Tag: death

  • ಸತ್ತು ದುರ್ವಾಸನೆ ಬರ್ತಿದ್ರೂ ಮರಿಯನ್ನು ಹಿಡಿದುಕೊಂಡು ಅಳುತ್ತಿರೋ ತಾಯಿ ಕೋತಿ- ಕೋಲಾರದಲ್ಲೊಂದು ಮನಕಲಕುವ ಘಟನೆ

    ಸತ್ತು ದುರ್ವಾಸನೆ ಬರ್ತಿದ್ರೂ ಮರಿಯನ್ನು ಹಿಡಿದುಕೊಂಡು ಅಳುತ್ತಿರೋ ತಾಯಿ ಕೋತಿ- ಕೋಲಾರದಲ್ಲೊಂದು ಮನಕಲಕುವ ಘಟನೆ

    ಕೋಲಾರ: ತನ್ನ ಕಂದಮ್ಮ ಸತ್ತು ಎರಡು ದಿನಗಳು ಕಳೆದ್ರೂ ತನ್ನೊಂದಿಗೆ ಮರಿಯನ್ನು ಇರಿಸಿಕೊಂಡಿರುವ ತಾಯಿ ಕೋತಿಯ ಹೃದಯವಿದ್ರಾವಕ ಘಟನೆಯೊಂದು ಕೋಲಾರದಲ್ಲಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಮುಳಬಾಗಿಲು ಪಟ್ಟಣದ ರಸ್ತೆ ಬದಿಯಲ್ಲಿ ಕುಳಿತಿರೋ ತಾಯಿ ಕೋತಿಯ ರೋಧನೆ ಎಂತಹವರ ಕಣ್ಣುಗಳಲ್ಲೂ ನೀರು ತರಿಸುವಂತಿತ್ತು. ಕೋತಿಯೊಂದು ತನ್ನ ಮರಿ ಸತ್ತು ಹೋಗಿದ್ದರು ಕರುಳಿನ ಕುಡಿಯನ್ನ ಬಿಸಾಕದೆ ರೋಧಿಸುತ್ತಾ ಗುಂಪಿನ ಕೋತಿಗಳ ಜೊತೆಗೆ ಆಹಾರ ಹುಡುಕುತ್ತಿದ್ದ ದೃಶ್ಯ ಮನ ಕಲಕುತ್ತಿದೆ.

    ಮನುಷ್ಯ ಸತ್ತರೆ ಶವ ಸಂಸ್ಕಾರ ನಡೆಸಿದ ಮೇಲೆ ಮರೆಯುತ್ತೇವೆ. ಆದರೆ ಈ ಕೋತಿಯ ತನ್ನ ಮರಿ ಸತ್ತು ಎರಡು ದಿನಗಳೇ ಕಳೆದಿವೆ. ಆದರೆ ಈ ಕೋತಿ ತನ್ನ ಮರಿ ಸತ್ತು ದುರ್ವಾಸನೆ ಬರುತ್ತಿದ್ದರೂ, ಮೃತ ಮರಿ ದೇಹ ಬಿಡದೆ ಎತ್ತಿಕೊಂಡು ತಿರುಗುತ್ತಿದ್ದನ್ನು ಕಂಡು ಜನ ತಾಯಿ ಕೋತಿಯ ಪ್ರೀತಿಗೆ ಸಾಟಿಯಿಲ್ಲವೆಂದು ಮರುಗಿದರು.

    https://www.youtube.com/watch?v=skyOeTFt_nY

  • ಟಂಟಂಗೆ ಟ್ರ್ಯಾಕ್ಟರ್ ಡಿಕ್ಕಿ: ಓರ್ವ ಸಾವು, 7 ಜನರಿಗೆ ಗಾಯ

    ಟಂಟಂಗೆ ಟ್ರ್ಯಾಕ್ಟರ್ ಡಿಕ್ಕಿ: ಓರ್ವ ಸಾವು, 7 ಜನರಿಗೆ ಗಾಯ

    ಯಾದಗಿರಿ: ಚಾಲಕನ ನಿಯಂತ್ರಣ ತಪ್ಪಿ ಟಂಟಂಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು 7 ಜನರಿಗೆ ಗಾಯಗಳಾದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

    ಯಾದಗಿರಿ ತಾಲೂಕಿನ ಚಿನ್ನಕಾರ ಬಳಿ ಈ ಘಟನೆ ಸಂಭವಿಸಿದೆ. ಕರಣಗಿ ನಿವಾಸಿ ಭದ್ರಪ್ಪ (25) ಮೃತ ದುರ್ದೈವಿ. ಘಟನೆಯಲ್ಲಿ 7 ಮಂದಿಗೆ ಗಾಯಗಳಾಗಿದ್ದು, ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಕರಣಗಿ ನಿವಾಸಿಗಳು ಗುರುಮಠಕಲ್ ಪಟ್ಟಣದಿಂದ ಕರಣಗಿಗೆ ಗುರುವಾರ ರಾತ್ರಿ ಟಂಟಂನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನೆಯ ಬಳಿಕ ಟ್ರ್ಯಾಕ್ಟರ್ ಹಾಗೂ ಟಂಟಂ ವಾಹನದ ಇಬ್ಬರೂ ಚಾಲಕರು ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ತಂಡ ಗೆಲ್ಲಿಸಿದ ಖುಷಿಗೆ ಹಾರ್ಟ್ ಆಟ್ಯಾಕ್: ಮೈದಾನದಲ್ಲೇ ಸಾವನ್ನಪ್ಪಿದ ಯುವ ಕ್ರಿಕೆಟಿಗ

    ತಂಡ ಗೆಲ್ಲಿಸಿದ ಖುಷಿಗೆ ಹಾರ್ಟ್ ಆಟ್ಯಾಕ್: ಮೈದಾನದಲ್ಲೇ ಸಾವನ್ನಪ್ಪಿದ ಯುವ ಕ್ರಿಕೆಟಿಗ

    ವಿಜಯಪುರ: ಕ್ರಿಕೆಟ್ ಮ್ಯಾಚ್ ಗೆದ್ದ ಖುಷಿಯಲ್ಲಿ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಧಾರುಣ ಘಟನೆ ನಗರದ ಹರಣಶಿಕಾರಿ ಕಾಲೋನಿಯಲ್ಲಿ ನಡೆದಿದೆ.

     

     

    25 ವರ್ಷದ ರಾಹುಲ್ ಚವ್ಹಾಣ್ ಮೃತ ಯುವಕ. ನಗರದಲ್ಲಿ ದುರ್ಗಾದೇವಿ ಜಾತ್ರೆ ಅಂಗವಾಗಿ ಕ್ರಿಕೆಟ್ ಪಂದ್ಯಾಟ ಹಮ್ಮಿಕೊಳ್ಳಲಾಗಿತ್ತು. ಟೂರ್ನಿಯಲ್ಲಿ ಭಾಗವಹಿಸಿದ್ದ ರಾಹುಲ್ ಹ್ಯಾಟ್ರಿಕ್ ಮೂರು ವಿಕೆಟ್ ಪಡೆದುಕೊಂಡಿದ್ದರು. ಆಟದ ಕೊನೆಗೆ ರನ್ ಔಟ್ ಮಾಡುವ ಮೂಲಕ ರಾಹುಲ್ ಪಂದ್ಯವನ್ನು ಗೆಲ್ಲಿಸಿದ್ದರು.

     

    ಇದೇ ಖುಷಿಯಲ್ಲಿದ್ದ ರಾಹುಲ್ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರಾಹುಲ್ ಗೆ ಕ್ರಿಕೆಟ್ ಆಡಲು ತೆರಳದಂತೆ ಪೋಷಕರು ಹೇಳಿದ್ದರು. ಆದರೆ ಪೋಷಕರ ಮಾತು ಕೇಳದ ರಾಹುಲ್ ತಂಡವನ್ನು ಗೆಲ್ಲಿಸಿ ಅಂಗಳದಲ್ಲೇ ಮೃತಪಟ್ಟಿದ್ದಾರೆ.

     

  • 108 ಸಿಬ್ಬಂದಿಯ ಲಂಚಕ್ಕೆ ಡೆಂಘೀ ಪೀಡಿತ ಬಾಲಕ ಬಲಿ!

    108 ಸಿಬ್ಬಂದಿಯ ಲಂಚಕ್ಕೆ ಡೆಂಘೀ ಪೀಡಿತ ಬಾಲಕ ಬಲಿ!

    ತುಮಕೂರ: 108 ಸಿಬ್ಬಂದಿಯ ಲಂಚಕ್ಕೆ ಡೆಂಘೀ ಪೀಡಿತ ಬಾಲಕನೊಬ್ಬ ಬಲಿಯಾಗಿರುವ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹಳ್ಳಿಯಲ್ಲಿ ನಡೆದಿದೆ.

    ವೆಂಕಟಸ್ವಾಮಿ-ಸುಗುಣಮ್ಮ ದಂಪತಿಯ ಮಗನಾದ ಶ್ರೀನಿಧಿ(8) ಮೃತ ಬಾಲಕ. ಶ್ರೀನಿಧಿ ಕಳೆದ ಮೂರ್ನಾಲ್ಕು ದಿನಗಳಿಂದ ಡೆಂಘೀ ಜ್ವರದಿಂದ ಬಳಲುತ್ತಿದ್ದ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರು.

    ಈ ವೇಳೆ 108 ಸಿಬ್ಬಂದಿಗೆ ಮೃತ ಶ್ರೀನಿಧಿ ಪೋಷಕರು ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದಾರೆ. ಸಮಯ ಸಾಧಕ 108 ಸಿಬ್ಬಂದಿ ಹಣ ಕೊಟ್ಟರೆ ಮಾತ್ರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

    ಕೊನೆಗೂ 108 ಸಿಬ್ಬಂದಿ 2ಗಂಟೆ ತಡವಾಗಿ ಬಾಲಕನನ್ನ ತುಮಕೂರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆ ವೇಳೆಗಾಗಲೇ ಬಾಲಕನ ಸ್ಥಿತಿ ತೀರಾ ಹದಗೆಟ್ಟಿದ್ದು, ವೈದ್ಯರು ಬಾಲಕನನ್ನ ಕೂಡಲೇ ಬೆಂಗಳೂರಿಗೆ ರವಾನಿಸುವಂತೆ ಹೇಳಿದ್ದಾರೆ. ಹಾಗಾಗಿ ಬಾಲಕನನ್ನ ಬೆಂಗಳೂರಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ.

     

  • ಮನೆಗೆ ಬೆಂಕಿ ಹಾಕಿ ಸಹೋದರನನ್ನು ಸೇರಿದಂತೆ ನಾಲ್ವರನ್ನು ಜೀವಂತ ಸುಟ್ಟ!

    ಮನೆಗೆ ಬೆಂಕಿ ಹಾಕಿ ಸಹೋದರನನ್ನು ಸೇರಿದಂತೆ ನಾಲ್ವರನ್ನು ಜೀವಂತ ಸುಟ್ಟ!

    ಪಾಟ್ನಾ: ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಸಹೋದರ, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರನ್ನು ಜೀವಂತವಾಗಿ ಸುಟ್ಟ ದಾರುಣ ಘಟನೆ ಭಾನುವಾರ ರಾತ್ರಿ ಬಿಹಾರದಲ್ಲಿ ನಡೆದಿದೆ.

    ಬಿಹಾರದ ಕತಿಹಾರ್ ಜಿಲ್ಲೆಯಯಲ್ಲಿ ಈ ಘಟನೆ ಸಂಭವಿಸಿದೆ. ಕೇದಾರ್ ಸಿಂಗ್(45) ಪತ್ನಿ ಪ್ರತಿಮಾ ದೇವಿ(40) ಅವರ ಇಬ್ಬರು ಪುತ್ರಿಯರಾದ ಡಿಂಪಲ್ ಕುಮಾರಿ(15) ಮತ್ತು ಸೋನಿ(17) ಮೃತಪಟ್ಟವರು. ಕೋಣೆಯಲ್ಲಿ ಮಲಗಿದ್ದ ಮಗ ಲಕ್ಷ್ಮಣ್ ಕುಮಾರ್ ಸಿಂಗ್(12) ಘಟನೆಯಿಂದ ಪಾರಾಗಿದ್ದಾನೆ.

