Tag: Deepak Chahar

  • ಮಕಾಡೆ ಮಲಗಿದ ಮುಂಬೈ, ಚೆನ್ನೈಗೆ 6 ವಿಕೆಟ್‌ಗಳ ಜಯ – CSK ಪ್ಲೆ ಆಫ್‌ಗೆ ಇನ್ನೆರಡೇ ಹೆಜ್ಜೆ ಬಾಕಿ

    ಮಕಾಡೆ ಮಲಗಿದ ಮುಂಬೈ, ಚೆನ್ನೈಗೆ 6 ವಿಕೆಟ್‌ಗಳ ಜಯ – CSK ಪ್ಲೆ ಆಫ್‌ಗೆ ಇನ್ನೆರಡೇ ಹೆಜ್ಜೆ ಬಾಕಿ

    ಚೆನ್ನೈ: ಸಂಘಟಿತ ಬೌಲಿಂಗ್‌ ದಾಳಿ ಹಾಗೂ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ತವರಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings), ಮುಂಬೈ ಇಂಡಿಯನ್ಸ್ (Mumba Indians) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಪಾಯಿಟ್ಸ್‌ ಪಟ್ಟಿಯಲ್ಲಿ ‌ಒಂದು ಸ್ಥಾನ ಮೇಲಕ್ಕೆ ಜಿಗಿದಿದೆ.

    11 ಪಂದ್ಯಗಳ ಪೈಕಿ 6 ರಲ್ಲಿ ಗೆಲುವು ಸಾಧಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ 13 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದರೆ, 10 ಪಂದ್ಯಗಳಲ್ಲಿ ತಲಾ 5ರಲ್ಲಿ ಗೆಲುವು ಸಾಧಿಸಿರುವ ಲಕ್ನೋ ಸೂಪರ್‌ ಜೈಂಟ್ಸ್‌ 11 ಅಂಕಗಳೊಂದಿಗೆ 3 ಹಾಗೂ ರಾಜಸ್ಥಾನ್‌ ರಾಯಲ್ಸ್‌ 10 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಗುಜರಾತ್‌ ಟೈಟಾನ್ಸ್‌ಗೆ 9 ವಿಕೆಟ್‌ಗಳ ಭರ್ಜರಿ ಜಯ – ಪಾಂಡ್ಯ ಪಡೆ ಬಹುತೇಕ ಪ್ಲೇ ಆಫ್‌ಗೆ; ಈ ಸಲ ಕಪ್‌ ಯಾರದ್ದು?

    ಶನಿವಾರ ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 139 ರನ್‌ ಗಳಿಸಿತ್ತು. 140 ರನ್‌ ಗುರಿ ಪಡೆದ ಸಿಎಸ್‌ಕೆ 17.4 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ 140 ರನ್‌ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ: ಯುದ್ಧ ಮುಂದುವರಿಸಲಿ – ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ದಾದಾ

    ಗೆಲುವಿಗೆ 140 ರನ್‌ಗಳ ಸಾಧಾರಣ ರನ್‌ ಗುರಿ ಪಡೆದ ಚೆನ್ನೈ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ಮಾಡಲು ಮುಂದಾಯಿತು. ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್‌ ಗಾಯಕ್ವಾಡ್‌ ಭರ್ಜರಿ ಸಿಕ್ಸರ್‌, ಬೌಂಡರಿ ಸಿಡಿದರು. ಆದ್ರೆ 16 ಎಸೆತಗಳಲ್ಲಿ 30 ರನ್‌ (4 ಬೌಂಡರಿ, 2 ಸಿಕ್ಸರ್‌) ಗಳಿಸುತ್ತಿದ್ದಂತೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ಬಳಿಕ ಕಣಕ್ಕಿಳಿದ ಅಜಿಂಕ್ಯಾ ರಹಾನೆ (Ajinkya Rahane) ಕೂಡ ಭರ್ಜರಿ ಬ್ಯಾಟಿಂಗ್‌ ಮಾಡಿದರು. ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ರನ್‌ ಕಲೆಹಾಕುತ್ತಾ ಸಾಗಿದ ಚೆನ್ನೈ ಬಹುಬೇಗನೆ ಗುರಿ ತಲುಪಿತು.

    ಸಿಎಸ್‌ಕೆ ಪರ ಋತುರಾಜ್‌ ಗಾಯಕ್ವಾಡ್‌ 30 ರನ್‌, ಡಿವೋನ್‌ ಕಾನ್ವೆ (Devon Conway) 44 ರನ್‌ (42 ಎಸೆತ, 4 ಬೌಂಡರಿ), ಅಜಿಂಕ್ಯಾ ರಹಾನೆ 21 (17 ಎಸೆತ, 1 ಸಿಕ್ಸರ್‌, 1 ಬೌಂಡರಿ), ಅಂಬಟಿ ರಾಯುಡು 12 ರನ್‌ ಹಾಗೂ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಶಿವಂ ದುಬೆ 25 ರನ್‌ (17 ಎಸೆತ, 3 ಸಿಕ್ಸರ್‌) ಚಚ್ಚಿದರು. ನಾಯಕ ಎಂ.ಎಸ್‌ ಧೋನಿ (MS Dhoni) 3 ಎಸೆತಗಳಲ್ಲಿ 2 ರನ್‌ ಗಳಿಸಿ ಅಜೇಯರಾಗುಳಿದರು.

    ಮುಂಬೈ ಪರ ಪಿಯೂಷ್‌ ಚಾವ್ಲಾ 2 ವಿಕೆಟ್‌ ಕಿತ್ತರೆ, ಟ್ರಿಸ್ಟಾನ್ ಸ್ಟಬ್ಸ್ ಹಾಗೂ ಆಕಾಶ್‌ ಮಧ್ವಾಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ಕಳಪೆ‌ ಪ್ರದರ್ಶನ ನೀಡಿತು. ಆರಂಭಿಕರಾಗಿ ಕಣಕ್ಕಿಳಿದ ಕ್ಯಾಮರೂನ್‌ ಗ್ರೀನ್‌ 6 ರನ್‌, ಇಶಾನ್‌ ಕಿಶನ್‌ 7 ರನ್‌ ಗಳಿಸಿ ಔಟಾಗುತ್ತಿದ್ದಂತೆ ನಾಯಕ ರೋಹಿತ್‌ ಶರ್ಮಾ (Rohit Sharma) ಮತ್ತೆ ಡಕೌಟ್‌ ಆಗಿ ನಿರಾಸೆ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಸೂರ್ಯಕುಮಾರ್‌ ಯಾದವ್‌ ಹಾಗೂ ನೆಹಾಲ್‌ ವಧೇರಾ ಸಣ್ಣ ಜೊತೆಯಾಟ ನೀಡಿದರು. 46 ಎಸೆತಗಳಲ್ಲಿ ಈ ಜೋಡಿ 55 ರನ್‌ ಗಳಿಸಿತ್ತು. ಆದ್ರೆ ಸೂರ್ಯಕುಮಾರ್‌ (Suryakumar Yadav) ಔಟಾಗಿ ಮತ್ತೆ ನಿರಾಸೆ ಮೂಡಿಸಿದರು. ಏಕಾಂಗಿ ಹೋರಾಟ ನಡೆಸಿದ ನೆಹಾಲ್‌ ವಧೇರಾ (Nehal Wadhera) ಅರ್ಧಶತಕ ಗಳಿಸಿ ತಂಡಕ್ಕೆ ಆಸರೆಯಾದರು.

