ-ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಮಾಜಿ ಪ್ರಧಾನಿ

    ಮಂಗಳೂರು: ಕಾಟಿಪಳ್ಳದಲ್ಲಿ ಜನವರಿ 3 ರಂದು ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇಂದು ಭೇಟಿ ನೀಡಿದರು.

    ಮಂಗಳೂರಿನ ಕಾಟಿಪಳ್ಳದಲ್ಲಿರುವ ಮನೆಯಲ್ಲಿ ದೀಪಕ್ ರಾವ್ ಅವರ ತಾಯಿ ಪ್ರೇಮಾರವರ ಪರಿಸ್ಥಿತಿ ಕಂಡು ದುಖಿಃತರಾದ ದೇವೇಗೌಡ ಅವರು, ದೀಪಕ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಎಚ್‍ಡಿಡಿ ಅವರಿಗೆ ಜೆಡಿಎಸ್ ಮುಖಂಡರಾದ ಬಿ.ಎಂ. ಫಾರೂಕ್, ಮಹಮ್ಮದ್ ಕುಂಞÂ ಸಾಥ್ ನೀಡಿದರು.

    ದೀಪಕ್ ಕೊಲೆಯಾದ ಬಳಿಕ ದುಷ್ಕರ್ಮಿಗಳಿಂದ ಹತ್ಯೆಯಾದ ಬಶೀರ್ ಅವರ ಮಂಗಳೂರಿನ ಆಕಾಶ ಭವನದಲ್ಲಿರುವ ಮನೆಗೂ ಎಚ್‍ಡಿಡಿ ನಾಳೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.

  • ದೀಪಕ್ ರಾವ್ ಮನೆಗೆ ಅನಂತ್ ಕುಮಾರ್ ಹೆಗ್ಡೆ ಭೇಟಿ-ಸಹೋದರನಿಗೆ ಉದ್ಯೋಗ ಭರವಸೆ

    ದೀಪಕ್ ರಾವ್ ಮನೆಗೆ ಅನಂತ್ ಕುಮಾರ್ ಹೆಗ್ಡೆ ಭೇಟಿ-ಸಹೋದರನಿಗೆ ಉದ್ಯೋಗ ಭರವಸೆ

    ಮಂಗಳೂರು: ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದ ದೀಪಕ್ ರಾವ್ ಮನೆಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹಗ್ಡೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

    ಸುರತ್ಕಲ್ ಸಮೀಪದ ಕಾಪಟಿಪಾಳ್ಯದಲ್ಲಿ ಹಾಡಹಗಲೇ ದುಷ್ಕರ್ಮಿಗಳ ಮಾರಣಾಂತಿಕ ದಾಳಿಯಿಂದ ಮೃತ ಪಟ್ಟಿದ್ದ ದೀಪಕ್ ರಾವ್ ಅವರ ಮನೆಗೆ ಭೇಟಿ ನೀಟಿದ ಅನಂತ್ ಕುಮಾರ್ ಹೆಗ್ಡೆ, ಅನಿರೀಕ್ಷಿತವಾಗಿ ದೀಪಕ್ ರಾವ್ ಅವರ ಹತ್ಯೆ ಆಗಿದೆ. ಅವರ ಕುಟಂಬಕ್ಕೆ ಸಾಂತ್ವನ ಹೇಳಲು ಇಲ್ಲಿಗೆ ಭೇಟಿ ನೀಡಿದ್ದು. ಅವರ ಕುಟುಂಬದ ಜೊತೆ ನಾವೆಲ್ಲರೂ ಇದ್ದೇವೆ ಎಂದು ಹೇಳಿದರು.

    ಇದೇ ವೇಳೆ ದೀಪಕ್ ಸಹೋದರ ಸತೀಶ್ ಅವರಿಗೆ ಕುದುರೆಮುಖ ಕಂಪೆನಿಯಲ್ಲಿ ಉದ್ಯೋಗ ಒದಗಿಸುವ ಭರವಸೆ ನೀಡಿದರು.ಅಲ್ಲದೇ ಸಚಿವರು ದೀಪಕ್ ರಾವ್ ಅವರ ಕುಟುಂಬಕ್ಕೆ ವೈಯುಕ್ತಿಕ 25 ಸಾವಿರ ರೂ. ನೆರವು ನೀಡಿದರು.

    ಜ.3ರಂದು ಮಧ್ಯಾಹ್ನ 1.30ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯದ್ವಾತದ್ವಾ ದೀಪಕ್ ರಾವ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ಕೂಡಲೇ ಮಾಹಿತಿ ಪಡೆದ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದರು. ಸದ್ಯ ಅವರನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ಮುಂದುವರೆಸಿದ್ದಾರೆ. ಅಲ್ಲದೇ ಬಂಧಿತರಿಂದ ಪಡೆದ ಮಾಹಿತಿ ಆಧಾರಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಸೋಮವಾರ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ದೀಪಕ್ ರಾವ್ ಕೊಲೆ ಪ್ರಕರಣ – ಮತ್ತಿಬ್ಬರು ಆರೋಪಿಗಳ ಬಂಧನ

    ದೀಪಕ್ ರಾವ್ ಕೊಲೆ ಪ್ರಕರಣ – ಮತ್ತಿಬ್ಬರು ಆರೋಪಿಗಳ ಬಂಧನ

    ಮಂಗಳೂರು: ಜಿಲ್ಲೆಯ ಕಾಟಿಪಳ್ಳ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಅಬ್ದುಲ್ ಅಜೀಜ್ (42), ಅಬ್ದುಲ್ ಅಜೀಮ್ (34) ಬಂಧಿತ ಆರೋಪಿಗಳು. ಕೊಲೆಯಾದ ದಿನದಂದು ಬಂಧನ ಮಾಡಿದ್ದ ನಾಲ್ವರು ಆರೋಪಿಗಳು ನೀಡಿದ ಮಾಹಿತಿಯನ್ನು ಆಧಾರಿಸಿ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಬ್ಬರು ಮಂಗಳೂರಿನ ಕಾಟಿಪಳ್ಳ ನಿವಾಸಿಗಳು ಎಂದು ತಿಳಿದು ಬಂದಿದೆ.

    ಜ.3 ರಂದು ಮಂಗಳೂರಿನ ಕಾಟಿಪಳ್ಳದಲ್ಲಿ ಹಾಡಹಗಲೇ ದೀಪಕ್ ರಾವ್ ನನ್ನು ಹತ್ಯೆ ಮಾಡಲಾಗಿತ್ತು. ಹತ್ಯೆಯಾದ ದಿನ ಸ್ಥಳೀಯರು ನೀಡದ ಮಾಹಿತಿ ಆಧಾರಿಸಿ ಅರೋಪಿಗಳು ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದರು ಎಂದು ತಿಳಿಸಿದ್ದರು. ಈ ಮಾಹಿತಿ ಆಧಾರಿಸಿ ಎಲ್ಲ ಪೊಲೀಸ್ ಠಾಣೆಗಳಿಗೆ ತುರ್ತು ಸಂದೇಶ ಕಳುಹಿಸಿದ್ದರು. ಈ ವೇಳೆ ಆರೋಪಿಗಳು ರಕ್ತಸಿಕ್ತ ತಲಾವರುಗಳನ್ನು ಇಟ್ಟುಕೊಂಡು ಕಾಟಿಪಳ್ಳದಿಂದ ಸೂರಿಂಜೆ-ಶಿಬರೂರು ಮೂಲಕ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿಯನ್ನು ಕೂಡಲೇ ಕಿನ್ನಿಗೋಳಿಯಲ್ಲಿದ್ದ ಗಸ್ತು ವಾಹನಕ್ಕೆ ತಿಳಿಸಲಾಯಿತು. ವಾಹನಗಳ ತಪಾಸಣೆ ವೇಳೆ ಬಿಳಿ ಬಣ್ಣದ ಸ್ವಿಫ್ಟ್ ಕಾರು ನಿಲ್ಲಿಸುವಂತೆ ಸೂಚನೆ ನೀಡಿದರೂ ನಿಲ್ಲಿಸದೇ ಹೋಗಿತ್ತು. ಸೂಚನೆ ಧಿಕ್ಕರಿಸಿ ಮುಂದಕ್ಕೆ ಹೋದಾಗ ಕೂಡಲೇ ಪೊಲೀಸರು ಅನುಮಾನಗೊಂಡು ಕಾರನ್ನು ಚೇಸ್ ಮಾಡಿ ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಆರೋಪಿಗಳ ಮೇಲೆ ಗುಂಡಿನ ದಾಳಿಯನ್ನು ಮಾಡಲಾಗಿತ್ತು. ಇದರರಲ್ಲಿ ಪಿಂಕಿ ನವಾಸ್, ರಿಜ್ವಾನ್ ಎಂಬ ಆರೋಪಿಗಳಿಗೆ ಗುಂಡೇಟು ತಗಲಿತ್ತು. ಇದನ್ನೂ ಓದಿ:  ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ

    ಪ್ರಸ್ತುತ ಪಿಂಕಿ ನವಾಸ್, ರಿಜ್ವಾನ್ ಇಬ್ಬರು ಆರೋಪಿಗಳಿಗೆ ಚಿಕಿತ್ಸೆ ಮುಂದುವರೆದಿದ್ದು, ಮತ್ತಿಬ್ಬರು ಆರೋಪಿಗಳಾದ ನೌಶಾದ್, ಇರ್ಷಾನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಘಟನೆ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದೆ.