Tag: decoration

  • ಗರಿ ಗರಿ ನೋಟುಗಳಲ್ಲಿ ಅಲಂಕೃತಗೊಂಡ ವಿಘ್ನನಿವಾರಕ ಗಣೇಶ-ವಿಡಿಯೋ ನೋಡಿ

    ಗರಿ ಗರಿ ನೋಟುಗಳಲ್ಲಿ ಅಲಂಕೃತಗೊಂಡ ವಿಘ್ನನಿವಾರಕ ಗಣೇಶ-ವಿಡಿಯೋ ನೋಡಿ

    ಚೆನ್ನೈ: ದೇವಸ್ಥಾನವನ್ನು ಹೂವಿನಿಂದ, ಹಣ್ಣಿನಿಂದ ಅಲಂಕಾರ ಮಾಡುವುದು ಸಾಮಾನ್ಯ. ಆದರೆ ಚೆನ್ನೈನ ಬಾಲ ವಿನಯಗಾರ್ ನ ಗಣಪತಿ ದೇವಸ್ಥಾನವನ್ನು ವಿಶೇಷವಾಗಿ ದುಡ್ಡಿನಿಂದ ಅಲಂಕಾರ ಮಾಡಲಾಗಿದೆ.

    ತಮಿಳುನಾಡಿನಲ್ಲಿಂದು ಹೊಸ ವರ್ಷ ಸಂಭ್ರಮದ ಕಾರಣ ದೇವಾಯಕ್ಕೆ ದುಡ್ಡಿನಿಂದ ಅಲಂಕಾರ ಮಾಡಲಾಗಿದೆ. ಒಂದು ರೂ. ನೋಟಿನಿಂದ ಹಿಡಿದು 2 ಸಾವಿರ ರೂ. ವರೆಗಿನ ಎಲ್ಲಾ ರೀತಿಯ ನೋಟುಗಳನ್ನು ದೇವಾಲಯದ ಗೋಡೆಗೆ ಅಂಟಿಸಿ ಅಲಂಕಾರಕ್ಕೆ ಬಳಕೆ ಮಾಡಲಾಗಿದೆ.

    ಸಂಪೂರ್ಣವಾಗಿ ದೇವಾಲಯವನ್ನು ಈ ರೀತಿ ಅಲಂಕಾರ ಮಾಡಲು 4 ಲಕ್ಷ ರೂಪಾಯಿಗಳನ್ನು ಬಳಸಲಾಗಿದೆ. ಪ್ರತಿ ಹೊಸ ವರ್ಷ ದಿನದಂದು ದೇವಾಲಯಕ್ಕೆ ಈ ರೀತಿ ಅಲಂಕಾರ ಮಾಡಲಾಗುತ್ತದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ದೇವಾಲಯದಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ವಿಗ್ರಹದ ಸುತ್ತಲು ಹೊಸ 200 ರೂ. ಹಾಗೂ 50 ರೂ. ಮೌಲ್ಯದ ನೋಟುಗಳನ್ನು ಬಳಕೆ ಮಾಡಿ ಅಲಂಕಾರ ಮಾಡಲಾಗಿದೆ.

    ತಮಿಳುನಾಡಿನಲ್ಲಿ ಏಪ್ರಿಲ್ 14 ದಿನವನ್ನು ಹೊಸ ವರ್ಷದ ಆರಂಭ ಎಂದು ಆಚರಣೆ ಮಾಡುತ್ತಾರೆ. ಅಲ್ಲದೇ ಇಂತಹದ್ದೆ ಆಚರಣೆ ಅಸ್ಸಾಂ ನಲ್ಲಿ ‘ಬಿಹೂ’ ಕೇರಳದಲ್ಲಿ ‘ವಿಷು’ ಎಂಬ ಹೆಸರುಗಳ ಮೂಲಕ ವಿಶೇಷ ಆಚರಣೆ ಮಾಡುತ್ತಾರೆ. ವಿಶೇಷ ಸಾಂಸ್ಕೃತಿಕ ಆಚರಣೆ ಮಾಡುವ ಎಲ್ಲಾ ರಾಜ್ಯದ ಜನರಿಗೂ ಪ್ರಧಾನಿ ನರೇಂದ್ರ ಮೋದಿ ಅವರು ಸರಣಿ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

    https://www.youtube.com/watch?v=tqJdiIKzG7c

  • ಮಹಾಶಿವರಾತ್ರಿಗೆ ಕೋಟಿಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜಾ ಅಲಂಕಾರ

    ಮಹಾಶಿವರಾತ್ರಿಗೆ ಕೋಟಿಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜಾ ಅಲಂಕಾರ

    ಕೋಲಾರ: ಇಂದು ಮಹಾಶಿವರಾತ್ರಿ. ರಾಜ್ಯದೆಲ್ಲೆಡೆ ಶಿವನ ನಾಮ ಜಪ, ವ್ರತಾಚರಣೆಯಲ್ಲಿ ಜನರು ತೊಡಗಿದ್ದಾರೆ. ಶಿವರಾತ್ರಿ ಪ್ರಯುಕ್ತ ಕೋಲಾರದ ಬಂಗಾರಪೇಟೆ ತಾಲೂಕು ಕಮ್ಮಸಂದ್ರ ಕೋಟಿಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜಾ ಅಲಂಕಾರಗಳನ್ನ ಮಾಡಲಾಗಿದೆ.

    ಶಿವನ ನಾಮ ಸ್ಮರಿಸಿ ಕೋಟಿ ಶಿವಲಿಂಗ ದರ್ಶನ ಪಡೆದ್ರೆ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಇಂದು ನೆರೆಯ ಆಂಧ್ರ, ತಮಿಳುನಾಡು ಸೇರಿದಂತೆ ಇನ್ನಿತರ ರಾಜ್ಯಗಳಿಂದ ಭಕ್ತರು ಆಗಮಿಸಿ, ಪುಣ್ಯ ಕ್ಷೇತ್ರದಲ್ಲಿ ಶಿವರಾತ್ರಿ ಆಚರಿಸುತ್ತಾರೆ. ರಾತ್ರಿಯಿಂದ ವ್ರತಾಚರಣೆ ಮಾಡಿ, ನಂತರ ಇಲ್ಲಿ ಬಂದು ದೇವರಿಗೆ ಪೂಜೆ ಸಲ್ಲಿಸಿದ ನಂತರವೇ ಹಬ್ಬ ಆಚರಣೆ ಮಾಡೋದು ಇಲ್ಲಿನ ವಿಶೇಷ.

    ಮತ್ತೊಂದು ವಿಶೇಷತೆ ಅಂದ್ರೆ 108 ಅಡಿ ಶಿವಲಿಂಗ ಹಾಗೂ ಬೃಹದಾಕಾರದ ಬಸವ ಮೂರ್ತಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಸಾವಿರಾರು ಜನ ಕೋಟಿಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಾರೆ.