Tag: death

  • ಕೆಟ್ಟು ನಿಂತ ಲಾರಿ ರಿಪೇರಿ ಮಾಡ್ವಾಗ ಅಪರಿಚಿತ ವಾಹನ ಡಿಕ್ಕಿ- ಚಾಲಕ ಸಾವು

    ಕೆಟ್ಟು ನಿಂತ ಲಾರಿ ರಿಪೇರಿ ಮಾಡ್ವಾಗ ಅಪರಿಚಿತ ವಾಹನ ಡಿಕ್ಕಿ- ಚಾಲಕ ಸಾವು

    ಕೋಲಾರ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೋಲಾರ ತಾಲೂಕಿನ ಜೋಡಿಕೃಷ್ಣಪುರ ಗ್ರಾಮದ ಬಳಿ ತಡರಾತ್ರಿ ನಡೆದಿದೆ.

    ಚಾಲಕ ಕೆಟ್ಟು ನಿಂತ ಲಾರಿಯನ್ನು ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನ ಏಕಾಏಕಿ ಚಾಲಕನ ಮೇಲೆ ಹರಿದಿದೆ. ಇದರಿಂದ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಚಾಲಕನ ಗುರುತು ಪತ್ತೆಯಾಗಿಲ್ಲ.

    ಅಪಘಾತ ನಡೆದ ಸ್ಥಳಕ್ಕೆ ಸ್ಥಳೀಯ ವೇಮಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ನೀಡಿದ ಪಲಾವ್ ತಿಂದು 100ಕ್ಕೂ ಹೆಚ್ಚು ಕುರಿಗಳು ಸಾವು

    ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ನೀಡಿದ ಪಲಾವ್ ತಿಂದು 100ಕ್ಕೂ ಹೆಚ್ಚು ಕುರಿಗಳು ಸಾವು

    ಕೊಪ್ಪಳ: ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ಅನ್ನವನ್ನು ತಿಂದು ನೂರಕ್ಕೂ ಹೆಚ್ಚು ಕುರಿಗಳು ಸಾವಿಗೀಡಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಸೆ. 22 ರಂದು ಕೊಪ್ಪಳದ ಹೊರವಲಯ ಹೊಸಪೇಟೆ ರಸ್ತೆಯಲ್ಲಿ ರಾಜ್ಯದ ವಿವಿಧ ಅಭಿವೃದ್ದಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಮಾವೇಶಕ್ಕೆ ಸಿಎಂ ಚಾಲನೆ ನೀಡಿದ್ದು, ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಆಗಮಿಸಿದ್ದರು. ಅವರಿಗಾಗಿ ಟನ್‍ಗಟ್ಟಲೆ ಪಲಾವ್ ವ್ಯವಸ್ಥೆ ಮಾಡಲಾಗಿತ್ತು.

    ಜನರು ಪಲಾವ್ ತಿಂದು ಪ್ಲೇಟ್‍ಗಳು ಹಾಗೂ ಉಳಿದ ಅನ್ನವನ್ನು ಹಾಗೆ ಬಿಟ್ಟು ಅಲ್ಲೇ ಬಿಸಾಡಿ ಹೋಗಿದ್ದರು. ಅದನ್ನು ತಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರಗಾಂ ಗ್ರಾಮದ ಸೋಮಣ್ಣ ಪೂಜಾರ ಎಂಬವರ ನೂರಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

    ಅನ್ನ ತಿಂದ ದಿನದಿಂದ ಕುರಿಗಳು ನಿರಂತರವಾಗಿ ಸಾವಿಗೀಡಾಗಿವೆ. ಸೋಮಣ್ಣ ಅವರು ಒಟ್ಟು 200 ಕುರಿಗಳನ್ನು ಹೊಂದಿದ್ದು, ಈಗ ಅರ್ಧದಷ್ಟು ಕುರಿಗಳು ಸಾವನ್ನಪ್ಪಿವೆ. ಇದನ್ನು ಕಂಡು ಸೋಮಣ್ಣ ಕಂಗಾಲಾಗಿದ್ದಾರೆ. ಕುರಿಗಳನ್ನೇ ನಂಬಿಕೊಂಡು ಊರು ಊರು ಸುತ್ತುತ್ತಾ ಉಪಜೀವನ ನಡೆಸುತ್ತಿದ್ದ ಸೋಮಣ್ಣ ಕುಟುಂಬ ಕುರಿಗಳ ಸಾವಿನಿಂದ ಏನೂ ತೋಚದೇ ಕಣ್ಣೀರಿಡುತ್ತಿದ್ದಾರೆ.

    ಈ ಕುರಿಗಳ ಸಾವಿಗೆ ಕೊಪ್ಪಳ ಜಿಲ್ಲಾಡಳಿತವೇ ಕಾರಣ ಎಂದು ಆರೋಪ ಮಾಡಲಾಗಿದೆ. ಕಾರ್ಯಕ್ರಮ ಮುಗಿದ ಮೇಲೆ ಇಲ್ಲಿ ಸ್ವಚ್ಚತಾ ಕಾರ್ಯ ಮಾಡಬೇಕಾಗಿತ್ತು. ಆದರೆ ಇಲ್ಲಿನ ಅಧಿಕಾರಿಗಳು ಯಾವುದೇ ರೀತಿಯ ಸ್ವಚ್ಛತೆ ಮಾಡದೆ ಪ್ಲಾಸ್ಟಿಕ್ ವಸ್ತುಗಳು ಮತ್ತು ಅನ್ನವನ್ನು ಅಲ್ಲೇ ಬಿಸಾಡಿದ್ದಾರೆ. ಇದರಿಂದ ಏನೂ ಅರಿಯದ ಮೂಕ ಪ್ರಾಣಿಗಳು ಅದನ್ನು ತಿಂದು ಸಾವಿಗೀಡಾಗಿವೆ. ಇದಕ್ಕೆಲ್ಲಾ ನೇರ ಹೊಣೆ ಕೊಪ್ಪಳ ಜಿಲ್ಲಾಡಳಿತವೇ ಆಗಿದೆ. ಆದ್ದರಿಂದ ಕೂಡಲೆ 100 ಕುರಿಗಳ ಸಾವಿಗೆ ಜಿಲ್ಲಾಡಳಿತವೇ ಪರಿಹಾರ ನೀಡಬೇಕು ಎಂದು ಸೋಮಣ್ಣ ಹೇಳುತ್ತಿದ್ದಾರೆ.

     

  • ಹುಟ್ಟುಹಬ್ಬದ ದಿನವೇ ದುರಂತ- ಜ್ಯೂಸ್ ಎಂದು ಆ್ಯಸಿಡ್ ಕುಡಿದು ಇಬ್ಬರು ಬಾಲಕರ ಸಾವು

    ಹುಟ್ಟುಹಬ್ಬದ ದಿನವೇ ದುರಂತ- ಜ್ಯೂಸ್ ಎಂದು ಆ್ಯಸಿಡ್ ಕುಡಿದು ಇಬ್ಬರು ಬಾಲಕರ ಸಾವು

    ಬೆಂಗಳೂರು: ಜ್ಯೂಸ್ ಎಂದುಕೊಂಡು ಬಾಟಲ್‍ನಲ್ಲಿದ್ದ ಆ್ಯಸಿಡ್ ಕುಡಿದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಅವೆನ್ಯೂ ರಸ್ತೆ ಬಳಿಯಿರುವ ಕಿಲಾರೆ ರಸ್ತೆಯಲ್ಲಿ ನಡೆದಿದೆ.

    ಆ್ಯಸಿಡ್ ಕುಡಿದು ಆರ್ಯನ್ ಸಿಂಗ್(9) ಮತ್ತು ಸಾಯಿಲ್ ಶಂಕರ್(8) ಮೃತಪಟ್ಟಿದ್ದಾರೆ. ಆಭರಣ ಕರಗಿಸಲು ಸಲ್ಫ್ಯೂರಿಕ್ ಆ್ಯಸಿಡ್ ನ್ನು ಸಾಯಿಲ್ ಸಿಂಗ್ ತಂದೆ ಮನೆಗೆ ತಂದಿಟ್ಟಿದ್ದರು. ಅವರು ಚಿನ್ನ ಕರಗಿಸುವ ಕೆಲಸ ಮಾಡಿಕೊಂಡಿದ್ದರು. ಅದಕ್ಕಾಗಿ ಮನೆಯಲ್ಲಿ ಆ್ಯಸಿಡ್ ನನ್ನು ಕೂಲ್ ಡ್ರಿಂಕ್ಸ್ ಬಾಟಲ್‍ನಲ್ಲಿಟ್ಟರು.

