Tag: Deepa Iyer

  • ಅಮ್ಮನ ಜೊತೆ ಅಮರನಾಥ ಯಾತ್ರೆಯಲ್ಲಿ ಸಾನ್ಯ ಅಯ್ಯರ್

    ಅಮ್ಮನ ಜೊತೆ ಅಮರನಾಥ ಯಾತ್ರೆಯಲ್ಲಿ ಸಾನ್ಯ ಅಯ್ಯರ್

    ಬಿಗ್ ಬಾಸ್ ಬೆಡಗಿ (Bigg Boss Kannada) ಸಾನ್ಯ ಅಯ್ಯರ್ (Saanya Iyer) ಅವರು ಅಮರನಾಥ ಯಾತ್ರೆಯಲ್ಲಿದ್ದಾರೆ. ಕಾಶ್ಮೀರದಲ್ಲಿ ವೆಕೇಷನ್ ಮುಗಿಯುತ್ತಿದ್ದಂತೆ ಅಮರನಾಥ (Amarnatha) ಯಾತ್ರೆಗೆ ತೆರಳಿದ್ದಾರೆ. ಈ ಕುರಿತ‌ ಸಾನ್ಯ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಿಂದ ಹೊರನಡೆದಿರೋದು ನಿಜಾನಾ? ತನ್ವಿ ರಾವ್‌ ಸ್ಪಷ್ಟನೆ

    ಕಳೆದ ಕೆಲ ದಿನಗಳ ಹಿಂದೆ ಅಮ್ಮನ ಜೊತೆ ಸಾನ್ಯ ಅಯ್ಯರ್ ಅವರು ಟ್ರೆಕ್ಕಿಂಗ್ ಮಾಡಿದ್ದಾರೆ. ಭಾರೀ ಮಳೆ ನಿರಂತರ 5 ಕಿಮೀ ಟ್ರೆಕ್ಕಿಂಗ್. ಹುಲ್ಲುಗಾವಲುಗಳು ಮತ್ತು ತೊರೆಗಳ ಮೂಲಕ ಮೇಲೇರಿದ್ದೇವೆ. ಮೊದಲ ದಿನದ ಅರ್ಧದಲ್ಲೇ ಸಾಕಷ್ಟು ನೋಡಿದ್ದೇವೆ. ಇನ್ನೂ ನೋಡಲು ಬಹಳಷ್ಟಿದೆ ಎಂದು ಅವರು ಬರೆದುಕೊಂಡಿದ್ದರು. ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಸಾಕಷ್ಟು ಅವಾಂತರ ಆಗಿದೆ. ಈಗ ಕಾಶ್ಮೀರದಲ್ಲೂ ಮಳೆ ಆಗುತ್ತಿದೆ. ಹೀಗಾಗಿ ಸಾನ್ಯಾ ಅವರಿಗೆ ಎಚ್ಚರಿಕೆಯಿಂದ ಇರುವಂತೆ ಅಭಿಮಾನಿಗಳು ಕೋರಿದ್ದರು.

    ಕಾಶ್ಮೀರದ ಪ್ರವಾಸ ಮುಗಿಸಿ, ಇದೀಗ ತಾಯಿ ದೀಪಾ ಅಯ್ಯರ್ ಜೊತೆ ಕಠಿಣವಾದ ಅಮರನಾಥ ಪ್ರವಾಸವನ್ನ ಸಾನ್ಯ ಕೈಗೊಂಡಿದ್ದಾರೆ. ಅಮರನಾಥ ಸ್ಥಳದ ವಿಶೇಷತೆಯನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಾನ್ಯ ವಿಶ್ಲೇಷಣೆ ನೀಡಿದ್ದಾರೆ. ಅಮ್ಮನ ಜೊತೆಗಿನ ಪ್ರವಾಸದ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ.

    ಬಾಲನಟಿಯಾಗಿ ಎಂಟ್ರಿ ಕೊಟ್ಟ ಸಾನ್ಯ ಅಯ್ಯರ್ ಅವರು ಬಿಗ್ ಬಾಸ್ ಶೋ ಮೂಲಕ ಗಮನ ಸೆಳೆದರು. ಒಟಿಟಿ ಮತ್ತು ಬಿಗ್ ಬಾಸ್ ಸೀಸನ್ 9ರಲ್ಲಿ ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡರು. ದೊಡ್ಮನೆಯಲ್ಲಿ ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಫ್ರೆಂಡ್‌ಶಿಪ್ ವಿಷ್ಯವಾಗಿ ಹೈಲೆಟ್ ಆದರು. ಈ ಶೋ ಬಳಿಕ ಬೋಲ್ಡ್ & ಹಾಟ್ ಫೋಟೋಶೂಟ್ ಮೂಲಕ ಮಿಂಚಿದ್ರು ಕೂಡ. ನಟಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಗುತ್ತಿಲ್ಲ. ಸೂಕ್ತ ಸಿನಿಮಾ ಚಾನ್ಸ್‌ಗಾಗಿ ಸಾನ್ಯ ಅಯ್ಯರ್ ಎದುರು ನೋಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಶ್ಮೀರದಲ್ಲಿ ಸ್ಟೈಲ್‌ ಆಗಿ ಕಾಣಿಸಿಕೊಂಡ ಸಾನ್ಯ ಅಯ್ಯರ್

    ಕಾಶ್ಮೀರದಲ್ಲಿ ಸ್ಟೈಲ್‌ ಆಗಿ ಕಾಣಿಸಿಕೊಂಡ ಸಾನ್ಯ ಅಯ್ಯರ್

    ಬಿಗ್ ಬಾಸ್ (Bigg Boss Kannada) ಬೆಡಗಿ ಸಾನ್ಯ ಅಯ್ಯರ್ (Saanya Iyer) ಅವರು ಕಾಶ್ಮೀರದಲ್ಲಿ ಎಂಜಾಯ್ ಮಾಡ್ತಿದ್ದಾರೆ. ಟ್ರೆಕ್ಕಿಂಗ್, ಶಾಪಿಂಗ್ ಅಂತಾ ಕಾಶ್ಮೀರದ ಸುಂದರ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ಕಾಶ್ಮೀರದ ಬೀದಿಯಲ್ಲಿ ಸಾನ್ಯ ಸ್ಟೈಲ್ ಆಗಿ ಪೋಸ್ ನೀಡಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.‌

    ‘ಪುಟ್ಟಗೌರಿ ಮದುವೆ’ (Putta Gowri Maduve) ಸೀರಿಯಲ್ ನಟಿ ಸಾನ್ಯ ಅವರು ಈಗ ವೆಕೇಷನ್ ಎಂಜಾಯ್ ಮಾಡುವ ಮೂಡ್‌ನಲ್ಲಿದ್ದಾರೆ. ಅಮ್ಮ ದೀಪಾ ಅಯ್ಯರ್ ಜೊತೆ ಕಾಶ್ಮೀರಕ್ಕೆ ಹಾರಿದ್ದಾರೆ. ಕಳೆದ ಒಂದು ವಾರದಿಂದ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದಾರೆ.

    ಕಪ್ಪು ಬಣ್ಣದ ಟೀ ಶರ್ಟ್, ಪಿಂಕ್ ಕಲರ್ ಸ್ಕರ್ಟ್ ಧರಿಸಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮಸ್ತ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಸಾನ್ಯ ಹೊಸ ಸ್ಟೈಲ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ:ಜುಲೈ 23ಕ್ಕೆ ವಿಶ್ವಕುಂದಾಪ್ರ ಕನ್ನಡ ದಿನಕ್ಕೆ ಸಿಎಂ, ರಿಷಬ್ ಶೆಟ್ಟಿ- ಪ್ರಮೋದ್ ಶೆಟ್ಟಿ ಸಾಥ್

    ಕಳೆದ ವಾರ ಅಮ್ಮನ ಜೊತೆ ಸಾನ್ಯ ಅಯ್ಯರ್ ಅವರು ಟ್ರೆಕ್ಕಿಂಗ್ ಮಾಡಿದ್ದಾರೆ. ಭಾರೀ ಮಳೆ ನಿರಂತರ 5 ಕಿಮೀ ಟ್ರೆಕ್ಕಿಂಗ್. ಹುಲ್ಲುಗಾವಲುಗಳು ಮತ್ತು ತೊರೆಗಳ ಮೂಲಕ ಮೇಲೇರಿದ್ದೇವೆ. ಮೊದಲ ದಿನದ ಅರ್ಧದಲ್ಲೇ ಸಾಕಷ್ಟು ನೋಡಿದ್ದೇವೆ. ಇನ್ನೂ ನೋಡಲು ಬಹಳಷ್ಟಿದೆ ಎಂದು ಅವರು ಬರೆದುಕೊಂಡಿದ್ದರು. ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಸಾಕಷ್ಟು ಅವಾಂತರ ಆಗಿದೆ. ಈಗ ಕಾಶ್ಮೀರದಲ್ಲೂ ಮಳೆ ಆಗುತ್ತಿದೆ. ಹೀಗಾಗಿ ಸಾನ್ಯಾ ಅವರಿಗೆ ಎಚ್ಚರಿಕೆಯಿಂದ ಇರುವಂತೆ ಅಭಿಮಾನಿಗಳು ಕೋರಿದ್ದರು.

    ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಅವರಿಗೆ ಯಾವುದೇ ಸಿನಿಮಾ ಚಾನ್ಸ್ ಸಿಕ್ಕಿಲ್ಲ. ಸೂಕ್ತ ಪಾತ್ರಕ್ಕಾಗಿ ಅವರು ಎದುರು ನೋಡ್ತಿದ್ದಾರೆ. ಅದಕ್ಕಾಗಿ ಸಕಲ ತಯಾರಿ ಕೂಡ ಮಾಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಾಯಿ ದೀಪಾ ಅಯ್ಯರ್ ಡ್ರೆಸ್ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದವರಿಗೆ ಬೆಂಡೆತ್ತಿದ ಸಾನ್ಯ

    ತಾಯಿ ದೀಪಾ ಅಯ್ಯರ್ ಡ್ರೆಸ್ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದವರಿಗೆ ಬೆಂಡೆತ್ತಿದ ಸಾನ್ಯ

    ಕಿರುತೆರೆ ಪುಟ್ಟಗೌರಿ (PuttaGowri) ಸಾನ್ಯ ಅಯ್ಯರ್ (Saanya Iyer) ಬಿಗ್ ಬಾಸ್ ಮನೆಗೆ (Bigg Boss) ಕಾಲಿಟ್ಟು ಸಖತ್ ಸೌಂಡ್ ಮಾಡಿದ್ದರು. ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಸ್ನೇಹದ ಜೊತೆಗೆ ಶೋನಿಂದ ಜನಪ್ರಿಯತೆ ಕೂಡ ಸಿಕ್ಕಿತ್ತು. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೆ ಅನೇಕ ವಿಚಾರಗಳಿಗೆ ನಟಿ ಸೌಂಡ್ ಮಾಡ್ತಿದ್ದಾರೆ. ವಿವಾದಗಳನ್ನು ಮೈಮೇಲೆ ಎಳ್ಕೊಳ್ಳೋದ್ರಲ್ಲಿ ಸಾನ್ಯಾ (Saanya) ಎತ್ತಿದ ಕೈ. ಇದೀಗ ಅವರ ಅಮ್ಮನ ಡ್ರೆಸ್ ಕಾರಣಕ್ಕೆ ಮತ್ತೆ ಸೌಂಡ್ ಮಾಡ್ತಿದ್ದಾರೆ. ಸಾನ್ಯ ಅವರ ತಾಯಿ ದೀಪಾ ಅಯ್ಯರ್ ಧರಿಸಿದ ಡ್ರೆಸ್ ಬಗ್ಗೆ ನೆಗೆಟಿವ್ ಕಾಮೆಂಟ್ ಬಂದ ಬೆನ್ನಲ್ಲೇ ಸಾನ್ಯ ಖಡಕ್ ಆಗಿ ನೆಟ್ಟಿಗರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇತ್ತೀಚಿಗೆ ದೀಪಾ ಅಯ್ಯರ್ ಅವರ (Deepa Iyer) ಹುಟ್ಟುಹಬ್ಬವಿತ್ತು. ಹಾಗಾಗಿ ಸಾನ್ಯ ಅಮ್ಮನಿಗೆ ಸರ್ಪ್ರೈಸ್ ಉಡುಗೊರೆ ನೀಡಿದ್ದಾರೆ. ದೊಡ್ಡ ಹೊಟೇಲಿಗೆ ಕರೆದೊಯ್ದು ಕೇಕ್ ಆರ್ಡರ್ ಮಾಡಿ ಅಮ್ಮನಿಂದ ಕಟ್ ಮಾಡಿಸಿದ್ದಾರೆ. ಅಮ್ಮ ಕೇಕ್ ಕಟ್ ಮಾಡ್ತಿರೋವಾಗ ಬರ್ತ್‌ಡೇ ವಿಶ್ ಮಾಡಿದ್ದಾರೆ. ಈ ಖುಷಿಯ ಸನ್ನಿವೇಶವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ಶೇರ್ ಆಗ್ತಿದಂತೆ ದೀಪಾ ಅವರ ಡ್ರೆಸ್‌ಗೆ ನೆಗೆಟಿವ್ ಕಾಮೆಂಟ್‌ ಹರಿದು ಬರುತ್ತಿದೆ. ಇದನ್ನೂ ಓದಿ: ಎಮೋಷನಲ್ ನಿಂದನೆ ಬಗ್ಗೆ ಮೌನ ಮುರಿದ ಮೇಘನಾ ರಾಜ್