    ಕೇದಾರ್ ಸಿಂಗ್ ಮತ್ತು ಆತನ ಸಹೋದರನ ಮಧ್ಯೆ ಪೂರ್ವಜರ ಆಸ್ತಿ ವಿಷಯದ ಬಗ್ಗೆ ಜಗಳವಿತ್ತು. ಹೀಗಾಗಿ ಈ ಆಸ್ತಿ ದ್ವೇಷದಿಂದ ಕೇದಾರಸಿಂಗ್ ಹಾಗೂ ಆತನ ಕುಟುಂಬಸ್ಥನ್ನ ಮನೆಯಲ್ಲಿ ಮಲಗಿದ್ದ ವೇಳೆ ಹೊರಗಡೆಯ ಬಾಗಿಲ ಕೊಂಡಿಯನ್ನು ಲಾಕ್ ಮಾಡಿ ಮನೆಗೆ ಬೆಂಕಿ ಹಚ್ಚಿದ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

    ಆ ವೇಳೆ ಬೆಂಕಿ ಹತ್ತಿದಾಗ ಎಚ್ಚರಗೊಂಡ ಕೇದಾರ್ ಸಿಂಗ್ ಕಿರುಚಾಡಿತೊಡಗಿದ್ದಾರೆ. ಕೇದಾರ್ ಸಿಂಗ್ ಸಹೋದರ ಬಾಗಿಲು ಲಾಕ್ ಮಾಡಿದ್ದರಿಂದ ಒಳಗಿದ್ದವರನ್ನು ಕಾಪಾಡಲು ಆಗದಿದ್ದಾಗ ಮನೆಯಲ್ಲಿ ಸುಟ್ಟು ಹೋಗಿದ್ದರು.

    ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಗ ಲಕ್ಷ್ಮಣ್ ಸಿಂಗ್ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೇದಾರ್ ಸಿಂಗ್ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈಗ ಆರೋಪಿ ಕೇದಾರ್ ಸಿಂಗ್ ನಾಪತ್ತೆಯಾಗಿದ್ದಾನೆ.

  • ಮೇವಿಲ್ಲದೇ ಎರಡೇ ದಿನದಲ್ಲಿ 9 ಕರುಗಳ ಸಾವು

    ಮೇವಿಲ್ಲದೇ ಎರಡೇ ದಿನದಲ್ಲಿ 9 ಕರುಗಳ ಸಾವು

    ಚಿಕ್ಕಮಗಳೂರು: ತಿನ್ನೋಕೆ ಮೇವು ಇಲ್ಲದೆ ಎರಡೇ ದಿನದಲ್ಲಿ 9 ಕರುಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಸ್.ಜಿ.ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ರವಿವಾರ ಐದು ಹಾಗೂ ಇಂದು ನಾಲ್ಕು ಕರುಗಳು ಹಸಿವಿನ ಬೇಗೆಯಿಂದ ಪ್ರಾಣಬಿಟ್ಟಿವೆ. ಕಡೂರು ತಾಲೂಕು ಎರಡು ದಶಕಗಳಿಂದ ಶಾಶ್ವತ ಬರಗಾಲಕ್ಕೆ ತುತ್ತಾಗಿದೆ. ಇಲ್ಲಿನ ಜನ-ಜಾನುವಾರುಗಳು ನೀರು, ಮೇವಿಗಾಗಿ ಹಾಹಾಕಾರ ಅನುಭವಿಸುವಂತಾಗಿದೆ.

    ಗೋಶಾಲೆ ತೆರೆಯಿರಿ ಎಂದು ಎಷ್ಟೇ ಬಾರಿ ಅಂಗಲಾಚಿದ್ದರೂ ಜಿಲ್ಲಾಡಳಿತ ಎನ್.ಜಿ.ಓ ಗಾಗಿ ಕಾದು ಕೂತಿರೋದು ಜಾನುವಾರುಗಳ ಮಾರಣಹೋಮಕ್ಕೆ ಕಾರಣವಾಗಿದೆ. ಈಗಾಗಲೇ ಪಂಚನಹಳ್ಳಿಯಲ್ಲಿ ಒಂದು ಗೋಶಾಲೆ ತೆರೆದಿರೋ ಜಿಲ್ಲಾಡಳಿತ ಅದನ್ನೂ ಮುಚ್ಚೋಕೆ ಮುಂದಾಗಿದ್ರು. ಆದ್ರೆ ಸ್ಥಳೀಯರ ಹೋರಾಟದಿಂದ ಮತ್ತೆ ಮುಂದುವರೆಯುತ್ತಿದೆ.

    ಇನ್ನೆರಡು ಗೋಶಾಲೆ ತೆರೆಯೋದಕ್ಕೆ ಅವಕಾಶವಿದ್ರೂ ಜಿಲ್ಲಾಡಳಿತ ಮೀನಾಮೇಷ ಏಣಿಸ್ತಿರೋದು ಕರುಗಳ ಮಾರಣಹೋಮಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮಾರ್ಗಮಧ್ಯೆ ಆಂಬುಲೆನ್ಸ್ ಕೆಟ್ಟಿದ್ದೇ ಬಾಲಕನ ಸಾವಿಗೆ ಕಾರಣ- ಪೋಷಕರ ಆರೋಪ

    ಮಾರ್ಗಮಧ್ಯೆ ಆಂಬುಲೆನ್ಸ್ ಕೆಟ್ಟಿದ್ದೇ ಬಾಲಕನ ಸಾವಿಗೆ ಕಾರಣ- ಪೋಷಕರ ಆರೋಪ

    ವಿಜಯಪುರ: ಹಾವು ಕಚ್ಚಿದ ಬಾಲಕನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಸಿಂದಗಿ ತಾಲ್ಲೂಕಿನ ಕೊಕಟನೂರ ಗ್ರಾಮದ ಗಣೇಶ ನಾಯ್ಕ ಎಂಬ ಬಾಲಕನಿಗೆ ಮನೆಯ ಹತ್ತಿರ ಆಟವಾಡುತ್ತಿದ್ದಾಗ ಹಾವು ಕಚ್ಚಿತ್ತು. ತಕ್ಷಣ ಗಣೇಶನನ್ನು ಸಿಂದಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ತಾಲೂಕು ಆಸ್ಪತ್ರೆಯಲ್ಲಿ ಔಷಧಿ ಇಲ್ಲದೇ ಪರದಾಡಬೇಕಾಯ್ತು. ಬಳಿಕ ಆಸ್ಪತ್ರೆಯ 108 ಆಂಬುಲೆನ್ಸ್ ವಾಹನದಲ್ಲಿ ಅಲಮೇಲ ಪಟ್ಟಣದ ಖಾಸಗಿ ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯೆ ವಾಹನ ಕೆಟ್ಟು ನಿಂತಿದೆ. ಈ ವೇಳೆ ಬಾಲಕ ಗಣೇಶ್ ಕೊನೆಯುಸಿರೆಳೆದಿದ್ದಾನೆ.

    ಆಸ್ಪತ್ರೆ ಅವ್ಯವಸ್ಥೆಯಿಂದ ನಮ್ಮ ಮಗನ ಪ್ರಾಣ ಹೋಯ್ತು ಅಂತ ಇದೀಗ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ತಾಲೂಕು ವೈದ್ಯಾಧಿಕಾರಿ ಡಾ.ಇಂಗಳೆ ಆಸ್ಪತ್ರೆಯಲ್ಲಿ ಕೆಲ ವೈದ್ಯರ ಕೊರತೆ ಇದೆ.

    ಹಾವು ಕಚ್ಚಿದ ಬಳಿಕ ತುಂಬಾ ತಡವಾಗಿ ಬಾಲಕನನ್ನು ಆಸ್ಪತ್ರೆಗೆ ಕರೆತಂದಿದ್ದರು. ಬಾಲಕನ ದೇಹಕ್ಕೆ ಆಗಲೇ ವಿಷ ಅಧಿಕ ಪ್ರಮಾಣ ಏರಿತ್ತು. ಹೀಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದೆವು. ಮಾರ್ಗಮಧ್ಯೆ ಆಂಬ್ಯುಲೆನ್ಸ್ ಕೆಟ್ಟಿದ್ದರ ಬಗ್ಗೆ ಮಾಹಿತಿ ಇಲ್ಲ ಅಂತ ಡಾ.ಇಂಗಳೆ ಹೇಳಿದ್ದಾರೆ.

  • ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣು- ಕಲಬುರಗಿಯಲ್ಲಿ ದಾರುಣ ಘಟನೆ

    ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣು- ಕಲಬುರಗಿಯಲ್ಲಿ ದಾರುಣ ಘಟನೆ

    ಕಲಬುರಗಿ: ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣಾದ ದಾರುಣ ಘಟನೆ ಕಲಬುರಗಿ ನಗರದ ಸರಸ್ವತಿಪುರ ಬಡಾವಣೆಯ ಮನೆಯಲ್ಲಿ ನಡೆದಿದೆ.

