Tag: Debit Card

  • ಧರ್ಮಸ್ಥಳ ಕೇಸ್;‌ ಪಾಯಿಂಟ್‌ ನಂ.1ರಲ್ಲಿ ಸಿಕ್ಕ ಡೆಬಿಟ್‌, ಪಾನ್‌ ಕಾರ್ಡ್‌ ರಹಸ್ಯ ಬಯಲು – ವಾರಸುದಾರ ಮಹಿಳೆ ಇನ್ನೂ ಜೀವಂತ

    ಧರ್ಮಸ್ಥಳ ಕೇಸ್;‌ ಪಾಯಿಂಟ್‌ ನಂ.1ರಲ್ಲಿ ಸಿಕ್ಕ ಡೆಬಿಟ್‌, ಪಾನ್‌ ಕಾರ್ಡ್‌ ರಹಸ್ಯ ಬಯಲು – ವಾರಸುದಾರ ಮಹಿಳೆ ಇನ್ನೂ ಜೀವಂತ

    ಮಂಗಳೂರು: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪಾಯಿಂಟ್‌ ನಂಬರ್‌ ಒಂದರಲ್ಲಿ ಸಿಕ್ಕ ಡೆಬಿಟ್‌ ಕಾರ್ಡ್‌, ಪಾನ್‌ ಕಾರ್ಡ್‌ ರಹಸ್ಯ ಬಯಲಾಗಿದೆ. ಡೆಬಿಟ್ ಕಾರ್ಡ್ ವಾರಿಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದಾರೆ.

    ಪಾಯಿಂಟ್ ನಂಬರ್ ಒನ್‌ನಲ್ಲಿ ಡೆಬಿಟ್ ಹಾಗೂ ಪಾನ್ ಕಾರ್ಡ್ ಪತ್ತೆಯಾಗಿತ್ತು. ಅನಾರೋಗ್ಯದಿಂದ ಪಾನ್ ಕಾರ್ಡ್ ವಾರಿಸುದಾರ ಸಾವು ಎಂದು ಮಾಹಿತಿ ಸಿಕ್ಕಿತ್ತು. ಇದೀಗ, ಆ ಡೆಬಿಟ್ ಕಾರ್ಡ್ ಸಾವಿಗೀಡಾದ ವ್ಯಕ್ತಿಯ ತಾಯಿಗೆ ಸೇರಿದ್ದು ಎಂದು ಮಾಹಿತಿ ಲಭಿಸಿದೆ.

    ಡೆಬಿಟ್‌ ಕಾರ್ಡ್‌ ವಾರಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಮಹಿಳೆಯನ್ನು ಸಂಪರ್ಕಿಸಿದ್ದಾರೆ. ಮಹಿಳೆ ಇನ್ನೂ ಜೀವಂತ ಎಂದು ಮಾಹಿತಿ ಸಿಕ್ಕಿದೆ. ಡೆಬಿಟ್ ಕಾರ್ಡ್ ಬಳಕೆದಾರರ ಮಾಹಿತಿಯನ್ನು ಎಸ್‌ಐಟಿ ಖಚಿತಪಡಿಸಿದೆ.

    ಇದೇ ಡೆಬಿಟ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಕುರಿತು ಅನೇಕ ಊಹಾಪೋಹ ಸೃಷ್ಟಿಯಾಗಿತ್ತು. ಸದ್ಯ ಎಲ್ಲ ಉಹಾಪೋಹಗಳಿಗೆ ತೆರೆ ಬಿದ್ದಿದೆ.

  • ಇನ್ನು ಮುಂದೆ ಕ್ರೆಡಿಟ್‌ ಕಾರ್ಡ್‌ನಂತೆ ಯುಪಿಐ ಬಳಸಬಹುದು – ಇದು ಹೇಗೆ ಕೆಲಸ ಮಾಡುತ್ತೆ?

    ಇನ್ನು ಮುಂದೆ ಕ್ರೆಡಿಟ್‌ ಕಾರ್ಡ್‌ನಂತೆ ಯುಪಿಐ ಬಳಸಬಹುದು – ಇದು ಹೇಗೆ ಕೆಲಸ ಮಾಡುತ್ತೆ?

    ನವದೆಹಲಿ: ಇಲ್ಲಿಯವರೆಗೆ ಡೆಬಿಟ್‌ ಕಾರ್ಡ್‌ (Debit Card) ರೀತಿ ಯುಪಿಐ (UPI) ಕಾರ್ಯನಿರ್ವಹಿಸುತ್ತಿತ್ತು. ಆದರೆ ಇನ್ನು ಮುಂದೆ ಕ್ರೆಡಿಟ್‌ ಕಾರ್ಡ್‌ (Credit Card) ರೀತಿ ಯುಪಿಐ ಕಾರ್ಯನಿರ್ವಹಿಸಲಿದೆ.

    ಹೌದು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್‌ ಫೀಚರ್‌ ಪರಿಚಯಿಸಲು ಸಿದ್ಧವಾಗಿದೆ.

    ಹೇಗೆ ಕೆಲಸ ಮಾಡುತ್ತೆ?
    ಈಗ ಯಪಿಐ ಬಳಸಿ ಯಾವುದಾದರು ವಸ್ತು ಖರೀದಿಸಿದರೆ ಕೂಡಲೇ ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗುತ್ತದೆ. ಆದರೆ ಯುಪಿಐ ಕ್ರೆಡಿಡ್‌ ಕಾರ್ಡ್‌ನಲ್ಲಿ ತಕ್ಷಣ ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗುವುದಿಲ್ಲ. ಹಣ ಬ್ಯಾಂಕ್‌ನಿಂದ ವರ್ಗಾವಣೆಯಾದರೂ  ತಿಂಗಳ ಕೊನೆಯಲ್ಲಿ ಇತ್ಯರ್ಥವಾಗಲಿದೆ. ಇದನ್ನೂ ಓದಿ: 200 ಅಡಿ ಆಳದ ಕಮರಿಗೆ ಉರುಳಿದ ಬಸ್ – ಇಬ್ಬರು ಸಾವು, 25 ಮಂದಿಗೆ ಗಾಯ

    ವಿಶೇಷತೆ ಏನು?
    ಈ ರೀತಿ ಹಣ ವರ್ಗಾವಣೆಯಾದರೆ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ವರದಿಯಾಗಿದೆ. ಆನ್‌ಲೈನ್‌ ಶಾಪಿಂಗ್‌/ ಮಳಿಗೆಗಳು ಈ ಶುಲ್ಕವನ್ನು ಭರಿಸಬೇಕಾಗುತ್ತದೆ. ಇದು ಯುಪಿಐ ಕ್ರೆಡಿಟ್‌ ಕಾರ್ಡ್‌ ವಿಶೇಷತೆ.

    ಈಗ ಹೇಗೆ ನಡೆಯುತ್ತಿದೆ?
    ಬ್ಯಾಂಕ್‌ಗಳು ಗ್ರಾಹಕನ ಖಾತೆಯಲ್ಲಿರುವ ಬ್ಯಾಲೆನ್ಸ್‌ ಪರಿಗಣಿಸಿ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಹಣವನ್ನು ನಿಗದಿಪಡಿಸುತ್ತದೆ. ನಂತರ ನಿಗದಿ ಪಡಿಸಿದ ಸಮಯದ ಒಳಗಡೆ ಆ ಹಣವನ್ನು ಬ್ಯಾಂಕಿಗೆ ಗ್ರಾಹಕ ಪಾವತಿಸಬೇಕಾಗುತ್ತದೆ. ಇದನ್ನೂ ಓದಿ: ಅನಂತ್‌ ಅಂಬಾನಿ ಮದುವೆ ಸಮಾರಂಭದಲ್ಲಿ ದೀದಿ – ಹರಿದು ಬಂತು ರಾಜಕೀಯ ನಾಯಕರ ದಂಡು!

    ಡೆಬಿಟ್‌ ಕಾರ್ಡ್‌ಗೆ ಆಫರ್‌ ಇಲ್ಲ:
    ಸದ್ಯ ಡೆಬಿಟ್‌ ಕಾರ್ಡ್‌ ಹೊಂದಿವರಿಗೆ ಆಫರ್‌/ ರಿಯಾಯಿತಿಗಳು ಸಿಗುವುದಿಲ್ಲ. ಆದರೆ ಕ್ರೆಡಿಟ್‌ ಕಾರ್ಡ್‌ ಹೊಂದಿವರಿಗೆ ಹಲವು ಆಕರ್ಷಕ ರಿಯಾಯಿತಿಗಳು ಲಭ್ಯ ಇರುತ್ತವೆ. ಯುಪಿಐ ಪೇಮೆಂಟ್ಸ್‌ನಲ್ಲಿ ವಿಶ್ವದಲ್ಲೇ ಭಾರತ ಮೊದಲ ಸ್ಥಾನದಲ್ಲಿದೆ. ಒಂದು ವೇಳೆ ಯುಪಿಐನಲ್ಲಿ ಕ್ರೆಡಿಟ್‌ ಕಾರ್ಡ್‌ ವಿಶೇಷತೆ ಸೇರಿಸಿದಂತೆ ಯುಪಿಐ ವ್ಯವಹಾರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ.

    ಈಗಾಗಲೇ ಈ ಸೇವೆ ಲಭ್ಯವಿದೆ:
    ಬ್ಯಾಂಕ್‌ಗಳಾದ ಆಕ್ಸಿಸ್‌, ಹೆಚ್‌ಡಿಎಫ್‌ಸು, ಐಸಿಐಸಿಐ, ಇಂಡಿಯನ್‌ ಬ್ಯಾಂಕ್‌, ಪಿಎನ್‌ಬಿ ಬ್ಯಾಂಕ್‌ಗಳು ಈಗಾಗಲೇ ಈ ರೀತಿಯ ವಿಶೇಷತೆಯನ್ನು ನೀಡುತ್ತವೆ. ಯುಪಿಐ ರೂಪೇ ಕ್ರೆಡಿಟ್‌ ಕಾರ್ಡ್‌ ವರ್ಚುಯಲ್‌ ಆಗಿದ್ದು ಇದನ್ನು ಬಳಸಿ ಹಣವನ್ನು ತೆಗೆಯಲು ಸಾಧ್ಯವಿಲ್ಲ.

     

  • ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಬಳಕೆದಾರರಿಗೆ ಜುಲೈ 1 ರಿಂದ ಸಿಗಲಿದೆ ಗುಡ್‌ನ್ಯೂಸ್‌

    ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಬಳಕೆದಾರರಿಗೆ ಜುಲೈ 1 ರಿಂದ ಸಿಗಲಿದೆ ಗುಡ್‌ನ್ಯೂಸ್‌

    ನವದೆಹಲಿ: ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಬಳಕೆದಾರರಿಗೆ ಗುಡ್‌ನ್ಯೂಸ್‌. ಜುಲೈ 1 ರಿಂದ ಕಂಪನಿಗಳು ಗ್ರಾಹಕರ ಕಾರ್ಡ್‌ ಡೇಟಾವನ್ನು ಸ್ಟೋರ್‌ ಮಾಡುವಂತಿಲ್ಲ.

    ಆರ್‌ಬಿಐ ಕಳೆದ ವರ್ಷ ಗ್ರಾಹಕರ ರಕ್ಷಣೆ ಸಂಬಂಧ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ನಿಯಮವನ್ನು ರೂಪಿಸಿತ್ತು. ಈ ನಿಯಮದ ಪ್ರಕಾರ ಕಂಪನಿಗಳು ಗ್ರಾಹಕರ ಕಾರ್ಡ್‌ ಡೇಟಾವನ್ನು ಸಂರಕ್ಷಣೆ ಮಾಡುವಂತಿಲ್ಲ. ಈ ಟೋಕನೈಸೇಶನ್ ನಿಯಮ ಈ ವರ್ಷದ ಜುಲೈ 1 ರಿಂದ ಜಾರಿಗೆ ಬರಲಿದೆ.

    ದೇಶದ ಒಳಗಡೆ ಆನ್‌ಲೈನ್‌ ಮೂಲಕ ನಡೆಯುವ ಖರೀದಿಗೆ ಟೋಕನೈಸೇಷನ್‌ ನಿಯಮವನ್ನು ಆರ್‌ಬಿಐ ಕಡ್ಡಾಯ ಮಾಡಿದೆ. ಈ ನಿಯಮ ಜನವರಿ 1 ರಿಂದ ಜಾರಿಯಾಗಬೇಕಿತ್ತು. ಆದರೆ ಕಂಪನಿಗಳಿಗೆ 6 ತಿಂಗಳು ಕಾಲಾವಕಾಶ ವಿಸ್ತರಿಸಿದ್ದರಿಂದ ಜುಲೈನಿಂದ ಈ ನಿಯಮ ಜಾರಿಯಾಗುತ್ತಿದೆ.

    ಈ ನಿಯಮದ ಪ್ರಕಾರ ವ್ಯವಹಾರ ನಡೆದ ಬಳಿಕ ಗ್ರಾಹಕರ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಡೇಟಾಗಳನ್ನು ಡಿಲೀಟ್‌ ಮಾಡಬೇಕಾಗುತ್ತದೆ. ಇದನ್ನೂ ಓದಿ: ಎಲೋನ್ ಮಸ್ಕ್ ನಡವಳಿಕೆ ಮುಜುಗರ ತಂದಿದೆ ಎಂದ ಉದ್ಯೋಗಿಗಳನ್ನೇ ಕಂಪನಿಯಿಂದ ಕಿತ್ತೊಗೆದ ಸ್ಪೇಸ್‌ಎಕ್ಸ್

    RBI

    ಈ ಟೋಕನೈಸೇಷನ್‌ ನಿಯಮ ಕಡ್ಡಾಯವೇನಲ್ಲ. ಟೋಕನೈಸೇಷನ್‌ ನಿಯಮಕ್ಕೆ ಯಾರು ಅನುಮತಿ ನೀಡುವುದಿಲ್ಲವೋ ಆ ಗ್ರಾಹಕರು ವ್ಯವಹಾರ ನಡೆಯುವ ಮುನ್ನ ಕಾರ್ಡ್‌ನಲ್ಲಿರುವ ಹೆಸರು, ಕಾರ್ಡ್‌ ನಂಬರ್‌, ವ್ಯಾಲಿಡಿಟಿ, ಸಿವಿವಿ ಎಲ್ಲವನ್ನು ಎಂಟ್ರಿ ಮಾಡಿದ ಬಳಿಕ ವ್ಯವಹಾರ ಮಾಡಬೇಕಾಗುತ್ತದೆ.

    ಯಾರು ಕಾರ್ಡ್‌ ಟೋಕನೈಸೇಷನ್‌ ನಿಯಮಕ್ಕೆ ಒಪ್ಪಿಗೆ ನೀಡುತ್ತಾರೋ ಅವರು ಸಿವಿವಿ ಅಥವಾ ಒಟಿಪಿಯನ್ನು ದಾಖಲಿಸಿ ವ್ಯವಹಾರ ಮಾಡಬೇಕಾಗುತ್ತದೆ.

    Live Tv

  • ಆನ್‍ಲೈನ್ ಪಾವತಿ – ಮಹತ್ವದ ಬದಲಾವಣೆಗೆ ಮುಂದಾದ ಆರ್‌ಬಿಐ

    ಆನ್‍ಲೈನ್ ಪಾವತಿ – ಮಹತ್ವದ ಬದಲಾವಣೆಗೆ ಮುಂದಾದ ಆರ್‌ಬಿಐ

    ಮುಂಬೈ: ಆನ್‍ಲೈನ್ ಪಾವತಿಯಲ್ಲಾಗುತ್ತಿರುವ ಕೆಲ ವಂಚನೆ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಿಶೇಷ ಗಮನಹರಿಸಿದೆ. ಮುಂದಿನ ದಿನಗಳಲ್ಲಿ ಆನ್‍ಲೈನ್ ಕಾರ್ಡ್ ತಯಾರಕರು ಮತ್ತು ಬ್ಯಾಂಕ್‍ಗಳು ಮಾತ್ರ ಗ್ರಾಹಕರ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‍ಗಳ ಮಾಹಿತಿಯನ್ನು ಸಂಗ್ರಹ ಮಾಡಿಟ್ಟುಕೊಳ್ಳಬಹುದು. ಹೊರತು ಪೇಮೆಂಟ್ ಆ್ಯಪ್, ಆನ್‍ಲೈನ್ ಶಾಪಿಂಗ್ ಪೋರ್ಟಲ್‍ಗಳು ಕಾರ್ಡ್ ಮಾಹಿತಿಯನ್ನು ಸಂಗ್ರಹ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ.

    ಕೆಲ ಪೇಮೆಂಟ್ ಆ್ಯಪ್, ಆನ್‍ಲೈನ್ ಶಾಪಿಂಗ್ ಪೋರ್ಟಲ್‍ಗಳು ತಮ್ಮ ಗ್ರಾಹಕರ ಕಾರ್ಡ್ ಮಾಹಿತಿಯನ್ನು ಸಂಗ್ರಹ ಮಾಡಿಕೊಂಡಿರುತ್ತದೆ. ಮುಂದಿನ ಬಾರಿ ಅವರು ವ್ಯವಹರಿಸುವಾಗ ಅವರು ಕಾರ್ಡ್ ಸಂಖ್ಯೆ ತಿಳಿಸಬೇಕೆಂದಿಲ್ಲ, ಬದಲಾಗಿ ಅವರ ಒಟಿಪಿ ಮತ್ತು ಪಾಸ್‍ವರ್ಡ್ ನೀಡಿದರೆ ಸುಲಭವಾಗಿ ವ್ಯವಹರಿಸಬಹುದಿತ್ತು. ಈ ನಿಯಮಕ್ಕೆ ಮುಂದಿನ ವರ್ಷ ಜನವರಿ 1ರ ಬಳಿಕ ಆರ್‌ಬಿಐ ಬ್ರೇಕ್ ಹಾಕಲಿದೆ. ಇದನ್ನೂ ಓದಿ: ಮಾರ್ಷಲ್‍ನನ್ನೇ ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋದ ಚಾಲಕ


    ಆನ್‍ಲೈನ್ ಕಾರ್ಡ್ ತಯಾರಕರು ಮತ್ತು ಬ್ಯಾಂಕ್‍ಗಳು ಮಾತ್ರ ಗ್ರಾಹಕರ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‍ಗಳ ಮಾಹಿತಿಯನ್ನು ಸಂಗ್ರಹ ಮಾಡಿಟ್ಟುಕೊಳ್ಳಬಹುದು. ಉಳಿದಂತೆ ಆನ್‍ಲೈನ್ ಶಾಪಿಂಗ್ ಪೋರ್ಟಲ್‍ಗಳು ತಮ್ಮ ಸರ್ವರ್‍ನಲ್ಲಿ ಸಂಗ್ರಹಮಾಡಿಟ್ಟುಕೊಂಡರೆ ಗ್ರಾಹಕರ ಡೇಟಾ ಸೋರಿಕೆಯಾಗಿ ವಂಚನೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಆರ್‌ಬಿಐ ಈ ಹೊಸ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ. ಇದನ್ನೂ ಓದಿ: 6,50,000 ರೂ.ಗೆ ದೇವರ ತೆಂಗಿನಕಾಯಿ ಖರೀದಿಸಿದ ಭಕ್ತ!

  • ಎಟಿಎಂನಿಂದ ಪದೇ ಪದೇ ಹಣ ಡ್ರಾ ಮಾಡ್ತೀರಾ? ಹೊಸ ನಿಯಮಕ್ಕೆ ಎಸ್‍ಎಲ್‍ಬಿಸಿ ಚಿಂತನೆ

    ಎಟಿಎಂನಿಂದ ಪದೇ ಪದೇ ಹಣ ಡ್ರಾ ಮಾಡ್ತೀರಾ? ಹೊಸ ನಿಯಮಕ್ಕೆ ಎಸ್‍ಎಲ್‍ಬಿಸಿ ಚಿಂತನೆ

    ನವದೆಹಲಿ: ಎಟಿಎಂ ಕಾರ್ಡ್ ದುರ್ಬಳಕೆ ತಡೆಯುವ ಹಿನ್ನೆಲೆಯಲ್ಲಿ ದೆಹಲಿಯ ರಾಜ್ಯಮಟ್ಟದ ಬ್ಯಾಂಕರ್ಸ್ ಸಮಿತಿ (ಎಸ್‍ಎಲ್‍ಬಿಸಿ) ಹೊಸ ಚಿಂತನೆಗೆ ಮುಂದಾಗಿದೆ. ಈ ಸಮಿತಿ ಎರಡು ಎಟಿಎಂ ವ್ಯವಹಾರ ನಡುವೆ ಸಮಯ ನಿಗದಿಗೆ ಚಿಂತನೆ ನಡೆಸಿದೆ.

    ಒಂದು ವೇಳೆ ಎಸ್‍ಎಲ್‍ಬಿಸಿ ಸಮಿತಿಯ ಪ್ರಸ್ತಾವವನ್ನು ಬ್ಯಾಂಕ್ ಒಪ್ಪಿಕೊಂಡಲ್ಲಿ ಈ ಹೊಸ ನಿಯಮ ಜಾರಿಯಾಗುವ ಸಾಧ್ಯತೆಗಳಿವೆ. ಒಂದು ಎಟಿಎಂ ಕಾರ್ಡ್ ನ ಎರಡು ವ್ಯವಹಾರಗಳ ನಡುವೆ ಅಂದಾಜು 6 ರಿಂದ 12 ಗಂಟೆ ಸಮಯ ನಿಗದಿಗೆ ಸಮಿತಿ ಸಲಹೆ ನೀಡಿದೆ. ಅಂದ್ರೆ ಒಮ್ಮೆ ನೀವು ಎಟಿಎಂನಿಂದ ಹಣ ತೆಗೆದರೆ ಪುನಃ 6 ರಿಂದ 12 ಗಂಟೆವರೆಗೆ ಅದೇ ಕಾರ್ಡ್ ನಿಂದ ಡ್ರಾ ಮಾಡಲು ಸಾಧ್ಯವಾಗಲ್ಲ. ಈ ಬಗ್ಗೆ ಕೇವಲ ಚರ್ಚೆಗಳು ನಡೆದಿದ್ದು, ಕಾರ್ಯರೂಪಕ್ಕೆ ಬಂದಿಲ್ಲ.

    ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿಯ ಎಸ್‍ಎಲ್‍ಬಿಸಿ ಸಂಯೋಜಕರು ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಎಂಡಿ, ಸಿಇಓ ಮುಕೇಶ್ ಕುಮಾರ್ ಜೈನ್, ಎಟಿಎಂನಲ್ಲಿ ಕಾರ್ಡ್ ದುರ್ಬಳಕೆ ಅಪರಾಧ ಪ್ರಕರಣಗಳು ಹೆಚ್ಚಾಗಿ ರಾತ್ರಿ ಮತ್ತು ಬೆಳಗಿನ ಜಾವದ ನಡುವೆಯೇ ಹೆಚ್ಚಾಗಿ ನಡೆದಿವೆ. ಈ ನಿಗದಿತ ಸಮಯದಲ್ಲಿ ಕಾರ್ಡ್ ದುರ್ಬಳಕೆ ಹೆಚ್ಚಾಗಿ ಕಂಡು ಬಂದಿದೆ. ಸಮಿತಿ ನಮ್ಮ ಮುಂದೆ ಪ್ರಸ್ತಾವವನ್ನು ಇಟ್ಟಿದ್ದು, ಕಳೆದ ಒಂದು ವಾರದಿಂದ 18 ಬ್ಯಾಂಕ್ ಗಳ ಪ್ರತಿನಿಧಿಗಳು ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    2018-19ರ ವೇಳೆ ದೆಹಲಿಯಲ್ಲಿ 179, ಮಹಾರಾಷ್ಟ್ರದಲ್ಲಿ 233 ಎಟಿಎಂ ವಂಚನೆ ಪ್ರಕರಣಗಳು ದಾಖಲಾಗಿವೆ. 2018-19ರ ಅವಧಿಯಲ್ಲಿ ಇದೂವರೆಗೂ ದೇಶದೆಲ್ಲಡೆ 980ಕ್ಕೂ ಅಧಿಕ ದೂರು ದಾಖಲಾಗಿವೆ. ಕಳೆದ ವರ್ಷ 911 ಪ್ರಕರಣಗಳು ದಾಖಲಾಗಿತ್ತು. ಇತ್ತೀಚೆಗೆ ಎಟಿಎಂ ಕಾರ್ಡ್ ಕ್ಲೋನಿಂಗ್ (ಬಳಕೆದಾರರ ಮಾಹಿತಿಯ ಕಳ್ಳತನ) ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ ವಿದೇಶಿ ಪ್ರಜೆಗಳು ಭಾಗಿಯಾಗಿರುವ ಶಂಕೆಗಳು ವ್ಯಕ್ತವಾಗಿವೆ.

