Tag: death

  • ಮಗನ ಬೊಲೆರೊ ವಾಹನ ಡಿಕ್ಕಿಯಾಗಿ ತಂದೆ ಸಾವು

    ಮಗನ ಬೊಲೆರೊ ವಾಹನ ಡಿಕ್ಕಿಯಾಗಿ ತಂದೆ ಸಾವು

    ಚಿಕ್ಕಬಳ್ಳಾಪುರ: ಮಗನ ಬುಲೆರೊ ವಾಹನಕ್ಕೆ ಸಿಲುಕಿ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾರ್ಗಾನುಕುಂಟೆ ಗ್ರಾಮದಲ್ಲಿ ನಡೆದಿದೆ.

    52 ವರ್ಷದ ಮೌಲಾ ಮೃತಪಟ್ಟ ದುರ್ದೈವಿ ತಂದೆ. ವಾಹನ ರಿವರ್ಸ್ ತೆಗೆದುಕೊಳ್ಳುವಾಗ ಮಗ ನಾಸಿರ್(22) ಹಿಂದಿನಿಂದ ತಂದೆಗೆ ಡಿಕ್ಕಿ ಹೊಡೆದಿದ್ದಾನೆ. ಇದಕ್ಕೂ ಮೊದಲು ನಾಸಿರ್ ತಂದೆಯ ಜೊತೆ ಜಗಳವಾಡಿದ್ದ. ಘಟನೆ ನಂತರ ವಾಹನ ಸಮೇತ ಮಗ ಪರಾರಿಯಾಗಿದ್ದಾನೆ.

    ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಸಂಪ್ ಕ್ಲೀನ್ ಮಾಡಲು ಇಳಿದ ಯುವಕರು ಉಸಿರುಗಟ್ಟಿ ಸಾವು

    ಸಂಪ್ ಕ್ಲೀನ್ ಮಾಡಲು ಇಳಿದ ಯುವಕರು ಉಸಿರುಗಟ್ಟಿ ಸಾವು

    ಬೆಂಗಳೂರು: ಕಲ್ಮಶ ನೀರಿನ ಸಂಸ್ಕರಣ ಘಟಕದ ಸಂಪ್‍ನಲ್ಲಿ ಕ್ಲೀನ್ ಮಾಡಲು ಇಳಿದಿದ್ದ ಇಬ್ಬರು ಯುವಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ.

    ಹಾರಿಜನ್ ಪ್ಯಾಕ್ಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಮಿಕರಾದ ಉಮೇಶ್ ಹಾಗೂ ದಿಲೀಪ್ ಮೃತ ದುರ್ದೈವಿಗಳು.

    ಮಳೆಯ ನೀರು ಹಾಗೂ ಕಾರ್ಖಾನೆಯ ಕಲ್ಮಶ ನೀರಿನಿಂದ ಸಂಸ್ಕರಣ ಘಟಕದ ಸಂಪ್ ಬ್ಲಾಕ್ ಆಗಿತ್ತು. ಬ್ಲಾಕ್ ಆಗಿದ್ದ ಸಂಪ್ ಕ್ಲೀನ್ ಮಾಡಲು ಮೊದಲು ಉಮೇಶ್ ಒಳಗೆ ಇಳಿದಾಗ ಉಸಿರುಗಟ್ಟದೆ. ನಂತರ ಉಮೇಶ್‍ನನ್ನು ಕಾಪಾಡಲು ಸಂಪ್‍ಗೆ ಇಳಿದ ದಿಲೀಪ್ ಕೂಡಾ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

    ಸಂಪಿನ ಏರ್ ಔಟ್ ಮಾಡದೇ ಒಳಗೆ ಇಳಿದಿದ್ದೆ ದುರ್ಘಟನೆಗೆ ಕಾರಣವಾಗಿದೆ. ಘಟನೆ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಲಾರಿ-ಬೈಕ್ ಡಿಕ್ಕಿ: ತುಂಬು ಗರ್ಭಿಣಿಯ ಹೊಟ್ಟೆಯಿಂದ ಹೊರಬಂತು ಮಗು!

    ಲಾರಿ-ಬೈಕ್ ಡಿಕ್ಕಿ: ತುಂಬು ಗರ್ಭಿಣಿಯ ಹೊಟ್ಟೆಯಿಂದ ಹೊರಬಂತು ಮಗು!

    ಬೀದರ್: ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ತುಂಬು ಗರ್ಭಿಣಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ ಬಳಿ ನಡೆದಿದೆ.

    25 ವರ್ಷದ ಯಾಸಮೀನ್ ಮೃತಪಟ್ಟ ದುರ್ದೈವಿ ಗರ್ಭಿಣಿ. ಘಟನೆಯಿಂದ ಪತಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಯಾಸಮೀನ್ 8 ತಿಂಗಳ ಗರ್ಭಿಣಿಯಾಗಿದ್ದು, ಬೈಕ್ ಗೆ ಲಾರಿ ಡಿಕ್ಕಿಯಾದ ರಭಸಕ್ಕೆ ಆಕೆಯ ಹೊಟ್ಟೆಯಿಂದ ಮಗು ಹೊರಬಂದಿದೆ. ಅರ್ಧಗಂಟೆ ಜೀವ ಇದ್ದ ಮಗು ಬಳಿಕ ಮೃತಪಟ್ಟಿದೆ.

    ಹುಮ್ನಾಬಾದ್ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಲಾರಿಗೆ ಡಿಕ್ಕಿಯಾಗಿ ಅಪ್ಪಚ್ಚಿ ಆಯ್ತು ಕಾರು – ಒಂದೇ ಕುಟುಂಬದ ನಾಲ್ವರ ಸಾವು

    ಲಾರಿಗೆ ಡಿಕ್ಕಿಯಾಗಿ ಅಪ್ಪಚ್ಚಿ ಆಯ್ತು ಕಾರು – ಒಂದೇ ಕುಟುಂಬದ ನಾಲ್ವರ ಸಾವು

    ಚಿತ್ರದುರ್ಗ: ಸ್ವಿಫ್ಟ್ ಡಿಸೈರ್ ಕಾರು ಒಂದು ಲಾರಿಗೆ  ಡಿಕ್ಕಿ ಹೊಡೆದಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಭೀಕರ ಅಪಘಾತವೊಂದು ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ನಡೆದಿದೆ.

    ದೊಡ್ಡಪ್ಪ ದೇಸಾಯಿ(35), ಶ್ವೇತಾ ದೇಸಾಯಿ(2), ಭಾಗ್ಯಮ್ಮ(60) ಸುವರ್ಣಮ್ಮ (55) ಅಪಘಾತದಲ್ಲಿ ಮೃತ ದುರ್ದೈವಿಗಳು. ಮೃತರು ವಿಜಯಪುರ ಮೂಲದವರು ಎಂದು ಹೇಳಲಾಗಿದೆ. ಮೃತರು ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

    ಲಾರಿಗೆ ಹಿಂಬದಿಯಿಂದ ಬಂದು ಕಾರು ಡಿಕ್ಕಿಯಾಗಿದೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

     

  • ಮರಕ್ಕೆ ಡಿಕ್ಕಿ ಹೊಡೆದ ಕಾರ್ – ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು, ಇಬ್ಬರಿಗೆ ಗಾಯ

    ಮರಕ್ಕೆ ಡಿಕ್ಕಿ ಹೊಡೆದ ಕಾರ್ – ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು, ಇಬ್ಬರಿಗೆ ಗಾಯ

    ಮಂಡ್ಯ: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವನ್ನಪ್ಪಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ.

    22 ವರ್ಷದ ಹೇಮಂತ್ ಕುಮಾರ್ ಮೃತ ದುರ್ದೈವಿ. ಮಂಡ್ಯ ಪಿಇಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದ ಯತೀಶ್, ಪೃಥ್ವಿರಾಜ್, ಹೇಮಂತ್ ಕುಮಾರ್, ಶಿವಕುಮಾರ್ ಎಂಬವರು ಗೆಳೆಯನ ಅಕ್ಕನ ಮದುವೆಗೆ ನಾಗಮಂಗಲಕ್ಕೆ ಬಂದಿದ್ದರು. ರಾತ್ರಿ ಆರತಕ್ಷತೆ ಮುಗಿಸಿಕೊಂಡು ಗೆಳೆಯನ ಮನೆಗೆ ಹೋಗುವಾಗ ಜೇವರ್ಗಿ-ಚಾಮರಾಜನಗರ ರಸ್ತೆಯಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.

    ಪರಿಣಾಮ ಹೇಮಂತ್ ಕುಮಾರ್ ಸಾವನ್ನಪ್ಪಿದ್ದರೆ, ಯತೀಶ್, ಪೃಥ್ವಿರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನುಳಿದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಮಗಳ ಸಾವಿನ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ಸಾವು

    ಮಗಳ ಸಾವಿನ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ಸಾವು

    ಕೋಲಾರ: ಮಗಳ ಸಾವಿನ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣ ಮುತ್ಯಾಲಪೇಟೆಯಲ್ಲಿ ನಡೆದಿದೆ.

    ಮೇ 20 ರಂದು ಮನೆಯಲ್ಲಿ ಗ್ಯಾಸ್ ರೀಫಿಲ್ಲಿಂಗ್ ಮಾಡುವ ವೇಳೆ ಬೆಂಕಿ ತಗುಲಿ ತಂದೆ ಶ್ರೀಕಂಠ (45) ಹಾಗೂ ಅವರ ಮಕ್ಕಳಾದ 18 ವರ್ಷದ ಮಧುಮತಿ , 10 ವರ್ಷದ ರಕ್ಷಿತ ಗಾಯಗೊಂಡಿದ್ದರು. ಅವರಲ್ಲಿ ರಕ್ಷಿತ ಎಂಬ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಾವನ್ನಪ್ಪಿದ್ದಾಳೆ.

    ಮಗಳ ಸಾವಿನ ಸುದ್ದಿ ತಿಳಿದ ತಂದೆ ಶ್ರೀಕಂಠ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮಸಣ ಸೇರಿದ ಮದುವೆ ದಿಬ್ಬಣ – ವಧು ಸೇರಿ 7 ಜನರ ದುರ್ಮರಣ, 22 ಜನರಿಗೆ ಗಾಯ

    ಮಸಣ ಸೇರಿದ ಮದುವೆ ದಿಬ್ಬಣ – ವಧು ಸೇರಿ 7 ಜನರ ದುರ್ಮರಣ, 22 ಜನರಿಗೆ ಗಾಯ

    ಉತ್ತರ ಕನ್ನಡ: ಮದುವೆಗೆ ಹೊರಟ್ಟಿದ್ದವರ ಟೆಂಪೋ ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಜಿಲ್ಲೆಯ ಭಟ್ಕಳ ತಾಲೂಕಿನ ಅನಂತವಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಘಟನೆಯಲ್ಲಿ ವಧು ಸೇರಿದಂತೆ 6 ಜನರು ಸಾವನ್ನಪ್ಪಿದ್ದು, 22 ಜನ ಗಾಯಗೊಂಡಿದ್ದಾರೆ.

    ಇಂದು ಹಸೆಮಣೆ ಏರಬೇಕಿದ್ದ ವಧು ದಿವ್ಯಾ ಕುರ್ಡೇಕರ್ ಮೃತಪಟ್ಟಿದ್ದಾರೆ. ಖಾಸಗಿ ಬಸ್ ಚಾಲಕ ಉಮೇಶ್ ವಾಲ್ಮಿಕಿ (35), ಟೆಂಪೋ  ಚಾಲಕ ನಾಗಪ್ಪ ಗಣಿಗಾರ್(46), ಟೆಂಪೋದಲ್ಲಿದ್ದ ಪಾಲಾಕ್ಷಿ (42), ಬೇಬಿ (38) ಹಾಗೂ ಸುಬ್ರಹ್ಮಣ್ಯ (15) ಮೃತ ದುರ್ದೈವಿಗಳು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪೂಜಾ ಸೇಠ್ ಎಂಬವರು ಸಾವನ್ನಪ್ಪಿದ್ದಾರೆ.

    ದಾವಣಗೆರೆ ಮೂಲದವರಾದ ದಿವ್ಯಾ ಅವರ ಮದುವೆ ಹರೀಶ್ ಎಂಬವರ ಜೊತೆ ಇಂದು ಧರ್ಮಸ್ಥಳದಲ್ಲಿ ನಡೆಯಬೇಕಿತ್ತು. ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಟೆಂಪೋ  ಹಾಗೂ ಮಂಗಳೂರಿನಿಂದ ಹೊನ್ನಾವರ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ನಡುವೆ ಈ ಅಪಘಾತ ಸಂಭವಿಸಿದೆ.

    ಗಂಭೀರವಾಗಿ ಗಾಯಗೊಂಡವರನ್ನ ಉಡುಪಿ ಜಿಲ್ಲೆಯ ಮಣಿಪಾಲ್ ಹಾಗೂ ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಕೆಲವರಿಗೆ ಭಟ್ಕಳ ತಾಲೂಕು ಆಸ್ಪತ್ರೆ ಹಾಗೂ ಮುರಡೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಶೋಭಾ ಕರಂದ್ಲಾಜೆ ಸಚಿವರಾಗಿದ್ದ ವೇಳೆಯೇ ಆಹಾರ ಇಲಾಖೆಯಲ್ಲಿ ಸಾಕಷ್ಟು ಹಗರಣ ನಡೆದಿದೆ: ದಿನೇಶ್ ಗುಂಡೂರಾವ್

    ಶೋಭಾ ಕರಂದ್ಲಾಜೆ ಸಚಿವರಾಗಿದ್ದ ವೇಳೆಯೇ ಆಹಾರ ಇಲಾಖೆಯಲ್ಲಿ ಸಾಕಷ್ಟು ಹಗರಣ ನಡೆದಿದೆ: ದಿನೇಶ್ ಗುಂಡೂರಾವ್

    ಬೆಂಗಳೂರು: ಈ ಹಿಂದೆ ಶೋಭಾ ಕರಂದ್ಲಾಜೆ ಅವರು ಆಹಾರ ಇಲಾಖೆ ಸಚಿವರಾಗಿದ್ದ ವೇಳೆಯೇ ಸಾಕಷ್ಟು ಹಗರಣ ನಡೆದಿದೆ. ಈಗ ಅವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಆಹಾರ ಇಲಾಖೆಯಲ್ಲಿನ ಹಗರಣಕ್ಕೆ ಅನುರಾಗ್ ತಿವಾರಿಯವರ ಕೊಲೆ ನಡೆದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಚಾರಕ್ಕಾಗಿ ಆರೋಪ ಮಾಡುವುದನ್ನು ಶೋಭಾ ಕರಂದ್ಲಾಜೆ ಅಭ್ಯಾಸ ಮಾಡಿಕೊಂಡಿದ್ದಾರೆ. ಅವರ ಆರೋಪವನ್ನ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಪ್ರಕರಣವನ್ನ ಸಿಬಿಐಗೆ ವಹಿಸಲಾಗಿದೆ. ತನಿಖೆಯಾದಾಗ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು.

    ಶೋಭೆ ತರಲ್ಲ: ಸುಮ್ಮನೆ ಆರೋಪ ಮಾಡೋದು ಶೋಭಾ ಕರಂದ್ಲಾಜೆ ಅವರಿಗೆ ಶೋಭೆ ತರುವುದಿಲ್ಲ. ಈ ರೀತಿ ಆರೋಪ ಮಾಡಿ ಪತ್ರಿಕೆ ಹಾಗು ಟಿವಿಯಲ್ಲಿ ಸುದ್ದಿಯಲ್ಲಿರಬೇಕೆಂದು ಅವರು ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಹಿಂದೆ ಸಚಿವ ರೋಷನ್ ಬೇಗ್ ಮೇಲೆ ಇದೇ ರೀತಿ ಕೊಲೆ ಪ್ರಕರಣದಲ್ಲಿ ಆರೋಪ ಮಾಡಿ ಈಗ ಏನಾಗಿದೆ ಎಂದು ಎಲ್ಲರಿಗೂ ಗೊತ್ತಾಗಿದೆ ಎಂದು ಹೇಳುವ ಮೂಲಕ ಶೋಭಾ ವಿರುದ್ಧ ವಾಗ್ದಾಳಿ ನಡೆಸಿದರು.

    ಯಾರು ಅನ್ನೋದು ಗೊತ್ತಿಲ್ಲ: ಹೆಚ್‍ಡಿ ದೇವೇಗೌಡ ಮತ್ತು ಹೆಚ್‍ಡಿ ಕುಮಾರಸ್ವಾಮಿ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿರುವ ಕಾಂಗ್ರೆಸ್ ಕಾರ್ಯಕರ್ತ ವೆಂಕಟೇಶ್ ಗೌಡ ಯಾರೆಂದು ಗೊತ್ತಿಲ್ಲ. ಅವರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ವೆಂಕಟೇಶ್ ಗೌಡ ಯಾರೆಂದು ನಾವು ಕೂಡ ಪರಿಶೀಲನೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

    ಇದನ್ನೂ ಓದಿ: ಸಾವಿಗೂ ಮುನ್ನ ನಡೆದಿದೆ ಹಲ್ಲೆ: ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣಕ್ಕೆ ಟ್ವಿಸ್ಟ್

  • ಸಾವಿಗೂ ಮುನ್ನ ನಡೆದಿದೆ ಹಲ್ಲೆ: ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣಕ್ಕೆ ಟ್ವಿಸ್ಟ್

    ಸಾವಿಗೂ ಮುನ್ನ ನಡೆದಿದೆ ಹಲ್ಲೆ: ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣಕ್ಕೆ ಟ್ವಿಸ್ಟ್

    ನವದೆಹಲಿ: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಮೆಗಾ ಟ್ವಿಸ್ಟ್ ಸಿಕ್ಕಿದ್ದು, ಇದು ಸಹಜ ಸಾವಲ್ಲ. ಸಾವಿಗೂ ಮುನ್ನ ಅವರ ಮೇಲೆ ಹಲ್ಲೆ ನಡೆದಿರುವ ವಿಚಾರ ಈಗ ಪ್ರಕಟವಾಗಿದೆ.

    ಅನುರಾಗ್ ತಿವಾರಿ ಹೃದಯಾಘಾತದಿಂದ ಮೃತಪಟ್ಟಿಲ್ಲ. ತಿವಾರಿ ಅವರ ದೇಹದ ಮೇಲೆ ಗಾಯದ ಗುರುತುಗಳು ಹಲ್ಲೆ ನಡೆದಿದೆ. ಭೀಕರವಾಗಿ ಅನುರಾಗ್ ತಿವಾರಿಯವರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನುವ ಅಂಶ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ.

    ಅನುರಾಗ್ ತಿವಾರಿ ಅವರು ಸಹಜ ಸಾವಲ್ಲ. ಅವರನ್ನು ಹತ್ಯೆ ಮಾಡಲಾಗಿದೆ ಎಂದು ಕರ್ನಾಟಕ ಬಿಜೆಪಿ ಆರೋಪಿಸಿತ್ತು. ಈಗ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಹಗರಣದಿಂದಲೇ ತಿವಾರಿ ಸಾವನ್ನಪ್ಪಿದ್ರಾ ಎನ್ನುವ ಪ್ರಶ್ನೆ ಎದ್ದಿದೆ. ಉತ್ತರ ಪ್ರದೇಶ ಸರ್ಕಾರ ಈಗ ತಿವಾರಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿದೆ.

    ಏನಿದು ಪ್ರಕರಣ?
    ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ(36) ಅವರ ಶವ ಉತ್ತರಪ್ರದೇಶದ ಹಜರತ್‍ಗಂಜ್‍ನಲ್ಲಿ ಮೇ 17ರಂದು ಪತ್ತೆಯಾಗಿತ್ತು. ಅನುರಾಗ್ ತಿವಾರಿ ಅವರ ಜನ್ಮದಿನದಂದೇ ಮೀರಾ ಬಾಯಿ ಗೆಸ್ಟ್ ಹೌಸ್ ಹೌಸ್ ಬಳಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

    ಇದನ್ನೂ ಓದಿ: ಕರ್ನಾಟಕದ 2 ಸಾವಿರ ಕೋಟಿ ರೂ. ಹಗರಣಕ್ಕೆ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಬಲಿ?

  • ರಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು- ವರದಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನ

    ರಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು- ವರದಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನ

    ರಾಯಚೂರು: ನಗರದ ಪ್ರತಿಷ್ಠಿತ ರಿಮ್ಸ್ ಆಸ್ಪತ್ರೆಯ ಸಿಬ್ಬಂದಿ ವರದಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿ ಕ್ಯಾಮೆರಾ ಜಖಂಗೊಳಿಸಿದ್ದಾರೆ. ರಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಕುರಿತ ವರದಿ ಮಾಡಲು ಮುಂದಾಗಿದ್ದಕ್ಕೆ ಗೂಂಡಾವರ್ತನೆ ತೋರಿದ್ದಾರೆ.

    ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ 21 ದಿನಗಳ ಹೆಣ್ಣು ಮಗು ವೈದ್ಯರ ನಿರ್ಲಕ್ಷ್ಯದಿಂದ ಪ್ರಾಣಬಿಟ್ಟಿದೆ. ಶಕ್ತಿನಗರದ ನಿವಾಸಿಗಳಾದ ಮರಿಯಪ್ಪ ಜಮಸಮ್ಮ ದಂಪತಿಯ ಮಗು ಮಲಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಹೇಳಿದಂತೆ ಪೋಷಕರು ಖಾಸಗಿ ಪ್ರಯೋಗಾಲಯದಲ್ಲೇ ಸ್ಕ್ಯಾನಿಂಗ್, ಎಕ್ಸ್ ರೇ, ರಕ್ತಪರೀಕ್ಷೆಯನ್ನೂ ಮಾಡಿಸಿದ್ರು. ಆದ್ರೆ ಸಮಯಕ್ಕೆ ಸರಿಯಾಗಿ ಬಂದು ಶಿಶುವನ್ನ ವೈದ್ಯರು ತಪಾಸಣೆ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ.

    ಎಲ್ಲಾ ಪರೀಕ್ಷೆಗಳ ವರದಿಯನ್ನ ಪರಿಶೀಲಿಸಿ ವೈದ್ಯರು ಸಮಸ್ಯೆಯಿಲ್ಲ ಅಂತ ಹೇಳಿದ್ದರು. ಆದ್ರೆ ಏಕಾಏಕಿ ಮಗು ಪ್ರಾಣಬಿಟ್ಟಿದೆ ಅಂತ ಪೋಷಕರು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಪೋಷಕರು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ. ವರದಿಗೆ ತೆರಳಿದ ಮಾಧ್ಯಮದವರ ಮೇಲೂ ಆಸ್ಪತ್ರೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ಕ್ಯಾಮೆರಾ ಕಿತ್ತುಕೊಂಡು ಹಾಳು ಮಾಡಿದ್ದಾರೆ.