Tag: Deathnote

  • ಜ್ಯೋತಿಷಿ ಮಾತು ಕೇಳಿ ಮಕ್ಕಳನ್ನ ಕೊಂದು ಆತ್ಮಹತ್ಯೆ ಮಾಡ್ಕೊಂಡ ತಾಯಿಯ ಡೆತ್ ನೋಟ್ ವೈರಲ್.!

    ಜ್ಯೋತಿಷಿ ಮಾತು ಕೇಳಿ ಮಕ್ಕಳನ್ನ ಕೊಂದು ಆತ್ಮಹತ್ಯೆ ಮಾಡ್ಕೊಂಡ ತಾಯಿಯ ಡೆತ್ ನೋಟ್ ವೈರಲ್.!

    ಚಿಕ್ಕಬಳ್ಳಾಪುರ: ಜ್ಯೋತಿಷಿ ಮಾತು ಕೇಳಿ ತನ್ನಿಬ್ಬರು ಮಕ್ಕಳನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ತಾಯಿ ಬರೆದಿರುವ ಡೆತ್ ನೋಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಚಿಕ್ಕಬಳ್ಳಾಪುರ ನಗರದ ಮುನಿಸಿಪಾಲ್ ಕಾಲೇಜು ಹಿಂಭಾಗದ ಬಡಾವಣೆಯಲ್ಲಿ ಜನವರಿ 27 ರಂದು ತಾಯಿ ಉಷಾ ತನ್ನ ಮಗನಾದ ಶಮಂತ್ ಹಾಗೂ ಮಗಳಾದ ಶಾನವಿಗೆ ನಿದ್ರೆ ಮಾತ್ರೆ ಹಾಕಿ ಕೊಲೆ ಮಾಡಿದ್ದು, ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಮುಗ್ಧ ಮಕ್ಕಳಿಬ್ಬರನ್ನು ಕೊಂದು ತಾಯಿ ನೇಣಿಗೆ ಶರಣು!

    ಡೆತ್‍ನೋಟ್ ನಲ್ಲಿ ಏನಿದೆ?
    ನನ್ನ ಮತ್ತು ಮಕ್ಕಳ ಸಾವಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಾನೇ ಕಾರಣ, ಇದಕ್ಕೆ ಬೇರೆ ಯಾರು ಜವಬ್ದಾರರಲ್ಲ. ನನ್ನ ಮಕ್ಕಳ ಮುಂದಿನ ಭವಿಷ್ಯ ಚೆನ್ನಾಗಿಲ್ಲ ಎಂದು ಒಬ್ಬ ಜ್ಯೋತಿಷಿ ಹೇಳಿದಾಗಿನಿಂದ ನನಗೆ ಬದುಕಿನ ಮೇಲೆ ಆಶಕ್ತಿಯೇ ಕಡಿಮೆ ಆಗಿದೆ. ನಾನು ಜೀವನದಲ್ಲಿ ಹೆಚ್ಚು ಸಂತೋಷವನ್ನು ಕಂಡಿಲ್ಲ. ನನಗೆ ಮಕ್ಕಳೇ ಜೀವನ ಎಂದುಕೊಂಡಿದ್ದೆ. ಆದರೆ ಅವರ ಜೀವನವೇ ಚೆನ್ನಾಗಿಲ್ಲ ಎಂದಾದ ಮೇಲೆ ನನಗೆ ಬದುಕಬೇಕು ಅನ್ನಿಸುತ್ತಿಲ್ಲ. ನನ್ನಿಂದ ಯಾರಿಗೂ ಸಂತೋಷವಿಲ್ಲ, ಒಳ್ಳೆಯ ಹೆಂಡತಿ ಆಗಿಲ್ಲ, ಒಳ್ಳೆಯ ತಾಯಿಯೂ ಆಗಲಿಲ್ಲ. ದೇವರನ್ನು ತುಂಬಾ ನಂಬಿದ್ದೆ. ಆದರೆ ಆತ ನನಗೆ ತುಂಬಾ ಮೋಸ ಮಾಡಿಬಿಟ್ಟ.

    ಅಶೋಕ್ ನನ್ನನ್ನು ಕ್ಷಮಿಸಿ, ನನಗೆ ಒಳ್ಳೆಯ ಕುಟುಂಬ ಸಿಕ್ಕಿತ್ತು. ಆದರೆ ಜ್ಯೋತಿಷಿ ಹೇಳಿದ ಮಾತಿನಿಂದ ನನಗೆ ಧೈರ್ಯ ಸಾಲುತ್ತಿಲ್ಲ. ಅವರು ಹೇಳಿದ್ದ ಅನೇಕ ಮಾತುಗಳು ನಿಜವಾಗಿದೆ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಮಕ್ಕಳನ್ನು ಬಿಟ್ಟು ಹೋಗಲು ಇಷ್ಟವಾಗುತ್ತಿಲ್ಲ. ಆದ್ದರಿಂದ ಅವರನ್ನು ಸಾಯಿಸಲು ನಿರ್ಧರಿಸಿಬಿಟ್ಟೆ. ನನ್ನಂತ ಪಾಪಿ ತಾಯಿ ಯಾರು ಇಲ್ಲ ಎಂದು ಪತಿ, ಕುಟುಂಬ ಮತ್ತು ತಮ್ಮ ಜೀವನದ ಬಗ್ಗೆ ಬರೆದಿದ್ದಾರೆ.

