Tag: death

  • ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ಸ್ಪರ್ಶಿಸಿ ಇಬ್ಬರ ಸಾವು

    ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ಸ್ಪರ್ಶಿಸಿ ಇಬ್ಬರ ಸಾವು

    ಬೆಳಗಾವಿ: ಜಮೀನಿನಲ್ಲಿ ಪಂಪ್ ಸೆಟ್‍ಗೆ ಅಳವಡಿಸಲಾಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ತಂತಿ ತಗುಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ.

    ಪಾಂಡುರಂಗ ಡೊಂಗರೆ (50) ಹಾಗೂ ಮುಕ್ತಾಬಾಯಿ ಪೂಜೇರಿ(34) ಸ್ಥಳದಲ್ಲಿಯೇ ಮೃತ ಪಟ್ಟ ದುರ್ದೈವಿಗಳು. ಜಮೀನಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಪಂಪಸೆಟ್ ಗೆ ಅಳವಡಿಸಿದ್ದ ತಂತಿ ತುಂಡಾಗಿ ಬಿದ್ದದನ್ನು ಗಮನಿಸದೆ ಮೊದಲು ಪಾಂಡುರಂಗ ಅವರಿಗೆ ಸ್ಪರ್ಶವಾಗಿ ವಿದ್ಯುತ್ ತಗುಲಿದೆ. ಇದನ್ನು ಗಮನಿಸಿ ವಿದ್ಯುತ್ ತಂತಿಯನ್ನು ಬಿಡಿಸಲು ಹೋಗಿ ಮುಕ್ತಾದೇವಿಗೂ ಸಹ ವಿದ್ಯುತ್ ಸ್ಪರ್ಶಿಸಿ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    ಸ್ಥಳಕ್ಕೆ ಸದಲಗಾ ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸದಲಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಾಯಿಯನ್ನ ಕಾಪಾಡಲು ಹೋಗಿ ಪ್ರಾಣ ಕಳೆದುಕೊಂಡ ಮಗಳು

    ತಾಯಿಯನ್ನ ಕಾಪಾಡಲು ಹೋಗಿ ಪ್ರಾಣ ಕಳೆದುಕೊಂಡ ಮಗಳು

    ರಾಯಚೂರು: ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಮಗಳು ಕಲ್ಲು ಕ್ವಾರಿಯ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರೋ ಘಟನೆ ಮಾನ್ವಿಯಲ್ಲಿ ನಡೆದಿದೆ.

    ಮಾನ್ವಿ ಪಟ್ಟಣದ ಅಕ್ಬರ್ ಸಾಬ್ ಕಂಕರ್ ಮಿಲ್ ಹತ್ತಿರ ಈ ದುರ್ಘಟನೆ ನಡೆದಿದೆ. ಪಟ್ಟಣದ ಬೆಳಗಂಪೇಟೆ ನಿವಾಸಿಗಳಾದ ಲಕ್ಷ್ಮಿ(41) ಹಾಗು ಮಗಳು ಮಲ್ಲಮ್ಮ(12) ಸಾವನ್ನಪ್ಪಿದ್ದಾರೆ. ಬಾವಿಯಂತೆ ಬಳಸುತ್ತಿದ್ದ ಕಲ್ಲು ಕ್ವಾರಿಯ ಗುಂಡಿಯಲ್ಲಿ ತಾಯಿ ಲಕ್ಷ್ಮಿ ಕಾಲು ಜಾರಿ ಬಿದ್ದಿದ್ದರು. ತಾಯಿಯನ್ನ ಕಾಪಾಡಲು ಹೋಗಿ ಮಗಳು ಸಹ ಪ್ರಾಣ ಬಿಟ್ಟಿದ್ದಾಳೆ.

    ಸದ್ಯ ಮೃತ ದೇಹಗಳನ್ನ ಹೊರಗೆ ತೆಗೆಯಲಾಗಿದೆ.ಈ ಬಗ್ಗೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿಂತಿದ್ದ ಲಾರಿಗೆ ಓಲಾ ಕ್ಯಾಬ್ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು

    ನಿಂತಿದ್ದ ಲಾರಿಗೆ ಓಲಾ ಕ್ಯಾಬ್ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು

    ಬೆಂಗಳೂರು: ನಿಂತಿದ್ದ ಲಾರಿಗೆ ಓಲಾ ಕ್ಯಾಬ್ ಡಿಕ್ಕಿಯಾದ ಪರಿಣಾಮ ಚಾಲಕ ಹಾಗೂ ಓರ್ವ ಪ್ಯಾಸೆಂಜರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದೆ.

    ನಗರದ ಏರ್‍ಪೋರ್ಟ್ ರಸ್ತೆಯ ಜಿಕೆವಿಕೆ ಮೇಲ್ಸೇತುವೆ ಬಳಿ ಈ ದುರ್ಘಟನೆ ಸಂಭವಿಸಿದೆ. ದೆಹಲಿ ಮೂಲದ ಉಮೇಶ್ ಕುಮಾರ್ ಮಿಶ್ರ ಮೃತ ಪ್ಯಾಸೆಂಜರ್ ಎನ್ನಲಾಗಿದೆ. ಓಲಾ ಕ್ಯಾಬ್ ಚಾಲಕನ ಗುರುತು ಇನ್ನೂ ಪತ್ತೆಯಾಗಿಲ್ಲ.

    ಈ ಅಪಘಾತವಾದ ಹಿನ್ನೆಲೆಯಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕಾವ್ಯ ನಿಗೂಢ ಸಾವು: ಆಳ್ವಾಸ್ ಸಂಸ್ಥೆ ವಿರುದ್ಧ ಭಾರೀ ಪ್ರತಿಭಟನೆ- ಹಾಸ್ಟೆಲ್‍ನ ಸಿಸಿಟಿವಿ ದೃಶ್ಯ ಬಿಡುಗಡೆ

    ಕಾವ್ಯ ನಿಗೂಢ ಸಾವು: ಆಳ್ವಾಸ್ ಸಂಸ್ಥೆ ವಿರುದ್ಧ ಭಾರೀ ಪ್ರತಿಭಟನೆ- ಹಾಸ್ಟೆಲ್‍ನ ಸಿಸಿಟಿವಿ ದೃಶ್ಯ ಬಿಡುಗಡೆ

    ಮಂಗಳೂರು: ಕೋಮು ಗಲಭೆಯಿಂದ ಹೊತ್ತಿ ಉರಿದಿದ್ದ ಮಂಗಳೂರಿನಲ್ಲಿ ಮತ್ತೊಂದು ನಿಗೂಢ ಸಾವು ಹಲವು ಅನುಮಾನ, ವಿವಾದಗಳಿಗೆ ಕಾರಣವಾಗಿದೆ. ಶಿಕ್ಷಣಕ್ಕೆ ಹೆಸರಾದ ಆಳ್ವಾಸ್ ಸಂಸ್ಥೆಯಲ್ಲಿ ಬ್ಯಾಡ್ಮಿಂಟನ್ ವಿದ್ಯಾರ್ಥಿನಿ ಕಾವ್ಯಶ್ರೀ ಸಾವು ಹತ್ತು ಹಲವು ಪ್ರಶ್ನೆಗಳನ್ನು ಎತ್ತಿದೆ.

    ಈ ನಡುವೆ ವಿದ್ಯಾರ್ಥಿನಿ ಸಾವಿನ ನ್ಯಾಯಾಕ್ಕಾಗಿ ಇದೀಗ ಪ್ರತಿಭಟನೆಗಳು ಆರಂಭಗೊಂಡಿವೆ. ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಂಗಳೂರಿನ ನೆಹರೂ ಮೈದಾನದಲ್ಲಿ ಮೊಂಬತ್ತಿ ಉರಿಸಿ ಮೌನ ಪ್ರತಿಭಟನೆ ನಡೆಸಿತು. ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ, ಸಾವಿನ ತನಿಖೆಯನ್ನು ಸರಿಯಾಗಿ ನಡೆಸಬೇಕೆಂದು ಒತ್ತಾಯಿಸಿದ್ರು.

    ಅಲ್ಲದೇ ಕಾವ್ಯಾ ಸಾವಿನಲ್ಲಿ ದೈಹಿಕ ಶಿಕ್ಷಕ ಪ್ರವೀಣ್ ಕುಮಾರ್ ಕೈವಾಡ ಇರೋ ಆರೋಪ ಕೇಳಿಬಂದಿದ್ರಿಂದ ಮಂಪರು ಪರೀಕ್ಷೆ ಮಾಡಬೇಕೆಂದು ಒತ್ತಾಯಿಸಿದ್ರು. ಇನ್ನು ಕಾವ್ಯಾ ನಿಗೂಢ ಸಾವಿನ ತನಿಖೆಯನ್ನು ಸೂಕ್ತವಾಗಿ ನಡೆಸಬೇಕೆಂದು ಪಿಎಫ್‍ಐ ಕಾರ್ಯಕರ್ತರು ಮೂಡಬಿದ್ರೆಯಲ್ಲಿ ಪ್ರತಿಭಟನೆ ನಡೆಸಿದ್ರು. ಇಷ್ಟೇ ಅಲ್ಲ ದೂರದ ಬಹರೈನ್‍ನಲ್ಲೂ ಪ್ರತಿಭಟನೆ ನಡೆದಿದ್ದು, ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ರಿಫಾ ಘಟಕ ಪ್ರಕರಣದ ಸೂಕ್ತ ತನಿಖೆಗೆ ಒತ್ತಾಯಿಸಿದೆ.

    ಕಾವ್ಯ ಸಾವು ಸಹಜವೋ? ಕೊಲೆಯೋ? ಎಂಬ ಪ್ರಶ್ನೆ ಮೂಡಿದ್ದು, ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿದ ಬೆನ್ನಲ್ಲೇ ಆಳ್ವಾಸ್ ಶಿಕ್ಷಣ ಸಂಸ್ಥೆ ಜುಲೈ 20ರ ಹಾಸ್ಟೆಲ್‍ನ ಸಿಸಿಟಿವಿ ದೃಶ್ಯವನ್ನ ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?

    ದೃಶ್ಯ 1: ಬೆಳಗ್ಗೆ 6.03ಕ್ಕೆ ಕಾಲೇಜಿನ ಆವರಣದಲ್ಲಿ ಓಡಾಟ

    ದೃಶ್ಯ 2: ಬೆಳಗ್ಗೆ 6.42ಕ್ಕೆ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಟ

    ದೃಶ್ಯ 3: ಬೆಳಗ್ಗೆ 9.48ಕ್ಕೆ ಶಾಲೆಗೆ ಬಂದಿದ್ದು

    ಮಧ್ಯಾಹ್ನ 3.34ಕ್ಕೆ  ಶಾಲೆಯಿಂದ ಹೋಗುತ್ತಿರುವುದು 

    https://www.youtube.com/watch?v=RoCUPTp54LM

    ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರೋ ಮೂಡಬಿದಿರೆಯ ಆಳ್ವಾಸ್‍ನ 10 ತರಗತಿ ವಿದ್ಯಾರ್ಥಿನಿ ಕಾವ್ಯಶ್ರೀ ಜುಲೈ 20ರಂದು ನಿಗೂಢವಾಗಿ ಸಾವನ್ನಪ್ಪಿದ್ರು. ಸ್ಪೋಟ್ರ್ಸ್ ಕೋಟಾದಲ್ಲಿ ಸೀಟ್ ಪಡೆದಿದಿದ್ದ ಕಾವ್ಯ, ಬ್ಯಾಡ್ಮಿಂಟನ್‍ನಲ್ಲಿ ನ್ಯಾಷನಲ್ ಲೆವೆಲ್ ಚಾಂಪಿಯನ್ ಆಗಿದ್ರು. ಮಗಳು ಕಾವ್ಯ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಆಳ್ವಾಸ್ ಮಾತ್ರ ದನ್ನ ಅಲ್ಲಗಳೀತಿದೆ. ಇದರ ಮಧ್ಯೆ ಜುಲೈ 20ರಂದು ಶಾಲೆಗೆ ಬಂದಿದ್ದ ಕಾವ್ಯ, ಬ್ಯಾಡ್ಮಿಂಟನ್ ಆಡಿರೋದೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರಿನ ಕಟೀಲು ನಿವಾಸಿಯಾಗಿರೋ ಕಾವ್ಯ ಪೋಷಕರು ಕಾಲೇಜಿನಲ್ಲೇ ಕೊಲೆ ಮಾಡಲಾಗಿದೆ ಅಂತ ಆರೋಪಿಸಿದ್ರು.

