Tag: death

  • ಬಿಪಿಮಾತ್ರೆ ಸೇವಿಸಿದ್ದ ಮೆಡಿಕಲ್ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವು

    ಬಿಪಿಮಾತ್ರೆ ಸೇವಿಸಿದ್ದ ಮೆಡಿಕಲ್ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವು

    ಮೈಸೂರು: ಹೆಚ್ಚಿನ ಪ್ರಮಾಣದ ಬಿಪಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಆಯುರ್ವೇದದ ಓದುತ್ತಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಮೈಸೂರಿನ ಕುವೆಂಪುನಗರದ ಎಂ ಬ್ಲಾಕ್ ನಲ್ಲಿ ನಡೆದಿದೆ.

    ರಿಂಕು (23) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ನಿವಾಸಿಯಾದ ರಿಂಕು ಆಯುರ್ವೇದ ವೈದ್ಯಕೀಯದಲ್ಲಿ ಅಂತಿಮ ವರ್ಷವನ್ನು ಒದುತ್ತಿದ್ದಳು. ರಿಂಕು ಸೆಪ್ಟೆಂಬರ್ 15 ರಂದು ಮಾತ್ರೆ ಸೇವಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಸಾವನ್ನಪ್ಪಿದ್ದಾಳೆ.

    ಆತ್ಮಹತ್ಯೆಗೆ ಯಾವುದೇ ಕಾರಣ ತಿಳಿದು ಬಂದಿಲ್ಲ ಹಾಗೂ ಕುವೆಂಪುನಗರ  ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

  • NCC ಕ್ಯಾಂಪ್‍ ಗೆ ತೆರಳಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು

    NCC ಕ್ಯಾಂಪ್‍ ಗೆ ತೆರಳಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು

    ಬೆಂಗಳೂರು: ಎನ್‍ಸಿಸಿ ಕ್ಯಾಂಪ್‍ಗೆ ತೆರಳಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕನಕಪುರದ ರಾವಗೊಂಡ್ಲು ಬೆಟ್ಟದ ಹತ್ತಿರ ನಡೆದಿದೆ.

    ವಿಶ್ವಾಸ್ (17) ಸಾವನ್ನಪ್ಪಿರುವ ವಿದ್ಯಾರ್ಥಿ. ವಿಶ್ವಾಸ್ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಭಾನುವಾರದಂದು ಕಾಲೇಜಿನಿಂದ 25 ವಿದ್ಯಾರ್ಥಿಗಳನ್ನ ಎನ್‍ಸಿಸಿ ಕ್ಯಾಂಪ್‍ಗೆ ಕನಕಪುರದ ರಾವಗೊಂಡ್ಲು ಬೆಟ್ಟಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ 10 ಅಡಿಯ ಕಲ್ಯಾಣಿಗೆ ಬಿದ್ದು ವಿಶ್ವಾಸ್ ಸಾವನ್ನಪ್ಪಿದ್ದಾನೆ.

    ಬೇರೆ ವಿದ್ಯಾರ್ಥಿಗಳು ಸೆಲ್ಫೀ ತೆಗೆದುಕೊಂಡ ಫೋಟೋಗಳಲ್ಲಿ ವಿಶ್ವಾಸ್ ಮುಳುಗ್ತಿರೋದು ಕಾಣಿಸುತ್ತದೆ. ಇಷ್ಟಾದರು ಕಾಲೇಜಿನ ಆಡಳಿತ ಮಂಡಳಿ ಕ್ಯಾರೆ ಎನ್ನುತ್ತಿಲ್ಲ. ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಲು ಪೋಷಕರು ಹಾಗು ಸಂಬಂಧಿಕರು ನಿರ್ಧಾರ ಮಾಡಿದ್ದಾರೆ.

    ಈ ಘಟನೆ ನಡೆದ ನಂತರ ಎನ್‍ಸಿಸಿ ಪ್ರೋಫೆಸರ್ ಸ್ಥಳದಿಂದ ಪರಾರಿಯಾಗಿದ್ದಾರೆ.

  • ತೂಕ ಕಡಿಮೆ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ್ಳು!