    ಈ ಕುರಿತು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನಮ್ಮಿಬ್ಬರ ಕುಟುಂಬದವ್ರು ಒಳ್ಳೆಯವ್ರಾಗಿದ್ದು, ನಾವೇ ಅರ್ಥಮಾಡ್ಕೊಂಡಿಲ್ಲ- ಪ್ರೇಮಿಗಳು ಆತ್ಮಹತ್ಯೆ

    ನಮ್ಮಿಬ್ಬರ ಕುಟುಂಬದವ್ರು ಒಳ್ಳೆಯವ್ರಾಗಿದ್ದು, ನಾವೇ ಅರ್ಥಮಾಡ್ಕೊಂಡಿಲ್ಲ- ಪ್ರೇಮಿಗಳು ಆತ್ಮಹತ್ಯೆ

    ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಸಿಡಿಲು ಮಲ್ಲಿಕಾರ್ಜುನ ಬೆಟ್ಟದಲ್ಲಿ ಮರವೊಂದಕ್ಕೆ ಪ್ರೇಮಿಗಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ.

    ಡಿ.ಎಲ್.ವೀಣಾ ಹಾಗೂ ಕೆ.ಎನ್.ಸ್ವಾಮಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಬೆಟ್ಟದ ವೀರಭದ್ರನಗುಡಿ ಸಮೀಪ ಮರವೊಂದಕ್ಕೆ ನೇಣು ಬಿಗಿದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಬೆಟ್ಟದ ದೇವಸ್ಥಾನದ ಬಳಿ ಹೋಗಿದ್ದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

    ವೀಣಾ ಹಾಗೂ ಸ್ವಾಮಿ ಇಬ್ಬರೂ ಒಂದೇ ಪತ್ರದಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೋಷಕರು ತಮ್ಮ ಪ್ರೀತಿಯನ್ನು ಒಪ್ಪದಿದ್ದಾಗ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಈ ಪ್ರಕರಣದಲ್ಲಿ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವುದು ಅವರ ಕುಟುಂಬಕ್ಕೆ ಗೊತ್ತಿರಲಿಲ್ಲ. ಇವರಿಬ್ಬರು ಆತ್ಮಹತ್ಯೆ ಮಾಡಿಕೊಂಡ ಮೇಲೆ ಇಬ್ಬರ ಕುಟುಂಬದವರಿಗೂ ಇವರ ಪ್ರೀತಿ ಬಗ್ಗೆ ಗೊತ್ತಾಗಿದೆ ಎನ್ನಲಾಗಿದೆ.

    ನಮ್ಮ ಎರಡು ಕುಟುಂಬದವರು ಒಳ್ಳೆಯವರು. ಆದರೆ ಇವರನ್ನು ನಾವೇ ಅವರನ್ನು ಅರ್ಥ ಮಾಡಿಕೊಂಡಿಲ್ಲ ಎಂದು ವೀಣಾ ಹಾಗೂ ಸ್ವಾಮಿ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ. ಸದ್ಯ ಇವರ ಆತ್ಮಹತ್ಯೆಗೆ ಬೇರೆ ಏನೋ ಕಾರಣ ಇದೆ ಎಂಬುದು ತಿಳಿದು ಬಂದಿದೆ. ಇವರಿಬ್ಬರ ಪ್ರೀತಿ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಎರಡು ಕುಟುಂಬದವರು ಬೆಟ್ಟದಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

    ವೀಣಾ ಹಾಗೂ ಸ್ವಾಮಿ ಇಬ್ಬರು ಒಂದೇ ಪತ್ರದಲ್ಲಿ ಡೆತ್ ನೋಟ್ ಬರೆದು ಮರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಯಾವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಸದ್ಯ ಈ ಬಗ್ಗೆ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಡೆತ್‍ನೋಟ್‍ನಲ್ಲಿ ಏನಿತ್ತು?

    ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಡೆತ್‍ನೋಟ್‍ನಲ್ಲಿ ಏನಿತ್ತು?

    ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ.

    ಜನಾರ್ದನ್(52), ಸುಷ್ಮಿತ(48), ಸುದರ್ಶಿನಿ(29) ಹಾಗೂ ಸೋನಿಕ(6) ಮೃತ ವ್ಯಕ್ತಿಗಳು. ಒಂದೇ ಮನೆಯ ದುರಂತ ಸಾವುಗಳನ್ನು ಕಂಡರೆ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಎನ್ನುವುದು ಪೊಲೀಸರಿಗೆ ಅನುಮಾನ ಮೂಡಿದೆ. ಏಕೆಂದರೆ ಮೃತರ ಪೈಕಿ ಜನಾರ್ದನ್ ಮತ್ತು ಸುಮಿತ್ರ ಮಾತ್ರೆ ಸೇವನೆ ಮಾಡಿ ಮೃತ ಪಟ್ಟಿದರೆ, ಮಗುವನ್ನು ಉಸಿರು ಕಟ್ಟಿಸಿ ಕೊಲೆ ಮಾಡಿ ನಂತರ ಸುಧಾರಾಣಿ ಮುಖಕ್ಕೆ ಪ್ಲಾಸ್ಟಿಕ್ ಕವರ್ ನಲ್ಲಿ ಬಿಗಿದುಕೊಂಡು ಸಾವನಪ್ಪಿದ್ದಾರೆ. ಸಾವಿಗೂ ಮುನ್ನ ಸುಧಾರಾಣಿ ಬರೆದಿರುವ ಡೆತ್ ನೋಟ್ ಹಲವು ವಿಚಾರಗಳನ್ನು ಹೊರ ಹಾಕಿದೆ.

    ಡೆತ್‍ನೋಟ್‍ನಲ್ಲಿ ಏನಿದೆ?
    ನಾನು ಸುಧಾರಾಣಿ. ನಮ್ಮ ಸಾವಿಗೆ ಬೇರೆ ಯಾರು ಕಾರಣ ಅಲ್ಲ ನಾನೇ ಕಾರಣ. ನನಗೆ ಒಂದು ಮನೆ ತೆಗೆದುಕೊಳ್ಳುವ ಕನಸು ಇತ್ತು. ಹೀಗಿರುವಾಗ ಒಬ್ಬನನ್ನು ನಂಬಿದ್ದೆ. ಅದೇ ನಂಬಿಕೆ ಮೇಲೆ ಆತನಿಗೆ 25 ಲಕ್ಷ ಹಣ ಕೊಟ್ಟಿದ್ದೆ. ಆದರೆ ಆ ವ್ಯಕ್ತಿ ಹಣ ತೆಗೆದುಕೊಂಡು ಹೋಗುತ್ತಿರುವಾಗಲೇ ಅಪಘಾತವಾಗಿ ಸಾವನ್ನಪ್ಪಿದ. ನನ್ ಹಣ ಹೋಯ್ತು. ಅಪ್ಪ ಅಮ್ಮನಿಗೆ ವಿಚಾರ ತಿಳಿಸಿದ್ದೆ. ನಂತರ ಹಣ ವಾಪಸ್ ಸಿಗಬಹುದು ಅಂತ ಸಾಕಷ್ಟು ಪ್ರಯತ್ನ ಪಟ್ಟೆ. ತುಂಬಾ ಜನರ ಬಳಿ ಕೇಳಿ ಕೊಂಡಿದ್ದೆ. ಆದರೆ ಪರಿಹಾರ ಸಿಗಲಿಲ್ಲ. ಹಣ ವಾಪಸ್ ಬರುತ್ತೆ ಎನ್ನುವ ನಂಬಿಕೆ ಬರಲಿಲ್ಲ.

    ಕೊನೆಗೆ ಅಪ್ಪ-ಅಮ್ಮನ ಜೊತೆ ಮಾತನಾಡಿ ತೀರ್ಮಾನ ಮಾಡಿದ್ವಿ. ಅಪ್ಪ ಅಮ್ಮನಿಗೆ ಶನಿವಾರ ಮಾತ್ರೆ ಕೊಟ್ಟೆ, ಅವರು ಸಾಯುವ ಮೊದಲು ನಾವೇನಾದರು ಸತ್ತಿಲ್ಲಾ ಅಂದರೆ ನಮ್ಮನ್ನು ಕೊಂದುಬಿಡು ಎಂದು ಹೇಳಿದರು. ನಂತರ ಅಪ್ಪ-ಅಮ್ಮ ಮಾತ್ರೆ ಸೇವಿಸಿದ ನಂತರ ನಾನು ಮಗಳನ್ನು ಕರೆದುಕೊಂಡು ಮನೆ ಬೀಗ ಹಾಕಿಕೊಂಡು ಗಂಡನ ಮನೆಗೆ ಹೋಗಿದ್ದೆ ಅಲ್ಲಿ ಅಡುಗೆ ಮಾಡಿಟ್ಟು, ಸಂಜೆ ವಾಪಸ್ ಬಂದೆ. ಅಷ್ಟರಲ್ಲಿ ಅಪ್ಪ-ಅಮ್ಮ ಸತ್ತು ಹೋಗಿದ್ದರು. ನಂತರ ನಾನು ಮೊದಲೇ ತೀರ್ಮಾನ ಮಾಡಿದ ಹಾಗೆ, ಮನೆ ಒಳಗಿನಿಂದ ಬೀಗ ಹಾಕಿ ಮಗಳು ಮೋನಿಕಾಳನ್ನು ಉಸಿರುಗಟ್ಟಿಸಿ ಕೊಂದೆ. ಇವಾಗ ನಾನು ಸಾಯುತ್ತೇನೆ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸದ್ಯ ಮೂರು ಕೊಲೆ ಮತ್ತು ಒಂದು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡಿರುವ ವಿದ್ಯಾರಣ್ಯಪುರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

    ಈ ಸಾವಿಗೆ ಕೇವಲ ಹಣ ಮಾತ್ರ ಕಾರಣವಾ ಇಲ್ಲಾ ಅದಕ್ಕೂ ಮೀರಿದ್ದು ಏನಾದರೂ ಇದೆಯಾ ಅನ್ನೋದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಯಜಮಾನನೇ ಕಾರಣವೆಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ!

    ಯಜಮಾನನೇ ಕಾರಣವೆಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ!

    ಮಂಡ್ಯ: ನನ್ನ ಸಾವಿಗೆ ನನ್ನ ಯಜಮಾನರೆ ಕಾರಣ ಎಂದು ಲಾಡ್ಜ್ ಮಾಲೀಕನ ವಿರುದ್ಧ ಡೆತ್‍ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ, ಮದ್ದೂರು ಪಟ್ಟಣದ ಸಮೀಪ ಶಿವಪುರದಲ್ಲಿ ನಡೆದಿದೆ.

    40 ವರ್ಷದ ಮನು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಶಿವಪುರದಲ್ಲಿರುವ ನೈದಿಲೆ ಲಾಡ್ಜ್ ಅನ್ನು ಮನು ನಡೆಸುತ್ತಿದ್ದರು. ನೈದಿಲೆ ಲಾಡ್ಜ್ ಮಾಲೀಕರಿಂದ ಸಂಪೂರ್ಣ ಲಾಡ್ಜ್ ಬಾಡಿಗೆ ಪಡೆದಿದ್ದ ಮನು ಅದರ ಉಸ್ತುವಾರಿ ತಾವೇ ನೋಡಿಕೊಳ್ಳುತ್ತಿದ್ದರು. ವ್ಯವಹಾರದಲ್ಲಿ ನಷ್ಟವಾಗಿದ್ದು, ನನ್ನ ಸಾವಿಗೆ ಲಾಡ್ಜ್ ಮಾಲೀಕರೇ ಕಾರಣ ಎಂದು ಮನು ಡೆತ್ ನೋಟ್ ಬರೆದಿಟ್ಟು, ಲಾಡ್ಜ್‌ನಲ್ಲೇ ನೇಣಿಗೆ ಶರಣಾಗಿದ್ದಾನೆ.

    ಡೆತ್‍ನೋಟ್ ಅಲ್ಲಿ ಏನಿತ್ತು?
    ಅಡ್ವಾನ್ಸ್ ಸೇರಿದಂತೆ ಇನ್ನಿತರ ಹಣ ಲಾಡ್ಜ್ ಮಾಲೀಕನಿಂದ ನನಗೆ ಬರಬೇಕು. ಆದ್ದರಿಂದ ಆ ಹಣ ವಸೂಲಿ ಮಾಡಿ ನನ್ನ ತಾಯಿಗೆ ತಲುಪಿಸಿ. ಅಲ್ಲಿಯವರೆಗೂ ಲಾಡ್ಜ್ ಓಪನ್ ಮಾಡಲು ಬಿಡಬೇಡಿ ಎಂದು ಮನು ತನ್ನ ಸ್ನೇಹಿತರಿಗೆ ಡೆತ್‍ನೋಟ್‍ನಲ್ಲಿ ಮನವಿ ಮಾಡಿದ್ದಾನೆ. ಈ ಘಟನೆ ಸಂಬಂಧ ಮದ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲವ್ ಮ್ಯಾರೇಜ್ – ಉಳಿಸಿಕೊಳ್ಳೋಕೆ ಸಾಧ್ಯವಾಗ್ತಿಲ್ಲ ಅಂತ ಯುವ ಜೋಡಿ ನೇಣಿಗೆ ಶರಣು

    ಲವ್ ಮ್ಯಾರೇಜ್ – ಉಳಿಸಿಕೊಳ್ಳೋಕೆ ಸಾಧ್ಯವಾಗ್ತಿಲ್ಲ ಅಂತ ಯುವ ಜೋಡಿ ನೇಣಿಗೆ ಶರಣು

    ಮಂಡ್ಯ: ನಮ್ಮ ಆಸೆಯಂತೆ ಮದುವೆಯಾಗಿ ಅದನ್ನು ಉಳಿಸಿಕೊಳ್ಳಲಾಗದೆ ಸಾಯುತ್ತಿದ್ದೇವೆ ಎಂದು ಡೆತ್‍ನೋಟ್ ಬರೆದಿಟ್ಟು ಯುವ ಜೋಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಂಚೆದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ಮೂಲತಃ ಮಂಡ್ಯದ ಹೆಬ್ಬಕವಾಡಿ ಗ್ರಾಮದವರಾಗಿದ್ದ ನವೀನ್(22) ಮತ್ತು ಅಶ್ವಿನಿ(21) ನೇಣಿಗೆ ಶರಣಾದ ನವ ಜೋಡಿ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಕಳೆದ 20 ದಿನಗಳ ಹಿಂದಷ್ಟೇ ಮದುವೆಯಾಗಿದ್ದರು. ಆದರೆ ಈಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸ್ವಗ್ರಾಮ ಹೆಬ್ಬಕವಾಡಿಯಿಂದ ಮೂರು ದಿನಗಳ ಹಿಂದಷ್ಟೇ ತಮ್ಮ ಅಜ್ಜಿಯ ಊರಾದ ಅಂಚೆದೊಡ್ಡಿ ಗ್ರಾಮಕ್ಕೆ ಹೋಗಿದ್ದರು. ಆದರೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಡೆತ್ ನೋಟ್ ಬರೆದಿಟ್ಟು ಯುವ ಜೋಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಡೆತ್‍ನೋಟ್
    ನಮ್ಮ ಸಾವಿಗೆ ಯಾರೂ ಕಾರಣರಲ್ಲ. ನಾನು ಆಸೆಯಿಂದ ಸಾವಿಗೆ ಶರಣಾಗುತ್ತಿದ್ದೇವೆ. ನಮ್ಮ ಆಸೆಯಂತೆ ಮದುವೆಯಾಗಿ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಾಯುತ್ತಿದ್ದೇವೆ. ಅಶ್ವಿನಿ 20,000 ಸಾವಿರ ರೂ.ಗಳನ್ನು ತಂದಿದ್ದಳು ಅದನ್ನು ಅವರ ತಾಯಿಗೆ ತಿಳಿಸಿದ್ದೇನೆ. ನಮ್ಮ ಬಗ್ಗೆ ಯೋಚಿಸಬೇಡಿ, ಎಲ್ಲರು ಚೆನ್ನಾಗಿರಿ. ಅದೆ ನಮ್ಮ ಕೊನೆಯ ಆಸೆ. ಅಣ್ಣ ಅವ್ವನನ್ನು ಚೆನ್ನಾಗಿ ನೋಡಿಕೋ. ನಮ್ಮ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದು  ಒಟ್ಟಿಗೆ ನೇಣಿಗೆ ಶರಣಾಗಿದ್ದಾರೆ.

    ಯುವ ಜೋಡಿಯ ಆತ್ಮಹತ್ಯೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಟ್ಸಪ್‍ನಲ್ಲಿ ಸಾವಿನ ಸಂದೇಶದ ವಿಡಿಯೋ ಹರಿಬಿಟ್ಟು ನಾಪತ್ತೆ

    ವಾಟ್ಸಪ್‍ನಲ್ಲಿ ಸಾವಿನ ಸಂದೇಶದ ವಿಡಿಯೋ ಹರಿಬಿಟ್ಟು ನಾಪತ್ತೆ

    ರಾಯಚೂರು: ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ವಾಟ್ಸಪಿನಲ್ಲಿ ವಿಡಿಯೋ ಹರಿಬಿಟ್ಟಿದ್ದು, ಇದುವರೆಗೂ ಆತ ಪತ್ತೆಯಾಗಿಲ್ಲ.

    ರಾಯಚೂರಿನ ಮಸ್ಕಿಯ ಗುತ್ತಿಗೆದಾರ ಚನ್ನಬಸವ ಸಾಲಬಾಧೆ ಹಾಗೂ ಹಣ ನೀಡಬೇಕಾದವರು ಕೊಡದೆ ಕಿರುಕುಳ ಕೊಡುತ್ತಿದ್ದಾರೆ ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ವಾಟ್ಸಪ್ ನಲ್ಲಿ ಭಾನುವಾರ ವಿಡಿಯೋ ಹರಿಬಿಟ್ಟಿದ್ದಾರೆ. ಅಲ್ಲದೆ ತುಂಗಭದ್ರಾ ಎಡದಂಡೆ ನಾಲೆ ಗುಡುದೂರು ಬಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ.

    ಕಾಲುವೆ ಬಳಿ ಚನ್ನಬಸವನ ಬಟ್ಟೆ ಹಾಗೂ ಡೆತ್ ನೋಟ್ ಸಿಕ್ಕಿವೆ. ಆದರೆ ಚನ್ನಬಸವ ಇದುವರೆಗೂ ಪತ್ತೆಯಾಗಿಲ್ಲ. ಅಂದಾನಪ್ಪ, ದೊಡ್ಡಪ್ಪ ಸಗರದ, ಸಣ್ಣಮೌನೇಶಗೌಡ, ಡಾ.ನಾಗನಗೌಡ ಎಂಬವರು ಒಟ್ಟು 12 ಲಕ್ಷ 74 ಸಾವಿರ ಕೊಡಬೇಕಿತ್ತು. ಆದರೆ ಹಣ ಕೊಡದೆ ಕಿರುಕುಳ ನೀಡಿದ್ದಾರೆ. ಇದರಿಂದ ಸಾಲ ಹೆಚ್ಚಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

    ಭಾನುವಾರ ರಾತ್ರಿವರೆಗೂ ಕಾಲುವೆಯಲ್ಲಿ ಚನ್ನಬಸವರಿಗಾಗಿ ಹುಡುಕಾಟ ನಡೆದಿದೆ. ಆದರೆ ಚನ್ನಬಸವನ ಕುರಿತು ಬದುಕಿರುವ ಅಥವಾ ಸತ್ತಿರುವ ಸುಳಿವು ಸಿಕ್ಕಿಲ್ಲ. ಸಿಂಧನೂರಿನ ಬಳಗಾನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ರಸ್ತೆಯ ಮೇಲೆ ಸಾವಿಗೆ ಕಾರಣ ಬರೆದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ?

