Tag: Deccan Chargers

  • 750,000 ಡಾಲರ್ ಅಂದ್ರೆ ಎಷ್ಟು ಅಂತ ಗೊತ್ತಿರಲಿಲ್ಲ- ಕಾರು ಖರೀದಿಯ ಬಗ್ಗೆ ಯೋಚಿಸಿದ್ದ ರೋಹಿತ್

    750,000 ಡಾಲರ್ ಅಂದ್ರೆ ಎಷ್ಟು ಅಂತ ಗೊತ್ತಿರಲಿಲ್ಲ- ಕಾರು ಖರೀದಿಯ ಬಗ್ಗೆ ಯೋಚಿಸಿದ್ದ ರೋಹಿತ್

    ನವದೆಹಲಿ: ಐಪಿಎಲ್ ಹರಾಜಿನಲ್ಲಿ ಡೆಕ್ಕನ್ ಚಾರ್ಜರ್ಸ್ (Deccan Chargers) ತಂಡಕ್ಕೆ ಆಯ್ಕೆಯಾದಾಗಿನ ರೋಚಕ ವಿಚಾರವೊಂದನ್ನು ರೋಹಿತ್ ಶರ್ಮಾ (Rohit Sharma) ತೆರಿದಿಟ್ಟಿದ್ದಾರೆ.

    2008ರಲ್ಲಿ ಮೊದಲ ಬಾರಿಗೆ ಐಪಿಎಲ್ ( IPL) ಆರಂಭವಾಗಿತ್ತು. ಈ ವೇಳೆ 20 ವರ್ಷದ ರೋಹಿತ್ ಶರ್ಮಾ ಅವರನ್ನು ಡೆಕ್ಕನ್ ಚಾರ್ಜರ್ಸ್ ತಂಡ ಖರೀದಿಸಿತ್ತು. ಹರಾಜಾದ ವಿಷಯ ತಿಳಿದು ಅಚ್ಚರಿಗೊಂಡಿದ್ದ ರೋಹಿತ್ ಶರ್ಮಾ ಸಿಕ್ಕಿದ ಹಣದಿಂದ ಕಾರನ್ನು ಖರೀದಿಸುವ ಬಗ್ಗೆ ಯೋಚನೆ ಮಾಡಿದ್ದ ವಿಚಾರವನ್ನು ಈಗ ಬಹಿರಂಗ ಮಾಡಿದ್ದಾರೆ. ಇದನ್ನೂ ಓದಿ: IPL 2023: ಈ ಬಾರಿ ಸಿಎಸ್‌ಕೆ ಕಪ್ ಗೆಲ್ಲಲ್ಲ, ಆರ್‌ಸಿಬಿ ಗೆದ್ದರೆ ಖುಷಿ – ಭಾರತದ ಮಾಜಿ ಕ್ರಿಕೆಟಿಗ ಭವಿಷ್ಯ

    ಹೈದರಾಬಾದ್ ತಂಡ 7,50,000 ಡಾಲರ್ ನೀಡಿ ಖರೀದಿಸಿದಾಗ ಅಂದು ನಾನು 3 ರಿಂದ 3.5 ಕೋಟಿ ರೂ. ಸಿಗಬಹುದು ಎಂದು ಅಂದುಕೊಂಡಿದ್ದೆ. ಅದರಲ್ಲೂ ನನ್ನ ಬಿಡ್ ಬಹಳ ತಡವಾಗಿ ಆಗಿತ್ತು. ಇಷ್ಟೊಂದು ಮೊತ್ತದ ಹಣವನ್ನು ಕೇಳಿ ನಾನು ಕಾರು ಖರೀದಿಸುವ ಬಗ್ಗೆ ಅಲ್ಲೇ ಯೋಚಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

    ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಸೆಣಸಿದ್ದ ಅವರು ಮೂರು ಅವೃತ್ತಿಯಲ್ಲಿ 1170 ರನ್ ದಾಖಲಿಸಿಕೊಂಡಿದ್ದರು. ನಂತರ 2011ರಲ್ಲಿ ಮುಂಬೈ ತಂಡ 13 ಕೋಟಿ ರೂ.ಗಳಿಗೆ ಅವರನ್ನು ಖರೀದಿಸಿತ್ತು. ಅಂದಿನಿಂದ ಮುಂಬೈ ಇಂಡಿಯನ್ (Mumbai Indians) ತಂಡದ ಸದಸ್ಯರಾಗಿ ಉಳಿದ ರೋಹಿತ್ 2013ರಲ್ಲಿ ತಂಡದ ಗೆಲುವಿನಲ್ಲಿ ಪಾತ್ರವಹಿಸಿದ್ದರು. 2015, 2017, 2019 ಹಾಗೂ 2020ರ ತಂಡವನ್ನು ಮುನ್ನಡೆಸಿದ್ದರು.