    ಮುಂಬೈ ಪರ ನೆಹಾಲ್‌ ವಧೇರಾ 64 ರನ್‌ (51 ಎಸೆತ, 8 ಬೌಂಡರಿ, 1 ಸಿಕ್ಸರ್‌), ಸೂರ್ಯಕುಮಾರ್‌ ಯಾದವ್‌ 26 ರನ್‌ (22 ಎಸೆತ, 3 ಬೌಂಡರಿ), ಟ್ರಿಸ್ಟಾನ್ ಸ್ಟಬ್ಸ್ 20 ರನ್‌ (21 ಎಸೆತ, 2 ಬೌಂಡರಿ) ಗಳಿಸಿದ್ದು ಬಿಟ್ಟರೆ, ಉಳಿದ ಯಾರೊಬ್ಬರೂ 10 ರನ್‌ ಸಹ ಗಳಿಸದ್ದೇ ಇದ್ದದ್ದು ತಂಡದ ಸೋಲಿಗೆ ಕಾರಣವಾಯಿತು.

    ಸಿಎಸ್‌ಕೆ ಪರ ಮಿಂಚಿನ ಬೌಲಿಂಗ್‌ ದಾಳಿ ನಡೆಸಿದ ಮಹೇಶ್‌ ಪತಿರಣ 3 ವಿಕೆಟ್‌ ಕಿತ್ತರೆ, ದೀಪಕ್‌ ಚಹಾರ್‌ ಹಾಗೂ ತುಷಾರ್‌ ದೇಶ್‌ಪಾಂಡೆ ತಲಾ 2 ವಿಕೆಟ್‌ ಹಾಗೂ ರವೀಂದ್ರ ಜಡೇಜಾ 1 ವಿಕೆಟ್‌ ಪಡೆದು ಮಿಂಚಿದರು.

  • ದೀಪಕ್ ಚಹರ್ ಮುಂದಿನ ನಾಲ್ಕೈದು ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇಲ್ಲ: ಸುರೇಶ್ ರೈನಾ

    ದೀಪಕ್ ಚಹರ್ ಮುಂದಿನ ನಾಲ್ಕೈದು ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇಲ್ಲ: ಸುರೇಶ್ ರೈನಾ

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಬೌಲರ್ ದೀಪಕ್ ಚಹರ್ (Deepak Chahar) ಮುಂದಿನ ನಾಲ್ಕೈದು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ.

    ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಶನಿವಾರದ ಪಂದ್ಯದ ವೇಳೆ ದೀಪಕ್ ಚಹರ್ ಅವರು ಮಂಡಿಯ ಗಾಯದಿಂದ ಬಳಲಿದ್ದಾರೆ. ಈ ಸಮಸ್ಯೆಯಿಂದಾಗಿ ಐಪಿಎಲ್‍ನ 4 ರಿಂದ 5 ಪಂದ್ಯಗಳಲ್ಲಿ ಚಹರ್ ಹೊರಗುಳಿಯುವ ಸಾಧ್ಯತೆ ಇದೆ. ಇದನ್ನೂ ಓದಿ: ಒಂದೇ ಕೈಯಲ್ಲಿ ಜಡೇಜಾ ಕ್ಯಾಚ್‌ – 10 ವರ್ಷದ ಹಿಂದೆ ʼಸರ್‌ ಜಡೇಜಾʼ ಎಂದಿದ್ದ ಧೋನಿ ಟ್ವೀಟ್‌ ವೈರಲ್‌

    ಪಂದ್ಯದ ಕಾಮೆಂಟರಿ ವೇಳೆ ಸಿಎಸ್‍ಕೆ ಮಾಜಿ ಆಟಗಾರ ಸುರೇಶ್ ರೈನಾ (Suresh Raina), ಮಂಡಿಯ ಗಾಯದಿಂದ ಚಹರ್ ಬಳಲುತ್ತಿರುವಂತೆ ತೋರುತ್ತದೆ. ಮುಂದಿನ ಪಂದ್ಯಗಳಿಗೆ ಚೆನ್ನೈನಿಂದ ದೂರ ಪ್ರಯಾಣಿಸಬೇಕಿರುವುದರಿಂದ ಕೆಲವು ಪಂದ್ಯಗಳಲ್ಲಿ ಅವರು ಆಡುವ ನಿರೀಕ್ಷೆಯಿಲ್ಲ ಎಂದಿದ್ದಾರೆ.

    ಚಹರ್ ಅವರನ್ನು ಮೊದಲ ಓವರ್‌ಗೆ ಸೀಮಿತಗೊಳಿಸಲಾಯಿತು. ನಮ್ಮ ತಂಡದ ಮಗಲಾ (Magala), ಪಿಟ್ರೋರಿಯಸ್ ಹಾಗೂ ತುಷಾರ್ ದೇಶಪಾಂಡೆ ಅತ್ಯುತ್ತಮ ಬಾಲಿಂಗ್ ಪ್ರದರ್ಶನ ಮಾಡಿದ್ದಾರೆ ಎಂದು ಧೋನಿ (MS Dhoni) ಮಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಚಹರ್ ದೀರ್ಘಕಾಲದ ಗಾಯದ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಳೆದ ಐಪಿಎಲ್‍ನಲ್ಲಿ ಬೆನ್ನು ನೋವಿನಿಂದ ಬಳಲಿದ್ದ ಅವರು ಸಂಪೂರ್ಣವಾಗಿ ಹೊರಗುಳಿದಿದ್ದರು. ಇದನ್ನೂ ಓದಿ: IPl 2023: ರಂಗೇರಿಸಿದ ರಹಾನೆ ಬ್ಯಾಟಿಂಗ್‌, ಜಡೇಜಾ ಸ್ಪಿನ್‌ ಜಾದು- ಚೆನ್ನೈಗೆ 7 ವಿಕೆಟ್‌ಗಳ ಭರ್ಜರಿ ಜಯ

  • ಬುಮ್ರಾ ಬದಲು ಶಮಿ, ಚಹರ್ ಔಟ್ – ಆಸ್ಟ್ರೇಲಿಯಾಗೆ ಹಾರಲಿದ್ದಾರೆ ಶಾರ್ದೂಲ್, ಸಿರಾಜ್

    ಬುಮ್ರಾ ಬದಲು ಶಮಿ, ಚಹರ್ ಔಟ್ – ಆಸ್ಟ್ರೇಲಿಯಾಗೆ ಹಾರಲಿದ್ದಾರೆ ಶಾರ್ದೂಲ್, ಸಿರಾಜ್

    ಮುಂಬೈ: ಟಿ20 ವಿಶ್ವಕಪ್‍ನಿಂದ (T20 World Cup) ಗಾಯಾಳುವಾಗಿ ಹೊರಗುಳಿದ ಜಸ್ಪ್ರೀತ್ ಬುಮ್ರಾ (Jasprit Bumrah) ಸ್ಥಾನಕ್ಕೆ ಮೊಹಮ್ಮದ್ ಶಮಿಯನ್ನು (Mohammed Shami) ಬಿಸಿಸಿಐ (BCCI) ಆಯ್ಕೆ ಮಾಡಿದ್ದು, 15 ಸದಸ್ಯರ ತಂಡದಲ್ಲಿ ಶಮಿ ಸ್ಥಾನ ಪಡೆದಿರುವ ಬಗ್ಗೆ ಬಿಸಿಸಿಐ ಮೂಲಗಳಿಂದ ವರದಿಯಾಗಿದೆ.