    ರಸ್ತೆಯ ಮೇಲೆ ಸಾವಿಗೆ ಕಾರಣ ಬರೆದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ?

    ಮಂಡ್ಯ: ಕೌಟುಂಬಿಕ ಕಲಹದಿಂದ ಮನನೊಂದು ರಸ್ತೆಯ ಮೇಲೆ ಡೆತ್ ನೋಟ್ ಬರೆದು ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರಗಸೂರು ಗ್ರಾಮದ ಬಳಿ ನಡೆದಿದೆ.

    ಮರಿಸ್ವಾಮಿ(60) ಎಂಬವರೇ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮರಿಸ್ವಾಮಿ ತಮ್ಮ ಮಗ ಶಿವರಾಜುಗೆ ಬೆಂಗಳೂರು ಮೂಲದ ಹೇಮಾಳ ಜತೆ ಮದುವೆ ಮಾಡಿದ್ದರು. ಆದರೆ ಸೊಸೆ ಮತ್ತು ಮಗನ ಸಂಸಾರದಲ್ಲಿ ಬಿರುಕು ಮೂಡಿದ್ದು, ಅದನ್ನು ಸರಿಪಡಿಸಲು ನ್ಯಾಯ ಪಂಚಾಯ್ತಿ ಮಾಡಿದರು ಸಾಧ್ಯವಾಗಿರಲಿಲ್ಲ.

    ಸೊಸೆಯ ನಡವಳಿಕೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದಾಗಿ ಸಾಯುವ ಮುನ್ನ ಪೊಲೀಸರಿಗೆ ಬರೆದಿರುವ ದೂರಿನ ಪ್ರತಿಯಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ನಾನು ಸತ್ತ ನಂತರ ಮಳವಳ್ಳಿ ಶಾಸಕ ಅನ್ನದಾನಿಯನ್ನು ಕರೆಸಿ ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ರಸ್ತೆಯ ಮೇಲೆ ಬರೆದಿದ್ದಾರೆ.

    ಜೊತೆಗೆ ರಸ್ತೆ ಬದಿಯಲ್ಲಿ ಟವೆಲ್ ಹಾಸಿ ಅದರ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಲು ಬರೆದಿದ್ದ ಪತ್ರ ಹಾಗೂ ಸ್ವಲ್ಪ ಹಣವನ್ನಿಟ್ಟು ಕುಂಕುಮ ಅರಿಶಿಣದಿಂದ ಪೂಜೆ ಮಾಡಿದ್ದಾರೆ. ನಂತರ ರಸ್ತೆ ಪಕ್ಕದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಘಟನೆ ಸಂಬಂಧ ಬೆಳಕವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

  • ಮನಕಲಕುವ ಪತ್ರ ಬರೆದಿಟ್ಟು ತಾಯಿ, ಮಗಳು, ಮೊಮ್ಮಗ ಆತ್ಮಹತ್ಯೆ

    ಮನಕಲಕುವ ಪತ್ರ ಬರೆದಿಟ್ಟು ತಾಯಿ, ಮಗಳು, ಮೊಮ್ಮಗ ಆತ್ಮಹತ್ಯೆ

    ಚಿತ್ರದುರ್ಗ: ವಿಶ್ವ ಮಹಿಳಾ ದಿನಾಚರಣೆಯ ದಿನವೇ ಒಂದೇ ಕುಟುಂಬದ ಇಬ್ಬರು ಮಹಿಳೆಯರು ಸೇರಿದಂತೆ ಓರ್ವ ಬಾಲಕ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದಿದೆ.

    ಹಿರಿಯೂರು ಪಟ್ಟಣದ ಚಳ್ಳಕೆರೆ ರಸ್ತೆಯ ಮನೆಯಲ್ಲಿ ತಾಯಿ ಭರತಮ್ಮ (65), ಮಗಳು ಶಾಂತಮ್ಮ(40) ಹಾಗೂ ಶಾಂತಮ್ಮಳ ಮಗ ವಿಷ್ಣು (17) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಭರತಮ್ಮ ತನ್ನ ಮಗಳಾದ ಶಾಂತಮ್ಮ ಹಾಗೂ 10ನೇ ತರಗತಿ ಓದುತ್ತಿದ್ದ ವಿಷ್ಣು ಜೊತೆ ಜೀವನ ಸಾಗಿಸುತಿದ್ದರು. ಗಾರ್ಮೆಂಟ್ಸ್ ನಲ್ಲಿ ದಿನಗೂಲಿ ಮಾಡುತ್ತಿದ್ದ ಶಾಂತಮ್ಮನ ವೈವಾಹಿಕ ಜೀವನವು ಅಸ್ತವ್ಯಸ್ತಗೊಂಡಿದ್ದು, ಗಂಡನನ್ನು ಬಿಟ್ಟು ತಾಯಿಯೊಂದಿಗೆ ಮಗನನ್ನು ನೋಡಿಕೊಂಡು ಬದುಕುತ್ತಿದ್ದರು. ಆದರೆ ಇತ್ತೀಚೆಗೆ ಶಾಂತಮ್ಮನ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಹಣವಿಲ್ಲದ್ದರಿಂದ ಕುಟುಂಬದ ಮೂವರು ನೇಣಿಗೆ ಶರಣಾಗಿದ್ದಾರೆ.

    ವಿಷ್ಣು ಪ್ರತಿಭಾವಂತನಾಗಿದ್ದು, ಅಪಾರ ಸ್ನೇಹಿತರು ಮತ್ತು ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದನು. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆತನ ಶಾಲೆಯ ಶಿಕ್ಷಕರು ಹಾಗೂ ಸಹಪಾಟಿಗಳೊಂದಿಗೆ ಕ್ಷಮೆಯಾಚಿಸುವ ಪತ್ರವೊಂದನ್ನು ಬರೆದಿದ್ದಾನೆ. ಉತ್ತಮ ವಿದ್ಯಾಭ್ಯಾಸ ಮಾಡಿ, ಉದ್ಯೋಗ ಗಳಿಸಿರಿ. ಆ ಅದೃಷ್ಟ ನನ್ನ ಪಾಲಿಗೆ ಇಲ್ಲವೆಂದು ಸ್ನೇಹಿತರಿಗೆ ಮನಕಲಕುವಂತೆ ಪತ್ರ ಬರೆದಿದ್ದಾನೆ.

    ಈ ಘಟನೆ ಸಂಬಂಧ ಹಿರಿಯೂರು ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನಮ್ಮ ನಿರ್ಧಾರಕ್ಕೆ ನಾವೇ ಕಾರಣ ಎಂದು ಡೆತ್‍ನೋಟ್ ಬರೆದಿರುವುದು ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಚಿತ್ರದುರ್ಗ ಎಸ್‍ಪಿ ಶ್ರೀನಾಥ್ ಎಂ ಜೋಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ನಾನು ಸತ್ತ ಮೇಲೆ ಪತ್ನಿಯ ತಾಳಿ, ಕುಂಕುಮ ತೆಗೆಯಬೇಡಿ ಎಂದು ಪತ್ರ ಬರೆದು ರೈತ ಆತ್ಮಹತ್ಯೆ

    ನಾನು ಸತ್ತ ಮೇಲೆ ಪತ್ನಿಯ ತಾಳಿ, ಕುಂಕುಮ ತೆಗೆಯಬೇಡಿ ಎಂದು ಪತ್ರ ಬರೆದು ರೈತ ಆತ್ಮಹತ್ಯೆ

    ಹುಬ್ಬಳ್ಳಿ: ರೈತರ ಆತ್ಮಹತ್ಯೆ ತಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿ ಡೆತ್ ನೋಟ್ ಬರೆದಿಟ್ಟು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರು ಗ್ರಾಮದಲ್ಲಿ ನಡೆದಿದೆ.

    ಕಿರೆಸೂರು ಗ್ರಾಮದ ವೀರಪ್ಪ ಸವದತ್ತಿ(38) ಆತ್ಮಹತ್ಯೆ ಮಾಡಿಕೊಂಡ ರೈತ. ನನ್ನ ಸಾವಿಗೆ ನನ್ನ ವಾಹನ ಸಾಲ ಕಾರಣ. ಸಾಲ ಮರುಪಾವತಿ ಮಾಡುವುದು ಬಹಳ ಕಷ್ಟವಾಗಿದ್ದು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಹೆಂಡತಿ ಹಾಗೂ ಮಕ್ಕಳನ್ನು ಬಿಟ್ಟು ಹೋಗಲು ಬಹಳ ನೋವಾಗುತ್ತದೆ. ನಾನು ಸತ್ತ ಮೇಲೆ ನನ್ನ ಪತ್ನಿಯ ತಾಳಿ, ಕುಂಕುಮ ತೆಗೆಯಬೇಡಿ ಎಂದು ವೀರಪ್ಪ ಮನವಿ ಮಾಡಿದ್ದಾರೆ. ಅದರ ಜೊತೆಗೆ ಪತ್ನಿಯನ್ನ ಹೊಲಕ್ಕೆ ಕಳಿಸಬೇಡಿ. ಆಸ್ತಿಯನ್ನ ಹೆಂಡತಿ ಹೆಸರಿಗೆ ಮಾಡಿ. ಅವಳಿಗೆ ವಿಧವೆಯರ ರೀತಿಯಲ್ಲಿ ಮಾಡಬೇಡಿ ಎಂದು ಮನವಿ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ರೈತರ ಆತ್ಮಹತ್ಯೆ ತಪ್ಪಿಸಲು ಉತ್ತಮ ಸರ್ಕಾರ ಅಧಿಕಾರಕ್ಕೆ ಬರಬೇಕು. ರೈತರ ಆತ್ಮಹತ್ಯೆ ತಡೆಯಿರಿ ಎಂದು ಕೂಡ ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ಕುರಿತಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 5 ಪುಟ ಡೆತ್‍ನೋಟ್ ಬರೆದು ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

    5 ಪುಟ ಡೆತ್‍ನೋಟ್ ಬರೆದು ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

    ಚಂಡೀಗಢ: 5 ಪುಟ ಡೆತ್‍ನೋಟ್ ಬರೆದು ಯುವಕನೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಹಿಸ್ಸಾರ್ ನಲ್ಲಿ ನಡೆದಿದೆ.

