Tag: Deep Sidhu

  • ಗೆಳತಿ ಜೊತೆ ವ್ಯಾಲೆಂಟೈನ್ಸ್ ಡೇ ಆಚರಿಸಿದ್ದ ಸಿಧು ಕೊನೆಯ ಫೋಟೋ ವೈರಲ್

    ಗೆಳತಿ ಜೊತೆ ವ್ಯಾಲೆಂಟೈನ್ಸ್ ಡೇ ಆಚರಿಸಿದ್ದ ಸಿಧು ಕೊನೆಯ ಫೋಟೋ ವೈರಲ್

    ನವದೆಹಲಿ: ರಸ್ತೆ ಅಪಘಾತದಲ್ಲಿ ಪ್ರಾಣ ಬಿಟ್ಟ ಪಂಜಾಬ್ ನಟ ದೀಪ್ ಸಿಧು, ಗೆಳತಿ ರೀನಾ ರೈ ಜೊತೆಗೆ ವ್ಯಾಲೆಂಟೈನ್ಸ್ ಡೇ ಸೆಲೆಬ್ರೆಟ್ ಮಾಡಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಕೃಷಿ ಹೋರಾಟದಲ್ಲಿ ಕೆಂಪುಕೋಟೆ ಮೇಲೆ ಸೀಖ್ ಭಾವುಟ ಹಾರಿಸಿದ್ದ ದೀಪ್ ಸಿಧು ಫೆಬ್ರವರಿ 15 ರಂದು ನಿಧನರಾದರು. ದೆಹಲಿ ಬಳಿ ನಡೆದ ರಸ್ತೆ ಅಪಘಾತವೇ ಸಾವನ್ನಪ್ಪಿದ್ದು, ಆತನೊಂದಿಗೆ ಕಾರಿನಲ್ಲಿದ್ದ ಗೆಳತಿ ರೀನಾ ರೈ ಏರ್‌ಬ್ಯಾಗ್‌ನಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಗ, ಫೆಬ್ರವರಿ 14 ರಂದು ರೀನಾ ಹಂಚಿಕೊಂಡ ಅವರ ಪ್ರೇಮಿಗಳ ದಿನದ ಸೆಲೆಬ್ರೆಷನ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!

     

    View this post on Instagram

     

    A post shared by Deep Sidhu (@deepsidhu.official)

    ಇಡೀ ಜಗತ್ತು ವಿರುದ್ಧವಾಗಿದ್ದಾಗ ನೀವು ನಿಂತಿದ್ದೀರಿ, ನನ್ನನ್ನು ರಕ್ಷಿಸಿದ್ದೀರಿ, ನನ್ನ ಗೌರವವನ್ನು ಹಿಡಿದಿದ್ದೀರಿ, ನನಗೆ ಶಕ್ತಿಯನ್ನು ನೀಡಿದ್ದೀರಿ, ನನ್ನ ಕಾರಣ ಮತ್ತು ಸ್ವಾತಂತ್ರ್ಯಕ್ಕಾಗಿ ಪ್ರಾರ್ಥಿಸಿದ್ದೀರಿ ಆದರೆ ಅದು ನಿಜವಾಗಿಯೂ ನನ್ನ ಹೃದಯ ಮತ್ತು ಆತ್ಮವನ್ನು ಮುಟ್ಟಿದೆ. ನಿಮ್ಮ ಪ್ರೀತಿ ಮತ್ತು ಬೆಂಬಲವು ಯಾವುದೇ ವಿವರಣೆಯನ್ನು ಮೀರಿದೆ. ನಾನು ಪ್ರೀತಿಸುತ್ತೇನೆ ಎಂದು ಹೇಳಲು ಬಯಸುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

  • ಕೆಂಪುಕೋಟೆ ಮೇಲೆ ಸಿಖ್‌ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು

    ಕೆಂಪುಕೋಟೆ ಮೇಲೆ ಸಿಖ್‌ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು

    ನವದೆಹಲಿ: ಗಣರಾಜ್ಯೋತ್ಸವ ದಿನ ರೈತ ಸಂಘಟನೆಗಳ ಟ್ರಾಕ್ಟರ್ ರ‍್ಯಾಲಿಯಲ್ಲಿ ಕೆಂಪು ಕೋಟೆ ಮೇಲೆ ಬಾವುಟ ಹಾರಿಸಿದ್ದ ನಟ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.

    ಹರಿಯಾಣದ ಸೋನಿಪತ್‌ ಪಿಪ್ಲಿ ಟೋಲ್‌ ಸಮೀಪ ಈ ಅವಘಡ ಸಂಭವಿಸಿದೆ. ಲಾರಿಗೆ  ಹಿಂಬದಿಯಿಂದ ಸಿಧು ಇದ್ದ ಸ್ಕಾರ್ಪಿಯೋ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಿಂದ ಸಿಧು ಗಂಭೀರ ಗಾಯಗೊಂಡಿದ್ದು, ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಿಧು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಸಿಧು  ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೋನಿಪತ್‌ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ವಾಹನದಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಗಣರಾಜ್ಯೋತ್ಸವ ದಿನದಂದು ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್‌ ರ್‍ಯಾಲಿಯಲ್ಲಿ ಸಿಧು ಭಾಗವಹಿಸಿದ್ದ. ಅಲ್ಲದೆ ಈ ವೇಳೆ ಪ್ರತಿಭಟನಾಕಾರರನ್ನು ಪ್ರಚೋದಿಸಿದ ಆರೋಪದ ಮೇಲೆ ಸಿಧುವನ್ನು ಬಂಧಿಸಲಾಗಿತ್ತು.  ಇದನ್ನೂ ಓದಿ: 7 ರಾಜ್ಯಗಳ ಅಳಿಯ, 14 ಮಹಿಳೆಯರಿಗೆ ಪತಿ ಈ ನಕಲಿ ವೈದ್ಯ

    ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ಸಿಖ್ ಧ್ವಜ ಹಾರಿಸುವ ಸಂಚಿನಲ್ಲಿ ಭಾಗಿಯಾದ ಆರೋಪದ ಮೇಲೆ ಸಿಧು ಅವರನ್ನು ಎರಡು ಬಾರಿ ಬಂಧಿಸಲಾಯಿತು. ಕಳೆದ ವರ್ಷ ಫೆಬ್ರವರಿಯಲ್ಲಿ ದೀಪ್ ಸಿಧು ಬಂಧನದ ನಂತರ, ಹಿಂಸಾಚಾರವನ್ನು ಸೃಷ್ಟಿಸುವುದು ಮತ್ತು ನಮ್ಮ ರಾಷ್ಟ್ರಧ್ವಜವನ್ನು ಕಡೆಗಣಿಸುವುದು ಆತನ ಉದ್ದೇಶವಾಗಿತ್ತು ಎಂದು  ಹೇಳಿದ್ದನು.

    ಸಿಧು  ಕೆಂಪು ಕೋಟೆಯ ಘಟನೆಯ ಮುಖ್ಯ ಗಲಭೆಕೋರ ಮತ್ತು ಪ್ರಚೋದಕ, ಅವರು ಜನರನ್ನು ಕೆರಳಿಸಿ ಹಿಂಸಾಚಾರವನ್ನು ಪ್ರಚೋದಿಸಿದ್ದನು.  ಕತ್ತಿ, ಕೋಲು ಮತ್ತು ಬಾವುಟ ಹಿಡಿದಿರುವ ವೀಡಿಯೋ ಇದೆ ಎಂದು ಪೊಲೀಸರು ದೆಹಲಿ ನ್ಯಾಯಾಲಯದಲ್ಲಿ ಹೇಳಿದ್ದರು.