    ಸಾಯುವ ಮೊದಲ ದಿನ ಸಂತೋಷದಿಂದ ಮಾತನಾಡಿದವಳು, ನಾಳೆಯಿಂದ ಬೆಳಗ್ಗೆ ನಾಲ್ಕು ಗಂಟೆಯಿಂದ ಟ್ರೈನಿಂಗ್ ಬರಲು ಪಿಟಿ ಮೇಷ್ಟ್ರು ಪ್ರವೀಣ್ ತಿಳಿಸಿದ್ದಾರೆ ಅಂತ ಹೇಳಿದ್ದಳು. ಆದ್ರೆ ಆತ್ಮಹತ್ಯೆ ಮಾಡಿಕೊಂಡಳು ಅಂದ್ರೆ ನಂಬೋದಿಕ್ಕೆ ಆಗತ್ತಾ ಅಂತ ಕಾವ್ಯಾ ತಾಯಿ ಬೇಬಿ ಮತ್ತು ತಂದೆ ಲೋಕೇಶ್ ಪ್ರಶ್ನೆ ಮಾಡ್ತಿದ್ದಾರೆ. ಮಂಗಳೂರು ಕಮಿಷನರ್‍ಗೂ ಕಂಪ್ಲೆಂಟ್ ಕೊಟ್ಟಿದ್ದಾರೆ.

    ಈ ನಡುವೆ ಕಾವ್ಯ ಸಾವು ಹಲವು ಪ್ರಶ್ನೆ ಹುಟ್ಟಿಹಾಕಿದೆ: 
    * ಹಾಸ್ಟೆಲ್‍ನೊಳಗೆ ನೇಣು ಹಾಕಲು ಸೀರೆ ಸಿಕ್ಕಿದ್ದು ಹೇಗೆ..?
    * ಹೆತ್ತವರು ಬರುವ ಮೊದಲೇ ಮೃತದೇಹವನ್ನ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು ಯಾಕೆ..?
    * ಟ್ರಾಕ್ ಸೂಟ್‍ನಲ್ಲೇ ಮೃತದೇಹ ಇದ್ದದ್ದು ಯಾಕೆ..?
    * ಮುಂಜಾನೆ 4 ಗಂಟೆಗೆ ದೈಹಿಕ ಶಿಕ್ಷಕ ತರಬೇತಿಗೆ ಕರೆದದ್ದು ಯಾಕೆ..?

    ಈ ನಡುವೆ ಆಳ್ವಾಸ್ ಸಂಸ್ಥೆ, ಜುಲೈ 20ರಂದು ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದೆ. ಆಕೆಯದ್ದು ಕೊಲೆಯಲ್ಲ ಎಂದು ಹೇಳುತ್ತಿದೆ.

  • ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವು: ಕುಟುಂಬಸ್ಥರ ಆಕ್ರೋಶ

    ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವು: ಕುಟುಂಬಸ್ಥರ ಆಕ್ರೋಶ

    ಚಿತ್ರದುರ್ಗ: ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

    ತಾಲೂಕಿನ ತುರುವನೂರು ಗ್ರಾಮದ ಟಿ.ದೇವರಾಜ (45) ಮೃತ ದುರ್ದೈವಿ. ತಡರಾತ್ರಿ ಎದೆನೋವು ಕಾಣಿಸಿಕೊಂಡ ಕೂಡಲೇ ಜಿಲ್ಲಾಸ್ಪತ್ರೆಗೆ ಟಿ.ದೇವರಾಜ್ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದ್ರೆ ರಾತ್ರಿ 12 ಗಂಟೆಯಿಂದಲೂ ಚಿಕಿತ್ಸೆಗಾಗಿ ಪರದಾಡಿದರೂ ದೇವರಾಜ್‍ಗೆ ಸೂಕ್ತ ಚಿಕಿತ್ಸೆ ಸಿಗಲೇ ಇಲ್ಲ.

    ದೇವರಾಜ್ ಕುಟುಂಬಸ್ಥರು ಚಿಕಿತ್ಸೆಗಾಗಿ ಅಂಗಲಾಚಿದರೂ ಬೆಳಗಿನ ಜಾವ 3 ಗಂಟೆಯವರೆಗೂ ಆಸ್ಪತ್ರೆಯತ್ತ ಯಾವುದೇ ವೈದ್ಯರು ತಿರುಗಿ ನೋಡಲೇ ಇಲ್ಲ. ಪರಿಣಾಮ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ದೇವರಾಜ್ ಮೃತಪಟ್ಟಿದ್ದಾರೆ.

    ದೇವರಾಜ್ ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅನ್ನೋದು ಕುಟುಂಬಸ್ಥರ ಆರೋಪ. ಅಲ್ಲದೆ ಸ್ಥಳಕ್ಕೆ ಜಿಲ್ಲಾ ಶಸ್ತ್ರಚಿಕಿತ್ಸಕ ಬರೋವರೆಗೂ ಮೃತ ವ್ಯಕ್ತಿಯ ಶವ ಪಡೆಯಲು ಕುಟುಂಬಸ್ಥರು ಹಾಗೂ ಸಂಬಂಧಿಕರು ನಿರಾಕರಿಸಿದ್ದಾರೆ.

  • ಮಂಗ್ಳೂರಿನ ಆಳ್ವಾಸ್ ನಲ್ಲಿ SSLC ವಿದ್ಯಾರ್ಥಿನಿ ನಿಗೂಢ ಸಾವು- ಕೊಲೆ ಎಂದು ಪೋಷಕರ ಆರೋಪ

    ಮಂಗ್ಳೂರಿನ ಆಳ್ವಾಸ್ ನಲ್ಲಿ SSLC ವಿದ್ಯಾರ್ಥಿನಿ ನಿಗೂಢ ಸಾವು- ಕೊಲೆ ಎಂದು ಪೋಷಕರ ಆರೋಪ

    ಮಂಗಳೂರು: ನ್ಯಾಶನಲ್ ಲೆವಲ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ವಿದ್ಯಾರ್ಥಿನಿಯೊಬ್ಬಳು ಮಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಇದು ಕೊಲೆ ಅಂತ ಈಗ ಪೋಷಕರು ಆರೋಪಿಸಿದ್ದಾರೆ.

    ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯಾಗಿದ್ದ ಕಾವ್ಯ(15) ಜುಲೈ 20ರಂದು ಹಾಸ್ಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಾಲೆಯಿಂದ ತಿಳಿಸಲಾಗಿತ್ತು. ಆದರೆ ಹೆತ್ತವರು ಅಲ್ಲಿಗೆ ತೆರಳುವಷ್ಟರಲ್ಲಿ ವಿದ್ಯಾರ್ಥಿನಿಯ ಶವವನ್ನು ಆಳ್ವಾಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು.

    ಇದೀಗ ಹೆತ್ತವರು ಕಾವ್ಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಸಂಸ್ಥೆಯ ಆಡಳಿತ ಮಂಡಳಿ ಪ್ರಯತ್ನಿಸುತ್ತಿದೆ. ನಮ್ಮ ಹುಡುಗಿ ಕ್ರೀಡಾಪಟುವಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಂಥವಳಲ್ಲ. ಆಕೆಯನ್ನು ಶಾಲೆಯವರೇ ಕಿರುಕುಳ ಕೊಟ್ಟು ಕೊಲೆಗೈದಿರುವ ಸಂಶಯ ಇದೆ ಎಂದು ವಿದ್ಯಾರ್ಥಿನಿಯ ತಾಯಿ ಬೇಬಿ ಆರೋಪಿಸಿದ್ದಾರೆ.

    ಘಟನೆ ನಡೆದ ರಾತ್ರಿ ಎಂಟು ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಾಲೆಯ ದೈಹಿಕ ಶಿಕ್ಷಕರು ತಿಳಿಸಿದ್ದಾರೆ. ಆದರೆ ನಾವು ಅಲ್ಲಿಗೆ ತಲುಪುವ ಮುನ್ನವೇ ಶವವನ್ನು ಶವಾಗಾರದಲ್ಲಿರಿಸಿದ್ದಲ್ಲದೆ ತಮಗೆ ಸರಿಯಾಗಿ ನೋಡುವುದಕ್ಕೂ ಅವಕಾಶ ಮಾಡಿಲ್ಲ. ಹೀಗಾಗಿ ನಮ್ಮ ಹುಡುಗಿ ಹೇಗೆ ಸಾವನ್ನಪ್ಪಿದ್ದಾಳೆ ಅನ್ನೋದು ಗೊತ್ತಾಗಬೇಕು. ಪೊಲೀಸರು ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಬೇಕೆಂದು ಪೊಲೀಸ್ ಆಯುಕ್ತರಿಗೆ ಪೋಷಕರು ದೂರು ನೀಡಿದ್ದಾರೆ.

