Tag: Deepak Punia

  • CWG-2022: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತೀಯ ದೀಪಕ್ ಪೂನಿಯಾಗೆ ಚಿನ್ನದ ಹಾರ

    CWG-2022: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತೀಯ ದೀಪಕ್ ಪೂನಿಯಾಗೆ ಚಿನ್ನದ ಹಾರ

    ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ.

    8ನೇ ದಿನದ ಕುಸ್ತಿ ಅಖಾಡದಲ್ಲಿ ಪದಕಗಳ ಬಂಪರ್ ಬೆಳೆ ಸುರಿದಿದೆ. ಕೇವಲ ಕುಸ್ತಿಯಲ್ಲಿಯೇ ಭಾರತಕ್ಕೆ 5 ಪದಕಗಳನ್ನು ಪಡೆದುಕೊಂಡಿದೆ. 62 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್, 65 ಕೆಜಿ ವಿಭಾಗದಲ್ಲಿ ಭಜರಂಗ್ ಪೂನಿಯಾ, 86 ಕೆಜಿ ವಿಭಾಗದಲ್ಲಿ ಕುಸ್ತಿಪಟು ದೀಪಕ್ ಪೂನಿಯಾ ಬಂಗಾರದ ಪದಕಗಳನ್ನ ಬಾಚಿಕೊಂಡಿದ್ದಾರೆ.

    https://twitter.com/sbg1936/status/1555626699827847169

    ಕುಸ್ತಿಯ 57 ಕೆಜಿ ವಿಭಾಗದಲ್ಲಿ ಅನ್ಶು ಮಲಿಕ್ ಬೆಳ್ಳಿ, ದಿವ್ಯಾ ಮೋಹಿತ್ ಕಂಚಿನ ಪದಕಗಳನ್ನ ಗೆದ್ದುಕೊಂಡಿದ್ದಾರೆ. ಭಾರತದ ಗ್ರಾಪ್ಲರ್ ದೀಪಕ್ ಪೂನಿಯಾ ಪುರುಷರ 86 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಪಾಕಿಸ್ತಾನದ ಎದುರಾಳಿ ಮೊಹಮ್ಮದ್ ಇನಾಮ್ ಅವರನ್ನು 3-0 ಅಂತರದಲ್ಲಿ ಬಗ್ಗು ಬಡಿಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದು ನಿನ್ನೆ ಕುಸ್ತಿಯಲ್ಲಿ ಗೆದ್ದ 3ನೇ ಚಿನ್ನದ ಪದಕವಾಗಿದೆ. ಇದನ್ನೂ ಓದಿ: CWG 2022: ಭಜರಂಗ್ ಪೂನಿಯಾ ಚಿನ್ನದ ಬೇಟೆ – ಭಾರತಕ್ಕೆ 7ನೇ ಚಿನ್ನ

    2-0 ಹಂತದವರೆಗೂ ಮುನ್ನಡೆ ಸಾಧಿಸಿದ್ದ ಪೂನಿಯಾಗೆ ಅಂತಿಮ ಸುತ್ತಿನಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು. ಪಂದ್ಯದಲ್ಲಿ ಪುನಿಯಾ ಉತ್ತಮ ಫಾರ್ಮ್ನಲ್ಲಿದ್ದರು. ಹಾಗಾಗಿ ಅಂತಿಮ ಮೂರು ನಿಮಿಷಗಳಲ್ಲಿ ತಮ್ಮದೇ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಪೂನಿಯಾ ವಿರುದ್ಧ ಪಾಯಿಂಟ್ ಕದಿಯಲು ಹೆಣಗಾಡಿದ ಪಾಕಿಸ್ತಾನದ ಕುಸ್ತಿಪಟು ಅಂತಿಮ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿ ಹೊರನಡೆದರು.

    ಇದರಿಂದ ಭಾರತ ಈವರೆಗೆ 9 ಚಿನ್ನ, 8 ಬೆಳ್ಳಿ, 9 ಕಂಚಿನ ಪಕದ ಗೆದ್ದಿದ್ದು, 26 ಪದಕಗಳೊಂದಿಗೆ, ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ. ಪದಕ ಗೆದ್ದ ಕ್ರೀಡಾಪಟುಗಳಿಗೆ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಳ್ಳಿ ಗೆದ್ದು ವಿಶ್ವ ಚಾಂಪಿಯನ್ ಶಿಪ್‍ನಿಂದ ಹೊರ ಬಿದ್ದ ದೀಪಕ್ ಪುನಿಯಾ

    ಬೆಳ್ಳಿ ಗೆದ್ದು ವಿಶ್ವ ಚಾಂಪಿಯನ್ ಶಿಪ್‍ನಿಂದ ಹೊರ ಬಿದ್ದ ದೀಪಕ್ ಪುನಿಯಾ

    ನವದೆಹಲಿ: ಭಾರತದ ಯುವ ಕುಸ್ತಿ ಪಟು ದೀಪಕ್ ಪುನಿಯಾ ಅವರು ಬೆಳ್ಳಿ ಗೆಲ್ಲುವ ಮೂಲಕ ಕಾಲು ನೋವಿನ ಸಮಸ್ಯೆಯಿಂದ ವಿಶ್ವ ಚಾಂಪಿಯನ್ ಕುಸ್ತಿ ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ.

    ಸೆಮಿಫೈನಲ್ ಪಂದ್ಯದ ವೇಳೆ ಎಡಗಾಲು ಪಾದಕ್ಕೆ ಗಾಯವಾದ ಕಾರಣ ಅವರು, 86 ಕೆ.ಜಿ ವಿಭಾಗದಲ್ಲಿ ಇರಾನಿನ ಶ್ರೇಷ್ಠ ಕುಸ್ತಿ ಪಟು ಹಜ್ಸನ್ ಯಾಜ್ದಾನಿ ಅವರ ವಿರುದ್ಧ ಆಡಬೇಕಾದ ವಿಶ್ವ ಚಾಂಪಿಯನ್ ಶಿಪ್‍ನ ಫೈನಲ್ ಆಟವಾನ್ನು ಆಡುವುದಿಲ್ಲ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಾತನಾಡಿದ ದೀಪಕ್ ಪುನಿಯಾ ಅವರು, ಸೆಮಿಫೈನಲ್ ಪಂದ್ಯದ ವೇಳೆ ನನ್ನ ಎಡಗಾಲಿಗೆ ಗಾಯವಾಗಿದೆ. ಎಡಗಾಲು ಭಾರವನ್ನು ತಡೆಯುತ್ತಿಲ್ಲ. ಈ ಸ್ಥಿತಿಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವುದು ತುಂಬಾ ಕಷ್ಟ. ಈ ಪಂದ್ಯ ಶ್ರೇಷ್ಠ ಆಟಗಾರ ಯಾಜ್ದಾನಿ ವಿರುದ್ಧ ಆಟವಾಡಲು ಒಳ್ಳೆಯ ಅವಕಾಶವಿತ್ತು. ಆದರೆ ನನಗೆ ಆಡಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

    ಶನಿವಾರ ಸ್ವಿಜರ್ಲ್ಯಾಂಡ್ ನ ಸ್ಟೀಫನ್ ರೀಚ್‍ಮುತ್ ಅವರ ವಿರುದ್ಧ ಸೆಮಿಫೈನಲ್ ಪಂದ್ಯದ ವೇಳೆ ದೀಪಕ್ ಅವರ ಎಡಗಾಲಿಗೆ ಪೆಟ್ಟಾಗಿತ್ತು. ಇದಕ್ಕೂ ಮುನ್ನ ದೀಪಕ್ ಪುನಿಯಾ ಅವರು ಕೊಲಂಬಿಯಾದ ಕಾರ್ಲೋಸ್ ಮೆಂಡೆಜ್ ಮತ್ತು ಖಜಕಿಸ್ತಾನದ ಅಡಿಲೆಡ್ ದಾವ್ಲುಂಬಾಯೆವ್ ವಿರುದ್ಧ ಗೆದ್ದು ಫೈನಲ್ ಪ್ರವೇಶ ಮಾಡಿದ್ದರು. ಆದರೆ ಫೈನಲ್ ಸಮಯದಲ್ಲಿ ಗಾಯವಾದ ಕಾರಣ ಅವರಿಗೆ ಫೈನಲ್ ಆಡಲು ಆಗಾದೆ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.

    ಕಳೆದ ವರ್ಷ ಜೂನಿಯರ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದ ದೀಪಕ್ ಪುನಿಯಾ ಈ ಬಾರಿಯೂ ಚಿನ್ನದ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದರು. ಆದರೆ ಗಾಯದ ಸಮಸ್ಯೆಯಿಂದ ಚಿನ್ನದ ಪದಕ ಕೈತಪ್ಪಿದೆ. 2010 ರಲ್ಲಿ ಮಾಸ್ಕೋದಲ್ಲಿ ನಡೆದ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ 66 ಕೆ.ಜಿ ವಿಭಾಗದಲ್ಲಿ ಭಾರತದ ಸುಶೀಲ್ ಕುಮಾರ್ ಅವರು ಚಿನ್ನ ಗೆದ್ದಿದ್ದರು.

    ಈ ಬಾರಿಯ ಕುಸ್ತಿ ವಿಶ್ವ ಚಾಂಪಿಯನ್‍ಶಿಪ್ ಭಾರತದ ರಾಹುಲ್ ಅವೇರ್ ಅವರು 61 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ಇಂದು ಹೋರಾಡಲಿದ್ದಾರೆ.

  • ವಿಶ್ವ ಜೂನಿಯರ್ ಕುಸ್ತಿಯಲ್ಲಿ ಚಿನ್ನ ಗೆದ್ದ ಹಾಲು ಮಾರುವ ರೈತನ ಮಗ

    ವಿಶ್ವ ಜೂನಿಯರ್ ಕುಸ್ತಿಯಲ್ಲಿ ಚಿನ್ನ ಗೆದ್ದ ಹಾಲು ಮಾರುವ ರೈತನ ಮಗ

    ಚಂಡೀಗಢ: ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಹರ್ಯಾಣದ ಹಾಲು ಮಾರುವ ರೈತನ ಮಗನೊಬ್ಬ ಚಿನ್ನದ ಪದಕ ಗೆದ್ದಿದ್ದಾರೆ.

    ಬುಧವಾರ ಎಸ್ಟೋನಿಯಾ ದೇಶದ ಟ್ಯಾಲಿನ್‍ನಲ್ಲಿ ನಡೆದ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ, ಹರ್ಯಾಣದ ಜಜ್ಜರ್ ಗ್ರಾಮದ ಹಾಲುಮಾರುವ ರೈತನ ಮಗನಾದ 19 ವರ್ಷದ ಕುಸ್ತಿಪಟು ದೀಪಕ್ ಪುನಿಯಾ ಭಾರತಕ್ಕೆ ಚಿನ್ನದ ಪದಕ ತಂದಿದ್ದಾರೆ. 18 ವರ್ಷದ ನಂತರ 86 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಭಾರತಕ್ಕೆ ಪದಕ ಬಂದಿದೆ.

