Tag: Deathnote

  • ಜೆಇಇ ಪರೀಕ್ಷೆ ಪಾಸಾಗದ್ದಕ್ಕೆ 7ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ – ಡೆತ್‌ನೋಟ್‌ನಲ್ಲಿ ಏನಿತ್ತು?

    ಜೆಇಇ ಪರೀಕ್ಷೆ ಪಾಸಾಗದ್ದಕ್ಕೆ 7ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ – ಡೆತ್‌ನೋಟ್‌ನಲ್ಲಿ ಏನಿತ್ತು?

    ನವದೆಹಲಿ: ಜೆಇಇ ಪರೀಕ್ಷೆ ಪಾಸಾಗದ್ದಕ್ಕೆ ವಿದ್ಯಾರ್ಥಿನಿ 7ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದೆ.

    ಮೃತ ವಿದ್ಯಾರ್ಥಿನಿ ದೆಹಲಿಯ ಜಾಮಿಯಾ ನಗರದಲ್ಲಿ ವಾಸಿಸುತ್ತಿದ್ದು, ಪೊಲೀಸರು ಗುರುತನ್ನು ಬಹಿರಂಗಪಡಿಸಿಲ್ಲ. ಜಾರ್ಖಂಡ್ ಮೂಲದವಳು ಎಂದು ತಿಳಿದುಬಂದಿದೆ. ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (Indian Institute Of Technology) 2ನೇ ವರ್ಷದ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿದ್ದಳು. ಮಂಗಳವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೂರು ದಿನಗಳ ಬಳಿಕ ಬೆಳಕಿಗೆ ಬಂದಿದೆ.ಇದನ್ನೂ ಓದಿ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ಹಣ ಇರುವ ಬ್ಯಾಗ್ ಹಿಂತಿರುಗಿಸಿ ಮಾನವೀಯತೆ ಮೆರೆದ ನಿರ್ವಾಹಕಿ

    ಪೊಲೀಸರ ಮಾಹಿತಿ ಪ್ರಕಾರ, ಉನ್ನತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಕ್ಕಾಗಿ ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ (JEE) ಪಾಸಾಗಲು ಸಾಧ್ಯವಾಗದೇ ಇದ್ದಿದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಜೊತೆಗೆ ಡೆತ್‌ನೋಟ್ ಬರೆದಿಟ್ಟಿದ್ದು, ತನ್ನನ್ನು ಕ್ಷಮಿಸುವಂತೆ ಪೋಷಕರಲ್ಲಿ ಕೇಳಿಕೊಂಡಿದ್ದಾಳೆ. ನನ್ನನ್ನು ಕ್ಷಮಿಸಿ, ನನ್ನಿಂದ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಸಾಧ್ಯವಾಗಲಿಲ್ಲ. ಅಧ್ಯಯನದ ಒತ್ತಡ ಹಾಗೂ ಅಂದುಕೊಂಡ ರೀತಿಯಲ್ಲಿ ಓದಲು ಸಾಧ್ಯವಾಗಲಿಲ್ಲ ಎಂದು ಬರೆದಿದ್ದಾಳೆ.

    ಪೊಲೀಸರು ಇದನ್ನು ಆತ್ಮಹತ್ಯೆ ಎಂದು ತಿಳಿಸಿದ್ದು, ವಿದ್ಯಾರ್ಥಿಯ ಕೋರ್ಸ್ ಗೈಡ್ ಮೇಲೆ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಗಂಡನಿಗೆ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ಕೊಡ್ತಿದ್ದ ಖತರ್ನಾಕ್ ಸುಂದರಿ – ಸ್ಲೋ ಪಾಯ್ಸನ್ ಯಾವುದು?

  • ವರದಕ್ಷಿಣೆ ಕಿರುಕುಳ ಆರೋಪ- ನವವಿವಾಹಿತೆ ಆತ್ಮಹತ್ಯೆ

    ವರದಕ್ಷಿಣೆ ಕಿರುಕುಳ ಆರೋಪ- ನವವಿವಾಹಿತೆ ಆತ್ಮಹತ್ಯೆ

    – ದಯವಿಟ್ಟು ನನ್ನ ಒಡೆವೆಯನ್ನು ತವರು ಮನೆಗೆ ವಾಪಸ್ ಮಾಡಿ ಎಂದು ಡೆತ್‌ನೋಟ್ ಬರೆದಿದ್ದ ಮಹಿಳೆ

    ಕೋಲಾರ: ಕೌಟುಂಬಿಕ ಕಲಹದಿಂದ ಬೇಸತ್ತು ನೇಣು ಬಿಗಿದುಕೊಂಡು ನವವಿವಾಹಿತೆ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ನಗರ ಹೊರವಲಯದ ಸಹಕಾರ ನಗರದಲ್ಲಿ ನಡೆದಿದೆ.

    ಸಹಕಾರ ನಗರದ ನಿವಾಸಿ ಮಾನಸ (24) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಒಂದು ವರ್ಷದ ಹಿಂದೆ ತಾಲೂಕಿನ ತೂರಾಂಡಹಳ್ಳಿಯ ಉಲ್ಲಾಸ್ ಗೌಡ ಹಾಗೂ ಮಾನಸ ವಿವಾಹವಾಗಿದ್ದರು. ಆದರೆ ಉಲ್ಲಾಸ್ ಗೌಡ ಕುಟುಂಬಸ್ಥರು ಮಾನಸಳಿಗೆ ವರದಕ್ಷಿಣೆ ವಿಚಾರವಾಗಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಹಿಂದೆಯೂ ದೊಡ್ಡವರ ಸಮ್ಮುಖದಲ್ಲಿ ಎರಡು ಮೂರು ಪಂಚಾಯಿತಿ ರಾಜೀ ಸಂದಾನಗಳನ್ನು ನಡೆಸಿದ್ದರು. ಆದರೆ ರಾಜಿ ಸಂಧಾನ ಸಫಲವಾಗದ ಹಿನ್ನೆಲೆ, ವಿಚ್ಛೇದನಕ್ಕೆ (Divorce) ಅರ್ಜಿ ಹಾಕಿಕೊಳ್ಳಲಾಗಿತ್ತು. ಪರಿಣಾಮ ಉಲ್ಲಾಸ್ ಗೌಡ ತನ್ನ ಪತ್ನಿ ಮಾನಸಳನ್ನು ತವರು ಮನೆಗೆ ಕಳುಹಿಸಿದ್ದ. ತದ ನಂತರ ಉಲ್ಲಾಸ್ ಗೌಡ ವಿಚ್ಛೇದನ ಪಡೆದುಕೊಳ್ಳುವ ಉದ್ದೇಶದಿಂದ ನೋಟಿಸ್ ಸಹ ವಕೀಲರ ಕಡೆಯಿಂದ ಪತ್ನಿಯ ಮನೆಗೆ ಕಳುಹಿಸಿದ್ದ. ಇದರಿಂದಲೇ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾನಸ ಕುಟುಂಬಸ್ಥರು ಅಳಲು ತೊಡಿಕೊಂಡಿದ್ದಾರೆ. ಇದನ್ನೂ ಓದಿ: ಪಬ್‌ನಲ್ಲಿ ಮತ್ತೆ ಶುರುವಾಯ್ತು ಕನ್ನಡ ಹಾಡುಗಳಿಗಾಗಿ ಕಿರಿಕ್

    ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಾನಸ, ನನ್ನ ಸಾವಿಗೆ ಯಾರು ಕಾರಣರಲ್ಲ. ನನ್ನ ಜೀವನ ಉಲ್ಲಾಸ್ ಫ್ಯಾಮಿಲಿಯಿಂದ ಕಷ್ಟ ಆಗಿದೆ. ದಯವಿಟ್ಟು ನನ್ನ ಒಡವೆಯನ್ನು ನನ್ನ ಮನೆಗೆ ವಾಪಸ್ ಮಾಡಿ ಎಂದು ಡೆತ್‌ನೋಟ್ (Deathnote) ಬರೆದು ಇಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಕಾರ್ಕಳ ಅತ್ಯಾಚಾರ ಪ್ರಕರಣ- ಆರೋಪಿಗಳು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ

    ಪೋಷಕರು ಪೋಲೀಸರಿಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಕೋಲಾರ (Kolara) ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ನಗರದ ಆರ್‌ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಕ್ಷಿಣೆ ಕಿರುಕುಳ, ಅನುಮಾನಸ್ಪದ ಸಾವು ಹಾಗೂ ಡೆತ್‌ನೋಟ್ ಆಧರಿಸಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ:  ಎಸ್‌ಸಿಒ ಸಭೆಗೆ ಮೋದಿಗೆ ಆಹ್ವಾನ ನೀಡಿದ ಪಾಕ್‌ – ಪ್ರಧಾನಿ ಭಾಗವಹಿಸೋದು ಡೌಟ್‌

  • ಪತಿ, ಆತನ ಗರ್ಲ್‍ಫ್ರೆಂಡ್ ವಿರುದ್ಧ ಡೆತ್‍ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ

    ಪತಿ, ಆತನ ಗರ್ಲ್‍ಫ್ರೆಂಡ್ ವಿರುದ್ಧ ಡೆತ್‍ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ

    ಬೆಂಗಳೂರು: ಗಂಡನ ಅನೈತಿಕ ಸಂಬಂಧದಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಜುಲೈ 2ರ ಬೆಳಗ್ಗಿನ ಜಾವ ನಡೆದಿದೆ. ಮೃತ ಮಹಿಳೆಯನ್ನು ಹೆಗ್ಗನಹಳ್ಳಿ (Hegganahalli Bengaluru) ನಿವಾಸಿ ಪವಿತ್ರಾ ಎಂದು ಗುರುತಿಸಲಾಗಿದೆ. ಈಕೆ ಪತಿ ಹಾಗೂ ಆತನ ಗರ್ಲ್‍ಫ್ರೆಂಡ್ ವಿರುದ್ಧ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಏನಿದು ಪ್ರಕರಣ..?: ಮೊದಲ ಪತಿಗೆ ವಿಚ್ಛೇದನ (Divorce) ನೀಡಿ ಚೇತನ್ ಗೌಡರನ್ನು ಪವಿತ್ರಾ ಎರಡನೇ ಮದುವೆಯಾಗಿದ್ದಳು. ಚೇತನ್ ಕೆಲಸ ಮಡುತ್ತಿದ್ದ ಖಾಸಗಿ ಕಂಪನಿಯೊಂದರಲ್ಲಿಯೇ ಪವಿತ್ರಾ ಕೂಡ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು. ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಹೆಂಡತಿಯ ಕತ್ತು ಹಿಸುಕಿ ಕೊಲೆ – ಆರೋಪಿ ಪತಿ ಪರಾರಿ

    ಇತ್ತೀಚೆಗೆ ಮತ್ತೋರ್ವ ಯುವತಿಯ ವಿಚಾರವಾಗಿ ಪತಿ-ಪತ್ನಿ ಮಧ್ಯೆ ಜಗಳವಾಗುತ್ತಿತ್ತು. ಈ ಬಗ್ಗೆ ಪವಿತ್ರಾ ತನ್ನ ತಾಯಿ ಪದ್ಮಮ್ಮ ಬಳಿ ತಿಳಿಸಿದ್ದಳು. ಬಳಿಕ ಮನನೊಂದು ವಾಟ್ಸಾಪ್ ಸ್ಟೇಟಸ್ (Whatsapp Status) ಹಾಕಿ ನೇಣಿಗೆ ಶರಣಾಗಿದ್ದಾಳೆ. ಮಗಳ ವಾಟ್ಸಾಪ್ ಸ್ಟೇಟಸ್ ನಲ್ಲಿ ಡೆತ್‍ನೋಟ್ ನೋಡಿ ತಾಯಿ, ಮಗಳ ಮನೆಗೆ ಓಡಿ ಬಂದಾಗ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ.

    ಮೃತಳ ತಾಯಿ ಪದ್ಮಮ್ಮರ ದೂರಿನನ್ವಯ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆ ಪ್ರಚೋದನೆ) ಅಡಿ ದೂರು ದಾಖಲಾಗಿದೆ. ಸದ್ಯ ಕೆಂಗೇರಿ ಠಾಣೆಯಲ್ಲಿ‌ (Kengeri Police Station) ಚೇತನ್ ಗೌಡ ಹಾಗೂ ಮತ್ತೋರ್ವ ಯುವತಿ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಇತ್ತ ಡೆತ್ ನೋಟ್ ಹಾಗೂ ಮೃತಳ ಎರಡು ಪೋನ್ ವಶಕ್ಕೆ ಪಡೆದು ವಿಚಾರಣೆ ನಡೆಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡೆತ್‍ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಬಳ್ಳಾರಿಯಲ್ಲಿ ಪತ್ತೆ

    ಡೆತ್‍ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಬಳ್ಳಾರಿಯಲ್ಲಿ ಪತ್ತೆ

    ರಾಯಚೂರು: ಜಿಲ್ಲೆಯ ಸಿರವಾರದಲ್ಲಿ ಲೇಡಿ ಪಿಎಸ್‍ಐ (Lady PSI) ಗೀತಾಂಜಲಿ ಶಿಂಧೆ ಕಿರುಕುಳ ಆರೋಪ ಹಿನ್ನೆಲೆ ಡೆತ್‍ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಬಳ್ಳಾರಿಯಲ್ಲಿ ಪತ್ತೆಯಾಗಿದ್ದಾನೆ.

    ಯುವಕ ತಾಯಣ್ಣ ಆತ್ಮಹತ್ಯೆ ನಿರ್ಧಾರ ಬದಲಿಸಿ ಪಿಎಸ್‍ಐ ವಿರುದ್ಧ ಡಿಐಜಿಗೆ ದೂರು ನೀಡಿದ್ದಾನೆ. ಬಳ್ಳಾರಿಯಲ್ಲಿ ಡಿಐಜಿಗೆ ದೂರು ಕೊಡಲು ತೆರಳಿದ್ದ ತಾಯಣ್ಣನನ್ನ ಪೊಲೀಸರು ವಾಪಸ್ ಸಿರವಾರಗೆ ಕರೆದುಕೊಂಡು ಬಂದಿದ್ದಾರೆ. ಇದನ್ನೂ ಓದಿ: ಲೇಡಿ PSI ಕಿರುಕುಳ ಆರೋಪ- ಡೆತ್‌ನೋಟ್ ಬರೆದಿಟ್ಟು ಯುವಕ ನಾಪತ್ತೆ

    ಪೊಲೀಸರು ಯುವಕ ತಾಯಣ್ಣನಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ದಾಯಾದಿಗಳ ಜಮೀನು ವಿವಾದದಲ್ಲಿ ಮಧ್ಯೆ ಪ್ರವೇಶಿಸಿ ಪಿಎಸ್‍ಐ ಕಿರುಕುಳ ನೀಡಿರುವ ಆರೋಪವಿದೆ. ಡಿಸೆಂಬರ್ 3 ರಂದು ಬೆಳಗ್ಗಿನ ಜಾವದಿಂದ ಕಾಣೆಯಾಗಿದ್ದ ಯುವಕ ತಾಯಣ್ಣ ಡಿಸೆಂಬರ್ 5 ರಂದು ಬಳ್ಳಾರಿಯಲ್ಲಿ ಪತ್ತೆಯಾಗಿದ್ದಾನೆ.

    ಯುವಕ ನಾಪತ್ತೆ ಹಿನ್ನೆಲೆ ಸಿರವಾರ ಠಾಣೆ ಪಿಎಸ್‍ಐ ಗೀತಾಂಜಲಿ ಶಿಂಧೆ ವಿರುದ್ಧ ಈಗಾಗಲೇ ಎಫ್‍ಐಆರ್ (First Information Report) ದಾಖಲು ಮಾಡಲಾಗಿದೆ. ಯುವಕ ತಾಯಣ್ಣ ಸಹೋದರ ಬಸವಲಿಂಗ ಸಿರವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪಿಎಸ್‍ಐ ಕಿರುಕುಳ ಹೆಚ್ಚಾಗಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಹೋಗಿದ್ದೆ, ಈಗ ಮೇಲಾಧಿಕಾರಿಗಳಿಂದ ನ್ಯಾಯಸಿಗಬಹುದು ಅನ್ನೋ ನಂಬಿಕೆಯಿದೆ ಅಂತ ತಾಯಣ್ಣ ಹೇಳಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಬಂಡೇ ಮಠದ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಲೋಕಲ್ ಸ್ವಾಮೀಜಿ ಕೈವಾಡ!

    ಬಂಡೇ ಮಠದ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಲೋಕಲ್ ಸ್ವಾಮೀಜಿ ಕೈವಾಡ!

    ರಾಮನಗರ: ಮಾಗಡಿ ತಾಲೂಕಿನ ಬಂಡೇ ಮಠದ (Bande Mutt) ಬಸವಲಿಂಗ ಶ್ರೀಗಳ (Basavalinga Swamiji) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

    ಬಂಡೆ ಮಠದ ಶ್ರೀಗಳ ಆತಹತ್ಯೆ ಹಿಂದೆ ಸ್ಥಳೀಯ ಸ್ವಾಮೀಜಿಯ ಕೈವಾಡ ಇತ್ತು ಅನ್ನೋ ಮಾಹಿತಿಯೊಂದು ಪಬ್ಲಿಕ್ ಟಿವಿಗೆ (Public TV) ಲಭ್ಯವಾಗಿದೆ. ಇದನ್ನೂ ಓದಿ: ಬಸವಲಿಂಗ ಶ್ರೀ ವೀಡಿಯೋ ಕಾಲ್ ವೈರಲ್- ಮೂವರು ಮಹಿಳೆಯರ ಪ್ರತ್ಯೇಕ ವಿಚಾರಣೆ

    ಹೌದು. ಸ್ಥಳೀಯ ಸ್ವಾಮೀಜಿ ಹಾಗೂ ಇತರ ಏಳೆಂಟು ಮಂದಿಯಿಂದ ಕಿರುಕುಳ ಎದುರಾಗ್ತಿದೆ. ಮಠದ ವಿಚಾರದಲ್ಲಿ ಆಗ್ಗಾಗ್ಗೆ ತೊಂದರೆ ಉಂಟು ಮಾಡ್ತಿದ್ದಾರೆ. ನನ್ನ ಸಾವಿಗೆ ಗೊತ್ತಿಲ್ಲದಿರುವ ಆ ಮಹಿಳೆಯೇ ಕಾರಣ ಎಂದು ಸಾವಿಗೂ ಮುನ್ನ ಡೆತ್ ನೋಟ್‌ನಲ್ಲಿ (Death Note) ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಗಳ ಆತ್ಮಹತ್ಯೆ ಹಿಂದೆ ಲೋಕಲ್ ಸ್ವಾಮೀಜಿಯೊಬ್ಬರ ಕೈವಾಡ ಇರೋದು ತನಿಖೆ (Investigation) ವೇಳೆ ಕನ್ಫರ್ಮ್ ಆಗಿದೆ. ಅಲ್ಲದೇ ಸ್ಥಳೀಯ ಸ್ವಾಮೀಜಿಯೊಂದಿಗೆ ಏಳೆಂಟು ಮಂದಿ ಸಹ ಕೈ ಜೋಡಿಸಿರುವ ಮಾಹಿತಿ ಇದೆ ಅನ್ನೋದು ಪೊಲೀಸರ ಗುಮಾನಿ. ಇದನ್ನೂ ಓದಿ: ಬಂಡೇ ಮಠದ ಶ್ರೀ ಬರೆದಿದ್ದು ಒಟ್ಟು 6 ಪುಟಗಳ ಡೆತ್‍ನೋಟ್ – ಈಗಾಗಲೇ 20 ಮಂದಿಯ ವಿಚಾರಣೆ

    ಮಹಿಳೆ ಮೊಬೈಲ್ ಸಂಖ್ಯೆ ಪತ್ತೆ: ಆತ್ಮಹತ್ಯೆ (Suicide) ದಿನ ಶ್ರೀಗಳ ಮೊಬೈಲ್ (Mobile) ಸೀಜ್ ಮಾಡಿ ಎಫ್‌ಎಸ್‌ಎಲ್‌ಗೆ ಕಳಿಸಿದ್ದ ಪೊಲೀಸರು ಇದೀಗ ಮೊಬೈಲ್‌ನ ಸಂಪೂರ್ಣ ಡೀಟೈಲ್ಸ್ ಕಲೆಹಾಕಿದ್ದಾರೆ. ಒಟ್ಟು ಮೂರು ವೀಡಿಯೋಗಳನ್ನ ಸ್ವಾಮೀಜಿಗೆ ಮೊಬೈಲ್‌ನಲ್ಲಿ ಕಳುಹಿಸಲಾಗಿದೆ. ಅದರಲ್ಲಿ ಮಹಿಳೆಯ ಮುಖ ಕಾಣದಂತೆ ಎಡಿಟ್ ಮಾಡಲಾಗಿದೆ. ಇದೀಗ ಸ್ವಾಮೀಜಿಗೆ ವೀಡಿಯೊ ಕಾಲ್ ರೆಕಾರ್ಡ್ ಕಳಿಸಿರೊ ಆ ಮಹಿಳೆಯ ಮೊಬೈಲ್ ನಂಬರ್ ಪತ್ತೆ ಮಾಡಲಾಗಿದೆ. ಮಹಿಳೆಯ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಇಂದು ಅಥವಾ ನಾಳೆ ಒಳಗಾಗಿ ಅರೆಸ್ಟ್ ಮಾಡುವ ಸಾಧ್ಯತೆ ಇದೆ. ಮಹಿಳೆ ವಿಚಾರಣೆ ಬಳಿಕ ಮಹಿಳೆ ಹಿಂದಿರುವ ಕಾಣದ ಕೈಗಳು ಸಹ ಹೊರಗೆ ಬರುವ ಸಾಧ್ಯತೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹನಿಟ್ರ‍್ಯಾಪ್‌ಗೆ ಬಲಿಯಾದ್ರಾ ಬಂಡೇ ಮಠದ ಬಸವಲಿಂಗ ಶ್ರೀ?

    ಹನಿಟ್ರ‍್ಯಾಪ್‌ಗೆ ಬಲಿಯಾದ್ರಾ ಬಂಡೇ ಮಠದ ಬಸವಲಿಂಗ ಶ್ರೀ?

    ರಾಮನಗರ: ಮಾಗಡಿ ತಾಲೂಕಿನ ಕಂಚುಗಲ್ ಮಠದ ಬಸವಲಿಂಗ ಶ್ರೀಗಳ (Basavalinga Swamiji) ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಶ್ರೀಗಳ ಮೊಬೈಲ್ ಕಾಲ್ ಹಾಗೂ ಡೆತ್‌ನೋಟ್ (Death Note) ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಉಲ್ಲೇಖ ಆಗಿರುವ ಕೆಲ ಅಂಶಗಳು ಹನಿಟ್ರ‍್ಯಾಪ್ (Honeytrap) ಸುಳಿವು ನೀಡಿದ್ದು, ಇನ್ನು 2-3 ದಿನಗಳಲ್ಲಿ ಶ್ರೀಗಳ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.

    ರಾಜ್ಯದಲ್ಲಿ ಕೆಲ ಸ್ವಾಮೀಜಿಗಳು ಹನಿಟ್ರ‍್ಯಾಪ್ ಜಾಲಕ್ಕೆ ಒಳಗಾಗಿದ್ದು, ಮುರುಘಾ ಶ್ರೀಗಳ ಪ್ರಕರಣದ ಬಳಿಕ ಈ ಜಾಲ ಇನ್ನಷ್ಟು ವಿಸ್ತಾರಗೊಂಡಿದೆ ಎನ್ನುವುದು ಖಾತ್ರಿಯಾಗಿದೆ. 6-7 ತಿಂಗಳ ಹಿಂದೆ ಮಾಗಡಿಯ ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿ ಮೃತದೇಹ ಸಹ ಕಿಟಕಿಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಬಂಡೇ ಮಠದ ಸ್ವಾಮೀಜಿ ಸಹ ಅದೇ ಮಾದರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಂಚುಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿಯ ಆತ್ಮಹತ್ಯೆ ಸಂಬಂಧ ಇಡೀ ಪ್ರಕರಣಕ್ಕೆ ರೋಚಕ ತಿರುವು ನೀಡಿರುವುದು ಡೇತ್‌ನೋಟ್. ಡೆತ್‌ನೋಟ್‌ನಲ್ಲಿ ಉಲ್ಲೇಖ ಆಗಿರುವ ಕೆಲ ಅಂಶಗಳು ಪ್ರಕರಣದ ದಿಕ್ಕನ್ನು ಬದಲಿಸಿವೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಡೇತ್‌ನೋಟ್ ಕೂಡಾ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ನಾನು ಮಠದ ಉತ್ತರಾಧಿಕಾರಿಯಾದ ಬಳಿಕ ಯಾವುದೇ ಹಗರಣವನ್ನು ಮಾಡಿಲ್ಲ. ಸಿದ್ದಗಂಗಾ ಮಠಕ್ಕೆ ನಂಬುಗೆಯಿಂದಲೇ ಕೆಲಸ ಮಾಡಿದ್ದೇನೆ. ಆದರೆ ಕೆಲವರು ಇತ್ತೀಚೆಗೆ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಮಹಿಳೆಯೊಬ್ಬಳು 6-7 ತಿಂಗಳಿನಿಂದ ನನಗೆ ಕರೆ ಮಾಡಿ ಹಿಂಸೆ ನೀಡುತ್ತಿದ್ದಳು ಎಂಬ ಮಾಹಿತಿ ವೈರಲ್ ಆಗಿರುವ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ. ಆದರೆ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಡೆತ್‌ನೋಟ್ ನಿಜವಾದುದಲ್ಲ, ಕೇವಲ 1-2 ಅಂಶಗಳು ಸಾಮ್ಯತೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಕೋಮು ಘರ್ಷಣೆ, ಪೊಲೀಸರ ಮೇಲೂ ಪೆಟ್ರೋಲ್ ಬಾಂಬ್ ದಾಳಿ- 19 ಮಂದಿ ವಶ

    ಒಂದೆಡೆ ಹನಿಟ್ರ‍್ಯಾಪ್ ಶಂಕೆ ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ಡೆತ್‌ನೋಟ್‌ನಲ್ಲಿ ಕೆಲವರ ಹೆಸರುಗಳನ್ನು ಉಲ್ಲೆಖ ಮಾಡಲಾಗಿದೆ. ಆದರೆ ಅವರು ಸಾವಿಗೆ ಕಾರಣ ಎಂದು ಬರೆದಿಲ್ಲ. ಒಬ್ಬ ಅನಾಮಧೇಯ ಹೆಸರನ್ನು ಸ್ಪಷ್ಟವಾಗಿ ಉಲ್ಲೆಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಪ್ರಕರಣ ಸಂಬಂಧ 306 ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದ್ದಾರೆ.

    ಒಟ್ಟಾರೆ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್‌ನೋಟ್‌ನ ಕೆಲ ಅಂಶಗಳನ್ನು ತನಿಖೆಯ ದಿಕ್ಕನ್ನೇ ಬದಲಿಸಿವೆ. ಒಂದೆಡೆ ಹನಿಟ್ರ‍್ಯಾಪ್ ಶಂಕೆ ವ್ಯಕ್ತವಾಗಿದ್ರೆ, ಮತ್ತೊಂದೆಡೆ ಮಠದ ಅಧಿಕಾರ ಹಿಡಿಯಲು ಕೆಲವರು ಸಂಚು ರೂಪಿಸಿದ್ದಾರೆ ಎನ್ನಲಾಗುತ್ತಿದೆ. ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬೀಳಬೇಕಿದೆ. ಇದನ್ನೂ ಓದಿ: ಇಶಾ ಫೌಂಡೇಶನ್ ನಲ್ಲಿ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ ಕಾಂತಾರ

    Live Tv
    [brid partner=56869869 player=32851 video=960834 autoplay=true]

  • ಪ್ರೇಮ ವೈಫಲ್ಯದಿಂದ ಮನನೊಂದು ಯುವಕ ಆತ್ಮಹತ್ಯೆ- ಸಾವಿನಲ್ಲೂ ಸಾರ್ಥಕತೆ

    ಪ್ರೇಮ ವೈಫಲ್ಯದಿಂದ ಮನನೊಂದು ಯುವಕ ಆತ್ಮಹತ್ಯೆ- ಸಾವಿನಲ್ಲೂ ಸಾರ್ಥಕತೆ

    ಶಿವಮೊಗ್ಗ: ಪ್ರೇಮ (Love) ವೈಫಲ್ಯದಿಂದ ಮನನೊಂದ ಯುವ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ನಡೆದಿದೆ.

    ಹಿತ್ತಲ ಗ್ರಾಮದ ಮದನ್ ಕುಮಾರ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಡೆತ್ ನೋಟ್ ಬರೆದಿಟ್ಟು ಕಳೆದ ನಾಲ್ಕು ದಿನಗಳ ಹಿಂದೆಯೇ ತನ್ನ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ಇದನ್ನೂ ಓದಿ: ಕೊಟ್ಟ ಮಾತಿನಂತೆ ಕಿರುತೆರೆ ನಟಿ ಸ್ವಪ್ನಾ ಪತಿಗೆ ಕೆಲಸ ಕೊಡಿಸಿದ ಗೋಲ್ಡನ್ ಸ್ಟಾರ್ ಗಣೇಶ್

    ಮದನ್ ಕುಮಾರ್ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಮನೆಯವರು ಯುವಕನ ವಿರುದ್ಧ ಅತ್ಯಾಚಾರ ಹಾಗೂ ಕಿರುಕುಳ ನೀಡುತ್ತಿದ್ದ ಆರೋಪ ಹೊರಿಸಿ, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಗೆ (Police Station) ದೂರು ನೀಡಿದ್ದರು. ಈ ಸಂಬಂಧ ಪ್ರಕರಣವೂ ದಾಖಲಾಗಿತ್ತು. ಯುವತಿ ಮನೆಯವರ ಕಿರುಕುಳದಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ: ದಿನೇಶ್ ಗುಂಡೂರಾವ್

    ಆತ್ಮಹತ್ಯೆಗೂ ಮುನ್ನ ಯುವಕ ತನ್ನ ಅಂಗಾಂಗ ದಾನ ಮಾಡುವಂತೆ ಡೆತ್ ನೋಟ್ ಬರೆದಿಟ್ಟಿದ್ದಾನೆ. ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ. ತನ್ನ ಪ್ರೇಮ ವೈಫಲ್ಯದ ನಡುವೆಯೂ ಯುವಕ ಮಾನವೀಯತೆ ಮೆರೆದಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಈಶ್ವರಪ್ಪಗೆ B-ರಿಪೋರ್ಟ್ ಹಾಕ್ತಾರೆ ಅಂತಾ ನನಗೆ ಗೊತ್ತಿತ್ತು: ಸಿದ್ದರಾಮಯ್ಯ

    ಈಶ್ವರಪ್ಪಗೆ B-ರಿಪೋರ್ಟ್ ಹಾಕ್ತಾರೆ ಅಂತಾ ನನಗೆ ಗೊತ್ತಿತ್ತು: ಸಿದ್ದರಾಮಯ್ಯ

    ತುಮಕೂರು: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪಗೆ ಬಿ-ರಿಪೋರ್ಟ್ ಹಾಕ್ತಾರೆ ಅಂತಾ ನನಗೆ ಮೊದಲೇ ಗೊತ್ತಿತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ B-ರಿಪೋರ್ಟ್ ಸಲ್ಲಿಕೆ ವಿಚಾರವಾಗಿ ತುಮಕೂರಿನಲ್ಲಿ ಅವರಿಂದು ಮಾತನಾಡಿದರು. ಇದನ್ನೂ ಓದಿ: ಗುಪ್ತಗಾಮಿನಿಯಾಗಿ ಹರಡುತ್ತಿರುವ ಕೊರೊನಾ – ಐದು ದಿನದಲ್ಲಿ 25 ಜನರಿಗೆ ಸೋಂಕು

    ಬಿ-ರಿಪೋರ್ಟ್ ಹಾಕ್ತಾರೆ ಅಂತಾ ನನಗೆ ಮೊದಲೇ ಗೊತ್ತಿತ್ತು. ಅವರ ಮೊಬೈಲ್‌ನಲ್ಲಿ ಡೆತ್‌ನೋಟ್ ಸಾಕ್ಷಿ ಇರಬೇಕಾದರೆ ಬಿ-ರಿಪೋರ್ಟ್ ಹೇಗೆ ಹಾಕ್ತಾರೆ. ಕಾಮಗಾರಿ ಮಾಡಿ ನನಗೆ ದುಡ್ಡು ಬಂದಿಲ್ಲ, ಈಶ್ವರಪ್ಪ ದುಡ್ಡು ಕೇಳಿದ್ರು. ಹಾಗಾಗಿ ನನಗೆ ಕೋಡೋಕೆ ಆಗಿಲ್ಲ. ನನ್ನ ಸಾವಿಗೆ ಇವರೇ ಕಾರಣ ಅಂತಾ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊರಿಯನ್ ವೀಡಿಯೋ ನೋಡುವ ಹವ್ಯಾಸ ಬೆಳೆಸಿಕೊಂಡಿದ್ದ ವಿದ್ಯಾರ್ಥಿನಿ ಆತ್ಮಹತ್ಮೆ

    ಕೊರಿಯನ್ ವೀಡಿಯೋ ನೋಡುವ ಹವ್ಯಾಸ ಬೆಳೆಸಿಕೊಂಡಿದ್ದ ವಿದ್ಯಾರ್ಥಿನಿ ಆತ್ಮಹತ್ಮೆ

    ತಿರುವನಂತಪುರಂ: ಬಾಲಕಿಯೊಬ್ಬಳು ಕೊರಿಯನ್ ವೀಡಿಯೋಗಳನ್ನು ನೋಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದ 16 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ನಡೆದಿದೆ.

    ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುತ್ತಿದ್ದೇನೆ ಮತ್ತು ನನಗೆ ಗೆಳೆಯರು ಯಾರೂ ಇಲ್ಲ. ಅಲ್ಲದೆ, ಕೊರಿಯನ್ ಮ್ಯೂಸಿಕ್ ವಿಡಿಯೊಗಳನ್ನು ವಿಪರೀತವಾಗಿ ನೋಡುತ್ತಿದ್ದೇನೆ. ಅದರಿಂದ ಹೊರಬರಲಾಗುತ್ತಿಲ್ಲ ಎಂದು ವಿದ್ಯಾರ್ಥಿನಿ ಡೆತ್‍ನೋಟ್‍ನಲ್ಲಿ ಬರೆದಿದ್ದಾಳೆ. ಇದನ್ನೂ ಓದಿ: ಸುಳ್ಯದ ಯುವಕನ ಮೇಲೆ ಗುಂಡಿನ ದಾಳಿ

    10ನೇ ತರಗತಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಈಕೆ ಖಿನ್ನತೆಗೆ ಜಾರಿದ್ದಳು. ಮನೆಯಲ್ಲೇ ಓದಲೆಂದು ಕೊಠಡಿಯನ್ನು ಬಂದ್ ಮಾಡುತ್ತಿದ್ದಳು. ಓದಲೆಂದು ಬಾಗಿಲು ಹಾಕಿಕೊಂಡಿದ್ದ ವಿದ್ಯಾರ್ಥಿನಿ ಕೊಠಡಿಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಮೂಸೆವಾಲಾ ರೀತಿಯಲ್ಲೇ ಹತ್ಯೆ ಮಾಡೋದಾಗಿ ಸಲ್ಮಾನ್‌ಖಾನ್‌ಗೆ ಬೆದರಿಕೆ – ಕೃಷ್ಣಮೃಗ ಬೇಟೆಯೇ ಮುಳುವಾಯ್ತ?

    ಓದಿನಲ್ಲಿ ಹಿಂದುಳಿದಿರುವುದು ಮತ್ತು ಕೊರಿಯನ್ ವೀಡಿಯೊ ನೋಡುವ ವ್ಯಸನ ಬೆಳೆಸಿಕೊಂಡಿರುವುದರಿಂದ ಅವಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅದಕ್ಕೆ ಪೂರಕವಾಗಿ ಬಾಲಕಿ ಬರೆದಿರುವ ಡೆತ್‍ನೋಟ್ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

  • ಹಠ ಮಾಡಿ ಇಲ್ಲಿಗೆ ಬಂದೆ, ಇದೀಗ ಹಠದಲ್ಲೇ ಹೋಗ್ತಿದ್ದೀನಿ: ಅಂಜು ಡೆತ್‍ನೋಟ್

    ಹಠ ಮಾಡಿ ಇಲ್ಲಿಗೆ ಬಂದೆ, ಇದೀಗ ಹಠದಲ್ಲೇ ಹೋಗ್ತಿದ್ದೀನಿ: ಅಂಜು ಡೆತ್‍ನೋಟ್

    ಬೆಂಗಳೂರು: ಪ್ರೀತಿಸಿ ಮದುವೆಯಾಗಿ 4 ತಿಂಗಳಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಮಹಿಳಾ ಎಂಜಿನಿಯರ್ ಅಂಜು ಅವರು ತಾವು ನಿರ್ಧಾರ ತೆಗೆದುಕೊಳ್ಳುವ ಮೊದಲು ಡೆತ್ ನೋಟ್ ಬರೆದಿಟ್ಟಿದ್ದಾರೆ.

    ಈ ಡೆತ್‍ನೋಟ್‍ನಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿರುವ ಕುರಿತು ಹೇಳಿಕೊಂಡಿದ್ದಾರೆ. ಅಲ್ಲದೆ ಅಮ್ಮನ ಬಳಿ ಕ್ಷಮೆಯಾಚಿಸಿದ್ದಾರೆ. ಹಠ ಮಾಡಿ ಮದುವೆಯಾಗಿ ಇಲ್ಲಿಗೆ ಬಂದೆ. ಇದೀಗ ಅದೇ ಹಠದಿಂದ ಇಲ್ಲಿಂದ ಹೋಗುತ್ತಿರುವುದಾಗಿ ಅಂಜು ಬರೆದಿದ್ದಾರೆ.

    ಡೆತ್ ನೋಟ್ ನಲ್ಲಿ ಏನಿದೆ..?: ನನ್ನ ಸಾವಿಗೆ ನಾನೇ ಕಾರಣ. ನನ್ನ ಮನಸ್ಥಿತಿ ಸರಿ ಇಲ್ಲ. ಏನು ಮಾಡ್ತಿದ್ದೀನಿ ಗೊತ್ತಾಗ್ತಿಲ್ಲ ಅಂಜನ್. ಐ ಡೋಂಟ್ ನೋ ವಾಟ್ ಐ ಆ್ಯಮ್ ಡೂಯಿಂಗ್. ನನಗೆ ಬೆನ್ನು ನೋವಿದೆ. ಆದರೂ ಹೇಳಿಕೊಳ್ಳಲು ಆಗ್ತಿಲ್ಲ. ಕೋಪ ಹಠ ಮಾಡಿಕೊಳ್ಳುತ್ತಿದ್ದೆ. ನನಗೆ ಹರ್ಟ್ ಆಗ್ತಿತ್ತು. ನನ್ನ ಜೊತೆ ಇದ್ದರೂ ದೂರ ಇದ್ದೀಯಾ ಅಂತಾ ಅನ್ನಿಸ್ತಿದೆ. ಏನೂ ಗೊತ್ತಾಗ್ತಿಲ್ಲ ಬರಿಯೋದಕ್ಕೆ. ಬಾಯ್ ಇನ್ಯಾವತ್ತೂ ನಿನಗೆ ಹಿಂಸೆ ಕೊಡೋದಕ್ಕೆ ಬರೋದಿಲ್ಲ. ಅಮ್ಮಾ ಐ ಲವ್ ಯೂ, ಹಠ ಮಾಡಿಕೊಂಡು ಇಲ್ಲಿಗೆ ಬಂದೆ. ಹಠ ಮಾಡಿಕೊಂಡು ಹೋಗ್ತಿದ್ದೀನಿ. ಅಮ್ಮಾ ನನ್ನ ಕ್ಷಮಿಸು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ಪೋಷಕರ ಆರೋಪವೇನು..?: ಕಡೂರು ತಾಲೂಕು ಬೋಳನಹಳ್ಳಿಯ ರವಿಕುಮಾರ್ ಹೇಮಾವತಿ ದಂಪತಿಯ ಎರಡನೇ ಪುತ್ರಿಯಾಗಿರುವ ಅಂಜು ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಅಗಿ ಕೆಲಸ ನಿರ್ವಹಿಸುತ್ತಿದ್ದರು. ಈಕೆ ಪ್ರೀತಿ ಮಾಡಿ ಕಳೆದ 4 ತಿಂಗಳ ಹಿಂದೆಯಷ್ಟೇ ಅರಕಲಗೂಡು ನಿವಾಸಿ ಅಂಜನ್ ಕಣಿಯಾರ್ (28) ಎಂಬಾತನನ್ನು ವರಿಸಿದ್ದರು. ಇದನ್ನೂ ಓದಿ: ಪ್ರೀತಿಸಿ 4 ತಿಂಗಳ ಹಿಂದೆಯಷ್ಟೇ ಮದ್ವೆಯಾಗಿದ್ದ ಮಹಿಳಾ ಎಂಜಿನಿಯರ್ ಆತ್ಮಹತ್ಯೆ

    ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿಇ ಮಾಡಿದ್ದ ಅಂಜು ಹಾಸನದಲ್ಲಿ ಓದುವಾಗ ಇಬ್ಬರ ನಡುವೆ ಪ್ರೀತಿಯಾಗಿತ್ತು. ನಂತರ ಪೋಷಕರನ್ನ ಒಪ್ಪಿಸಿ ಕಳೆದ ಫೆಬ್ರವರಿಯಲ್ಲಿ ಕಡೂರಿನ ಬಳ್ಳೆಕೆರೆಯಲ್ಲಿ ಮದುವೆಯಾಗಿದ್ದರು. ಬಳಿಕ ಯುವತಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿತ್ತು. ಅಲ್ಲದೆ ತನ್ನ ತಾಯಿ ಬಳಿ ಆಗಾಗ ಅಂಜು ಕಷ್ಟ ಹೇಳಿಕೊಳ್ಳುತ್ತಿದ್ದರಂತೆ. ಹೀಗಾಗಿ ಇದೀಗ ಹುಡುಗನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಅಂಜು ಪೋಷಕರು ಆರೋಪ ಮಾಡುತ್ತಿದ್ದಾರೆ.

    ಪತಿ ಹೇಳಿದ್ದೇನು..?: ನಿನ್ನೆ ಬೆಳಗ್ಗೆ ಸಂಬಂಧಿ ಹುಟ್ಟುಹಬ್ಬಕ್ಕೆ ಕುಟುಂಬಸ್ಥರ ಜೊತೆ ತೆರಳಿದ್ದೆ. ಅಂಜು ಮನೆಯಲ್ಲಿಯೇ ಇದ್ದಳು. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾರ್ಯಕ್ರಮ ಮುಗಿಸಿ ಸಂಜೆ 6 ಗಂಟೆಗೆ ವಾಪಸ್ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಂಜನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಡೆತ್ ನೋಟ್ ಪ್ರಕಾರ ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಂಜುಗೆ ಅನಾರೋಗ್ಯ ಸಮಸ್ಯೆ ಕಾಡ್ತಿತ್ತಂತೆ. ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದ ಅಂಜುಗೆ ಹಲವು ಕಡೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇದೇ ಕಾರಣಕ್ಕೆ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರೊ ಶಂಕೆ ವ್ಯಕ್ತವಾಗುತ್ತಿದೆ. ಈ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.