Tag: death

  • 24 ಗಂಟೆಯೊಳಗೆ ಒಂದೇ ಕುಟುಂಬದ ಮೂವರು ಸಾವು- ಮೊದಲು ಮಗು, ಬಳಿಕ ತಾಯಿ, ಕೊನೆಗೆ ತಾತ ಹಾವಿಗೆ ಬಲಿ

    24 ಗಂಟೆಯೊಳಗೆ ಒಂದೇ ಕುಟುಂಬದ ಮೂವರು ಸಾವು- ಮೊದಲು ಮಗು, ಬಳಿಕ ತಾಯಿ, ಕೊನೆಗೆ ತಾತ ಹಾವಿಗೆ ಬಲಿ

    ಚಿತ್ರದುರ್ಗ: 24 ಗಂಟೆಯೊಳಗೆ ಒಂದೇ ಮನೆಯ ಮೂವರು ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಖಂಡೇನಹಳ್ಳಿ ಪಾಳ್ಯದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ 3 ವರ್ಷದ ಮಗು ಕೀರ್ತನಾ ಅಸ್ವಸ್ಥಗೊಂಡಿದ್ದಳು. ಹಾವು ಕಡಿದು ಮಗು ಅಸ್ವಸ್ಥಳಾಗಿದ್ದು ಅಂತ ಮನೆ ಮಂದಿಗೆ ತಿಳಿದಿರಲಿಲ್ಲ. ಹೀಗಾಗಿ ಅವರು ಅನಾರೋಗ್ಯ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ತಾಯಿಯೂ ಅಸ್ವಸ್ಥರಾಗಿದ್ದರು. ಮಾರ್ಗ ಮಧ್ಯೆ ಮಗು ಮೃತಪಟ್ಟಿದ್ದು, ಸ್ವಲ್ಪ ಸಮಯದಲ್ಲಿ ತಾಯಿಯೂ ಮೃತಪಟ್ಟಿದ್ದಾರೆ.

    ಮಗುವಿನ ಸಾವಿನ ಆಘಾತಗೊಂಡ ತಾಯಿ ಮೃತಪಟ್ಟಿದ್ದಾರೆ ಅಂತ ಹೇಳಲಾಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ತಾಯಿ ರಂಜಿತಾ ಬಾಯಲ್ಲಿ ನೊರೆ ಕಂಡುಬಂದ ಹಿನ್ನೆಲೆಯಲ್ಲಿ ಹಾಗೂ ಮಗು ಮತ್ತು ತಾಯಿಯ ಶವ ಪರೀಕ್ಷೆ ನಡೆಸಿದ ನಂತರ ಹಾವು ಕಚ್ಚಿ ಮೃತಪಟ್ಟಿದ್ದಾರೆ ಅಂತ ವೈದ್ಯರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

    ಇವರಿಬ್ಬರ ಶವಸಂಸ್ಕಾರ ಮಾಡಿ ಮನೆಗೆ ಬಂದು ರೋಧಿಸುತ್ತಿದ್ದ ರಂಜಿತಾ ಮಾವ ಮಡ್ನಪ್ಪ (65) ಅವರಿಗೂ ಹಾವು ಕಚ್ಚಿದ್ದು, ಅವರನ್ನು ಕೂಡಲೇ ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಮಡ್ನಪ್ಪ ಅವರಿಗೆ ಹಾವು ಕಚ್ಚಿ ಅವರು ಕಿರುಚಿಕೊಂಡಾಗ ಮಗಳು ಲಕ್ಷ್ಮಮ್ಮ ಸ್ಥಳಕ್ಕೆ ಬಂದಿದ್ದು, ಹಾವನ್ನು ನೋಡಿ ಓಡಿಹೋಗಿದ್ದಾರೆ. ಘಟನೆಯ ಬಳಿಕ ಗ್ರಾಮಸ್ಥರು ಹಾವನ್ನು ಹಿಡಿದು ಸಾಯಿಸಿದ್ದಾರೆ.

    ಹಿರಿಯೂರು ತಾಲೂಕು ಹಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮಗಳ ಸಾವಿನ ಸುದ್ದಿಗೆ ಶಾಕ್ ಆಗಿ ತಾಯಿಯೂ ಮೃತಪಟ್ಟಳು!

    ಮಗಳ ಸಾವಿನ ಸುದ್ದಿಗೆ ಶಾಕ್ ಆಗಿ ತಾಯಿಯೂ ಮೃತಪಟ್ಟಳು!

