Tag: death

  • ಊರಿಗೇ ಊರೇ ಹಾವಿನ ಕಾಟದಿಂದ ಹೈರಾಣ- ರಾತ್ರಿ ಮಲಗೋಕಾಗಲ್ಲ, ಬೆಳಗಾದ್ರೆ ಸಾವಿನ ಸುದ್ದಿ ತಪ್ಪಲ್ಲ

    ಊರಿಗೇ ಊರೇ ಹಾವಿನ ಕಾಟದಿಂದ ಹೈರಾಣ- ರಾತ್ರಿ ಮಲಗೋಕಾಗಲ್ಲ, ಬೆಳಗಾದ್ರೆ ಸಾವಿನ ಸುದ್ದಿ ತಪ್ಪಲ್ಲ

    ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸಕೋಟೆ ಗ್ರಾಮದ ಜನ ಹಾವಿನ ಕಾಟದಿಂದ ಹೈರಾಣವಾಗಿದ್ದಾರೆ.

    ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಬೆಟ್ಟವಿದ್ದು ಸರಿ ಸುಮಾರು ಐದು ಸಾವಿರ ಜನ ಇಲ್ಲಿ ವಾಸ ಮಾಡ್ತಿದ್ದಾರೆ. ಆದ್ರೆ 3 ತಿಂಗಳಿನಿಂದ ಈ ಗ್ರಾಮದ ಜನ ಸರಿಯಾಗಿ ನಿದ್ದೆ ಮಾಡಿಲ್ಲ. ಬೆಳಗಾಗ್ತಿದ್ದಂತೆ ಗ್ರಾಮದಲ್ಲಿ ಒಬ್ಬರಲ್ಲ ಒಬ್ಬರಿಗೆ ಹಾವು ಕಚ್ಚಿದೆ ಅನ್ನೋ ಸುದ್ದಿ ಕಿವಿಗೆ ಬೀಳುತ್ತೆ. ಕೆಲವರಂತೂ ರಾತ್ರಿಯಿಡೀ ಕೈಯಲ್ಲಿ ಕೋಲು ಹಿಡ್ಕೊಂಡು ಹಾವನ್ನ ಕಾಯೋ ಕೆಲಸ ಮಾಡಿಕೊಂಡಿದ್ದಾರೆ.

    ಕರಿನಾಗರ ಹಾವು ಕಚ್ಚಿ ಈಗಾಗಲೇ ಐವರು ಸಾವನ್ನಪ್ಪಿದ್ದು, 17 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇಂದು ಸಹ ಇಬ್ಬರಿಗೆ ನಾಗರಹಾವು ಕಚ್ಚಿದ್ದು, ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ.

    ಸುತ್ತಮುತ್ತಲಿನ ಗ್ರಾಮದಲ್ಲಿರುವ 51 ದೇವರಿಗೆ ಪೂಜೆ, ಪುನಸ್ಕಾರ, ಹೋಮ ಹವನ, ಮಾಟ ಮಂತ್ರ ಎಲ್ಲವನ್ನೂ ಮಾಡಿಸಿದ್ದಾರೆ. ಪ್ರತಿ ಮನೆಗೂ ನೂರು ರೂಪಾಯಿ ಹಣ ಪಡೆದು ಗ್ರಾಮ ದೇವತೆಗೆ ಶಾಂತಿ ಪೂಜೆ, ನಾಗದೇವತೆಗೆ ಬಲಿದಾನ ನೀಡಿದ್ದಾರೆ. ಇಷ್ಟಾದ್ರೂ ಹಾವಿನ ಕಾಟ ತಪ್ಪುತ್ತಿಲ್ಲ. ರಾತ್ರಿ ಮನೆಯಲ್ಲಿ ಮಲಗಿದ ಸಮಯದಲ್ಲಿ ಕಿವಿಗೆ, ಗಂಟಲಿಗೆ ಹೆಚ್ಚಾಗಿ ಹಾವು ಕಚ್ಚಿದೆ. ಕೆಲವರಂತೂ ಹಾವಿನ ಭಯದಿಂದ ಊರನ್ನೇ ತ್ಯಜಿಸಿದ್ದಾರೆ.