    ಎಟಿಎಂನಿಂದ ಹೆಚ್ಚಿನ ಹಣ ಡ್ರಾ ಮಾಡುವಾಗ ಗ್ರಾಹಕರ ಮೊಬೈಲ್ ಗೆ ಸಂದೇಶ ಕಳುಹಿಸಿ, ಓಟಿಪಿ ನಂಬರ್ ಪಡೆಯುವ ವ್ಯವಸ್ಥೆ ರೂಪಿಸಲು ಸಹ ಚಿಂತಿಸಲಾಗಿದೆ. ಈ ರೀತಿಯ ವ್ಯವಸ್ಥೆಯಿಂದ ಡೆಬಿಟ್, ಕ್ರೆಡಿಟ್ ಕಾರ್ಡ್ ಗಳ ದುರ್ಬಳಕೆ ತಡೆಯಲು ಸಾಧ್ಯವಾಗಲಿದೆ. ಬೇರೆಯವರು ನಿಮ್ಮ ಕಾರ್ಡ್ ನಿಂದ ಹಣ ಡ್ರಾ ಮಾಡುತ್ತಿದ್ದರೆ, ಮೆಸೇಜ್ ಮೂಲಕ ಎಚ್ಚೆತ್ತುಕೊಳ್ಳಬಹುದು ಎಂದು ಮುಕೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.

  • ಶೀಘ್ರವೇ ಬಂದ್ ಆಗಲಿದೆ ಎಸ್‍ಬಿಐ ಎಟಿಎಂ ಕಾರ್ಡ್

    ಶೀಘ್ರವೇ ಬಂದ್ ಆಗಲಿದೆ ಎಸ್‍ಬಿಐ ಎಟಿಎಂ ಕಾರ್ಡ್

    ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಶೀಘ್ರವೇ ಎಟಿಎಂ ಕಾರ್ಡ್ ಗಳಿಗೆ ಗುಡ್‍ಬೈ ಹೇಳಲಿದೆ.

    ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‍ಬಿಐ ಪ್ಲಾಸ್ಟಿಕ್ ಡೆಬಿಟ್ ಕಾರ್ಡ್ ಗಳನ್ನು ನಿಲ್ಲಿಸುವ ನಿಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಪಾವತಿ ಸೇವೆಯನ್ನು ಉತ್ತೇಜಿಸಲು ಎಸ್‍ಬಿಐ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಯಲ್ಲಿ ಬ್ಯಾಂಕ್ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಎಸ್‍ಬಿಐ ಎಲ್ಲಾ ಎಟಿಎಂ ಕಾರ್ಡ್ ಗಳನ್ನು 18 ತಿಂಗಳ ನಂತರ ಮುಚ್ಚುವ ಗುರಿ ಹೊಂದಿದೆ.

    ದೇಶದಲ್ಲಿ 90 ಕೋಟಿ ಡೆಬಿಟ್ ಕಾರ್ಡ್‍ಗಳು ಮತ್ತು 3 ಕೋಟಿ ಕ್ರೆಡಿಟ್ ಕಾರ್ಡ್‍ಗಳಿವೆ. ಒಂದೂವರೆ ವರ್ಷದ ನಂತರ ಈ ಕಾರ್ಡ್ ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿವೆ. ಈ ಮೂಲಕ ಡಿಜಿಟಲ್ ಪಾವತಿ ಸೇವೆ ಮಾತ್ರ ಕಾರ್ಯನಿರ್ವಹಿಸಲಿದೆ ಎಂದು ಎಸ್‍ಬಿಐ ಅಧ್ಯಕ್ಷ ರಜನೀಶ್ ಕುಮಾರ್ ತಿಳಿಸಿದ್ದಾರೆ.

    ಡೆಬಿಟ್ ಕಾರ್ಡ್ ಮುಕ್ತ ದೇಶವನ್ನಾಗಿ ಮಾಡುವಲ್ಲಿ ಯೋನೊ ಆ್ಯಪ್ (You Only Need one -YONO) ಪ್ರಮುಖ ಪಾತ್ರ ವಹಿಸಲಿದೆ. ಯೋನೊ ಮೂಲಕ ಎಟಿಎಂ ಯಂತ್ರಗಳಿಂದ ಹಣವನ್ನು ಡ್ರಾ ಮಾಡಬಹುದು ಹಾಗೂ ಶಾಪಿಂಗ್ ಕೂಡ ಮಾಡಬಹುದಾಗಿದೆ. ಬ್ಯಾಂಕ್ ಈಗಾಗಲೇ 68,000 ಯೋನೊ ಕ್ಯಾಶ್ ಪಾಯಿಂಟ್‍ಗಳನ್ನು ತೆರೆದಿದೆ ಎಂದು ಮಾಹಿತಿ ನೀಡಿದ್ದಾರೆ.