    ಚಿತ್ರದುರ್ಗ: ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೂರು ವರ್ಷದ ಮಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಘಾತಕ್ಕೆ ಒಳಗಾದ ತಾಯಿ ಕೂಡ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಂಡೇನಹಳ್ಳಿ ಗ್ರಾಮದ ಬಾಲಕಿ ಕೀರ್ತನಾ(3) ಹಾಗೂ ತಾಯಿ ರಂಜಿತಾ(23) ಮೃತ ದುರ್ದೈವಿಗಳು.

    ಸೋಮವಾರ ಬೆಳಗ್ಗೆ 5 ಘಂಟೆ ಸುಮಾರಿಗೆ ತೀವ್ರ ಅಸ್ವಸಳಾಗಿದ್ದ ತೀರ್ತನಾಳನ್ನ ಧರ್ಮಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಆದರೆ ಆ ವೇಳೆಗೆ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದ ಕಾರಣ ಹಿರಿಯೂರು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಾಲಕಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ. ಮಗುವಿನ ಮರಣದಿಂದ ಆಘಾತಕ್ಕೆ ಒಳಗಾದ ತಾಯಿ ಕೂಡ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಅಬ್ಬಿನ ಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತೋಟಕ್ಕೆ ನೀರು ಹಾಯಿಸಲು ಹೋಗಿದ್ದಾಗ ಕಾಡಾನೆ ದಾಳಿ- ರೈತ ಸಾವು

    ತೋಟಕ್ಕೆ ನೀರು ಹಾಯಿಸಲು ಹೋಗಿದ್ದಾಗ ಕಾಡಾನೆ ದಾಳಿ- ರೈತ ಸಾವು

    ರಾಮನಗರ: ರೇಷ್ಮೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ರೈತನ ಮೇಲೆ ಕಾಡಾನೆವೊಂದು ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಕನಕಪುರ ತಾಲೂಕಿನ ಹೊರಳಗಲ್ಲು ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಹೊರಳಗಲ್ಲು ಗ್ರಾಮದ ನಿವಾಸಿ ಕರೀಗೌಡ ಎಂಬವರೇ ಆನೆ ದಾಳಿಯಿಂದ ಸಾವನ್ನಪ್ಪಿದ ರೈತ. ಕಳೆದ ರಾತ್ರಿ ಮೃತ ರೈತ ಕರೀಗೌಡ ರೇಷ್ಮೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದರು. ಈ ವೇಳೆ ದಾಳಿ ನಡೆಸಿರುವ ಕಾಡಾನೆ ತೋಟದಲ್ಲಿಯೇ ಸೊಂಡಿಲಿನಿಂದ ಕರೀಗೌಡರನ್ನು ಹಿಡಿದು ಬಡಿದು ಸಾಯಿಸಿದೆ.

    ಘಟನೆಗೆ ಸಂಬಂಧಿಸಿದಂತೆ ಕನಕಪುರ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪದೆ ಪದೇ ಆನೆ ದಾಳಿಯಿಂದ ಬೆಳೆ ನಾಶದ ಜೊತೆಗೆ ಪ್ರಾಣ ಹಾನಿಗಳಾಗುತ್ತಿದ್ದು, ಅರಣ್ಯ ಇಲಾಖೆ ಆನೆ ದಾಳಿ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಯುವಕನನ್ನ ಅಪಹರಿಸಿ ಪೆಟ್ರೋಲ್ ಸುರಿದು ಬೆಂಕಿ- ಚಿಕಿತ್ಸೆ ಫಲಕಾರಿಯಾಗದೇ ಸಾವು

    ಯುವಕನನ್ನ ಅಪಹರಿಸಿ ಪೆಟ್ರೋಲ್ ಸುರಿದು ಬೆಂಕಿ- ಚಿಕಿತ್ಸೆ ಫಲಕಾರಿಯಾಗದೇ ಸಾವು

    ಕಲಬುರಗಿ: ದುಷ್ಕರ್ಮಿಗಳಿಂದ ಬೆಂಕಿ ದಾಳಿಗೆ ಒಳಗಾಗಿದ್ದ ಯುವಕ ಸಾವನ್ನಪ್ಪಿದ್ದಾರೆ.

    22 ವರ್ಷದ ಶೇಕ್ ನೂರುದ್ದೀನ್ ಮೃತ ಯುವಕ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಪೋಷಕರು ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿ ಕಲಬುರಗಿಯ ರಿಂಗ್‍ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

    ಜುಲೈ 5ರಂದು ನಗರದ ಇನಾಂದಾರ್ ಕಾಲೇಜು ಬಳಿ ಶೇಕ್‍ರನ್ನು ಅಪಹರಿಸಿದ್ದ ನಾಲ್ವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಯುವಕನ ಕೊಲೆಗೆ ಯತ್ನಿಸಿದ್ದರು. ಶೇಕ್ ನೂರುದ್ದೀನ್ ಕಲಬುರಗಿ ನಗರದ ಮಿಲ್ಲತ್ ನಗರದ ನಿವಾಸಿಯಾಗಿದ್ದು, ಸಾಮಿಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದರು.

    ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೊರಟಿದ್ದರು. ಅಂತೆಯೇ ಜಬ್ಬಾರ್ ಪನಶೆನ್ ಹಾಲ್ ಬಳಿ ಆಟೋಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆ ಎರಡು ಬೈಕ್ ನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ನೂರುದ್ದೀನ್ ಅವರನ್ನು ತಮ್ಮ ಬೈಕಿನಲ್ಲಿ ಅಪಹರಿಸಿ, ನಂತರ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಘಟನೆಯಿಂದ ನರಳಾಡುತ್ತಿದ್ದ ನೂರುದ್ದೀನ್ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

    ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೇಕ್ ನೂರುದ್ದೀನ್, ಮೈತುಂಬಾ ಸುಟ್ಟಗಾಯಗಳಿಂದ ನರಳಾಡುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

  • ಬುಲೆಟ್ ಬೈಕಿನಿಂದ ರಸ್ತೆಗೆ ಹಾರಿದ್ದ ಮಹಿಳೆ ಮೇಲೆ ಹರಿದ ಕಾರು: ಬೆಂಗಳೂರು ಮೂಲದ ಮಹಿಳೆ ಸಾವು

    ಬುಲೆಟ್ ಬೈಕಿನಿಂದ ರಸ್ತೆಗೆ ಹಾರಿದ್ದ ಮಹಿಳೆ ಮೇಲೆ ಹರಿದ ಕಾರು: ಬೆಂಗಳೂರು ಮೂಲದ ಮಹಿಳೆ ಸಾವು

    ಮಂಡ್ಯ: ಬೈಕ್ ಡಿವೈಡರ್‍ಗೆ ಡಿಕ್ಕಿ ಹೊಡೆದ ರಭಸಕ್ಕೆ ಪಕ್ಕದ ರಸ್ತೆಗೆ ಬಿದ್ದ ಮಹಿಳೆ ಮೇಲೆ ಕಾರು ಹರಿದು ಆಕೆ ಮೃತಪಟ್ಟ ಘಟನೆ ಶ್ರೀರಂಗಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದಿದೆ.

    ಬೆಂಗಳೂರು ಮೂಲದ ಮಂಜುಳಾ(28) ಮೃತ ಮಹಿಳೆ. ಬೆಂಗಳೂರಿನಿಂದ ಮೈಸೂರಿಗೆ ಬುಲೆಟ್ ಬೈಕಿನಲ್ಲಿ ತೆರಳುತ್ತಿದ್ದಾಗ ಶ್ರೀರಂಗಪಟ್ಟಣ ತಾಲೂಕಿನ ಕೋಡಿಶೆಟ್ಟಿಪುರದಲ್ಲಿ ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ.

    ಭಾನುವಾರ ಸ್ನೇಹಿತನೊಂದಿಗೆ ಬೆಂಗಳೂರಿನಿಂದ ಮೈಸೂರಿಗೆ ರಾಯಲ್ ಎನ್ಫೀಲ್ಡ್ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕೋಡಿಶೆಟ್ಟಿಪುರ ಬಳಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹಿಂಬದಿ ಕುಳಿತ್ತಿದ್ದ ಮಂಜುಳಾ ಹಾರಿ ಪಕ್ಕದ ರಸ್ತೆ ಮೇಲೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಮೈಸೂರು ಕಡೆಯಿಂದ ಬರುತ್ತಿದ್ದ ಎರ್ಟಿಗಾ ಕಾರು ಮಂಜುಳಾ ಮೇಲೆ ಹರಿದಿದೆ.

    ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಂಜುಳಾರನ್ನು ಸ್ಥಳೀಯರ ನೆರವಿನಿಂದ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮೃತರಾದ ಮಂಜುಳಾ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

  • ಅನಾರೋಗ್ಯದಿಂದ ಬಳಲುತ್ತಿದ್ದ 4 ವರ್ಷದ ಗಂಡಾನೆ ಸಾವು

    ಅನಾರೋಗ್ಯದಿಂದ ಬಳಲುತ್ತಿದ್ದ 4 ವರ್ಷದ ಗಂಡಾನೆ ಸಾವು

    ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಬೀರೋಟ ಅರಣ್ಯ ಪ್ರದೇಶದಲ್ಲಿ ಗಂಡಾನೆಯೊಂದು ಮೃತಪಟ್ಟಿದೆ.

    ಸುಮಾರು ನಾಲ್ಕು ವರ್ಷದ ಈ ಗಂಡಾನೆ ಅನಾರೋಗ್ಯದಿಂದ ಬಳಲುತ್ತಿತ್ತು ಎನ್ನಲಾಗಿದೆ. ಹೀಗಾಗಿ ಆನೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿಗೆ ಕಾಡಿನಲ್ಲಿ ಆನೆಯ ಮೃತದೇಹ ಪತ್ತೆಯಾಗಿದೆ.

    ಸದ್ಯ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಸಿಬ್ಬಂದಿಗಳು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

    ಇದನ್ನೂ ಓದಿ: ವಿದ್ಯುತ್ ಸ್ಪರ್ಶಿಸಿ ಎರಡು ಆನೆ ಸಾವು-ಸಂಗಡಿಗರ ಸಾವಿನಿಂದ ಕೆಂಗೆಟ್ಟು ಘೀಳಿಡುತ್ತಿದೆ ಮತ್ತೊಂದು ಆನೆ

  • ವೆಂಟಿಲೇಟರ್ ಕೆಟ್ಟುಹೋಗಿ ಮಂಡ್ಯ ಆಸ್ಪತ್ರೆಯಲ್ಲಿ ರೋಗಿ ಸಾವು

    ವೆಂಟಿಲೇಟರ್ ಕೆಟ್ಟುಹೋಗಿ ಮಂಡ್ಯ ಆಸ್ಪತ್ರೆಯಲ್ಲಿ ರೋಗಿ ಸಾವು

    ಮಂಡ್ಯ: ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ರೋಗಿಗೆ ಹಾಕಿದ್ದ ವೆಂಟಿಲೇಟರ್ ಕೆಟ್ಟು ಹೋದ ಪರಿಣಾಮ ಮಗ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತನ ಸಂಬಂಧಿಕರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಆಸ್ಪತ್ರೆ ಗಾಜುಗಳನ್ನು ಪುಡಿ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.

    ಸಮೀವುಲ್ಲಾಖಾನ್ ಮತ್ತು ಸರಿಯಾಸುಲ್ತಾನ್ ದಂಪತಿಯ ಪುತ್ರ, ಮಹಮದ್ ಉಮರ್ ಖಾನ್(18) ಜೂನ್ 27 ರಂದು ಬೈಕ್‍ನಿಂದ ಬಿದ್ದು ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಆತನನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ವೈದ್ಯರ ಸೂಚನೆಯಂತೆ ನಿಮಾನ್ಸ್ ನಲ್ಲಿಯೂ ಚಿಕಿತ್ಸೆ ಕೊಡಿಸಿ ಮತ್ತೆ ಮಂಡ್ಯ ಮಿಮ್ಸ್ ಆಸ್ಪತ್ರೆಯ ಕೊಠಡಿ ಸಂಖ್ಯೆ 22ರಲ್ಲಿ ಐಸಿಯುನಲ್ಲಿ ಅಡ್ಮಿಟ್ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಕೊಠಡಿ ಸಂಖ್ಯೆ 22ರಲ್ಲಿ ಒಟ್ಟು ಐದು ವೆಂಟಿಲೇಟರ್‍ಗಳು ಇದ್ದು ಅದರಲ್ಲಿ ಈಗಾಗಲೇ ನಾಲ್ಕು ವೆಂಟಿಲೇಟರ್‍ಗಳು ತಾಂತ್ರಿಕ ದೋಷ ಹೊಂದಿದ್ದವು.

    ಇದನ್ನು ಸರಿಪಡಿಸುವ ಬಗ್ಗೆ ತಲೆಕೆಡಿಸಿಕೊಳ್ಳದ ಆಸ್ಪತ್ರೆ ಸಿಬ್ಬಂದಿ ಕೆಟ್ಟು ಹೋಗಿದ್ದ ವೆಂಟಿಲೇಟರ್‍ನಲ್ಲೇ ನನ್ನ ಮಗನಿಗೆ ಚಿಕಿತ್ಸೆ ನೀಡುತ್ತಿದ್ದು, ಇದ್ದಕ್ಕಿದ್ದಂತೆ ಮಗನಿಗೆ ಅಳವಡಿಸಿದ್ದ ವೆಂಟಿಲೇಟರ್ ಕೈಕೊಟ್ಟಿದೆ. ಪರಿಣಾಮ ನಮ್ಮ ಮಗ ಮಹಮದ್ ಉಮರ್‍ಖಾನ್ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

    ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಮೃತನ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಆಸ್ಪತ್ರೆ ಕಿಟಕಿ ಗಾಜುಗಳನ್ನು ಪುಡಿ ಆಕ್ರೋಶ ಹೊರಹಾಕಿದ್ದಾರೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದ್ದರು.

    ಕೊನೆಗೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಯಶಸ್ವಿಯಾದ್ರು. ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಪದೇ ಪದೇ ಇಂತಹ ಅಹಿತಕರ ಘಟನೆಗಳು ಪುನರಾವರ್ತನೆಯಾಗುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ಮಗನಿಗೆ ಒದಗಿದ ದುಸ್ಥಿತಿ ಬೇರೆ ಯಾವ ತಂದೆ, ತಾಯಿಗೂ ಬರಬಾರದು ಎಂದು ಮೃತನ ತಂದೆ, ತಾಯಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.

  • ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಸಿಲುಕಿ ರೈತ ಸಾವು

    ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಸಿಲುಕಿ ರೈತ ಸಾವು

    ವಿಜಯಪುರ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ರೈತರೊಬ್ಬರು ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕರವಿನಾಳ ಗ್ರಾಮದಲ್ಲಿ ನಡೆದಿದೆ.

    ಸಾಯಬಣ್ಣ ನಾಯ್ಕೋಡಿ (65) ಮೃತ ರೈತ. ಗುರುವಾರ ಸಂಜೆ ಭಾರೀ ಮಳೆಯಾಗಿತ್ತು. ಇದ್ರಿಂದಾಗಿ ಗ್ರಾಮದ ಹಳ್ಳ ತುಂಬಿ ಹರಿತ್ತಿತ್ತು. ಗುರುವಾರ ಸಂಜೆ ಜಮೀನಿನಿಂದ ಹೊರ ಬರುತ್ತಿದ್ದ ವೇಳೆ ಸಾಯಬಣ್ಣ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಇಂದು ಬೆಳಗ್ಗೆ ಸಾಯಬಣ್ಣರ ಮೃತದೇಹದ ಹಳ್ಳದ ಮುಳ್ಳುಗಳ ಮಧ್ಯೆ ಪತ್ತೆಯಾಗಿದೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಮರೆಯಾದ ಮಾನವೀಯತೆ.. ಆಸ್ಪತ್ರೆ ಮುಂದೆ ನರಳಿ ನರಳಿ 70 ವರ್ಷದ ವೃದ್ಧೆ ಸಾವು!

    ಮರೆಯಾದ ಮಾನವೀಯತೆ.. ಆಸ್ಪತ್ರೆ ಮುಂದೆ ನರಳಿ ನರಳಿ 70 ವರ್ಷದ ವೃದ್ಧೆ ಸಾವು!

    ತುಮಕೂರು: ಸರ್ಕಾರಿ ಆಸ್ಪತ್ರೆ ಎದುರೇ ರಸ್ತೆಯಲ್ಲಿ ಬಿದ್ದು ನರಳಿ ನರಳಿ ವೃದ್ಧೆಯೊಬ್ಬರು ಬುಧವಾರ ಪ್ರಾಣಬಿಟ್ಟ ಘಟನೆ ತುರುವೇಕೆರೆ ತಾಲೂಕು ಸರ್ಕಾರಿ ಆಸ್ಪತ್ರೆ ಬಳಿ ನಡೆದಿದೆ.

    ಲಕ್ಷ್ಮಮ್ಮ(70) ಸಾವನ್ನಪ್ಪಿದ ವೃದ್ಧೆ. ಲಕ್ಷ್ಮಮ್ಮ ಚಿಕ್ಕಶೆಟ್ಟಿ ಕೆರೆ ಗ್ರಾಮದ ನಿವಾಸಿಯಾಗಿದ್ದು, ಟಿಬಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ರಕ್ತವಾಂತಿ ಮಾಡಿಕೊಂಡು ಬಿದ್ದು ನರಳಾಡಿ ಪ್ರಾಣ ಬಿಟ್ಟಿದ್ದಾರೆ.