    ಗ್ರಾಮದಲ್ಲಿ ಕಣ್ಣಿಗೆ ಬಿದ್ದ ಹಾವು ನೋಡ ನೋಡ್ತಿದ್ದಂತೆ ಮಾಯವಾಗ್ತಿವೆಯಂತೆ. ಬೆಡ್‍ರೂಂ, ಬಾತ್‍ರೂಂ ಸೇರಿದಂತೆ ಎಲ್ಲಾ ಕಡೆನೂ ಹಾವುಗಳದ್ದೇ ಭಯ. ಇದನ್ನೆ ಬಂಡವಾಳ ಮಾಡಿಕೊಂಡ ಮಾಂತ್ರಿಕರು ಜನರಿಂದ ಹಣ ಕೀಳ್ತಿದ್ದಾರೆ.

  • ಹುಲಿಯ ಘರ್ಜನೆಯಿಂದ ಹೃದಯಾಘಾತವಾಗಿ 12 ಕೋತಿಗಳು ಒಮ್ಮೆಲೆ ಸಾವು

    ಹುಲಿಯ ಘರ್ಜನೆಯಿಂದ ಹೃದಯಾಘಾತವಾಗಿ 12 ಕೋತಿಗಳು ಒಮ್ಮೆಲೆ ಸಾವು

    ಲಕ್ನೋ: ಹುಲಿಯ ಘರ್ಜನೆ ಕೇಳಿ ಹೃದಯಾಘಾತಕ್ಕೊಳಗಾಗಿ 12 ಕೋತಿಗಳು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    12 ಕೋತಿಗಳು ಸತ್ತು ಬಿದ್ದಿರುವುದನ್ನ ಸ್ಥಳೀಯರು ನೋಡಿದ್ದರು. ಕೋತಿಗಳ ಸಾಮೂಹಿಕ ಸಾವು ನೋಡಿ ಗಾಬರಿಯಾಗಿದ್ರು. ಕೋತಿಗಳಿಗೆ ವಿಷ ಹಾಕಿ ಕೊಲ್ಲಲಾಗಿದೆ ಎಂಬ ಅನುಮಾನದ ಮೇಲೆ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವನ್ನಪ್ಪಿರುವ ಎಲ್ಲಾ ಕೋತಿಗಳಿಗೂ ಒಂದೇ ಸಲಕ್ಕೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ.

    ಕೋಟ್ವಾಲಿ ಮೊಹಮ್ಮದ್ ಪ್ರದೇಶದ ಪಶುವೈದ್ಯರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಹೃದಯಾಘಾತದಿಂದ ಕೋತಿಗಳು ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ. ಈ ಪ್ರದೇಶದಲ್ಲಿ ಹುಲಿಗಳು ಹೆಚ್ಚಾಗಿ ಸಂಚರಿಸುವುದರಿಂದ ಹುಲಿಯ ಘರ್ಜನೆ ಕೇಳಿ ಕೋತಿಗಳಿಗೆ ಹೃದಯಾಘಾತವಾಗಿರಬಹುದು ಎಂದು ಪಶುವೈದ್ಯರಾದ ಡಾ. ಸಂಜೀವ್ ಕುಮಾರ್ ಹೇಳಿದ್ದಾರೆ.

    ಮೃತ ಕೋತಿಗಳು ಸೋಮವಾರದಂದು ಪತ್ತೆಯಾಗಿದ್ದು, ಅರಣ್ಯ ಅಧಿಕಾರಿಗಳು ಅವುಗಳನ್ನ ಪ್ಲಾಸ್ಟಿಕ್ ಕವರ್‍ನಲ್ಲಿ ತುಂಬಿದ್ದಾರೆ.