    ಎಸ್‍ಬಿಐ 2019 ಮಾರ್ಚ್ ನಿಂದಲೇ ಯೋನೊ ಕ್ಯಾಶ್ ಸೇವೆಯನ್ನು ಪ್ರಾರಂಭಿಸಿದೆ. ಇದು ಗ್ರಾಹಕರಿಗೆ ಡೆಬಿಟ್ ಕಾರ್ಡ್ ಇಲ್ಲದೆ ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಇದು ಸುಲಭ ಮತ್ತು ಸುರಕ್ಷಿತವಾಗಿದೆ. ಆರಂಭದಲ್ಲಿ ಈ ಸೌಲಭ್ಯವು 16,500 ಎಟಿಎಂಗಳಲ್ಲಿ ಲಭ್ಯವಿತ್ತು.

     

     

    ಎಸ್‍ಬಿಐ  ಗ್ರಾಹಕರು ತಮ್ಮ ಮೊಬೈಲ್‍ನಲ್ಲಿ ಯೋನೊ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಬಳಿಕ ಅದರಲ್ಲಿರುವ You Only Need one -YONO ನಲ್ಲಿರುವ ಕ್ವಿಕ್ ಲಿಂಕ್ ವಿಭಾಗದಲ್ಲಿ ಯೋನೊ ಕ್ಯಾಷ್ ವಿಭಾಗಕ್ಕೆ ಹೋಗಿ ಹಣ ಪಡೆಯುವ ಪ್ರಕ್ರಿಯೆ ಆರಂಭಿಸಬೇಕು. ಬಳಿಕ 6 ಅಂಕಿಯ ರಹಸ್ಯ ಸಂಖ್ಯೆ(ಯೋನೊ ಕ್ಯಾಷ್ ಪಿನ್) ನಮೂದಿಸಬೇಕು. ಇದಕ್ಕೆ ಪ್ರತಿಯಾಗಿ ಗ್ರಾಹಕರ ಮೊಬೈಲ್‍ಗೆ 6 ಅಂಕಿಯ ಇನ್ನೊಂದು ಸಂದೇಶ (ಓಟಿಪಿ) ಎಸ್‍ಎಂಎಸ್ ಮೂಲಕ ಬರುತ್ತದೆ. ಹತ್ತಿರದಲ್ಲಿರುವ ಯೋನೊ ಕ್ಯಾಷ್ ಪಾಯಿಂಟ್ ಎಟಿಎಂನಲ್ಲಿ ಕ್ಯಾಷ್ ಪಿನ್ ಹಾಗೂ ಎಸ್‍ಎಂಎಸ್ ಮೂಲಕ ಬಂದಿರುವ ಸಂಖ್ಯೆಯನ್ನು ನಮೂದಿಸಿ ಹಣ ಪಡೆಯಬಹುದು.

  • ಗಮನಿಸಿ, ಎಸ್‍ಬಿಐ ಎಟಿಎಂ ವಿಥ್ ಡ್ರಾ ಮಿತಿ ಇಳಿಕೆ- ಅ.31 ರಿಂದ ಜಾರಿ

    ಗಮನಿಸಿ, ಎಸ್‍ಬಿಐ ಎಟಿಎಂ ವಿಥ್ ಡ್ರಾ ಮಿತಿ ಇಳಿಕೆ- ಅ.31 ರಿಂದ ಜಾರಿ

    ನವದೆಹಲಿ: ಭಾರತದ ಅತಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಗ್ರಾಹಕರ ಎಟಿಎಂ ಡ್ರಾ ಮಿತಿಯನ್ನು ಕಡಿತಗೊಳಿಸಲು ಮುಂದಾಗಿದೆ. ದಿನವೊಂದರ ಗ್ರಾಹಕರ ಎಟಿಎಂ ಡ್ರಾ ಮಿತಿ ಸದ್ಯ 40 ಸಾವಿರ ರೂಪಾಯಿ ಇದ್ದು, ಇದನ್ನು 20 ಸಾವಿರ ರೂಪಾಯಿಗೆ ಇಳಿಸಲು ನಿರ್ಧಾರ ಮಾಡಿದೆ.

    ಈ ನೂತನ ನಿಯಮವು ಇದೇ ಅಕ್ಟೋಬರ್ 31 ರಿಂದ ಜಾರಿಗೆ ಬರಲಿದೆ. ಇನ್ನು ಮುಂದೆ ಕ್ಲಾಸಿಕ್ ಮತ್ತು ಮೆಸ್ಟ್ರೊ ಕಾರ್ಡ್ ಹೊಂದಿದವರು ದಿನಕ್ಕೆ ಗರಿಷ್ಟ ಕೇವಲ 20 ಸಾವಿರ ರೂ. ಮಾತ್ರ ಡ್ರಾ ಮಾಡಬಹುದು ಎಂದು ಎಸ್‍ಬಿಐ ತನ್ನ ವೆಬ್‍ಸೈಟ್ ನಲ್ಲಿ ಹೇಳಿದೆ.

    ಎಸ್‍ಬಿಐ ಗೋಲ್ಡ್ ಮತ್ತು ಪ್ಲಾಟಿನಂ ಬಳಕೆದಾರರಿಗೆ ಹೊಸ ನಿಯಮ ಅನ್ವಯವಾಗುವುದಿಲ್ಲ. ಗೋಲ್ಡ್ ಕಾರ್ಡ್ ಹೊಂದಿರುವವರು 50 ಸಾವಿರ, ಪ್ಲಾಟಿನಂ ಕಾರ್ಡ್ ಹೊಂದಿರುವವರು 1 ಲಕ್ಷ ರೂ. ವರೆಗೆ ಹಣವನ್ನು ಡ್ರಾ ಮಾಡಿಕೊಳ್ಳಬಹುದು. ಇದನ್ನು ಓದಿ: ಎಸ್‍ಬಿಐ ಎಟಿಎಂ ವಿತ್ ಡ್ರಾವಲ್ ಲಿಮಿಟ್ ಹಿಂದಿರುವ ಅಸಲಿ ಸತ್ಯ ಏನು? ಸೈಬರ್ ತಜ್ಞರು ಹೇಳ್ತಾರೆ ಓದಿ

    ಕ್ಲಾಸಿಕ್ ಮತ್ತು ಮೆಸ್ಟ್ರೊ ಡೆಬಿಟ್ ಕಾರ್ಡ್ ಬಳಕೆದಾರರು ತಮ್ಮ ದಿನನಿತ್ಯದ ಎಟಿಎಂ ಹಣ ಪಡೆಯುವ ಮಿತಿಯನ್ನ ಹೆಚ್ಚಿಸಿಕೊಳ್ಳಬೇಕಾದರೆ ಅಧಿಕ ಮಿತಿಯ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು. ದೇಶದಲ್ಲಿ ಎಟಿಎಂ ನಿಂದ ಹಣ ಕಳವು, ಮೋಸದ ವ್ಯವಹಾರಗಳನ್ನ ತಡೆಯಲು ಮತ್ತು ಡಿಜಿಟಲ್ ವ್ಯವಹಾರವನ್ನ ಉತ್ತೇಜಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಸ್‍ಬಿಐ ತಿಳಿಸಿದೆ. ಇದನ್ನು ಓದಿ: ಯಾಕೆ ಹಳೆ ಎಟಿಎಂ ಕಾರ್ಡ್ ಚೇಂಜ್ ಮಾಡಬೇಕು? ಏನಿದು ಇಎಂವಿ ಚಿಪ್ ಕಾರ್ಡ್? ಎಲ್ಲಿ ಸಿಗುತ್ತೆ?

    ಇತ್ತೀಚಿನ ದಿನಗಳಲ್ಲಿ ಎಸ್‍ಬಿಐ ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ ಕಾರ್ಯವೈಖರಿಯನ್ನು ಬದಲಾಯಿಸುತ್ತಿದೆ. ಗ್ರಾಹಕರು ತಮ್ಮ 15ಜಿ/ಹೆಚ್ (ಶ್ರೀಸಾಮಾನ್ಯರು/ಹಿರಿಯನಾಗರಿಕರು) ಅರ್ಜಿಯನ್ನ ಯಾವ ಶಾಖೆಯಲ್ಲಿ ಬೇಕಾದರೂ ಸಲ್ಲಿಸಬಹುದು ಮತ್ತು ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಕೂಡ ಕಲ್ಪಿಸಿದೆ ಎಂದು ತಿಳಿಸಿದೆ.

    ಒಟ್ಟು 39.50 ಕೋಟಿ ಗ್ರಾಹಕರಿಗೆ ಡೆಬಿಟ್ ಕಾರ್ಡ್ ಗಳನ್ನ ವಿತರಿಸಿದ್ದು, ಸುಮಾರು 26 ಕೋಟಿ ದಿನನಿತ್ಯ ಬಳಕೆದಾರರಿದ್ದಾರೆ ಎಂದು ಎಸ್‍ಬಿಐ ಮಾರ್ಚ್ ನಲ್ಲಿ ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಾಕೆ ಹಳೆ ಎಟಿಎಂ ಕಾರ್ಡ್ ಚೇಂಜ್ ಮಾಡಬೇಕು? ಏನಿದು ಇಎಂವಿ ಚಿಪ್ ಕಾರ್ಡ್? ಎಲ್ಲಿ ಸಿಗುತ್ತೆ?

    ಯಾಕೆ ಹಳೆ ಎಟಿಎಂ ಕಾರ್ಡ್ ಚೇಂಜ್ ಮಾಡಬೇಕು? ಏನಿದು ಇಎಂವಿ ಚಿಪ್ ಕಾರ್ಡ್? ಎಲ್ಲಿ ಸಿಗುತ್ತೆ?

    ಬೆಂಗಳೂರು: ಎಟಿಎಂ ಡೆಬಿಟ್ ಕಾರ್ಡ್ ಬಳಸುವ ಮಂದಿಯ ಮೊಬೈಲ್ ಗೆ ಈಗಾಗಲೇ ಬ್ಯಾಂಕ್ ಗಳು ಮ್ಯಾಗ್ನೆಟಿಕ್ ಸ್ಟ್ರೈಪ್ ಬದಲು ಇಎಂವಿ ಚಿಪ್ ಇರುವ ಎಟಿಎಂ ಕಾರ್ಡ್ ಬಳಸಿ ಎಂದು ಮೆಸೇಜ್ ಕಳುಹಿಸಲು ಆರಂಭಿಸಿವೆ. ಬ್ಯಾಂಕ್ ಕಳುಹಿಸಿದ ಈ ಮಸೇಜ್ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳದೇ ಸ್ಪಾಮ್ ಮೆಸೇಜ್ ಎಂದು ಭಾವಿಸಿಬೇಡಿ. ಈ ಮಸೇಜ್ ನಿರ್ಲಕ್ಷಿಸಿದರೆ ಡಿಸೆಂಬರ್ 31 ರ ನಂತರ ನಿಮ್ಮ ಎಟಿಎಂ ಕಾರ್ಡ್ ನಿಷ್ಕ್ರೀಯವಾಗಲಿದೆ.

    ಹೌದು, ದೇಶದಲ್ಲಿ ಆನ್‍ಲೈನ್ ವಂಚಕರ ಹಾವಳಿ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಎಲ್ಲ ಬ್ಯಾಂಕ್ ಗಳಿಗೆ ಇಎಂವಿ ಚಿಪ್ ಇರುವ ಡೆಬಿಟ್ ಕಾರ್ಡ್ ನೀಡುವಂತೆ ಸೂಚಿಸಿದೆ. ಹೀಗಾಗಿ ಏನಿದು ಇಎಂವಿ ಚಿಪ್? ಹೇಗೆ ಭಿನ್ನ? ಬ್ಯಾಂಕ್ ಖಾತೆಗಳಿಗೆ ಸುರಕ್ಷತೆ ನೀಡುತ್ತಾ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರ ನೀಡಲಾಗಿದೆ.

    ಏನಿದು ಇಎಂವಿ ಚಿಪ್ ಕಾರ್ಡ್?
    ಸುಲಭವಾಗಿ ಹೇಳುವುದಾದರೆ ಮೊಬೈಲ್ ನಲ್ಲಿ ಕರೆ ಮಾಡಬೇಕಾದರೆ ಒಂದು ಸಿಮ್ ಇರಬೇಕೋ ಹಾಗೆಯೇ ಈ ಇಎಂವಿಯಲ್ಲೂ ಒಂದು ಚಿಪ್ ಇರುತ್ತದೆ. ಯುರೊಪೇ  ಮಾಸ್ಟರ್‌ಕಾರ್ಡು ವೀಸಾ ಹೃಸ್ವ ರೂಪವೇ ಇಎಂವಿ. ಈ ಹಿಂದೆ ಬಳಕೆಯಾಗುತ್ತಿದ್ದ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಗಿಂತ ಈ ಕಾರ್ಡ್ ಹೆಚ್ಚು ರಕ್ಷಣೆ ನೀಡುವ ಕಾರಣ ಎಲ್ಲ ಬ್ಯಾಂಕ್ ಗಳು ಈಗ ಇಎಂವಿ ಚಿಪ್ ಇರುವ ಎಟಿಎಂ ಕಾರ್ಡ್ ಗಳನ್ನೇ ನೀಡುತ್ತಿವೆ.

    ಹಳೆ ಎಟಿಎಂ ಕಾರ್ಡ್ ಅಪಾಯಕಾರಿ ಯಾಕೆ?
    ಕಾರ್ಡ್ ಹಿಂದಿರುವ ಕಪ್ಪು ಬಣ್ಣದ ಮ್ಯಾಗ್ನೆಟಿಕ್ ಸ್ಟ್ರೈಪ್ ನಲ್ಲಿ ಎನ್ ಕ್ರಿಪ್ಟ್ ಆಗಿರುವ ಡೇಟಾಗಳನ್ನು ಕದಿಯುವುದು ಸುಲಭ. ಗ್ರಾಹಕರ ಕಾರ್ಡ್ ಕಳೆದು ಹೋದರೆ ಅಥವಾ ಕಳ್ಳರ ಪಾಲಾದರೆ ಸುಲಭವಾಗಿ ಖಾತೆಯಿಂದಲೇ ಹಣವನ್ನು ಎಗರಿಸಲು ಸಾಧ್ಯವಿದೆ. ಈಗ ನೀವು ಎಟಿಎಂನಲ್ಲಿ ಹಣ ಡ್ರಾ ಮಾಡಿದವರ ಖಾತೆಯಿಂದ ಕಳ್ಳರು ಹಣ ದೋಚಿದ ಸುದ್ದಿಯನ್ನು ನೀವು ಓದಿರಬಹುದು. ಎಟಿಎಂ ಗ್ರಾಹಕರ ಕಾರ್ಡ್ ಕಳೆದು ಹೋದರೆ, ಇಲ್ಲವೇ ಕಳ್ಳರ ಪಾಲಾದರೆ ಸುಲಭವಾಗಿ ಹಣ ದೋಚಲು ಹಳೆಯ ಕಾರ್ಡ್ ಗಳಲ್ಲಿ ಅವಕಾಶವಿದೆ. ಇವಿಎಂ ಚಿಪ್ ಆಧಾರಿತ ಕಾರ್ಡುಗಳು ಗ್ರಾಹಕರನ್ನು ರಕ್ಷಿಸುತ್ತದೆ. ಎಟಿಎಂ ಯಂತ್ರಗಳಿಗೆ ವಂಚಕರು ಪುಟ್ಟ ಸ್ಕಿಮ್ಮಿಂಗ್ ಉಪಕರಣವನ್ನು ಇಟ್ಟು ಕಳವು ಮಾಡುತ್ತಾರೆ. ಇವುಗಳನ್ನು ತಡೆಯಲು ಇಎಂವಿ ಕಾರ್ಡ್ ಸಮರ್ಥವಾಗಿದೆ.

     

    ಭಿನ್ನ ಹೇಗೆ?
    ಹಿಂದಿನ ಎಟಿಎಂ ಕಾರ್ಡ್ ನಲ್ಲಿ ಗ್ರಾಹಕರ ಮಾಹಿತಿಗಳು ಮ್ಯಾಗ್ನೆಟಿಕ್ ಸ್ಟ್ರೈಪ್ ನಲ್ಲಿ ಎನ್ ಕ್ರಿಪ್ಟ್ ಮಾಡಲಾಗಿರುತ್ತದೆ. ಆದರೆ ಇಎಂವಿಯಲ್ಲಿ ಗ್ರಾಹಕರ ಮಾಹಿತಿಗಳು ಚಿಪ್ ಒಳಗಡೆ ಇರುತ್ತದೆ. ಇಎಂವಿ ಚಿಪ್ ಕಾರ್ಡ್ ಮೂಲಕ ನಡೆದ ವಹಿವಾಟಿನ ಪರಿಶೀಲನೆಗೆ ಒಂದು ವಿಶೇಷ ವಹಿವಾಟು ಕೋಡ್ ಇರುತ್ತದೆ. ಈ ಕೋಡ್ ಬಳಕೆದಾರರ ವೆರಿಫಿಕೇಶನ್ ಮಾಡುತ್ತದೆ.

    ಹೊಸ ಎಟಿಎಂ ಎಲ್ಲಿ ಸಿಗುತ್ತೆ?
    ಗ್ರಾಹಕರು ಮೊಬೈಲ್ ಅಪ್ಲಿಕೇಶನ್ ಅಥವಾ ನೆಟ್ ಬ್ಯಾಕಿಂಗ್ ಮೂಲಕ ಹೊಸ ಎಟಿಎಂ ಕಾರ್ಡ್ ಪಡೆದುಕೊಳ್ಳಬಹುದು. ಅಥವಾ ನೇರವಾಗಿ ಬ್ಯಾಂಕ್ ಖಾತೆಗೆ ತೆರಳಿ ಕಾರ್ಡ್ ಗಾಗಿ ಮನವಿ ಸಲ್ಲಿಸಬಹುದು. ಈ ಸೇವೆಗೆ ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ.