Tag: death

  • 30 ಅಡಿ ಆಳದ ತೊರೆಗೆ ಬಿದ್ದು ಬೈಕ್ ಸವಾರ ಸಾವು

    30 ಅಡಿ ಆಳದ ತೊರೆಗೆ ಬಿದ್ದು ಬೈಕ್ ಸವಾರ ಸಾವು

    ಬೆಂಗಳೂರು: ನಿಯಂತ್ರಣ ತಪ್ಪಿ ಬೈಕ್ ಸುಮಾರು ಮೂವತ್ತು ಅಡಿ ಆಳದ ರಸ್ತೆ ಪಕ್ಕದ ತೊರೆಗೆ ಬಿದ್ದು ಸವಾರರೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತೊರೆ ಮೂಡಲಪಾಳ್ಯದ ಬಳಿ ನಡೆದಿದೆ.

    ತಿಮ್ಮಸಂದ್ರ ಗ್ರಾಮದ ನಿವಾಸಿ ಹನುಮಂತರಾಜು ಮೃತ ದುರ್ದೈವಿ. ಬೈಕ್ ಚಕ್ರಕ್ಕೆ ಕಲ್ಲು ಸಿಲುಕಿದ ಪರಿಣಾಮ ಬೈಕ್ ರಸ್ತೆಯಿಂದ ಹಳ್ಳಕ್ಕೆ ಬಿದ್ದಿದೆ.

    ಗಂಭೀರ ಗಾಯಗೊಂಡಿದ್ದ ಹನುಮಂತರಾಜು ತೀವ್ರ ರಕ್ತ ಸ್ರಾವದಿಂದಾಗಿ ಮೃತಪಟ್ಟಿದ್ದಾರೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ವರ್ಶಿಸಿ ವ್ಯಕ್ತಿ ಸಾವು

    ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ವರ್ಶಿಸಿ ವ್ಯಕ್ತಿ ಸಾವು

    ಕಾರವಾರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನ ಸ್ಪರ್ಶಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.

    ದೇವಿದಾಸ್ (65) ವಿದ್ಯುತ್ ತಂತಿ ಸ್ವರ್ಶಿಸಿ ಮೃತಪಟ್ಟ ವ್ಯಕ್ತಿ. ಮನೆಯ ಬಳಿ ಹೂವನ್ನ ಕೀಳುವಾಗ ತುಂಡಾಗಿ ಬಿದ್ದಿದ್ದ ತಂತಿ ಸ್ವರ್ಶಿಸಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.

    ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಏಕಕಾಲಕ್ಕೆ ಜನಿಸಿದ್ದ 4 ಶಿಶುಗಳು ಸಾವು- ಮುಗಿಲುಮುಟ್ಟಿದ ತಾಯಿಯ ಆಕ್ರಂದನ

    ಏಕಕಾಲಕ್ಕೆ ಜನಿಸಿದ್ದ 4 ಶಿಶುಗಳು ಸಾವು- ಮುಗಿಲುಮುಟ್ಟಿದ ತಾಯಿಯ ಆಕ್ರಂದನ

    ಬಳ್ಳಾರಿ: ಕಳೆದ ಶುಕ್ರವಾರ ಏಕಕಾಲಕ್ಕೆ ಜನಿಸಿದ್ದ ನಾಲ್ಕು ಮಕ್ಕಳು ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿವೆ.

    ತಾಲೂಕಿನ ಎಮ್ಮಿಗನೂರು ಗ್ರಾಮದ ಗುಂಡೂರು ಹುಲಿಗೆಮ್ಮ(26) ತನ್ನ ಎರಡನೇ ಹೆರಿಗೆಯಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಆದ್ರೆ ಹುಲಿಗೆಮ್ಮ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು ಪ್ರೀ ಮೆಚ್ಯೂರ್ ಡೆಲಿವರಿ ಆದ ಪರಿಣಾಮ ಮತ್ತು ಮಕ್ಕಳ ತೂಕ ಕಡಿಮೆಯಿದ್ದ ಪರಿಣಾಮ ನಾಲ್ಕು ಮಕ್ಕಳು ಕಳೆದ ರಾತ್ರಿ ವಿಮ್ಸ್ ನಲ್ಲಿ ಮೃತಪಟ್ಟಿವೆ.

    ವಿಮ್ಸ್ ವೈದ್ಯರು ಸುರಕ್ಷತೆ ದೃಷ್ಟಿಯಿಂದ ಮಕ್ಕಳನ್ನು ಎನ್‍ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ರು. ಆದ್ರೂ ಮಕ್ಕಳ ತೂಕ ಕಡಿಮೆ ಇದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವೆ. ವೈದ್ಯರು ಸಾಕಷ್ಟು ಪ್ರಯತ್ನ ಪಟ್ಟರೂ ಮಕ್ಕಳನ್ನು ಉಳಿಸಿಕೊಳ್ಳಲು ವಿಫಲವಾಗಿದ್ದಾರೆ.

    ಈ ಮೂಲಕ ಏಕಕಾಲಕ್ಕೆ ಜನಿಸಿದ್ದ ನಾಲ್ಕು ಮಕ್ಕಳು ಬದುಕುಳಿಯದಿರುವುದು ವಿಪರ್ಯಾಸವಾಗಿದೆ. ಈ ನಾಲ್ಕು ಮಕ್ಕಳನ್ನ ಕಳೆದುಕೊಂಡ ಹುಲಿಗೆಮ್ಮ ಮನೆಯಲ್ಲೀಗ ಆಕ್ರಂದನ ಮುಗಿಲುಮುಟ್ಟಿದೆ.

     

    ಇದನ್ನೂ ಓದಿ:  2ನೇ ಹೆರಿಗೆ- 2 ಹೆಣ್ಣು, 2 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

     

  • ಕ್ವಾಲಿಸ್ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಸ್ಥಳದಲ್ಲಿ ತಂದೆ, ಮಗ ಸಾವು

    ಕ್ವಾಲಿಸ್ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಸ್ಥಳದಲ್ಲಿ ತಂದೆ, ಮಗ ಸಾವು

    ತುಮಕೂರು: ಕ್ವಾಲಿಸ್ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕ್ವಾಲಿಸ್ ವಾಹನದಲ್ಲಿದ್ದ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಲ್ಲೆಯಲ್ಲಿ ನಡೆದಿದೆ.

    ತುಮಕೂರು ತಾಲೂಕಿನ ನರುಗನಹಳ್ಳಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್ ಸಿ ಕುಮಾರ್ ಹಾಗೂ ಅವರ ಮಗ ಜೀವನ ಮೃತಪಟ್ಟಿದ್ದಾರೆ.

    ತಂದೆ ಮಗ ಸೇರಿ ಹೊನ್ನುಡಿಕೆಯಿಂದ ತುಮಕೂರಿಗೆ ಬರುತಿದ್ದ ವೇಳೆ ದಾರಿ ಮಧ್ಯೆ ನರುಗನಹಳ್ಳಿ ಬಳಿ ಘಟನೆ ಸಂಭವಿಸಿದೆ. ಕುಣಿಗಲ್ ಕಡೆಗೆ ಹೋಗುತಿದ್ದ ಎಸ್‍ಆರ್‍ಎಸ್ ಖಾಸಗಿ ಬಸ್ ಚಾಲಕ ತನ್ನ ಮುಂದಿದ್ದ ವಾಹನಕ್ಕೆ ಓವರ್ ಟೇಕ್ ಮಾಡಲು ಹೋಗಿ ಎದುರಿಗೆ ಬಂದ ಕ್ವಾಲಿಸ್ ಗೆ ಡಿಕ್ಕಿ ಹೊಡೆದಿದ್ದಾನೆ.

    ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

  • ಸಾವಿನ ದವಡೆಯಲ್ಲಿದ್ದರೂ ಸಿಗದ ಆಂಬುಲೆನ್ಸ್, ಮೃತಪಟ್ಟ ಕಾರ್ಮಿಕ

    ಸಾವಿನ ದವಡೆಯಲ್ಲಿದ್ದರೂ ಸಿಗದ ಆಂಬುಲೆನ್ಸ್, ಮೃತಪಟ್ಟ ಕಾರ್ಮಿಕ

    ಮೈಸೂರು: ಹೃದಯಾಘಾತಗೊಂಡ ಕಾರ್ಮಿಕರೊಬ್ಬರಿಗೆ ಆಂಬುಲೆನ್ಸ್ ಸಿಗದ ಕಾರಣ ಮಾರ್ಗಮಧ್ಯೆ ಮೃತ ಪಟ್ಟ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸಂಗರಶೆಟ್ಟಿ ಗ್ರಾಮದಲ್ಲಿ ನಡೆದಿದೆ.

    ಮೃತ ಪಟ್ಟ ಕಾರ್ಮಿಕ ಗಾಂಧಿ(55) ಆಂಧ್ರಪ್ರದೇಶದ ನಿವಾಸಿಯಾಗಿದ್ದು, ಮೈಸೂರಿಗೆ ತಂಬಾಕು ಕೃಷಿ ಕೆಲಸಕ್ಕಾಗಿ ಬಂದಿದ್ದರು. ಗ್ರಾಮದ ಚಂದ್ರು ಅವರ ಬಳಿ ತಂಬಾಕು ಎಲೆಗಳನ್ನು ಮುರಿದು ಕ್ಯೂರಿಂಗ್ ಮಾಡುವ ಕೆಲಸ ಮಾಡುತ್ತಿದ್ದರು. ಎಂದಿನಂತೆ ಮುಂಜಾನೆ ಎಲೆಗಳನ್ನು ಮುರಿಯುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಚಂದ್ರು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಬೆಟ್ಟದಪುರದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ.

    ಹೆಚ್ಚಿನ ಚಿಕಿತ್ಸೆಗಾಗಿ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚನೆ ನೀಡಿದ್ದು ತಕ್ಷಣವೇ ಚಂದ್ರು ಆಂಬುಲೆನ್ಸ್ ಸಿಬ್ಬಂದಿಗೆ ಸಂಪರ್ಕಿಸಿದ್ದಾರೆ. ಆಂಬುಲೆನ್ಸ್ ಸಿಗದ ಕಾರಣ ಚಂದ್ರು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಪಿರಿಯಾಪಟ್ಟಣಕ್ಕೆ ಬರುತ್ತಿದ್ದಾಗ ಪಟ್ಟಣದ ಕ್ರೀಡಾಂಗಣ ಬಳಿ ಮತ್ತೊಮ್ಮೆ ತೀವ್ರ ಹೃದಯಾಘಾತಗೊಂಡು ಕಾರ್ಮಿಕ ಮಾರ್ಗಮಧ್ಯೆ ಮೃತ ಪಟ್ಟಿದ್ದಾರೆ.

    ಈ ಘಟನೆ ಸಂಭವಿಸಿದ ನಂತರ ಪಿರಿಯಾಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದ ಆಕಳನ್ನು ಎಬ್ಬಿಸಲು ಪ್ರಯತ್ನಿಸಿದ್ವು ಕರುಗಳು- ಬಳ್ಳಾರಿಯಲ್ಲಿ ಮನಕಲಕುವ ಘಟನೆ

    ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದ ಆಕಳನ್ನು ಎಬ್ಬಿಸಲು ಪ್ರಯತ್ನಿಸಿದ್ವು ಕರುಗಳು- ಬಳ್ಳಾರಿಯಲ್ಲಿ ಮನಕಲಕುವ ಘಟನೆ

    ಬಳ್ಳಾರಿ: ತಾಯಿ ಪ್ರೀತಿ ಅಂದ್ರೆನೇ ಹಾಗೆ. ತಾಯಿ ತನ್ನ ಮಕ್ಕಳ ಮೇಲೆ ಎಷ್ಟು ಪ್ರೀತಿ ಹೊಂದಿರುತ್ತಾಳೋ ತಾಯಿಯ ಮೇಲೆ ಕರುಗಳೂ ಸಹ ಅಷ್ಟೇ ಪ್ರೀತಿ ಹೊಂದಿರುತ್ತವೆ.

