Tag: Deception

  • ಅಭಿನಯ ಅತ್ತಿಗೆ ಮನೆಮುಂದೆ ನಟಿ ಸೋನು ಗೌಡ ಹೈಡ್ರಾಮಾ

    ಅಭಿನಯ ಅತ್ತಿಗೆ ಮನೆಮುಂದೆ ನಟಿ ಸೋನು ಗೌಡ ಹೈಡ್ರಾಮಾ

    ಟಿ ಅಭಿನಯ ಅತ್ತಿಗೆ ಲಕ್ಷ್ಮಿದೇವಿ ಮನೆ ಮುಂದೆ ನಿನ್ನೆ ಹೈ ಡ್ರಾಮಾ ನಡೆದಿದೆ. ಲಕ್ಷ್ಮಿದೇವಿ ಅವರು ತಮಗೆ ಹಣ ಪಡೆದು ವಂಚಿಸಿದ್ದಾರೆ ಎಂದು ನಟಿ ಸೋನು ಗೌಡ ಅನ್ನುವವರು ಲಕ್ಷ್ಮಿದೇವಿ ಅವರ ಮನೆ ಮುಂದೆ ಬಂದು ಗಲಾಟೆ ಮಾಡಿದ ಪ್ರಸಂಗ ನಡೆದಿದೆ. ಅವಕಾಶ ಕೊಡಿಸುವುದಾಗಿ ತಮ್ಮಿಂದ 75 ಸಾವಿರ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಹಣ ಪಡೆದು ಈವರೆಗೂ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿರುವ ಸೋನು ಗೌಡ, ‘ಲಕ್ಷ್ಮಿದೇವಿ ಅವರು ಹಣ ಪಡೆದು ನನಗಷ್ಟೇ ಮೋಸ ಮಾಡಿಲ್ಲ. ಅನೇಕ ಹುಡುಗಿಯರಿಗೆ ಈ ರೀತಿ ಮೋಸ ಮಾಡಿದ್ದಾರೆ. ಹೆಣ್ಣುಮಕ್ಕಳನ್ನು ಬುಟ್ಟಿಗೆ ಹಾಕಿಕೊಂಡು ಹೀಗೆ ಹಣ ವಸೂಲಿ ಮಾಡುವ ಖಯಾಲಿ ಅವರದ್ದು. ತಾವು ಹಣ ಪಡೆದದ್ದಕ್ಕೆ ದಾಖಲೆ ಸಮೇತ ಅವರು ಲಕ್ಷ್ಮಿದೇವಿ ಅವರ ಮನೆ ಮುಂದೆ ಹಾಜರಿದ್ದರು. ಇದನ್ನೂ ಓದಿ: ಸಾನ್ಯ ನೆನಪಲ್ಲಿ ಬಿಟ್ಟೋಗ್ಬೇಡ ಎಂದು ಭಾವುಕರಾದ ರೂಪೇಶ್ ಶೆಟ್ಟಿ

    ಸೋನು ಗೌಡ ಅವರು ಮನೆ ಮುಂದೆ ಬಂದ ಗಲಾಟೆ ಮಾಡುತ್ತಿದ್ದಂತೆಯೇ ಹಣವನ್ನು ಸೆಟಲ್ಮೆಂಟ್ ಮಾಡುವುದಾಗಿ ಲಕ್ಷ್ಮಿದೇವಿ ಅವರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸೋನು ಗೌಡ ಅವರ ಜೊತೆ ಫೋನ್ ನಲ್ಲಿ ಮಾತನಾಡಿದ ಲಕ್ಷ್ಮಿದೇವಿ ಅವರು ‘ನಾನು ಸದ್ಯ ಮನೆಯಲ್ಲಿ ಇಲ್ಲ. ಬಂದು ನಿಮ್ಮ ಹಣವನ್ನು ವಾಪಸ್ಸು ನೀಡುವುದಾಗಿ ಹೇಳಿದ್ದಾರೆ’ ಎಂದು ಸೋನು ಗೌಡ ತಿಳಿಸಿದರು.