    ತೂಕ ಕಡಿಮೆ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ್ಳು!

    ಚೆನ್ನೈ: ತೂಕ ಕಡಿಮೆ ಆಗಲು ಶಸ್ತ್ರ ಚಿಕಿತ್ಸೆ ಮಾಡಿಕೊಂಡ ಮಹಿಳೆಯೊಬ್ಬರು ಈಗ ಪ್ರಾಣವನ್ನೇ ಕಳೆದುಕೊಂಡ ಘಟನೆ ತಮಿಳುನಾಡಿನ ಚೆನ್ನೈ ಆಸ್ಪತ್ರೆಯಲ್ಲಿ ನಡೆದಿದೆ.

    160 ಕೆಜಿ ತೂಗುತ್ತಿದ್ದ 46 ವರ್ಷದ ವಲರ್‍ಮತಿ ತೂಕ ಜಾಸ್ತಿ ಇದೆ ಎಂದು ಬರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದಳು. ಆದರೆ ಈ ಶಸ್ತ್ರಚಿಕಿತ್ಸೆ ವಿಫಲವಾಗಿದ್ದು ಚೆನ್ನೈ ಸಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

    ಸ್ಥೂಲಕಾಯ ಚಿಕಿತ್ಸೆಯಿಂದ ಬಳಲುತ್ತಿದ್ದ ಪತ್ನಿಯನ್ನು ಆಸ್ಪತ್ರಗೆ ದಾಖಲಿಸಿದ್ದೆ. ಆದರೆ ವೈದ್ಯರು ನಮ್ಮ ಮನೆಯಲ್ಲಿರುವ ನಾಲ್ಕು ಮಂದಿಗೂ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ಹೇಳಿದರು. ಅಷ್ಟೇ ಅಲ್ಲದೇ ನಮಗೆ ದುಡ್ಡು ಬೇಕಾಗಿಲ್ಲ, ನೀವು ನಮಗೆ ಶಸ್ತ್ರಚಿಕಿತ್ಸೆ ಆಗುವ ಮೊದಲು ಮತ್ತು ನಂತರದ ಫೋಟೋ ಕೊಡಬೇಕು ಅಂತ ವೈದ್ಯರು ಹೇಳಿದ್ದರು ಎಂದು ವಲರಾಮತಿಯ ಪತಿ ಅಲಗೆಸಾನ್ ಹೇಳಿದ್ದಾರೆ.

    ನಾವೂ ಚಿಕಿತ್ಸೆಗಾಗಿ ಮತ್ತು ಔಷಧಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ ಮೊದಲ ಶಸ್ತ್ರಚಿಕಿತ್ಸೆ ನಡೆದ ನಂತರ ವಲರಾಮತಿ ಒಂದು ತಿಂಗಳು ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಳು. ಅಷ್ಟೇ ಅಲ್ಲದೇ ಆರೋಗ್ಯದಲ್ಲಿ ತೊಡಕುಗಳಿರುವ ಕಾರಣ ವೈದ್ಯರು ಒಂಬತ್ತು ಬಾರಿ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು.

    ವೈದ್ಯರ ನಿರ್ಲಕ್ಷ್ಯ ಎಂದು ಮಹಿಳೆಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಪೊಲೀಸರು ಸೆಕ್ಷನ್ 174 ಅಡಿಯಲ್ಲಿ ಕೇಸನ್ನು ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆಗೆಗಾಗಿ ವಲರ್‍ಮತಿ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

  • ಮದುವೆಯಾದ ಆರೇ ತಿಂಗಳಿಗೆ ಆತ್ಮಹತ್ಯೆಗೆ ಶರಣಾದ ನವದಂಪತಿ

    ಮದುವೆಯಾದ ಆರೇ ತಿಂಗಳಿಗೆ ಆತ್ಮಹತ್ಯೆಗೆ ಶರಣಾದ ನವದಂಪತಿ

    ಮುಂಬೈ: ಇತ್ತೀಚಿಗೆ ಮದುವೆಯಾದ ನವದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಮಾಡಿರುವ ಘಟನೆ ಶನಿವಾರ ಮುಂಬೈನ ಸಬ್ ಆರ್ಬನ್ ಮಲಾಡ್‍ನಲ್ಲಿ ನಡೆದಿದೆ.