    ಈ ಪ್ರದೇಶದಲ್ಲಿ ಆಗಾಗ ಹುಲಿಗಳು ಸಂಚರಿಸುತ್ತವೆ. ಕೋತಿಗಳು ಸಾವನ್ನಪ್ಪಿದ ಸಂದರ್ಭದಲ್ಲೂ ಹುಲಿಗಳ ಘರ್ಜನೆ ಕೇಳುತ್ತಿತ್ತು ಎಂದು ಇಲ್ಲಿನ ಗ್ರಾಮಸ್ಥರು ಹೇಳಿದ್ದಾರೆ.

    ಆದರೆ ಕೋತಿಗಳಿಗೆ ಒಂದೇ ಬಾರಿಗೆ ಹೃದಯಾಘಾತವಾಗಿದೆ ಎಂಬ ಅಂಶವನ್ನು ವನ್ಯಜೀವಿ ತಜ್ಞರು ತಳ್ಳಿ ಹಾಕಿದ್ದಾರೆ. ಇನ್ಫೆಕ್ಷನ್‍ನಿಂದಾಗಿ ಕೋತಿಗಳು ಸಾವನ್ನಪಿರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.

    ಕೋತಿಗಳು ಕಾಡು ಪ್ರಾಣಿಗಳು. ಅವು ಈ ರೀತಿ ಸಾವನ್ನಪ್ಪಲು ಸಾಧ್ಯವಿಲ್ಲ. ಎಲ್ಲಾ ಕೋತಿಗಳೂ ಯಾವುದೋ ಒಂದು ಇನ್ಫೆಕ್ಷನ್‍ನಿಂದ ಬಳಲಿ ಸಾವನ್ನಪ್ಪಿರಬಹುದು ಎಂದು ಪಶುವೈದ್ಯರಾದ ಡಾ. ಬ್ರಿಜೆಂದ್ರ ಸಿಂಗ್ ಹೇಳಿದ್ದಾರೆ.

    https://www.youtube.com/watch?v=VKTDsc67U04

     

  • ಒಬ್ಬನನ್ನು ರಕ್ಷಿಸಲು ಹೋಗಿ ಮತ್ತೊಬ್ಬನೂ ಕೃಷಿ ಹೊಂಡಕ್ಕೆ ಬಿದ್ದು ಸಾವು

    ಒಬ್ಬನನ್ನು ರಕ್ಷಿಸಲು ಹೋಗಿ ಮತ್ತೊಬ್ಬನೂ ಕೃಷಿ ಹೊಂಡಕ್ಕೆ ಬಿದ್ದು ಸಾವು

    ಮಂಡ್ಯ: ಕೃಷಿ ಹೊಂಡದೊಳಗೆ ಬಿದ್ದು ಹೊರಬಾರದೇ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಆತಗೂರು ಗ್ರಾಮದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ. 18 ವರ್ಷದ ಚಂದನ್ ಮತ್ತು 12 ವರ್ಷದ ಕಿರಣ್ ಮೃತ ದುದೈರ್ವಿಗಳು. ಇವರಿಬ್ಬರು ಜಮೀನಿನಲ್ಲಿ ಟೊಮ್ಯಾಟೊ ಬಿಡಿಸಿದ್ದಾರೆ. ನಂತರ ಕಿರಣ್ ಕೈ ಕಾಲು ತೊಳೆಯಲು ಕೃಷಿ ಹೊಂಡದ ಬಳಿ ಹೋಗಿದ್ದಾನೆ. ಆದ್ರೆ ಈ ವೇಳೆ ಕಾಲು ಜಾರಿ ಕೃಷಿಹೊಂಡದೊಳಗೆ ಬಿದ್ದಿದ್ದಾನೆ. ಇದನ್ನ ಗಮನಿಸಿದ ಚಂದನ್, ಕಿರಣ್‍ನನ್ನು ರಕ್ಷಿಸಲು ಹೋಗಿ ಕಾಲು ಜಾರಿ ಆತನೂ ಕೂಡ ಒಳಗೆ ಬಿದ್ದಿದ್ದಾನೆ.

