ಮುಂಬೈ: ಆಟವಾಡುವ ವೇಳೆ ಚೇರ್ ಮೇಲೆ ಜಿಗಿಯಲು ಹೋಗಿ ಪ್ಲೈವುಡ್ ಕುತ್ತಿಗೆ ಸೀಳಿ 3 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಮನಕಲಕುವ ಘಟನೆ ಮುಂಬೈನಲ್ಲಿ ನಡೆದಿದೆ.
ಇಲ್ಲಿನ ವದಾಲಾದ ಪಠಾಣ್ ಮಸೀದಿ ಕಾಂಪೌಂಡ್ ನಿವಾಸಿಯಾದ ಮೊಹಮ್ಮದ್ ಅರಾಹಂ ಮೃತ ಬಾಲಕ. ಶನಿವಾರ ಸಂಜೆ ಅರಾಹಂ ಪಕ್ಕದಮನೆಗೆ ತನ್ನ ಸ್ನೇಹಿತರೊಂದಿಗೆ ಆಟವಾಡಲು ಹೋಗಿದ್ದ. ಈ ವೇಳೆ ಆತ ಅವರ ಮನೆಯಲ್ಲಿದ್ದ ಏಣಿಯನ್ನ ಹತ್ತಿದ್ದಾನೆ. ನಂತರ ಅಲ್ಲಿಂದ ಮುಂದೆ ಇದ್ದ ಪ್ಲಾಸ್ಟಿಕ್ ಚೇರ್ ಮೇಲೆ ಜಿಗಿಯಲು ಯತ್ನಿಸಿದ್ದಾನೆ. ಆದ್ರೆ ಈ ವೇಳೆ ಆಯ ತಪ್ಪಿ ಚೇರ್ ಪಕ್ಕ ಇಟ್ಟಿದ್ದ ಪ್ಲೈವುಡ್ ಮೇಲೆ ಬಾಲಕ ಬಿದ್ದಿದ್ದಾನೆ. ಪ್ಲೈವುಡ್‍ನ ಒಂದು ಭಾಗ ಬಾಲಕನ ಕುತ್ತಿಗೆಯನ್ನ ಸೀಳಿದೆ.
ಕೂಡಲೇ ಆತನನ್ನು ಸ್ಥಳೀಯ ವೈದ್ಯರ ಬಳಿ ಕರೆದುಕೊಂಡು ಹೋಗಲಾಯಿತಾದ್ರೂ ಅಷ್ಟರಲ್ಲಾಗಲೇ ತೀವ್ರ ರಕ್ತಸ್ರಾವದಿಂದ ಬಾಲಕ ಸಾವನ್ನಪ್ಪಿರುವುದಾಗಿ ಹೇಳಿದ್ರು ಅಂತ ಘಟನೆ ಬಗ್ಗೆ ಪಕ್ಕದಮನೆಯವರು ವಿವರಿಸಿದ್ದಾರೆ.
ಅರಾಹಂ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಯೋನ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರ್‍ಎ ಕಿದ್ವಾಯ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ.
ಈ ಬಗ್ಗೆ ನಾವು ಅರಾಹಂನ ಸ್ನೇಹಿತರೊಂದಿಗೆ ಮಾತನಾಡಲು ಪ್ರಯತ್ನಿಸಿದೆವು. ಆದ್ರೆ ಅವರೆಲ್ಲಾ ಘಟನೆ ನಂತರ ತುಂಬಾ ಭಯದಲ್ಲಿದ್ದಾರೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಾರ್ಕ್ ನಲ್ಲಿ ಆಟವಾಡುತ್ತಿದ್ದಾಗ ತಲೆಗೆ ಕಬ್ಬಿಣದ ರಾಡ್ ಬಿದ್ದು ಬಾಲಕಿ ದುರ್ಮರಣ! https://t.co/bf1I2z35FS#Bengaluru #Park #IronRod #Girl pic.twitter.com/AqCdft9SU7
— PublicTV (@publictvnews) August 13, 2017


































