    ಕಟೀಲು ಬಳಿಯ ದೇವರಗುಡ್ಡ ಎಂಬಲ್ಲಿನ ನಿವಾಸಿಗಳಾದ ಲೋಕೇಶ್ ಮತ್ತು ಬೇಬಿ ದಂಪತಿಯ ಏಕೈಕ ಪುತ್ರಿಯಾಗಿರುವ ಕಾವ್ಯ ಚಿಕ್ಕಂದಿನಿಂದಲೇ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದಳು. ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಪಾಲ್ಗೊಂಡಿದ್ದು ಕಟೀಲು ಶಾಲೆಗೆ ಕೀರ್ತಿ ತಂದಿದ್ದಳು. ಅದರಂತೆ ಆಳ್ವಾಸ್ ಹೈಸ್ಕೂಲಿನ ದೈಹಿಕ ಶಿಕ್ಷಕರೇ ಕಾವ್ಯಾ ಹೆತ್ತವರನ್ನು ಸಂಪರ್ಕಿಸಿ, ತಮ್ಮ ಶಾಲೆಗೆ ಕಳಿಸಿಕೊಡಿ ಕ್ರೀಡಾ ಕೋಟಾದಲ್ಲಿ ಉಚಿತವಾಗಿ ಶಿಕ್ಷಣ ಕೊಡಿಸುತ್ತೇವೆಂದು ಹೇಳಿ ಕರೆಸಿಕೊಂಡಿದ್ದರು.

    ಇದೇ ಜುಲೈ ಆರಂಭದಲ್ಲಿ ಕಟೀಲು ಶಾಲೆಯಿಂದ ಆಳ್ವಾಸ್ ಹೈಸ್ಕೂಲು ಸೇರಿದ್ದ ಕಾವ್ಯಾ ಇದೀಗ ನಿಗೂಢವಾಗಿ ಸಾವನ್ನಪ್ಪಿರುವುದು ಹೆತ್ತವರನ್ನು ಆತಂಕಕ್ಕೀಡುಮಾಡಿದೆ.

     

    ಒಂದು ಸಾವು, ಹಲವು ಪ್ರಶ್ನೆ:
    1. ಹಾಸ್ಟೆಲ್‍ನೊಳಗೆ ನೇಣು ಹಾಕಲು ಸೀರೆ ಸಿಕ್ಕಿದ್ದು ಎಲ್ಲಿಂದ?
    2. ಹೆತ್ತವರು ಬರುವ ಮೊದಲೇ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು ಯಾಕೆ?
    3. ಸತ್ತ ಸುದ್ದಿ ನೀಡಿದ ಅರ್ಧಗಂಟೆಯೊಳಗೆ ಹೆತ್ತವರು ತಲುಪಿದ್ದರೂ ಶವಾಗಾರದಲ್ಲಿ ಇರಿಸಿದ್ಯಾಕೆ?
    4. ಮುಂಜಾನೆ 4 ಗಂಟೆಗೆ ದೈಹಿಕ ಶಿಕ್ಷಕ ತರಬೇತಿಗೆಂದು ಕರೆದದ್ದು ಯಾಕೆ?
    5. ಸಾಯುವ ಮೊದಲ ದಿನ ಹೆತ್ತವರಲ್ಲಿ ಸಂತೋಷದಿಂದಲೇ ಮಾತನಾಡಿದ್ದಾಕೆ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
    6. ಟ್ರಾಕ್ ಸೂಟ್‍ನಲ್ಲೇ ಮೃತದೇಹ ಇದ್ದದ್ದು ಯಾಕೆ?