    ಇಬ್ಬರೂ ಈಜಲು ಬಾರದೇ ನೀರಿನೊಳಗೆ ಮುಳುಗಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರ ಶವವನ್ನು ಮದ್ದೂರು ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದ್ದು, ಆಸ್ಪತ್ರೆಯ ಬಳಿ ಮೃತರ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.

  • SSLC ವಿದ್ಯಾರ್ಥಿನಿ ನೇಣಿಗೆ ಶರಣು

    SSLC ವಿದ್ಯಾರ್ಥಿನಿ ನೇಣಿಗೆ ಶರಣು

    ಧಾರವಾಡ: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ನಗರದಲ್ಲಿ ನಡೆದಿದೆ.

    ನಗರದ ಪವನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ವರ್ಷಾ ಬಳೋಡಿ (15) ನೇಣಿಗೆ ಶರಣಾದ ವಿದ್ಯಾರ್ಥಿ. ಶ್ರೀರಾಮನಗರದ ಮನೆಯಲ್ಲಿ ರವಿವಾರ ರಾತ್ರಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.

    ಮೃತ ವಿದ್ಯಾರ್ಥಿನಿ ಯಾವ ಕಾರಣಕ್ಕೆ ನೇಣು ಬಿಗಿದುಕೊಂಡಿದ್ದಾಳೆ ಎಂದು ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಾರೆ.

  • ಸರ್ಕಾರಿ ಬಸ್, ಬೈಕ್ ನಡುವೆ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು

    ಸರ್ಕಾರಿ ಬಸ್, ಬೈಕ್ ನಡುವೆ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು

    ಧಾರವಾಡ: ಬೈಕ್ ಮತ್ತು ಸಾರಿಗೆ ಸಂಸ್ಥೆ ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್‍ನಲ್ಲಿದ್ದ ಸವಾರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೃಷಿ ವಿವಿಯ ಸಮೀಪ ನಡೆದಿದೆ.

    ಸಾವನ್ನಪ್ಪಿದ ದುರ್ದೈವಿ ಗುರುಪಾದಪ್ಪ ಗೊಡಚಿ (38) ಎಂದು ಗುರುತಿಸಲಾಗಿದ್ದು, ಮೃತ ಮಹಿಳೆ ಹೆಸರು ತಿಳಿದು ಬಂದಿಲ್ಲ. ನಗರದ ಹೊರವಲಯದ ಕೃಷಿ ವಿಶ್ವವಿದ್ಯಾಲಯದ ಬಳಿ ಈ ಘಟನೆ ನಡೆದಿದ್ದು, ಸಾವನ್ನಪ್ಪಿದ ವ್ಯಕ್ತಿ ಹಾಗೂ ಮಹಿಳೆ ಬೆಳಗಾವಿ ಜಿಲ್ಲೆಯ ರಾಮದುರ್ಗದವರು ಎಂದು ತಿಳಿದು ಬಂದಿದೆ.

    ಸದ್ಯ ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಪೊಲೀಸರು ಬಸನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಸಾವನ್ನಪ್ಪಿದ ವ್ಯಕ್ತಿಗಳ ಶವಗಳನ್ನ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

  • ಕಟಪಾಡಿಯಲ್ಲಿ ಬೈಕ್- ಲಾರಿ ಮುಖಾಮುಖಿ ಡಿಕ್ಕಿ ಬಾಲಕಿ ಸ್ಥಳದಲ್ಲೇ ಸಾವು

    ಕಟಪಾಡಿಯಲ್ಲಿ ಬೈಕ್- ಲಾರಿ ಮುಖಾಮುಖಿ ಡಿಕ್ಕಿ ಬಾಲಕಿ ಸ್ಥಳದಲ್ಲೇ ಸಾವು

    ಉಡುಪಿ: ಕಟಪಾಡಿಯಲ್ಲಿ ನಡೆದ ಬೈಕ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಬೈಕ್‍ನ ಹಿಂಬದಿ ಕುಳಿತಿದ್ದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಉಡುಪಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ದುರ್ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ 11 ವರ್ಷದ ಸುಶ್ಮಿತಾ ಮೃತಪಟ್ಟ ಬಾಲಕಿ.

    ಕಟೀಲಿನಿಂದ ತನ್ನ ದೊಡ್ಡಪ್ಪನ ಜೊತೆ ಬೈಕಿನಲ್ಲಿ ಉಡುಪಿಗೆ ಬರುತ್ತಿದ್ದಾಗ ಮುಂಭಾಗದಲಿಂದ ಬರುತ್ತಿದ್ದ ಲಾರಿ ಡಿಕ್ಕಿಯಾಗಿದೆ. ಲಾರಿಯ ಬಂಪರ್ ಬೈಕಿಗೆ ಸಿಲುಕಿಕೊಂಡು ಬೈಕ್ ರಸ್ತೆಗೆ ಬಿದ್ದಿದೆ. ಮುಂಭಾಗದ ಲಾರಿಯ ಟಯರ್ ಬಾಲಕಿಯ ಮೇಲೆ ಹರಿದಿದೆ. ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ಸುಶ್ಮಿತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

    ಸುಶ್ಮಿತಾಳ ದೊಡ್ಡಪ್ಪ ಎಡಭಾಗಕ್ಕೆ ಬಿದ್ದಿದ್ದರಿಂದ ಪಾರಾಗಿದ್ದಾರೆ. ಕಟಪಾಡಿ ಜಂಕ್ಷನ್‍ನಲ್ಲಿ ಈ ದುರ್ಘಟನೆ ನಡೆದಿದ್ದು ಹೆದ್ದಾರಿಯಲ್ಲಿ ಕಿಲೋಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 2ನೇ ತರಗತಿ ಬಾಲಕನನ್ನು ಕೊಂದಿದ್ದು ಶಾಲಾ ಬಸ್ ಕಂಡಕ್ಟರ್ – ಕಾರಣ ಕೇಳಿದ್ರೆ ಶಾಕ್ ಆಗ್ತೀರ

    2ನೇ ತರಗತಿ ಬಾಲಕನನ್ನು ಕೊಂದಿದ್ದು ಶಾಲಾ ಬಸ್ ಕಂಡಕ್ಟರ್ – ಕಾರಣ ಕೇಳಿದ್ರೆ ಶಾಕ್ ಆಗ್ತೀರ

    ಗುರ್ಗಾವ್: ಇಲ್ಲಿನ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ 2ನೇ ತರಗತಿ ಬಾಲಕನ ಕತ್ತು ಸೀಳಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಬಸ್ ಕಂಡಕ್ಟರ್‍ನನ್ನು ಬಂಧಿಸಲಾಗಿದೆ. ಕೊಲೆ ಮಾಡಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ.

    42 ವರ್ಷದ ಅಶೋಕ್ ಕುಮಾರ್ ಬಂಧಿತ ಆರೋಪಿ. ಈತ ಗುರ್ಗಾವ್‍ನ ಘಮ್‍ರೋಜ್ ಗ್ರಾಮದ ನಿವಾಸಿಯಾಗಿದ್ದು, ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಕಳೆದ 8 ತಿಂಗಳಿನಿಂದ ಕೆಲಸ ಮಾಡುತ್ತಿದ್ದ.

    ಶುಕ್ರವಾರದಂದು ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ತರಗತಿ ವಿದ್ಯಾರ್ಥಿಯಾದ 7 ವರ್ಷದ ಬಾಲಕನನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಮೃತದೇಹದ ಪಕ್ಕ ಚಾಕು ಪತ್ತೆಯಾಗಿತ್ತು.

    ಕೊಲೆ ಮಾಡಿದ್ದು ಯಾಕೆ?: ಬಾಲಕ ಒಬ್ಬನೇ ಟಾಯ್ಲೆಟ್‍ನಲ್ಲಿ ಇದ್ದಾಗ ಆರೋಪಿ ಅಶೋಕ್ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಆದ್ರೆ ಬಾಲಕ ತಪ್ಪಿಸಿಕೊಳ್ಳಲು ಮುಂದಾದಾಗ ಅಶೋಕ್ ಆತನನ್ನು ಎಳೆದುಕೊಂಡು ಟಾಯ್ಲೆಟ್‍ನಲ್ಲೇ ಕತ್ತು ಸೀಳಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಾಲಕನನ್ನು ಎರಡು ಬಾರಿ ಇರಿದ ಅಶೋಕ್ ಚಾಕುವನ್ನ ನೀರಿನಲ್ಲಿ ತೊಳೆದು ಅಲ್ಲೇ ಎಸೆದುಹೋಗಿದ್ದಾನೆ.

    ಬಾಲಕ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾದಾಗ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇದೇ ಅಶೋಕ್ ಶಾಲಾ ಸಿಬ್ಬಂದಿಗೆ ಸಹಾಯ ಮಾಡಿದ್ದ. ಬಾಲಕನ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸುವ ವೇಳೆ, ಅಶೋಕ್ ಟಾಯ್ಲೆಟ್‍ನೊಳಗೆ ಹೋಗೋದನ್ನ ನಾವು ನೋಡಿದ್ದೆವು ಎಂದು ಕೆಲವು ಮಕ್ಕಳು ಹೇಳಿಕೆ ನೀಡಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರೀಶಿಲಿಸಿದ ನಂತರ ಅನುಮಾನ ಮತ್ತಷ್ಟು ಬಲವಾಗಿತ್ತು.

    ಶಾಲೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಾಲಕನ ತಂದೆ ತಮ್ಮ ವಕೀಲರೊಂದಿಗೆ ಗುರ್ಗಾವ್ ಪೊಲೀಸ್ ಆಯುಕ್ತರನ್ನ ಭೇಟಿಯಾಗಿದ್ದಾರೆ.

    ನನ್ನ ಮಗನಿಗೆ ಕನಿಷ್ಠ ಭದ್ರತೆಯನ್ನು ಒದಗಿಸಲು ಶಾಲೆಗೆ ಸಾಧ್ಯವಾಗಿಲ್ಲ. ಹೀಗಾದ್ರೆ ಪೋಷಕರು ಮಕ್ಕಳನ್ನ ಶಾಲೆಗೆ ಹೇಗೆ ಕಳಿಸ್ತಾರೆ? ನನ್ನ ಮಗ ಶಾಲಾ ಬಸ್‍ನಲ್ಲಿ ಹೋಗುತ್ತಿರಲಿಲ್ಲ. ಹೀಗಾಗಿ ಆತನಿಗೆ ಆ ಕಂಡಕ್ಟರ್ ಯಾರು ಎಂದೇ ಗೊತ್ತಿರಲಿಲ್ಲ. ನಾವೇ ಮಗನನ್ನು ಡ್ರಾಪ್ ಮಾಡಿ ಪಿಕಪ್ ಮಾಡುತ್ತಿದ್ವಿ ಎಂದು ಬಾಲಕನ ತಾಯಿ ಜ್ಯೋತಿ ಹೇಳಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಶಾಲೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬಹುದೇ ಎಂದು ನೋಡಲು ಉಪ ಪೊಲೀಸ್ ಆಯುಕ್ತರು ತಂಡವನ್ನು ರಚಿಸಿದ್ದಾರೆ. ಇಂದು ಆರೋಪಿ ಅಶೋಕ್ ಕುಮಾರ್‍ನನ್ನು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

  • ಗೃಹಿಣಿಯ ಅನುಮಾನಾಸ್ಪದ ಸಾವು: ಕೈ-ಕಾಲು ಕಟ್ಟಿ, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ಗೃಹಿಣಿಯ ಅನುಮಾನಾಸ್ಪದ ಸಾವು: ಕೈ-ಕಾಲು ಕಟ್ಟಿ, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ವಿಜಯಪುರ: ಮನೆಯ ಜಂತಿಗೆ ಕೈ, ಕಾಲು ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಣಿಯ ಶವ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ನಡೆದಿದೆ.