  • ಜಾಮೀನು ಬೆನ್ನಲ್ಲೇ ನಟ ದೀಪ್ ಸಿಧು ಮತ್ತೆ ಅರೆಸ್ಟ್

    ಜಾಮೀನು ಬೆನ್ನಲ್ಲೇ ನಟ ದೀಪ್ ಸಿಧು ಮತ್ತೆ ಅರೆಸ್ಟ್

    ನವದೆಹಲಿ: ಗಣರಾಜ್ಯೋತ್ಸವ ದಿನ ರೈತ ಸಂಘಟನೆಗಳ ಟ್ರಾಕ್ಟರ್ ರ‍್ಯಾಲಿಯಲ್ಲಿ ಕೆಂಪು ಕೋಟೆ ಮೇಲೆ ಬಾವುಟ ಹಾರಿಸಿದ್ದ ನಟ ದೀಪ್ ಸಿಧುಗೆ ಇಂದು ಬೆಳಗ್ಗೆ ದೆಹಲಿ ಕೋರ್ಟ್ ಜಾಮೀನು ನೀಡಿತ್ತು. ಆದರೆ ಈ ಬೆನ್ನಲ್ಲೇ ನಟ ಸಂಜೆ ಮತ್ತೆ ಅರೆಸ್ಟ್ ಆಗಿದ್ದಾರೆ.

    ಜನವರಿ 26ರ ಹಿಂಸಾಚಾರ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ದೀಪ್ ಸಿಧುಗೆ ಶನಿವಾರ ಜಾಮೀನು ನೀಡಿತ್ತು. ಕಳೆದ ವಿಚಾರಣೆಯ ವೇಳೆ, ಜನವರಿ 26 ರಂದು ಕೆಂಪು ಕೋಟೆಗೆ ಹೋಗುವಂತೆ ಆಂದೋಲನ ನಡೆಸುತ್ತಿರುವ ರೈತರಿಗೆ ಯಾವುದೇ ಕರೆ ನೀಡಿಲ್ಲ ಎಂದು ಸಿಧು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ರೈತ ಮುಖಂಡರು ಪ್ರತಿಭಟನೆಗಾಗಿ ಕರೆ ನೀಡಿದ್ದು, ದೀಪು ಸಿಧು ರೈತ ಸಂಘದ ಸದಸ್ಯ ಅಲ್ಲ. ಸಿಧು ಜನಸಮೂಹವನ್ನು ಸಜ್ಜುಗೊಳಿಸಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ. ಹಿಂಸಾಚಾರದಲ್ಲಿ ಪಾಲ್ಗೊಂಡಿಲ್ಲ ಎಂದು ದೀಪ್ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಹಾಗಾಗಿ ದೀಪ್ ಸಿಧು ಅವರಿಗೆ ಇಂದು ಬೆಳಗ್ಗೆ ಜಾಮೀನು ಸಿಕ್ಕಿತ್ತು. ಆದರೆ ಸಂಜೆ ಮತ್ತೆ ದೆಹಲಿ ಪೊಲೀಸ್ ಅಪರಾಧ ದಳ ದೀಪ್ ಸಿಧುವನ್ನು ಬಂಧಿಸಿದೆ. ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ದಾಖಲಿಸಿದ್ದ ಎಫ್‍ಐಆರ್ ಗೆ ಸಂಬಂಧಿಸಿದಂತೆ ದೀಪ್ ಸಿಧು ಬಂಧನವಾಗಿದೆ.

    ಪ್ರಕರಣ ಹಿನ್ನೆಲೆ:
    ಕೃಷಿಕಾನೂನು ಮತ್ತು ಎಪಿಎಂಸಿ ಕಾನೂನು ವಿರೋಧಿಸಿ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ಹಿಂಸಾಚಾರ ಮತ್ತು ಕೆಂಪು ಕೋಟೆ ಮೇಲೆ ಧಾರ್ಮಿಕ ಧ್ವಜ ಹಾರಿಸಲು ಸಹಕರಿಸಿದ್ದನು. ಅಷ್ಟೇ ಅಲ್ಲದೇ ಅಲ್ಲಿಂದಲೇ ಫೇಸ್‍ಬುಕ್ ಲೈವ್ ಮಾಡಿದ್ದನು. ಸಿಧುನಿಂದಲೇ ಪ್ರತಿಭಟನೆ ಹಾದಿ ತಪ್ಪಿತು ಎಂದು ರೈತ ಮುಖಂಡರು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಧು ಬಂಧನವಾಗಿತ್ತು. ಈ ಸಂಬಂಧ ದೆಹಲಿಯ ವಿಶೇಷ ಪೊಲೀಸ್ ತಂಡ ನಟ, ಗಾಯಕ ದೀಪ್ ಸಿಧುನನ್ನು ಬಂಧಿಸಿತ್ತು. ನಂತರ ಶನಿವಾರ ಬೆಳಗ್ಗೆ ಜಾಮೀನು ಸಿಕ್ಕಿತ್ತು. ಇಂದು ಸಂಜೆ ಮತ್ತೆ ನಟ ಅರೆಸ್ಟ್ ಆಗಿದ್ದಾರೆ.