    ಲಕ್ಷ್ಮಿದೇವಿ ಅವರಿಗೆ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ನಡೆಸಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿ ಅಭಿನಯಗೆ ಮೊನ್ನೆಯಷ್ಟೇ ಹೈಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಭಿನಯ ಅವರ ಸಹೋದರನ ಪತ್ನಿ ಲಕ್ಷ್ಮಿದೇವಿ ಅವರು ಅಭಿನಯ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ವಿಚಾರಣೆ ನಡೆಸಿದ ಹೈಕೋರ್ಟ್ ಅಭಿನಯ ಅವರಿಗೆ 2 ವರ್ಷ ಮತ್ತು ಅವರ ತಾಯಿಗೆ 5 ವರ್ಷ ಜೈಲು ಶಿಕ್ಷೆ ನೀಡಿದೆ. ಈ ಬೆನ್ನಲ್ಲೇ ಲಕ್ಷ್ಮಿದೇವಿ ಅವರ ಮೇಲೆ ಈ ರೀತಿ ಆರೋಪ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಯಾಂಡಲ್‍ವುಡ್ ಬಾಸ್ ಹೆಸರಲ್ಲಿ 10 ಕೋಟಿ ರೂ. ವಂಚನೆ!

    ಸ್ಯಾಂಡಲ್‍ವುಡ್ ಬಾಸ್ ಹೆಸರಲ್ಲಿ 10 ಕೋಟಿ ರೂ. ವಂಚನೆ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹಾಯಕ ಕಾರ್ಯದರ್ಶಿ 10 ಕೋಟಿ ರೂ. ಸಾಲ ಮಾಡಿ ಪರಾರಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ್ ಬಿ ಸಂಕನಗೌಡರ್ ನಾಪತ್ತೆಯಾದ ಸಹಾಯಕ ಕಾರ್ಯದರ್ಶಿ. ನಟ ದರ್ಶನ್ ಹೆಸರು ಹೇಳಿಕೊಂಡು ಮಲ್ಲಿಕಾರ್ಜುನ್ ವಿವಿಧ ಕಡೆಗಳಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುತ್ತಿದ್ದರು ಎನ್ನುವ ಆರೋಪ ಇವರ ಮೇಲಿದೆ.

    ದರ್ಶನ್ ಸಹೋದರ ದಿನಕರ್ ಅವರನ್ನು ಮಲ್ಲಿಕಾರ್ಜುನ್ ಪರಿಚಯ ಮಾಡಿಕೊಂಡಿದ್ದರು. ಇದಾದ ಕೆಲವು ದಿನಗಳ ನಂತರ ದರ್ಶನ್ ಅವರಿಗೆ ಹತ್ತಿರವಾಗಿದ್ದರು. ಅಷ್ಟೇ ಅಲ್ಲದೆ ಅವರ ಹಣಕಾಸಿನ ವ್ಯವಹಾರನ್ನು ನೋಡಿಕೊಳ್ಳುತ್ತಿದ್ದರು. ಅನೇಕ ವರ್ಷಗಳಿಂದ ದರ್ಶನ್ ಅವರನ್ನು ಸಂಪರ್ಕಿಸಲು ಮಲ್ಲಿಕಾರ್ಜುನ್ ಅವರಿಂದ ಮೊದಲು ಒಪ್ಪಿಗೆ ಪಡೆಯಬೇಕಾಗಿತ್ತು. ಹೀಗಾಗಿ ದರ್ಶನ್ ಅವರ ಹೆಸರಿನ ಬಲದಿಂದಲೇ ಮಲ್ಲಿಕಾರ್ಜುನ್ ಬರೋಬ್ಬರಿ 10 ಕೋಟಿ ರೂ. ಸಾಲ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

    ಈ ವಿಚಾರದ ಬಗ್ಗೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಏನು ವಂಚನೆ ನಡೆದಿದೆ ಗೊತ್ತಿಲ್ಲ. ದರ್ಶನ್‍ಗೆ ಆರ್ಥಿಕ ಸಮಸ್ಯೆ ಇದೆ ಎಂದರೆ ಹಣ ನೀಡುವ ಮೊದಲು ದರ್ಶನ್ ಅವರನ್ನೇ ಸಂಪರ್ಕಿಸಬೇಕು. ಯಾರು ಈ ರೀತಿ ಆರೋಪ ಮಾಡುತ್ತಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. 10 ದಿನಗಳ ಹಿಂದೆ ನನ್ನ ಜೊತೆ ಮಾತನಾಡಿದ್ದಾಗ ನಾನು ಕಷ್ಟದಲ್ಲಿದ್ದೇನೆ ಎಂದು ಹೇಳಿದ್ದರು. ಈಗ ನಾನು ಅವರಿಗೆ ಫೋನ್ ಮಾಡಿದ್ದರೂ ಸ್ವಿಚ್ ಆಫ್ ಆಗಿದೆ. ಈ ವಿಚಾರದಲ್ಲಿ ದರ್ಶನ್ ಹೆಸರು ಯಾಕೆ ಬಂತು ಎನ್ನುವುದೇ ತಿಳಿಯುತ್ತಿಲ್ಲ ಎಂದು ಅವರು ಹೇಳಿದರು.