Tag: death

  • ಕ್ರೂಸರ್-ಬಸ್ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 6 ಮಂದಿ ಸಾವು

    ಕ್ರೂಸರ್-ಬಸ್ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 6 ಮಂದಿ ಸಾವು

    ಬಾಗಲಕೋಟೆ: ಕ್ರೂಸರ್ ಹಾಗೂ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಕ್ರಾಸ್ ನಲ್ಲಿ ನಡೆದಿದೆ.

    ಅಪಘಾತದಲ್ಲಿ ಇಬ್ಬರಿಗೆ ಗಾಯವಾಗಿದ್ದು ಅವರಿನ್ನ ಬೀಳಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಾರಾಷ್ಟ್ರ ಪಾಸಿಂಗ್ ಇರುವ ಕ್ರೂಸರ್ ಹಾಗೂ ವಿಜಯಪುರದಿಂದ ಹುಬ್ಬಳಿ ಮಾರ್ಗವಾಗಿ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿವೆ. ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಈ ದುರಂತ ನಡೆದಿದೆ.

    ಅಪಘಾತ ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಹಾಲು ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿ: ಸ್ಥಳದಲ್ಲಿಯೇ ಚಾಲಕ ಸಾವು

    ಹಾಲು ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿ: ಸ್ಥಳದಲ್ಲಿಯೇ ಚಾಲಕ ಸಾವು

    ಬೆಳಗಾವಿ: ಹಾಲು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸ್ಥಳದಲ್ಲೇ ಲಾರಿ ಚಾಲಕ ಮೃತಪಟ್ಟ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾಂವ ಪಟ್ಟಣದ ಬಳಿ ನಡೆದಿದೆ.

    ಯಶವಂತ ಭೈರಾಗಿ(40) ಮೃತಪಟ್ಟ ಲಾರಿ ಚಾಲಕ. ಗೋಕುಲ್ ಹಾಲಿನ ಡೈರಿಗೆ ಸೇರಿರುವ ಈ ಲಾರಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹಾಲು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಸದಲಗಾ-ಬೋರಗಾಂವ ಮಾರ್ಗ ಮಧ್ಯೆ ಜಮೀನೊಂದರಲ್ಲಿ ಪಲ್ಟಿಯಾಗಿದೆ.

    ಸ್ಥಳಕ್ಕೆ ಸದಲಗಾ  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಜೀವನಾಧಾರವಾಗಿದ್ದ ಎಮ್ಮೆಗಳನ್ನು ರಕ್ಷಿಸಲು ಹೋಗಿ ರೈಲಿಗೆ ರೈತ ಬಲಿ!

    ಜೀವನಾಧಾರವಾಗಿದ್ದ ಎಮ್ಮೆಗಳನ್ನು ರಕ್ಷಿಸಲು ಹೋಗಿ ರೈಲಿಗೆ ರೈತ ಬಲಿ!

    ಮಂಡ್ಯ: ಎಮ್ಮೆಗಳನ್ನು ರಕ್ಷಿಸಲು ಹೋಗಿ ರೈಲು ಡಿಕ್ಕಿ ಹೊಡೆದ ಪರಿಣಾಮ ರೈತರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಅಳೀಸಂದ್ರ ಗ್ರಾಮದ ಬಳಿ ನಡೆದಿದೆ.

    ರಂಗಪ್ಪ(70) ಎಂಬುವರೇ ಮೃತ ರೈತ. ರಂಗಪ್ಪ ಅವರು ಎಂದಿನಂತೆ ಬೆಳಗ್ಗೆಯೇ ಎಮ್ಮೆ ಮೇಯಿಸಲು ಹೋಗಿದ್ರು. ಸಂಜೆಯಾಗುತ್ತಿದ್ದಂತೆ ಎಮ್ಮೆ ಮೇಯಿಸಿಕೊಂಡು ಊರಿಗೆ ವಾಪಸ್ಸಾಗುತ್ತಿದ್ದ ವೇಳೆ ರೈಲು ಬರುತ್ತಿರುವುದರ ಅರಿವಿರದ ಎಮ್ಮೆಗಳು ರೈಲ್ವೆ ಹಳಿ ಮೇಲೆ ಹೋಗಿವೆ.

    ರೈಲು ಬರುತ್ತಿರುವಾಗಲೇ ಹಳಿ ಮೇಲೆ ಬದುಕಿಗೆ ಜೀವನಾಧಾರವಾಗಿದ್ದ ಎಮ್ಮೆಗಳು ಇರುವುದನ್ನು ಗಮನಿಸಿದ ರೈತ ರಂಗಪ್ಪ ಅವುಗಳನ್ನು ಓಡಿಸಲು ಹಳಿ ಹತ್ತಿದ್ದಾರೆ. ಆದರೆ ಈ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದ್ದರಿಂದ ರೈತ ರಂಗಪ್ಪ ಮತ್ತು ಎರಡು ಎಮ್ಮೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

    ರೈತ ರಂಗಪ್ಪನ ಸಾವಿನಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿಡಿಲು ಬಡಿದು ಇಬ್ಬರು ಸಾವು, ಇಬ್ಬರಿಗೆ ಗಾಯ

    ಸಿಡಿಲು ಬಡಿದು ಇಬ್ಬರು ಸಾವು, ಇಬ್ಬರಿಗೆ ಗಾಯ

    ಹಾವೇರಿ/ಧಾರವಾಡ: ಸಿಡಿಲು ಬಡಿದು ಓರ್ವ ಯುವಕ ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಆಲದಗೇರಿ ಗ್ರಾಮದಲ್ಲಿ ನಡೆದಿದೆ.

    ಫಕ್ಕೀರಪ್ಪ ಗೋಣೇರ(25) ಮೃತ ಯುವಕ. ಶರಣಪ್ಪ ಗೋಣೇರ (35) ಮತ್ತು ಮಾರುತಿ ವಾಲೀಕಾರ(25) ಎಂಬುವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಹಿರೇಕೆರೂರು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜಮೀನಿನಲ್ಲಿರೋ ಗುಡಿಸಲಿನಲ್ಲಿ ನಿಂತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಹಂಸಬಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಅದೇ ರೀತಿ ಧಾರವಾಡದಲ್ಲಿಯೂ ಸಹ ಗುಡುಗು ಮಿಶ್ರಿತ ಮಳೆ ಸಿಡಿಲಿನಿಂದ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ಮೃತ ವ್ಯಕ್ತಿ ಮಲಕಪ್ಪ ಸೂರ್ಯವಂಶಿ(40) ಎಂದು ಗುರುತಿಸಲಾಗಿದೆ.

    ಮೃತ ಮಲಕಪ್ಪ ಸೂರ್ಯವಂಶಿ ಅವರು ಧಾರವಾಡದ ನವಲೂರು ನಿವಾಸಿಯಾಗಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

     

  • ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರ್: ಯುವಕ ಸಾವು

    ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರ್: ಯುವಕ ಸಾವು

    ಮಂಡ್ಯ: ನಿಂತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನೊಳಗಿದ್ದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

    ಶ್ರೀರಂಗಪಟ್ಟಣದ ಕಿರಂಗೂರು ವೃತ್ತದ ಬಳಿ ಅಪಘಾತ ನಡೆದಿದ್ದು, ನೀಲನಹಳ್ಳಿ ಗ್ರಾಮದ 23 ವರ್ಷದ ಯುವಕ ಅಭಿಷೇಕ್ ಮೃತಪಟ್ಟಿದ್ದಾರೆ. ರಸ್ತೆ ಬದಿಯ ಲಾರಿಯೊಂದು ನಿಂತಿತ್ತು. ಈ ವೇಳೆ ವೇಗವಾಗಿ ಬಂದ ಕಾರು ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ಕಾರಿನೊಳಗಿದ್ದ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅಪಘಾತಕ್ಕೆ ಕಾರು ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯೆ ಕಾರಣ ಎಂದು ತಿಳಿದು ಬಂದಿದೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಮಾರಾಧಾರಾ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು

    ಕುಮಾರಾಧಾರಾ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು

    ಮಂಗಳೂರು: ಈಜಲು ಹೋಗಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬದ ಶಾಂತಿಮೊಗರುವಿನಲ್ಲಿ ನಡೆದಿದೆ.

    ಹರಿ, ಸತ್ಯ ಮೃತ ಯುವಕರು. ಕುಮಾರಾಧಾರಾ ನದಿಯಲ್ಲಿ ಸ್ನಾನಕ್ಕಿಳಿದಿದ್ದಾಗ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತದೇಹಕ್ಕಾಗಿ ಅಗ್ನಿಶಾಮಕದಳದಿಂದ ಶೋಧ ಕಾರ್ಯ ನಡೆಯುತ್ತಿದ್ದೆ.

    ಈ ಕುರಿತು ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

     

  • ಕರು ಸತ್ತಿದ್ದಕೆ ಪ್ರಾಯಶ್ಚಿತ್ತವಾಗಿ ಭಿಕ್ಷೆ ಬೇಡುವಂತೆ ಮಹಿಳೆಗೆ ಆದೇಶ!

    ಕರು ಸತ್ತಿದ್ದಕೆ ಪ್ರಾಯಶ್ಚಿತ್ತವಾಗಿ ಭಿಕ್ಷೆ ಬೇಡುವಂತೆ ಮಹಿಳೆಗೆ ಆದೇಶ!

    ಭೋಪಾಲ್: ಆಕಸ್ಮಿಕವಾಗಿ ಕರುವಿನ ಸಾವಿಗೆ ಕಾರಣವಾಗಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಒಂದು ವಾರ ಭಿಕ್ಷೆ ಬೇಡುವಂತೆ 55 ವರ್ಷದ ಮಹಿಳೆಗೆ ಆದೇಶ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ಭಿಂಡ್‍ನಲ್ಲಿ ನಡೆದಿದೆ.

    ಭಿಕ್ಷೆ ಬೇಡಿ ಬಂದ ಹಣದಲ್ಲಿ ಮಹಿಳೆ ಗಂಗಾ ನದಿಗೆ ಹೋಗಿ ಪ್ರಾಯಶ್ಚಿತ್ತದ ಭಾಗವಾಗಿ ಅಲ್ಲಿ ಮುಳುಗೇಳಬೇಕು ಎಂದು ಇಲ್ಲಿನ ಗ್ರಾಮ ಪಂಚಾಯತ್ ಹೇಳಿದೆ. ಆಗಸ್ಟ್ 31ರಂದು ಇಲ್ಲಿನ ಮಟಾಡಿನ್ ಗ್ರಾಮದ ನಿವಾಸಿ ಕಮಲೇಶ್, ತಾಯಿ ಹಸುವಿನಿಂದ ಕರುವನ್ನ ದೂರಕ್ಕೆ ಎಳೆಯುತ್ತಿದ್ದರು. ಈ ವೇಳೆ ಹಗ್ಗ ಕರುವಿನ ಕತ್ತಿಗೆ ಸುಲುಕಿಕೊಂಡು ಸಾವನ್ನಪ್ಪಿತ್ತು.

    ನಂತರ ಸ್ಥಳೀಯ ಪಂಚಾಯತ್ ಮಹಿಳೆಗೆ ಹತ್ತಿರದ ಗ್ರಾಮಗಳಲ್ಲಿ ಒಂದು ವಾರ ಭಿಕ್ಷೆ ಬೇಡಬೇಕು. ಇಲ್ಲವಾದಲ್ಲಿ ಜೀವನಪೂರ್ತಿ ಬಹಿಷ್ಕಾರ ಅನುಭವಿಸಬೇಕಾಗುತ್ತದೆ ಎಂದು ಹೇಳಿತ್ತು. ಮಹಿಳೆಯನ್ನ 7 ದಿನಗಳವರೆಗೆ ಬಹಿಷ್ಕರಿಸಲಾಗಿತ್ತು. ಆಕೆಗೆ ಗ್ರಾಮದೊಳಗೆ ಪ್ರವೇಶವನ್ನೂ ನಿರಾಕರಿಸಲಾಗಿತ್ತು ಎಂದು ಮಹಿಳೆಯ ಮಗ ಅನಿಲ್ ಶ್ರೀವಾಸ್ ಹೇಳಿದ್ದಾರೆ.

    ಹೆದರಿಕೆಯಿಂದ ಯಾರೂ ಕೂಡ ಇದರ ವಿರುದ್ಧ ಪ್ರಶ್ನೆ ಎತ್ತಲಿಲ್ಲ. ನನ್ನ ತಾಯಿ ಹತ್ತಿರದ ಗ್ರಾಮದಲ್ಲಿನ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಪ್ರತಿದಿನ ಭಿಕ್ಷೆ ಬೇಡಿದ್ರು. ನಂತರ ಅವರಿಗೆ ಅನಾರೋಗ್ಯವಾಗಿ ಆಸ್ಪತ್ರೆಯಲ್ಲಿ ದಾಖಲಿಸುವಂತಾಯ್ತು. ನಿನ್ನೆಯಷ್ಟೇ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅನಿಲ್ ಹೇಳಿದ್ದಾರೆ.

    ಆದ್ರೆ ಪಂಚಾಯತ್ ಮುಖ್ಯಸ್ಥರು ಈ ರೀತಿಯ ಯಾವುದೇ ಆದೇಶ ನೀಡಿಲ್ಲವೆಂದು ಹೇಳಿದ್ದಾರೆ. ಸ್ವತಃ ಮಹಿಳಯೇ ಪಂಚಾಯ್ತಿ ಕರೆದು ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಹೇಳಿದ್ರು ಎಂದು ಪಂಚಾಯತ್ ಮುಖ್ಯಸ್ಥ ಶಂಭು ಶ್ರೀನಿವಾಸ್ ಹೇಳಿದ್ದಾರೆ.

    ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಯಾರಾದ್ರೂ ದೂರು ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

  • ಈಜಲು ತೆರಳಿದ್ದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನೀರುಪಾಲು

    ಈಜಲು ತೆರಳಿದ್ದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನೀರುಪಾಲು

    ಮಂಗಳೂರು: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಕೊಣಾಜೆ ಠಾಣೆ ವ್ಯಾಪ್ತಿಯ ಇನ್ನೋಳಿ ಸಮೀಪದ ನೇತ್ರಾವತಿ ನಡುಗಡ್ಡೆಯ ಬಳಿ ನಡೆದಿದೆ.

    ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಬೆಳ್ತಂಗಡಿ ನಿವಾಸಿ ವಿಶಾಲ್ (21), ಬಿಹಾರ ಮೂಲದ ಶುಭಂ(22), ಚಿತ್ರದುರ್ಗ ಮೂಲದ ಶ್ರೀರಾಮ್(22) ಮೃತ ದುರ್ದೈವಿಗಳು.

    ಎಂಟು ಮಂದಿಯ ವಿದ್ಯಾರ್ಥಿಗಳ ಗುಂಪೊಂದು ನೇತ್ರಾವತಿ ನದಿಯಲ್ಲಿ ಸೋಮವಾರ ಈಜಾಟಕ್ಕೆ ತೆರಳಿದ್ದರು. ಈ ವೇಳೆ ಸ್ಥಳೀಯರಿಂದ ಐವರು ವಿದ್ಯಾರ್ಥಿಗಳ ರಕ್ಷಣೆ ಮಾಡಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ. ಓರ್ವ ವಿದ್ಯಾರ್ಥಿಯ ಶವ ಪತ್ತಯಾಗಿದ್ದು ಇನ್ನಿಬ್ಬರ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.

  • ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ ಇಬ್ಬರು ನೀರು ಪಾಲು

    ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ ಇಬ್ಬರು ನೀರು ಪಾಲು

    ಮೈಸೂರು: ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ವಿ.ಜಿ.ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬಾಲಕ ಮಂಜುನಾಥ್(16), ಯುವಕ ಮಹೇಶ್(27) ಮೃತಪಟ್ಟ ದುರ್ದೈವಿಗಳು. ಇಂದು ಬೆಳಗ್ಗೆ ತಮ್ಮ ಗ್ರಾಮದ ಕೆರೆಗೆ ಯುವಕರ ಗುಂಪು ಗಣಪತಿ ಮೂರ್ತಿ ವಿಸರ್ಜನೆಗೆ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ.

    ಕೆರೆಯಿಂದ ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕಕರಣ ದಾಖಲಾಗಿದೆ.

  • ಆಲ್ಟೋ ಕಾರ್ ಡಿಕ್ಕಿ- ಚರ್ಚ್ ನಿಂದ ಮನೆಗೆ ಬರ್ತಿದ್ದ ವೃದ್ಧೆ ಸ್ಥಳದಲ್ಲೇ ಸಾವು: ವಿಡಿಯೋ

    ಆಲ್ಟೋ ಕಾರ್ ಡಿಕ್ಕಿ- ಚರ್ಚ್ ನಿಂದ ಮನೆಗೆ ಬರ್ತಿದ್ದ ವೃದ್ಧೆ ಸ್ಥಳದಲ್ಲೇ ಸಾವು: ವಿಡಿಯೋ

    ಬೆಂಗಳೂರು: ಆಲ್ಟೋ ಕಾರ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವೃದ್ಧೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

    ಅಲೆಯಮ್ಮಾ ಜೊಕಬ್ (74) ಸಾವನಪ್ಪಿದ ವೃದ್ಧೆ. ನಗರದ ಯಶವಂತಪುರ ಬಳಿಯ ಮತ್ತಿಕೆರೆಯಲ್ಲಿ ಈ ಅವಘಡ ಸಂಭವಿಸಿದೆ. ಚರ್ಚ್ ನಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ವೃದ್ಧೆಗೆ ಹಿಂದಿನಿಂದ ಆಲ್ಟೋ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಆಲ್ಟೋ ಚಾಲಕ ಮಾತ್ರ ಕಾರ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

    https://www.youtube.com/watch?v=Taup5kJhMQ0