    ಈ ಬಾರಿಯ ಐಪಿಎಲ್‍ಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಹತ್ತು ವರ್ಷ ಪೂರೈಸಲಿದ್ದಾರೆ. ಎಪ್ರಿಲ್ 2 ರಂದು ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ (Royal Challengers) ವಿರುದ್ಧ ಆಡಲಿದ್ದಾರೆ. ಇದನ್ನೂ ಓದಿ: ಇನ್ಮುಂದೇ ಮಂಡ್ಯದಲ್ಲಿ ಮೂರನೇ ಆಟ ಶುರು : ಬಿಜೆಪಿ ಸೇರುವುದಾಗಿ ಶಿವರಾಮೇಗೌಡ ಘೋಷಣೆ

  • 2009ರಲ್ಲಿ ಗಿಲ್ಲಿ ಹೇಳಿದ ಮಾತನ್ನು ಮರೆಯಲು ಸಾಧ್ಯವಿಲ್ಲ: ಪ್ರಗ್ಯಾನ್ ಓಜಾ

    2009ರಲ್ಲಿ ಗಿಲ್ಲಿ ಹೇಳಿದ ಮಾತನ್ನು ಮರೆಯಲು ಸಾಧ್ಯವಿಲ್ಲ: ಪ್ರಗ್ಯಾನ್ ಓಜಾ

    – ಐಪಿಎಲ್ 2ನೇ ಆವೃತ್ತಿಯ ಫೈನಲ್ ಕಥೆ ಬಿಚ್ಚಿಟ್ಟ ಓಜಾ

    ನವದೆಹಲಿ: 2009ರ ಐಪಿಎಲ್ ಸಮಯದಲ್ಲಿ ಅಂದು ಡೆಕ್ಕನ್ ಚಾರ್ಜರ್ಸ್ ತಂಡದ ನಾಯಕನಾಗಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಆಡಮ್ ಗಿಲ್‍ಕ್ರಿಸ್ಟ್ ಹೇಳಿದ ಮಾತನ್ನು ಮರೆಯಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ಆಟಗಾರ ಪ್ರಗ್ಯಾನ್ ಓಜಾ ಹೇಳಿದ್ದಾರೆ.

    ಐಪಿಎಲ್‍ನ ಮೊದಲ ಆವೃತ್ತಿಯಲ್ಲಿ ಅಂಕಪಟ್ಟಿಯ ಕೊನೆಯಲ್ಲಿ ಇದ್ದ ಡೆಕ್ಕನ್ ಚಾರ್ಜರ್ಸ್ ತಂಡ, ಐಪಿಎಲ್ ಎರಡನೇ ಅವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿದು ಎಲ್ಲರನ್ನು ಹುಬ್ಬೇರುವಂತೆ ಮಾಡಿತ್ತು. ಬೆಂಗಳೂರು ತಂಡವನ್ನು ಬಗ್ಗುಬಡಿದ ಡೆಕ್ಕನ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಅಂದು ತಂಡ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಪಂದ್ಯಗಳನ್ನು ಆಡಿತ್ತು ಎಂದು ಅಂದು ತಂಡದಲ್ಲಿದ್ದ ಆಟಗಾರ ಪ್ರಗ್ಯಾನ್ ಓಜಾ ಹೇಳಿದ್ದಾರೆ.

    ಈ ವಿಚಾರವಾಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಓಜಾ, ನಮ್ಮ ತಂಡ ಐಪಿಎಲ್ ಒಂದನೇ ಅವೃತ್ತಿಯಲ್ಲಿ ಕೆಟ್ಟ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಈ ಕಾರಣದಿಂದ ನಮ್ಮ ತಂಡಕ್ಕೆ ಸ್ಪಾನ್ಸರ್ ಮಾಡಲು ಯಾರು ಮುಂದೆ ಬಂದಿರಲಿಲ್ಲ. ನಮಗೆ ಆಡಲು ತಂಡದಲ್ಲಿ ಬಟ್ಟೆ ಮತ್ತು ಕಿಟ್‍ಗಳ ಬಹಳ ತೊಂದರೆಯಾಗಿತ್ತು. ಆದರೂ ನಾವು ಪಂದ್ಯಗಳನ್ನು ಆಡಲು ಸೌಥ್ ಆಫ್ರಿಕಾಗೆ ಹೋಗಿದ್ದವು ಎಂದು ಹೇಳಿದ್ದಾರೆ.