    23 ವರ್ಷದ ಸಾಹಿಲ್ ರೈಲ್ವೇ ಹಳಿ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಸಾಹಿಲ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 5 ಪುಟಗಳ ಡೆತ್‍ನೋಟ್ ಬರೆದಿದ್ದು, ಆತನ ಜೇಬಿನಲ್ಲಿ ಡೆತ್‍ನೋಟ್ ಸಿಕ್ಕಿದೆ. ಫೈನಾನ್ಶಿಯರ್ ಗೆ ಭಯಪಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

    ಡೆತ್‍ನೋಟ್ ಆಧಾರದ ಮೇಲೆ ಫೈನಾನ್ಶಿಯರ್ ಕುಲ್ವಂತ್ ಜಂಗ್ಡಾ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮೃತ ಯುವಕನ ತಂದೆ ಪವನ್ ಕುಮಾರ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗ ಹಿಸ್ಸಾರ್ ನ ಮೊಬೈಲ್ ಕಂಪನಿಯಲ್ಲಿ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದನು ಎಂದು ಹೇಳಿದ್ದಾರೆ.

    ಜಂಗ್ಡಾ ಅವರಿಂದ ಸಾಹಿಲ್ ಸುಮಾರು 50,000 ರೂ. ಸಾಲ ಪಡೆದಿದ್ದನು. ಸಾಲಗಾರನ ಒತ್ತಡವೇ ಸಾಹಿಲ್ ನ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಡೆತ್‍ನೋಟ್ ಮೂಲಕ ತಿಳಿದಿದೆ ಎಂದು ಪೊಲೀಸರು ಹೇಳಿದ್ದಾರೆ. ಬುಧವಾರ ರಾತ್ರಿ ಸಮಯವಾದರೂ ಸಾಹಿಲ್ ಮನೆಗೆ ಹಿಂದಿರುಗಿರಲಿಲ್ಲ. ಆದ್ದರಿಂದ ಪೋಷಕರು ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದರು.

    ಡೆತ್‍ನೋಟ್ ನಲ್ಲಿ ಏನಿದೆ?: ಮೊದಲನೇ ಪುಟದಲ್ಲಿ ಸಾಹಿಲ್ ತನ್ನ ಪೋಷಕರಿಗೆ ಕ್ಷಮೆ ಕೇಳಿದ್ದಾನೆ. ಅಷ್ಟೇ ಅಲ್ಲದೇ ಜಂಗ್ಡಾಗೆ ಹಿಂದಿರುಗಿಸಬೇಕಾದ ಹಣದ ಬಗ್ಗೆಯೂ ತಿಳಿಸಿದ್ದಾನೆ. ನಾನು ದೆಹಲಿಗೆ ಹೋಗಲು ಮತ್ತು ಶಿಕ್ಷಣವನ್ನು ಪೂರ್ಣಗೊಳಿಸಲು ಜಂಗ್ಡಾರಿಂದ ಸುಮಾರು 12,000 ರೂ. ಸಾಲ ಪಡೆದಿದ್ದೆ. ನನ್ನ ಶಿಕ್ಷಣವನ್ನು ಮುಗಿಸಿದ ನಂತರ ಹಣ ವಾಪಸ್ ನೀಡಲು ಯೋಜಿಸಿದ್ದೆ. ಆದರೆ ನನ್ನ ಸಂಬಳದಿಂದ ಅವರ ಸಾಲ ತೀರಿಸಲು ಸಾಧ್ಯವಾಗಿಲ್ಲ ಎಂದು ಬರೆದಿದ್ದಾನೆ.

    ಜಂಗ್ಡಾ ಸಾಹಿಲ್ ಗೆ ನೀಡಿದ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿಯನ್ನು ಸೇರಿಸಿದ್ದ ಬಗ್ಗೆ ಮೂರನೇ ಪುಟದಲ್ಲಿ ತಿಳಿಸಿದ್ದಾನೆ. ಜನ ಸಾಲದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲ್ಲ ಎನ್ನುವುದು ನಿಜ. ಆದ್ರೆ ಸಾಯುವವರು ಸುಳ್ಳು ಹೇಳುವುದಿಲ್ಲ. ಹೀಗಾಗಿ ಸಾಲದ ವಿಚಾರಕ್ಕಿಂತ ನಾನು ಸುಳ್ಳು ಹೇಳುತ್ತಿಲ್ಲ ಎಂಬುದು ಮುಖ್ಯ ಎಂದು ಬರೆದಿದ್ದಾನೆ.

    ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.