  • ಕೆಂಪುಕೋಟೆ ಮೇಲೆ ಬಾವುಟ ಪ್ರಕರಣ- ನಟ ದೀಪ್ ಸಿಧುಗೆ ಜಾಮೀನು

    ಕೆಂಪುಕೋಟೆ ಮೇಲೆ ಬಾವುಟ ಪ್ರಕರಣ- ನಟ ದೀಪ್ ಸಿಧುಗೆ ಜಾಮೀನು

    ನವದೆಹಲಿ: ಗಣರಾಜ್ಯೋತ್ಸವ ದಿನ ರೈತ ಸಂಘಟನೆಗಳ ಟ್ರಾಕ್ಟರ್ ರ‍್ಯಾಲಿಯಲ್ಲಿ ಕೆಂಪು ಕೋಟೆ ಮೇಲೆ ಬಾವುಟ ಹಾರಿಸಿದ್ದ ನಟ ದೀಪ್ ಸಿಧುಗೆ ದೆಹಲಿ ಕೋರ್ಟ್ ಜಾಮೀನು ನೀಡಿದೆ.

    ಜನವರಿ 26 ರ ಹಿಂಸಾಚಾರ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ದೀಪ್ ಸಿಧುಗೆ ಜಾಮೀನು ನೀಡಿದೆ. ಕಳೆದ ವಿಚಾರಣೆಯ ವೇಳೆ, ಜನವರಿ 26 ರಂದು ಕೆಂಪು ಕೋಟೆಗೆ ಹೋಗುವಂತೆ ಆಂದೋಲನ ನಡೆಸುತ್ತಿರುವ ರೈತರಿಗೆ ಯಾವುದೇ ಕರೆ ನೀಡಿಲ್ಲ ಎಂದು ದೀಪ್ ಸಿಧು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಪ್ರತಿಭಟನೆಗಾಗಿ ಕರೆ ನೀಡಿದ್ದು ರೈತ ಮುಖಂಡರು. ದೀಪು ಸಿಧು ರೈತ ಸಂಘದ ಸದಸ್ಯರೂ ಅಲ್ಲ. ಸಿಧು ಜನಸಮೂಹವನ್ನು ಸಜ್ಜುಗೊಳಿಸಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ. ಹಿಂಸಾಚಾರದಲ್ಲಿ ಪಾಲ್ಗೊಂಡಿಲ್ಲ ಎಂದು ದೀಪ್ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

    ದೀಪ ಸಿಧು ಫೇಸ್‍ಬುಕ್‍ನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದು ತಪ್ಪು. ಆದ್ರೆ ಪ್ರತಿ ತಪ್ಪು ಅಪರಾಧವಲ್ಲ ಎಂದು ವಕೀಲರು ವಾದ ಮಂಡಿಸಿದ್ದರು. ನಾನು ವೀಡಿಯೋ ಪೋಸ್ಟ್ ಮಾಡಿದ ಕಾರಣ ಮಾಧ್ಯಮಗಳು ನನ್ನನ್ನು ಮುಖ್ಯ ಆರೋಪಿ ಎಂದು ಹೆಸರಿಸಿದೆ. ನನ್ನನ್ನು ಮುಖ್ಯ ಸಂಚುಕೋರನಾಗಿ ಮಾಧ್ಯಮಗಳು ಬಿಂಬಿಸಿದ್ದೇಕೆ ಎಂದು ನನಗೆ ಗೊತ್ತಿಲ್ಲ? ಏಪ್ರಿಲ್ 8 ರಂದು ಜಾಮೀನು ಅರ್ಜಿಯ ಸಂದರ್ಭದಲ್ಲಿ ಸಿಧು ತನ್ನ ವಕೀಲರ ಮೂಲಕ ಹೇಳಿದ್ದರು.

    ಪ್ರಕರಣ ಹಿನ್ನೆಲೆ:
    ಕೃಷಿಕಾನೂನು ಮತ್ತು ಎಪಿಎಂಸಿ ಕಾನೂನು ವಿರೋಧಿಸಿ ರೈತರ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರ ಮತ್ತು ಕೆಂಪು ಕೋಟೆ ಮೇಲೆ ಧಾರ್ಮಿಕ ಧ್ವಜ ಹಾರಿಸಲು ಸಹಕರಿಸಿದ್ದನು. ಅಷ್ಟೇ ಅಲ್ಲದೇ ಅಲ್ಲಿಂದಲೇ ಫೇಸ್‍ಬುಕ್ ಲೈವ್ ಮಾಡಿದ್ದನು. ಸಿಧುನಿಂದಲೇ ಪ್ರತಿಭಟನೆ ಹಾದಿ ತಪ್ಪಿತು ಎಂದು ರೈತ ಮುಖಂಡರು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಧು ಬಂಧನವಾಗಿತ್ತು. ಸಂಬಂಧ ದೆಹಲಿಯ ವಿಶೇಷ ಪೊಲೀಸ್ ತಂಡ ನಟ, ಗಾಯಕ ದೀಪ್ ಸಿಧುನನ್ನು ಬಂಧಿಸಲಾಗಿತ್ತು. ಇದೀಗ ಸಿಧುಗೆ ಜಾಮೀನು ಸಿಕ್ಕಿದೆ.

  • ದೆಹಲಿ ಹಿಂಸಾಚಾರ- ಪ್ರಮುಖ ಆರೋಪಿ ದೀಪ್ ಸಿಧು 7 ದಿನ ಪೊಲೀಸ್ ಕಸ್ಟಡಿಗೆ

    ದೆಹಲಿ ಹಿಂಸಾಚಾರ- ಪ್ರಮುಖ ಆರೋಪಿ ದೀಪ್ ಸಿಧು 7 ದಿನ ಪೊಲೀಸ್ ಕಸ್ಟಡಿಗೆ

    ನವದೆಹಲಿ: ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರ ಹಾಗೂ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದ ನಟ, ಗಾಯಕ ದೀಪ್ ಸಿಧುನನ್ನು ದೆಹಲಿಯ ತೀಸ್ ಹಜಾರಿ ಕೋರ್ಟ್ 7 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

    ಇಂದು ದೆಹಲಿಯ ತೀಸ್ ಹಜಾರಿ ನ್ಯಾಯಾಲಯಕ್ಕೆ ದೀಪ್ ಸಿಧುನನ್ನು ವಿಶೇಷ ಪೊಲೀಸ್ ತಂಡ ಹಾಜರುಪಡಿಸಿದ್ದು, ಈ ವೇಳೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೇಳಲಾಗಿತ್ತು. ಆದರೆ ನ್ಯಾಯಾಲಯ 7 ದಿನಗಳ ಕಾಲ ಕಸ್ಟಡಿಗೆ ವಹಿಸಿದೆ.

    ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ದೀಪ್ ಸಿಧು ಹಿಂಸೆಗೆ ಪ್ರಚೋದನೆ ನೀಡಿದ್ದು, ಮಾತ್ರವಲ್ಲದೆ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದ. ಈ ಮೂಲಕ ದೆಹಲಿಯಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದ್ದ. ದೆಹಲಿ ಗಲಭೆ ಪ್ರಕಣದಲ್ಲಿ ದೀಪ್ ಸಿಧು ಪ್ರಮುಖ ಆರೋಪಿಯಾಗಿದ್ದು, ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ. ಇಂದು ಬೆಳಗ್ಗೆ ಚಂಡೀಗಢ ಹಾಗೂ ಅಂಬಾಲಾ ನಡುವಿನ ಝಾರಕ್‍ಪುರ ಪ್ರದೇಶದಲ್ಲಿ ದೀಪ್ ಸಿಧುನನ್ನು ಬಂಧಿಸಲಾಗಿತ್ತು.

    ಅಷ್ಟೇ ಅಲ್ಲದೇ ಅಲ್ಲಿಂದಲೇ ಫೇಸ್ಬುಕ್ ಲೈವ್ ಮಾಡಿದ್ದ. ಸಿಧುನಿಂದಲೇ ಪ್ರತಿಭಟನೆ ಹಾದಿ ತಪ್ಪಿತು ಎಂದು ರೈತ ಮುಖಂಡರು ಸಹ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಧು ಬಂಧನವಾಗಿದೆ.

    ಪ್ರಮುಖ ಆರೋಪಿಯಾಗಿರುವ ದೀಪ್ ಸಿಧು ತಲೆ ಮರೆಸಿಕೊಂಡಿದ್ದನು. ಈ ಹಿನ್ನೆಲೆ ಸಿಧು ಹಾಗೂ ಇತರೆ ಮೂವರು ಆರೋಪಿಗಳ ಕುರಿತಾಗಿ ಮಾಹಿತಿ ನೀಡಿದರೆ 1 ಲಕ್ಷ ರೂ. ನೀಡುವುದಾಗಿ ಪೊಲೀಸರು ಬಹುಮಾನ ಪ್ರಕಟಿಸಿದ್ದರು. ಸಿಧುನ ಹುಡುಕಾಟದಲ್ಲಿರುವ ಪೊಲೀಸರಿಗೆ ಸಿಧು ತನ್ನ ಗೆಳತಿಯ ಫೋನ್ ಬಳಕೆ ಮಾಡುತ್ತಿದ್ದಾನೆ ಎಂದು ಸುಳಿವು ಸಿಕ್ಕಿದೆ. ಈ ಕುರಿತಾಗಿ ಮಾಹಿತಿ ಪಡೆದ ಪೊಲೀಸ್ ತಂಡ ಸಿಧು ಇದ್ದ ಸ್ಥಳವನ್ನು ಪತ್ತೆ ಮಾಡಿ ಅರೆಸ್ಟ್ ಮಾಡಿದ್ದಾರೆ.

    ನನ್ನನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ರೈತ ಪ್ರತಿಭಟನೆಗೆ ನನ್ನನ್ನೇ ಸಮರ್ಪಿಸಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆನು. ಆದರೆ ಗಣರಾಜ್ಯೋತ್ಸವದ ಗಲಭೆ ನಂತರ ರೈತ ಸಂಘಟನೆಗಳು, ರೈತ ಮುಖಂಡರು ನನ್ನನ್ನು ಕಡೆಗಣಿಸುತ್ತಿದ್ದಾರೆ. ನಾನು ಪಂಜಾಬ್ ಜನರಿಗಾಗಿ ಧ್ವನಿ ಎತ್ತಿದೆ. ಕೆಂಪು ಕೋಟೆಯಲ್ಲಿ ಹಲವು ನಾಯಕರು ಸೇರಿದಂತೆ 5 ಲಕ್ಷಕ್ಕೂ ಹೆಚ್ಚು ಜನರು ಇದ್ದರು. ಆದರೆ ನನ್ನನ್ನು ಮಾತ್ರ ಆರೋಪಿ ಸ್ಥಾನದಲ್ಲಿ ನೋಡುತ್ತಿದ್ದಾರೆ. ನಾನೀಗ ಬಿಹಾರದ ಕಾರ್ಮಿಕರೊಂದಿಗೆ ಇದ್ದೇನೆ ಎಂದು ಫೇಸ್ಬುಕ್ ವೀಡಿಯೋದಲ್ಲಿ ದೀಪ್ ಸಿಧು ಕಣ್ಣೀರು ಹಾಕಿದ್ದ.