Tag: debate

  • ಚುನಾವಣಾ ಚರ್ಚೆಯಲ್ಲಿ ನಾವು ಭಾಗವಹಿಸಲ್ಲ : ಕಾಂಗ್ರೆಸ್ ಪ್ರಕಟಣೆ

    ಚುನಾವಣಾ ಚರ್ಚೆಯಲ್ಲಿ ನಾವು ಭಾಗವಹಿಸಲ್ಲ : ಕಾಂಗ್ರೆಸ್ ಪ್ರಕಟಣೆ

    ನವದೆಹಲಿ: ಪಂಚ ರಾಜ್ಯಗಳು ಚುನಾವಣಾ ಚರ್ಚೆಯಲ್ಲಿ ಕಾಂಗ್ರೆಸ್ ತನ್ನ ವಕ್ತಾರರನ್ನು ಕಳುಹಿಸದಿರುವ ತೀರ್ಮಾನವನ್ನು ತೆಗೆದುಕೊಂಡಿದೆ.

    ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸುರ್ಜೆವಾಲಾ ಪ್ರತಿಕ್ರಿಯಿಸಿ, ರಾಷ್ಟ್ರವು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ, ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರ ಕುಸಿದುಬಿದ್ದಾಗ, ಅವರನ್ನು ಹೊಣೆಗಾರರನ್ನಾಗಿ ಮಾಡದೇ ಚುನಾವಣಾ ಗೆಲುವುಗಳು ಮತ್ತು ನಷ್ಟಗಳ ಬಗ್ಗೆ ಚರ್ಚಿಸುವುದು ಸರಿಯಲ್ಲ. ಹೀಗಾಗಿ ನಮ್ಮ ವಕ್ತಾರರನ್ನು ಚುನಾವಣಾ ಚರ್ಚೆಗಳಿಂದ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಮಾಧ್ಯಮ ಸ್ನೇಹಿತರು ಬಯಸುವ ಯಾವುದೇ ಕಾಮೆಂಟ್‍ಗೆ ನಾವು ಲಭ್ಯವಿರುತ್ತೇವೆ. ನಾವು ಗೆಲ್ಲಬಹುದು, ನಾವು ಸೋಲಬಹುದು. ಆದರೆ ಜನರು ಆಮ್ಲಜನಕ, ಹಾಸಿಗೆಗಳು, ಔಷಧಿಗಳು, ವೆಂಟಿಲೇಟರ್ ಗಳನ್ನು ಹುಡುಕುತ್ತಿರುವ ಸಮಯದಲ್ಲಿ ಅವರ ಜೊತೆ ನಿಲ್ಲುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಾವು ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

  • ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿಕೆ

    ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿಕೆ

    ಕೀನ್ಯಾ: ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿದ ವಿಚಿತ್ರ ಪ್ರಸಂಗವೊಂದು ಕಿನ್ಯಾದಲ್ಲಿ ನಡೆದಿದೆ.

    ಕೀನ್ಯಾದ ಹೇಮಾ ಬೇ ಕೌಂಟಿ ಅಸೆಂಬ್ಲಿಯಲ್ಲಿ ಬುಧವಾರ ಕಲಾಪ ನಡೆದಿತ್ತು. ಈ ವೇಳೆ ಸದಸ್ಯರೊಬ್ಬರು ಹೂಸು ಬಿಟ್ಟಿದ್ದರಿಂದ ಭಾರೀ ದುರ್ವಾಸನೆ ಉಂಟಾಗಿತ್ತು. ಪರಿಣಾಮ ಕಲಾಪದಲ್ಲಿದ್ದ ಸದಸ್ಯರು ಹಾಗೂ ಸಿಬ್ಬಂದಿ ಪರದಾಡುವಂತಾಗಿತ್ತು.  ಇದನ್ನೂ ಓದಿ: ಹೂಸಿನ ದುರ್ವಾಸನೆಯನ್ನು ಸುವಾಸನೆಯಾಗಿ ಮಾಡೋ ಮಾತ್ರೆ ಮಾರುಕಟ್ಟೆಗೆ ಎಂಟ್ರಿ

    ಅಸೆಂಬ್ಲಿಯಲ್ಲಿ ದುರ್ವಾಸನೆ ಹರಡುತ್ತಿದ್ದಂತೆ ಅಸಮಾಧಾನ ಹೊರ ಹಾಕಿದ ಸ್ಪೀಕರ್ ಎಡ್ವಿನ್ ಕಾಕಾಚ್ ಅವರು, ನಮ್ಮ ಸದಸ್ಯದಲ್ಲಿ ಒಬ್ಬರು ಹೂಸು ಬಿಟ್ಟಿದ್ದಾರೆ. ಅವರು ಯಾರು ಅಂತ ನನಗೆ ಗೊತ್ತಿದೆ ಎಂದು ಹೇಳಿದರು.

    ತಕ್ಷಣವೇ ಆರೋಪ ಎದುರಿಸಿದ ಸದಸ್ಯರೊಬ್ಬರು ಎದ್ದು ನಿಂತು, ನಾನು ಹೂಸು ಬಿಟ್ಟಿಲ್ಲ. ಸಹೋದ್ಯೋಗಿಗಳ ಮುಂದೆ ಅಂತಹ ಕೆಟ್ಟ ಕೆಲಸ ಮಾಡುವವನು ನಾನಲ್ಲ ಎಂದು ಸ್ಪಷ್ಟನೆ ನೀಡಿದರು.

    ಸ್ಪೀಕರ್ ಎಡ್ವಿನ್ ಕಾಕಾಚ್ ಅವರು ಸಿಬ್ಬಂದಿಯನ್ನು ಕರೆದು ಏರ್ ಫ್ರೆಶನರ್, ವೆನಿಲ್ಲಾ ಅಥವಾ ಸ್ಟ್ರಾಬೆರಿ ಸುಗಂಧವನ್ನು ತಂದು ರೂಮ್‍ಗೆ ಸ್ಪೇಪ್ರೆ ಮಾಡಿ ಎಂದು ಸೂಚನೆ ನೀಡಿದರು. ಇದೇ ವೇಳೆ, ಇಂತಹ ದುರ್ವಾಸನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿ, ಸದನವನ್ನು ಕೆಲ ಸಮಯ ಮುಂದೂದರು ಎಂದು ವರದಿಯಾಗಿದೆ.

    ಹೂಸು ವಾಸನೆಗೆ ಕಲಾಪ ಮುಂದೂಡಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಕಿನ್ಯಾ ಸಂಸತ್‍ಗೆ ಮಹಿಳಾ ಸದಸ್ಯರೊಬ್ಬರು ಮಗುವನ್ನು ಹೊತ್ತುಕೊಂಡು ಬಂದಿದ್ದರು. ಮಗುವನ್ನು ನೋಡಿದ ಸ್ಪೀಕರ್ ಅವರು ಮಗುವನ್ನು ಎತ್ತಿಕೊಂಡು ಕಲಾಪದಿಂದ ಹೊರ ಹೋಗುವಂತೆ ಸೂಚನೆ ನೀಡಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.

  • ಉತ್ತರ, ದಕ್ಷಿಣ ಎಂದು ಯಾವುದೇ ತಾರತಮ್ಯ ಮಾಡಿಲ್ಲ – ಬಜೆಟ್ ಟೀಕೆಗೆ ಸಿಎಂ ತಿರುಗೇಟು

    ಉತ್ತರ, ದಕ್ಷಿಣ ಎಂದು ಯಾವುದೇ ತಾರತಮ್ಯ ಮಾಡಿಲ್ಲ – ಬಜೆಟ್ ಟೀಕೆಗೆ ಸಿಎಂ ತಿರುಗೇಟು

    ಬೆಂಗಳೂರು: ಬಜೆಟ್ ಬಗ್ಗೆ ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಬಿಜೆಪಿ ಅವರಿಗೆ ನನ್ನ ಬಜೆಟ್ ಅರ್ಥವೇ ಮಾಡಿಕೊಂಡಿಲ್ಲ. ಏನೇನೋ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಸಿಎಂ ಎಚ್‍ಡಿಕೆ, ಉತ್ತರ, ದಕ್ಷಿಣ ಎಂದು ಯಾವುದೇ ತಾರತಮ್ಯ ಮಾಡಿಲ್ಲ. ನನ್ನ ಬಜೆಟ್ ನ ಸೂಕ್ಷ್ಮ ವಿಚಾರಗಳನ್ನ ಅರ್ಥ ಮಾಡಿಕೊಳ್ಳದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿದ್ದಾರೆ. ಮೋದಿ 4 ವರ್ಷಗಳಲ್ಲಿ ಬೆಲೆ ಜಾಸ್ತಿ ಮಾಡಿದಾಗ ಯಾರು ಮಾತನಾಡಿಲ್ಲ. ಆದರೆ ಈಗ ಎಲ್ಲರೂ ಮಾತನಾಡುತ್ತಿದ್ದಾರೆ. 34 ಸಾವಿರ ಕೋಟಿ ನಾನು ದರೋಡೆಕೋರಿಗೆ ಕೊಡುತ್ತಿಲ್ಲ. ನನ್ನ ಮನೆಗೆ ತೆಗೆದುಕೊಂಡು ಹೋಗುತ್ತಿಲ್ಲ. ಜನರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯರ ಯಾವ ಯೋಜನೆಯನ್ನು ನಿಲ್ಲಿಸಿಲ್ಲ. ಹೀಗಿದ್ದರು ಬಿಜೆಪಿ ನಾಯಕರು ಲಂಗು ಲಗಾಮು ಇಲ್ಲದೆ ಮಾತನಾಡುತ್ತಾರೆ. ಎಲ್ಲದ್ದಕ್ಕೂ ಅಧಿವೇಶನದಲ್ಲಿ ಉತ್ತರ ಕೊಡುತ್ತೇನೆ. ನಾನು ಓಡಿ ಹೋಗೋದಿಲ್ಲ ಎಂದರು.

    ನಾನು ಅನ್ನದಾತನ ಮುಖ್ಯಮಂತ್ರಿ, ಆದರೆ ಮಾಧ್ಯಮಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ತಪ್ಪು ಸುದ್ದಿಗಳಿಂದ ದಾರಿ ತಪ್ಪಿಸಬಾರದು. ಸಾಲಮನ್ನಾದಿಂದ ಕೇವಲ ಒಕ್ಕಲಿಗರಿಗೆ ಸಹಾಯ ಆಗುವುದಿಲ್ಲ. ಎಲ್ಲಾ ಭಾಗದ ರೈತರಿಗ ಅನುಕೂಲವಾಗುತ್ತೆ. ಸುಳ್ಳು ಮಾಹಿತಿ ನೀಡಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಬೇಡಿ ಎಂದು ಮನವಿ ಮಾಡಿದರು.