    ಶ್ರೀಕಾಂತ್, ಪತ್ನಿ ತನುಶ್ರೀ ಹಾಗು ಇಬ್ಬರು ಮಕ್ಕಳಾದ ಸಾಕ್ಷಿ ಮತ್ತು ಚೇತನ ಮೃತ ದುರ್ದೈವಿಗಳು. ಸಾವಿಗೂ ಮುನ್ನ ಇವರು ಡೆತ್ ನೋಟ್ ಬರೆದಿಟ್ಟಿದ್ದು, `ನಮ್ಮ ಸಾವಿಗೇ ನಾವೇ ಕಾರಣ ಬೇರೆ ಯಾರು ಕಾರಣರಲ್ಲ ನಮ್ಮ ದೇಹಗಳನ್ನು ಮೆಡಿಕಲ್ ಕಾಲೇಜಿಗೆ ದಾನ ಮಾಡಿ’ ಅಂತಾ ಬರೆದಿದ್ದಾರೆ.

    ಘಟನಾ ಸ್ಥಳಕ್ಕೆ ಕಲಬುರಗಿ ಎಸ್‍ಪಿ ಎನ್ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಳಗಾವಿಯಲ್ಲಿ ಭಾರೀ ವಿದ್ಯುತ್ ಅವಘಡಕ್ಕೆ ಇಬ್ಬರು ಬಲಿ- 6 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಬೆಳಗಾವಿಯಲ್ಲಿ ಭಾರೀ ವಿದ್ಯುತ್ ಅವಘಡಕ್ಕೆ ಇಬ್ಬರು ಬಲಿ- 6 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಭಾರೀ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಇಂದು ನಡೆದಿದೆ.

    45 ವರ್ಷದ ಪರಶುರಾಮ ಕಠಾರೆ, 25 ವರ್ಷದ ಗೋಪಾಲ ಸೊಲಗನ್ನವರ ವಿದ್ಯುತ್ ಅವಘಡಕ್ಕೆ ಬಲಿಯಾದ ದುರ್ದೈವಿಗಳು. ಘಟನೆಯಲ್ಲಿ 6 ಜನರಿಗೆ ಗಂಭೀರ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಗಾಯಾಳುಗಳು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗಾಂಧಿನಗರದಲ್ಲಿ ಹೋಟೆಲ್ ನಾಮಫಲಕ ಅಳವಡಿಕೆ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಡಿಸಿಪಿ ಸೀಮಾ ಲಾಟಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಶಾಲೆಗೆ ಹೋಗುತ್ತಿದ್ದ ವೇಳೆ ಟ್ರ್ಯಾಕ್ಟರ್ ನಿಂದ ಬಿದ್ದು ಬಾಲಕಿ ಸಾವು

    ಶಾಲೆಗೆ ಹೋಗುತ್ತಿದ್ದ ವೇಳೆ ಟ್ರ್ಯಾಕ್ಟರ್ ನಿಂದ ಬಿದ್ದು ಬಾಲಕಿ ಸಾವು

    ಹಾವೇರಿ: ಶಾಲೆಗೆ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ನಿಂದ ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಬಳಿ ನಡೆದಿದೆ.

    ಮೃತ ಬಾಲಕಿಯನ್ನ ಕಾಕೋಳ ತಾಂಡಾದ ನಿವಾಸಿ ಕಾವ್ಯಾ ಲಮಾಣಿ(16) ಎಂದು ಗುರುತಿಸಲಾಗಿದೆ. ಬೆಳಗ್ಗೆ ತಾಂಡಾದಿಂದ ರಾಣೇಬೆನ್ನೂರು ನಗರದ ರಾಜರಾಜೇಶ್ವರಿ ಶಾಲೆ ಗೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಬಾಲಕಿ ಕಾವ್ಯಾ ರಾಜರಾಜೇಶ್ವರಿ ಹೈಸ್ಕೂಲ್ ನಲ್ಲಿ 10 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕಾಕೋಳ ತಾಂಡಾದಿಂದ ಟ್ರ್ಯಾಕ್ಟರ್ ನಲ್ಲಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಘಟನೆಯ ಸ್ಥಳದಿಂದ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.