    ಅಂದು ಸೌಥ್ ಆಫ್ರಿಕಾ ತಲುಪಿದ ನಮಗೆ ತಂಡದ ನಾಯಕ ಆಡಮ್ ಗಿಲ್‍ಕ್ರಿಸ್ಟ್ ಒಂದು ಮಾತನ್ನು ಹೇಳಿದ್ದರು. ಆದನ್ನು ನಾವು ಎಂದಿಗೂ ಮರೆಯುವುದಿಲ್ಲ. ಅಂದು ನಮ್ಮ ಬಳಿ ಬಂದ ಗಿಲ್ಲಿ, ಒಂದು ಬಾರಿ ನಾವು ಚಾಂಪಿಯನ್ ಆದರೆ ಈಗ ತಂಡದಲ್ಲಿ ಇರುವ ತೊಂದರೆಗಳು ನಮಗೆ ಕಾಣಿಸುವುದಿಲ್ಲ. ಒಂದು ಬಾರಿ ಕಪ್ ಗೆದ್ದರೆ ಈ ಎಲ್ಲವೂ ಬದಲಾಗುತ್ತವೆ ಎಂದು ನಮ್ಮನ್ನು ಹುರಿದುಂಬಿಸಿದ್ದರು ಎಂದು ಓಜಾ ತಿಳಿಸಿದ್ದಾರೆ.

    2009ರಲ್ಲಿ ಸೌಥ್ ಅಫ್ರಿಕಾದಲ್ಲಿ ನಡೆದ ಐಪಿಎಲ್‍ನ ಎರಡನೇ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಉತ್ತಮ ಲಯದಲ್ಲಿ ಇತ್ತು. ಆಡಿದ 14 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದಿದ್ದ ಗಿಲ್‍ಕ್ರಿಸ್ಟ್ ನೇತೃತ್ವದ ತಂಡ 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇತ್ತು. ಅಂದು ತಂಡದಲ್ಲಿದ್ದ ಹರ್ಷಲ್ ಗಿಬ್ಸ್, ಆಂಡ್ರ್ಯೂ ಸೈಮಂಡ್ಸ್ ಮತ್ತು ಪ್ರಗ್ಯಾನ್ ಓಜಾ ಉತ್ತಮ ಲಯದಲ್ಲಿ ಇದ್ದರು.

    ಸರಣಿ ಉದ್ದಕ್ಕೂ ಅತ್ಯುತ್ತಮವಾಗಿ ಆಡಿಕೊಂಡು ಬಂದಿದ್ದ ಡೆಕ್ಕನ್‍ಗೆ ಸೆಮಿಪೈನಲ್‍ನಲ್ಲಿ ಡೆಲ್ಲಿ ತಂಡ ಮುಖಾಮುಖಿಯಾಗಿತ್ತು. ಈ ಪಂದ್ಯವನ್ನು 6 ವಿಕೆಟ್ ಅಂತರದಲ್ಲಿ ಗೆದ್ದ ಗಿಲ್ಲಿಪಡೆಗೆ ಫೈನಲ್‍ನಲ್ಲಿ ಬೆಂಗಳೂರು ತಂಡ ಎದುರಾಳಿಯಾಗಿತ್ತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಕ್ಕನ್ ಗಿಬ್ಸ್ ಅವರ ಅರ್ಧಶತಕದ ಸಲುವಾಗಿ 143 ರನ್ ಗಳನ್ನು ಸೇರಿಸಿತ್ತು. ಆದರೆ ಇದನ್ನು ಬೆನ್ನಟ್ಟಿದ ಬೆಂಗಳೂರು ತಂಡ ಓಜಾ ಅವರ ಮಾರಕ ದಾಳಿಗೆ ನಲುಗಿ 137 ರನ್‍ಗೆ ಆಟ ಮುಗಿಸಿತ್ತು. ಈ ಮೂಲಕ 6 ರನ್‍ಗಳ ಅಂತರದಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಈ ಪಂದ್ಯದಲ್ಲಿ ಓಜಾ ಮೂರು ವಿಕೆಟ್ ಪಡೆದಿದ್ದರು.