Tag: death

  • ರಾಯಚೂರಿನಲ್ಲಿ ಹೃದಯ ವಿದ್ರಾವಕ ಘಟನೆ- ನಾಯಿಗಳ ದಾಳಿಗೆ 35 ಕುರಿಮರಿಗಳ ಸಾವು

    ರಾಯಚೂರಿನಲ್ಲಿ ಹೃದಯ ವಿದ್ರಾವಕ ಘಟನೆ- ನಾಯಿಗಳ ದಾಳಿಗೆ 35 ಕುರಿಮರಿಗಳ ಸಾವು

    ರಾಯಚೂರು: ನಾಯಿಗಳ ದಾಳಿಯಿಂದ 35 ಕುರಿಮರಿಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ರಾಯಚೂರು ತಾಲೂಕಿನ ಐಜಾಪುರ ಗ್ರಾಮದಲ್ಲಿ ನಡೆದಿದೆ.

    ಹೊಲದ ದೊಡ್ಡಿಯಲ್ಲಿದ್ದ ಕುರಿ ಮರಿಗಳ ಮೇಲೆ ಐದು ನಾಯಿಗಳು ದಾಳಿ ಮಾಡಿ ಕಚ್ಚಿ ಸಾಯಿಸಿವೆ. ರಾಮಪ್ಪ ಎಂಬವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದ್ದು, ಇವು ಒಂದು ಲಕ್ಷ ರೂಪಾಯಿ ಬೆಲೆ ಬಾಳುತ್ತಿದ್ದವು ಎನ್ನಲಾಗಿದೆ.

    ಕುರಿಗಳನ್ನು ಮೇಯಿಸಲು ಹೋದಾಗ ಮರಿಗಳನ್ನು ದೊಡ್ಡಿಯಲ್ಲೇ ಬಿಡಲಾಗಿತ್ತು. ಕುರಿಗಾರನ ನಾಯಿಗಳು ಸಹ ಸ್ಥಳದಲ್ಲಿ ಇಲ್ಲದ ವೇಳೆ ದಾಳಿ ನಡೆದಿದೆ. ಇನ್ನೂ ಎಂಟು ಕುರಿಮರಿಗಳಿಗೆ ಗಂಭೀರ ಗಾಯಗಳಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿವೆ.

     

  • ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಇಬ್ಬರ ಸಾವು- ಅಚ್ಚರಿಯ ರೀತಿಯಲ್ಲಿ ಪಾರಾಯ್ತು ಮಗು

    ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಇಬ್ಬರ ಸಾವು- ಅಚ್ಚರಿಯ ರೀತಿಯಲ್ಲಿ ಪಾರಾಯ್ತು ಮಗು

    ಚಿತ್ರದುರ್ಗ: ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟೆನೆ ಚಿತ್ರದುರ್ಗ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.

    ಅಪಘಾತದಲ್ಲಿ ಕಾರಿನಲ್ಲಿದ್ದ ಬಸವರಾಜ್ (32) ಮತ್ತು ವಿದ್ಯಾ (27) ಮೃತಪಟ್ಟಿದ್ದಾರೆ. ದಂಪತಿಯ ಜೊತೆಯಲ್ಲಿದ್ದ ಅವರ ಒಂದು ವರ್ಷದ ಮಗು ಚಿನ್ಮಯಿ ಅಚ್ಚರಿಯ ರೀತಿಯಲ್ಲಿ ಬದುಕುಳಿದಿದೆ. ಮೃತರು ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ನಿವಾಸಿಗಳು ಎಂದು ತಿಳಿದುಬಂದಿದೆ. ಇವರು ಕಿತ್ತೂರೂನಿಂದ ಬೆಂಗಳೂರಿಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ.

    ಟ್ರ್ಯಾಕ್ಟರ್‍ನಲ್ಲಿ ಸುಮಾರು ಎಂಟು ಜನರು ಪ್ರಯಾಣಿಸುತ್ತಿದ್ದು, ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಮಗು ಮತ್ತು ಗಾಯಾಳಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಬಳಿಕ ಟ್ರ್ಯಾಕ್ಟರ್ ಚಾಲಕ ಪರಾಯಾಗಿದ್ದಾನೆ.

    ಭರಮಸಾಗರ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.

     

     

  • ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಮಹಾಮಾರಿ ಅಬ್ಬರ- ಬೆಂಗಳೂರಲ್ಲಿ ಶಂಕಿತ ಡೆಂಗ್ಯೂಗೆ ಮಹಿಳೆ ಬಲಿ

    ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಮಹಾಮಾರಿ ಅಬ್ಬರ- ಬೆಂಗಳೂರಲ್ಲಿ ಶಂಕಿತ ಡೆಂಗ್ಯೂಗೆ ಮಹಿಳೆ ಬಲಿ

    ಬೆಂಗಳೂರು: ರಾಜ್ಯದ ಹಲವೆಡೆ ಡೆಂಗ್ಯೂ ನರ್ತನ ಜೋರಾಗಿದೆ. ಸಣ್ಣ ಪ್ರಮಾಣದ ಮಳೆಯಿಂದ ರಾಜಧಾನಿ ಬೆಂಗಳೂರು, ದಾವಣಗೆರೆ ಹಾಗೂ ಮಂಡ್ಯದ ಜಿಲ್ಲೆಗಳಲ್ಲೂ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿದೆ.

    ದಾವಣಗೆರೆ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವೆಡೆ ಡೆಂಗ್ಯೂ ಮಹಾಮಾರಿ ಮತ್ತೆ ತಾಂಡವ ಆಡ್ತಿದೆ. ಸಿಲಿಕಾನ್ ಸಿಟಿಯಲ್ಲಿ ಶಂಕಿತ ಡೆಂಗ್ಯೂ ಜ್ವರಕ್ಕೆ ಚೌಡರಪಾಳ್ಯದಲ್ಲಿ 32 ವರ್ಷದ ಕಲಾವತಿ ಎಂಬಾಕೆ ಬಲಿಯಾಗಿದ್ದಾರೆ. ಕಳೆದ ಎರಡು ದಿನದಿಂದ ಜ್ವರದಿಂದ ಬಳಲ್ತಿದ್ದ ಕಲಾ, ಚಿಕಿತ್ಸೆ ಫಲಿಸದೇ ಮಾಗಡಿ ರಸ್ತೆಯ ಸ್ಪೈನ್‍ಕೇರ್ ಮತ್ತು ಆರ್ಥೋಕೇರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಡೆಂಗ್ಯೂ ಅಷ್ಟೇ ಅಲ್ಲ. ರಾಜ್ಯಾದ್ಯಂತ ಚಿಕೂನ್ ಗುನ್ಯಾ ಅಬ್ಬರ ಕೂಡಾ ಜೋರಾಗಿದೆ. ಸ್ವತಃ ಆರೋಗ್ಯ ಸಚಿವ ರಮೇಶ್ ಕುಮಾರ್ ಈ ಬಗ್ಗೆ ಕಳವಳ ಹಾಗೂ ಭಯ ವ್ಯಕ್ತಪಡಿಸಿದ್ದಾರೆ.

    ರಾಜ್ಯಾದ್ಯಂತ ಎಷ್ಟು ಪ್ರಕರಣ ಕಂಡುಬಂದಿದೆ ನೋಡೋದಾದ್ರೆ:

    ಬೆಂಗಳೂರು – 7 ತಿಂಗಳಲ್ಲಿ 1,106 ಕೇಸ್
    14 ಜನರಿಗೆ ಚಿಕೂನ್ ಗೂನ್ಯಾ
    ರಾಜ್ಯಾದ್ಯಂತ 2053 ಡೆಂಗ್ಯೂ ಪ್ರಕರಣ
    ರಾಜ್ಯದಲ್ಲಿ 143 ಜನರಲ್ಲಿ ಚಿಕೂನ್ ಗೂನ್ಯಾ

    ದಾವಣಗೆರೆ, ಹರಿಹರ, ಜಗಳೂರು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿವೆ. ದಾವಣಗೆರೆ ಜಿಲ್ಲಾಸ್ಪತ್ರೆಯೊಂದರಲ್ಲೇ ಏಪ್ರಿಲ್, ಮೇನಲ್ಲಿ 20 ಇದ್ದ ಪ್ರಕರಣಗಳು, ಜೂನ್‍ನಲ್ಲಿ ನಾಲ್ಕೈದು ಪಟ್ಟು ಹೆಚ್ಚಾಗಿವೆ.

    ದಾವಣಗೆರೆ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಮಾಣ ಎಷ್ಟಿದೆ ಅಂತಾ ನೋಡೋದಾದ್ರೆ:

    2016 ಜನವರಿಯಿಂದ ಡಿಸೆಂಬರ್: ಶಂಕಿತ ಪ್ರಕರಣ – 2002, ದೃಢಪಟ್ಟ ಪ್ರಕರಣ – 446
    2017 – ಜನವರಿಯಿಂದ ಜೂನ್ 27: ಶಂಕಿತ ಪ್ರಕರಣ – 922, ದೃಢಪಟ್ಟ ಪ್ರಕರಣ – 146

    ವಿಶ್ವಸಂಸ್ಥೆ ಸೂಚನೆ ಪ್ರಕಾರ ಡೆಂಗ್ಯೂ ಪತ್ತೆಗೆ ಎನ್‍ಎಸ್‍ಐ, ಐಜಿಪಿ, ಐಜಿಎಂ (ನ್ಯಾಕ್ ಎಲೈಜಾ) ಮೊದಲಾದ ಪರೀಕ್ಷೆಗಳನ್ನು ಮಾಡಬೇಕು. ಆದ್ರೆ ಅದೂ ನಡೆಯುತ್ತಿಲ್ಲ. ಖಾಸಗಿ ಲ್ಯಾಬ್‍ಗಳು ಅವೈಜ್ಞಾನಿಕವಾಗಿ ಪರೀಕ್ಷೆ ನಡೆಸುತ್ತಿವೆ ಅನ್ನೋ ಆರೋಪಗಳು ಕೂಡ ಕೇಳಿ ಬರುತ್ತಿವೆ. ಕೆಲವೆಡೆ ಡೆಂಗ್ಯೂನಾ? ಮಲೇರಿಯಾನಾ? ಅಥವಾ ಇನ್ಯಾವುದೋ ಕಾಯಿಲೆ ಅನ್ನೋದನ್ನ ಖಚಿತಪಡಿಸಲು ವೈದ್ಯರಿಗೆ ಆಗುತ್ತಿಲ್ಲ.

    ಒಟ್ಟಿನಲ್ಲಿ ಜನರೇ ಹುಷಾರಾಗಿರಿ. ಮೈ ಕೈ ನೋವು, ಜ್ವರ, ಮೈ ಮೇಲೆ ಕೆಂಪು ಹಚ್ಚೆ ಮೂಡಿದ್ರೆ ಇವೆಲ್ಲಾ ಡೆಂಗ್ಯೂ ಲಕ್ಷಣಗಳು. ಯಾವುದಕ್ಕೂ ಆಲಕ್ಷ್ಯ ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ. ಜೊತೆಗೆ ಮರೆಯದೇ ಸೊಳ್ಳೆ ಪರದೆ ಬಳಸಿ.

  • ಕಾರಿನಲ್ಲಿ ಲೈವ್ ಇನ್‍ಸ್ಟಾಗ್ರಾಂ ಹುಚ್ಚಾಟಕ್ಕೆ ಇಬ್ಬರು ರೂಪದರ್ಶಿಗಳು ಬಲಿ

    ಕಾರಿನಲ್ಲಿ ಲೈವ್ ಇನ್‍ಸ್ಟಾಗ್ರಾಂ ಹುಚ್ಚಾಟಕ್ಕೆ ಇಬ್ಬರು ರೂಪದರ್ಶಿಗಳು ಬಲಿ

    ಕೀವ್ : ಕಾರಿನಲ್ಲಿ ಮದ್ಯಪಾನ ಮಾಡಿ ಲೈವ್ ಇನ್‍ಸ್ಟಾಗ್ರಾಂ ಮಾಡಲು ಹೋಗಿ ಇಬ್ಬರು ಸುಂದರಿಯರು ಪ್ರಾಣ ಕಳೆದುಕೊಂಡಿದ್ದಾರೆ.

    ಉಕ್ರೇನ್ ದೇಶದ ಇಬ್ಬರು ಯುವತಿಯರಿಗೆ ಕುಡಿದ ನಶೆಯಲ್ಲಿ ಬಿಎಂಡಬ್ಲ್ಯೂ ಕಾರಿನಲ್ಲಿ ಹೋಗುತ್ತಿರುವಾಗ ಇನ್‍ಸ್ಟಾಗ್ರಾಂಗೆ ಬರುವ ಆಸೆಯಾಗಿದೆ. ಈ ವೇಳೆ ಡ್ರೈವ್ ಮಾಡುತ್ತಿದ್ದವಳು ರಸ್ತೆ ನೋಡುವುದು ಬಿಟ್ಟು ಮೊಬೈಲ್ ಕ್ಯಾಮೆರಾ ನೋಡಿದ್ದರಿಂದ ವೇಗದಲ್ಲಿದ್ದ ಕಾರಿನ ನಿಯಂತ್ರಣ ತಪ್ಪಿ ಇಬ್ಬರು ಸಾವನ್ನಪ್ಪಿದ್ದಾರೆ.

    ಮೃತಪಟ್ಟವರನ್ನು 16 ವರ್ಷದ ಸೋಫಿಯಾ ಮತ್ತು ಮತ್ತು 24 ವರ್ಷದ ಡೇರಿಯಾ ಎಂದು ಗುರುತಿಸಲಾಗಿದೆ. ಇವರು ರೂಪದರ್ಶಿಗಳಾದ್ದು, ಹಲವಾರು ಕಡೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.

    https://www.youtube.com/watch?v=tY2Klmxln-g

     

  • ಮಗಳೊಂದಿಗೆ ಪ್ರತಿದಿನ ಸಮಾಧಿಯಲ್ಲಿ ಮಲಗೋ ತಂದೆ-ಕಾರಣ ಕೇಳಿದ್ರೆ ನಿಮ್ಮ ಮನಕಲಕುತ್ತೆ

    ಮಗಳೊಂದಿಗೆ ಪ್ರತಿದಿನ ಸಮಾಧಿಯಲ್ಲಿ ಮಲಗೋ ತಂದೆ-ಕಾರಣ ಕೇಳಿದ್ರೆ ನಿಮ್ಮ ಮನಕಲಕುತ್ತೆ

    ಬೀಜಿಂಗ್: ವ್ಯಕ್ತಿಯೊಬ್ಬರು ತಮ್ಮ ಎರಡು ವರ್ಷಗಳ ಮಗಳೊಂದಿಗೆ ಪ್ರತಿದಿನ ಸಮಾಧಿಯಲ್ಲಿ ಮಲಗುತ್ತಾರೆ. ದಿನದಲ್ಲಿ ಸಮಯ ಸಿಕ್ಕರೂ ಕೂಡ ಅವರ ಸಮಾಧಿಯಲ್ಲಿಯೇ ಆಟ ಆಡ್ತಾರೆ.

    ಝಾಂಗ್ ಲೀಯೆಂಗ್ ಮತ್ತು ಡೇಂಗ್ ದಂಪತಿಯ ಮುದ್ದಾದ ಮಗಳು ದೊಡ್ಡ ಕಾಯಿಲೆಯಿಂದ ಬಳಲುತ್ತಿದ್ದು, ಆಕೆ ದೊಡ್ಡವಳಾದ ಮೇಲೆ ತನಗಿರುವ ರೋಗದಿಂದ ಭಯ ಪಡಬಾರದೆಂದು ಈ ರೀತಿ ಮಾಡಲಾಗ್ತಿದೆ ಎಂದು ಬಾಲಕಿ ತಂದೆ ಝಾಂಗ್ ಹೇಳ್ತಾರೆ.

    ಮಗಳು ದೊಡ್ಡವಳಾದ ಮೇಲೆ ಸಾವಿನ ಭಯದಿಂದ ದೂರವಿದ್ದು, ಮುಂದೊಂದು ದಿನ ತಾನು ಏಕಾಂಗಿಯಾಗಿ ಇಲ್ಲಿರಬೇಕಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಸಲು ತಂದೆ ಈ ರೀತಿ ಮಾಡ್ತಾಯಿದ್ದಾರೆ. ಹೀಗಾಗಿ ಝಾಂಗ್ ಮನೆಯ ಆವರಣದಲ್ಲಿ ಸಮಾಧಿ ತೋಡಿದ್ದು ಪ್ರತಿದಿನ ಅಲ್ಲಿಯೇ ಮಗಳ ಜೊತೆ ಮಲಗಲು ಆರಂಭಿಸಿದ್ದಾರೆ. ಇನ್ನೂ ಝಾಂಗ್ ಮಗಳಿಗೆ ಚಿಕಿತ್ಸೆ ಕೊಡಿಸಲು ಆರ್ಥಿಕವಾಗಿ ದುರ್ಬಲರಾಗಿದ್ದು, ಚಿಕಿತ್ಸೆಯ ಹಣಕ್ಕಾಗಿ ಕಷ್ಟಪಡುತ್ತಿದ್ದಾರೆ. ಕಷ್ಟದ ನಡುವೆಯೂ ಮಗಳಿಗೆ ಮಾನಸಿಕವಾಗಿ ದೃಢ ಪಡಿಸುತ್ತಿದ್ದಾರೆ.

    ವೈದ್ಯರು ಝಾಂಗ್ ಅವ್ರಿಗೆ ಸಲಹೆ ನೀಡಿದ್ದು, ಮುಂದೆ ತಾಯಿ ಗರ್ಭ ಧರಿಸಿ ಹೆರಿಗೆ ಸಮಯದಲ್ಲಿ ದೊರಕುವ ಕೋರ್ಡ್ ಬ್ಲಡ್‍ನಿಂದಾಗಿ ಈಗಿರುವ ಮಗಳನ್ನು ಉಳಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಇವಾಗ ಡೇಂಗ್ ಗರ್ಭಿಣಿಯಾಗಿದ್ದು ಮಗುವಿನ ನಿರೀಕ್ಷೆಯಲ್ಲಿದ್ದಾರೆ.

     

  • ಕೋಲಾರ: ವ್ಯಕ್ತಿಯ ದೇಹದ ಅರ್ಧ ಭಾಗವನ್ನೇ ತಿಂದು ಹಾಕಿದ ಚಿರತೆ!

    ಕೋಲಾರ: ವ್ಯಕ್ತಿಯ ದೇಹದ ಅರ್ಧ ಭಾಗವನ್ನೇ ತಿಂದು ಹಾಕಿದ ಚಿರತೆ!

    ಕೋಲಾರ: ಚಿರತೆ ದಾಳಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ವೀರಕಪುತ್ರ ಗ್ರಾಮದ ಬಳಿ ನಡೆದಿದೆ.

    ಬಂಡೂರು ಗ್ರಾಮದ ವೆಂಕಟೇಶಪ್(45) ಚಿರತೆ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದು, ಇವರು ಕಳೆದ ರಾತ್ರಿ ಹಳೆಪಾಳ್ಯದಿಂದ ತಮ್ಮ ಗ್ರಾಮಕ್ಕೆ ತೆರಳುವ ವೇಳೆ ಈ ದಾಳಿ ನಡೆದಿದೆ.

    ವ್ಯಕ್ತಿಯ ಅರ್ಧ ಭಾಗದಷ್ಟು ದೇಹವನ್ನ ಚಿರತೆ ತಿಂದುಹಾಕಿದೆ. ಘಟನೆಯಿಂದ ಸುತ್ತಮುತ್ತಲ ಗ್ರಾಮಸ್ಥರು ಆತಂಕಗೊಂಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿದ್ದಾರೆ.

  • ಕಾಶ್ಮೀರದ ಅನಂತ್‍ನಾಗ್‍ನಲ್ಲಿ ಯೋಧರು, ಉಗ್ರರ ನಡುವೆ ಗುಂಡಿನ ಚಕಮಕಿ- ಓರ್ವ ಮಹಿಳೆ ಸಾವು

    ಕಾಶ್ಮೀರದ ಅನಂತ್‍ನಾಗ್‍ನಲ್ಲಿ ಯೋಧರು, ಉಗ್ರರ ನಡುವೆ ಗುಂಡಿನ ಚಕಮಕಿ- ಓರ್ವ ಮಹಿಳೆ ಸಾವು

    ಶ್ರೀನಗರ: ಯೋಧರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರು ನಾಗರೀಕರಿಗೆ ಗಾಯವಾಗಿರುವ ಘಟನೆ ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದಿದೆ.

    ಗುಂಡಿನ ದಾಳಿಗೆ ಬಲಿಯಾದ ಮಹಿಳೆಯನ್ನು 44 ವರ್ಷದ ತಾಹಿರಾ ಬೇಗಂ ಎಂದು ಗುರುತಿಸಲಾಗಿದೆ. ಜಮ್ಮು-ಕಾಶ್ಮೀರದ ಬ್ಯಾಟ್ಪೊರಾ ಗ್ರಾಮದ ಮನೆಯೊಂದರಲ್ಲಿ ಮೂವರು ಉಗ್ರರು ಅಡಗಿರುವ ಮಾಹಿತಿ ಪಡೆದ ಭದ್ರತಾ ಪಡೆ ಇಂದು ಉಗ್ರರ ಸೆರೆಗಾಗಿ ಕಾರ್ಯಾಚರಣೆ ನಡೆಸಿದ್ದು, ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ.

    ಕಾಶ್ಮೀರದ ಪೊಲೀಸ್ ಅಧಿಕಾರಿ ಫೆರೋಜ್ ಅಹಮದ್ ದಾರ್ ಸೇರಿದಂತೆ ಐವರು ಪೊಲೀಸರ ಹತ್ಯೆಯ ಹಿಂದಿದ್ದಾನೆ ಎನ್ನಲಾದ ಲಷ್ಕರ್-ಇ-ತೋಯ್ಬಾ ಸಂಘಟನೆಯ ಉಗ್ರ ಬಶೀರ್ ಲಷ್ಕರಿ ಆ ಮನೆಯಲ್ಲಿ ಅಡಗಿದ್ದಾನೆ ಎಂದು ಯೋಧರಿಗೆ ಮಾಹಿತಿ ಸಿಕ್ಕಿತ್ತು. ಲಷ್ಕರಿ ಹಾಗೂ ಆತನ ಮತ್ತೊಬ್ಬ ಸಹಚರ ಇನ್ನೂ ಮನೆಯಲ್ಲೇ ಅಡಗಿರುವುದಾಗಿ ವರದಿಯಾಗಿದೆ.

    ಶೋಧ ಕಾರ್ಯಾರಚಣೆ ವೇಳೆ ಉಗ್ರರು ಅಲ್ಲಿನ ನಿವಾಸಿಗಳನ್ನು ಮಾನವ ರಕ್ಷೆಯಾಗಿ ಬಳಸಿ ಗುಂಡಿನ ದಾಳಿ ಆರಂಭಿಸಿದ ಪರಿಣಾಮ ತಾಹಿರಾ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.

    ಈವರೆಗೆ 17 ನಿವಾಸಿಗಳನ್ನ ಮನೆಯಿಂದ ಸ್ಥಳಾಂತರಿಸಲಾಗಿದ್ದು, ಭದ್ರತಾ ಪಡೆಯ ಕಾರ್ಯಾಚರಣೆ ಮುಂದುವರೆದಿದೆ.

  • ಜೆಡಿಎಸ್ ಎಸ್‍ಟಿ ಸಮಾವೇಶಕ್ಕೆ ತೆರಳುತ್ತಿದ್ದಾಗ ಸ್ವಿಫ್ಟ್ ಕಾರು ಪಲ್ಟಿ- ಓರ್ವ ಸಾವು, ಮೂವರಿಗೆ ಗಂಭೀರ ಗಾಯ

    ಜೆಡಿಎಸ್ ಎಸ್‍ಟಿ ಸಮಾವೇಶಕ್ಕೆ ತೆರಳುತ್ತಿದ್ದಾಗ ಸ್ವಿಫ್ಟ್ ಕಾರು ಪಲ್ಟಿ- ಓರ್ವ ಸಾವು, ಮೂವರಿಗೆ ಗಂಭೀರ ಗಾಯ

    ತುಮಕೂರು: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸ್ವಿಫ್ಟ್ ಕಾರು ಪಲ್ಟಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದಬ್ಬೆಘಟ್ಟ ಬಳಿ ನಡೆದಿದೆ.

    35 ವರ್ಷದ ದೇವರಾಜು ಮೃತ ದುರ್ದೈವಿ. ದೇವರಾಜು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜೆಡಿಎಸ್ ಅಧ್ಯಕ್ಷರಾಗಿದ್ದರು. ದಾವಣಗೆರೆಯಲ್ಲಿ ನಡೆಯಲಿರುವ ಜೆಡಿಎಸ್ ಎಸ್‍ಟಿ ಸಮಾವೇಶಕ್ಕೆಂದು ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

    ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

     

  • ವಿದ್ಯುತ್ ಸ್ಪರ್ಶಿಸಿ ಲೈನ್‍ಮನ್ ಸಾವು

    ವಿದ್ಯುತ್ ಸ್ಪರ್ಶಿಸಿ ಲೈನ್‍ಮನ್ ಸಾವು

    ಹಾವೇರಿ: ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಕರ್ತವ್ಯನಿರತ ಲೈನ್‍ಮನ್ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಮಣಕೂರು ಗ್ರಾಮದಲ್ಲಿ ನಡೆದಿದೆ.

    ಮೃತ ಲೈನಮನ್ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ತೊಗರಿಕಟ್ಟಿ ಗ್ರಾಮದ ಬಸವರಾಜ ಸೋಮಜ್ಜಿ (22) ಎಂದು ಗುರುತಿಸಲಾಗಿದೆ. ಮಣಕೂರು ಗ್ರಾಮದಲ್ಲಿ ವಿದ್ಯುತ್ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

    ಬಸವರಾಜ ಕಳೆದ ಎರಡು ವರ್ಷಗಳಿಂದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಹಲಗೇರಿ ಘಟಕದಲ್ಲಿ ಲೈನ್‍ಮನ್ ಆಗಿ ಕೆಲಸ ಮಾಡುತ್ತಿದ್ದರು. ವಿದ್ಯುತ್ ದುರಸ್ತಿ ಕಾರ್ಯ ನಡೆದಿದ್ದರೂ ವಿದ್ಯುತ್ ಲೈನ್ ಬಂದ್ ಮಾಡದ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎಂದು ಕುಟುಂಬದ ಸದಸ್ಯರು ಮತ್ತು ಅಲ್ಲಿಯ ರೈತರು ಆರೋಪ ಮಾಡುತ್ತಿದ್ದಾರೆ.

    ಮೃತನ ಕುಟುಂಬದವರು ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಣೇಬೆನ್ನೂರು ತಾಲೂಕು ಸರ್ಕಾರಿ ಆಸ್ಪತ್ರೆ ಶವಾಗಾರದ ಬಳಿ ಹೆಸ್ಕಾಂ ಅಧಿಕಾರಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದಾರೆ. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

     

  • ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ಕು ಕಾಡಾನೆಗಳು ಸಾವು

    ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ಕು ಕಾಡಾನೆಗಳು ಸಾವು

    ಮಡಿಕೇರಿ: ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ಕು ಕಾಡಾನೆಗಳು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ.

    ವಿರಾಜಪೇಟೆ ತಾಲೂಕು ಕಣ್ಣಂಗಾಲ ಗ್ರಾಮದ ಕಾಫಿ ತೋಟವೊಂದರಲ್ಲಿ ಮಳೆಯಿಂದಾಗಿ ತುಂಡಾಗಿ ಬಿದ್ದಿದ ವಿದ್ಯುತ್ ಲೈನ್ ತುಳಿದ ಕಾಡಾನೆಗಳು ಧಾರುಣವಾಗಿ ಸಾವನ್ನಪ್ಪಿದೆ. ಅಂದಾಜು 36 ಹಾಗೂ 28 ವರ್ಷದ 2 ಆನೆಗಳು ಮತ್ತು 2 ವರ್ಷ ಮತ್ತು 6 ವರ್ಷದ ಮರಿಯಾನೆಗಳು ಮೃತಪಟ್ಟಿವೆ.

    ಇನ್ನು ಇದೇ ಜೂನ್ 14 ರಂದು ಇದೇ ಗ್ರಾಮದಲ್ಲಿ ಎರಡು ಕಾಡಾನೆಗಳು ವಿದ್ಯುತ್ ಶಾಕ್ ನಿಂದ ಸಾವಿಗೀಡಾಗಿದ್ದವು. 15 ದಿನಗಳ ಅಂತರದಲ್ಲಿ ಒಟ್ಟು 6 ಅನೆಗಳು ವಿದ್ಯುತ್ ಶಾಕ್ ಗೆ ಬಲಿಯಾಗಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.