Tag: death

  • ಯುವಕನ ಮೆಸೇಜ್ ನಿಂದಾಗಿ ಯುವತಿ ಆತ್ಮಹತ್ಯೆಗೆ ಶರಣು- ಒನ್ ಸೈಡ್ ಲವ್ ಸ್ಟೋರಿಯಲ್ಲೊಂದು ಟ್ವಿಸ್ಟ್!

    ಯುವಕನ ಮೆಸೇಜ್ ನಿಂದಾಗಿ ಯುವತಿ ಆತ್ಮಹತ್ಯೆಗೆ ಶರಣು- ಒನ್ ಸೈಡ್ ಲವ್ ಸ್ಟೋರಿಯಲ್ಲೊಂದು ಟ್ವಿಸ್ಟ್!

    ಹಾಸನ: ಜಿಲ್ಲೆಯ ಸಕಲೇಶಪುರ ವಿಭಾಗದ ಸಾರಿಗೆ ಬಸ್ ಚಾಲಕನ ಲವ್ ಕಹಾನಿಗೆ ಟ್ವಿಸ್ಟ್ ಸಿಕ್ಕಿದೆ. ತಾಲೂಕಿನ ಆದರಗೆರೆ-ದೊಡ್ಡನಹಳ್ಳಿಯ ಎಲ್‍ಎಲ್‍ಬಿ ವಿದ್ಯಾರ್ಥಿನಿ ತನುಶ್ರೀ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಸಾರಿಗೆ ಬಸ್ ಚಾಲಕ ಸಂತೋಷ್ ಕಾರಣ ಎಂದು ಆರೋಪಿಸಲಾಗಿತ್ತು.

    ತನುಶ್ರೀ ಪೋಷಕರು ನಮ್ಮ ಮಗಳ ಸಾವಿಗೆ ಸಂತೋಷನೇ ಕಾರಣ. ಆತ ನನ್ನನ್ನು ಪ್ರೀತಿಸು, ಮದುವೆಯಾಗು ಎಂದು ತಮ್ಮ ಮಗಳಿಗೆ ಬಲವಂತ ಮಾಡುತ್ತಿದ್ದನು. ಆತನ ಕಿರುಕುಳದಿಂದಲೇ ಮಗಳು ವಿಷ ಕುಡಿದು ಸತ್ತಿದ್ದಾಳೆ ಎಂದು ದೂರಿದ್ದರು. ಮೃತ ತನುಶ್ರೀ ಸಹ ಸಾಯುವ ಮುನ್ನ ಸಂತೋಷನ ವಿರುದ್ಧ ಹೇಳಿಕೆ ನೀಡಿದ್ದಳು.

    ಏನದು ಟ್ವಿಸ್ಟ್?: ಸಂತೋಷನ ಒನ್ ವೇ ಲವ್ ಅಲ್ಲ ಅಥವಾ ಬಲವಂತ ಸಹ ಮಾಡಿಲ್ಲ. ಬದಲಾಗಿ ತನುಶ್ರೀಯೂ ಸಹ ಸಂತೋಷನನ್ನು ಅತಿಯಾಗಿ ಪ್ರೀತಿಸಿದ್ದಳು. ಮಾನಸಿಕವಾಗಿ ಪತಿ ಅಂತಲೇ ಸ್ವೀಕಾರ ಮಾಡಿದ್ದಳು. ನೀನು ನಮ್ಮ ಮನೆಯವರಿಗೆ ಫೋನ್ ಮಾಡಿ ನನ್ನನ್ನು ಮದುವೆ ಮಾಡಿಕೊಡುವಂತೆ ಕೇಳು ಎಂದು ಹೇಳಿದ್ದ ನಿಜ ಸಂಗತಿ ಆಕೆ ಸಂತೋಷ್‍ಗೆ ಮಾಡಿರುವ ಮೆಸೇಜ್‍ಗಳಿಂದ ಬಯಲಾಗಿದೆ.

    2 ವರ್ಷಗಳಿಂದ ಸಂತೋಷ್ ಮತ್ತು ತನುಶ್ರೀ ಪರಸ್ಪರ ಪ್ರೀತಿಸಿ ಮದುವೆಯಾಗಲೂ ನಿರ್ಧರಿಸಿದ್ದರು. ಇದಕ್ಕೆ ಸಂತೋಷ್ ಮನೆಯವರು ಒಪ್ಪಿದ್ದರೆ, ತನುಶ್ರೀ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಯುವತಿ ತಂದೆ ಸುದೇಶ್ ಲವ್ ಕಾರಣಕ್ಕೆ ಮಗಳನ್ನು ನಿಂದಿಸಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ತನುಶ್ರೀ, ತಾನೇ ಸಂತೋಷನಿಗೆ ಮೆಸೇಜ್ ಮಾಡಿ ನಮ್ಮ ಮದುವೆ ಸಾಧ್ಯವಾಗದೇ ಇದ್ರೆ ಸಾಯೋಣ ಎಂದು ನಿರ್ಧರಿಸಿ ಕಳೆದ ಆಗಸ್ಟ್ 3 ರಂದು ಪ್ರತ್ಯೇಕವಾಗಿ ವಿಷ ಕುಡಿದಿದ್ದಾರೆ.

    ಸದ್ಯ ಸಂತೋಷ್ ಬದುಕುಳಿದಿದ್ದರೆ, ತನುಶ್ರೀ ಸಾವನ್ನಪ್ಪಿದ್ದಾಳೆ. ತನುಶ್ರೀ ಸಾವಿಗೆ ನಮ್ಮ ಮಗ ಕಾರಣ ಅಲ್ಲ, ಬದಲಾಗಿ ಆಕೆಯ ತಂದೆಯೇ ನೇರ ಹೊಣೆ. ನಮ್ಮ ಮಗ ಮತ್ತು ತನುಶ್ರೀ ಕೋರಿಕೆಯಂತೆ ನಾವೇ ದೂರವಾಣಿ ಕರೆ ಮಾಡಿ ತನುಶ್ರೀಯನ್ನು ಮಗನಿಗೆ ಮದುವೆ ಮಾಡಿಕೊಡುವಂತೆ ಕೇಳಿದ್ದೆವು.

    ಆದರೆ ಅದಕ್ಕೆ ಅವರು ಒಪ್ಪಲಿಲ್ಲ. ಇದೇ ಕಾರಣಕ್ಕೆ ತನುಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂತೋಷ್ ಪೋಷಕರು ಆರೋಪ ಮಾಡಿದ್ದಾರೆ. ಇದರಿಂದಾಗಿ ತಂದೆಯ ಪ್ರತಿಷ್ಠೆಯೇ ತನುಶ್ರೀ ಸಾವಿಗೆ ಕಾರಣವಾಯಿತೇ ಎಂಬ ಬಲವಾದ ಅನುಮಾನ ಮೂಡಿದೆ. ಆದರೂ ತನುಶ್ರೀ ತಂದೆ, ಮಗಳ ಸಾವಿಗೆ ಸಂತೋಷನೇ ಕಾರಣ, ಆತನನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಮತ್ತೆ ಮನವಿ ಮಾಡಿದ್ದಾರೆ.

  • ಮಳೆಗೆ ಮನೆ ಗೋಡೆ ಕುಸಿದು ಮೂವರ ದುರ್ಮರಣ

    ಮಳೆಗೆ ಮನೆ ಗೋಡೆ ಕುಸಿದು ಮೂವರ ದುರ್ಮರಣ

    ವಿಜಯಪುರ: ಮನೆಯ ಗೋಡೆ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ನಗರದ ರಾಮಮಂದಿರ ಬಳಿಯ ಮಠಪತಿ ಗಲ್ಲಿಯಲ್ಲಿ ನಡೆದಿದೆ.

    ಅಶೋಕ ಗೌಡೆನ್ನವರ (40), ಶಕುಂತಲಾ ಗೌಡೆನ್ನವರ (30), ಚಂದ್ರಶೇಖರ ಗೌಡೆನ್ನವರ ಮೃತಪಟ್ಟ ದುರ್ದೈವಿಗಳು. ಕಳೆದ ಮೂರು ದಿನಗಳಿಂದ ನಿರಂತವಾಗಿ ಸುರಿಯುತ್ತಿರುವ ಮಳೆಗೆ ಅಶೋಕ ಅವರ ಮನೆ ಗೋಡೆ ಕುಸಿದಿದ್ದು, ಮನೆಯಲ್ಲಿ ಮಲಗಿದ್ದ 5 ಜನರಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    ಅದೃಷ್ಟವಷಾತ್ ಅಶೊಕ ಗೌಡೆನ್ನವರ ಚಿಕ್ಕಪ್ಪನ ಮಕ್ಕಳಾದ ರಂಜೀತ್ ಗೌಡೆನ್ನವರ(8) ಮತ್ತು ಅಜೀತ್ ಗೌಡೆನ್ನವರ (5) ಬದುಕುಳಿದಿದ್ದಾರೆ.

    ಸ್ಥಳಕ್ಕೆ ಗಾಂಧಿಚೌಕ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕ್ಯಾಂಟರ್‍ಗೆ ಆಲ್ಟೋ ಕಾರ್ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು

    ಕ್ಯಾಂಟರ್‍ಗೆ ಆಲ್ಟೋ ಕಾರ್ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು

    ಧಾರವಾಡ: ನಗರದ ಹೊರವಲಯಲದಲ್ಲಿ ಆಲ್ಟೋ ಕಾರ್ ಹಾಗೂ ಕ್ಯಾಂಟರ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.

    ನಗರದ ಪ್ರಕಾಶ ಚಕ್ಕೇದಾರ (45) ಸಾವನ್ನಪ್ಪಿದ ವ್ಯಕ್ತಿ. ವೇಗವಾಗಿ ಕ್ಯಾಂಟರ್ ವಾಹನ ಮಹಾರಾಷ್ಟ್ರದಿಂದ ಹುಬ್ಬಳ್ಳಿ ಕಡೆ ಹೋಗುತಿತ್ತು. ಈ ವೇಳೆ ನಿಯಂತ್ರಣ ತಪ್ಪಿದ ಆಲ್ಟೋ ಕ್ಯಾಂಟರ್‍ಗೆ ಡಿಕ್ಕಿ ಹೊಡಿದಿದೆ.

    ಗುದ್ದಿದ ರಭಸಕ್ಕೆ ಪ್ರಕಾಶ್ ಚಕ್ಕೇದಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಸದ್ಯ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಪ್ರಿಯಕರನ ಸೂಸೈಡ್ ಮೆಸೇಜ್ ನೋಡಿ ಕಳೆನಾಶಕ ಸೇವಿಸಿ ಪ್ರಿಯತಮೆ ಆತ್ಮಹತ್ಯೆ! ಆ ಮೆಸೇಜ್ ನಲ್ಲಿ ಏನಿತ್ತು?

    ಪ್ರಿಯಕರನ ಸೂಸೈಡ್ ಮೆಸೇಜ್ ನೋಡಿ ಕಳೆನಾಶಕ ಸೇವಿಸಿ ಪ್ರಿಯತಮೆ ಆತ್ಮಹತ್ಯೆ! ಆ ಮೆಸೇಜ್ ನಲ್ಲಿ ಏನಿತ್ತು?