    ದನ್‍ರಾಜ್ ಭುವನೇಶ್ವರ್ ನೈ (24) ಹಾಗೂ ಕಾಜಲ್ ದನ್‍ರಾಜ್ ನೈ (19) ನೇಣಿಗೆ ಶರಣಾದ ನವದಂಪತಿ. ಈ ನವದಂಪತಿ ಪಶ್ಚಿಮ ಮಲಾಡ್‍ನ ಮಲ್ವಾನಿಯಲ್ಲಿ ಶುಕ್ರವಾರ ಸುಮಾರು 10 ಗಂಟೆಗೆ ನ್ಯೂ ಕಲೆಕ್ಟರ್ ಕಂಪೌಂಡ್‍ನ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ.

    ಫ್ಯಾನಿನ ಹುಕ್‍ಗೆ ಸೀರೆಯನ್ನು ಕಟ್ಟಿ ನವದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರ ದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಆರು ತಿಂಗಳ ಹಿಂದೆ ಮದುವೆಯಾದ ಧನ್‍ರಾಜ್ ಗಾರ್ಮೆಂಟ್ ಅಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ದೀಪಕ್ ತಿಳಿಸಿದ್ದಾರೆ.

  • ಓಡಾಡುವ ಜಾಗಕ್ಕೆ ಸಂಬಂಧಿಸಿದಂತೆ ಗಲಾಟೆ: ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

    ಓಡಾಡುವ ಜಾಗಕ್ಕೆ ಸಂಬಂಧಿಸಿದಂತೆ ಗಲಾಟೆ: ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

    ಮಂಡ್ಯ: ಓಡಾಡುವ ಜಾಗಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದ ಹಿನ್ನೆಲೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಓರ್ವ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಹೊಸದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ನಾಗರಾಜು(55) ಮೃತ ದುರ್ದೈವಿ. ನಾಗರಾಜು ಪತ್ನಿ ಗೌರಮ್ಮ(44), ಮಗ ನಾರಾಯಣಸ್ವಾಮಿ(27) ಗಂಭೀರವಾಗಿ ಗಾಯಗೊಂಡವರು. ಚಲುವರಾಜು ಮತ್ತು ನಾಗರಾಜು ಮನೆ ಅಕ್ಕಪಕ್ಕದಲ್ಲಿತ್ತು. ಮನೆಯ ಸಮೀಪ ಓಡಾಡುವ ಜಾಗದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಆದರೆ ಕಳೆದ ರಾತ್ರಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿತ್ತು.

    ಚಲುವರಾಜು ಪಕ್ಕದ ಮನೆಯ ನಾಗರಾಜು ಮೇಲೆ ಚೂರಿ ಮತ್ತು ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾನೆ. ನಾಗರಾಜುವನ್ನು ಕಾಪಾಡಲು ಪತ್ನಿ ಗೌರಮ್ಮ ಮತ್ತು ಮಗ ನಾರಾಯಣಸ್ವಾಮಿ ಯತ್ನಿಸಿದ್ದರು. ಆದರೆ ಅವರ ಮೇಲೂ ಚೂರಿ ಮತ್ತು ಮರದ ತುಂಡಿನಿಂದ ಚಲುವರಾಜು ಹಲ್ಲೆ ನಡೆಸಿದ್ದಾನೆ. ಇದರ ಪರಿಣಾಮ ನಾಗರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಪತ್ನಿ ಗೌರಮ್ಮ ಮತ್ತು ಮಗ ನಾರಾಯಣಸ್ವಾಮಿ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹಲಗೂರು ಪೊಲೀಸ್ ಠಾಣಾದಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆ ಆರೋಪಿ ಚಲುವರಾಜುನನ್ನು ಬಂಧಿಸಿದ್ದಾರೆ.

  • ವಿಡಿಯೋ: ಪ್ರವಾಸಕ್ಕೆ ತೆರಳಿದ್ದ ಆರು ಜನ ಪ್ರವಾಸಿಗರು ನಾಗರಮಡಿ ಫಾಲ್ಸ್ ನಲ್ಲಿ ನೀರು ಪಾಲು

    ವಿಡಿಯೋ: ಪ್ರವಾಸಕ್ಕೆ ತೆರಳಿದ್ದ ಆರು ಜನ ಪ್ರವಾಸಿಗರು ನಾಗರಮಡಿ ಫಾಲ್ಸ್ ನಲ್ಲಿ ನೀರು ಪಾಲು

    ಕಾರವಾರ: ಪ್ರವಾಸಕ್ಕೆಂದು ಆಗಮಿಸಿದ್ದ ಆರು ಜನ ಪ್ರವಾಸಿಗರು ನೀರಿನಲ್ಲಿ ಕೊಚ್ಚಿಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಂಡಿಯಾ ಬಳಿಯ ನಾಗರಮಡಿ ಫಾಲ್ಸ್ ನಲ್ಲಿ ನಡೆದಿದೆ.

    ಗೋವಾದ ಮಡಗಾವ್ ದಿಂದ ಕಾರವಾರದ ನಾಗರಮಡಿ ಫಾಲ್ಸ್‍ಗೆ ಆಗಮಿಸಿದ್ದ 25 ಕ್ಕೂ ಹೆಚ್ಚು ಜನ ಪ್ರವಾಸಿ ತಂಡ ಮದ್ಯ ಸೇವಿಸಿ ನೀರಿನಲ್ಲಿ ಇಳಿದಿದ್ದರು. ಈ ಸಮಯದಲ್ಲಿ ಹೆಚ್ಚಿನ ಮಳೆಯಿಂದಾಗಿ ನೀರಿನ ರಭಸ ಹೆಚ್ಚಾಗಿ ಆರು ಜನರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

    ಪ್ರಂಸಿಲ್ಲಾ(21) ಫಿಯಾನ(28) ರೇಣುಕಾ(23) ಮಾರ್ಸಲೀನ ಮೆಕ್ಸಿಕಾ(38) ಸಮೀರ್ ಗಾವಡೇ(28) ಹಾಗೂ ಇನ್ನೊಬ್ಬರ ಗುರುತು ಪತ್ತೆಯಾಗಬೇಕಿದ್ದು ನೀರಿನಲ್ಲಿ ಕೊಚ್ಚಿಹೋದವರಾಗಿದ್ದಾರೆ. ಪ್ರಂಸಿಲ್ಲಾ ಮತ್ತು ಪಿಯಾನ ಎಂಬವರ ಶವವನ್ನ ನೀರಿನಿಂದ ಹೊರತೆಗೆಯಲಾಗಿದ್ದು ಉಳಿದವರ ಶವಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಘಟನೆ ಸಂಬಂಧ ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://youtu.be/m7zafFLfXvk

     

  • ಸತ್ತೇ ಹೋಗಿದ್ದ ಅಂದವನು ಬದುಕಿ ಬಂದ-ವಿಜಯಪುರದಲ್ಲಿ ಅಚ್ಚರಿ ಘಟನೆ

    ಸತ್ತೇ ಹೋಗಿದ್ದ ಅಂದವನು ಬದುಕಿ ಬಂದ-ವಿಜಯಪುರದಲ್ಲಿ ಅಚ್ಚರಿ ಘಟನೆ

    ವಿಜಯಪುರ: ಕಳೆದ ಎರಡು ದಿನಗಳಿಂದ ಜಿಲ್ಲೆಯ ಮುದ್ದೇಬಿಹಾಳ ಮತ್ತು ಸಿಂದಗಿ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ನೀರಿನಲ್ಲಿ ಕೊಚ್ಚಿ ಹೋಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿಯಲಾಗಿತ್ತು. ಆದರೆ ಆ ವ್ಯಕ್ತಿ ಅದೃಷ್ಟಾವಷತ್ ಬದುಕಿ ಬಂದಿದ್ದಾರೆ.

    ತಾಳಿಕೋಟಿ ಪಟ್ಟಣದ ನಿವಾಸಿಗಳಾದ ಶಿವು ಹೊಸಳ್ಳಿ ಹಾಗೂ ಪ್ರಕಾಶ್ ಎಂಬವರು ಬೈಕ್ ಸಮೇತ್ ಡೋಣಿ ನದಿಯಲ್ಲಿ ಕೊಚ್ಚಿ ಹೋಗಿದ್ದರು. ಇಂದು ಅಗ್ನಿಶಾಮಕದಳದ ಸಿಬ್ಬಂದಿ ಶಿವು ಎಂಬಾತರ ಮೃತದೇಹವನ್ನು ಪತ್ತೆ ಮಾಡಿದ್ದಾರೆ.

    ಬೈಕ್ ನೀರಿನ ರಭಸಕ್ಕೆ ಕೊಚ್ಚಿ ಹೋಯಿತು. ಇಬ್ಬರೂ ಸಹ ನೀರಿನಲ್ಲಿ ಬಿದ್ದ ನಂತರ ನಾನು ಒಂದು ಸಾರಿ ಮುಳುಗಿ ಮೇಲ್ಗಡೆ ನೋಡಿದೆ. ಆದರೆ ಶಿವು ಮಾತ್ರ ಎಲ್ಲಿಯೂ ಕಾಣಲಿಲ್ಲ. ನಾನು ಹಾಗೆಯೇ ನಾನು ಈಜುತ್ತಾ ಮುಂದೆ ಸಾಗಿ ಮುಳ್ಳಿನ ಕಂಟಿಯ ಸಹಾಯದಿಂದ ದಡಕ್ಕೆ ಬಂದೆನು. ನೇರವಾಗಿ ಮನಗೆ ಹೋದೆ ಅಷ್ಟರಲ್ಲೇ ಎಲ್ಲರೂ ಅಳಲಾರಂಭಿಸಿದ್ದರು. ನನ್ನನ್ನು ನೋಡಿದ ಕುಟುಂಬಸ್ಥರು ಖುಷಿಪಟ್ಟರು ಎಂದು ಪ್ರಕಾಶ್ ಹೇಳಿದ್ದಾರೆ.

    ಈ ಸಂಬಂಧ ತಾಳಿಕೋಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಡೆತ್‍ನೋಟ್ ಬರೆದಿಟ್ಟು ಎಂಜಿನಿಯರ್ ಆತ್ಮಹತ್ಯೆ

    ಡೆತ್‍ನೋಟ್ ಬರೆದಿಟ್ಟು ಎಂಜಿನಿಯರ್ ಆತ್ಮಹತ್ಯೆ

    ಮಂಡ್ಯ: ಡೆತ್‍ನೋಟ್ ಬರೆದಿಟ್ಟು ರೈಲಿಗೆ ತಲೆ ಕೊಟ್ಟು ಎಂಜಿನಿಯರ್‍ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.

    ಇಂದು ಬೆಳಗ್ಗಿನ ಜಾವದಲ್ಲಿ ಈ ಘಟನೆ ಸಂಭವಿಸಿದೆ. ಹಾರೋಹಳ್ಳಿ ಗ್ರಾಮದ ನಿವಾಸಿ ಎಚ್.ಪಿ.ರಾಜು ಗೌಡ(28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿ ರಾಜು ಗೌಡ ಕೆಲಸ ಮಾಡುತ್ತಿದ್ದರು.

    ನನ್ನ ಸಾವಿಗೆ ನಾನೇ ಕಾರಣ ಮತ್ತು ನನ್ನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಡೆತ್‍ನೋಟ್ ಬರೆದಿಟ್ಟು ಪಾಂಡವಪುರದಿಂದ 1.5 ಕಿಮೀ ದೂರದಲ್ಲಿರುವ ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನ ಶವ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆಗೆ ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಪುಟ್ಟಣ್ಣಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಮಂಡ್ಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಡೆತ್‍ನೋಟ್ ವಶಪಡಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

