Tag: death

  • ರಾಖಿ ಖರೀದಿಸಲು ಪತಿ ಹಣ ಕೊಡಲಿಲ್ಲವೆಂದು ಪತ್ನಿ ಆತ್ಮಹತ್ಯೆ

    ರಾಖಿ ಖರೀದಿಸಲು ಪತಿ ಹಣ ಕೊಡಲಿಲ್ಲವೆಂದು ಪತ್ನಿ ಆತ್ಮಹತ್ಯೆ

    ಬೆಳಗಾವಿ: ಸಹೋದರನಿಗೆ ರಾಖಿ ಖರೀದಿಸಲು ಪತಿ ಹಣ ಕೊಡಲಿಲ್ಲ ಎಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

    ಜಿಲ್ಲೆಯ ಮಲಪ್ರಭಾ ನಗರದಲ್ಲಿ ಈ ಘಟನೆ ಸಂಭವಿಸಿದ್ದು, ಮಹಾದೇವಿ ಗೊಲ್ಲರ(23) ನೇಣಿಗೆ ಶರಣಾದ ಮಹಿಳೆ. ಮಹಾದೇವಿ ತನ್ನ ಸಹೋದರನಿಗೆ ರಾಖಿ ಕಟ್ಟಲು ಪತಿಯ ಬಳಿ 10 ರೂ. ಕೇಳಿದ್ದಳು. ಆದರೆ ಪತಿ ಕೊಡಲಿಲ್ಲ ಎಂಬ ಕಾರಣಕ್ಕೆ ಪತ್ನಿ ನೇಣಿಗೆ ಶರಣಾಗಿದ್ದಾರೆ.

    ಅಶೋಕ್ ಮತ್ತು ಮಹಾದೇವಿ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಸದ್ಯ ಪತಿ ಅಶೋಕ್ ಗೊಲ್ಲರ ವಿರುದ್ಧ ಕೊಲೆ ಯತ್ನ ಎಂದು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಶೋಕನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಸೀರೆ ಧರಿಸಿ ಭಿಕ್ಷೆ ಬೇಡಲು ಒಪ್ಪದಕ್ಕೆ ಮಂಗಳಮುಖಿಯ ಬರ್ಬರ ಹತ್ಯೆ!

    ಸೀರೆ ಧರಿಸಿ ಭಿಕ್ಷೆ ಬೇಡಲು ಒಪ್ಪದಕ್ಕೆ ಮಂಗಳಮುಖಿಯ ಬರ್ಬರ ಹತ್ಯೆ!

    ಬಳ್ಳಾರಿ: ಸೀರೆ ಉಟ್ಟು ಭಿಕ್ಷೆ ಬೇಡಲು ಒಪ್ಪದ ಮಂಗಳಮುಖಿಯನ್ನ ಭೀಕರವಾಗಿ ಕೊಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

    ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು ಇಂದು ಮಧ್ಯಾಹ್ನ ಬಳ್ಳಾರಿಯ ಕೌಲಬಜಾರ ಪ್ರದೇಶದ ಮೊದಲನೇ ಗೇಟ್ ಬಳಿಯ ರಾಜಕಾಲುವೆಯಲ್ಲಿ ಶವ ಪತ್ತೆಯಾಗಿದೆ.

    ಸೀರೆ ಧರಿಸಿ ಭಿಕ್ಷೆ ಬೇಡುವಂತೆ ನಿತ್ಯ ಹಿಂಸಿಸುತ್ತಿದ್ದ ಹಿಜಡಾಗಳ ತಂಡ ಮಂಗಳಮುಖಿ ಇಮ್ತಿಯಾಜ್ ಅಲಿಯಾಸ್ ಇಂನ್ತೂನನ್ನೂ ಕೊಲೆ ಮಾಡಿ ಚರಂಡಿಯಲ್ಲಿ ಬಿಸಾಕಿದ್ದಾರೆ ಎಂದು ಇಮ್ತಿಯಾಜ್ ಸಂಬಂಧಿಕರು ಕೌಲಬಜಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಈ ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಳ್ಳಾರಿ ಎಸ್‍ಪಿ ಆರ್ ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

  • ಬೈಕ್ ಮತ್ತು ಟೆಂಪೋ ನಡುವೆ ಡಿಕ್ಕಿ-ಇಬ್ಬರ ದುರ್ಮರಣ

    ಬೈಕ್ ಮತ್ತು ಟೆಂಪೋ ನಡುವೆ ಡಿಕ್ಕಿ-ಇಬ್ಬರ ದುರ್ಮರಣ

    ಕಾರವಾರ: ಬೈಕ್ ಮತ್ತು ಟೆಂಫೋ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾವಿನಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

    ಮಂಜುನಾಥ್ ಬಸನಗೌಡ ಮತ್ತು ಹನುಮಂತ ವಾಲೇಕರ ಅಪಘಾತದಲ್ಲಿ ಮೃತ ಬೈಕ್ ಸವಾರರು. ಮೃತರು ಮೂಲತಃ ಧಾರವಾಡದ ನಿವಾಸಿಗಳಾಗಿದ್ದಾರೆ. ಮೃತರು ಉಡುಪಿಯಿಂದ ಕಲಘಟಗಿಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ.

    ಈ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೂತ್ರ ವಿಸರ್ಜನೆಗೆಂದು ರಸ್ತೆ ದಾಟೋ ವೇಳೆ ಕಾರು ಡಿಕ್ಕಿ ಹೊಡೆದು ವೃದ್ಧ ಸಾವು

    ಮೂತ್ರ ವಿಸರ್ಜನೆಗೆಂದು ರಸ್ತೆ ದಾಟೋ ವೇಳೆ ಕಾರು ಡಿಕ್ಕಿ ಹೊಡೆದು ವೃದ್ಧ ಸಾವು

    ಚಿಕ್ಕಬಳ್ಳಾಪುರ: ಬೆಂಗಳೂರು ಉತ್ತರ ತಾಲೂಕಿನ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷನಿಗೆ ಸೇರಿದ ಕಾರು ವೃದ್ಧನಿಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚದಲಪುರದ ಎಸ್‍ಪಿ ಕಚೇರಿ ಬಳಿ ನಡೆದಿದೆ.

    ಗೌರಿಬಿದನೂರು ತಾಲೂಕು ಕಾಟನಕಲ್ಲು ಗ್ರಾಮದ ಖಾಜಾಬೇಗ್(75) ಮೃತಪಟ್ಟ ವೃದ್ಧ. ಬಾಗೇಪಲ್ಲಿ-ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸಿಂಗನಾಕನಹಳ್ಳಿಯ ಗ್ರಾಪಂ ಅಧ್ಯಕ್ಷ ಲೋಕೇಶ್ ಎಂಬವರ ಕಾರು ಎನ್ನಲಾಗಿದ್ದು, ರಸ್ತೆ ದಾಟುತ್ತಿದ್ದ ವೇಳೆ ವೃದ್ಧ ಖಾಜಾಬೇಗ್ ಗೆ ಡಿಕ್ಕಿ ಹೊಡೆದಿದೆ.

    ಕೂಡಲೇ ಆಸ್ಪತ್ರೆಗೆ ಕರೆದೊಕೊಂಡು ಹೋಗುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಮೃತ ಖಾಜಾಬೇಗ್ ಕಣ್ಣಿನ ಆಸ್ಪತ್ರೆಗೆ ಸೇರಿದ ಬಸ್ ನಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಅಂತ ತೆರಳಿದ್ದರು. ಆದರೆ ಮಾರ್ಗಮಧ್ಯೆ ಮೂತ್ರ ವಿಸರ್ಜನೆ ಮಾಡಲು ಬಸ್ ನಿಂದ ಕೆಳಗೆ ಇಳಿದು ರಸ್ತೆ ದಾಟುತ್ತಿದ್ದ ಈ ವೇಳೆ ಅಪಘಾತ ಸಂಭವಿಸಿದೆ.

    ಈ ಕುರಿತು ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕರ್ನಾಟಕದ ಐಎಎಸ್ ಅಧಿಕಾರಿಯ ತಂಗಿ ಅನುಮಾನಾಸ್ಪದ ಸಾವು

    ಕರ್ನಾಟಕದ ಐಎಎಸ್ ಅಧಿಕಾರಿಯ ತಂಗಿ ಅನುಮಾನಾಸ್ಪದ ಸಾವು

    ಕಲಬುರಗಿ: ಕರ್ನಾಟಕ ಐಎಎಸ್ ಕೇಡರ್ ಅಧಿಕಾರಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಓ ಹೆಪ್ಸಿಬಾ ರಾಣಿ ಸಹೋದರಿ ಡಾ.ಸೂರ್ಯಕುಮಾರಿ ಅನುಮಾನಾಸ್ಪದವಾಗಿ ಆಂಧ್ರದ ವಿಜಯವಾಡಾದಲ್ಲಿ ಸಾವನಪ್ಪಿದ್ದಾರೆ.

    ಕಳೆದ ಮೂರು ದಿನಗಳ ಹಿಂದೆ ಸೂರ್ಯಕುಮಾರಿ ನಾಪತ್ತೆಯಾಗಿದ್ದು ಇಂದು ಅವರ ಶವ ವಿಜಯವಾಡದ ರೋಶಾ ಕ್ಯಾನಲ್ ನಲ್ಲಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಕಳೆದ ಮೂರು ದಿನಗಳ ಹಿಂದೆ ಕೋರ್ಲಪಾಟಿ ಅವರ ಪೋಷಕರು ಟಿಡಿಪಿ ಮಾಜಿ ಶಾಸಕ  ಜಯರಾಜನ್ ಅವರ ಮಗ ವಿದ್ಯಾಸಾಗರ ಕಿಡ್ನಾಪ್ ಮಾಡಿದ್ದಾರೆ  ಅಂತಾ ಆರೋಪಿಸಿದ್ದರು. ಆದರೆ ಸಾವಿಗೂ ಮುನ್ನ ಡಾ.ಸೂರ್ಯಕುಮಾರಿ ತಮ್ಮ ಮೊಬೈಲ್ ನಿಂದ ಶಾಸಕರ ಪುತ್ರ ವಿದ್ಯಾಸಾಗರ ಮೊಬೈಲ್‍ಗೆ “ನಿನ್ನ ಬಿಟ್ಟು ನನಗೆ ಇರಲು ಸಾಧ್ಯವಿಲ್ಲ ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಅಂತಾ ಮೇಸೆಜ್ ಮಾಡಿದ್ದಾರೆ.

    ಸದ್ಯ ಈ ಕುರಿತು ಮಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ತುಮಕೂರಿನಲ್ಲಿ ಮರಕ್ಕೆ ಗುದ್ದಿದ ಕಾರ್- ಪತಿ ಸಾವು, ಪತ್ನಿಯ 2 ಕಾಲು ಕಟ್

    ತುಮಕೂರಿನಲ್ಲಿ ಮರಕ್ಕೆ ಗುದ್ದಿದ ಕಾರ್- ಪತಿ ಸಾವು, ಪತ್ನಿಯ 2 ಕಾಲು ಕಟ್

    ತುಮಕೂರು: ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಗುದ್ದಿದ ಪರಿಣಾಮ ಪತಿ ಸ್ಥಳದಲ್ಲೇ ಸಾವನ್ನಪ್ಪಿ, ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಹುಳಿಯಾರಿನಲ್ಲಿ ಈ ಭೀಕರವಾದ ಅಪಘಾತ ಸಂಭವಿಸಿದೆ. ಹುಳಿಯಾರಿನ ಬಸವೇಶ್ವರ ಜ್ಯುವೆಲ್ಲರಿ ಮಾಲೀಕ ಮಲ್ಲಿಕಾರ್ಜುನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ ಅವರ ಪತ್ನಿ ಸಂಧ್ಯಾ ಅವರ ಎರಡು ಕಾಲು ಮುರಿದಿವೆ.

    ಶನಿವಾರ ಹೊಸದುರ್ಗಕ್ಕೆ ಸ್ನೇಹಿತನ ಮದುವೆ ಹೋಗಿ ವಾಪಸ್ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಸಂಬಂಧ ಕುರಿತು ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಲಾರಿ ಪಲ್ಟಿ: ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು

    ಲಾರಿ ಪಲ್ಟಿ: ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು

    ರಾಯಚೂರು: ಜಿಲ್ಲೆಯ ಹೆಗ್ಗಸನಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

    ಲಾರಿ ಚಾಲಕ ಹಾಗೂ ಕ್ಲೀನರ್ ಸಾವನ್ನಪ್ಪಿದ್ದು, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಕಲಬುರಗಿಯಿಂದ ರಾಯಚೂರು ಕಡೆಗೆ ಬರುತ್ತಿದ್ದ ಲಾರಿ ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

    ಮೃತರು ಕಲಬುರಗಿಯ ಆಳಂದ ಮೂಲದವರು ಎನ್ನಲಾಗಿದೆ. ಈ ಕುರಿತು ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಟೋ, ಖಾಸಗಿ ಬಸ್ ನಡುವೆ ಡಿಕ್ಕಿ: ನಾಲ್ವರು ಸಾವು, ಇಬ್ಬರಿಗೆ ಗಾಯ

    ಆಟೋ, ಖಾಸಗಿ ಬಸ್ ನಡುವೆ ಡಿಕ್ಕಿ: ನಾಲ್ವರು ಸಾವು, ಇಬ್ಬರಿಗೆ ಗಾಯ

    ಶಿವಮೊಗ್ಗ: ತುಮಕೂರು ಜಿಲ್ಲೆಯ ಸಿರಾದಿಂದ ಸಿಗಂದೂರಿನ ಚೌಡೇಶ್ವರಿ ದೇವಿಯ ದರ್ಶನ ಪಡೆದು ವಾಪಸ್ ಬರುವಾಗ ಆಟೋ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟು ಇಬ್ಬರಿಗೆ ಗಾಯವಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಆಚಾಪುರದಲ್ಲಿ ಈ ಘಟನೆ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