    ಇದೇ ವೇಳೆ ಒಕ್ಕಲಿಗರಿಗೆ ಹೆಚ್ಚು ಸಹಾಯ ಆಗುತ್ತೆ ಎಂಬ ಅಂಕಿ – ಅಂಶ ನೀಡಿದವರ ವಿರುದ್ಧ ಕ್ರಮ ತೆಗೆದುಕೊಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಯಾರ ಮೇಲೆ ಕ್ರಮ ತೆಗೆದುಕೊಳ್ಳಲಿ. ಮಾಧ್ಯಮಗಳ ಮೇಲೆ ಕೇಸ್ ಹಾಕಬೇಕು ಅಷ್ಟೇ. ಹೀಗಾಗಿ ಸತ್ಯ ಸುದ್ದಿ ಪ್ರಸಾರ ಮಾಡಿ ಎಂದು ಮನವಿ ಮಾಡಿದರು. ಇದೇ ವೇಳೆ ರೈತರಿಗೂ ಮನವಿ ಮಾಡಿದ ಸಿಎಂ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನೀವು ಆತ್ಮಹತ್ಯೆ ಮಾಡಿಕೊಂಡರೆ ಸಾಲಮನ್ನಾ ಮಾಡಿದ್ದು ಪ್ರಯೋಜನ ಆಗುವುದಿಲ್ಲ. ನಿಮ್ಮೆಲ್ಲರ ಅಭಿವೃದ್ಧಿಗೆ ನಾನು ಕೆಲಸ ಮಾಡುತ್ತೇನೆ ಎಂದರು.

    ಮಾಜಿ ಡಿಸಿಎಂ ಆರ್.ಅಶೋಕ್ ವಿರುದ್ಧ ಕಿಡಿಕಾರಿದ ಸಿಎಂ, ಅಶೋಕ ಚಕ್ರವರ್ತಿಗಳು ಬೆಂಗಳೂರಿಗೆ ಏನು ಮಾಡಿಲ್ಲ. ಈ ಕುರಿತು ಚರ್ಚೆಗೆ ನಾನು ಸಿದ್ಧ. ಅಧಿವೇಶನದಲ್ಲೇ ಎಲ್ಲರಿಗೂ ಉತ್ತರ ಕೊಡುತ್ತೇನೆ. ಟ್ವಿಟ್ಟರ್ ನಲ್ಲಿ ಬಿಜೆಪಿ ನಾಯಕರ ವಿರೋಧಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿಎಂ, ನನ್ನ ಹೆಸರು ಕೆಡಿಸಬೇಕು ಎಂದು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

  • ವಯಸ್ಸಾದ ಯಡಿಯೂರಪ್ಪ ಯಾಕೆ ಸಿಎಂ ಅಭ್ಯರ್ಥಿ? ಸಂವಾದದಲ್ಲಿ ಸ್ಮೃತಿ ಇರಾನಿಗೆ ಯುವತಿ ಪ್ರಶ್ನೆ

    ವಯಸ್ಸಾದ ಯಡಿಯೂರಪ್ಪ ಯಾಕೆ ಸಿಎಂ ಅಭ್ಯರ್ಥಿ? ಸಂವಾದದಲ್ಲಿ ಸ್ಮೃತಿ ಇರಾನಿಗೆ ಯುವತಿ ಪ್ರಶ್ನೆ

    ಬೆಳಗಾವಿ: ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತದೆ. ಆದರೇ ಬಿಜೆಪಿ ಯಾಕೆ ವಯಸ್ಸಾದ ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ ಎಂದು ಯುವತಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.

    ನಗರದ ಕೆಎಲ್‍ಇ ಜಿರಿಗೆ ಭವವನದಲ್ಲಿ ನಡೆದ ಕರುನಾಡ ಜಾಗೃತಿ ಮಹಿಳಾ ಸಂವಾದದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಇಂತಹದೊಂದು ಪ್ರಶ್ನೆಯನ್ನು ಕೇಳಲಾಗಿದೆ. ಪ್ರಶ್ನೆಗೆ ಉತ್ತರಿಸಿದ ಸ್ಮೃತಿ ಇರಾನಿ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಉದಾಹರಣೆ ನೀಡಿ ವಯಸ್ಸಿಗಿಂತ ಅನುಭವ ಮುಖ್ಯ ಅಂದ್ರು.