  • ಶಿಕಾರಿಗೆ ಹೋಗಿದ್ದ ವೇಳೆ ಮಿಸ್ ಫೈರ್- ವ್ಯಕ್ತಿ ಸ್ಥಳದಲ್ಲೇ ಸಾವು

    ಶಿಕಾರಿಗೆ ಹೋಗಿದ್ದ ವೇಳೆ ಮಿಸ್ ಫೈರ್- ವ್ಯಕ್ತಿ ಸ್ಥಳದಲ್ಲೇ ಸಾವು

    ಚಿಕ್ಕಮಗಳೂರು: ಶಿಕಾರಿಗೆ ಹೋದ ಸಂದರ್ಭದಲ್ಲಿ ಮಿಸ್ ಫೈರ್ ಆಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಜಿಲ್ಲೆಯ ಎನ್‍ಆರ್ ಪುರ ತಾಲೂಕಿನ ಸಾರ್ಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ತಡರಾತ್ರಿ ಧರ್ಮಯ್ಯ ಹಾಗೂ ಗಂಗಾಧರ್ ಎಂಬವರು ಶಿಕಾರಿಗೆ ಹೋಗಿದ್ರು. ಈ ವೇಳೆ ಗಂಗಾಧರ್ ಫೈರ್ ಮಾಡಿದ ಬುಲೆಟ್ ಧರ್ಮಯ್ಯಗೆ ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಧರ್ಮಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಈ ಬಗ್ಗೆ ಎನ್‍ಆರ್ ಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಗಂಗಾಧರ್‍ರನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

    https://www.youtube.com/watch?v=oiT8z6159Dw

  • ಮೃತದೇಹ ಮನೆಯೊಳಗೆ ತರದಂತೆ ತಡೆದ ಮಾಲೀಕ- ರಾತ್ರಿಯಿಡೀ ಮಗನ ಶವದೊಂದಿಗೆ ರಸ್ತೆಯಲ್ಲಿದ್ದ ತಾಯಿ

    ಮೃತದೇಹ ಮನೆಯೊಳಗೆ ತರದಂತೆ ತಡೆದ ಮಾಲೀಕ- ರಾತ್ರಿಯಿಡೀ ಮಗನ ಶವದೊಂದಿಗೆ ರಸ್ತೆಯಲ್ಲಿದ್ದ ತಾಯಿ

    ಹೈದರಾಬಾದ್: ಮಹಿಳೆಯೊಬ್ಬರು ಮಳೆಯ ನಡುವೆ ರಾತ್ರಿಯಿಡೀ ನಡುರಸ್ತೆಯಲ್ಲಿ ತನ್ನ ಮಗನ ಮೃತದೇಹವನ್ನು ಕಾವಲು ಕಾದ ಮನಕಲಕುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ತೆಲಂಗಾಣ ರಾಜ್ಯ ರಾಜಧಾನಿಯಾದ ಹೈದರಾಬಾದ್‍ನ ಕುಕ್ಕಟ್‍ಪಲ್ಲಿ ಪ್ರದೇಶದ ವೆಂಕಟೇಶ್ವರ್ ನಗರದಲ್ಲಿ ಈ ಘಟನೆ ಸಂಭವಿಸಿದೆ. ನಾಲ್ಕು ವರ್ಷಗಳ ಹಿಂದೆ ಮೆಹಬೂಬ್‍ನಗರ ಜಿಲ್ಲೆಯಿಂದ ತನ್ನ ಎರಡು ಮಕ್ಕಳೊಂದಿಗೆ ಇಲ್ಲಿಗೆ ಬಂದ ಈಶ್ವರಮ್ಮ, ವೆಂಕಟೇಶ್ವರ ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

    ಈಶ್ವರಮ್ಮ ಅವರ ಕಿರಿಯ ಮಗ ಸುರೇಶ್ ಡೆಂಗ್ಯೂ ಜ್ವರದಿಂದ ತೀವ್ರವಾಗಿ ಬಳಲಿ ಬುಧುವಾರ ಸಂಜೆ ಮೃತಪಟ್ಟಿದ್ದ. ಈತನ ಮೃತದೇಹವನ್ನು ಅಂದು ಸಂಜೆ ಆತನ ಕುಟುಂಬಸ್ಥರು ತಾವು ವಾಸವಿದ್ದ ಬಾಡಿಗೆ ಮನೆಗೆ ತಂದಿದ್ದಾರೆ. ಆದರೆ ಮನೆಯ ಮಾಲೀಕ ಮೃತ ದೇಹವನ್ನು ಮನೆಯ ಒಳಗೆ ತೆಗೆದುಕೊಂಡು ಹೋಗಲು ಅನುಮತಿಯನ್ನು ನೀಡದೆ ಮನೆಯಿಂದ ಹೊರಹಾಕಿದ್ದಾನೆ. ಶವವನ್ನು ಒಳಗೆ ತೆಗೆದುಕೊಂಡು ಹೋದರೆ ತನ್ನ ಕುಟುಂಬಕ್ಕೆ ಕೆಟ್ಟದ್ದಾಗುತ್ತದೆ ಎಂದು ಮಾಲೀಕ ಜಗದೀಶ್ ಗುಪ್ತಾ ಹೇಳಿದ್ದಾನೆ.

    ಸುರೇಶ್ ತಾಯಿ ಈಶ್ವರಪ್ಪ ಇಲ್ಲಿಮ ರೂಮ್‍ವೊಂದರಲ್ಲಿ ವಾಸವಿದ್ದು, ಉಳಿದಂತೆ ಗುಪ್ತಾ ಹಾಗೂ ಅವರ ಸಂಬಂಧಿಕರೇ ಇಲ್ಲಿ ವಾಸ ಮಾಡುತ್ತಿದ್ದಾರೆ. ಬಾಲಕ ಡೆಂಗ್ಯೂ ಜ್ವರದಿಂದ ಬಳಲಿ ಮೃತಪಟ್ಟಿದ್ದರಿಂದ ಅದರಿಂದ ಇನ್ಫೆಕ್ಷನ್ ಆಗಬಹುದೆಂದು ಗುಪ್ತಾ ಹೇಳಿದ್ದಾನೆ.

    ಹೀಗಾಗಿ ಇಡೀ ರಾತ್ರಿ ಈಶ್ವರಮ್ಮ ಮನೆಯ ಹೊರಗೆ ಮೃತದೇಹದ ಜೊತೆ ಕಾಲ ಕಳೆಯುವಂತಾಗಿದೆ. ಈ ವೇಳೆ ಅಕ್ಕಪಕ್ಕದ ಮನೆಯವರೂ ಕೂಡ ಇದನ್ನ ಪ್ರಶ್ನಿಸಿಲ್ಲ.

    ಮರುದಿನ ಮುಂಜಾನೆ ವಾಕಿಂಗ್ ಮಾಡುತ್ತಿದ್ದವರು ಈಶ್ವರಮ್ಮ ಹಾಗೂ ಅವರ ಹಿರಿಯ ಮಗ ಮೃತದೇಹವನ್ನು ಹಿಡಿದು ಕುಳಿತಿದ್ದನ್ನು ನೋಡಿದ್ದಾರೆ. ನಂತರ ಸಾಕಷ್ಟು ಜನ ಗುಂಪು ಸೇರಿದ್ದಾರೆ. ಬಳಿಕ ಒಂದು ಪೆಟ್ಟಿಗೆಯನ್ನ ತರಿಸಿಮೃತದೇಹವನ್ನ ಅದರಲಿ ಇರಿಸಿದ್ದಾರೆ. ಕೆಲವರು ಅಂತ್ಯಸಂಸ್ಕಾರ್ಕಕಾಗಿ ಹಣ ಸಂಗ್ರಹಿಸಿ ಸಹಾಯ ಮಾಡಿದ್ದಾರೆ.

    ಮನೆಯ ಮಾಲೀಕನ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿರುವ ಸ್ಥಳಿಯರು, ಯಾರ ಮನೆಯಲ್ಲಿ ತಾನೆ ಸಾವು ಸಂಭವಿಸಿಲ್ಲ? ಅಥವಾ ಮುಂದೆ ಸಂಭವಿಸುವುದಿಲ್ವಾ ಎಂದು ಪ್ರಶ್ನಿಸಿದ್ದಾರೆ.