    ಕಳೆದ ವರ್ಷ ನಡೆದ ಇದೇ ಟೂರ್ನಿಯ ಫೈನಲ್ ಪಂದ್ಯದಲ್ಲಿ ದೀಪಕ್ ಪುನಿಯಾ ಅವರು ಕೂದಲೆಳೆಯ ಅಂತರದಲ್ಲಿ ಸೋತಿದ್ದರು. ಆದರೆ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು ಕ್ವಾರ್ಟರ್ ಫೈನಲ್‍ನಲ್ಲಿ ಹಂಗೇರಿಯನ್‍ನ ಮಿಲನ್ ಕೊರೆಸಾಗ್ ಅವರನ್ನು 10-01 ಅಂತರದಲ್ಲಿ ಸೋಲಿಸಿದ್ದರು. ನಂತರ ಸೆಮಿಫೈನಲ್‍ನಲ್ಲಿ ಜಾರ್ಜಿಯಾದ ಮಿರಿಯಾನಿ ಮೈಸುರಾಡ್ಜೆ ಅವರ ವಿರುದ್ಧ 3-2 ಅಂತರದಲ್ಲಿ ಗೆದ್ದಿದ್ದರು.

    ಈ ಎಲ್ಲಾ ಕಠಿಣ ಎದುರಾಳಿಗಳ ವಿರುದ್ಧ ಗೆದ್ದ ದೀಪಕ್ ಅವರಿಗೆ ಫೈನಲ್‍ನಲ್ಲಿ ಎದುರಾಳಿಯಾಗಿ ಸಿಕ್ಕಿದ್ದು ರಷ್ಯಾದ ಬಲಿಷ್ಠ ಕುಸ್ತಿಪಟು ಅಲಿಕ್ ಶೆಬ್‍ಝೊಕೋವ್. ಆದರೆ ಅವರನ್ನು 2-0 ಅಂತರದಲ್ಲಿ ಕೊನೆ ಕ್ಷಣದಲ್ಲಿ ಸೋಲಿಸಿದ ದೀಪಕ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

    ಮಗನ ಈ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ಅವರ ತಂದೆ ಸುಭಾಷ್ ಅವರು, ನನ್ನ ಮಗ ನನ್ನನ್ನು ಹೆಮ್ಮೆ ಪಡುವಂತೆ ಮಾಡಿದ್ದಾನೆ. ಅವನು ಬಾಲ್ಯದಲ್ಲಿದ್ದಾಗ ನಾನು ಅವನನ್ನು ನಮ್ಮ ಹಳ್ಳಿಯ ಕುಸ್ತಿ ಪಂದ್ಯಗಳಿಗೆ ಕರೆದುಕೊಂಡು ಹೋಗುತ್ತಿದ್ದೆ. ನಮಗೆ ಮೂರು ಎಕ್ರೆ ಜಮೀನು ಇದೆ. ನಾನು ಹತ್ತು ಎಮ್ಮೆಗಳು ಮತ್ತು ಐದು ಹಸುಗಳನ್ನು ಸಾಕಿದ್ದೇನೆ. ಅವುಗಳಿಂದ ಹಾಲು ಕರೆದು ಪ್ರತಿದಿನ ಅದನ್ನು ಮಾರಲು ದೆಹಲಿಗೆ ಹೋಗುತ್ತೇನೆ. ನಾನು ಪಟ್ಟ ಕಷ್ಟಕ್ಕೆ ಇಂದು ಪ್ರತಿಫಲ ಸಿಕ್ಕಿದೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ದೀಪಕ್ ಅವರ ಕೋಚ್ ಪರ್ವೇಶ್ ಕುಮಾರ್ ಅವರು, ದೀಪಕ್ ಪ್ರಬಲ ಎದುರಾಳಿಗಳ ಜೊತೆ ಮತ್ತು ಯುರೋಪ್‍ನ ಕಿರಿಯ ಉನ್ನತ ಕುಸ್ತಿಪಟುಗಳ ವಿರುದ್ಧ ಗೆಲುವು ಪಡೆದಿದ್ದಾನೆ. ಕಳೆದ ಬಾರಿ ಫೈನಲ್‍ನಲ್ಲಿ ಸೋತಿದ್ದ. ಇದಕ್ಕೆ ಪ್ರತೀಕಾರವಾಗಿ ಇಂದು ಚಿನ್ನದ ಪದಕ ಗೆದ್ದಿದ್ದಾನೆ ಎಂದು ಹೇಳಿದ್ದಾರೆ.