Tag: death

  • ಅಮೆರಿಕದಲ್ಲಿ ದುಷ್ಕರ್ಮಿಯ ಗುಂಡಿಗೆ 20 ಬಲಿ, 100 ಮಂದಿಗೆ ಗಾಯ: ವಿಡಿಯೋ ನೋಡಿ

    ಅಮೆರಿಕದಲ್ಲಿ ದುಷ್ಕರ್ಮಿಯ ಗುಂಡಿಗೆ 20 ಬಲಿ, 100 ಮಂದಿಗೆ ಗಾಯ: ವಿಡಿಯೋ ನೋಡಿ

    ಲಾಸ್ ವೆಗಾಸ್: ಅಮೆರಿಕದ ಲಾಸ್ ವೆಗಾಸ್‍ನಲ್ಲಿ ಸಂಗೀತೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಏಕಾಏಕಿ ಗುಂಡಿನ ದಾಳಿಯನ್ನು ನಡೆಸಿದ್ದಾನೆ. ಇದರ ಪರಿಣಾಮ ಸುಮಾರು 20 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ದಾಳಿಕೋರನನ್ನು ಸ್ಥಳಿಯ ಲಾಸ್ ವೆಗಾಸ್‍ನ ವ್ಯಕ್ತಿಯೆಂದು ಗುರುತಿಸಲಾಗಿದ್ದು, ಪೊಲೀಸರ ಗುಂಡಿಗೆ ದಾಳಿಕೋರ ಬಲಿಯಾಗಿದ್ದಾನೆ. ಆದರೆ ಅವನು ಯಾವ ಉಗ್ರಗಾಮಿಗಳೊಂದಿಗೆ ಜೊತೆ ಸಂಪರ್ಕ ಹೊಂದಿದ್ದಾನೆ ಈ ದಾಳಿಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ ಎಂಬುದಾಗಿ ವರದಿಯಾಗಿದೆ.

    ಲಾಸ್ ವೆಗಾಸ್ ಇಂದು ಪ್ರಮುಖವಾದ ರೆಸಾರ್ಟ್ ನಗರವಾಗಿದೆ. ಇದು ಜೂಜಾಟ, ಶಾಂಪಿಂಗ್ ಮತ್ತು ರಾತ್ರಿಗಳ ಪಾರ್ಟಿ ಜೀವನಕ್ಕೆ ಹೆಸರುವಾಸಿಯಾಗಿದೆ. ಸುಮಾರು ರಾತ್ರಿ 10 ಗಂಟೆಯಲ್ಲಿ ಗುಂಡಿನ ದಾಳಿ ಆರಂಭವಾಗಿದೆ.

    ಮ್ಯಾಂಡೆಲೇ ಬೇ ರೆಸಾರ್ಟ್ ಮತ್ತು ಕ್ಯಾಸಿನೋ ಸಮೀಪ ಕಳೆದ ಮೂರು ದಿನಗಳಿಂದ ರೂಟ್ 91 ಹಾರ್ವೆಸ್ಟ್ ಉತ್ಸವ ನಡೆಯುತ್ತಿದ್ದು, ಭಾನುವಾರ ಕೊನೆಯ ದಿನದ ಅದ್ಧೂರಿ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಂದೂಕು ಹಿಡಿದಿದ್ದ ಅಪರಿಚಿತ ವ್ಯಕ್ತಿ ಮಂಡೇಯ್ ಕೊಲ್ಲಿಯ 32 ನೇ ಮಹಡಿಯಿಂದ ಏಕಾಏಕಿ ಮನ ಬಂದಂತೆ ಗುಂಡಿನ ದಾಳಿಯನ್ನು ನಡೆಸಿದ್ದಾನೆ. ಗುಂಡಿನ ದಾಳಿ ಆರಂಭವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದು ಅವರು ಪ್ರತಿ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಿಂದ ಜನರು ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಲು ಪ್ರಾರಂಭಿಸಿದ್ದಾರೆ.