    ಇದೇ ಸಂವಾದ ಕಾರ್ಯಕ್ರಮದಲ್ಲಿ ದೇಶದಲ್ಲಿ ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡುತ್ತೀರಿ ಆದರೇ ಎಂಟಿಎಂ ನಲ್ಲಿ ಹಣ ಕೊರತೆ ಉಂಟಾಗಿದೆ ಅಲ್ಲ ಇದಕ್ಕೆ ಎನಂತಿರಿ ಅಂತಾ ಪ್ರಶ್ನೆ ಕೇಳಲಾಯಿತು. ಎಟಿಎಂಗಳಲ್ಲಿ ಹಣವಿದ್ದು, ನೋಟ್ ಅಮಾನೀಕರಣದ ವೇಳೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಇನ್ನೂ ಕೆಲವರು ಕೃತಕ ಅಭಾವ ಸೃಷ್ಠಿಸಲು ಹೊರಟ್ಟಿದ್ದಾರೆ. ರಾಜಕಾರಣಿಗಳು ಹಣ ಹಂಚಿಕೆ ಮಾಡಲು ಹಣ ಸಂಗ್ರಹ ಮಾಡಿರುವ ಅನುಮಾನವಿದೆ ಅಂತಾ ತಿಳಿಸಿದ್ರು.

  • ಸಂಸತ್ತಿನಲ್ಲಿ ಫೈಟಿಂಗ್: ಮೈಕ್ ಹಿಡಿದು, ಚೇರ್ ಎಸೆದು ಉಗಾಂಡ ಎಂಪಿಗಳ ಕಿತ್ತಾಟ

    ಸಂಸತ್ತಿನಲ್ಲಿ ಫೈಟಿಂಗ್: ಮೈಕ್ ಹಿಡಿದು, ಚೇರ್ ಎಸೆದು ಉಗಾಂಡ ಎಂಪಿಗಳ ಕಿತ್ತಾಟ

    ಕ್ಯಾಂಪಲ: ಉಗಾಂಡದ ಸಂಸತ್ ಅಧಿವೇಶನದ ವೇಳೆ ಸದಸ್ಯರು ಚರ್ಚೆಯೊಂದರಲ್ಲಿ ಆಕ್ರೋಶ ಭರಿತರಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

    ಉಂಗಾಡ ಅಧ್ಯಕ್ಷರಾಗಲು ಗರಿಷ್ಟ ವಯಸ್ಸಿನ ಮಿತಿಯನ್ನು ವಿಸ್ತರಿಸಬೇಕು ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆಯುತಿತ್ತು. ಈ ವೇಳೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಮಾರಾಮಾರಿ ನಡೆದು ತಳ್ಳಾಟ ನೂಕಾಟ ನಡೆದಿದೆ.

    ಉಗಾಂಡದ ಕಾನೂನಿನ ಪ್ರಕಾರ 75 ವರ್ಷ ಮೀರಿದವರು ಅಧ್ಯಕ್ಷರಾಗಲು ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ. ಈಗಿನ ಅಧ್ಯಕ್ಷ ಯೊವೆರೆ ಮ್ಯೂಸೆವೆನಿ ಅವರಿಗೆ 73 ವರ್ಷವಾಗಿದ್ದು ಮತ್ತೆ ಅಧ್ಯಕ್ಷರಾಗಲು ಬಯಸಿದ್ದಾರೆ. ಹೀಗಾಗಿ ಕಾನೂನು ತಿದ್ದುಪಡಿ ಮಾಡಲು ಆಡಳಿತ ಪಕ್ಷದವರು ಪಟ್ಟು ಹಿಡಿದರೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

    ಚರ್ಚೆ ವಿಕೋಪಕ್ಕೆ ತಿರುಗಿ ಮೈಕ್ ಹಿಡಿದು ಟೇಬಲ್ ಮೇಲೆ ನಿಂತು ಸದಸ್ಯರು ರಂಪಾಟ ಮಾಡಿದ್ದಾರೆ. ಪುರುಷ ಸದಸ್ಯರು ಮಹಿಳಾ ಸದಸ್ಯೆಯ ಮೇಲೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ನೋಡಬಹುದಾಗಿದೆ.