    ದೀಪಾ ಅಯ್ಯರ್ ಅವರು ಮಾಡ್ರನ್ ಗೌನ್ (Modern Gown) ಧರಿಸಿದ್ದಾರೆ. ಕೊಂಚ ಮುಜುಗರದಿಂದಲೆ ಫೋಟೋಗೆ ಪೋಸ್ ಕೊಡ್ತಿರೋ ಹಾಗಿದೆ. ಈ ವೀಡಿಯೋವನ್ನು ಸಾನ್ಯ ತಮ್ಮ ಸೋಷಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ತಾಯಿನೇ ಹೀಗಿರೋವಾಗ ಮಗಳು ಹಾಗಿರೋದ್ರಲ್ಲಿ ಆಶ್ಚರ್ಯ ಇಲ್ಲ ಎಂದು ಖಡಕ್ ಕಾಮೆಂಟ್ ಮಾಡಿದ್ದಾರೆ.

    ಇದರ ಜೊತೆಗೆ ದೀಪಾ ಅಯ್ಯರ್ ಅವರ ಡ್ರೆಸ್ ಬಗ್ಗೆ ಕೆಟ್ಟ ಕೆಟ್ಟದಾದ ಇನ್ನೊಂದಿಷ್ಟು ಕಾಮೆಂಟ್ ಇದೆ. ಇದನ್ನು ನೋಡಿ ಸಾನ್ಯ ಕೆಂಡಾಮಂಡಲ ಆಗಿದ್ದಾರೆ. ನಾವ್ಯಾವ ಕಾಲದಲ್ಲಿದ್ದೀವಿ. ನಮಗೆ ಬೇಕಾದ ಬಟ್ಟೆಯನ್ನು ಹಾಕ್ಕೊಳ್ಳೋ ಸ್ವಾತಂತ್ರ‍್ಯನೂ ಕೂಡ ನಮಗಿಲ್ವಾ. ಯಾರು ಯಾವ ಥರದ ಬಟ್ಟೆ ಹಾಕ್ಕೊಬೇಕು ಅಂತ ಉಪದೇಶ ಕೊಡೋದಕ್ಕೆ ನೀವ್ಯಾರು, ನಿಮಗೆ ಬೇಕಾದ ಬಟ್ಟೆ ನೀವು ಹಾಕಿ, ಅದು ಬಿಟ್ಟು ಉಳಿದೋರ ಬಟ್ಟೆ ಬಗ್ಗೆ ಹೀಗೆಲ್ಲ ಕಾಮೆಂಟ್ ಮಾಡೋದು ತಪ್ಪು ಅಂತ ಕ್ಲಾಸ್ ತಗೊಂಡಿದ್ದಾರೆ.

  • ಮಲತಂದೆಯ ಅಸಲಿ ಮುಖವಾಡ ಬಿಚ್ಚಿಟ್ಟ ನಟಿ ಸಾನ್ಯ ಅಯ್ಯರ್: ಯುವನಟಿಯ ಬದುಕಿನಲ್ಲಿ ಇದೆಂಥ ಬಿರುಗಾಳಿ?

    ಮಲತಂದೆಯ ಅಸಲಿ ಮುಖವಾಡ ಬಿಚ್ಚಿಟ್ಟ ನಟಿ ಸಾನ್ಯ ಅಯ್ಯರ್: ಯುವನಟಿಯ ಬದುಕಿನಲ್ಲಿ ಇದೆಂಥ ಬಿರುಗಾಳಿ?