    ಹಾಸನ: ಮದುವೆಯಾಗವಂತೆ ಕಿರುಕುಳ ನೀಡುತ್ತಿದ್ದ ಕೆಎಸ್‍ಆರ್‍ಟಿಸಿ ಚಾಲಕನ ವರ್ತನೆಗೆ ಬೇಸತ್ತು ಕಾನೂನು ಪದವಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬಳು ಕಳೆನಾಶಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸಕಲೇಶಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಪ್ರಥಮ ವರ್ಷದ ಎಲ್‍ಎಲ್‍ಬಿ ಪದವಿ ಓದುತ್ತಿದ್ದ ಸಕಲೇಶಪುರ ತಾಲೂಕಿನ ಆದರಗೆರೆ ಗ್ರಾಮದ ಸುದೇಶ್-ಸುಮಿತ್ರಾ ಪುತ್ರಿ ತನುಶ್ರೀ(18) ಸಾವಿಗೆ ಶರಣಾದ ಯುವತಿ.

    ಏನಿದು ಲವ್ ಸ್ಟೋರಿ:
    ಸಕಲೇಶಪುರದಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲಿ ತನುಶ್ರೀ ನಿತ್ಯವೂ ಸಾರಿಗೆ ಬಸ್ ನಲ್ಲಿ ಸಂಚರಿಸುತ್ತಿದ್ದಳು. ಅದೇ ಮಾರ್ಗದಲ್ಲಿ ಬಸ್ ಚಾಲಕನಾಗಿದ್ದ ಸಂತೋಷ್ ಕಳೆದೆರಡು ವರ್ಷಗಳಿಂದಲೂ ತನುಶ್ರೀಯನ್ನು ಪ್ರೀತಿಸುತ್ತಿದ್ದ. ನಂತರ ನನ್ನನ್ನು ಮದುವೆಯಾಗು ಎಂದು ಆತ ಆಕೆಯ ಬೆನ್ನು ಬಿದ್ದಿದ್ದ.

    ತನುಶ್ರೀ ಎಲ್ಲೇ ಸಿಕ್ಕರೂ, ಈಕೆ ನನ್ನ ಲವರ್, ಈಕೆಯನ್ನೇ ನಾನು ಮದುವೆಯಾಗೋದು ಎಂದು ಸ್ನೇಹಿತರು ಹಾಗೂ ತನ್ನ ಸಹೋದ್ಯೋಗಿಗಳಿಗೆ ಹೇಳುತ್ತಿದ್ದ. ಆದರೆ ಸಂತೋಷ್ ನೊಂದಿಗೆ ಮದುವೆ ಮಾಡಲು ತನುಶ್ರೀ ಮನೆಯವರು ನಿರಾಕರಿಸಿದ್ದರು ಎನ್ನಲಾಗಿದೆ.

    ಮೆಸೇಜ್ ನಲ್ಲಿ ಏನಿತ್ತು?
    ಆ.3 ರಂದು ತನುಶ್ರೀಗೆ ಮೆಸೇಜ್ ಮಾಡಿದ ಸಂತೋಷ್,”ನಾನು ಮದ್ಯದೊಂದಿಗೆ ವಿಷ ಬೆರೆಸಿಕೊಂಡು ಸಾಯುತ್ತಿದ್ದೇನೆ. ನಮ್ಮ ಲವ್ ವಿಷಯದಲ್ಲಿ ನಿಮ್ಮ ತಂದೆಯೇ ಗೆದ್ದರು. ನಾನು ನಿನ್ನನ್ನು ಹಾಗೂ ಮನೆಯವರನ್ನು ರಾಣಿ ರೀತಿ ನೋಡಿಕೊಳ್ಳಬೇಕು ಎಂದು ಕನಸು ಕಂಡಿದ್ದೆ. ಆದರೆ ಅದು ಆಗಲಿಲ್ಲ. ನಾನೀಗ ಸಾಯುತ್ತೇನೆ. ಮುಂದಿನ ಜನ್ಮ ಇದ್ದರೆ ಸಿಗೋಣ” ಎಂದೆಲ್ಲಾ ಟೈಪ್ ಮಾಡಿ ಕಳುಹಿಸಿದ್ದಾನೆ.

    ಮೆಸೇಜ್ ನೋಡಿ ಭಯಗೊಂಡ ತನುಶ್ರೀ ಸಹ ಆ.3 ರ ಸಂಜೆ ಮನೆಯಲ್ಲಿದ್ದ ಕಳೆನಾಶಕ ವಿಷ ಸೇವಿಸಿದ್ದಾಳೆ. ಕೂಡಲೇ ಆಕೆಯನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ತನುಶ್ರೀ ಚಿಕಿತ್ಸೆ ಫಲಕಾರಿಯಾಗದೇ ಆ.17 ರಂದು ಮೃತಪಟ್ಟಿದ್ದಾಳೆ.

    ಸದ್ಯ ಸಂತೋಷ್ ಸಹ ಮಂಗಳೂರಿನ ಫಾದರ್ ಮುಲ್ಲಾರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಾಯುವ ಮುನ್ನ ಹೇಳಿಕೆ ನೀಡಿರುವ ತನುಶ್ರೀ ನಾನು ವಿಷ ಸೇವಿಸಲು ಸಂತೋಷನೇ ಕಾರಣ ಎಂದು ಆರೋಪಿಸಿದ್ದಾಳೆ. ಪೋಷಕರು ಸಹ ನಮ್ಮ ಮಗಳ ಸಾವಿಗೆ ಸಂತೋಷನೇ ಕಾರಣ ಆತನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಈ ಸಂಬಂಧ ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ತನುಶ್ರೀ ಸಹ ಸಂತೋಷ್ ನನ್ನು ಪ್ರೀತಿಸುತ್ತಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ.

  • ಭೀಮಾತೀರದ ಹಂತಕ ಚಂದಪ್ಪ ಅಣ್ಣ ಯಲ್ಲಪ್ಪ ಹರಿಜನ ಸಾವು!

    ಭೀಮಾತೀರದ ಹಂತಕ ಚಂದಪ್ಪ ಅಣ್ಣ ಯಲ್ಲಪ್ಪ ಹರಿಜನ ಸಾವು!

    ವಿಜಯಪುರ: ಭೀಮಾತೀರದ ಹಂತಕ ಚಂದಪ್ಪ ಹರಿಜನ ಅಣ್ಣ ಯಲ್ಲಪ್ಪ ಹರಿಜನ ಅವರು ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಸ್ವಗ್ರಾಮ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

    ಕಳೆದ ಹಲವು ದಿನಗಳಿಂದ ಸಕ್ಕರೆ ಕಾಯಿಲೆ ಹಾಗೂ ಬಿಪಿಯಿಂದ ಬಳಲುತ್ತಿದ್ದ ಯಲಪ್ಪ ಹರಿಜನ ಶುಕ್ರವಾರ ತಡರಾತ್ರಿ ಸಾವನ್ನಪ್ಪಿದ್ದಾರೆ. ಇಂದು ಅಂತ್ಯಕ್ರಿಯೆ ಬೊಮ್ಮನಹಳ್ಳಿಯಲ್ಲಿ ನಡೆಯಲಿದೆ.

    ಚಂದಪ್ಪ ಹರಿಜನ 2000ರಲ್ಲಿ ಪೊಲೀಸ್ ಎನ್‍ಕೌಂಟರಿಗೆ ಬಲಿಯಾಗಿದ್ದರು. 2013ರಲ್ಲಿ ತಮ್ಮ ಬಸಪ್ಪ ಹರಿಜನ ಬಾಗಪ್ಪ ಹರಿಜನ ಗ್ಯಾಂಗ್‍ನ ಗುಂಡೇಟ್ಟಿಗೆ ಬಲಿಯಾಗಿದ್ದರು. ಇಂದು ಯಲ್ಲಪ್ಪ ಹರಿಜನ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

    ಇದನ್ನೂ ಓದಿ: ಭೀಮಾತೀರದ ಹಂತಕನ ಮೇಲೆ ಕೋರ್ಟ್ ಆವರಣದಲ್ಲೇ ಗುಂಡಿನ ದಾಳಿ -ಸಾವು ಬದುಕಿನ ಮಧ್ಯೆ ಬಾಗಪ್ಪ ನರಳಾಟ 

  • ಕೃಷಿ ಹೊಂಡಕ್ಕೆ ಬಿದ್ದ ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ನೀರುಪಾಲು!