    ಇಂದು ಸಾಯಿಲ್ ಶಂಕರ್ ಹುಟ್ಟು ಹಬ್ಬದ ಆಚರಣೆಯಿತ್ತು. ರಾತ್ರಿ ಮನೆಯಲ್ಲಿ ಕೇಕ್ ಕಟ್ ಮಾಡಲು ತಯಾರಿ ನಡೆಸಿದ್ದರು. ಸ್ನೇಹಿತ ಮಾನೀಶ್ ಸಂಜಯ್ ಸಿಂಗ್ ಸಂಭ್ರಮಾಚರಣೆಗೆ ಬಂದಿದ್ದರು.

    ಇಬ್ಬರು ಬಾಲಕರು ಜ್ಯೂಸ್ ಎಂದುಕೊಂದು ಸಲ್ಫ್ಯೂರಿಕ್ ಆ್ಯಸಿಡ್ ಕುಡಿಯುತ್ತಿದ್ದಂತೆ ಅಸ್ವಸ್ಥರಾದ್ದರು. ಅಸ್ವಸ್ಥಗೊಂಡಿದ್ದ ಬಾಲಕರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದ್ರೆ ಆಸ್ಪತ್ರೆಗೆ ದಾಖಲಿಸೋ ಮುನ್ನ ದಾರಿ ಮಧ್ಯದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ.

    ಈ ಸಂಬಂಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆರೆಗೆ ಉರುಳಿದ ಸ್ವಿಫ್ಟ್ ಡಿಸೈರ್ ಕಾರ್- ಇಬ್ಬರು ಮಹಿಳೆಯರು ಸೇರಿ ಐವರು ಜಲಸಮಾಧಿ

    ಕೆರೆಗೆ ಉರುಳಿದ ಸ್ವಿಫ್ಟ್ ಡಿಸೈರ್ ಕಾರ್- ಇಬ್ಬರು ಮಹಿಳೆಯರು ಸೇರಿ ಐವರು ಜಲಸಮಾಧಿ

    ಹಾಸನ: ಸ್ವಿಫ್ಟ್ ಡಿಸೈರ್ ಕಾರೊಂದು ಕೆರೆಗೆ ಉರುಳಿದ ಪರಿಣಾಮ ಐವರು ಜಲಸಮಾಧಿಯಾಗಿರೋ ಘಟನೆ ಹಾಸನದಲ್ಲಿ ನಡೆದಿದೆ.

    ಹಾಸನ ತಾಲೂಕಿನ ಹನುಮನಹಳ್ಳಿ ಬಳಿ ಈ ಘಟನೆ ನಡೆದಿದೆ. ಹಂಗ್ರಳ್ಳಿ ಗ್ರಾಮದಿಂದ ಗೊರೂರು ಮಾರ್ಗದಲ್ಲಿರುವ ಹನುಮನಹಳ್ಳಿ ಕೆರೆಯಲ್ಲಿ ಇಂದು ಬೆಳಿಗ್ಗೆ ವ್ಯಕ್ತಿಯ ಶವ ಕಾಣಿಸಿತ್ತು. ಸಾರ್ವಜನಿಕರು ಈ ಬಗ್ಗೆ ಗಮನ ಹರಿಸಿದಾಗ ಕಾರ್ ಕೆರೆಗೆ ಉರುಳಿರುವುದು ಬೆಳಕಿಗೆ ಬಂದಿತ್ತು. ಒರ್ವ ವ್ಯಕ್ತಿಯ ಶವ ತೇಲಿದ್ದು ಕಾರು ಒಳಭಾಗದಲ್ಲಿ ಬೇರೆ ಯಾರಾದ್ರೂ ಇದ್ದರಾ ಎಂದು ಪರಿಶೀಲಿಸಲಾಗಿತ್ತು. ಆಗ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿರುವುದು ಗೊತ್ತಾಗಿದೆ.

    ಸದ್ಯಕ್ಕೆ ಇಬ್ಬರ ಗುರುತು ಪತ್ತೆಯಾಗಿದೆ. ಹೊಳೆನರಸೀಪುರ ತಟ್ಟೆಕೆರೆಯ ಅನಿಲ್(22) ಹಾಗೂ ಶಿವಮೊಗ್ಗ ಮೂಲದ ಉಮೇಶ್ ಮೃತರಲ್ಲಿ ಇಬ್ಬರಾಗಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಕಾರ್ ಮೇಲೆತ್ತಲು ಹರಸಾಹಸ ಪಟ್ಟಿದ್ದಾರೆ.

  • ಸ್ಪಿರಿಟ್ ತುಂಬಿದ್ದ ಟ್ಯಾಂಕರ್‍ಗೆ ಖಾಸಗಿ ಬಸ್ ಡಿಕ್ಕಿ: ಇಬ್ಬರ ಸಾವು, 30 ಜನರಿಗೆ ಗಾಯ

    ಸ್ಪಿರಿಟ್ ತುಂಬಿದ್ದ ಟ್ಯಾಂಕರ್‍ಗೆ ಖಾಸಗಿ ಬಸ್ ಡಿಕ್ಕಿ: ಇಬ್ಬರ ಸಾವು, 30 ಜನರಿಗೆ ಗಾಯ

    ಹಾವೇರಿ: ಸ್ಪಿರಿಟ್ ತುಂಬಿದ್ದ ಟ್ಯಾಂಕರ್ ಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, 30 ಜನರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದ ಹಲಗೇರಿ ಬ್ರಿಡ್ಜ್ ಬಳಿ ನಡೆದಿದೆ.

    ಬಸ್‍ನಲ್ಲಿದ್ದ ರಾಜಸ್ಥಾನ ಮೂಲದ 54 ವರ್ಷ ವಯಸ್ಸಿನ ಅರವಿಂದ ಕೊಠಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಮೃತ ಮಹಿಳೆ ಹೆಸರು ತಿಳಿದುಬಂದಿಲ್ಲ. ಗಾಯಾಳುಗಳನ್ನು ರಾಣೇಬೆನ್ನೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಖಾಸಗಿ ಬಸ್ ಮುಂಬೈನಿಂದ ಮೈಸೂರಿಗೆ ಹೊರಟ್ಟಿತ್ತು. ಬಸ್ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗ್ತಿದೆ. ಅಪಘಾತದ ರಭಸಕ್ಕೆ ಟ್ಯಾಂಕರ್ ನಿಂದ ಸ್ಪಿರಿಟ್ ಸೋರಿಕೆಯಾಗಿದೆ. ಹೀಗಾಗಿ ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕ್ರೇನ್ ಮೂಲಕ ವಾಹನವನ್ನ ಬೇರೆ ಕಡೆಗೆ ವರ್ಗಾವಣೆ ಮಾಡಲಾಗುತ್ತಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಣೇಬೆನ್ನೂರು ಪೊಲೀಸರು ಹಾಗೂ ಎಸ್ಪಿ ಕೆ.ಪರಶುರಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಮನೆಗೆ ಮಳೆ ನೀರು ನುಗ್ಗಿತೆಂದು UPS ಆಫ್ ಮಾಡಲು ಹೋಗಿ ಮಹಿಳೆ ಸಾವು

    ಮನೆಗೆ ಮಳೆ ನೀರು ನುಗ್ಗಿತೆಂದು UPS ಆಫ್ ಮಾಡಲು ಹೋಗಿ ಮಹಿಳೆ ಸಾವು

    ಬೆಂಗಳೂರು: ಕಳೆದ ರಾತ್ರಿ ಸುರಿದ ಭಾರೀ ಮಳೆ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ವಿದ್ಯುತ್ ಶಾಕ್‍ನಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆಯೂ ನಡೆದಿದೆ.

    ಕೆ.ಆರ್.ಪುರ ಆರ್.ಎಂ.ಎಸ್ ಬಡಾವಣೆಯ ಮನೆಯೊಂದಕ್ಕೆ ನೀರು ನುಗ್ಗಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಮೀನಮ್ಮ ಎಂದು ಗುರುತಿಸಲಾಗಿದೆ. ಮನೆಗೆ ನೀರು ನುಗ್ಗಿದ ಸಂದರ್ಭದಲ್ಲಿ ಯುಪಿಎಸ್ ಸ್ವಿಚ್ ಆಫ್ ಮಾಡಲು ಹೋದಾಗ ಘಟನೆ ನಡೆದಿದೆ. ವಿಷಯ ತಿಳಿದ ಸ್ಥಳೀಯ ಶಾಸಕ ಬಿ.ಎ.ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.

    ಕೊಚ್ಚಿ ಹೋದ ಅಂಗಡಿಗಳು: ಭಾರೀ ಮಳೆಯಿಂದ ನೆಲಮಂಗಲ ತಾಲೂಕಿನ ಅಮಾನಿಕೆರೆ, ಬಿನ್ನಮಂಗಲ, ದಾಸನಪುರ ಕರೆಗೆಗಳು ಭರ್ತಿಯಾಗಿದ್ದು, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದೆ. ರಸ್ತೆಯ ಮೇಲೆ ಸುಮಾರು ಮೂರು ಅಡಿ ನೀರು ನಿಂತಿದ್ದು, ನೀರಿನ ರಭಸಕ್ಕೆ ಹಲವು ಅಂಗಡಿಗಳು ಕೊಚ್ಚಿ ಹೋಗಿವೆ. ರಸ್ತೆ ದಾಟಲಾಗದೆ ವಾಹನ ಸವಾರರು ಪರದಾಟ ಅನುಭವಿಸುತ್ತಿದ್ದಾರೆ. ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಕಿಲೋಮೀಟರ್‍ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸ್ಥಳೀಯ ಜನರು ತೆರವು ಕಾರ್ಯಚರಣೆಯನ್ನು ನಡೆಸುತ್ತಿದ್ದಾರೆ.

    ಗೋಡೆ ಕುಸಿತ: ಮಳೆಯ ಅರ್ಭಟಕ್ಕೆ ನೆಲಮಂಗಲ ಸಮೀಪದ ಹಿಮಾಲಯ ಡ್ರಗ್ ಕಂಪನಿಯ ಒಳ ಕಾಂಪೌಂಡ್ ಕುಸಿತವಾಗಿದೆ. ಬಿನ್ನಮಂಗಲ ಕೆರೆ ಕೋಡಿ ಒಡೆದ ಪರಿಣಾಮ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯಿಂದ ಕಂಪನಿಯ ಒಳಗೆ ನೀರು ಹರಿದುಬಂದಿದೆ. ಕಂಪನಿಯ ಕೆಲವು ಸ್ಥಳಗಳು ಜಲಾವೃತಗೊಂಡಿದೆ.

  • ಹೋಟೆಲ್‍ನಲ್ಲಿ ಸೀಮೆಎಣ್ಣೆ ಸ್ಟೋವ್ ಸ್ಫೋಟ- 4 ಬಾಲಕರ ಸಾವು

    ಹೋಟೆಲ್‍ನಲ್ಲಿ ಸೀಮೆಎಣ್ಣೆ ಸ್ಟೋವ್ ಸ್ಫೋಟ- 4 ಬಾಲಕರ ಸಾವು

    ಕಲಬುರಗಿ: ಹೋಟೆಲ್‍ನಲ್ಲಿದ್ದ ಸೀಮೆಎಣ್ಣೆ ಸ್ಟೋವ್ ಸ್ಫೋಟಗೊಂಡು ನಾಲ್ಕು ಬಾಲಕರು ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಫತ್ತುನಾಯಕ ತಾಂಡಾದಲ್ಲಿ ನಡೆದಿದೆ.

    ಪ್ರೀತಮ್(03), ರತಿಕ್(03) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಇನ್ನಿಬ್ಬರು ಬಾಲಕರಾದ ಖುತೀಶ್ ಮತ್ತು ಅಕ್ಷತಾ ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ ಹೋಟೆಲ್ ಮಾಲಿಕ ವೀರಶೆಟ್ಟಿ ಅವರಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಮನ್ನಾಖೇಳಿ ಪಿಎಚ್‍ಸಿಯಲ್ಲಿ ದಾಖಲಿಸಲಾಗಿದೆ.

     

    ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಲಬುರಗಿಯ ಜಿಲ್ಲಾಧಿಕಾರಿ ಎನ್. ವೆಂಕಟೇಶಕುಮಾರ್ ತಾಂಡಾಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಉಡುಪಿ: ರೈಲು ಡಿಕ್ಕಿಯಾಗಿ ವ್ಯಕ್ತಿ ಸಾವು

    ಉಡುಪಿ: ರೈಲು ಡಿಕ್ಕಿಯಾಗಿ ವ್ಯಕ್ತಿ ಸಾವು

    ಉಡುಪಿ: ರೈಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಎರ್ಮಾಳಿನಲ್ಲಿ ನಡೆದಿದೆ.

    ಎರ್ಮಾಳು ಗ್ರಾಮ ಸಮೀಪದ ರೈಲ್ವೆ ಹಳಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಡುಬಿದ್ರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಮಾಹಿತಿ ಪ್ರಕಾರ ಅದಮಾರು ಗ್ರಾಮದ ರವಿ ದೇವಾಡಿಗ ಎಂಬ ವ್ಯಕ್ತಿಯ ಶವ ಇದು ಎಂದು ಗುರುತಿಸಲಾಗಿದೆ. ರವಿ ದೇವಾಡಿಗ ಸೋಮವಾರ ಮಧ್ಯಾಹ್ನ ಮನೆಯಿಂದ ಕೆಲಸಕ್ಕೆಂದು ತೆರಳಿದ್ದರು. ನಂತರ ರಾತ್ರಿ ಮನೆಗೆ ವಾಪಸ್ ಬಂದಿರಲಿಲ್ಲ.

    ಪೊಲೀಸರು ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಉಡುಪಿಯ ಆರ್‍ಪಿಎಫ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆಯನ್ನು ನಡೆಸಿದ್ದಾರೆ. ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಅಥವಾ ರೈಲ್ವೆ ಟ್ರ್ಯಾಕ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರಾ ಎಂಬ ಬಗ್ಗೆ ಇನ್ನಷ್ಟೇ ತನಿಖೆ ಆಗಬೇಕಿದೆ. ಮೇಲ್ನೋಟಕ್ಕೆ ಗಮನಿಸಿದಾಗ ಇದೊಂದು ರೈಲು ಅಪಘಾತ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

  • ಪತ್ನಿ-ನಾದಿನಿಯನ್ನ ಚಾಕು, ಸ್ಕ್ರೂ ಡ್ರೈವರ್‍ನಿಂದ ಇರಿದು ಕೊಂದ

    ಪತ್ನಿ-ನಾದಿನಿಯನ್ನ ಚಾಕು, ಸ್ಕ್ರೂ ಡ್ರೈವರ್‍ನಿಂದ ಇರಿದು ಕೊಂದ

    ನವದೆಹಲಿ: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ನಾದಿನಿಯ ಮೇಲೆ ಚಾಕು ಮತ್ತು ಸ್ಕ್ರೂಡ್ರೈವರ್‍ನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ದೆಹಲಿಯ ತಿಮಾರ್ಪುರ್‍ನಲ್ಲಿ ನಡೆದಿದೆ.

    ಸೋನಿಯಾ (24) ಮತ್ತು ಪ್ರೇಮಲತಾ (22) ಕೊಲೆಯಾದ ದುರ್ದೈವಿಗಳು. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಕೊಲೆ ಆರೋಪಿ ಮೋಹಿತ್ ಕುಮಾರ್ ಸದ್ಯ ತಲೆಮರೆಸಿಕೊಂಡಿದ್ದಾನೆ.

    ಸೋನಿಯಾ ಪತಿ ಮೋಹಿತ್ ಅಡುಗೆ ಮನೆಯಲ್ಲಿದ್ದ ಚಾಕು ಮತ್ತು ಸ್ಕ್ರೂ ಡ್ರೈವರ್‍ನಿಂದು ಇರಿದು ಹತ್ಯೆ ಮಾಡಿದ್ದಾನೆ.

    ಆರೋಪಿ ಮೋಹಿತ್ ಕುಮಾರ್ ವಿಪರೀತ ಕುಡಿಯುವ ಚಟ ಹೊಂದಿದ್ದು, ಇದೇ ವಿಚಾರಕ್ಕೆ ಮೋಹಿತ್ ಮತ್ತು ಪತ್ನಿ ಸೋನಿಯಾ ನಡುವೆ ಭಾನುವಾರದಂದು ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು, ಮೋಹಿತ್ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತಂದು ಸೋನಿಯಾರನ್ನ ಇರಿದಿದ್ದಾನೆ. ಈ ವೇಳೆ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದಿದ್ದಾರೆ ಎಂದು ತಿಮಾರ್ಪುರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ವೇಳೆ ಪ್ರೇಮಲತಾ ತನ್ನ ಸಹೋದರಿ ಸೋನಿಯಾ ರಕ್ಷಣೆಗೆಂದು ಬಂದಿದ್ದು, ಆಕೆಯ ಮೇಲೂ ಮೋಹಿತ್ ಚಾಕು ಮತ್ತು ಸ್ಕ್ರೂ ಡ್ರೈವರ್‍ನಿಂದ ಇರಿದು ಕೊಲೆ ಮಾಡಿದ್ದಾನೆ.

    ಈ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದು, ಆರೋಪಿ ಮೋಹಿತ್ ಕುಮಾರ್‍ಗಾಗಿ ಬಲೆ ಬೀಸಿದ್ದಾರೆ.

  • ಬಾಲಕಿಯ ಅನುಮಾನಾಸ್ಪದ ಸಾವು- ನಿನ್ನ ಮಗಳನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದೀನೆಂದು ಪತ್ರ

    ಬಾಲಕಿಯ ಅನುಮಾನಾಸ್ಪದ ಸಾವು- ನಿನ್ನ ಮಗಳನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದೀನೆಂದು ಪತ್ರ

    ಬೆಂಗಳೂರು: 13 ವರ್ಷದ ಬಾಲಕಿಯ ಶವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಆನೇಕಲ್ ತಾಲೂಕಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲವರ್ದನಹಳ್ಳಿಯಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಚಂದನಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಾವನ್ನಪ್ಪಿದ್ದಾಳೆ. ಆದರೆ ಬಾಲಕಿಯ ತಂದೆಗೆ ಬೆದರಿಕೆ ಹಾಕಿರುವ ರೀತಿಯ ಪತ್ರ ದೊರೆತಿದೆ. ಇದು ಕೆಲ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಮಿಸ್ಟರ್ ವಾಸುದೇವ್, ನಿನ್ನ ಮಗಳನ್ನು ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಮಾಡಿದ್ದೇನೆ. ನಿನ್ನ ಮಗ ನನಗೆ ಸಿಕ್ಕಿದ್ದು ಜಸ್ಟ್ ಮಿಸ್ ಆಗಿದ್ದು ಅವನನ್ನು ಬಿಡುವುದಿಲ್ಲ ಎಂದು ಪತ್ರದಲ್ಲಿ ಸವಾಲ್ ಹಾಕಲಾಗಿದೆ. ನಿನ್ನ ಇನ್ನಿಬ್ಬರು ಮಕ್ಕಳನ್ನೂ ನಾನು ಬಿಡಲ್ಲ ಅಂತಾ ಅನಾಮಧೇಯ ವ್ಯಕ್ತಿ ಪತ್ರದಲ್ಲಿ ಬರೆದಿದ್ದಾರೆ.