    ಬಿಗ್ ಬಾಸ್ ನ ಹವಾ ಜೋರಾಗಿದೆ. ಶೋನ್‌ನಲ್ಲಿ  16 ಸ್ಪರ್ಧಿಗಳಲ್ಲಿ ಒಬ್ಬರಾದ ಪುಟ್ಟ ಗೌರಿ ಮದುವೆ ಖ್ಯಾತಿಯ ಸಾನ್ಯ ಅಯ್ಯರ್ ಕೂಡ‌ ಸದ್ದು ಮಾಡ್ತಿದ್ದಾರೆ. ಇನ್ನು ಸ್ಪರ್ಧಿಗಳ ಜೀವನವನ್ನು ಪರಿಚಯಿಸಲು ‘ಬಿಗ್ ಬಾಸ್’ ಟಾಸ್ಕ್ ವೊಂದನ್ನು ನೀಡಿದ್ದರು. ಅದೇ ‘ನಾನು ಯಾರು?’. ತಮ್ಮ ತಮ್ಮ ಜೀವನದ ಕುರಿತು ಸ್ಪರ್ಧಿಗಳು ‌ಮಾತನಾಡಬೆಕು. ಇದೇ ಟಾಸ್ಕ್‌ನಲ್ಲಿ ಸಾನ್ಯ ಅಯ್ಯರ್ ತಮಗೆ ಎದುರಾದ ಕಷ್ಟ ಮತ್ತು ತಮ್ಮ ಸವಾಲಿನ ಬಗ್ಗೆ ಮನಬಿಚ್ಚಿ ಮಾತನಾಡಿದರು.

    ಅಮ್ಮ, ಚಿಕ್ಕಮ್ಮ, ನನ್ನನ್ನ ಕ್ಷಮಿಸಿ ಎಂದ್ಹೇಳುತ್ತಾ, ತಮ್ಮ ಜೀವನದ ಕರಾಳ ವಿಚಾರವನ್ನು ಸಾನ್ಯ ವಿವರಿಸಿದ್ದಾರೆ. ನನ್ನ ಚಿಕ್ಕಮ್ಮ ಅವರದ್ದು ಅಬ್ಯೂಸಿವ್ ಮ್ಯಾರೇಜ್. ನನ್ನ ಕಣ್ಣೇದುರೇ ಚಿಕ್ಕಮ್ಮ ಏಟು ತಿನ್ನುತ್ತಿದ್ದರು. ಇದು ನನಗೆ ಮಾನಸಿಕವಾಗಿ ಪರಿಣಾಮ ಬೀರಿತ್ತು. ರಿಲೇಶನ್‌ಶಿಪ್ ಅಂದ್ರೆ ಹೀಗೇ ಅಂತ ನಾನು ಅಂದುಕೊಂಡಿದ್ದೆ. ನಾನೂ ಕೂಡ ಒಂದು ರಿಲೇಶನ್‌ಶಿಪ್‌ನಲ್ಲಿದ್ದೆ. ಅದೂ ಕೂಡ ಅಬ್ಯೂಸಿವ್ ಆಗಿತ್ತು. ನಾನು ಅವನಿಗಾಗಿ ನಟನಾ‌ ಕ್ಷೇತ್ರ ಬಿಡಲು ತಯಾರಿದ್ದೇ. ರಿಲೇಶನ್‌ಶಿಪ್ ಉಳಿಯಬೇಕು ಎಂಬ ಕಾರಣಕ್ಕೆ ಎಲ್ಲಾ ತ್ಯಾಗಕ್ಕೂ ರೆಡಿಯಾಗಿದ್ದೆ. ಆದರೂ ಅದು ವರ್ಕ್ ಆಗಲಿಲ್ಲ. ಇದನ್ನೂ ಓದಿ: ಮೈ ತುಂಬಾ ಬಟ್ಟೆ ಹಾಕು ಅಂದಿದ್ದಕ್ಕೆ, ಉರ್ಫಿಗೆ ಬಂತು ಜ್ವರ

    ನನ್ನ ನಂಬಿಕೆಗೆ ಮೋಸ ಆಗಿದ್ದು, ನನ್ನ ಮಲತಂದೆಯಿಂದ  ನನ್ನ ತಾಯಿ ಎರಡು ಬಾರಿ ಮದುವೆಯಾಗಿದ್ದರು. ಒಬ್ಬರು ನನ್ನ ಬಯೋಲಾಜಿಕಲ್ ಫಾದರ್. ಮತ್ತೊಬ್ಬರು ಮಲತಂದೆ. ಬಯೋಲಾಜಿಕಲ್ ಫಾದರ್‌ ಜೊತೆ ಸಂಬಂಧ ಅಷ್ಟಕಷ್ಟೆ. ಮಲತಂದೆ ಜೊತೆ ನನ್ನ ರಿಲೇಶನ್‌ಶಿಪ್ ಚೆನ್ನಾಗಿತ್ತು. ಆದರೆ ನಾನು ಬೆಳೆದಿದ್ದೇ ಅವರ ಜೊತೆ. ನನ್ನಮ್ಮನಿಗೆ ಅವರು ಫ್ರೆಂಡ್ ಆಗಿದ್ದಾಗಿನಿಂದಲೂ ನನಗೆ ಅವರು ಗೊತ್ತಿತ್ತು. ಆದ್ರೆ, ಮದುವೆ ಆದ್ಮೇಲೆ ನನ್ನಮ್ಮನಿಗೆ ಗೊತ್ತಾಯಿತು ಅದು ತಪ್ಪಾದ ನಿರ್ಧಾರ ಅಂತ’’

    ಮಲತಂದೆ ನನ್ನ ತಾಯಿ ಜೊತೆನೇ ಇರಬೇಕು ಎಂಬ ಕಾರಣಕ್ಕೆ ನನ್ನ ಹೆಸರನ್ನ ಹಾಳು ಮಾಡಲು ಮುಂದಾಗ್ತಾರೆ. ಹೇಗೆ ಅಂದ್ರೆ, ನನ್ನ ಬಾಯ್‌ಫ್ರೆಂಡ್ ಜೊತೆ ನಾನಿದ್ದ ವಿಡಿಯೋವನ್ನು ರೆಕಾರ್ಡ್ ಮಾಡ್ತಾರೆ. ನನ್ನಮ್ಮನನ್ನ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ನನ್ನ ವಿಡಿಯೋನ ಇಟ್ಟುಕೊಂಡು ಮೊದಲು ಅಜ್ಜಿಗೆ, ಚಿಕ್ಕಮ್ಮಗೆ ತೋರಿಸ್ತಾರೆ. ಆ ವಿಡಿಯೋದಲ್ಲಿ ಏನೂ ಇರಲಿಲ್ಲ. ಆದರೂ ಅವಮಾನ ಮಾಡ್ತಾರೆ.

    ಸಿಂಗಲ್ ಪೇರೆಂಟ್ ಆಗಿ ದೀಪಾ ತನ್ನ ಮಗಳನ್ನ ಹ್ಯಾಂಡಲ್‌ ಮಾಡೋಕೆ ಆಗುತ್ತಿಲ್ಲ. ಅವರಿಗೆ ಒಬ್ಬ ಮೇಲ್ ಫಿಗರ್ ಬೇಕು ಅಂತ ಚೀಪ್ ಟ್ರಿಕ್ ಯೂಸ್ ಮಾಡ್ತಾರೆ. ನಾನು ಅವರನ್ನ ಅಪ್ಪ ಅಂತ ಬಾಯ್ತುಂಬ ಕರೆದಿದ್ದೀನಿ. ಅವರ ಕೈತುತ್ತು ತಿಂದಿದ್ದೀನಿ. ಆದರೆ, ಅವರು ನನ್ನಮ್ಮ ತಲೆತಗ್ಗಿಸುವ ಹಾಗೆ ಮಾಡಿಬಿಟ್ಟರು. ನನಗೆ ತಂದೆ ಪ್ರೀತಿ ಸಿಕ್ಕಿರಲಿಲ್ಲ. ಆ ಪ್ರೀತಿಯನ್ನ ಇನ್ನೊಬ್ಬರಿಂದ ನಾನು ನಿರೀಕ್ಷೆ ಮಾಡುತ್ತಿದ್ದೆ. ಈಗ ಹಾಗೆ ಮಾಡಲ್ಲ. ನಾನು ಸ್ವಾವಲಂಬಿ ಆಗಿರುತ್ತೇನೆ. ಇದೆಲ್ಲಾ ಆಗಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದು ನಟಿ ಸಾನ್ಯ ಅಯ್ಯರ್ ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]