    ಬಸಮ್ಮ ಸಜ್ಜನ (30) ಸಾವನ್ನಪ್ಪಿರುವ ಗೃಹಿಣಿ. ಘಟನೆಯ ಬಳಿಕ ಬಸಮ್ಮನ ಗಂಡ ವಿರೇಶ್, ಮಾವ ಶಿವಶರಣಪ್ಪ ಹಾಗೂ ಅತ್ತೆ ಪಾರ್ವತಿ ನಾಪತ್ತೆಯಾಗಿದ್ದಾರೆ. ವರದಕ್ಷಿಣೆಗಾಗಿ ವಿರೇಶ್, ಶಿವಶರಣಪ್ಪ, ಪಾರ್ವತಿ ಮೂವರು ಸೇರಿ ಬಸಮ್ಮನನ್ನು ಹತ್ಯೆ ಮಾಡಿರುವುದಾಗಿ ಅವರ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

    ಈ ಸಂಬಂಧ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಳೆಯಿಂದ ನೆನೆದಿದ್ದ ಮನೆಯ ಮೇಲ್ಛಾವಣಿ ಕುಸಿದು ದಂಪತಿ ಸಾವು

    ಮಳೆಯಿಂದ ನೆನೆದಿದ್ದ ಮನೆಯ ಮೇಲ್ಛಾವಣಿ ಕುಸಿದು ದಂಪತಿ ಸಾವು

    ವಿಜಯಪುರ: ಕಳೆದರೆಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನೆನೆದಿದ್ದ ಮನೆಯ ಮೇಲ್ಛಾವಣಿ ಕುಸಿದು ದಂಪತಿ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಜೆವೂರ ಗ್ರಾಮದಲ್ಲಿ ನಡೆದಿದೆ.

    ಕರಬಸಪ್ಪ ಆಕಳವಾಡಿ(75) ಹಾಗೂ ಅವರ ಪತ್ನಿ ಇಂದಿರಾಬಾಯಿ ಆಕಳವವಾಡಿ(65) ಮೃತ ದುರ್ದೈವಿಗಳು. ಜೆವೂರ ಗ್ರಾಮದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ ರಾತ್ರಿ ಮಲಗಿದ್ದ ವೇಳೆ ಮಳೆಯಿಂದ ನೆನೆದಿದ್ದ ಮನೆಯ ಮೇಲ್ಛಾವಣಿ ಕುಸಿದು ಈ ಅವಘಡ ಸಂಭವಿಸಿದೆ.

    ಝಳಕಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಮಂಡ್ಯ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ

    ಮಂಡ್ಯ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ

    ಮಂಡ್ಯ: ಯುವಕನನ್ನು ಕಟ್ಟಿ ಹಾಕಿ ನಂತರ ಅವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ.

    28 ವರ್ಷದ ನವೀನ್ ಕೊಲೆಯಾದ ದುರ್ದೈವಿ. ಕನಕಪುರ ಮೂಲದ ನವೀನ್ ಮಂಡ್ಯದಲ್ಲಿ ವಾಸಿಸುತ್ತಿದ್ದರು. ಲಾರಿಗಳಿಗೆ ಮೂಟೆ ಹೊರುವ ಕೂಲಿ ಕೆಲಸ ಮಾಡಿಕೊಂಡಿದ್ದರು. ನವೀನ್ ಕೊಲೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.