  • ಅನುಮಾನಸ್ಪದ ರೀತಿಯಲ್ಲಿ ಸಾವು- ಇಬ್ಬರು ವ್ಯಕ್ತಿಗಳ ಶವ ಪತ್ತೆ

    ಅನುಮಾನಸ್ಪದ ರೀತಿಯಲ್ಲಿ ಸಾವು- ಇಬ್ಬರು ವ್ಯಕ್ತಿಗಳ ಶವ ಪತ್ತೆ

    ಕೋಲಾರ: ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಇಬ್ಬರು ವ್ಯಕ್ತಿಗಳ ಶವ ಪತ್ತೆಯಾದ ಘಟನೆ ಜಿಲ್ಲೆಯ ಮಾಲೂರು ಪಟ್ಟಣದ ಮಾಸ್ತಿ ವೃತ್ತದ ಔಷಧಿ ಅಂಗಡಿ ಬಳಿ ನಡೆದಿದೆ.

    ಪಟ್ಟಣದ ಸಮತಾನಗರ ನಿವಾಸಿಗಳಾದ ಗೋಪಾಲ್ (44) ಹಾಗೂ ರಾಜಪ್ಪ (40) ಅವರ ಶವಗಳು ಪತ್ತೆಯಾಗಿವೆ. ಕಳೆದ ರಾತ್ರಿ ಕಂಠಪೂರ್ತಿ ಮದ್ಯಪಾನ ಮಾಡಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

    ಇವರಿಬ್ಬರೂ ಪಟ್ಟಣದಲ್ಲಿ ಚಿಂದಿ ಪೇಪರ್ ಆಯುವ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ತೋಟದಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ರೈತ ಸಾವು

    ತೋಟದಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ರೈತ ಸಾವು

    ಕಾರವಾರ: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ನೆಡೆದಿದೆ.

    ಕೆರೆಕೋಣ ನಿವಾಸಿ ಗಣಪತಿ ಪರಮೇಶ್ವರ ಭಟ್ಟ ಉಂಚುಟ್ಟೆ (55) ಮೃತ ರೈತ. ತಮ್ಮ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವು ಕಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿ ಶವ ಹೊರತೆಗೆದಿದ್ದಾರೆ.

    ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲಿಯೇ ಪಾದಚಾರಿ ಸಾವು

    ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲಿಯೇ ಪಾದಚಾರಿ ಸಾವು

    ಧಾರವಾಡ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪಾದಚಾರಿ ಮೃತಪಟ್ಟ ಘಟನೆ ಕಲಘಟಗಿ ತಾಲೂಕಿನ ಮಡಕಿಹೊನ್ನಿಹಳ್ಳಿ ರಸ್ತೆಯ ವಿಶ್ವಚೇತನ ಶಾಲೆಯ ಎದುರು ನಡೆದಿದೆ.

    ಮಡಕಿಹೊನ್ನಿಹಳ್ಳಿ ಗ್ರಾಮದ ಯಲ್ಲಪ್ಪ ಪುಟ್ಟಪ್ಪ ತಳವಾರ (55) ಮೃತ ವ್ಯಕ್ತಿ. ಮನೆಯಿಂದ ಕಲಘಟಗಿ ಪಟ್ಟಣಕ್ಕೆ ನಡೆದಕೊಂಡು ಹೋಗುವಾಗ ತಲೆಯ ಮೇಲೆ ಅಪರಿಚಿತ ವಾಹನ ಹರಿದ ಪರಿಣಾಮ ಸ್ಥಳದಲ್ಲಿಯೇ ವೃತಪಟ್ಟಿದ್ದಾರೆ.

    ಈ ಬಗ್ಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟ್ರಾಕ್ಟರ್‍ಗೆ ಬೈಕ್ ಡಿಕ್ಕಿ: ಸ್ಥಳದಲ್ಲಿ ಇಬ್ಬರ ಸಾವು

    ಟ್ರಾಕ್ಟರ್‍ಗೆ ಬೈಕ್ ಡಿಕ್ಕಿ: ಸ್ಥಳದಲ್ಲಿ ಇಬ್ಬರ ಸಾವು

    ಯಾದಗಿರಿ: ಟ್ರಾಕ್ಟರ್‍ಗೆ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಸಾವನ್ನಪ್ಪಿರುವ ಘಟನೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನಳ್ಳಿ ಗ್ರಾಮದ ಮಡಿವಾಳಪ್ಪ (27), ಗೊಲ್ಲಾಳಪ್ಪ(26) ಮೃತಪಟ್ಟ ವ್ಯಕ್ತಿಗಳು. ಈ ಅಪಘಾತವಾದ ತಕ್ಷಣವೇ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ.

    ಸ್ಥಳಕ್ಕೆ ಶಹಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.