    ಮ್ಯಾಂಡಲೆ ಬೇ ಹೋಟೆಲ್ ಮ್ಯಾಕ್ಕ್ರಾನ್ ಇಂಟರ್‍ನ್ಯಾಷನಲ್ ವಿಮಾನ ನಿಲ್ದಾಣದ ಸಮೀಪದಲ್ಲಿದೆ. ಆದ್ದರಿಂದ ಈ ದಾಳಿ ಆರಂಭವಾದ ತಕ್ಷಣ ಟ್ವಿಟ್ಟರ್‍ನಲ್ಲಿ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

    ಸದ್ಯಕ್ಕೆ ದಾಳಿಯಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. 100 ಕ್ಕಿಂತ ಹೆಚ್ಚಿನ ಜನರು ಗಾಯಳಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ 14 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.

    https://twitter.com/victorialomba_1/status/914817446883811328

    https://twitter.com/Breaking911/status/914815962066669570

    https://twitter.com/supazeez/status/914813540103524352

  • ಚೇಲಾವರ ಜಲಪಾತದಲ್ಲಿ ಮುಳುಗಿದ್ದ ಬೆಂಗಳೂರು ಎಂಜಿನಿಯರಿಂಗ್ ವಿದ್ಯಾರ್ಥಿಯ ಶವ ಪತ್ತೆ

    ಚೇಲಾವರ ಜಲಪಾತದಲ್ಲಿ ಮುಳುಗಿದ್ದ ಬೆಂಗಳೂರು ಎಂಜಿನಿಯರಿಂಗ್ ವಿದ್ಯಾರ್ಥಿಯ ಶವ ಪತ್ತೆ

    ಮಡಿಕೇರಿ: ಸ್ನೇಹಿತರೊಂದಿಗೆ ನರಿಯಂದಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೇಲಾವರ ಜಲಪಾತ ವೀಕ್ಷಣೆಗೆ ತೆರಳಿ ಸಾವನ್ನಪ್ಪಿದ್ದ ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯ ಮೃತದೇಹ ಇಂದು ಪತ್ತೆಯಾಗಿದೆ.

    ಕೂಡಗು ಮೂಲದ ಜೆಪಿ ನಗರದಲ್ಲಿ ನೆಲೆಸಿರುವ ಕಾವೇರಪ್ಪ ಅವರ ಪುತ್ರ ದರ್ಶನ್ (22) ಜಲಪಾತದಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ಮೃತಪಟ್ಟಿದ್ದ. ಬೆಂಗಳೂರಿನ ಕೆಎಸ್‍ಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ದರ್ಶನ್ ನಾಲ್ವರು ಸ್ನೇಹಿತರೊಂದಿಗೆ ಮಡಿಕೇರಿ ದಸರಾ ವೀಕ್ಷಣೆಗೆಂದು ಕೊಡಗಿಗೆ ಬಂದು, ಭಾನುವಾರ ಮಧ್ಯಾಹ್ನ ಚೇಲಾವರ ಜಲಪಾತ ವೀಕ್ಷಣೆಗೆ ತೆರಳಿದ್ದ.

    ಜಲಪಾತದಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ದರ್ಶನ್ ಕಾಲುಜಾರಿ ಜಲಪಾತದ ಸುಳಿಯಲ್ಲಿ ಸಿಲುಕಿಕೊಂಡಿದ್ದ. ನೀರಿನ ರಭಸಕ್ಕೆ ಮೇಲೆ ಬಾರದೇ ಜಲಪಾತದಲ್ಲಿ ಮುಳುಗಿ ಮೃತಪಟ್ಟಿದ್ದ. ದರ್ಶನ್ ನೀರಿನಲ್ಲಿ ಮುಳುಗಿದ್ದ ಸುದ್ದಿಯನ್ನು ಸ್ನೇಹಿತರು ಗ್ರಾಮಸ್ಥರಿಗೆ ತಿಳಿಸಿದ್ದರು.

    ಸ್ಥಳಕ್ಕೆ ಆಗಮಿಸಿದ ನಾಪೋಕ್ಲು ಠಾಣೆ ಪೊಲೀಸರ ಶವಕ್ಕಾಗಿ ಭಾನುವಾರ ಹುಡುಕಾಟ ನಡೆಸಿದ್ದರು. ಆದರೆ ಜಲಪಾತದಲ್ಲಿ ನೀರಿನ ರಭಸ ಹೆಚ್ಚಿದ್ದ ಹಿನ್ನೆಲೆಯಲ್ಲಿ ಶವ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆಯಿಂದ ಮೃತ ದೇಹಕ್ಕಾಗಿ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿ ದರ್ಶನ್ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.

  • ಸೇತುವೆಗೆ ಡಿಕ್ಕಿ ಹೊಡೆದ ಕಾರು: ತಾಯಿ-ಮಗ ಸ್ಥಳದಲ್ಲಿಯೇ ಸಾವು

    ಸೇತುವೆಗೆ ಡಿಕ್ಕಿ ಹೊಡೆದ ಕಾರು: ತಾಯಿ-ಮಗ ಸ್ಥಳದಲ್ಲಿಯೇ ಸಾವು

    ಮುಂಬೈ: ವೇಗವಾಗಿ ಬಂದ ಕಾರು ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ ತಾಯಿ ಮತ್ತು ಮಗ ಇಬ್ಬರೂ ಸಾವನ್ನಪ್ಪಿದ್ದು, ತಂದೆಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಮುಂಬೈ- ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮುಂಜಾನೆ ನಡೆದಿದೆ.

    ತಾಯಿ ಸ್ವಪ್ನಾ ವಿವೇಕ್ ಮಾರ್ಕಂಡೆ (62) ಮತ್ತು ಮಗ ಸುಯೋಗ್ ಮಾರ್ಕಂಡೆ (32) ಮೃತ ದುರ್ದೈವಿಗಳು. ತಂದೆ ವಿವೇಕ್ ಮಾರ್ಕಂಡೆ ಅವರಿಗೆ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಸಮೀಪದ ಕಾಸಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

    ಭಾನುವಾರ ಮುಂಜಾನೆ ಸುಮಾರು 6.30 ಕ್ಕೆ ಕುಟುಂಬ ಸಮೇತರಾಗಿ ಕಾರಿನಲ್ಲಿ ಸೂರತ್‍ನಿಂದ ಕೊಪಾರ್ ಖೈರಾನೆ ಕಡೆಗೆ ಹೋಗುತ್ತಿದ್ದರು. ಸುಯೋಗ್ ಕಾರು ಚಲಾಯಿಸುತ್ತಿದ್ದನು. ಟ್ರಾಫಿಕ್ ಇಲ್ಲದ ಕಾರಣ ಸುಯೋಗ್ ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದ. ಸೂರ್ಯ ನದಿಯ ಬ್ರಿಡ್ಜ್ ನಲ್ಲಿ 3 ಕಿರಿದಾದ ಮಾರ್ಗವಿದ್ದು, ಅಲ್ಲಿ ಹೋಗುವಾಗ ನಿಯಂತ್ರಣ ಕಳೆದುಕೊಂಡ ಕಾರು ಸೇತುವೆಯ ಡಿವೈಡರ್‍ಗೆ ಡಿಕ್ಕಿ ಹೊಡೆದು ಸೂರ್ಯ ನದಿಗೆ ಹೋಗಿ ಬಿದ್ದಿದೆ ಎಂದು ಕಾಸಾ ಪೊಲೀಸ್ ಠಾಣೆಯ ಅಧಿಕಾರಿ ಜಯಪ್ರಕಾಶ್ ಗುಟೆ ಹೇಳಿದ್ದಾರೆ.

    ಐಪಿಸಿ ಸೆಕ್ಷನ್ 304 (ಎ) ಅಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಗುಟೆ ಅವರು ಹೇಳಿದರು.

  • ಹಾವು ಕಚ್ಚಿ ತಾತ-ಮೊಮ್ಮಗ ಸಾವು

    ಹಾವು ಕಚ್ಚಿ ತಾತ-ಮೊಮ್ಮಗ ಸಾವು

    ಯಾದಗಿರಿ: ಹಾವು ಕಚ್ಚಿ ತಾತ ಮತ್ತು ಮೊಮ್ಮಗ ಇಬ್ಬರು ಸಾವನ್ನಪ್ಪಿರುವ ಘಟನೆ ಯಾದಗಿರಿ ತಾಲೂಕಿನ ನಂದೆಪಲ್ಲಿ ಗ್ರಾಮದಲ್ಲಿ ನಡೆದಿದೆ.

    50 ವರ್ಷದ ನಿಂಗಪ್ಪ ಹಾಗೂ ಅವರ ಮೊಮ್ಮಗನಾದ 10 ವರ್ಷ ವಯಸ್ಸಿನ ಚಂದ್ರಶೇಖರ ಮೃತ ದುರ್ದೈವಿಗಳು.

    ತಾತ ಮೊಮ್ಮಗ ಇಬ್ಬರೂ ರಾತ್ರಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ಜಮೀನಿಗೆ ಭತ್ತದ ಬೆಳೆಗೆ ನೀರು ಬಿಡಲು ಹೋಗಿದ್ದಾರೆ. ಕತ್ತಲೆ ಇದ್ದ ಕಾರಣದಿಂದ ಹಾವು ಕಡಿದಿದೆ. ತಕ್ಷಣ ಗ್ರಾಮಸ್ಥರು ಸಹಾಯಕ್ಕೆ ಬಂದು ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಘಟನೆ ಸೈದಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ರಾಜ್ಯದ ಹಲವೆಡೆ ಭರ್ಜರಿ ಮಳೆ – ಹಾಸನದಲ್ಲಿ ಸಿಡಿಲು ಬಡಿದು ಓರ್ವ ಮಹಿಳೆ ಸಾವು

    ರಾಜ್ಯದ ಹಲವೆಡೆ ಭರ್ಜರಿ ಮಳೆ – ಹಾಸನದಲ್ಲಿ ಸಿಡಿಲು ಬಡಿದು ಓರ್ವ ಮಹಿಳೆ ಸಾವು

    ಬೆಂಗಳೂರು: ರಾಜ್ಯದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿವರೆಗೂ ಜಿಟಿ ಜಿಟಿ ಮಳೆ ಸುರಿದಿದೆ. ಭಾನುವಾರ ಸಂಜೆ ಪ್ರಾರಂಭವಾದ ಮಳೆ ಬೆಳಗಿನ ಜಾವದವರೆಗೂ ಮುಂದುವರೆದಿತ್ತು.

    ಮಳೆಯಿಂದ ನಗರದ ಹಲವೆಡೆ ಮರಗಳು ನೆಲಕ್ಕುರುಳಿದ್ದು, ಗಾಂಧಿನಗರ, ಹಲಸೂರು ರೋಡ್, ಕಸ್ತೂರ್ ಬಾ ರಸ್ತೆಯಲ್ಲಿ ತಲಾ ಒಂದೊಂದು ಮರ ಬಿದ್ದಿವೆ. ಧಾರಾಕಾರ ಮಳೆಯಿಂದಾಗಿ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

    ನೂತನ ಮೇಯರ್ ಪರಿಶೀಲನೆ: ಜಯನಗರ, ಕೆ.ಆರ್.ರಸ್ತೆ, ಬನಶಂಕರಿ, ಇಂದಿರಾನಗರ, ಕನಕಪುರ ರೋಡ್ ಸೇರಿದಂತೆ ಹಲವೆಡೆ ನೂತನ ಮೇಯರ್ ಸಂಪತ್‍ರಾಜ್ ಭೇಟಿ ನೀಡಿ ತಗ್ಗು ಪ್ರದೇಶಗಳ ಪರಿಶೀಲನೆ ಮಾಡಿದರು. ಈ ವೇಳೆ ಮಾತಾನಾಡಿದ ಅವರು ಈಗಾಗಲೇ ಆರಂಭ ಮಾಡಲಾಗಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಿ ಅಂತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಇನ್ನುಳಿದಂತೆ ಇಂದಿರಾನಗರದ ಬಳಿ ಮರ ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸಂಪತ್‍ರಾಜ್ ಈ ಬಗ್ಗೆ ಪರಿಶೀಲನೆ ನಡೆಸಿದರು. ಅಷ್ಟೇ ಅಲ್ಲದೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ಕಂಟ್ರೋಲ್ ರೂಂನಲ್ಲಿ ತಾವೇ ಖುದ್ದು ಕುಳಿತುಕೊಂಡು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.

    ಬೆಂಗಳೂರು ಹೊರವಲಯ ಆನೇಕಲ್ ಸುತ್ತಮುತ್ತಲೂ ಗುಡುಗು ಮಿಂಚು ಸಹಿತ ಮಳೆ ಬಿದ್ದಿದ್ದು, ಪಾದಚಾರಿಗಳು ಹಾಗೂ ಬೈಕ್ ಸವಾರರು ಮನೆ ತಲುಪಲು ಪರದಾಡಿದರು. ಸತತ ಮಳೆಯ ಪರಿಣಾಮದಿಂದ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿವೆ.

    ರಾಮನಗರ, ತುಮಕೂರಿನಲ್ಲೂ ಭಾನುವಾರ ಸಂಜೆಯಿಂದ ಮಳೆ ಭಾರೀ ಮಳೆಯಾಗಿದ್ದು, ರಾಮನಗರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಹಾಸನದಲ್ಲೂ ಭರ್ಜರಿ ಮಳೆಯಾಗಿದೆ. ಜಿಲ್ಲೆಯ ಅರಸೀಕೆರೆ ತಾಲೂಕು ಜಾವಗಲ್ ಹೋಬಳಿ ದೊಡ್ಡಗಟ್ಟ ಗ್ರಾಮದಲ್ಲಿ ಓರ್ವ ಮಹಿಳೆ ಸಿಡಿಲಿಗೆ ಬಲಿಯಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲಾದ್ಯಾಂತ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಶಿರಸಿ ಭಾಗದಲ್ಲಿ ರಸ್ತೆಗಳಲ್ಲಿ ನೀರು ನಿಂತಿದ್ದು ವಾಹನ ಸವಾರರು ಸಂಕಷ್ಟ ಪಡುವಂತಾಗಿದೆ. ಚಿತ್ರದುರ್ಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ. ಚಿತ್ರದುರ್ಗ-ಚಳ್ಳಕೆರೆ ಮಾರ್ಗ ಮಧ್ಯದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರಿಂದ, 1 ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್ ಆಗಿತ್ತು.

    ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಅಪಾರ ಪ್ರಮಾಣ ಬೆಳೆ ನಾಶವಾಗಿದೆ.

  • ಬಸ್ ಲಾರಿಗೆ ಡಿಕ್ಕಿ ಸ್ಥಳದಲ್ಲಿಯೇ 6 ಮಂದಿ ಸಾವು 16 ಮಂದಿ ಗಂಭೀರ ಗಾಯ

    ಬಸ್ ಲಾರಿಗೆ ಡಿಕ್ಕಿ ಸ್ಥಳದಲ್ಲಿಯೇ 6 ಮಂದಿ ಸಾವು 16 ಮಂದಿ ಗಂಭೀರ ಗಾಯ

    ಹೈದರಾಬಾದ್: ಸರ್ಕಾರಿ ಬಸ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 6 ಮಂದಿ ಸಾವನ್ನಪ್ಪಿದ್ದು, 16 ಮಂದಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸುರ್ಯಾಪೇಟ್ ಜಿಲ್ಲೆಯ ಮುನಗಾಲ ಮಂಡಲ್ ಗ್ರಾಮದ ಬಳಿ ನಡೆದಿದೆ.

    ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಎಪಿಎಸ್‍ಆರ್‍ಟಿಸಿ) ಬಸ್ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಸ್ಟೇಷನರಿ ಲಾರಿಗೆ ಡಿಕ್ಕಿ ಹೊಡೆದಿದೆ. ಆಂಧ್ರ ಪ್ರದೇಶದ ಅವನಿಗಡ್ಡ ಡಿಪೋಯಿಂದ ಬಸ್ ಹೈದರಾಬಾದ್ ಕಡೆಗೆ ಹೊರಟಿದ್ದು, ಮೊಡುಗುಲಾ ಸಮೀಪದ ರಾಷ್ಟ್ರೀಯ ಹೆದ್ದಾರಿ 65 ರಸ್ತೆಯಲ್ಲಿ ಬೆಳಗ್ಗೆ 3 ಗಂಟೆಗೆ ಈ ಅಪಘಾತ ಸಂಭವಿಸಿದೆ.

    ರಸ್ತೆಯ ಪಕ್ಕ ಲಾರಿ ನಿಲ್ಲಿಸಿ ಚಾಲಕ ವರಪ್ರಸಾದ್ ಟಯರ್ ಬದಲಾಯಿಸುತ್ತಾ ಲಾರಿ ಕೆಳಗೆ ಇದ್ದನು. ಬಸ್ ಡ್ರೈವರ್ ಮುನಗಾಲ ಮಂಡಲ್‍ನಲ್ಲಿ ನಿಂತಿದ್ದ ಲಾರಿಯನ್ನು ಗಮನಿಸದೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ. ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಕಾಲುಗಳು ಲಾರಿ ಕೆಳಗೆ ಸಿಲುಕಿಕೊಂಡಿದೆ. ನಂತರ ಸ್ಥಳಕ್ಕೆ ಕ್ರೇನ್ ಅನ್ನು ಕರೆಸಿ ಮೂರು ಗಂಟೆಯ ನಂತರ ಆತನನ್ನು ಹೊರ ತೆಗೆಲಾಗಿದೆ. ನಂತರ ಚಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುಲಾಯಿತು. ಆದರೆ ಮಾರ್ಗ ಮಧ್ಯೆದಲ್ಲಿಯೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

    ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್‍ನ ಎಡಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಬಸ್‍ನಲ್ಲಿ ಸುಮಾರು 40 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಲಾರಿ ಚಾಲಕ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ.

  • ಮಿನಿ ಲಾರಿ ಮತ್ತು ಟಂಟಂ ನಡುವೆ ಮುಖಾಮುಖಿ ಡಿಕ್ಕಿ-ಒಂದೇ ಕುಟುಂಬದ ನಾಲ್ವರು ಬಲಿ

    ಮಿನಿ ಲಾರಿ ಮತ್ತು ಟಂಟಂ ನಡುವೆ ಮುಖಾಮುಖಿ ಡಿಕ್ಕಿ-ಒಂದೇ ಕುಟುಂಬದ ನಾಲ್ವರು ಬಲಿ

    ರಾಯಚೂರು: ಮಿನಿ ಲಾರಿ ಮತ್ತು ಟಂಟಂ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಒಂದೇ ಕುಟುಂಬ ನಾಲ್ವರು ಸೇರಿದಂತೆ ಐವರು ಮೃತಪಟ್ಟಿದ್ದಾರೆ.

    ಜಿಲ್ಲೆಯ ಸಿಂಧನೂರಿನ ಏಳುರಾಗಿ ಕ್ಯಾಂಪ್ ಬಳಿ ಅಪಘಾತ ಸಂಭವಿಸಿದ್ದು, ಮೃತರನ್ನು ಶಾಮೀದ್(35), ಖಾಜಾಬಿ(50), ಸಾಬಣ್ಣ(35), ಲಾಲಾಬಿ(15) ಮತ್ತು ವೀರಯ್ಯ ಸ್ವಾಮಿ(40) ಎಂದು ಗುರುತಿಸಲಾಗಿದೆ.

    ಮೃತರೆಲ್ಲರೂ ಒಂದೇ ಗ್ರಾಮದಾವರಾಗಿದ್ದು, ಮೊಹರಂ ಹಬ್ಬದಕ್ಕೆ ಬೇಕಾದ ವಸ್ತುಗಳನ್ನು ತರಲು ಸಿಂಧನೂರಿಗೆ ಬಂದಿದ್ದು, ಸಂತೆ ಮುಗುಸಿ ವಾಪಸ್ ಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

    ಅಪಘಾತ ಸ್ಥಳಕ್ಕೆ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವನವನ್ನು ಹೇಳಿದ್ದಾರೆ.

     

  • `ಅಪ್ಪ ನೀವು ಮುಂದೆ ಹೋಗಿ ನಾನು ಹಿಂದೆ ಬರುವೆ’ ಎಂದ ಮಗಳು ಶವವಾಗಿ ಬಂದಳು!

    `ಅಪ್ಪ ನೀವು ಮುಂದೆ ಹೋಗಿ ನಾನು ಹಿಂದೆ ಬರುವೆ’ ಎಂದ ಮಗಳು ಶವವಾಗಿ ಬಂದಳು!

    ಮುಂಬೈ: `ಅಪ್ಪ ನೀವು ಮುಂದೆ ಹೋಗಿ ನಾನು ಹಿಂದೆ ಬರುವೆ’ ಎಂದು ತಂದೆಗೆ ಹೇಳಿದ್ದ ಮಗಳು ಮನೆಗೆ ಶವವಾಗಿ ಬಂದಿದ್ದಾಳೆ.

    ಮುಂಬೈ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ ದುರಂತ ಸಂಭವಿಸುವ ಮೊದಲು ಮಗಳು ಶ್ರದ್ಧಾ ವರ್ಪೆ(25) ತಂದೆ ಕಿಶೋರ್ ವರ್ಪೆ ಅವರಲ್ಲಿ ನಾನು ಹಿಂದೆ ಬರುತ್ತೇನೆ ಎಂದು ಹೇಳಿ ತಂದೆಯನ್ನು ಮುಂದಕ್ಕೆ ಕಳುಹಿಸಿದ್ದಳು. ಆದರೆ ಶುಕ್ರವಾರ ಎಲ್ಫಿನ್‍ಸ್ಟೋನ್ ರೈಲ್ವೇ ನಿಲ್ದಾಣದಲ್ಲಿ ಪಾದಚಾರಿಗಳು ಸೇತುವೆ ದಾಟತ್ತಿದ್ದಾಗ ನಡೆದ ದುರಂತದಲ್ಲಿ ಶ್ರದ್ಧಾ ಸಾವನ್ನಪ್ಪಿದ್ದಾಳೆ.

    ನಡೆದಿದ್ದೇನು?: ಶ್ರದ್ಧಾ ಮತ್ತು ತಂದೆ ಕಿಶೋರ್ ವರ್ಪೆ ಇವರಿಬ್ಬರು ಎಲ್ಫಿನ್‍ಸ್ಟೋನ್ ರಸ್ತೆಯಲ್ಲಿರುವ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಥಾಣೆ ಜಿಲ್ಲೆಯ ಸಮೀಪದ ವಿಠ್ಠಲ್ವಾಡಿಯಲ್ಲಿರುವ ತಮ್ಮ ಮನೆಯಿಂದ ಪ್ರತಿದಿನ ಒಟ್ಟಿಗೆ ಆಫಿಸ್‍ಗೆ ಹೋಗುತ್ತಿದ್ದರು.

    ಶುಕ್ರವಾರ ಎಂದಿನಂತೆ ಕೆಲಸಕ್ಕೆ ತೆರಳಿದ್ದು, ಸುಮಾರು 10.15 ಕ್ಕೆ ಪಾರೇಲ್ ರೈಲ್ವೇ ನಿಲ್ದಾಣಕ್ಕೆ ಬಂದಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಯಾವಾಗಲೂ ಇರೋ ರೀತಿ ಹೆಚ್ಚಿನ ಜನಸಂದಣಿ ಇತ್ತು. ಇದನ್ನು ಗಮನಿಸಿದ ಶ್ರದ್ಧಾ ತಂದೆಯನ್ನು ನೀವು ಮುಂದೆ ಹೋಗಿ ನಾನು ಹಿಂದೆ ಬರುತ್ತೇನೆ ಎಂದು ಹೇಳಿ ಕಳುಹಿಸಿದ್ದಾರೆ.

    ಕಿಶೋರ್ ಮುಂದೆ ಹೋಗುತ್ತಿದ್ದಂತೆ, ಶ್ರದ್ಧಾ ಹಿಂದೆ ಬರುತ್ತಿದ್ದರು. ಆದರೆ ತಕ್ಷಣ ಮಳೆ ಜೋರಾಗಿದ್ದರಿಂದ ರೈಲ್ವೇ ನಿಲ್ದಾಣದ ಸೇತುವೆ ಮೇಲೆ ಅತಿ ಹೆಚ್ಚು ಜನಸಂದಣಿ ತುಂಬಿ ಹೋಗಿತ್ತು. ಇದರಿಂದ ಜನರ ಕಾಲ್ತುಳಿತಕ್ಕೆ ಸಿಕ್ಕಿ ಶ್ರದ್ಧಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಕಿಶೋರ್ ಸಂಬಂಧಿಕರಾದ ಭೀಮ್ರಾವ್ ಧುಲಾಪ್ ಹೇಳಿದ್ದಾರೆ.

    ಕಿಶೋರ್ ಅವರು ಮಗಳು ಕಾಣದಿದ್ದಕ್ಕೆ ಅವಳ ಫೋನ್‍ಗೆ ಕರೆ ಮಾಡಿದ್ದಾರೆ. ಆದರೆ ಶ್ರದ್ಧಾ ಯಾವುದೇ ಪ್ರತಿಕ್ರಿಯೇ ನೀಡಲಿಲ್ಲ. ಅಷ್ಟರಲ್ಲಿ ಶ್ರದ್ಧಾ ಕಿಂಗ್ ಎಡ್ವರ್ಡ್ ಮೆಮೊರಿಯಲ್ (ಕೆಇಎಂ) ಆಸ್ಪತ್ರೆಯಲ್ಲಿ ಶವವಾಗಿದ್ದರು. ಇದೆಲ್ಲಾ ಕೇವಲ ಹತ್ತು ನಿಮಿಷಗಳಲ್ಲಿ ನಡೆದ ದುರಂತವಾಗಿದೆ.

    ಈ ಮುಂಬೈ ರೈಲ್ವೇ ನಿಲ್ದಾಣದ ದುರಂತದಲ್ಲಿ ಸುಮಾರು 22 ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

     

    https://twitter.com/ARanganathan72/status/913769586482339841

  • ಬೈಕ್‍ಗಳು ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ತಂದೆ ಸಾವು

    ಬೈಕ್‍ಗಳು ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ತಂದೆ ಸಾವು

    ಹಾವೇರಿ: 2 ಬೈಕ್‍ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ತಂದೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮಗ ಗಾಯಗೊಂಡಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಸಮೀಪದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಹಾನಗಲ್ ಪಟ್ಟಣದ ನಿವಾಸಿ ಅಲ್ಲಾಭಕ್ಷ ದಿಡಗೂರ (32) ಎಂದು ಗುರುತಿಸಲಾಗಿದೆ. 7 ವರ್ಷದ ಮಗ ಮುಸ್ತಫಾ ದಿಡಗೂರ ಗಾಯಗೊಂಡಿದ್ದು, ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೈಕ್ ಸವಾರರು ವೇಗವಾಗಿ ಚಾಲನೆ ಮಾಡುತ್ತಿದ್ದ ಕಾರಣ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

    ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಅಪಘಾತ ನಡೆದ ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಬೈಕ್‍ಗೆ ಲಾರಿ ಡಿಕ್ಕಿಯಾಗಿ ಇಬ್ಬರ ದುರ್ಮರಣ

    ಬೈಕ್‍ಗೆ ಲಾರಿ ಡಿಕ್ಕಿಯಾಗಿ ಇಬ್ಬರ ದುರ್ಮರಣ

    ದಾವಣಗೆರೆ: ಬೈಕ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟಿರುವ ಘಟನೆ ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಸಮೀಪದಲ್ಲಿ ನಡೆದಿದೆ.

    ಬೈಕ್ ಸವಾರರಾದ ನಾಗರಾಜ್ (45) ಮತ್ತು ಯಲ್ಲಪ್ಪ (53) ಮೃತ ದುರ್ದೈವಿಗಳು. ದಾವಣಗೆರೆಯ ಮಲ್ಲಶೆಟ್ಟಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಾಗರಾಜ್ ಮತ್ತು ಯಲ್ಲಪ್ಪ ಇಬ್ಬರೂ ಬೈಕ್‍ನಲ್ಲಿ ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಓಡಿಸುತ್ತಿದ್ದ ನಾಗರಾಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    ಯಲ್ಲಪ್ಪ ಅವರನ್ನು ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಸಾವನ್ನಪ್ಪಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೆÇಲೀಸರು ಭೇಟಿ ನೀಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.