    ನರಳಾಡುತ್ತಿರುವಾಗ ಆಸ್ಪತ್ರೆ ಪಕ್ಕದಲ್ಲಿದ್ದರೂ ಯಾರೂ ಜನ ಕರೆದುಕೊಂಡು ಹೋಗಲಿಲ್ಲ. ಹೀಗಾಗಿ ಈ ವೃದ್ಧೆ 20 ನಿಮಿಷಗಳ ಕಾಲ ನರಳಾಡಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮೃತಪಟ್ಟ ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.

    ತುರುವೇಕೆರೆ  ಪೊಲೀಸ್  ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    https://youtu.be/nGhAOrsoJkE

  • 35 ಗೂಳಿಗಳಿಗೆ ವಿಷವಿಟ್ಟು ಕೊಂದ ಕಟುಕರು – ಜಮೀನಿನಲ್ಲೇ ಮೂಕ ಜೀವಿಗಳ ಮಾರಣಹೋಮ

    35 ಗೂಳಿಗಳಿಗೆ ವಿಷವಿಟ್ಟು ಕೊಂದ ಕಟುಕರು – ಜಮೀನಿನಲ್ಲೇ ಮೂಕ ಜೀವಿಗಳ ಮಾರಣಹೋಮ

    ಬಳ್ಳಾರಿ: ಹೂವಿನಹಡಗಲಿ ತಾಲೂಕಿನಲ್ಲಿ 35 ಗೂಳಿಗಳ ಮಾರಣಹೋಮ ಮಾಡಲಾಗಿದೆ. ಮೆಕ್ಕೆಜೋಳದ ಬೆಳೆಗೆ ಔಷಧ ಸಿಂಪಡಿಸುವ ನೆಪದಲ್ಲಿ ಬೆಳೆಗಳ ಮೇಲೆ ವಿಷ ಹಾಕಿ 35 ಗೂಳಿಗಳನ್ನು ಕೊಲ್ಲಲಾಗಿದೆ.

    ಹಿರೇಹಡಗಲಿ ಬಳಿಯ ಕಟ್ಟಿ ಮಸಾರಿ ಬಳಿಯ ಜಮೀನುಗಳಲ್ಲಿ 28 ಗೂಳಿ ಮತ್ತು ಹಿರೇ ಮಲ್ಲನಕೇರಿ ಬಳಿ 7 ಗೂಳಿ ಸೇರಿದಂತೆ ಒಟ್ಟು 35 ಗೂಳಿಗಳಿಗೆ ಪ್ರೀಡಾನ್ ಅನ್ನೋ ವಿಷ ಹಾಕಿ ಕೊಲ್ಲಲಾಗಿದೆ. ದೇವರಿಗೆ ಬಿಟ್ಟ ಈ ಹಿಂದೆ ಗೂಳಿಗಳನ್ನು ಹಿಡಿದು ಬೇರೆಡೆ ಸಾಗಿಸಲು ತಾಲೂಕು ಆಡಳಿತ  ಪ್ರಯತ್ನ  ಮಾಡಿದ್ರೂ ಗೂಳಿಗಳನ್ನು ಸೆರೆ ಹಿಡಿಯಲು ಆಗಿರಲಿಲ್ಲ. ಹೀಗಾಗಿ ಗೂಳಿಗಳಿಗೆ ಈಗ  ವಿಷವಿಟ್ಟು ಕೊಲ್ಲಲಾಗಿದೆ.

     

    ಗೂಳಿಗಳ ಸಾವಿನ ಸುದ್ದಿ ಗೊತ್ತಾಗುತ್ತಿದ್ದಂತೆ ರೈತರು ನೂರಾರು ಸಂಖ್ಯೆಯಲ್ಲಿ ಗೂಳಿಗಳನ್ನು ನೋಡಲು ಆಗಮಿಸುತ್ತಿದ್ದಾರೆ. ಸಾಮೂಹಿಕವಾಗಿ ಕೊಲೆಯಾಗಿರುವ ಗೂಳಿಗಳ ದೃಶ್ಯ ಮನಕಲಕುವಂತಿದೆ. ಗೂಳಿಗಳಿಗೆ ವಿಷವಿಟ್ಟು ಕೊಂದ ಕಟುಕರನ್ನು ಹಿಡಿದು ಶಿಕ್ಷೆ ವಿಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.