Tag: Deepak Kalal

  • ನಾನು ಸೆಲೆಬ್ರಿಟಿ ಸೆಲ್ಫಿ ಕ್ಲಿಕ್ಕಿಸಬೇಡಿ – ಮೆಟ್ರೋದಲ್ಲಿ ರಾಖಿ ಮಾಜಿ ಪ್ರಿಯಕರನ ರಂಪಾಟ

    ನಾನು ಸೆಲೆಬ್ರಿಟಿ ಸೆಲ್ಫಿ ಕ್ಲಿಕ್ಕಿಸಬೇಡಿ – ಮೆಟ್ರೋದಲ್ಲಿ ರಾಖಿ ಮಾಜಿ ಪ್ರಿಯಕರನ ರಂಪಾಟ

    – ಐ ಫೋನ್‍ನಲ್ಲಿ ಮಾತ್ರ ಸೆಲ್ಫಿ ಕ್ಲಿಕ್ಕಿಸಿ, ಇಲ್ಲವಾದ್ರೆ ಬೇಡ
    – ಯುವತಿ ಬ್ಯೂಟಿ ಮೋಡ್ ಆನ್ ಮಾಡಿರಲಿಲ್ಲ
    – ಮೆಟ್ರೋದಲ್ಲಿ ದೀಪಕ್ ಕಪಾಳಕ್ಕೆ ಬಾರಿಸಿದ ಯುವತಿ

    ನವದೆಹಲಿ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮಾಜಿ ಪ್ರಿಯಕರ ದೀಪಕ್ ಕಲಾಲ್ ಗೆ ಯುವತಿಯೊಬ್ಬಳು ಕಪಾಳಕ್ಕೆ ಬಾರಿಸಿದ್ದಾರೆ. ದೆಹಲಿ ಮೆಟ್ರೋದಲ್ಲಿ ನಡೆದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಯುವತಿ ಕಪಾಳಕ್ಕೆ ಬಾರಿಸಿರುವ ವಿಡಿಯೋವನ್ನು ದೀಪಕ್ ಕಲಾಲ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ದೀಪಕ್ ಯುವತಿ ಮೇಲೆ ಕೂಗಾಡುತ್ತಿರೋದನ್ನು ಕಾಣಬಹುದು. ಇದರಿಂದ ಕೋಪಗೊಂಡ ಯುವತಿ ಮೆಟ್ರೋ ರೈಲಿನಲ್ಲಿ ಕಪಾಳಕ್ಕೆ ಬಾರಿಸಿದ್ದಾಳೆ.

    https://www.instagram.com/p/B4urI86gHjr/

    ನನಗೆ ನೀವು ಯಾರೆಂದು ಗೊತ್ತಿಲ್ಲ. ನನ್ನ ಅನುಮತಿ ಇಲ್ಲದೇ ನೀವು ಹೇಗೆ ಸೆಲ್ಫಿ ತೆಗೆದುಕೊಂಡಿರಿ. ಸೆಲ್ಪಿ ಕ್ಲಿಕ್ಕಿಸುವ ಮುನ್ನ ನನ್ನ ಅನುಮತಿಯನ್ನು ಪಡೆದುಕೊಳ್ಳಬೇಕಿತ್ತು. ನಾನೋರ್ವ ಸೆಲಿಬ್ರಿಟಿಯಾಗಿದ್ದು, ನನ್ನದೇ ಆದ ವೈಯಕ್ತಿಕ ಬದುಕು ಇದೆ ಎಂದು ಕೂಗಾಗಿಡಿದ್ದಾರೆ. ಮೆಟ್ರೋದಲ್ಲಿದವರು ಯಾರು ಈ ವ್ಯಕ್ತಿ ಎಂದು ಪ್ರಶ್ನೆ ಮಾಡಿದ್ದಾರೆ. ಕೂಡಲೇ ದೀಪಕ್ ತಾನು ಸೆಲೆಬ್ರಿಟಿ ಹೇಳಿಕೊಂಡು ಇಂಗ್ಲಿಷ್ ನಲ್ಲಿ ಮಾತು ಆರಂಭಿಸಿದ್ದಾರೆ. ಸಹ ಪ್ರಯಾಣಿಕರು ಇಂಗ್ಲಿಷ್ ನಲ್ಲಿ ಮಾತಾಡೋದನ್ನ ನಿಲ್ಲಿಸು ಎಂದು ಗದರಿದ್ದಾರೆ.

    ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡು, ಯುವತಿ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುತ್ತೇನೆ. ಹಾಗಾಗಿ ಅಭಿಮಾನಿಗಳು ನನಗೆ ಬೆಂಬಲ ನೀಡಬೇಕು. ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಐ-ಫೋನ್ ಇದ್ದರೆ ಮಾತ್ರ ಅವಕಾಶ ನೀಡುತ್ತೇನೆ. ಎರಡು ಕಾಸಿನ ಕಿಮ್ಮತ್ತಿನ ದೆಹಲಿ ಯುವತಿ ಯಾವುದೇ 2 ಮೆಗಾ ಫಿಕ್ಸೆಲ್ ಕ್ಯಾಮೆರಾದಲ್ಲಿ ಬ್ಯೂಟಿ ಮೋಡ್ ಆನ್ ಮಾಡದೇ ಸೆಲ್ಫಿ ತೆಗೆದುಕೊಂಡಿದ್ದಾಳೆ. ಹಾಗಾಗಿ ನನಗೆ ನೋವಾಗಿದೆ ಎಂದು ದೀಪಕ್ ಹೇಳಿಕೊಂಡಿದ್ದಾರೆ.

    https://www.instagram.com/p/B4zj6uZgbum/

    ನಾನು ಮೆಟ್ರೋದಲ್ಲಿ ಮೊದಲ ಬಾರಿಗೆ ಪ್ರಯಾಣ ಮಾಡಿದ್ದೇನೆ. ಸಾಮಾನ್ಯ ಜನರ ಜೀವನವನ್ನು ಅರ್ಥಮಾಡಿಕೊಳ್ಳಲು ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದೆ. ಆದ್ರೆ ಯುವತಿ ಬಂದು ಬ್ಯೂಸಿ ಮೋಡ್ ಆನ್ ಮಾಡದೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಕಪಾಳಕ್ಕೆ ಹೊಡೆದಿದ್ದಾಳೆ. ದೆಹಲಿಯ ಐಷಾರಾಮಿ ಹೋಟೆಲಿನಲ್ಲಿ ಉಳಿದುಕೊಳ್ಳುವ ನನ್ನ ಅಂತಸ್ತು ನೋಡು ಎಂದು ದೀಪಕ್ ಜಂಬ ಕೊಚ್ಚಿಕೊಂಡಿದ್ದಾರೆ.

  • ರಾಖಿ ಪ್ರಿಯತಮನ ಮೇಲೆ ಲೈವ್ ಮಾಡಿ ಹಲ್ಲೆ

    ರಾಖಿ ಪ್ರಿಯತಮನ ಮೇಲೆ ಲೈವ್ ಮಾಡಿ ಹಲ್ಲೆ

    – ಇದೊಂದು ಪಬ್ಲಿಸಿಟಿ ಗಿಮಿಕ್ ಅಂದ ಡ್ರಾಮಾ ಕ್ವೀನ್

    ನವದೆಹಲಿ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮಾಜಿ ಪ್ರಿಯಕರ, ಕಾಮಿಡಿಯನ್ ದೀಪಕ್ ಕಲಾಲ್ ಮೇಲೆ ಕೆಲವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಹಲ್ಲೆಕಾರರು ಲೈವ್ ಮಾಡಿ ಹಲ್ಲೆ ನಡೆಸಿದ್ದಾರೆ. ಹರಿಯಾಣದ ಗುರುಗ್ರಾಮದ ಬಳಿಯಲ್ಲಿ ಈ ಘಟನೆ ನಡೆದಿದ್ದು, ಗಾಯಕ ಫಾಜಿಲಪುರಿಯಾ ಅವರ ಮ್ಯಾನೇಜರ್ ನಿಂದಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಹಲ್ಲೆ ನಡೆದಿದ್ದು ಯಾಕೆ?
    ದೀಪಕ್ ಕಲಾಲ್ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ. ಈ ವಿಡಿಯೋಗಳಿಗೆ ನೆಟ್ಟಿಗರು ಆಕ್ರೋಶ ಹೊರಹಾಕುವುದು ಸಾಮನ್ಯವಾಗಿರುತ್ತೆ. ಇತ್ತೀಚೆಗೆ ನೊಯ್ಡಾಗೆ ತೆರಳಿದ್ದ ದೀಪಕ್ ನಗರದ ಪಾರ್ಕಿಂಗ್ ನಲ್ಲಿ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೋವನ್ನು ಇನ್ಸ್ಟಾದಲ್ಲಿ ಅಪ್ಲೋಡ್ ಮಾಡಿಕೊಂಡು, ಮರಗಳಿಗೆ ನೀರು ಹಾಕುತ್ತಿದ್ದೇನೆ ಅಂತಾ ಹೇಳಿದ್ದರು. ನೊಯ್ಡಾದಿಂದ ಹಿಂದಿರುಗುತ್ತಿದ್ದ ವೇಳೆ ಫಾಜಿಲಪುರಿಯಾ ಮ್ಯಾನೇಜರ್ ತನ್ನ ಗೆಳೆಯರೊಂದಿಗೆ ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೈದಿದ್ದಾರೆ.

    ದೀಪಕ್ ಮೇಲಿನ ಹಲ್ಲೆ ಕುರಿತು ಪ್ರತಿಕ್ರಿಯಿಸಿರುವ ರಾಖಿ ಸಾವಂತ್, ವಿಷಯ ತಿಳಿದಾಗ ತುಂಬಾನೇ ನೋವಾಯ್ತು. ಆ ವ್ಯಕ್ತಿ ಹಲ್ಲೆ ಮಾಡಿದ್ದು ತಪ್ಪು. ದೆಹಲಿ ಅಲ್ಲಿದ್ದವನನ್ನು ಯಾರು ಎಳೆದುಕೊಂಡು ಹೋಗಿ ಹೊಡೆದ್ರೋ ನನಗೆ ಗೊತ್ತಿಲ್ಲ. ತನ್ನ ಚೇಷ್ಠೆಗಳಿಂದ ಹಲ್ಲೆಗೆ ಒಳಗಾಗಿರುತ್ತಾನೆ. ದೀಪಕ್ ಪ್ರಚಾರಕ್ಕಾಗಿ ಈ ರೀತಿ ವಿಡಿಯೋಗಳನ್ನು ಮಾಡಿರುವ ಸಾಧ್ಯತೆಗಳಿವೆ. ಆತನೋರ್ವ ನಂಬಿಕೆಗೆ ಅನರ್ಹವಾದ ವ್ಯಕ್ತಿ ಅಂತಾ ಹೇಳಿದ್ದಾರೆ.

    ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ದೀಪಿಕಾ ಹಾಗು ಪ್ರಿಯಾಂಕ ಚೋಪ್ರಾ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದರು. ಎಲ್ಲರು ಮದುವೆ ಆಗುತ್ತಿದ್ದು, ನಾನು ದೀಪಕ್ ಕಲಾಲ್ ಎಂಬ ವ್ಯಕ್ತಿಯನ್ನು ವರಿಸಲಿದ್ದೇನೆ ಎಂದು ರಾಖಿ ಸಾವಂತ್ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದರು. ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದ ಜೋಡಿ ಮದ್ವೆಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ ಎಂದು ಕಾಗೆ ಹಾರಿಸಿದ್ದರು. ಕೆಲ ದಿನಗಳ ಬಳಿಕ ರಾಖಿ ಸಾವಂತ್ ಇನ್ಸ್ಟಾದಲ್ಲಿ ವಿಡಿಯೋ ಹಾಕಿಕೊಂಡು, ದೀಪಕ್ ನಡವಳಿಕೆ ಸರಿಯಾಗಿಲ್ಲ. ಸಾರ್ವಜನಿಕವಾಗಿ ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಾನೆ. ಭಾರತೀಯ ಹೆಣ್ಣಾದ ನನಗೆ ದೀಪಕ್ ವರ್ತನೆ ಸರಿಹೋಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾವಿಬ್ಬರು ಬ್ರೇಕಪ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬಾಂಬ್ ಸಿಡಿಸಿದ್ರು.

    https://www.youtube.com/watch?v=dyv4N8U_T7k

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಧ್ಯಮಗಳ ಮುಂದೆ ರಾಖಿ ಸೀರೆ ಎಳೆದು ಫಸ್ಟ್ ನೈಟ್ ಲೈವ್ ಮಾಡ್ತೀವಿ ಎಂದ ದೀಪಕ್

    ಮಾಧ್ಯಮಗಳ ಮುಂದೆ ರಾಖಿ ಸೀರೆ ಎಳೆದು ಫಸ್ಟ್ ನೈಟ್ ಲೈವ್ ಮಾಡ್ತೀವಿ ಎಂದ ದೀಪಕ್

    ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಡಿಸೆಂಬರ್ 31ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಮೊದಲು ರಾಖಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ರಾಖಿ ಭಾವಿ ಪತಿ ಆಕೆಯ ಸೀರೆ ಎಳೆದು ಲೈವ್ ಫಸ್ಟ್ ನೈಟ್ ಮಾಡ್ತೇನೆ ಎಂದು ಹೇಳಿದ್ದಾರೆ.

    ದೀಪಕ್ ಕಲಾಲ್ ಯೂಟ್ಯೂಬ್ ವಿಡಿಯೋ ವೈರಲ್ ಆಗಿದೆ. ದೀಪಕ್ ಹಾಗೂ ರಾಖಿ ಸುದ್ದಿಗೋಷ್ಠಿಯಲ್ಲಿ ತಮ್ಮ ಮದುವೆಯ ಪ್ರತಿಯೊಂದು ಡಿಟೇಲ್ಸ್ ಹೊರಹಾಕಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ರಾಖಿ ಸಾಕಷ್ಟು ಡ್ರಾಮಾ ಮಾಡಿ ತನ್ನ ಭಾವಿ ಪತಿಗೆ ಎಲ್ಲರ ಸಮ್ಮುಖದಲ್ಲಿ ನಿಂದಿಸಿದ್ದಾರೆ.

    ಇದೇ ವೇಳೆ ದೀಪಕ್ ಮಾಧ್ಯಮಗಳ ಮುಂದೆ ರಾಖಿ ಸಾವಂತ್ ಸೀರೆಯನ್ನು ಎಳೆದಿದ್ದಾರೆ. ಅಲ್ಲದೇ ರಾಖಿ ಸಾವಂತ್ ತನ್ನ ಭಾವಿ ಪತಿಗೆ ತಾಳಿ ಕಟ್ಟಿದ್ದಾರೆ. ಈ ವೇಳೆ ರಾಖಿ ತಾನೂ ಹಾಕಿರುವ ಸೀರೆಯನ್ನು ಡೊನಾಲ್ಡ್ ಟ್ರಂಪ್ ಅವರು ಗಿಫ್ಟ್ ನೀಡಿದ್ದಾರೆ ಎಂದು ಹೇಳಿ ನಾವಿಬ್ಬರು ಫಸ್ಟ್ ನೈಟ್ ಲೈವ್ ಮಾಡುತ್ತೇವೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರದ ಫೋಟೋ ವೈರಲ್

    ಮಾಧ್ಯಮಗಳ ಮುಂದೆ ದೀಪಕ್ ನಮ್ಮ ಮದುವೆ ಕೇವಲ 70 ಕೋಟಿ ರೂ. ಬಜೆಟ್ ಎಂದು ಹೇಳಿದ್ದಾರೆ. ಆಗ ರಾಖಿ ನೀನು ನನಗೆ 85 ಕೋಟಿ ರೂ. ಎಂದು ಹೇಳಿದೆ. ಈಗ ಆ 15 ಕೋಟಿ ರೂ. ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು. ಆಗ ದೀಪಕ್ ಆ ಹಣ ಉಡುಪುಗಳು ಖರೀದಿಸಲು ಸಹಾಯವಾಗುತ್ತದೆ ಎಂದು ಉತ್ತರಿಸಿದರು.

    ದೀಪಿಕಾ-ರಣ್‍ವೀರ್, ಪ್ರಿಯಾಂಕಾ- ನಿಕ್ ಮದುವೆ ನಂತರ ರಾಖಿ ಸಾವಂತ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ರಾಖಿ ಯೂಟ್ಯೂಬರ್ ದೀಪಕ್ ಕಲಾಲ್ ಜೊತೆ ಮದುವೆಯಾಗುತ್ತಿದ್ದಾರೆ. ಸದ್ಯ ರಾಖಿ ಮದುವೆಯ ಆಮಂತ್ರಣ ಪ್ರತಿಕೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ವೈರಲ್ ಆಗಿದೆ.

     

    View this post on Instagram

     

    #rakhisawant press meet

    A post shared by ajay (@ajayughreja766) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಖಿ ಸಾವಂತ್ ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರದ ಫೋಟೋ ವೈರಲ್

    ರಾಖಿ ಸಾವಂತ್ ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರದ ಫೋಟೋ ವೈರಲ್

    – ನಾವಿಬ್ಬರೂ ವರ್ಜಿನ್ ಅಂದ್ರು ಭಾವಿ ಪತಿ

    ಹೈದರಾಬಾದ್: ಸಾಮಾಜಿಕ ಜಾಲತಾಣಗಳಿಗೆ ಫೋಟೋ, ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಸುದ್ದಿಯಾಗುವ ನಟಿ ರಾಖಿ ಸಾವಂತ್ ಅವರ ಕನ್ಯತ್ವ ಪರೀಕ್ಷೆಯ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ರಾಖಿ ಸಾವಂತ್ ಮದುವೆಗೂ ಮುನ್ನ ಕನ್ಯತ್ವ ಪರೀಕ್ಷೆ ಮಾಡಿಸಿದ್ದಾರೆ. ರಾಖಿಗೆ ಈಗಾಗಲೇ ಮದುವೆ ನಿಶ್ಚಯವಾಗಿದ್ದು, ಈ ಬಗ್ಗೆ ಇತ್ತೀಚೆಗಷ್ಟೇ ರಾಖಿ ಸಾವಂತ್ ಬಹಿರಂಗಪಡಿಸಿದ್ದರು.

    ಮದುವೆ ಆಮಂತ್ರಣ ಪತ್ರಿಕೆಯನ್ನ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡುವ ಮೂಲಕ ವಿವಾಹದ ಬಗ್ಗೆ ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ ರಾಖಿ ಸಾವಂತ್  ನ ‘ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರ’ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿದ್ದು, ಇದು ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಯಾಗಿದೆ.

    https://www.instagram.com/p/BquSSbsAxlL/

    ಅಂದಹಾಗೇ ರಾಖಿ ಸಾವಂತ್ ನ ಕನ್ಯತ್ವ ಪರೀಕ್ಷೆಯ ಪ್ರಮಾಣ ಪತ್ರವನ್ನು ಮದುವೆಯಾಗುತ್ತಿರುವ ಹುಡುಗ ತನ್ನ ಇನ್ಸ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ರಾಖಿ ಸಾವಂತ್ ಮದುವೆ ಆಗುತ್ತಿರುವ ಹುಡುಗ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕವಾಗಿ ಪ್ರಚಾರ ಪಡೆದುಕೊಂಡಿದ್ದಾರೆ. ಅವರ ಹೆಸರು ದೀಪಕ್ ಕಲಾಲ್. ಇವರೇ ರಾಖಿ ಸಾವಂತ್ ನ ‘ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರ’ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ದೀಪಕ್ ಕಲಾಲ್ ಕೂಡ ತಮ್ಮ ಕನ್ಯತ್ವ ಪರೀಕ್ಷೆಯ ಪ್ರಮಾಣ ಪತ್ರವನ್ನು ಕೂಡ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ದೀಪಕ್ ಕಲಾಲ್, ”ನೀನು ಈಗ ಪವಿತ್ರವಾಗಿದ್ದೀಯಾ. ಹಿಂದೆ, ಮುಂದೆ ಮತ್ತು ಕೆಳಗೆ ಎಲ್ಲವೂ ನೀನು ಪವಿತ್ರ. ನೀನು ಖುಷಿನಾ ಬೇಬಿ” ಎಂದು ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರದ ಫೋಟೋ ಹಾಕಿ ಬರೆದುಕೊಂಡಿದ್ದಾರೆ.

    https://www.instagram.com/p/BquSz99Am25/

    ”ನಾನು ಮತ್ತು ರಾಖಿ ಇಬ್ಬರು ಮದುವೆಗೂ ಮುನ್ನಾ ವೈದ್ಯರ ಬಳಿ ಹೋಗಿ ಕನ್ಯತ್ವ ಪರೀಕ್ಷೆ ಮಾಡಿಸಿದ್ದೇವೆ. ಇಬ್ಬರು ವರ್ಜಿನ್ ಆಗಿದ್ದೀವಿ. ಡಾ. ಚೌಧರಿ ನಮ್ಮಿಬ್ಬರ ಕನ್ಯತ್ವ ಪರೀಕ್ಷೆ ಮಾಡಿದ್ದಾರೆ” ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ.

    ಮದುವೆ ಯಾವಾಗ?
    ರಾಖಿ ಸಾವಂತ್ ಮತ್ತು ದೀಪಕ್ ಕಲಾಲ್ ಮದುವೆ ಡಿಸೆಂಬರ್ 31 ರಂದು ನಡೆಯಲಿದ್ದು, ಲಾಸ್ ಏಂಜಲೀಸ್ ನಲ್ಲಿ ವಿವಾಹ ಸಮಾರಂಭ ನಡೆಲಿದೆ. ಬಳಿಕ ಭಾರತದಲ್ಲಿ ಮದುವೆ ಪಾರ್ಟಿ ಮತ್ತು ಆರತಕ್ಷತೆಯನ್ನ ಆಯೋಜನೆ ಮಾಡಲಾಗುತ್ತೆ ಎಂದು ತಿಳಿದು ಬಂದಿದೆ.

    https://www.instagram.com/p/Bqt-3HMAfGl/

    https://www.instagram.com/p/Bqwtrv6hHIB/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv