Tag: death

  • ತೆಲಂಗಾಣ ಸರ್ಕಾರಿ ಬಸ್ ಡಿಕ್ಕಿ ಹೊಡೆದು ಪೋಷಕರ ಕಣ್ಣೆದುರೇ ಪ್ರಾಣ ಬಿಟ್ಟ 8ರ ಬಾಲಕ!

    ತೆಲಂಗಾಣ ಸರ್ಕಾರಿ ಬಸ್ ಡಿಕ್ಕಿ ಹೊಡೆದು ಪೋಷಕರ ಕಣ್ಣೆದುರೇ ಪ್ರಾಣ ಬಿಟ್ಟ 8ರ ಬಾಲಕ!

    ಯಾದಗಿರಿ: ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ತೆಲಂಗಾಣದ ಸರ್ಕಾರಿ ಬಸ್ ಡಿಕ್ಕಿಯಾಗಿ ಬಾಲಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಯಾದಗಿರಿ ತಾಲೂಕಿನ ಪಸಪುಲ್ ಕ್ರಾಸ್ ಬಳಿ ನಡೆದಿದೆ.

    8 ವರ್ಷದ ಬಾಲಕ ಕಾರ್ತಿಕ್ ಮೃತ ದುರ್ದೈವಿ. ಕಾರ್ತಿಕ್ ತನ್ನ ಪೋಷಕರೊಂದಿಗೆ ದೇವಸ್ಥಾನಕ್ಕೆ ಹೋಗಿ ಮನೆಗೆ ವಾಪಾಸ್ಸಾಗಲೆಂದು ರಸ್ತೆ ದಾಟುತ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಪೋಷಕರ ಕಣ್ಣೆದುರೇ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಬಾಲಕನಿಗೆ ಡಿಕ್ಕಿ ಹೊಡೆದ ನಂತರ ವೇಗವಾಗಿ ಮುಂದೆ ಹೋದ ಬಸ್ಸನ್ನು ಗ್ರಾಮಸ್ಥರು ತಡೆದಿದ್ದಾರೆ. ಘಟನೆ ಸಂಬಂಧ ಬಸ್ ಚಾಲಕ ನರಸಿಂಹಲುನನ್ನ ಪೊಲೀಸರು ಬಂಧಿಸಿದ್ದು, ನಿರ್ವಾಹಕ ಪರಾರಿಯಾಗಿದ್ದಾನೆ.

    ಗುರುಮಠಕಲ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಗುಡುಗು-ಸಿಡಿಲು, ಬಿರುಗಾಳಿಯೊಂದಿಗೆ ಮಳೆ – ಮುಂಗಾರು ಪೂರ್ವ ವರ್ಷಧಾರೆಗೆ ಐವರು ಬಲಿ

    ಗುಡುಗು-ಸಿಡಿಲು, ಬಿರುಗಾಳಿಯೊಂದಿಗೆ ಮಳೆ – ಮುಂಗಾರು ಪೂರ್ವ ವರ್ಷಧಾರೆಗೆ ಐವರು ಬಲಿ

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ಜೋರಾಗಿದೆ. ಗುಡುಗು-ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಕೆಲವು ಕಡೆ ಪ್ರಾಣ ಹಾನಿ, ಆಸ್ತಿ-ಪಾಸ್ತಿ ನಷ್ಟ ಉಂಟು ಮಾಡಿದೆ.

    ಯಾದಗಿರಿ ತಾಲೂಕಿನ ಮುದ್ನಾಳ ದೊಡ್ಡ ತಾಂಡಾದದಲ್ಲಿ ಮನೆ ಕುಸಿದು 8 ವರ್ಷದ ಬಾಲಕ ಅಭಿ ರಾಥೋಡ್ ಮೃತಪಟ್ಟಿದ್ದಾನೆ. ಯಾದಗಿರಿ, ಸುರಪುರ, ಶಹಾಪುರ, ಗುರುಮಠಕಲ್‍ನಲ್ಲಿ ಧಾರಾಕಾರ ಮಳೆಯಾಗಿದೆ. ಕೊಪ್ಪಳದಲ್ಲಿ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಕುಷ್ಟಗಿ ತಾಲೂಕಿನ ನೆರೇಬಂಚಿ ಗ್ರಾಮದ 28 ವರ್ಷದ ಲಕ್ಷ್ಮಣ ಬಿಜಕಲ್, ಬಾದಿನಾಳ ಗ್ರಾಮದ 26 ವರ್ಷದ ರೇಣುಕಾ ಪರಸಾಪೂರ ಮೃತಪಟ್ಟಿದ್ದಾರೆ. ಬಾದಿಮನಾಳ ಗ್ರಾಮದ ಶಾಂತವ್ವ ಎಂಬವರ ಸ್ಥಿತಿ ಚಿಂತಾಜನಕವಾಗಿದೆ.

    ಕೊಪ್ಪಳ, ಗಂಗಾವತಿ, ಯಲಬುರ್ಗಾದಲ್ಲಿ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಬೆಳಗಾವಿಯ ಬಡಾಲ ಅಂಕಲಗಿಯಲ್ಲಿ ಸಿಡಿಲು ಬಡಿದು ರುದ್ರವ್ವ ಕುಡೆನಹಟ್ಟಿ ಎಂಬವರು ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ತೆಂಕಲಹುಂಡಿಯಲ್ಲಿ 13 ವರ್ಷದ ಬಾಲಕ ಮನು ಮೃತಪಟ್ಟಿದ್ದಾನೆ.

    ಕೋಲಾರ ಹೊರವಲಯದಲ್ಲಿ ಮದುವೆಗಾಗಿ ಶಾಂತಿ ಕಲ್ಯಾಣ ಮಂಟಪಕ್ಕೆ ಮಾಡಲಾಗಿದ್ದ ಅಲಂಕಾರ ಹಾಳಾಗಿದೆ. ಮೈಸೂರು, ರಾಮನಗರ, ಚಿಕ್ಕಬಳ್ಳಾಪುರದಲ್ಲಿ ಕೂಡ ಧಾರಾಕಾರ ಮಳೆಯಾಗಿದೆ.

  • ಆಹಾರ ಅರಸಿ ಸಿಆರ್‍ಪಿಎಫ್ ಕ್ಯಾಂಪ್‍ಗೆ ಬಂದ ಕಾಡಾನೆಗಳ ದಾಳಿಗೆ ಇಬ್ಬರು ಯೋಧರು ಹುತಾತ್ಮ

    ಆಹಾರ ಅರಸಿ ಸಿಆರ್‍ಪಿಎಫ್ ಕ್ಯಾಂಪ್‍ಗೆ ಬಂದ ಕಾಡಾನೆಗಳ ದಾಳಿಗೆ ಇಬ್ಬರು ಯೋಧರು ಹುತಾತ್ಮ

    ಬೆಂಗಳೂರು: ಆಹಾರ ಆರಿಸಿ ಬಂದಿದ್ದ ಕಾಡಾನೆ ದಾಳಿಗೆ ಇಬ್ಬರು ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.

    ಇಂದು ಬೆಳಗಿನ ಜಾವ ಬೆಂಗಳೂರು ಹೊರವಲಯ ಬನ್ನೇರುಘಟ್ಟ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಕಗ್ಗಲೀಪುರ ವಲಯದ ಅರಣ್ಯ ಪ್ರದೇಶದಲ್ಲಿರುವ ಸಿಆರ್‍ಪಿಎಫ್ ಸೇನಾ ಶಿಬಿರದ ಬಳಿ ಕಾಡಾನೆಗಳು ಆಹಾರಕ್ಕಾಗಿ ಲಗ್ಗೆಯಿಟ್ಟಿವೆ. ಈ ವೇಳೆ ಪುಟ್ಟಪ್ಪ (35) ಮತ್ತು ಮೂರ್ತಿ (52) ಎಂಬವರು ಆನೆಗಳ ದಾಳಿಗೆ ಸಿಲುಕಿ ದುರ್ಮರಣ ಹೊಂದಿದ್ದಾರೆ.3

    ಕಗ್ಗಲೀಪುರ ವಲಯದ ಅರಣ್ಯ ಪ್ರದೇಶದಲ್ಲಿರುವ ಸಿಆರ್‍ಪಿಎಫ್ ಸೇನಾ ಶಿಬಿರದ ಬಳಿ ಕಾಡಾನೆಗಳು ಆಹಾರಕ್ಕಾಗಿ ಬಂದಾಗ ಸಹಜವಾಗಿಯೇ ಕಾಡಾನೆಗಳಿಗೆ ನೀರು ಅಥವಾ ಆಹಾರ ಸಿಕ್ಕಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಆನೆಗಳು ಸ್ಥಳದಲ್ಲಿದ್ದ ಮೂರ್ತಿ ಅವರ ಮೇಲೆ ಎರಗಿವೆ. ಇದರಿಂದ ಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ ಯುವಕರಾದ ಪುಟ್ಟಪ್ಪ ಓಡಿಹೋದರೂ ಆನೆಗಳು ದಾಳಿ ನಡೆಸಿ ಪುಟ್ಟಪ್ಪರನ್ನು ಗಂಭೀರವಾಗಿ ಗಾಯಗೊಳಿಸಿದ್ದವು. ಪುಟ್ಟಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

    ವಿಷಯ ತಿಳಿದ ಕಗ್ಗಲೀಪುರ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೂರ್ತಿ ತಮಿಳುನಾಡು ಮೂಲದವರು ಮತ್ತು ಪುಟ್ಟಪ್ಪ ಹಾವೇರಿ ಜಿಲ್ಲೆಯವರು ಎಂದು ತಿಳಿದುಬಂದಿದೆ.

     

  • ಗದಗ: ರಸ್ತೆ ಪಕ್ಕ ಮಲಗಿದ್ದವರ ಮೇಲೆ ಹರಿದ ವಾಹನ – ಮೂವರು ಸ್ಥಳದಲ್ಲೇ ಸಾವು

    ಗದಗ: ರಸ್ತೆ ಪಕ್ಕ ಮಲಗಿದ್ದವರ ಮೇಲೆ ಹರಿದ ವಾಹನ – ಮೂವರು ಸ್ಥಳದಲ್ಲೇ ಸಾವು

    ಗದಗ: ರಸ್ತೆ ಪಕ್ಕದಲ್ಲಿ ಮೂವರು ಸಂಶಯಾಸ್ಪದವಾಗಿ ಸಾವನ್ನಪ್ಪಿರೋ ಘಟನೆ ಗದಗ ತಾಲೂಕಿನ ಸಂಭಾಪೂರ ಕ್ರಾಸ್ ಬಳಿ ನಡೆದಿದೆ.

    ಮೂವರು ರಸ್ತೆ ಪಕ್ಕದಲ್ಲಿ ಮಲಗಿದಂತೆ ವ್ಯಕ್ತವಾಗಿದ್ದು, ತಲೆ ಮೇಲೆ ವಾಹನ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಮತ್ತು ಭದ್ರಾಪೂರ ಗ್ರಾಮದವರು ಎನ್ನಲಾಗಿದೆ. ಮೃತರನ್ನು ಅಮೀನ್, ರಾಜೇಸಾಬ್ ಹಾಗೂ ಮಂಜು ಎಂದು ಗುರುತಿಸಲಾಗಿದೆ.

    ಅಮಿನ್ ಹಾಗೂ ರಾಜೇಸಾಬ್ ಇಬ್ಬರೂ ಸಹೋದರರಾಗಿದ್ದು, ಇವರು ಲಾರಿ ಚಾಲಕ ಹಾಗೂ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ರಸ್ತೆ ಪಕ್ಕ ಮಲಗಿದ್ದ ವೇಳೆ ತಲೆ ಮೇಲೆ ಅಪರಿಚಿತ ವಾಹನ ಹರಿದಿರುವ ಶಂಕೆ ವ್ಯಕ್ತವಾಗಿದೆ.

    ಸ್ಥಳಕ್ಕೆ ಗದಗ ಡಿವೈಎಸ್‍ಪಿ ವಿಜಯಕುಮಾರ್ ತಳವಾರ, ಗ್ರಾಮೀಣ ಸಿಪಿಐ ಸೋಮಶೇಖರ ಜುಟ್ಟಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಹೊರಗೆ ಅಮ್ಮನ ಶವ, ಒಳಗೆ ಮಗನ ಶವ: ಸಾವಿನಲ್ಲೂ ಒಂದಾದ ತಾಯಿ-ಮಗ

    ಹೊರಗೆ ಅಮ್ಮನ ಶವ, ಒಳಗೆ ಮಗನ ಶವ: ಸಾವಿನಲ್ಲೂ ಒಂದಾದ ತಾಯಿ-ಮಗ

    ಕೊಪ್ಪಳ: ತಾಯಿ ಮೃತರಾದ ಸುದ್ದಿ ತಿಳಿದು ಹೃದಯಘಾತವಾಗಿ ಮಗನೂ ಮೃತಪಟ್ಟು ತಾಯಿ ಮಗ ಸಾವಿನಲ್ಲೂ ಒಂದಾದ ಹೃದಯವಿದ್ರಾವಕ ಘಟನೆ ಕೊಪ್ಪಳ ದಲ್ಲಿ ನಡೆದಿದೆ.

    ಕೊಪ್ಪಳ ತಾಲೂಕಿನ ಚುಕ್ಕನಕಲ್ ಗ್ರಾಮದಲ್ಲಿ ಇಂಥೊಂದು ಹೃದಯವಿದ್ರಾವಕ ಘಟನೆ ನಡೆದಿದ್ದು. ಇಡೀ ಗ್ರಾಮದಲ್ಲಿಯೇ ಸ್ಮಶಾನ ಮೌನ ಆವರಿಸಿದೆ. ಎಂಬತ್ತು ವರ್ಷದ ರೇಣುಕಮ್ಮ ಅನಾರೋಗ್ಯದಿಂದ ಇಂದು ಬೆಳಗ್ಗೆ 4 ಗಂಟೆಗೆ ಸಾವನ್ನಪ್ಪಿದ್ದಾರೆ.

    ಇತ್ತ ತಾಯಿ ಮರಣದ 3 ಗಂಟೆಯ ಬಳಿಕ ಮಗ 60 ವರ್ಷದ ಯಲ್ಲಪ್ಪರೆಡ್ಡಿಗೆ ಹೃದಯಾಘಾತವಾಗಿದೆ.

     

  • ಬೇಟೆಯಾಡುವಾಗ ಅರಣ್ಯಇಲಾಖೆ ಜೀಪು ಬಂತೆಂದು ಗನ್ ಮುಚ್ಚಿಡೋವಾಗ ಮಿಸ್ ಪೈರಿಂಗ್- ಓರ್ವ ಸಾವು

    ಬೇಟೆಯಾಡುವಾಗ ಅರಣ್ಯಇಲಾಖೆ ಜೀಪು ಬಂತೆಂದು ಗನ್ ಮುಚ್ಚಿಡೋವಾಗ ಮಿಸ್ ಪೈರಿಂಗ್- ಓರ್ವ ಸಾವು

    ಶಿವಮೊಗ್ಗ: ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಾಹನ ಬಂತೆಂದು ಲೋಡೆಡ್ ಬಂದೂಕು ಬಚ್ಚಿಡಲು ಹೋದಾಗ ಮಿಸ್ ಫೈರಿಂಗ್ ಆಗಿ ಓರ್ವ ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾನುಮನೆ ಎಂಬಲ್ಲಿ ನಡೆದಿದೆ.

    35 ವರ್ಷದ ಕಾನುಮನೆ ಸತೀಶ್ ಮೃತಪಟ್ಟ ವ್ಯಕ್ತಿ. ಕಾನುಮನೆ ಗ್ರಾಮದ ಐವರು ಪುನುಗು ಬೆಕ್ಕು ಬೇಟೆಗೆ ಕಾಡಿಗೆ ಹೋಗಿದ್ದರು. ಈ ವೇಳೆ ವಾಹನವೊಂದು ಬರುವ ಸದ್ದಿಗೆ ಹೆದರಿದ ಐವರು ಅರಣ್ಯ ಇಲಾಖೆ ಸಿಬ್ಬಂದಿ ಎಂದು ತಿಳಿದು ಬಂದೂಕನ್ನು ಬಚ್ಚಿಡಲು ಹೋಗಿದ್ದಾರೆ. ಈ ವೇಳೆ ಪೈರಿಂಗ್ ಆಗಿದ್ದು, ಸತೀಶ್ ಅವರ ತಲೆಗೆ ಗುಂಡು ತಗುಲಿದೆ.

    ಕೂಡಲೇ ಸತೀಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಲಿಸುತ್ತಿದ್ದ ಬಸ್ ಹತ್ತಲು ಹೋಗಿ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

    ಚಲಿಸುತ್ತಿದ್ದ ಬಸ್ ಹತ್ತಲು ಹೋಗಿ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

    ಬೀದರ್: ಚಲಿಸುತ್ತಿದ್ದ ಬಸ್ ಹತ್ತಲು ಹೋಗಿ ವ್ಯಕ್ತಿಯೊಬ್ಬರು ಸಾರಿಗೆ ಸಂಸ್ಥೆಯ ಬಸ್‍ಗೆ ಸಿಲುಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ನಡೆದಿದೆ.

    30 ವರ್ಷದ ಸುರೇಶ್ ಬಿರಾದಾರ ಮೃತ ದುರ್ದೈವಿ. ಸುರೇಶ್ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನವರು ಎಂದು ತಿಳಿದುಬಂದಿದೆ. ಬಸವಕಲ್ಯಾಣ ಪಟ್ಟಣದಲ್ಲಿ ತಮ್ಮ ಸಂಬಂಧಿಯ ಮನೆಯಿಂದ ಹಿಂದಿರುಗುವಾಗ ಬಸ್‍ನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಬಸ್ ಬಸವಕಲ್ಯಾಣದಿಂದ ರಾಜೇಶ್ವರ ನಗರಕ್ಕೆ ತೆರಳುತ್ತಿತ್ತು.

    ಸುರೇಶ್ ಅವರ ಮೃತ ದೇಹವನ್ನು ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಸ್ ಬಸವಕಲ್ಯಾಣ ಡಿಪೋಗೆ ಸೇರಿದ್ದಾಗಿದೆ. ಸ್ಥಳಕ್ಕೆ ಬಸವಕಲ್ಯಾಣ ಸಂಚಾರಿ ಠಾಣೆಯ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

  • ಲಾರಿ-ಬೈಕ್ ನಡುವೆ ಡಿಕ್ಕಿ: ಅಪ್ಪಚ್ಚಿಯಾಯ್ತು ಬೈಕ್ ಹಿಂಬದಿ ಸವಾರನ ಅರ್ಧ ದೇಹ

    ಲಾರಿ-ಬೈಕ್ ನಡುವೆ ಡಿಕ್ಕಿ: ಅಪ್ಪಚ್ಚಿಯಾಯ್ತು ಬೈಕ್ ಹಿಂಬದಿ ಸವಾರನ ಅರ್ಧ ದೇಹ

    ಬೆಂಗಳೂರು: ಬೈಕ್ ಮತ್ತು ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ನೆಲಮಂಗಲ ಬಳಿಯ ಸೊಂಡೆಕೊಪ್ಪ ರಸ್ತೆಯ ಸರ್ಕಲ್ ಬಳಿ ನಡೆದಿದೆ.

    35 ವರ್ಷದ ರಮೇಶ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ರಮೇಶ್ ಅವರ ಮೇಲೆ ಲಾರಿಯ ಹಿಂಬದಿಯ ಚಕ್ರದಲ್ಲಿ ಹರಿದಿದ್ದರಿಂದ ದೇಹದ ಅರ್ಧಭಾಗ ಅಪ್ಪಚ್ಚಿಯಾಗಿದೆ. ಅದೃಷ್ಟವಷಾತ ಬೈಕ್ ಸವಾರ ವಿಜಯ್‍ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಮೇಶ್ ಮತ್ತು ವಿಜಯ್‍ಕುಮಾರ್ ಗೃಹ ಪ್ರವೇಶ  ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ್ಸಾಗುತ್ತಿದ್ದರು.

    ರಮೇಶ್ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಟ್ಟಣದ ನಿವಾಸಿ ಎಂದು ತಿಳಿದುಬಂದಿದೆ. ರಮೇಶ್ ನಗರದಲ್ಲಿ ವಿಡಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದರು. ಅಪಘಾತದ ನಂತರ ಲಾರಿ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣಾ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಸ್ಥಳದ ಪರಿಶೀಲನೆ ನಡೆಸಿದ್ದಾರೆ.

     

  • ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿ-ನಾಲ್ವರ ದುರ್ಮರಣ-ನಾಲ್ವರು ಗಂಭೀರ

    ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿ-ನಾಲ್ವರ ದುರ್ಮರಣ-ನಾಲ್ವರು ಗಂಭೀರ

    ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಒಂದು ಪಲ್ಟಿ ಹೊಡೆದಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ದೇವರಹಿಪ್ಪರಗಿ ಪಟ್ಟಣದ ಬಳಿ ನಡೆದಿದೆ.

    ಓರ್ವ ಮಹಿಳೆ ಸೇರಿದಂತೆ ಮೂವರು ಪುರುಷರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೆಎ 48 ಎಂ 3625. ನಂಬರಿನ ಕ್ರೂಸರನ್ನು ಚಲಾಯಿಸುತ್ತಿದ್ದ ಚಾಲಕ ಅಬ್ದುಲ್ (35), ಮಹಾನಂದ ಕೆರೂರ (40), ಮಾನಿಂಗಸಾಹುಕಾರ ಕಾಸರ್ (50) ಮೃತ ದುರ್ದೈವಿಗಳು. ಮೃತ ಮಹಿಳೆಯ ಹೆಸರು ತಿಳಿದು ಬಂದಿಲ್ಲ. ಮೃತರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಬನಹಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ.

    ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ದೇವರ ಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

     

     

  • ಕೊಳವೆ ಬಾವಿ ದುರಂತ: ರಾಯಚೂರಿನ ಸಂದೀಪ್ ಸಾವನ್ನಪ್ಪಿ ಇಂದಿಗೆ 10 ವರ್ಷ

    ಕೊಳವೆ ಬಾವಿ ದುರಂತ: ರಾಯಚೂರಿನ ಸಂದೀಪ್ ಸಾವನ್ನಪ್ಪಿ ಇಂದಿಗೆ 10 ವರ್ಷ

    ರಾಯಚೂರು: ಇಡೀ ರಾಜ್ಯದ ಜನರೆಲ್ಲಾ `ಕಾವೇರಿ ಬದುಕಿ ಬಾ’ ಅಂತ ಹೇಗೆ ಪ್ರಾರ್ಥನೆ ಮಾಡಿದ್ದಾರೋ, 2007ರ ಏಪ್ರಿಲ್ 24 ರಂದು ಕೂಡ `ಸಂದೀಪ್ ಬದುಕಿ ಬಾ’ ಅಂತ ಪ್ರಾರ್ಥಿಸಿದ್ದರು.

    ಹೌದು. ರಾಯಚೂರಿನ ಮಾನ್ವಿ ತಾಲೂಕಿನ ನೀರಮಾನ್ವಿಯಲ್ಲಿ ಯಮಸ್ಪರೂಪಿಯಾಗಿ ಬಾಯಿ ತೆರೆದ ಕೊಳವೆ ಬಾವಿ ಬಾಲಕ ಸಂದೀಪ್‍ನನ್ನ ಬಲಿ ಪಡೆದಿತ್ತು. ಆ ಘಟನೆ ನಡೆದು ಇಂದಿಗೆ ಬರೊಬ್ಬರಿ ಹತ್ತು ವರ್ಷಗಳೇ ಕಳೆದಿದೆ. ನತದೃಷ್ಠ ಬಾಲಕ ಸಂದೀಪ್ ಈಗ ನೆನಪು ಮಾತ್ರ.

    ಅಂದು ನಡೆದಿದ್ದೇನು?: ಗ್ರಾಮದ ಗೋಪಾಲ ಎಂಬುವವರ ಜಮೀನಿನಲ್ಲಿ ಟಿಲ್ಲರ್ ಹೊಡೆಯುತ್ತಿದ್ದಾಗ, ಆಟವಾಡಲು ಹೋಗಿ ನೀರು ಬಾರದೆ ಬಿಟ್ಟಿದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ. ಎರಡನೇ ತರಗತಿ ಪಾಸಾಗಿದ್ದ 9 ವರ್ಷದ ಸಂದೀಪ್‍ನ ಸಾವು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದ ಸಂದೀಪನ ತಂದೆ ನಾಗರಾಜ್ ಹಾಗೂ ತಾಯಿ ಲಕ್ಷ್ಮಿಗೆ ಈ ಘಟನೆಯಿಂದ ಬರಸಿಡಿಲು ಬಡಿದಂತಾಗಿತ್ತು.

    ಅಂದು ಕೊಳವೆ ಬಾವಿಗೆ ಬಿದ್ದ ಸಂದೀಪನನ್ನ ಕಾಪಾಡಲು ಅಗ್ನಿ ಶಾಮಕ ದಳ, ಹಟ್ಟಿ ಚಿನ್ನದ ಗಣಿ ಕಂಪನಿ ರಕ್ಷಣಾ ತಂಡ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಸತತ ಮೂರು ದಿನಗಳ ಪ್ರಯತ್ನದ ಬಳಿಕ ಏಪ್ರಿಲ್ 26 ರಂದು ಸಂದೀಪನ ಶವವನ್ನ ಹೊರತೆಗೆಯಲಾಗಿತ್ತು. ಸಂದೀಪ್ ಪ್ರಕರಣ ನಡೆದು ಇಂದಿಗೆ ಬರೋಬ್ಬರಿ ಹತ್ತು ವರ್ಷ ಕಳೆದಿದೆ. ಸಂದೀಪನನ್ನ ನೆನೆದು ಈಗಲೂ ಕಣ್ಣಲ್ಲಿ ನೀರನ್ನ ತುಂಬಿಕೊಳ್ಳುವ ಬಾಲಕನ ತಂದೆತಾಯಿಯಾದ ನಾಗರಾಜ್ ಲಕ್ಷ್ಮಿ ದಂಪತಿ ಕಾವೇರಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಸಂದೀಪನ ದುರಂತ ಸಾವಿನ ಘಟನೆ ನಡೆದು ಹತ್ತು ವರ್ಷ ಕಳೆದರು ತೆರೆದ ಕೊಳವೆ ಬಾವಿಗಳು ಈಗಲೂ ಯಮಸ್ವರೂಪಿಗಳಾಗಿ ಜೀವವಂತವಾಗಿರುವುದು ನಿಜಕ್ಕೂ ದುರಂತವೇ ಸರಿ.