    ಇದಕ್ಕೆ ಸಾಕ್ಷಿ ಎನ್ನುವಂತೆ ಆಕಳೊಂದು ಮೃತಪಟ್ಟ ನಂತರ ಕರುಗಳು ತಾಯಿ ಆಕಳನ್ನು ಮೇಲೆ ಎಬ್ಬಿಸಲು ಪ್ರಯತ್ನಿಸಿದ ಮನಕಲಕುವ ಘಟನೆವೊಂದು ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ನಡೆದಿದೆ.

    ಇಂದು ಬೆಳೆಗ್ಗೆ ಕಮಾಲಾಪುರದಲ್ಲಿ ವಿದ್ಯುತ್ ಶಾಕ್ ನಿಂದ ಆಕಳೊಂದು ಮೃತಪಟ್ಟಿದೆ. ನಂತರ ಆಕಳ ಕರುಗಳು ಸತ್ತು ಬಿದ್ದ ತಾಯಿ ಆಕಳನ್ನು ಎಬ್ಬಿಸಲು ಪ್ರಯತ್ನಿಸಿದ ದೃಶ್ಯ ಮನಕಲಕುವಂತಿತ್ತು.

    ಕೆಇಬಿ ಕಚೇರಿ ಮುಂದಿನ ವಿದ್ಯುತ್ ಕಂಬದಲ್ಲಿ ವಿದ್ಯುತ್ ಸ್ಪರ್ಶವಾಗಿ ಆಕಳು ಮೃತಪಟ್ಟ ನಂತರ ಕರುಗಳು ತಾಯಿ ಆಕಳನ್ನ ಎಬ್ಬಿಸಲು ಪ್ರಯತ್ನಿಸಿದವು.

    ಇದನ್ನೂ ಓದಿ:  ತನ್ನ ಮರಿ ಸತ್ತಿದ್ರೂ, ಮುತ್ತು ಕೊಡುತ್ತಿರೋ ತಾಯಿ ಕೋತಿ- ಕೋಲಾರದಲ್ಲೊಂದು ಮನಕಲಕುವ ಘಟನೆ

    https://youtu.be/cpIQaFGtHvY

     

  • 12 ವರ್ಷದಿಂದ ಗ್ರಾಮದಲ್ಲಿದ್ದ ಮಂಗ ಬೀದಿ ನಾಯಿಗಳ ದಾಳಿಯಿಂದ ಸಾವು

    12 ವರ್ಷದಿಂದ ಗ್ರಾಮದಲ್ಲಿದ್ದ ಮಂಗ ಬೀದಿ ನಾಯಿಗಳ ದಾಳಿಯಿಂದ ಸಾವು

    ವಿಜಯಪುರ: ಬೀದಿ ನಾಯಿಗಳ ದಾಳಿಯಿಂದ ಮಂಗವೊಂದು ಸಾವನ್ನಪ್ಪಿದ್ದ ಘಟನೆ ವಿಜಯಪುರ ನಗರದ ನಾಗೇಶ್ವರ ಕಾಲೋನಿಯಲ್ಲಿ ನಡೆದಿದೆ.

    ಸುಮಾರು 12 ವರ್ಷದಿಂದ ಈ ಮಂಗವು ನಾಗೇಶ್ವರ ಕಾಲೋನಿಯ ವಾಸವಾಗಿತ್ತು. ಹೀಗಾಗಿ ಪ್ರತಿನಿತ್ಯ ಎಲ್ಲರ ಮನೆಯಲ್ಲಿ ಉಪಹಾರ ಸೇವಿಸಿ ಜೀವನ ಸಾಗಿಸುತ್ತಿತ್ತು. ಆದರೆ ಇಂದು ಬೆಳಗ್ಗೆ ರಸ್ತೆಯಲ್ಲಿ ಹೋಗುವಾಗ ಬೀದಿ ನಾಯಿಗಳು ಮಂಗನ ಮೇಲೆ ಏಕಾಏಕಿ ದಾಳಿ ನಡೆಸಿ ಕಚ್ಚಿ ಸಾಯಿಸಿವೆ.

    ಮನೆಯ ಮಗನಂತಿದ್ದ ಮಂಗನ ಸಾವಿನಿಂದ ಕಾಲೋನಿಯ ನಿವಾಸಿಗಳು ದು:ಖ ತಪ್ತರಾಗಿದ್ದು, ಕಾಲೋನಿಯ ಸಮಸ್ತ ನಿವಾಸಿಗಳು ಮಂಗನಿಗೆ ಪೂಜೆ ಸಲ್ಲಿಸಿ ನಂತರ ಕಾಲೋನಿಯಲ್ಲಿ ಮೆರವಣಿಗೆ ನಡೆಸಿ ಹಿಂದು ಧರ್ಮದಂತೆ ಅಂತ್ಯಸಂಸ್ಕಾರ ನೆರೆವೇರಿಸಿದ್ದಾರೆ.

  • ಮೂವರಿಂದ ಮಾರಣಾಂತಿಕ ಹಲ್ಲೆ: ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವು

    ಮೂವರಿಂದ ಮಾರಣಾಂತಿಕ ಹಲ್ಲೆ: ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವು

    ವಿಜಯಪುರ: ವ್ಯಕ್ತಿಯೊಬ್ಬರ ಮೇಲೆ ಮೂವರು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ತಬ್ರೇಜ್ ಬೇಪಾರಿ(28) ಎಂಬವರೇ ಕೊಲೆಯಾದ ಯುವಕ.

    ಜಿಲ್ಲೆಯ ಉಪ್ಪಲಿ ಬುರ್ಜ್ ಬಳಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ತಬ್ರೇಜ್ ನನ್ನು ಅಲ್ಲಿಯ ಸ್ಥಳೀಯರು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಬ್ರೇಜ್ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆ ನಂತರ ಹಲ್ಲೆಕೋರರು ಪರಾರಿಯಾಗಿದ್ದಾರೆ.

    ತಬ್ರೇಜ್ ಮೇಲೆ ಆತನ ಪರಿಚಯಸ್ಥರೇ ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಹಲ್ಲೆ ಮಾಡಿದ ಕಾರಣ ಇನ್ನೂ ತಿಳಿದುಬಂದಿಲ್ಲ. ಗಾಂಧಿಚೌಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ನಂದಿಹಿಲ್ಸ್ ಗೆ  ವಿದ್ಯಾರ್ಥಿಗಳ ಜಾಲಿ ರೈಡ್- ಬೈಕ್‍ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ದುರ್ಮರಣ

    ನಂದಿಹಿಲ್ಸ್ ಗೆ ವಿದ್ಯಾರ್ಥಿಗಳ ಜಾಲಿ ರೈಡ್- ಬೈಕ್‍ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ದುರ್ಮರಣ

    ಬೆಂಗಳೂರು: ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

    ದೇವನಹಳ್ಳಿ ತಾಲೂಕಿನ ಕುಂದಾಣ-ಚಪ್ಪರಕಲ್ಲು ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಇಂದು ಬೆಳಗ್ಗೆ 6 ವಿದ್ಯಾರ್ಥಿಗಳು 3 ಬೈಕ್‍ಗಳಲ್ಲಿ ನಂದಿ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಒಂದು ಬೈಕಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಅಪಘಾತದ ಬಳಿಕ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾರೆ. ವೀಕೆಂಡ್ ಅಂತ ನಂದಿಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.