    ತುಮಕೂರಿನ ಶಿರಾ ತಾಲೂಕಿನ ಭುವನಹಳ್ಳಿ-ಸುರಗಂಟೆ ಗ್ರಾಮದಿಂದ ಸಿಗಂದೂರಿನ ದೇವಸ್ಥಾನಕ್ಕೆ ಒಂದೇ ಆಟೋದಲ್ಲಿ ಏಳು ಜನ ಬಂದಿದ್ದರು. ಸಿಗಂದೂರಿನಿಂದ ಚೌಡೇಶ್ವರಿ ದೇವಿಯ ದರ್ಶನ ಪಡೆದು ವಾಪಸ್ ಬರುವಾಗ ಎದುರಿಗೆ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ.

    ಈ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾರಿ & ಟಾಟಾ ಏಸ್ ನಡುವೆ ಭೀಕರ ಅಪಘಾತ: ಮೂವರ ಸಾವು, ನಾಲ್ವರಿಗೆ ಗಂಭೀರ ಗಾಯ

    ಲಾರಿ & ಟಾಟಾ ಏಸ್ ನಡುವೆ ಭೀಕರ ಅಪಘಾತ: ಮೂವರ ಸಾವು, ನಾಲ್ವರಿಗೆ ಗಂಭೀರ ಗಾಯ

    ಮೈಸೂರು: ಲಾರಿ ಮತ್ತು ಟಾಟಾ ಏಸ್ ನಡುವೆ ಭೀಕರ ಅಪಘಾತವಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಜಿಲ್ಲೆಯ ಟಿ. ನರಸೀಪುರ ಮುಖ್ಯ ರಸ್ತೆಯ ಕೆಂಪಯ್ಯನಹುಂಡಿ ಬಳಿ ಅಪಘಾತ ಸಂಭವಿಸಿದೆ. ಟಿ. ನರಸೀಪುರ ಪಟ್ಟಣದ ನಿವಾಸಿ ರಘು(25), ಮಹದೇವಮ್ಮ(45), ಬಸಮ್ಮ(36) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಉಳಿದಂತೆ ನಾಲ್ವರಿಗೆ ಗಂಭೀರ ಗಾಯಾಗಳಾಗಿದ್ದು, ಗಾಯಾಳುಗಳನ್ನು ಕೆ.ಆರ್.ಅಸ್ಪತ್ರೆಗೆ ದಾಖಲಿಸಲಾಗಿದೆ.

    ಮೃತರೆಲ್ಲರೂ ತರಕಾರಿ ತರುವುದಕ್ಕಾಗಿ ಮೈಸೂರಿಗೆ ಹೊರಟಿದ್ದರು. ಈ ವೇಳೆ ನಿದ್ರೆ ಮಂಪರಿನಲ್ಲಿ ಟಾಟಾ ಏಸ್ ಚಾಲಕ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

    ಈ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕಲಬುರಗಿ: ಮೊರಾರ್ಜಿ ವಸತಿ ನಿಲಯದಲ್ಲಿ ಬಾಲಕಿ ನೇಣಿಗೆ ಶರಣು

    ಕಲಬುರಗಿ: ಮೊರಾರ್ಜಿ ವಸತಿ ನಿಲಯದಲ್ಲಿ ಬಾಲಕಿ ನೇಣಿಗೆ ಶರಣು

    ಕಲಬುರಗಿ: ಮೊರಾರ್ಜಿ ವಸತಿ ನಿಲಯದಲ್ಲಿ ಬಾಲಕಿ ನೇಣಿಗೆ ಶರಣಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿರುವ ಹಾಸ್ಟೆಲ್ ನಲ್ಲಿ ಈ ಘಟನೆ ಸಂಭವಿಸಿದೆ. ಪ್ರಿಯಾಂಕ(16) ಮೃತಪಟ್ಟ ವಿದ್ಯಾರ್ಥಿನಿ. ಈಕೆ ಜೇವರ್ಗಿ ಪಟ್ಟಣದ ಶಾಂತನಗರ ನಿವಾಸಿ ಎಂದು ತಿಳಿದುಬಂದಿದೆ.

    ವಸತಿ ನಿಲಯದಲ್ಲಿ ಯಾರೂ ಇಲ್ಲದ ವೇಳೆ ಡಬಲ್ ಸ್ಟೆಪ್ ಮಂಚಕ್ಕೆ ವೇಲ್‍ನಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ಸ್ಥಳಕ್ಕೆ ಜೇವರ್ಗಿ ಪೊಲೀಸರು ದೌಡಾಯಿಸಿದ್ದಾರೆ.