    ಕೃಷಿ ಹೊಂಡಕ್ಕೆ ಬಿದ್ದ ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ನೀರುಪಾಲು!

    ಕೋಲಾರ: ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ದಂಪತಿ ಮೃತಪಟ್ಟಿರೋ ಘಟನೆ ಕೋಲಾರ ತಾಲೂಕಿನ ಹರಟಿ ಗ್ರಾಮದಲ್ಲಿ ನಡೆದಿದೆ.

    ಶ್ರೀರಾಮಪ್ಪ(50) ಹಾಗೂ ಲಲಿತಮ್ಮ(45) ಮೃತ ದುರ್ದೈವಿ ದಂಪತಿಯಾಗಿದ್ದು, ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಕೆಲಸಕ್ಕೆಂದು ಹೊಲಕ್ಕೆ ಹೋದ ವೇಳೆ ಲಲಿತಮ್ಮ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಈ ಸಂದರ್ಭ ಪತ್ನಿಯನ್ನು ರಕ್ಷಿಸಲೆಂದು ಹೋದ ಪತಿ ಶ್ರೀರಾಮಪ್ಪ ಕೂಡಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ವಿದ್ಯುತ್ ತಂತಿ ಸ್ಪರ್ಶಿಸಿ ಕುರಿಗಾಹಿ ಸಾವು

    ವಿದ್ಯುತ್ ತಂತಿ ಸ್ಪರ್ಶಿಸಿ ಕುರಿಗಾಹಿ ಸಾವು

    ದಾವಣಗೆರೆ: ಕುರಿ ಕಾಯಲು ಹೋಗಿದ್ದ ಕುರಿಗಾಹಿಯೊಬ್ಬರು ಹರಿದು ಬಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಎರ್ಲಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಮಡ್ರಳ್ಳಿ ಅರಣ್ಯ ಪ್ರದೇಶದ ಬಳಿ ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಈ ಘಟನೆ ಸಂಭವಿಸಿದೆ. ಮಂಜಣ್ಣ (23)ಮೃತ ದುರ್ದೈವಿ.

    ಮಡ್ರಳ್ಳಿಯಲ್ಲಿ ರಸ್ತೆ ಮೇಲೆ ಮಂಜಣ್ಣ ಅವರು ಕುರಿ ಕಾಯಲು ಹೋಗಿದ್ದಾಗ ಮಳೆಗೆ ಹರಿದು ಬಿದ್ದ ವಿದ್ಯುತ್ ತಂತಿಯನ್ನು ತುಳಿದ್ದಾರೆ. ಈ ವಿದ್ಯುತ್ ಆಘಾತದಿಂದ ಅವರ ಸೊಂಟದ ಕೆಳಗಿನ ಭಾಗ ಸುಟ್ಟು ಕರಕಲಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕಾಗಿದ್ದ ಮಂಜಣ್ಣ ಅವರ ಕುಟುಂಬದ ಮೇಲೆ ಸೂತಕದ ಛಾಯೆ ಕವಿದಿದೆ. ವಿದ್ಯುತ್ ತಂತಿ ಬಲಿ ತೆಗೆದುಕೊಂಡಿದ್ದರಿಂದ ಬೆಸ್ಕಾಂ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಗಳೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಹಬ್ಬ ಮುಗಿಸಿ ಕೆಲಸಕ್ಕೆ ಹೋಗುವಾಗ ಕಾರು ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವು

    ಹಬ್ಬ ಮುಗಿಸಿ ಕೆಲಸಕ್ಕೆ ಹೋಗುವಾಗ ಕಾರು ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವು

    ಬೆಂಗಳೂರು: ಕೆಲಸಕ್ಕೆ ತೆರಳುವ ವೇಳೆ ರಸ್ತೆ ದಾಟುವಾಗ ವೇಗವಾಗ ಬಂದ ಕಾರು ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದಾವರ ಟೋಲ್ ಬಳಿ ಈ ಘಟನೆ ನಡೆದಿದೆ. ಮಾಗಡಿ ಮೂಲದ ಶಶಿಕಲಾ ಮೃತಪಟ್ಟ ಮಹಿಳೆ. ಮನೆಯಲ್ಲಿ ಗಣೇಶನ ಹಬ್ಬ ಮುಗಿಸಿ ಕೆಲಸಕ್ಕೆ ತೆರಳುವಾಗ ಈ ಅಪಘಾತ ನಡೆದಿದೆ ಎನ್ನಲಾಗಿದೆ.

    ಅಪಘಾತಕ್ಕೆ ಕಾರಣವಾದ ಕಾರನ್ನ ನೆಲಮಂಗಲ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಗಣೇಶ ಚತುರ್ಥಿಯಂದು ಭೀಕರ ರಸ್ತೆ ಅಪಘಾತ- ಓಮಿನಿ ಕಾರು, KSRTC ಬಸ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು

    ಗಣೇಶ ಚತುರ್ಥಿಯಂದು ಭೀಕರ ರಸ್ತೆ ಅಪಘಾತ- ಓಮಿನಿ ಕಾರು, KSRTC ಬಸ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು

    ರಾಮನಗರ: ಗಣೇಶ ಚತುರ್ಥಿಯಂದು ಓಮಿನಿ ಕಾರು ಮತ್ತು ಕೆಎಸ್‍ಆರ್‍ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.

    ಕನಕಪುರ ತಾಲೂಕಿನ ಸಾಸಲಪುರದ ರಾಯರದೊಡ್ಡಿ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮೃತರೆಲ್ಲರೂ ಮೈಸೂರಿನವರು ಎಂದು ಹೇಳಲಾಗಿದೆ. ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಪತ್ನಿ ನಡತೆಯಿಂದ ಬೇಸತ್ತು ಪತಿ ಆತ್ಮಹತ್ಯೆ

    ಪತ್ನಿ ನಡತೆಯಿಂದ ಬೇಸತ್ತು ಪತಿ ಆತ್ಮಹತ್ಯೆ

    ಮೈಸೂರು: ಪತ್ನಿ ನಡತೆಯಿಂದ ಬೇಸತ್ತು ಪತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಟಿ ನರಸೀಪುರ ತಾಲೂಕಿನ ಹನುಮನಾಳು ಗ್ರಾಮದಲ್ಲಿ ನಡೆದಿದೆ.

    ಸುರೇಶ್ (32) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಹೆಂಡತಿ ನೇತ್ರಾವತಿ ನಡತೆಯಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಾಗುತ್ತಿದೆ.

    ಮೃತ ಸುರೇಶ್ ಟೀ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಪತ್ನಿ ನೇತ್ರಾವತಿ ಆಟೋ ಡ್ರೈವರ್ ಯೋಗೇಶ್ ಎಂಬಾತನ ಜೊತೆ ಅಕ್ರಮ ಸಂಬಂಧ ಇಟ್ಟಕೊಂಡಿದ್ದಳು ಎಂದು ಹೇಳಲಾಗುತ್ತಿದೆ. ಹೀಗಾಗಿ ಇವಳನ್ನ ಪರಿವರ್ತಿಸಲು ಯತ್ನಿಸಿ ವಿಫಲನಾಗದ ಹಿನ್ನೆಲೆಯಲ್ಲಿ ಸುರೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಮೃತ ಸುರೇಶ್ ತಾಯಿ ಸೊಸೆಯ ವಿರುದ್ಧ ಬನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.