    ಬುಮ್ರಾ ಗಾಯಾಳುವಾಗಿ ತಂಡದಿಂದ ಹೊರಗುಳಿದ ಬಳಿಕ ಅವರ ಸ್ಥಾನಕ್ಕೆ ಬಿಸಿಸಿಐ ಬದಲಿ ಆಟಗಾರನನ್ನು ಇನ್ನೂ ಆಯ್ಕೆ ಮಾಡಿಲ್ಲ. ಮೂಲಗಳ ಪ್ರಕಾರ ಶಮಿಯನ್ನು ಆಯ್ಕೆ ಮಾಡಲಾಗಿದ್ದು, ನಾಳೆ ಆಸ್ಟ್ರೇಲಿಯಾಗೆ (Australia) ತೆರಳಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ತಿಳಿಸಿಲ್ಲ. ಇದನ್ನೂ ಓದಿ: ಗಂಗೂಲಿ ಬಿಜೆಪಿ ಸೇರಲು ನಿರಾಕರಿಸಿದ್ದರಿಂದ್ಲೇ 2ನೇ ಬಾರಿಗೆ BCCI ಸ್ಥಾನ ಕೈತಪ್ಪಿದೆ – TMC

    ಈ ನಡುವೆ ಮೀಸಲು ಆಟಗಾರನಾಗಿ ಸ್ಥಾನ ಪಡೆದಿದ್ದ ದೀಪಕ್ ಚಹರ್ (Deepak Chahar) ಗಾಯಗೊಂಡು ಟಿ20 ವಿಶ್ವಕಪ್‍ನಿಂದ ಹೊರಬಿದ್ದಿದ್ದಾರೆ. ಈ ಹಿಂದೆ ಬುಮ್ರಾ ಬದಲಿಗೆ ಚಹರ್‌ಗೆ ಅವಕಾಶ ಸಿಗುವ ನಿರೀಕ್ಷೆ ಇತ್ತು. ಆದರೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಗಾಯಗೊಂಡ ಪರಿಣಾಮ ಚಹರ್ ಟಿ20 ವಿಶ್ವಕಪ್‍ನಿಂದ ಹೊರಬಿದ್ದಿದ್ದಾರೆ.

    ಶಮಿ ಜೊತೆಗೆ ಮೀಸಲು ಆಟಗಾರರಾಗಿ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಆಯ್ಕೆಯಾಗಿದ್ದು, ನಾಳೆ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಭಾರತ ಅಕ್ಟೋಬರ್ 23 ರಂದು ಪಾಕಿಸ್ತಾನ ವಿರುದ್ಧ ಆಡಲಿದೆ. ಇದನ್ನೂ ಓದಿ: ನೀನು SSLC ಪಾಸ್ ಆಗಲ್ಲ ಅಂತ ಅಪ್ಪ ಹೇಳಿದ್ರು- ಧೋನಿ ಸ್ಕೂಲ್ ಲೈಫ್ ರಿವೀಲ್

    ಭಾರತ ತಂಡ:
    ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

    Live Tv
    [brid partner=56869869 player=32851 video=960834 autoplay=true]

  • ಕ್ರೀಸ್ ಬಿಟ್ಟರೆ ಉಳಿಗಾಲವಿಲ್ಲ ಸ್ಟಬ್ಸ್‌ಗೆ ಚಹರ್ ವಾರ್ನಿಂಗ್ – ಕಣ್ಸನ್ನೆಯಲ್ಲೇ ಮಾತುಕತೆ

    ಕ್ರೀಸ್ ಬಿಟ್ಟರೆ ಉಳಿಗಾಲವಿಲ್ಲ ಸ್ಟಬ್ಸ್‌ಗೆ ಚಹರ್ ವಾರ್ನಿಂಗ್ – ಕಣ್ಸನ್ನೆಯಲ್ಲೇ ಮಾತುಕತೆ

    ಇಂದೋರ್: ಭಾರತ (India) ಹಾಗೂ ದಕ್ಷಿಣ ಆಫ್ರಿಕಾ (South Africa) ನಡುವಿನ 3ನೇ ಟಿ20 (T20) ಪಂದ್ಯದಲ್ಲಿ ರನ್ ಮಳೆ ಸುರಿದರೆ, ಇನ್ನೊಂದೆಡೆ ಟೀಂ ಇಂಡಿಯಾ ವೇಗಿ ದೀಪಕ್ ಚಹರ್ (Deepak Chahar) ಬೌಲಿಂಗ್ ಎಸೆಯುವ ಮುನ್ನವೇ ಟ್ರಿಸ್ಟಾನ್ ಸ್ಟಬ್ಸ್ (Tristan Stubbs) ನಾನ್ ಸ್ಟ್ರೈಕರ್ ಎಂಡ್‍ನಿಂದ ಕ್ರೀಸ್ ಬಿಟ್ಟಿದ್ದರು. ಇದನ್ನು ಗಮನಿಸಿದ ದೀಪಕ್ ಚಹರ್‌ಗೆ ರನೌಟ್ ಮಾಡುವ ಅವಕಾಶವಿತ್ತು. ಆದರೆ ಔಟ್ ಮಾಡದೇ ಸ್ಟಬ್ಸ್‌ಗೆ ಎಚ್ಚರಿಕೆ ನೀಡಿ ಅಭಿಮಾನಿಗಳ ಮನಗೆದ್ದಿದ್ದಾರೆ.

    ಪಂದ್ಯದ 16ನೇ ಓವರ್‌ನಲ್ಲಿ ಸ್ಟಬ್ಸ್ ಅವರನ್ನು ಮಂಕಡ್ (Mankad) ರನೌಟ್ ಮೂಲಕ ಔಟ್ ಮಾಡುವ ಅವಕಾಶ ದೀಪಕ್ ಚಹರ್ ಮುಂದಿತ್ತು. 16ನೇ ಓವರ್‌ನ ಮೊದಲ ಎಸೆತವನ್ನು ಎಸೆಯುವ ಮುನ್ನವೇ ಟ್ರಿಸ್ಟಾನ್ ಸ್ಟಬ್ಸ್ ನಾನ್ ಸ್ಟ್ರೈಕರ್ ಎಂಡ್‍ನಿಂದ ಕ್ರೀಸ್ ಬಿಟ್ಟಿದ್ದರು. ಇದನ್ನು ಗಮನಿಸಿದ ದೀಪಕ್ ಚಹರ್ ಬೌಲಿಂಗ್ ಮಾಡದೆ ರನೌಟ್ ಮಾಡುವ ಅವಕಾಶವಿತ್ತು. ಆದರೆ ಚಹರ್ ಔಟ್ ಮಾಡದೇ ಸ್ಟಬ್ಸ್‌ಗೆ ಕಣ್ಸನ್ನೆಯಲ್ಲೇ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಆಫ್ರಿಕಾಗೆ 49 ರನ್‌ಗಳ ಭರ್ಜರಿ ಜಯ – ಸರಣಿ ಗೆದ್ದ ಟೀಂ ಇಂಡಿಯಾ

    ಆ ಬಳಿಕ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಕೆಲದಿನಗಳಹಿಂದೆ ಇಂಗ್ಲೆಂಡ್ ಪ್ರವಾಸದಲ್ಲಿ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ (Deepti Sharma) ಮಾಡಿದ್ದ ಮಂಕಡ್ ರನೌಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಐಸಿಸಿಯ ನೂತನ ನಿಯಮದ ಪ್ರಕಾರ ಮಂಕಡ್ ರನೌಟ್‍ನ್ನು ಅಧಿಕೃತವಾಗಿ ರನೌಟ್ ಎಂದು ಪರಿಗಣಿಸಲಾಗಿದೆ. ನಾನ್‍ಸ್ಟ್ರೈಕ್‍ನಲ್ಲಿದ್ದ ಆಟಗಾರ ಬೌಲರ್ ಬಾಲ್ ಎಸೆಯುವ ಮುನ್ನ ಕ್ರೀಸ್ ಬಿಟ್ಟರೆ ಅವನನ್ನು ಔಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಮೊದಲು ಇದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಹೇಳಲಾಗುತ್ತಿತ್ತು. ಇದೀಗ ಇದನ್ನು ರನೌಟ್ ಎಂದೇ ಪರಿಗಣಿಸಲಾಗುವುದಾಗಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ನಿಮ್ಮ ಸೇವೆ ತಂಡಕ್ಕೆ ಅಗತ್ಯವಿಲ್ಲ – ಹೆಟ್ಮೆಯರ್‌ರನ್ನು T20 ವಿಶ್ವಕಪ್‍ನಿಂದ ಹೊರಗಿಟ್ಟ CWI

    ಈ ಮಧ್ಯೆ ಚಹರ್ ಮಾತ್ರ ತಮಗೆ ಔಟ್ ಮಾಡುವ ಅವಕಾಶವಿದ್ದರೂ ಯುವ ಆಟಗಾರನಿಗೆ ಈ ಬಗ್ಗೆ ಎಚ್ಚರಿಕೆ ನೀಡಿ ತಮ್ಮಲ್ಲಿರುವ ಕ್ರೀಡಾ ಸ್ಫೂರ್ತಿಯನ್ನು ಮೆರೆದಿದ್ದಾರೆ. ಇದೀಗ ಚಹರ್ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ.‌

    ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್‍ನಿಂದ ಅಬ್ಬರಿಸಿದ ದಕ್ಷಿಣ ಆಫ್ರಿಕಾ, ಭಾರತದ ವಿರುದ್ಧ 49 ರನ್‍ಗಳಿಂದ ಭರ್ಜರಿ ಜಯಗಳಿಸಿತು. ಗೆಲ್ಲಲು 228 ರನ್‍ಗಳ ಕಠಿಣ ಗುರಿಯನ್ನು ಪಡೆದ ಭಾರತ 18.3 ಓವರ್‌ಗಳಲ್ಲಿ 178 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲನ್ನು ಒಪ್ಪಿಕೊಂಡಿತು. ಈ ಪಂದ್ಯವನ್ನು ಸೋತರೂ ಭಾರತ ಮಾಸ್ಟರ್ ಕಾರ್ಡ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.

    Live Tv
    [brid partner=56869869 player=32851 video=960834 autoplay=true]

  • ಆಫ್ರಿಕಾಗೆ ಆಘಾತ ನೀಡಿದ ಅರ್ಶ್‌ದೀಪ್, ಚಹಾರ್, ಶೈನ್‌ ಆದ ಸೂರ್ಯ, ರಾಹುಲ್- ಭಾರತಕ್ಕೆ 8 ವಿಕೆಟ್‌ಗಳ ಜಯ

    ಆಫ್ರಿಕಾಗೆ ಆಘಾತ ನೀಡಿದ ಅರ್ಶ್‌ದೀಪ್, ಚಹಾರ್, ಶೈನ್‌ ಆದ ಸೂರ್ಯ, ರಾಹುಲ್- ಭಾರತಕ್ಕೆ 8 ವಿಕೆಟ್‌ಗಳ ಜಯ

    ತಿರುವನಂತಪುರಂ: ಅರ್ಶ್‌ದೀಪ್‌ ಸಿಂಗ್‌ (Arshdeep Singh), ದೀಪಕ್‌ ಚಹಾರ್‌ (Deepak Chahar) ಮಾರಕ ಬೌಲಿಂಗ್‌ ದಾಳಿ ಹಾಗೂ ಸೂರ್ಯಕುಮಾರ್‌ ಯಾದವ್‌ (Suryakumar Yadav), ಕೆ.ಎಲ್‌.ರಾಹುಲ್‌ (KL Rahul) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲೇ  ಭಾರತ ಭರ್ಜರಿ ಜಯ ಸಾಧಿಸಿದೆ.

    ತಿರುವನಂತಪುರಂನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಬೌಲಿಂಗ್ ಪಡೆ ಅಮೋಘ ಪ್ರದರ್ಶನ ನೀಡುವ ಮೂಲಕ ಹರಿಣ ಪಡೆ ಆಘಾತ ಅನುಭವಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 108 ಅಲ್ಪಮೊತ್ತದ ರನ್‌ಗಳಿಸಿತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ 16.4 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 110 ರನ್‌ ಸಿಡಿಸುವ ಮೂಲಕ ಗೆದ್ದು ಬೀಗಿತು.

    ನಿಧಾನಗತಿಯಲ್ಲೇ ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾಕ್ಕೂ ಆರಂಭದಲ್ಲಿ ಆಘಾತ ಎದುರಾಗಿತ್ತು. ಪವರ್‌ಪ್ಲೇ ಮುಗಿಯುವಷ್ಟರಲ್ಲೇ ಪ್ರಮುಖ ಬ್ಯಾಟರ್‌ಗಳನ್ನು ಟೀಂ ಇಂಡಿಯಾ ಕಳೆದುಕೊಂಡಿತ್ತು. ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದ ನಾಯಕ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಔಟಾದರು. 2 ಎಸೆತ ಎದುರಿಸಿದ ರೋಹಿತ್‌ ಶರ್ಮಾ (Rohit Sharma) ಡಕೌಟ್‌ ಆದರೆ 9 ಎಸೆತ ಎದುರಿಸಿದ ರನ್‌ ಮಿಷಿನ್‌ ಕೊಹ್ಲಿ 3 ರನ್‌ಗಳಿಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು.

    ಈ ನಡುವೆ ಮೂರನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್‌ ಯಾದವ್‌ (Suryakumar Yadav) ಹಾಗೂ ಮತ್ತೊಬ್ಬ ಆರಂಭಿಕ ಕೆಎಲ್‌ ರಾಹುಲ್‌ (KL Rahul) ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಭರ್ಜರಿ ಸಿಕ್ಸ್‌ ಫೋರ್‌ಗಳ ಮೂಲಕ ರನ್‌ ಪೇರಿಸುತ್ತಾ ಟೀಂ ಇಂಡಿಯಾವನ್ನು ಗೆಲುವಿನ ಹಾದಿಗೆ ಕೊಂಡೊಯ್ದರು.

    ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಸೂರ್ಯಕುಮಾರ್‌ ಯಾದವ್‌ 33 ಎಸೆತಗಳಲ್ಲಿ 3 ಸಿಕ್ಸರ್‌, 5 ಬೌಂಡರಿಗಳ ಮೂಲಕ ಸ್ಫೋಟಕ 50 ರನ್‌ ಸಿಡಿಸಿ ಮಿಂಚಿದರೆ, ಉಪನಾಯಕ ಜವಾಬ್ದಾರಿಯುತ ಆಟವಾಡಿದ ಕೆಎಲ್‌ ರಾಹುಲ್‌ ಸಹ 56 ಎಸೆತಗಳಲ್ಲಿ 51 ರನ್‌ (4 ಸಿಕ್ಸರ್‌, 2 ಬೌಂಡರಿ) ಸಿಡಿಸುವ ಮೂಲಕ ಮಿಂಚಿದರು.

    ಹರ್ಷ ತಂದ ಅರ್ಶ್‌ದೀಪ್:
    ಏಷ್ಯಾಕಪ್‌ನ ಇಂಡೋ ಪಾಕ್‌ ಕದನದಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದ ಅರ್ಶ್‌ದೀಪ್ ಸಿಂಗ್‌ ದಕ್ಷಿಣ ಆಫ್ರಿಕಾದ ವಿರುದ್ಧದ ಮೊದಲ ಪಂದ್ಯದಲ್ಲೇ 3 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದರು. ಇನ್ನುಳಿದಂತೆ 4 ಓವರ್‌ಗಳಲ್ಲಿ 24 ರನ್‌ ನೀಡಿದ ದೀಪಕ್‌ ಚಹಾರ್‌ 2 ವಿಕೆಟ್‌, ಹರ್ಷಕ್‌ ಪಟೇಲ್‌ 2 ವಿಕೆಟ್‌ ಹಾಗೂ ಅಕ್ಷರ್‌ ಪಟೇಲ್‌ 1 ವಿಕೆಟ್‌ ಪಡೆದು ಟೀಂ ಇಂಡಿಯಾ ಗೆಲುವಿಗೆ ಕಾರಣರಾದರು.

    ದಕ್ಷಿಣ ಆಫ್ರಿಕಾಗೆ ಆರಂಭಿಕ ಆಘಾತ:
    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ ಮೊದಲ 2.3 ಓವರ್‌ಗಳಲ್ಲಿಯೇ ಅರ್ಧದಷ್ಟು ಆಟಗಾರರನ್ನು ಕಳೆದುಕೊಳ್ಳುವ ಮೂಲಕ ದೊಡ್ಡ ಆಘಾತಕ್ಕೆ ಒಳಗಾಯಿತು. ಟೀಂ ಇಂಡಿಯಾ ಬೌಲರ್‌ಗಳಾದ ಅರ್ಶ್‌ದೀಪ್ ಸಿಂಗ್‌ ಹಾಗೂ ದೀಪಕ್ ಚಾಹರ್ ಆರಂಭದಲ್ಲಿಯೇ ಪ್ರಮುಖ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು. ಇದರಲ್ಲಿ ಎರಡು ವಿಕೆಟ್‌ಗಳನ್ನು ದೀಪಕ್ ಚಾಹರ್ ಪಡೆದುಕೊಂಡಿದ್ದರೆ ಮೂರು ವಿಕೆಟ್‌ಗಳು ಅರ್ಶ್‌ದೀಪ್ ಸಿಂಗ್ ಪಾಲಾದವು.

    ಕಳೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಅರ್ಶ್‌ದೀಪ್ ಸಿಂಗ್ ಈ ಪಂದ್ಯದಲ್ಲಿ ತಂಡಕ್ಕೆ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ತಮ್ಮ ಮೊದಲ ಓವರ್‌ನಲ್ಲಿಯೇ ಅತ್ಯಂತ ಅಪಾಯಕಾರಿಯಾಗಿ ಕಾಣಿಸಿದ ಅರ್ಶ್‌ದೀಪ್ ಸಿಂಗ್ ವಿಕೆಟ್‌ಗಳ ಮೇಲೆ ವಿಕೆಟ್ ಪಡೆದುಕೊಂಡರು. ಈ ಒಂದು ಓವರ್‌ನಲ್ಲಿಯೇ ಅರ್ಶ್‌ದೀಪ್ ಸಿಂಗ್ ಮೂರು ವಿಕೆಟ್ ಪಡೆದು ಗಮನ ಸೆಳೆದರು.

    ಮೊದಲಿಗೆ 1 ರನ್‌ಗಳಿಸಿದ್ದ ಕ್ವಿಂಟನ್ ಡಿಕಾಕ್ (Quinton de Kock) ಅವರನ್ನು ಬೌಲ್ಡ್ ಮಾಡಿದ ಅರ್ಷ್‌ದೀಪ್‌ ಸಿಂಗ್ ನಂತರ ರಿಲೀ ರೊಸ್ಸೋ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ತಮ್ಮ ಮುಂದಿನ ಎಸೆತದಲ್ಲಿಯೇ ಡೇವಿಡ್ ಮಿಲ್ಲರ್‌ ಅನ್ನು ಡಕೌಟ್‌ ಮಾಡಿ ಪೆವಿಲಿಯನ್‌ಗೆ ದಾರಿ ತೋರಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ ನೀಡಿದರು.

    ಆರಂಭಿಕ ಆಘಾತ ಅನುಭವಿಸಿ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಬೇಕಿದ್ದ ದಕ್ಷಿಣ ಆಫ್ರಿಕಾ ಪರವಾಗಿ ಮಾರ್ಕ್ರಮ್, ಪಾರ್ನೆಲ್ ಹಾಗೂ ಅಂತಿಮ ಹಂತದಲ್ಲಿ ಕೇಶವ್ ಮಹಾರಾಜ್ ಜವಾಬ್ದಾರಿಯುತ ಪ್ರದರ್ಶನ ನೀಡಿದರು. ಹೀಗಾಗಿ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್‌ಗಳ ಆಟವನ್ನು ಪೂರ್ಣಗೊಳಿಸಿದ್ದು 106 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಕೇಶವ್ ಮಹಾರಾಜ್ 35 ಎಸೆತಗಳಲ್ಲಿ 41 ರನ್‌ (2 ಸಿಕ್ಸರ್‌, 5 ಬೌಂಡರಿ) ಸಿಡಿಸಿದರೆ, ಜೊತೆಯಲ್ಲಿ ಸಾಥ್‌ ನೀಡಿದ ಪಾರ್ನೆಲ್‌ 37 ಎಸೆತಗಳಲ್ಲಿ 1 ಸಿಕ್ಸರ್‌, 1 ಬೌಂಡರಿಯೊಂದಿಗೆ 24 ರನ್‌ಗಳನ್ನಷ್ಟೇ ಗಳಿಸಿದರು. ಮಾಕ್ರಮ್‌ 25 ರನ್‌ಗಳಿಸಿದರು. ಉಳಿದ ಯಾವೊಬ್ಬ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ದಕ್ಷಿಣ ಆಫ್ರಿಕಾ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಎದುರು ಸೋಲು ಒಪ್ಪಿಕೊಳ್ಳಬೇಕಾಯಿತು.

    ದಕ್ಷಿಣ ಆಫ್ರಿಕಾ ವಿರುದ್ಧ ಕಗಿಸೋ ರಬಾಡ ಹಾಗೂ ಅನ್ರಿಚ್ ನಾರ್ಟ್ಜೆ ತಲಾ ಒಂದೊಂದು ವಿಕೆಟ್‌ ಪಡೆದರು.

    Live Tv
    [brid partner=56869869 player=32851 video=960834 autoplay=true]

  • ಸೆ.20ರಿಂದ ಭಾರತ-ಆಸಿಸ್ ಟಿ20 ಸರಣಿ – ಬುಮ್ರಾ ಮೇಲೆ ಬೆಂಕಿ ಕಣ್ಣು

    ಸೆ.20ರಿಂದ ಭಾರತ-ಆಸಿಸ್ ಟಿ20 ಸರಣಿ – ಬುಮ್ರಾ ಮೇಲೆ ಬೆಂಕಿ ಕಣ್ಣು

    ಮುಂಬೈ: ಇದೇ ಸೆಪ್ಟೆಂಬರ್ 20ರಿಂದ ಭಾರತ (India)- ಆಸ್ಟ್ರೇಲಿಯಾ (Australia) ಟಿ20 ಸರಣಿ ಆರಂಭವಾಗಲಿದೆ. ಆಸಿಸ್ ವಿರುದ್ಧ ಪ್ರಬಲ ಪ್ರದರ್ಶನ ನೀಡಲು ಭಾರತ ಸಜ್ಜಾಗಿದ್ದು, ಮಾರಕ ಬೌಲರ್ ಜಸ್ಪ್ರಿತ್‌ ಬುಮ್ರಾ (Jasprit Bumrah) ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.

    ಏಷ್ಯಾಕಪ್ (AisaCup) ಸೂಪರ್ ಫೋರ್ ಲೀಗ್ ಹಂತದಲ್ಲಿ ಪಾಕಿಸ್ತಾನ (Pakistan) ಹಾಗೂ ಶ್ರೀಲಂಕಾದ (Srilanka) ವಿರುದ್ಧ ಸೆಣಸಿದರೂ ಫೈನಲ್ ತಲುಪಲು ಭಾರತ ವಿಫಲವಾಯಿತು. ಈ ಸೋಲಿನ ರುಚಿ ಕಂಡ ಭಾರತ ಹಲವು ಬದಲಾವಣೆಯೊಂದಿಗೆ ಎದುರಾಳಿಗಳನ್ನು ಬಗ್ಗು ಬಡಿಯಲು ಸಜ್ಜಾಗುತ್ತಿದೆ. ಅಲ್ಲದೇ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನವೇ ಟೀಂ ಇಂಡಿಯಾ ಆಟಗಾರರ ಸಾಮರ್ಥ್ಯವನ್ನೂ ಮೌಲ್ಯಮಾಪನ ಮಾಡಲು ಇದು ಉತ್ತಮ ಸಮಯವಾಗಿದೆ. ಇದನ್ನೂ ಓದಿ: ಮಳೆ ಅವಾಂತರ: ಭಾರತ-ನ್ಯೂಜಿಲೆಂಡ್ ಟೆಸ್ಟ್ ಇನ್ನಿಂಗ್ಸ್ ರದ್ದು, ನಾಳೆ ಡ್ರಾ ಸಾಧ್ಯತೆ

    ಈ ಪಂದ್ಯದಲ್ಲಿ ಮಾರಕ ಬೌಲರ್ ವೇಗಿ ಜಸ್ಪ್ರಿತ್‌ ಬುಮ್ರಾ ಮತ್ತೊಬ್ಬ ವೇಗಿ ದೀಪಕ್ ಚಹಾರ್ (Deepak Chahar) ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಅನೇಕರಿಗೆ ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್-2022ರ ವೇಳೆ ಭಾರತ ತಂಡಕ್ಕೆ ಪ್ರಮುಖ ಆಟಗಾರರ ಅನುಪಸ್ಥಿತಿ ಎದುರಾಯಿತು. ಇದು ತಂಡದ ಮೇಲೂ ಸಾಕಷ್ಟು ಪರಿಣಾಮ ಬೀರಿ ಸೂಪರ್ ಫೋರ್ ಲೀಗ್‌ನಲ್ಲೇ ಭಾರತ ಹೊರಗುಳಿಯುವಂತಾಯಿತು. ಇದನ್ನೂ ಓದಿ: ದುಬೈನಲ್ಲಿ ರವೀಂದ್ರ ಜಡೇಜಾ ಎಡವಟ್ಟು – BCCI ಕೆಂಡಾಮಂಡಲ

    ತಂಡದಲ್ಲಿ ಯಾರೆಲ್ಲಾ ಇರಲಿದ್ದಾರೆ?
    ಆಸಿಸ್ ವಿರುದ್ಧ ಸೆ.20ರಿಂದ ಆರಂಭವಾಗುವ ಟಿ20 ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಜಸ್ಪ್ರಿತ್‌ ಬುಮ್ರಾ, ಯಜುವೇಂದ್ರ ಚಾಹಲ್, ದಿನೇಶ್ ಕಾರ್ತಿಕ್, ರವಿ ಬಿಷ್ಣೋಯ್, ದೀಪಕ್ ಹೂಡಾ ಅಥವಾ ಸಂಜು ಸಾಮ್ಸನ್ ಹಾಗೂ ದೀಪಕ್ ಚಹಾರ್ ಭಾರತ ತಂಡದಲ್ಲಿ ಇರಲಿದ್ದಾರೆ.

    ಎಲ್ಲಿ, ಯಾವಾಗ ಪಂದ್ಯ?
    ಪ್ರತಿದಿನ ಸಂಜೆ 7.30ಕ್ಕೆ ಟಿ20 ಆರಂಭವಾಗಲಿದ್ದು, ಸೆ.20 ರಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಆಸಿಸ್ ವಿರುದ್ಧ ಮೊದಲ ಪಂದ್ಯ ನಡೆಯಲಿದೆ. ಸೆ.23ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ 2ನೇ ಪಂದ್ಯ ಹಾಗೂ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆ.25ರಂದು 3ನೇ ಪಂದ್ಯ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ ದೀಪಕ್ ಚಹರ್

    ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ ದೀಪಕ್ ಚಹರ್

    ನವದೆಹಲಿ: ಭಾರತ ಕ್ರಿಕೆಟ್ ಟೀಮ್‌ನ ಆಲ್‌ರೌಂಡರ್ ದೀಪಕ್ ಚಹರ್ ತಮ್ಮ ಗೆಳತಿ ಜಯಾ ಭಾರದ್ವಾಜ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಬುಧವಾರ ತಮ್ಮ ಗೆಳತಿಯೊಂದಿಗೆ ವಿವಾಹವಾದ ಚಹರ್, ಗುರುವಾರ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಪತ್ನಿ ಬಗ್ಗೆ ತಮ್ಮ ಮನದಾಳದ ಮಾತನ್ನು ವಿವರಿಸಿದ್ದಾರೆ.

    ನಾನು ನಿನ್ನನ್ನು ಮೊದಲ ಬಾರಿ ಭೇಟಿಯಾದಾಗ ನನ್ನ ಜೀವನಕ್ಕೆ ನೀನೇ ಸರಿಯಾದ ವ್ಯಕ್ತಿ ಎಂದು ತಿಳಿದಿದ್ದೆ. ನಾವು ನಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಜೊತೆಯಲ್ಲಿ ಆನಂದಿಸಿದ್ದೇವೆ ಹಾಗೂ ನಿನ್ನನ್ನು ಯಾವಾಗಲೂ ಹೀಗೇ ಸಂತೋಷವಾಗಿಡಲು ಬಯಸುತ್ತೇನೆ. ಇದು ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದು. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಮಗೆ ಎಲ್ಲರ ಆಶೀರ್ವಾದ ಬೇಕು ಎಂದು ಬರೆದಿದ್ದಾರೆ. ಇದನ್ನೂ ಓದಿ: ಒಂದೇ ಒಂದು ಪಂದ್ಯವಾಡದೇ 2 ಐಪಿಎಲ್ ಕಪ್ ಗೆದ್ದ ವಿದೇಶಿ ಆಟಗಾರ

     

    View this post on Instagram

     

    A post shared by Deepak Chahar (@deepak_chahar9)

    ಕಳೆದ ವರ್ಷ ದುಬೈನಲ್ಲಿ ನಡೆದ ಐಪಿಎಲ್‌ನಲ್ಲಿ ದೀಪಕ್ ಜಯಾಗೆ ಸ್ಟೇಡಿಯಂನಲ್ಲೇ ಪ್ರಪೋಸ್ ಮಾಡಿದ್ದರು. ದೀಪಕ್ ತಮ್ಮ ಗೆಳತಿಗೆ ಪ್ರೇಮನಿವೇದನೆ ಮಾಡಿದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸಿಎಸ್‌ಕೆ ತಂಡದಲ್ಲಿದ್ದ ದೀಪಕ್ ಪಂಜಾಬ್ ತಂಡದ ವಿರುದ್ಧ ಪಂದ್ಯವನ್ನು ಗೆದ್ದ ಬಳಿಕ ಎಲ್ಲರೆದುರು ಗೆಳತಿಗೆ ಉಂಗುರ ತೊಡಿಸಿದ್ದರು. ಇದನ್ನೂ ಓದಿ: ಭಾರತ, ದಕ್ಷಿಣ ಆಫ್ರಿಕಾ T20 ಪಂದ್ಯ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ

    ಜಯಾ ಬಾರದ್ವಾಜ್ ನಟ ಹಾಗೂ ಬಿಗ್‌ಬಾಸ್ 13ರ ವಿಜೇತ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿಯಾಗಿದ್ದು, ದೆಹಲಿಯ ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

  • 4 ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾಗಿದೆ ದೀಪಕ್ ಚಹರ್ – ಟಿ20 ವಿಶ್ವಕಪ್‍ಗೂ ಡೌಟ್

    4 ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾಗಿದೆ ದೀಪಕ್ ಚಹರ್ – ಟಿ20 ವಿಶ್ವಕಪ್‍ಗೂ ಡೌಟ್

    ಮುಂಬೈ: ಗಾಯಾಳುವಾಗಿ ಎನ್‍ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿರುವ ಟೀಂ ಇಂಡಿಯಾದ ವೇಗಿ ದೀಪಕ್ ಚಹರ್ ಮತ್ತೆ ಗಾಯಗೊಂಡು ನಾಲ್ಕು ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾದ ಸಂಕಷ್ಟ ಎದುರಾಗಿದೆ.

    ವೆಸ್ಟ್ ಇಂಡೀಸ್ ವಿರುದ್ದದ ಸರಣಿಯ ವೇಳೆ ದೀಪಕ್ ಚಹರ್ ತೊಡೆಸಂದು ಗಾಯಕ್ಕೆ ತುತ್ತಾಗಿದ್ದರು. ಆ ಬಳಿಕ ಚಹರ್ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಅಭ್ಯಾಸ ನಡೆಸುತ್ತಿದ್ದಾರೆ. ಈ ತಿಂಗಳ ಕೊನೆಗೆ ಫಿಟ್ ಆಗಿ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಚಹರ್ ಮತ್ತೆ ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎಂದು ಮೂಲಗಳಿಂದ ವರದಿಯಾಗಿದ್ದು ಮುಂದಿನ 4 ತಿಂಗಳು ಕ್ರಿಕೆಟ್‍ನಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ

    ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಹರ್‌ರನ್ನು 14 ಕೋಟಿ ರೂ. ನೀಡಿ ಖರೀದಿಸಿತ್ತು. ಆ ಬಳಿಕ ಗಾಯಗೊಂಡು ಮೊದಲ ಕೆಲ ಪಂದ್ಯಗಳಿಂದ ಹೊರಗುಳಿದಿದ್ದ ಚಹರ್ ಏಪ್ರಿಲ್‍ನಲ್ಲಿ ತಂಡ ಸೇರಿಕೊಳ್ಳಲಿದ್ದಾರೆ ಎಂದು ಫ್ರಾಂಚೈಸ್ ತಿಳಿಸಿತ್ತು. ಆದರೆ ಇದೀಗ ಚಹರ್ ಮತ್ತೆ ಗಾಯಗೊಂಡಿರುವುದರಿಂದ ಪೂರ್ತಿ ಐಪಿಎಲ್‍ನಿಂದ ಹೊರಗುಳಿಯಲಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳಲು 4 ತಿಂಗಳು ಬೇಕಾಗಿರುವುದರಿಂದ 2022ರ ಅಕ್ಟೋಬರ್, ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ನಲ್ಲೂ ಆಡುವುದು ಅನುಮಾನವಾಗಿದೆ. ಇದನ್ನೂ ಓದಿ: RCB ಕಪ್ ಗೆಲ್ಲುವ ವರೆಗೆ ಮದುವೆ ಆಗಲ್ಲ – ಅಭಿಮಾನಿಯ ಪೋಸ್ಟರ್ ವೈರಲ್

    ಚಹರ್ ಬೌಲಿಂಗ್ ಮತ್ತು ಬ್ಯಾಟಿಂಗ್‍ನಲ್ಲಿ ತಂಡಕ್ಕೆ ನೆರವಾಗುತ್ತಿದ್ದರು ಹಾಗಾಗಿ ಐಪಿಎಲ್‍ನಲ್ಲಿ ಚೆನ್ನೈ ತಂಡ ಚಹರ್ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು ಆದರೆ ಪೂರ್ತಿ ಐಪಿಎಲ್‍ನಿಂದ ಚಹರ್ ಹೊರಗುಳಿದಿರುವುದರಿಂದ ಚೆನ್ನೈ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇತ್ತ ಟೀಂ ಇಂಡಿಯಾದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದ ಚಹರ್ ಟಿ20 ವಿಶ್ವಕಪ್‍ನಿಂದ ಹೊರಗುಳಿದರೆ ತಂಡಕ್ಕೆ ಕೊಂಚ ಮಟ್ಟಿನ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿದೆ.

