ಕಲಬುರಗಿ: ಶಹಬಾದ ತಾಲೂಕಿನ ಮರತೂರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ಮಂಜುನಾಥ್ ಅಲಿಯಾಸ್ ಮನೋಜ್ ಸಿಂದೆ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮನೋಜ್ ಅವರ ಪತ್ನಿಯ ಅಣ್ಣ ಮತ್ತು ಆತನ ಪತ್ನಿಯ ನಡುವೆ ಕೌಟುಂಬಿಕ ಕಲಹ ಇದೆ ಎನ್ನಲಾಗಿದೆ. ಈ ನಡುವೆ ಅಣ್ಣನ ಮಗು ಕಾಣೆಯಾಗಿದೆ. ಮಗು ಕಾಣೆಯಾಗಲು ನೀವೇ ಕಾರಣ ಅಂತ ಮನೋಜ್ ಹಾಗೂ ಅವರ ಪತ್ನಿ ಹೆಸರಿನಲ್ಲಿ ಠಾಣೆಗೆ ದೂರು ನೀಡಲಾಗಿತ್ತು. ಇದನ್ನೂ ಓದಿ: ತೃತೀಯ ರಂಗ ರಚನೆಗೆ ದೇವೇಗೌಡರ ಜೊತೆ ಚಂದ್ರಶೇಖರ್ ರಾವ್ ಚರ್ಚೆ
ದೂರಿನ ಹಿನ್ನೆಲೆ ಆತನನ್ನು ಠಾಣೆಗೆ ಎಳೆದೊಯ್ದ ಪೊಲೀಸರು, ಎರಡು ದಿನ ಠಾಣೆಯಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ವ್ಯಕ್ತಿಯು ಮಗುವಿನ ನಾಪತ್ತೆಯಲ್ಲಿ ನಮ್ಮ ಕೈವಾಡ ಇಲ್ಲ ಅಂತ ಹೇಳಿದರೂ ಕೇಳದ ಪೊಲೀಸರು ಇವತ್ತು ನಿನ್ನನ್ನು ಮಾತ್ರ ಎಳೆದು ತಂದಿದ್ದೇವೆ. ನಾಳೆ ನಿನ್ನ ಹೆಂಡತಿಯನ್ನೂ ಕೂಡ ಎಳೆದು ತರುತ್ತೇವೆ ಅಂತ ಅವಾಜ್ ಹಾಕಿದ್ದಾರೆ. ಪೊಲೀಸರ ದೌರ್ಜನ್ಯ, ಹೊಡೆತದಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ ಮನೋಜ್ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ತಲೆಗೆ 25 ಲಕ್ಷ ಬಹುಮಾನ ಘೋಷಣೆಗೆಯಾಗಿದ್ದ ನಕ್ಸಲ್ ನಾಯಕ ಶವವಾಗಿ ಪತ್ತೆ
ವಿನಾಕಾರಣ ನನ್ನ ಹಾಗೂ ನನ್ನ ಹೆಂಡತಿ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿ ಮರ್ಯಾದೆ ಹರಾಜು ಮಾಡಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಸಾಯಬಣ್ಣಾ ಜೋಗುರ, ಶರಣಮ್ಮ ನಾಟೀಕರ್, ಪ್ರತಿಭಾ ನಾಗೇಶ್ ಹಾಗೂ ಪ್ರತಿಭಾಳ ತಾಯಿ ನಾಲ್ವರ ಹೆಸರು ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ.
ಘಟನೆಯ ಕುರಿತು ಮನೋಜ್ ಶವವನ್ನು ಶಹಬಾದ್ ಪೊಲೀಸ್ ಠಾಣೆ ಎದುರಿಗಿಟ್ಟು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬೆಳಗಾವಿ: ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇಕಡಾ 40 ಪರ್ಸೆಂಟೇಜ್ ಆರೋಪ ಮಾಡಿದ್ದ ಬೆಳಗಾವಿ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಧ್ಯಮದ ಪ್ರತಿನಿಧಿಗಳಿಗೆ ವಾಟ್ಸಪ್ ಸಂದೇಶ ರವಾನಿಸಿ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತರಾಗಿದ್ದ ಸಂತೋಷ್ ಪಾಟೀಲ್ ಮಾಧ್ಯಮ ಪತ್ರಿನಿಧಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಡರಾತ್ರಿ ವಾಟ್ಸಪ್ ಮೆಸೇಜ್ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಪ್ರತಿನಿಧಿಗಳು ಬೆಳಗಾವಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರಿಗಾಗಿ ಹುಡುಕಾಟ ನಡೆಸಿದ ಪೊಲೀಸರಿಗೆ ಉಡುಪಿಯ ಲಾಡ್ಜ್‌ವೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಂತೋಷ್ ಪಾಟೀಲ್ ಪತ್ತೆಯಾಗಿದ್ದಾರೆ. ಮೊಬೈಲ್‌ನಲ್ಲಿ ವಾಟ್ಸಾಪ್ ಸಂದೇಶ ಕಳುಹಿಸಿದ್ದ ಸಂತೋಷ್ ಪಾಟೀಲ್ ನನ್ನ ಸಾವಿಗೆ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಉಲ್ಲೇಖಿಸಿದ್ದರು. ಈಶ್ವರಪ್ಪ ಅವರಿಗೆ ಶಿಕ್ಷೆಯಾಗಬೇಕು. ನನ್ನೆಲ್ಲಾ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು, ಬಿ.ಎಸ್.ಯಡಿಯೂರಪ್ಪ ಸಹಾಯ ಮಾಡಬೇಕೆಂದು ಪತ್ರದಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಓಲೈಕೆ ರಾಜಕಾರಣ ಗೊತ್ತಿಲ್ಲ: ಇಬ್ಬರು ಮಾಜಿ ಸಿಎಂಗಳಿಗೆ ಕುಟುಕಿದ ಬೊಮ್ಮಾಯಿ
ಪತ್ರದ ಸಾರಾಂಶ:
ನನ್ನ ಸಾವಿಗೆ ನೇರ ಕಾರಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್. ಈಶ್ವರಪ್ಪ. ಕರ್ನಾಟಕ ಸರ್ಕಾರದಿಂದ ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲಾ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ ಮಗುವಿಗೆ ಸರ್ಕಾರ ಅಂದರೆ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ಹಾಗೆ ಅವರಿವರೆನ್ನದೇ ಎಲ್ಲರು ಸಹಾಯಹಸ್ತ ನೀಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು. ನನ್ನ ಜೊತೆ ಬಂದ ನನ್ನ ಗೆಳಯರಾದ ಸಂತೋಷ್ ಮತ್ತು ಪ್ರಶಾಂತ್‍ಗೆ ನಾನು ಪ್ರವಾಸ ಹೋಗೋಣ ಎಂದು ನನ್ನ ಜೊತೆಗೆ ಕರೆದುಕೊಂಡ ಬಂದಿರುತ್ತೇನೆ ಅಷ್ಟೇ. ಅವರಿಗೂ ನನ್ನ ಸಾವಿಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ತಾಯಿ ಗರ್ಭದಷ್ಟೇ ಭೂಗರ್ಭಕ್ಕೆ ಮಹತ್ವವಿದೆ- ಮಣ್ಣು ಉಳಿಸಿ ಅಭಿಯಾನಕ್ಕೆ ಬೊಮ್ಮಾಯಿ ಚಾಲನೆ
– ನಮ್ಮಪ್ಪನಿಗೆ ಐವರು ಮಹಿಳೆಯರ ಜೊತೆಯಿದೆ ಸಂಬಂಧ
– ಅಮ್ಮನ ಬಾಯಲ್ಲಿ ಚಪ್ಪಲಿಯಿಟ್ಟು ಅವಮಾನಿಸ್ತಿದ್ದ
– ಸಹೋದರಿಯರ ಜೀವನ ಹಾಳಾಗಲು ಅಪ್ಪನೇ ಕಾರಣ
– 3 ಕೋಟಿಯ ಮನೆ ಸೋರುತ್ತಿದೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಐವರ ಸಾವು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ ಆತ್ಮಹತ್ಯೆಗೂ ಮುನ್ನ ಮಕ್ಕಳು ಬರೆದಿರುವ ಡೆತ್ ನೋಟ್ ಪತ್ತೆಯಾಗಿದ್ದು, ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಡೆತ್ ನೋಟ್ ನಲ್ಲಿ ಮಕ್ಕಳು ಅಪ್ಪ ಶಂಕರ್ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಗೈದಿದ್ದಾರೆ.
ನಮ್ಮಪ್ಪ ಕಾಮುಕ, ಸ್ಯಾಡಿಸ್ಟ್ ಹಾಗೂ ಕುಡುಕ ಎಂದು ಮೃತ ಪುತ್ರ ಮಧುಸಾಗರ್ ಆರೋಪಿಸಿದ್ದಾರೆ. ನಮ್ಮಪ್ಪನಿಗೆ ಐವರು ಮಹಿಳೆಯರೊಂದಿಗೆ ಸಂಬಂಧ ಇತ್ತು. ಅಲ್ಲದೆ ಅಕ್ರಮ ಸಂಬಂಧ ಹೊಂದಿರುವ ಮಹಿಳೆಯ ಮಗಳನ್ನು ಮದುವೆಯಾಗುವಂತೆ ನನ್ನನ್ನು ಪೀಡಿಸುತ್ತಿದ್ದನು. ಕುಡಿದು ಬಂದು ಅಮ್ಮನಿಗೆ ಹೊಡೆಯುತ್ತಿದ್ದನು ಎಂದೆಲ್ಲಾ ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಇದನ್ನೂ ಓದಿ: ತಂದೆ ಶಂಕರ್ ಅನೈತಿಕ ಸಂಬಂಧವೇ ಕುಟುಂಬಕ್ಕೆ ಕುತ್ತಾಯ್ತಾ..? – ಅಪ್ಪನ ಬಗ್ಗೆ ಮೃತ ಮಕ್ಕಳ ಡೆತ್‍ನೋಟ್
ಡೆತ್ ನೋಟ್ ನಲ್ಲೇನಿದೆ..?
ನನ್ನ ತಂದೆ ಸ್ಯಾಡಿಸ್ಟ್, ಕಾಮುಕ. ತಂದೆ ಶಂಕರ್‍ಗೆ ಐವರು ವಿವಾಹಿತ ಮಹಿಳೆಯ ಜೊತೆ ಸಂಬಂಧವಿದೆ. ನಮ್ಮ ಏರಿಯಾದಲ್ಲೇ ಇರುವ ಓರ್ವ ಮಹಿಳೆ ಜೊತೆ ಸಂಪರ್ಕ ಇದೆ. ತಾನು ಸಂಬಂಧ ಹೊಂದಿದ್ದ ಮಹಿಳೆಯ ಮಗಳನ್ನೇ ಮದುವೆ ಆಗುವಂತೆ ಒತ್ತಾಯ ಮಾಡಿದ್ದಾನೆ. ತನ್ನ ಕಚೇರಿಯಲ್ಲಿ ಓರ್ವ ಮಹಿಳೆ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಹೀಗೆ ಹಲವು ಮಹಿಳೆಯರಿಗೆ ಬ್ಲಾಕ್‍ಮೇಲ್ ಮಾಡಿ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಹಲವು ಮಹಿಳೆಯರನ್ನು ಟ್ರ್ಯಾಪ್ ಮಾಡಿ ಸಂಬಂಧ ಹೊಂದಿದ್ದರು. ಅಪ್ಪನ ಅನೈತಿಕ ಸಂಬಂಧಕ್ಕೆ ಬೇಸತ್ತು ಅಪ್ಪನಿಂದ ನಾನು, ಅಮ್ಮ ದೂರ ಉಳಿದಿದ್ದೆವು. ನಮ್ಮ ಅಮ್ಮ, ಅಕ್ಕಂದಿರಿಗೆ ಕಿರುಕುಳ ನೀಡುತ್ತಿದ್ದರು. ಈ ಮೂಲಕ ಅಕ್ಕಂದಿರ ಜೀವನವನ್ನೂ ಹಾಳು ಮಾಡಿದ್ದಾರೆ.
ನನ್ನ ತಂದೆ ಕಾಮುಕ, ಅಪ್ಪನ ಎಲ್ಲಾ ಕೃತ್ಯದ ಬಗ್ಗೆ ಅಮ್ಮನಿಗೆ ಗೊತ್ತಿತ್ತು. ಇದೇ ವಿಚಾರವಾಗಿ ಮನೆಯಲ್ಲಿ ಸಾಕಷ್ಟು ಬಾರಿ ಗಲಾಟೆಗಳಾಗಿವೆ. ನಮ್ಮನ್ನು ಮನೆಯಲ್ಲೇ ಕೂಡಿ ಹಾಕುತ್ತಿದ್ದರು. ಅಪ್ಪನ ಕಿರುಕುಳದಿಂದ ಅಮ್ಮನಿಗೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆಯನ್ನು ಕೂಡ ನೀಡಲಾಗಿತ್ತು. ಈ ಹಿಂದೆ ಪೊಲೀಸ್ ಠಾಣೆಯಲ್ಲೂ ಅಪ್ಪನ ವಿರುದ್ಧ ಕೇಸ್ ದಾಖಲಾಗಿತ್ತು. 2007ರಲ್ಲಿ ಇದೇ ವಿಚಾರಕ್ಕೆ ಅಪ್ಪನ ಮೇಲೆ ಹಲ್ಲೆ ನಡೆದಿತ್ತು. 3 ಕೋಟಿ ಖರ್ಚು ಮಾಡಿ ಮನೆ ಕಟ್ಟಿದ್ರು, ಆದರೆ ಮನೆ ಸೋರುತ್ತೆ. ಕಿಟಕಿಯಿಂದ ನೀರು ಮನೆ ಒಳಗೆ ಬರುತ್ತೆ. ಇದನ್ನೂ ಓದಿ: ಐವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಶಂಕರ್, ಇಬ್ಬರು ಅಳಿಯಂದಿರ ವಿರುದ್ಧ ದೂರು ದಾಖಲು
ಅಕ್ಕನ ಗಂಡಂದಿರ ಮನೆಯವರು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಅಕ್ಕಂದಿರಿಗೆ ಅಪ್ಪ ಯಾವುದೇ ಆಸ್ತಿ ನೀಡಿರಲಿಲ್ಲ. ಹೀಗಾಗಿ ಗಂಡಂದಿರ ಮನೆಯವರು ನಿತ್ಯ ಕಿರುಕುಳ ನೀಡುತ್ತಿದ್ದರು. ನನ್ನ ತಂದೆ ಕುಡುಕ. ಹೀಗಾಗಿ ಮನೆಯ ಬಾಗಿಲು ಲಾಕ್ ಮಾಡುತ್ತಿರಲಿಲ್ಲ. ನಮ್ಮ ಅಪ್ಪ ಅತೀ ದೊಡ್ಡ ಸ್ಯಾಡಿಸ್ಟ್. ನನ್ನ ಅಮ್ಮನಿಗೆ ಕಿರುಕುಳ ಕೊಡುತ್ತಿದ್ದರು. ನನ್ನ ಅಮ್ಮನ ಚಾರಿತ್ರ್ಯಹರಣ ಮಾಡ್ತಿದ್ದರು. ಗಂಡ-ಹೆಂಡತಿ ನಡುವಿನ ಸಂಬಂಧ ಹಾಳು ಮಾಡ್ತಿದ್ದರು. ನಮ್ಮ ಅಪ್ಪ ಆತನ ಸಹೋದರಿಯನ್ನು ಆಕೆಯ ಗಂಡನಿಂದ ದೂರ ಮಾಡಿದ್ದಾರೆ.
ನನ್ನ ಮೊದಲ ಸಹೋದರಿಗೆ ಆಕೆಯ ಅತ್ತೆ ಮತ್ತು ಮಾವ, ಗಂಡನಿಗೆ ಹೇಳಿ ಹೊಡೆಸ್ತಿದ್ದರು. ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯಕ್ಕೆ ನಮ್ಮಪ್ಪನೇ ಕಾರಣ ಎಂದು ಮಗ ಮಧುಸಾಗರ್ ದೂರಿದ್ದಾನೆ. ನನ್ನ ಎರಡನೇ ಸಹೋದರಿಗೂ ನನ್ನ ತಂದೆ ತೊಂದರೆ ಕೊಟ್ಟಿದ್ದರು. ನನ್ನ ತಾಯಿಗೆ ಹಾನಿ ಉಂಟು ಮಾಡಲು ಯತ್ನಿಸಿದ್ದರು. ನಮ್ಮನಿಗೆ ನಮ್ಮಪ್ಪ ಚಪ್ಪಲಿಯಿಂದ ಹೊಡೆಯುತ್ತಿದ್ದರು. ನಮ್ಮಮ್ಮನ ಬಾಯಲ್ಲಿ ಚಪ್ಪಲಿ ಇಟ್ಟು ಅವಮಾನಿಸ್ತಿದ್ದರು. ನಮ್ಮಮ್ಮನಿಗೆ ಇನ್ನೊಂದು ಸಂಬಂಧ ಇದೆ ಎಂದು ಶಂಕಿಸಿದ್ದರು. ಇದನ್ನೂ ಓದಿ: ಕೌಟುಂಬಿಕ ಕಲಹದಿಂದ್ಲೇ ಸಾಮೂಹಿಕ ಆತ್ಮಹತ್ಯೆ – ದುರಂತಕ್ಕೆ ಪತ್ನಿಯೇ ಕಾರಣವೆಂದ ಪತಿ ಶಂಕರ್
ನಮ್ಮನ್ನು ಮನೆಯೊಳಗೆ ಕೂಡಿ ಹಾಕಿ ಅಫೀಸ್‍ಗೆ ಹೋಗ್ತಿದ್ದರು. ನಮ್ಮಪ್ಪನ ಕಿರುಕುಳದಿಂದ ನನ್ನ ತಾಯಿ ಖಿನ್ನತೆಗೆ ಒಳಗಾಗಿ ನಿಮ್ಹಾನ್ಸ್‍ನಲ್ಲಿ ಚಿಕಿತ್ಸೆ ಪಡೆದಿದ್ದರು. ನಮ್ಮಮ್ಮನ ಅಸಹಾಯಕತೆಯನ್ನೇ ನಮ್ಮಪ್ಪ ಬಳಸಿಕೊಂಡು ಆಕೆಗೆ ಕಿರುಕುಳ ನೀಡ್ತಿದ್ದರು. ದಿನಾ ಕುಡಿದು ಬಂದು ಗಲಾಟೆ ಮಾಡ್ತಿದ್ದರು. ನಮ್ಮಪ್ಪನ ಜೊತೆ ನಾವು ಊಟನೂ ಮಾಡ್ತಿರಲಿಲ್ಲ. ಅವರು ಮನೆಗೆ ಬರುವ ಮೊದಲೇ ಊಟ ಮಾಡಿ ಮಲಗ್ತಿದ್ವಿ.
ಕೆಲಸ ಬಿಡುವಂತೆ ನನಗೆ, ನನ್ನ ಸಹೋದರರಿಗೆ ಕಿರುಕುಳ ಕೊಡ್ತಿದ್ದರು. ಅಪ್ಪನ ಕಿರುಕುಳ ತಾಳಲಾರದೇ ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದೆ. ನಾನು, ಅಮ್ಮ, ಸಹೋದರರಿರನ್ನು ಬೇರೆ ಬೇರೆ ಇಟ್ಟಿದ್ದರು. ನಮ್ಮ ಅಪ್ಪನ ಕಾಟದಿಂದ ನನ್ನ ಸಹೋದರರಿಯ ಶಿಕ್ಷಣ ಒಂದು ವರ್ಷ ಹಾಳಾಗಿತ್ತು ಎಂದೆಲ್ಲಾ ಡೆತ್ ನೋಟ್ ಬರೆದಿದ್ದು, ಈ ಡೆತ್ ನೋಟ್ ಶಂಕರ್ ಜೀವನಕ್ಕೆ ಕುತ್ತು ತರುತ್ತಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಒಂದೇ ಕುಟುಂಬದ ಐವರು ಸಾವು ಪ್ರಕರಣ- ಐದು ದಿನ ಅನ್ನ, ನೀರಿಲ್ಲದೆ ಬದುಕುಳಿದ ಎರಡೂವರೆ ವರ್ಷದ ಕಂದಮ್ಮ
– ಯೋಧರ ಸಮವಸ್ತ್ರದ ಕನಸು ನನಸಾಗಲಿಲ್ಲ
– ಡೆತ್‍ನೋಟ್ ನಲ್ಲಿ ಹುಡುಗಿ ಹೇಳಿದ್ದೇನು..?
ಮುಂಬೈ: ಮೂವರ ಕಿರುಕುಳದಿಂದ ಬೇಸತ್ತು 17 ವರ್ಷದ ಸೇನಾ ಆಕಾಂಕಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪಂಧರ್ ಪುರ ನಗರದಲ್ಲಿ ನಡೆದಿದೆ.
ಮೃತ ಹುಡುಗಿಗೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡಬೇಕು ಎಂಬ ಹಂಬಲವಿತ್ತು. ಆದರೆ ಮೂವರು ವ್ಯಕ್ತಿಗಳ ನಿರಂತರ ಕಿರುಕುಳದಿಂದ ನೊಂದಿರುವ ಈಕೆ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹದಿಹರೆಯದ ಹುಡುಗಿ ಡಿಸೆಂಬರ್ 7ರಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಹುಡುಗಿ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತ್ರಿವರ್ಣ ಬ್ಯಾಡ್ಜ್ ನೊಂದಿಗೆ ಯೋಧರ ಸಮವಸ್ತ್ರ ಧರಿಸಿಕೊಳ್ಳಬೇಕೆಂಬ ಕನಸು ನನ್ನ ಆತ್ಮಹತ್ಯೆಯ ಮೂಲಕ ನನಸಾಗುತ್ತಿಲ್ಲ. ಮೂವರು ವ್ಯಕ್ತಿಗಳು ನನಗೆ ನಿರಂತರವಾಗಿ ಕಿರುಕುಳ ಕೊಡುತ್ತಿದ್ದರಿಂದ ಬೇಸತ್ತಿದ್ದೇನೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಕ್ಷಮಿಸು ಭಾರತ ಮಾತೆ ಎಂದು ಬರೆದುಕೊಂಡಿರುವುದಾಗಿ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಪ್ರಶಾಂತ್ ಭಾಸ್ಮೆ ವಿವರಿಸಿದ್ದಾರೆ.
ಕಿರುಕುಳ ನೀಡುತ್ತಿರುವ ಮೂವರಲ್ಲಿ ಓರ್ವ ಈ ಬಗ್ಗೆ ಯಾರ ಜೊತೆಯೂ ಹೇಳಿಕೊಳ್ಳಬಾರದು ಎಂದು ಬೆದರಿಕೆ ಕೂಡ ಹಾಕಿದ್ದನು. ಮೂವರು ಆರೋಪಿಗಳು ನನ್ನ ಮೇಲೆ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದರು. ಈ ಮೂಲಕ ನಿರಂತರವಾಗಿ ನನ್ನ ಮೇಲೆ ದೌರ್ಜನ್ಯವೆಸಗುತ್ತಿದ್ದರು ಎಂದು ಹುಡುಗಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೋಲಾರ: ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನಿಂದ ನನಗೆ ಅನ್ಯಾಯವಾಗಿದೆ. ನನ್ನ ಸಾವಿಗೆ ಇವರೇ ಕಾರಣ ಎಂದು ಆಡಿಯೋ, ಡೆತ್‍ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲೂಕಿನ ಮದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ರಾತ್ರಿ ಊಟ ಮುಗಿಸಿಕೊಂಡು ಮಲಗಲೆಂದು ಹೋದವನು ನೇಣಿಗೆ ಶರಣಾಗಿದ್ದಾನೆ. ಅಲ್ಲದೆ ತನ್ನ ಸಾವಿಗೆ ಚಿಕ್ಕಪ್ಪನಾದ ರಮೇಶ್ ಹಾಗೂ ಚಿಕ್ಕಮ್ಮಳಾದ ಅಶ್ವಥಮ್ಮ ಕಾರಣ ಎಂದು ಡೆತ್‍ನೋಟ್ ಬರೆದಿಟ್ಟಿದ್ದಾನೆ. ಜೊತೆಗೆ ವಾಯ್ಸ್ ರೆಕಾರ್ಡ್ ಮಾಡಿ ವಾಟ್ಸಪ್ ಮೂಲಕ ತನ್ನ ಸ್ನೇಹಿತರಿಗೆ ಮೆಸೇಜ್ ಕಳುಹಿಸಿದ್ದಾನೆ. ನಂತರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಂಜುನಾಥ್ ಚಿಕ್ಕಂದಿನಲ್ಲಿಯೇ ತನ್ನ ತಂದೆ ತಾಯಿಯನ್ನ ಕಳೆದುಕೊಂಡು, ತನ್ನ ಚಿಕ್ಕಪ್ಪ ರಮೇಶ್ ಹಾಗೂ ಸಹೋದರಿಯರ ಆಶ್ರಯದಲ್ಲಿ ಬೆಳೆದಿದ್ದ. ಎಸ್‍ಎಸ್‍ಎಲ್‍ಸಿ ನಂತರ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಸಹೋದರಿಯರಿಗೆ ನೆರವಾಗುವುದರೊಂದಿಗೆ ತನ್ನ ಚಿಕ್ಕಪ್ಪ ರಮೇಶ್ ಸಹಾಯದಿಂದ ಜಮೀನನ್ನ ಮಾರಿ ಅಕ್ಕಂದಿರ ಮದುವೆ ಸಹ ಮಾಡಿದ್ದನು. ಸ್ವಂತ ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ.
ಬೆಂಗಳೂರಿನಲ್ಲಿ ಹೋಟೆಲ್ ನಡೆಸುತ್ತಿದ್ದ ಈತ ಕೊರೊನಾ ಲಾಕ್‍ಡೌನ್‍ನಿಂದಾಗಿ ಗ್ರಾಮಕ್ಕೆ ಬಂದಿದ್ದನು. ತಮಗಿರುವ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದ. ಈ ವೇಳೆ ತನಗೆ ಆಸ್ತಿ ಎಷ್ಟಿದೆ ಎಂದು ಸರ್ವೇ ಮಾಡಿಸಲು ಮುಂದಾದಾಗ ತನ್ನ ಚಿಕ್ಕಪ್ಪನಿಂದ ತನಗೆ ಬರಬೇಕಿದ್ದ ಆಸ್ತಿಯಲ್ಲಿ ಮೋಸ ಆಗಿದೆ ಎಂದು ಗೊತ್ತಾಗಿದೆ. ಅಲ್ಲದೆ ಜಮೀನು ಹಂಚಿಕೆಯಲ್ಲಿ ತನ್ನ ಚಿಕ್ಕಪ್ಪ ರಮೇಶ್ ಹಾಗೂ ಚಿಕ್ಕಮ್ಮ ಅಶ್ವಥಮ್ಮ ಕಡಿಮೆ ನೀಡಿ ಮೋಸ ಮಾಡಿದ್ದಾರೆಂದು ತಿಳಿದುಕೊಂಡಿದ್ದಾನೆ. ಆಗಾಗ ಇದೇ ವಿಚಾರಕ್ಕೆ ಚಿಕ್ಕಪ್ಪನ ಜೊತೆ ಜಗಳವಾಡುವುದರೊಂದಿಗೆ ಸಾಕಷ್ಟು ಮನನೊಂದಿದ್ದ ಎನ್ನಲಾಗಿದೆ.
ಮಂಜುನಾಥ್ ಈ ಕುರಿತು ನಮ್ಮ ಜೊತೆ ನೋವನ್ನ ಹಂಚಿಕೊಂಡಿದ್ದನು. ಕಳೆದ ಮೂವತ್ತು ವರ್ಷಗಳಿಂದ ಚಿಕ್ಕಪ್ಪನನ್ನೇ ನಂಬಿದ್ದ. ಇದೀಗ ತಾನು ನಂಬಿಕೆ ಇಟ್ಟಿದ್ದ ಚಿಕ್ಕಪ್ಪನಿಂದಲೇ ಮೋಸವಾಗಿದೆ ಎಂದು ಮನನೊಂದ ಮಂಜುನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಜುನಾಥನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಸ್ನೇಹಿತರು ಒತ್ತಾಯಿಸಿದ್ದಾರೆ.
ಈ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
– ಪದೇ ಪದೇ ನಿಮ್ಮ ನಿರೀಕ್ಷೆಗಳನ್ನ ನಿರಾಶೆಗೊಳಿಸ್ತೇನೆ
– ನೀಟ್ ಪರೀಕ್ಷೆಗೆ ಒಂದು ದಿನದ ಮೊದಲೇ ಸೂಸೈಡ್
ಚೆನ್ನೈ: ನೀಟ್ ಆಕಾಂಕ್ಷಿಯಾಗಿದ್ದ 19 ವರ್ಷದ ಯುವತಿ ಪರೀಕ್ಷೆಗೆ ಒಂದು ದಿನದ ಮೊದಲೇ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.
ಜ್ಯೋತಿಶ್ರೀ ದುರ್ಗಾ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಜ್ಯೋತಿ ತನ್ನ ಪೋಷಕರು ಮತ್ತು ಸಹೋದರನೊಂದಿಗೆ ಮಧುರೈನ ಸಶಸ್ತ್ರ ಪಡೆಗಳ ಮೀಸಲು ವಸತಿಗೃಹದಲ್ಲಿ ವಾಸಿಸುತ್ತಿದ್ದಳು. ಆಕೆಯ ತಂದೆ ಮುರುಗಸುಂದರಂ ಸಶಸ್ತ್ರ ಪಡೆಗಳ ಐದನೇ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಜ್ಯೋತಿ ಕಳೆದ ವರ್ಷವೂ ನೀಟ್ ಪರೀಕ್ಷೆ ಬರೆದಿದ್ದು, ತೇರ್ಗಡೆಯಾಗದ ಕಾರಣ ಖಿನ್ನತೆಗೆ ಒಳಗಾಗಿದ್ದಳು. ಆದರೂ ಈ ವರ್ಷದ ಪರೀಕ್ಷೆ ಬರೆಯಲು ಸಾಕಷ್ಟು ತಯಾರಿ ನಡೆಸಿದ್ದಳು. ಆದರೆ ಪರೀಕ್ಷೆಯ ಭಯದಿಂದ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಳೆ. ಇಂದು ಬೆಳಗ್ಗೆ ಪೋಷಕರು ಆಕೆಯ ರೂಮಿಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಜ್ಯೋತಿ ನಮ್ಮೊಂದಿಗೆ ಶುಕ್ರವಾರ ರಾತ್ರಿ ಊಟ ಮಾಡುವಾಗ ಮಾತನಾಡಿಕೊಂಡು ಚೆನ್ನಾಗಿಯೇ ಇದ್ದಳು. ಊಟ ಮುಗಿಸಿ ತಮ್ಮ ರೂಮಿಗೆ ಹೋಗಿ ಮಲಗಿದ್ದಳು. ಇಂದು ಬೆಳಗ್ಗೆ ಎಷ್ಟು ಬಾರಿ ಬಾಗಿಲನ್ನು ತಟ್ಟಿದರೂ ರೂಮಿನಿಂದ ಹೊರಗೆ ಬರಲಿಲ್ಲ. ಫೋನ್ ಮಾಡಿದರೂ ರಿಸೀವ್ ಮಾಡಿಲ್ಲ. ಕೊನೆಗೆ ಬಾಗಿಲನ್ನು ಮುರಿದು ರೂಮಿಗೆ ಹೋಗಿ ನೋಡಿದಾಗ ಜ್ಯೋತಿ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್‍ನೋಟ್ ಬರೆದಿದ್ದಾಳೆ ಎಂದು ಕುಟುಂಬದರು ತಿಳಿಸಿದರು.
“ನೀವೆಲ್ಲರೂ ನನ್ನ ಮೇಲೆ ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೀರಿ. ನಾನು ವೈದ್ಯಕೀಯ ಕೋರ್ಸಿಗೆ ಆಯ್ಕೆಯಾಗಲು ವಿಫಲವಾದರೆ, ನನಗಾಗಿ ನೀವು ಪಟ್ಟ ಶ್ರಮವೆಲ್ಲಾ ವ್ಯರ್ಥವಾಗುತ್ತದೆ. ಆದ್ದರಿಂದ ನಾನು ಪದೇ ಪದೇ ನಿಮ್ಮ ನಿರೀಕ್ಷೆಗಳನ್ನು ನಿರಾಶೆಗೊಳಿಸುತ್ತೇನೆ. ನನ್ನನ್ನು ಕ್ಷಮಿಸಿ, ನಾನು ದಣಿದಿದ್ದೇನೆ” ಎಂದು ಜ್ಯೋತಿ ಡೆತ್‍ನೋಟಿನಲ್ಲಿ ಬರೆದಿದ್ದಾಳೆ. ಅಲ್ಲದೇ, ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಜೊತೆಗೆ ನಿಮ್ಮ ಪ್ರೀತಿಯನ್ನು ತಪ್ಪಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾಳೆ.
ನನ್ನ ಮಗಳು ಚೆನ್ನಾಗಿ ಓದುತ್ತಿದ್ದಳು. ಈ ಬಾರಿ ಪರೀಕ್ಷೆ ಬರೆದಿದ್ದರೆ ಅಧಿಕ ಅಂಕವನ್ನು ಪಡೆಯುತ್ತಿದ್ದಳು. ಆದರೆ ಜ್ಯೋತಿ ಖಿನ್ನತೆಗೆ ಒಳಗಾಗಿದ್ದು, ರಾತ್ರಿ ನಮ್ಮೊಂದಿಗೆ ಚೆನ್ನಾಗಿ ಮಾತನಾಡಿದ್ದಳು. ಆದರೆ ಬೆಳಗ್ಗೆ ಅವಳ ರೂಮಿಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ನಮಗೆ ತಿಳಿಯಿತು ಎಂದು ಜ್ಯೋತಿ ತಂದೆ ಹೇಳಿದ್ದಾರೆ.
ಕಳೆದ ವಾರ ಅರಿಯಲೂರು ಜಿಲ್ಲೆಯ ವಿಘ್ನೇಶ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನು. ವಿಘ್ನೇಶ್ ಈಗಾಗಲೇ ಎರಡು ಬಾರಿ ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಉತ್ತೀರ್ಣವಾದರೂ ಕಾಲೇಜಿನಲ್ಲಿ ಸೀಟು ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಭಯದಿಂದ ವಿಘ್ನೇಶ್ ಆತ್ಮಹತ್ಯೆ ಮಾಡಿಕೊಂಡಿದ್ದನು. ಅದೇ ರೀತಿ ಕೊಯಮತ್ತೂರಿನಲ್ಲಿ 19 ವರ್ಷದ ಯುವತಿ ಕೂಡ ಪರೀಕ್ಷೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಮುಂಬೈ: ಮಹಾರಾಷ್ಟ್ರದ ಖ್ಯಾತ ಚಿತ್ರಕಲಾವಿದ ಮತ್ತು ಫೋಟೋಗ್ರಾಫರ್ ರಾಮ್ ಇಂದ್ರನಿಲ್ ಕಾಮತ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಂಬೈ ಮೂಲದ ಪ್ರಸಿದ್ಧ ಕಲಾವಿದ ರಾಮ್ ಇಂದ್ರನಿಲ್ ಕಾಮತ್ (41) ಅವರು ತನ್ನ ತಾಯಿಯೊಂದಿಗೆ ಮುಂಬೈನ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಬುಧವಾರ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಕಾಮತ್ ಅವರು ಜನಪ್ರಿಯ ವರ್ಣಚಿತ್ರಕಾರರಾಗಿದ್ದರು. ಜೊತೆಗೆ ಫೋಟೋಗ್ರಾಫರ್ ಆಗಿ ಕೂಡ ಕೆಲಸ ಮಾಡುತ್ತಿದ್ದರು. ಅವರು ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮುಂಬೈನ ಮಾಟುಂಗಾದಲ್ಲಿರುವ ಅವರ ನಿವಾಸದಲ್ಲಿ ಬಾತ್‍ಟಬ್‍ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಮಾಟುಂಗಾ ಪೊಲೀಸರು ಬುಧವಾರ ತಿಳಿಸಿದ್ದರು. ಬಾತ್‍ಟಬ್‍ನಲ್ಲಿ ಬಿದ್ದಿದ್ದ ಅವರನ್ನು ತಕ್ಷಣ ಮುಂಬೈನ ಸಿಯಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಮುಂಬೈ ಪೊಲೀಸ್ ವಕ್ತಾರ ಎನ್ ಅಂಬಿಕಾ, ಪ್ರಸಿದ್ಧ ಕಲಾವಿದ ರಾಮ್ ಇಂದ್ರನಿಲ್ ಕಾಮತ್ ಆಗಸ್ಟ್ 19ರಂದು ಮಾಟುಂಗಾದಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ಅವರೆ ಬರೆದ ಡೆತ್‍ನೋಟ್ ಕೂಡ ಅವರ ನಿವಾಸದಲ್ಲಿ ಪತ್ತೆಯಾಗಿದೆ. ಕಾಮತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಜೊತೆಗೆ ದೂರು ದಾಖಲಿಸಿಕೊಂಡು ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
– ಪತ್ನಿಯ ಅಗಲಿಕೆಯಿಂದ ಸಹೋದರ ಆತ್ಮಹತ್ಯೆ
– ಮೂವರು ಸಹೋದರರನ್ನ ಅಗಲಿದ ತಂಗಿ
ಗಾಂಧಿನಗರ: ಸಹೋದರ ಆತ್ಮಹತ್ಯೆ ಮಾಡಿಕೊಂಡ ಎರಡು ವಾರಗಳ ನಂತರ 17 ವರ್ಷದ ಅಪ್ರಾಪ್ತ ಸಹೋದರಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್‍ನ ಅಹಮದಾಬಾದ್ ಜಿಲ್ಲೆಯ ರಾಮೋಲ್‍ನಲ್ಲಿ ನಡೆದಿದೆ.
ಮೃತ ಹುಡುಗಿ ಉತ್ತರ ಪ್ರದೇಶ ಮೂಲದವಳಾಗಿದ್ದು, 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ಪೋಷಕರು ಮತ್ತು ಮೂವರು ಸಹೋದರರೊಂದಿಗೆ ರಾಮೋಲ್‍ನ ರವಿನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಅದೇ ಪ್ರದೇಶದಲ್ಲಿ ಆಕೆಯ ಸೋದರಸಂಬಂಧಿ ಸಹೋದರ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದನು. ಆದರೆ ಎರಡು ವಾರಗಳ ಹಿಂದೆ ಪತ್ನಿ ಅಪಘಾತದಲ್ಲಿ ಸಾವನ್ನಪ್ಪಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದನು.
ಮೃತ ಹುಡುಗಿಯ ತಂದೆ ಮತ್ತು ಇಬ್ಬರು ಹಿರಿಯ ಸಹೋದರರು ಸೋಮವಾರ ತಿಂಡಿ ಮಾಡಿ ಮನೆಯಿಂದ ಹೊರ ಹೋಗಿದ್ದರು. ಮಧ್ಯಾಹ್ನ ಅವಳ ಕಿರಿಯ ಸಹೋದರ ತಾಯಿಯ ಬಳಿ ಬಂದು ಸಹೋದರಿ ಬಾಯಿಂದ ಏನೋ ಹರಿಯುತ್ತಿದೆ ಎಂದು ಹೇಳಿದ್ದಾನೆ. ಊಟ ಮಾಡುತ್ತಿದ್ದ ತಾಯಿ ಕೂಡಲೇ ಹೋಗಿ ಮಗಳನ್ನು ನೋಡಿದ್ದಾರೆ. ಆಗ ಮಗಳು ತನ್ನ ದುಪಟ್ಟಾದಿಂದ ನೇಣು ಹಾಕಿಕೊಂಡಿದ್ದನ್ನು ನೋಡಿ ತಾಯಿ ಆಘಾತಕ್ಕೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಸ್ಥಳದಲ್ಲಿದ್ದ ಡೆತ್‍ನೋಟ್ ವಶಪಡಿಸಿಕೊಂಡಿದ್ದಾರೆ. ಮೃತ ಅಪ್ರಾಪ್ತೆ ತನ್ನ ಸೋದರಸಂಬಂಧಿ ಸಹೋದರನಿಗೆ ತುಂಬಾ ಹತ್ತಿರವಾಗಿದ್ದಳು. ಹೀಗಾಗಿ ಆತನ ಅಗಲಿಕೆಯಿಂದ ಖಿನ್ನತೆಗೆ ಒಳಗಾಗಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಸಹೋದರ ಸಾವನ್ನಪ್ಪಿದ ನಂತರ ಈಗ ನನಗೆ ಬದುಕುವ ಆಸೆ ಇಲ್ಲ. ಸಹೋದರನ ಅಂತ್ಯಕ್ರಿಯೆ ಮಾಡಿದ ಅದೇ ಸ್ಥಳದಲ್ಲಿ ಶವಸಂಸ್ಕಾರ ಮಾಡಿ” ಎಂದು ಅಪ್ರಾಪ್ತೆ ಡೆತ್‍ನೋಟಿನಲ್ಲಿ ಬರೆದಿದ್ದಾಳೆ. ಮರಣೋತ್ತರ ಪರೀಕ್ಷೆಯ ನಂತರ ಹುಡುಗಿಯ ಮೃತದೇಹವನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಹೆಡ್ ಕಾನ್ಸ್ಟೇಬಲ್ ವಿಜಯ್‍ಸಿಂಗ್ ಹೇಳಿದರು.
ಲಕ್ನೋ: ಕಳೆದ ಭಾನುವಾರ ಮೃತಪಟ್ಟ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಿಂದ ಪ್ರೇರಣೆ ಪಡೆದು 16 ವರ್ಷದ ಬಾಕಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯ ಸುಭಾಷ್ ನಗರದಲ್ಲಿ ನಡೆದಿದೆ.
10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೊತೆ ಬಾಲಕ ನಾನು ಹುಡುಗಿಯರ ತರ ಕಾಣುತ್ತೇನೆ ಎಂದು ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ ಹಾಗೂ ಆತನನ್ನು ಸ್ನೇಹಿತರು ಮತ್ತು ಸಂಬಂಧಿಕರು ಈ ವಿಚಾರವಾಗಿಯೇ ಆತನನ್ನು ನಿಂದಿಸುತ್ತಿದ್ದರು ಎನ್ನಲಾಗಿದೆ.
ಮೃತ ಬಾಲಕ ಶುಭಾಷ್ ನಗರದಲ್ಲಿ ತನ್ನ ತಮ್ಮ ಮತ್ತು ತಂದೆಯ ಜೊತೆ ವಾಸವಾಗಿದ್ದ. ಹುಟ್ಟಿದಾಗಲಿನಿಂದ ಆತನ ನಡುವಳಿಕೆ ಹೆಣ್ಣು ಮಕ್ಕಳ ರೀತಿ ಇತ್ತು ಹಾಗೂ ಅವನು ಮೆಕಪ್ ಮಾಡಿಕೊಳ್ಳುತ್ತಿದ್ದ, ಹುಡುಗಿಯರ ರೀತಿ ಡ್ಯಾನ್ಸ್ ಮಾಡುತ್ತಿದ್ದ. ಇದನ್ನೇ ಗುರಿಯಾಗಿಸಿಕೊಂಡು ಆತನ ಸ್ನೇಹಿತರು ಅವನನ್ನು ಅವಮಾನ ಮಾಡುತ್ತಿದ್ದರು. ಇದರಿಂದ ಮನನೊಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಡೆತ್‍ನೋಟ್‍ನಲ್ಲಿ ಏನಿದೆ?
ಸಾಯುವ ಮುನ್ನಾ ಡೆತ್‍ನೋಟ್ ಬರೆದಿರುವ ಬಾಲಕ, ತನ್ನ ತಂದೆಗೆ ಕ್ಷೆಮೆ ಕೇಳಿದ್ದಾನೆ. ನನಗೆ ಹುಡುಗಿಯರ ತರ ಮುಖವಿದೆ. ಜನರು ಅದನ್ನು ನೋಡಿ ನಗುತ್ತಾರೆ. ನನಗೇ ನಾನು ಹುಡುಗಿ ಎಂದು ಭಾಸವಾಗುತ್ತಿದೆ. ನನ್ನ ಜೀವನ ಕತ್ತಲೆ ಅನಿಸುತ್ತಿದೆ. ಅದಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲಿ ಎಂದು ಆಶೀರ್ವಾದ ಮಾಡಿ. ನಮ್ಮ ಮನೆಯಲ್ಲಿ ಮುಂದೆ ಹೆಣ್ಣು ಮಗು ಜನಿಸಿದರೆ ಅದು ನಾನೇ ಎಂದು ತಿಳಿದುಕೊಳ್ಳಿ ಎಂದು ಬರೆದಿದ್ದಾನೆ.
ಈ ವಿಚಾರದ ಬಗ್ಗೆ ಮೃತನ ಚಿಕ್ಕ ತಮ್ಮ ಮಾಹಿತಿ ನೀಡಿದ್ದು, ನಟ ಸುಶಾಂತ್ ಅವರು ಸಾವಿನ ಬಳಿಕ ಅಣ್ಣ ಅದರ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದ. ಅವನು ಈ ರೀತಿ ಮಾಡಿಕೊಳ್ಳುವ ಹಿಂದಿನ ದಿನ ನನ್ನ ಬಳಿ ಸುಶಾಂತ್ ರೀತಿಯ ಒಳ್ಳೆಯ ನಟರೇ ಆತ್ಮಹತ್ಯೆ ಮಾಡಿಕೊಳ್ಳುವಾಗ ನಾವು ಯಾಕೆ ಮಾಡಿಕೊಳ್ಳಬಾರದು ಎಂದು ಹೇಳುತ್ತಿದ್ದ ಎಂದು ಹೇಳಿದ್ದಾನೆ.
ನನ್ನ ಮಗ ಹೆಚ್ಚು ಅವನ ತಮ್ಮನ ಜೊತೆಯೇ ಇರುತ್ತಿದ್ದ. ನನ್ನ ಮಗ ಎಲ್ಲ ಹುಡುಗರಂತೆ ಸಾಮಾನ್ಯವಾಗಿಯೇ ಇದ್ದ. ಆದರೆ ನಮ್ಮ ಸಂಬಂಧಿಕರು ಸೇರಿದಂತೆ ಕೆಲವರು ಅವನು ಹುಡುಗಿಯ ತರ ಆಡುತ್ತಾನೆ ಎಂದು ತುಂಬ ಕಮೆಂಟ್ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಹೈದರಾಬಾದ್: ಬೇರೆಯವರಿಗೆ ಭಾರವಾಗಿರಲು ಇಷ್ಟವಿಲ್ಲ ಎಂದು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ರಂಗಾರೆಡ್ಡಿಯಲ್ಲಿ ನಡೆದಿದೆ.
ವೆಂಕಟ್‍ರೆಡ್ಡಿ ಹಾಗೂ ನಿಖಿತಾ ಆತ್ಮಹತ್ಯೆ ಮಾಡಿಕೊಂಡ ದಂಪತಿ. ದಂಪತಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತ ಅವರು ಬೇರೆಯವರಿಗೆ ಭಾರವಾಗಬಾರದು ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ.
ಕೆಲವು ದಿನಗಳ ಹಿಂದೆ ದಂಪತಿ ಬಿ.ಎಂ ನಗರದ ಬಾಡಿಗೆ ಮನೆಯಲ್ಲಿ ಶಿಫ್ಟ್ ಆಗಿದ್ದರು. ವೆಂಕಟ್ ರೆಡ್ಡಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ ವೆಂಕಟ್‍ರೆಡ್ಡಿ ಕುಟುಂಬ ಕೆಲವು ದಿನಗಳಿಂದ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತ ಪತಿ-ಪತ್ನಿ ಡೆತ್‍ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಮಗೆ ನಮ್ಮ ಜೀವನದಿಂದ ಜಿಗುಪ್ಸೆ ಬಂದಿದೆ. ಹಾಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದೇವೆ. ನಮ್ಮ ಮಗನನ್ನು ಚೆನ್ನಾಗಿ ಬೆಳೆಸಿ. ನಮ್ಮ ಈ ನಿರ್ಧಾರದಿಂದ ಬೇರೆಯವರು ದುಃಖಪಡುವ ಅವಶ್ಯಕತೆ ಇಲ್ಲ ಎಂದು ಡೆತ್‍ನೋಟ್ ನಲ್ಲಿ ಬರೆದಿದ್ದಾರೆ.
ಡೆತ್‍ನೋಟ್ ಬರೆದ ನಂತರ ವೆಂಕಟ್‍ರೆಡ್ಡಿ ಹಾಗೂ ನಿಖಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.