     

  • ಚಹರ್ ಸಿಕ್ಸ್‌ಗೆ ಸೆಲ್ಯೂಟ್ ಹೊಡೆದ ರೋಹಿತ್

    ಚಹರ್ ಸಿಕ್ಸ್‌ಗೆ ಸೆಲ್ಯೂಟ್ ಹೊಡೆದ ರೋಹಿತ್

    ಕೋಲ್ಕತಾ: ಕೀವಿಸ್ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಭಾರತದ ವೇಗಿ ದೀಪಕ್ ಚಹರ್ ಸಿಡಿಸಿದ ಸಿಕ್ಸ್‌ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೆಲ್ಯೂಟ್ ಹೊಡೆದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

    20ನೇ ಓವರ್ ಎಸೆದ ಆಡಮ್ ಮಿಲ್ನೆ ಅವರ 4ನೇ ಎಸೆತವನ್ನು ಡೀಪ್ ಮಿಡ್ ವಿಕೆಟ್‍ನಲ್ಲಿ ಸಿಕ್ಸ್ ಸಿಡಿಸಿದರು. ಇದರಿಂದ ಪ್ರಭಾವಿತನಾದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಡ್ರೆಸ್ಸಿಂಗ್ ರೂಮಿನಲ್ಲಿ ಸೆಲ್ಯೂಟ್ ಹೊಡೆದಿದ್ದಾರೆ. ಈ ವಿಡಿಯೋಕ್ಕೆ ಈಗ ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆ ಹರಿದು ಬರುತ್ತಿದೆ. ಇದನ್ನೂ ಓದಿ: ಲಿಂಗ ತಾರತಮ್ಯವಿಲ್ಲದೇ ಒಂದೇ ರೀತಿ ಸಮವಸ್ತ್ರ ನೀಡಿದ ಕೇರಳ ಶಾಲೆ

    ಕೇವಲ 8 ಎಸೆತಗಳಲ್ಲಿ 21 ರನ್ ದಾಖಲಿಸುವ ಮೂಲಕ ಭಾರತದ ವೇಗಿ ದೀಪಕ್ ಚಹರ್ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದರು. 9ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಚಹರ್ ಎರಡು ಬೌಂಡರಿ ಮತ್ತು 1 ಸಿಕ್ಸ್ ಹೊಡೆಯುವ ಮೂಲಕ ಎಲ್ಲರ ಗಮನ ಸೆಳೆದರು. ಇದನ್ನೂ ಓದಿ: ಸಂಪೂರ್ಣ ಮನೆ ಹಾನಿಯಾಗಿದ್ದರೆ 1 ಲಕ್ಷ ರೂ. ಪರಿಹಾರ: ಸಿಎಂ

    ಭಾರತ ನಿಗದಿತ 20 ಓವರ್‍ನಲ್ಲಿ 7 ವಿಕೆಟ್ ನಷ್ಟಕ್ಕೆ 187 ಬೃಹತ್ ಮೊತ್ತವನ್ನು ಪೇರಿಸಿತ್ತು. ಕೋಲ್ಕತಾದ ಈಡನ್ ಗಾರ್ಡ್‍ನ್‍ಲ್ಲಿ ನಡೆದ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ತಂಡ 72 ರನ್‍ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 3-0 ಅಂತರದಲ್ಲಿ ರೋಹಿತ್ ಪಡೆ ಸರಣಿಯನ್ನು ತನ್ನದಾಗಿಸಿಕೊಂಡಿದೆ.

  • ಭಾರತ vs ನ್ಯೂಜಿಲೆಂಡ್ ಟಿ20 ಕಿಚ್ಚು ಹೆಚ್ಚಿಸಿದ ಚಹರ್, ಗುಪ್ಟಿಲ್ ದೃಷ್ಟಿಯುದ್ಧ

    ಭಾರತ vs ನ್ಯೂಜಿಲೆಂಡ್ ಟಿ20 ಕಿಚ್ಚು ಹೆಚ್ಚಿಸಿದ ಚಹರ್, ಗುಪ್ಟಿಲ್ ದೃಷ್ಟಿಯುದ್ಧ

    ಜೈಪುರ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. ಈ ನಡುವೆ ಪಂದ್ಯದ ವೇಳೆ ಭಾರತದ ವೇಗಿ ದೀಪಕ್ ಚಹರ್ ಮತ್ತು ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ನಡುವೆ ದೃಷ್ಟಿಯುದ್ಧ ನಡೆದಿದೆ. ಇದು ಅಭಿಮಾನಿಗಳಲ್ಲಿ ಕಿಚ್ಚು ಹೆಚ್ಚಿಸಿತು.

    ರೋಚಕವಾಗಿ ಕಂಡುಬಂದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 165 ರನ್ ಗಳ ಗುರಿಯನ್ನು ಭಾರತ ತಂಡ 19.4 ಓವರ್‌ಗಳ ಅಂತ್ಯಕ್ಕೆ 166 ರನ್ ಸಿಡಿಸಿ ಗುರಿ ಮುಟ್ಟಿತ್ತು. ಕೊನೆಯವರೆಗೂ ಕ್ರಿಕೆಟ್ ಪ್ರೇಮಿಗಳ ಎದೆ ಬಡಿತ ಹೆಚ್ಚಿಸಿದ ಈ ಪಂದ್ಯದಲ್ಲಿ ಆಟಗಾರರ ನಡುವೆ ನೆಕ್ ಟು ನೆಕ್ ಫೈಟ್ ಕೂಡ ಜೋರಾಗಿತ್ತು. ಇದನ್ನೂ ಓದಿ: ಸೂರ್ಯ ಸ್ಫೋಟಕ ಅರ್ಧಶತಕ – ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ

    ಕಿವೀಸ್ ತಂಡ ದೊಡ್ಡ ಮೊತ್ತ ಕಳೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ 70 ರನ್ (42 ಎಸೆತ, 3 ಬೌಂಡರಿ, 4 ಸಿಕ್ಸ್) ಸಿಡಿಸಿ 17 ನೇನಲ್ಲಿ ಓವರ್‍ ನಲ್ಲಿ ಔಟ್ ಆದರು. ಗುಪ್ಟಿಲ್ ಔಟ್ ಆಗುವ ಮೊದಲು 17 ನೇ ಓವರ್ ಎಸೆಯಲು ಬಂದ ದೀಪಕ್ ಚಹರ್ ಅವರ ಮೊದಲ ಎಸೆತವನ್ನು ಮಿಡ್ ವಿಕೆಟ್ ಮೇಲೆ ಭರ್ಜರಿ ಸಿಕ್ಸರ್‌ಗಟ್ಟಿ ಚಹರ್‌ರನ್ನು ದುರುಗುಟ್ಟಿ ನೋಡಿದರು. ಆಗ ಸುಮ್ಮನಿದ್ದ, ಚಹರ್ ಮರು ಎಸೆತದಲ್ಲೇ ಗುಪ್ಟಿಲ್ ವಿಕೆಟ್ ಪಡೆಯಲು ಯಶಸ್ವಿಯಾದರು. ಈ ವೇಳೆ ಚಹರ್ ಗುಪ್ಟಿಲ್‍ರನ್ನು ದುರುಗುಟ್ಟಿ ನೋಡಿ ಏಟಿಗೆ ಎದುರೇಟು ನೀಡಿದರು. ಇದನ್ನೂ ಓದಿ: ಐಸಿಸಿಯ 3 ಟೂರ್ನಿಗೆ ಭಾರತ ಆತಿಥ್ಯ, ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ

    ಚಹರ್ ಮತ್ತು ಗುಪ್ಟಿಲ್ ದೃಷ್ಟಿಯುದ್ಧ ನೋಡಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಹಲವು ಕಾಮೆಂಟ್‍ನೊಂದಿಗೆ ಪೋಸ್ಟ್ ಮಾಡಿ ಕಿಕ್ ಹೆಚ್ಚಿಸಿದರೆ, ಕೊರೊನಾ ಬಳಿಕ ಮೈದಾನಕ್ಕೆ ಎಂಟ್ರಿಕೊಟ್ಟು ಪಂದ್ಯ ವೀಕ್ಷಿಸಿದ ಪ್ರೇಕ್ಷಕರು ಈ ಸನ್ನಿವೇಶವನ್ನು ಎಂಜಾಯ್ ಮಾಡಿದರು.